ಪರಿವಿಡಿ
ಸೆಪ್ಟೆಂಬರ್ 15, 2014
© 2014 Watch Tower Bible and Tract Society of Pennsylvania.
ಅಧ್ಯಯನ ಆವೃತ್ತಿ
ಅಕ್ಟೋಬರ್ 27, 2014–ನವೆಂಬರ್ 2, 2014
‘ಇದೇ ಸತ್ಯ’ ಎಂದು ನಿಮಗೆ ಮನವರಿಕೆ ಆಗಿದೆಯಾ? ಏಕೆ?
ಪುಟ 7 • ಗೀತೆಗಳು: 28, 107
ನವೆಂಬರ್ 3-9, 2014
“ಅನೇಕ ಸಂಕಟಗಳ” ಮಧ್ಯೆಯೂ ನಿಷ್ಠೆಯಿಂದ ದೇವರ ಸೇವೆಮಾಡಿ
ಪುಟ 12 • ಗೀತೆಗಳು: 135, 133
ನವೆಂಬರ್ 10-16, 2014
ಹೆತ್ತವರೇ, ನಿಮ್ಮ ಮಕ್ಕಳ ಪರಿಪಾಲನೆ ಮಾಡಿ
ಪುಟ 17 • ಗೀತೆಗಳು: 88, 24
ನವೆಂಬರ್ 17-23, 2014
ಕೊನೆಯ ಶತ್ರುವಾದ ಮರಣ—ಆಗಲಿದೆ ನಿರ್ಮೂಲನ!
ಪುಟ 23 • ಗೀತೆಗಳು: 111, 109
ನವೆಂಬರ್ 24-30, 2014
ಪೂರ್ಣಸಮಯದ ಸೇವಕರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ
ಪುಟ 28 • ಗೀತೆಗಳು: 95, 100
ಅಧ್ಯಯನ ಲೇಖನಗಳು
▪ ‘ಇದೇ ಸತ್ಯ’ ಎಂದು ನಿಮಗೆ ಮನವರಿಕೆ ಆಗಿದೆಯಾ? ಏಕೆ?
ಯೆಹೋವನ ಸಾಕ್ಷಿಗಳ ಬಳಿ ಸತ್ಯ ಇದೆ ಎಂದು ಅನೇಕರು ಒಪ್ಪಲು ಕಾರಣಗಳೇನೆಂದು ಈ ಲೇಖನ ಚರ್ಚಿಸುತ್ತದೆ. ತಮಗೆ ಸತ್ಯ ಸಿಕ್ಕಿದೆ ಎಂದು ಸ್ವತಃ ಸಾಕ್ಷಿಗಳಿಗೇ ಏಕೆ ಮನದಟ್ಟಾಗಿದೆ ಎಂಬ ಕಾರಣಗಳನ್ನು ಸಹ ಚರ್ಚಿಸುವೆವು.
▪ “ಅನೇಕ ಸಂಕಟಗಳ” ಮಧ್ಯೆಯೂ ನಿಷ್ಠೆಯಿಂದ ದೇವರ ಸೇವೆಮಾಡಿ
ಸೈತಾನನ ಲೋಕದಲ್ಲಿ ಜೀವಿಸುವುದರಿಂದ ಬರುವ ಒಂದು ಪರಿಣಾಮ ಸಂಕಟಗಳು. ಕೆಲವೊಂದು ಕಷ್ಟಪರೀಕ್ಷೆಗಳು ನಮ್ಮ ನಂಬಿಕೆಯ ಮೇಲೆ ಬರುವ ನೇರ ಆಕ್ರಮಣಗಳು. ಇನ್ನು ಕೆಲವು ಕುಟಿಲ ಆಕ್ರಮಣಗಳು. ಇವನ್ನು ಗುರುತಿಸಲು ಮತ್ತು ಸೈತಾನನ ಆಕ್ರಮಣಕ್ಕೆ ಸಿದ್ಧತೆ ನಡೆಸಲು ಈ ಲೇಖನ ನಮಗೆ ಸಹಾಯಮಾಡಲಿದೆ.
▪ ಹೆತ್ತವರೇ, ನಿಮ್ಮ ಮಕ್ಕಳ ಪರಿಪಾಲನೆ ಮಾಡಿ
ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸುವ ಜವಾಬ್ದಾರಿ ಹೆತ್ತವರಿಗಿದೆ. (ಎಫೆ. 6:4) ಬೆಳೆಯುತ್ತಿರುವ ಮಕ್ಕಳಿಗೆ ಆಧ್ಯಾತ್ಮಿಕ ಕುರುಬರಂತಿರಬೇಕಾದ ಹೆತ್ತವರು ಈ ಜವಾಬ್ದಾರಿಯನ್ನು ನಿರ್ವಹಿಸಬಹುದಾದ ಮೂರು ವಿಧಗಳನ್ನು ಈ ಲೇಖನ ಚರ್ಚಿಸುತ್ತದೆ.
▪ ಕೊನೆಯ ಶತ್ರುವಾದ ಮರಣ—ಆಗಲಿದೆ ನಿರ್ಮೂಲನ!
ಮರಣವು ಮಾನವರಿಗೆ ಅಂಟಿಕೊಂಡದ್ದು ಹೇಗೆ? ‘ಕೊನೆಯ ಶತ್ರು ಮರಣ’ ಯಾವಾಗ ನಿರ್ಮೂಲವಾಗುವುದು? (1 ಕೊರಿಂ. 15:26) ಉತ್ತರಗಳು ಯೆಹೋವನ ನ್ಯಾಯ, ವಿವೇಕ ಮತ್ತು ಮುಖ್ಯವಾಗಿ ಪ್ರೀತಿಯ ಕಡೆಗೆ ಗಮನ ಸೆಳೆಯುತ್ತವೆ. ಹೇಗೆಂದು ನೋಡಿ.
▪ ಪೂರ್ಣಸಮಯದ ಸೇವಕರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ
ಈ ವ್ಯವಸ್ಥೆಯಲ್ಲಿ ಪೂರ್ಣಸಮಯದ ಸೇವೆ ಮಾಡಲು ಸವಾಲುಗಳು, ಕಷ್ಟಗಳು ಎದುರಾಗುತ್ತವೆ. ಹಾಗಿದ್ದರೂ ಯೆಹೋವನ ನಂಬಿಗಸ್ತ ಸೇವಕರು ಹಿಂದಿನ ಕಾಲದಿಂದಲೂ ಆ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇಂಥವರ ‘ನಂಬಿಗಸ್ತ ಕ್ರಿಯೆಯನ್ನು ಮತ್ತು ಪ್ರೀತಿಪೂರ್ವಕ ಪ್ರಯಾಸವನ್ನು’ ಮನಸ್ಸಿನಲ್ಲಿಟ್ಟುಕೊಳ್ಳಲು ನಾವೇನು ಮಾಡಬಹುದು?—1 ಥೆಸ. 1:3.
ಮುಖಪುಟ: ಶ್ರೀಲಂಕಾದ ಪಶ್ಚಿಮ ಕರಾವಳಿ ಪ್ರದೇಶದ ನೆಗೊಂಬೊ ಎಂಬಲ್ಲಿ ಸಹೋದರರಿಬ್ಬರು ಒಬ್ಬ ಬೆಸ್ತನಿಗೆ ಬೈಬಲಿನ ಸಂದೇಶ ತಿಳಿಸುತ್ತಿದ್ದಾರೆ
ಶ್ರೀಲಂಕಾ
ಜನಸಂಖ್ಯೆ:
2,08,60,000
ಪ್ರಚಾರಕರು:
5,600
ರೆಗ್ಯುಲರ್ ಪಯನೀಯರರು:
641