ರಾಜ್ಯ ಸಂದೇಶವನ್ನು ಹಬ್ಬಿಸುವುದರಲ್ಲಿ ಆಸಕ್ತ ರಾಗಿರ್ರಿ
1 ಯೆಹೋವನು ಸತ್ಕಾರ್ಯಗಳ ದೇವರು ಮತ್ತು ಅವನ್ನು ಪೂರೈಸುವಂತೆ ಮಾಡುವುದರಲ್ಲಿ ಅವನು ಆಸಕ್ತ ನಾಗಿದ್ದಾನೆ. ಆತನು ಮಾಡುವದೆಲ್ಲವೂ ಆತನ ಸೇವಕರ ಹಿತಕ್ಕಾಗಿದೆ. ತನ್ನ ತಂದೆಯ ಆಸಕ್ತಿಯನ್ನು ಅನುಸರಿಸುವುದರಲ್ಲಿ ಯೇಸು ಉತ್ತಮ ಮಾದರಿಯನ್ನಿಟ್ಟನು. ಯೆಹೋವನ ಆಲಯದ ಮೇಲೆ ಅವನಿಗಿದ್ದ ಆಸಕ್ತಿಯು, ಅದನ್ನು ಸಂತೆಯಾಗಿ ಮಾರ್ಪಡಿಸಿದ್ದ ಜನರನ್ನು ಹೊರಗಟ್ಟುವಂತೆ ಆತನನ್ನು ಒಮ್ಮೆ ಪ್ರೇರೇಪಿಸಿತ್ತು. (ಯೋಹಾ. 2:14-17) “ಸತ್ಕಾರ್ಯದಲ್ಲಿ ಆಸಕ್ತ ರಾದ” ಜನರಾಗಿ ಗುರುತಿಸಲ್ಪಡಬೇಕಾದರೆ ನಾವು ಸಹಾ ಯೆಹೋವ ದೇವರ ಸೇವೆಯಲ್ಲಿ ಆಸಕ್ತಿಯನ್ನು ತೋರಿಸಬೇಕು.—ತೀತ 2:14.
2 ಕ್ರೈಸ್ತರ ಸತ್ಕ್ರಿಯೆಗಳು ಇತರರಿಗೆ ಪ್ರಯೋಜನ ತರುತ್ತ ವೆ. ಇನ್ನೊಬ್ಬನಿಗಾಗಿ ನಾವು ಮಾಡುವ ಅತ್ಯಂತ ಪ್ರಯೋಜನದಾಯಕ ಸಂಗತಿಯು ಅವನು ಯೆಹೋವನನ್ನು ತಿಳಿದು, ಸೇವಿಸುವಂತೆ ಸಹಾಯ ಮಾಡುವದೇ. (ಯೋಹಾ. 17:3) ಅಂಥಾ ಸಹಾಯವನ್ನು ನಮ್ಮ ಆಸಕ್ತ ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಯ ಮೂಲಕ ನಾವು ಕೊಡಶಕ್ತರು.
3 ಆಸಕ್ತಿ ಎಂದರೇನು? ಆಸಕ್ತಿಯು ಹುರುಪಾಗಿದೆ. ಯಾವುದು ಸರಿಯೋ, ಯೋಗ್ಯವೋ ಅದನ್ನು ಮಾಡುವ ತೀವ್ರಾಪೇಕ್ಷೆಯಿಂದ ಕ್ರೈಸ್ತ ಆಸಕ್ತಿಯು ಹೊರಹುಮ್ಮುತ್ತ ದೆ. “ಆಸಕ್ತಿ” ಗಿರುವ ಗ್ರೀಕ್ ಪದದ ಅರ್ಥವು “ಕುದಿಯು” ಎಂದಾಗಿದೆ. ದೇವರ ಸೇವಕರಾದ ನಾವು ರಾಜ್ಯ ಸಂದೇಶವನ್ನು ಪ್ರಸಾರ ಮಾಡುವಾಗ ಈ ಗುಣವನ್ನು ವ್ಯಕ್ತ ಪಡಿಸಬೇಕು. ಶುಶ್ರೂಷೆಯಲ್ಲಿ ನಾವು ಆಸಕ್ತ ರೋ? ಯೆಹೋವನ ಉದ್ದೇಶಗಳ ಕುರಿತು ಇತರರು ಕಲಿಯವಂತೆ ನೆರವಾಗಲು ನಾವು ಸಾಧ್ಯವಾದದ್ದೆಲ್ಲವನ್ನು ಮಾಡುತ್ತಿದ್ದೇವೋ?
ಬ್ರೊಷೂರ್ಸ್ ನೀಡುವುದರಲ್ಲಿ ಆಸಕ್ತಿಯಿಂದಿರ್ರಿ
4 ಸಪ್ಟಂಬರ ತಿಂಗಳಲ್ಲಿ ಪುನ: ನಮಗೆ ಸ್ಕೂಲ್ ಮತ್ತು ಜೆಹೋವಸ್ ವಿಟ್ನೆಸಸ್ ಬಿಟ್ಟು ಬೇರೆ ಯಾವುದೇ 32 ಪುಟಗಳ ಬ್ರೊಷೂರ್ನ್ನು ನೀಡುವ ಸುಯೋಗವಿದೆ. ಎಂಜೊ ಲೈಫ್ ಆನ್ ಅರ್ತ್ ಫಾರೆವರ್ ! , “ಲುಕ್ ! ಐ ಎಮ್ ಮೇಕಿಂಗ್ ಆಲ್ ತಿಂಗ್ಸ್ ನ್ಯೂ,” ಶುಡ್ ಯು ಬಿಲಿವ್ ಇನ್ ಎ ಟ್ರಿನಿಟಿ?, ದ ಡಿವೈನ್ ನೇಮ್ ದೇಟ್ ವಿಲ್ ಎಂಡ್ಯೂರ್ ಫಾರೆವರ್ ಅಥವಾ ದಿ ಗವರ್ನ್ಮೆಂಟ್ ದೇಟ್ ವಿಲ್ ಬ್ರಿಂಗ್ ಪಾರಡೈಸ್ ಬ್ರೊಷೂರನ್ನು ನಾವು ನೀಡಬಹುದು. ಯಾವ ಬ್ರೊಷೂರ್ ನಿಮ್ಮ ಕ್ಷೇತ್ರಕ್ಕೆ ಮತ್ತು ನಿಮ್ಮ ಮನೆಯವನಿಗೆ ಅತ್ಯಂತ ಒಪ್ಪುವಂತೆ ಕಾಣುತ್ತ ದೋ ಅದನ್ನು ನೀಡಲು ತಯಾರು ಮಾಡಿರಿ.
5 ರಾಜ್ಯ ಸಂದೇಶವನ್ನು ಹಬ್ಬಿಸುವದರಲ್ಲಿ ಆಸಕ್ತಿಯಿಂದಿರಲು, ಸರಿಯಾಗಿ ತಯಾರು ಮಾಡುವ ಅಗತ್ಯ ನಮಗಿದೆ. ಸದ್ಯದ ಸಂಭಾಷಣೆಯ ವಿಷಯ ಯಾವುದೆಂದು ನಿಮಗೆ ಗೊತ್ತಿದೆಯೇ? ನಾವು ನೀಡುವ ಬ್ರೊಷೂರನ್ನು ಸಂಭಾಷಣೆಯ ವಿಷಯದೊಂದಿಗೆ ಹೇಗೆ ಜೋಡಿಸಬಹುದು? ಬ್ರೊಷೂರಲ್ಲಿರುವ ಯಾವ ವಿಶಿಷ್ಟ ವಿಷಯಗಳನ್ನು ನಾವು ತಿಳಿಸಬಲ್ಲೆವು? ಈ ಐದು ಬ್ರೊಷೂರುಗಳ ಒಳ್ಳೇ ಪರಿಚಯ ಮಾಡಿಕೊಂಡು, ಅವಕ್ಕಾಗಿ ನಮ್ಮ ಮನಸ್ಸಲ್ಲಿ ಉತ್ಸಾಹವನ್ನು ಕಟ್ಟಲು ನಾವು ಸಮಯ ಕೊಟ್ಟರೆ, ನಮ್ಮ ಕ್ಷೇತ್ರದಲ್ಲಿ ಅವನ್ನು ಆಸಕ್ತಿಯಿಂದ ನೀಡಲು ಸಿದ್ಧರಾಗುವೆವು.
ಬ್ರೊಷೂರ್ಸ್ ನೀಡಲು ಸಲಹೆಗಳು
6 ನಿಮ್ಮ ಪರಿಚಯವನ್ನು ಹೇಳಿದ ನಂತರ ಹೀಗನ್ನಿರಿ: “ಇಂದು ಲೋಕದಲ್ಲಿರುವ ದುಷ್ಟತ್ವದ ಕುರಿತು ದೇವರಿಗೆ ಚಿಂತೆ ಇದೆಯೇ ಎಂದು ನೀವೆಂದಾದರೂ ಯೋಚಿಸಿದ್ದೀರೋ? (ಪ್ರತಿಕ್ರಿಯೆಗೆ ಸಮಯ ಕೊಡಿ) ದುಷ್ಟನು ಬೇಗನೇ ನಶಿಸಲ್ಪಡುವೆನೆಂದು ಬೈಬಲು ವಿವರಿಸುತ್ತದೆ. (ಕೀರ್ತನೆ 92:7 ಓದಿ.) ವಿಷಯವು ಹೀಗಿರಲಾಗಿ, ನಿಜ ಮಾರ್ಗದರ್ಶನೆ ಮತ್ತು ರಕ್ಷಣೆಗಾಗಿ ನಾವು ಯಾರೆಡೆಗೆ ತಿರುಗಬಲ್ಲೆವು? (ಕೀರ್ತನೆ 145:20 ಓದಿ.) ಹೀಗೆ , ನಮ್ಮ ರಕ್ಷಣೆಯ ಒಂದೇ ಮಾರ್ಗವು ನಮ್ಮ ನಿರ್ಮಾಣಿಕನಾದ ಯೆಹೋವ ದೇವರೊಂದಿಗಿನ ಒಂದು ಸುಸಂಬಂಧದ ಮೂಲಕವೇ. ವಿಧೇಯ ಮಾನವರೆಲ್ಲರಿಗೆ ಆತನು ವಾಗ್ದಾನಿಸಿರುವ ಆಶೀರ್ವಾದಗಳನ್ನು ನಾವು ಪರಿಗಣಿಸುವ ಅಗತ್ಯವಿದೆ.” ಅನಂತರ, ಲೈಫ್ ಆನ್ ಅರ್ಥ್ ಬ್ರೊಷರ್ನ 49ನೇ ಪುಟದ ಚಿತ್ರಕ್ಕೆ ತೆರೆದು ಶೀರ್ಷಿಕೆ ಓದಿರಿ ಮತ್ತು ತಿಳಿಸಲ್ಪಟ್ಟ ಆಶೀರ್ವಾದಗಳನ್ನು ಎತ್ತಿ ಹೇಳಿರಿ. ಅಥವಾ ಗವರ್ನ್ಮೆಂಟ್ ಬ್ರೊಷೂರ್ನ 29ನೇ ಪುಟ ತೆರೆದು, ಅಲ್ಲಿ ತಿಳಿಸಲಾದ ಆಶೀರ್ವಾದಗಳನ್ನು ವಿವರಿಸಿರಿ. ಇಲ್ಲವೇ, “ಲುಕ್ !” ಬ್ರೊಷೂರ್ನ 49 ಮತ್ತು 50ನೇ ಪಾರಾ ಉಪಯೋಗಿಸಿ, ದೇವರ ರಾಜ್ಯವು ಮಾನವರಿಗೆ ಮಾಡಲಿರುವ ಸಂಗತಿಗಳನ್ನು ಹೇಳಬಹುದು.
7 ಇವು ಕಠಿಣಕಾಲವಾಗಿರಲಾಗಿ, ನಾವು ತರುವ ಸಂದೇಶವು ಜರೂರಿಯದ್ದು. ಜನರು ದೇವರನ್ನು ಮತ್ತು ಆತನ ವಾಕ್ಯವನ್ನು ತಿಳಿಯುವಂತೆ ಉತ್ತೇಜಿಸುತ್ತಾ, ರಾಜ್ಯದ ಸಂದೇಶವನ್ನು ಉತ್ಸಾಹದಿಂದ ಪ್ರಸರಿಸುವ ಅಗತ್ಯ ನಮಗಿ. ಈ ಜೀವದಾಯಕ ಜ್ಞಾನವನ್ನು ಆಸಕ್ತಿಯಿಂದ ಸಾರುವ ಮೂಲಕ, ನಾವು ನಮ್ಮ ದೇವಭಕ್ತಿ ಮತ್ತು ಯೆಹೋವನಲ್ಲಿ ಪ್ರೀತಿಗೆ ರುಜುವಾತು ಕೊಡುತ್ತೇವೆ. ನಿಮ್ಮನ್ನು ಕೇಳಿರಿ: “ಸತ್ಕಾರ್ಯಗಳಲ್ಲಿ ನಾನು ಆಸಕ್ತ ನಾಗಿದ್ದೇನೋ? ಸಾರುವ ಕೆಲಸದಲ್ಲಿ ನನ್ನ ಸಹಭಾಗವು ಉತ್ಸಾಹ ಮತ್ತು ಪೂರ್ಣಾತ್ಮದ್ದೋ?” ಇದಕ್ಕೆ ಉತ್ತರವು ನಮ್ಮಲ್ಲಿರುವ ಆಸಕ್ತಿಯ ದರ್ಜೆಯನ್ನು ತೋರಿಸಿಕೊಡುವದು. ರಾಜ್ಯ ಸಂದೇಶವನ್ನು ಎಷ್ಟು ಹೆಚ್ಚು ಹಬ್ಬಿಸುತ್ತೇವೋ ಅಷ್ಟು ಹೆಚ್ಚಾಗಿ ನಮ್ಮ ಹುರುಪು ಹೆಚ್ಚುವದು. ಆಗ, ನಾವು ನಿಜವಾಗಿಯೂ ಸತ್ಕಾರ್ಯದಲ್ಲಿ ಆಸಕ್ತರೆಂಬದನ್ನು ಇತರರು ಕಾಣುವರು.