ಪರಿವಿಡಿ
ಜನವರಿ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಮಾರ್ಚ್ 1-7, 2010
ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?
ಪುಟ 3
ಮಾರ್ಚ್ 8-14, 2010
ಯೆಹೋವನಿಗೆ ಸೇರಿದ ಜನರಾಗಿರುವುದು —ಆತನ ಅಪಾತ್ರ ದಯೆಯೇ
ಪುಟ 7
ಮಾರ್ಚ್ 15-21, 2010
ಕ್ರಿಸ್ತನ ನಿಜ ಹಿಂಬಾಲಕರಾಗಿದ್ದೀರೆಂದು ತೋರಿಸಿಕೊಡಿ
ಪುಟ 12
ಮಾರ್ಚ್ 22-28, 2010
ಪುಟ 24
ಮಾರ್ಚ್ 29, 2010–ಏಪ್ರಿಲ್ 4, 2010
ಪುಟ 28
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 3-11
ಒಬ್ಬನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವುದರ ಅರ್ಥವೇನು ಮತ್ತು ಆ ಹೆಜ್ಜೆಯನ್ನು ಅವನು ಏಕೆ ತೆಗೆದುಕೊಳ್ಳಬೇಕು ಎಂಬುದನ್ನು ಈ ಲೇಖನಗಳು ಪರಿಶೀಲಿಸುತ್ತವೆ. ಯೆಹೋವನು ನಮ್ಮಿಂದ ಅಪೇಕ್ಷಿಸುವುದನ್ನು ಮಾಡಲು ಶಕ್ತರಾಗುವೆವು ಎಂಬ ಭರವಸೆಯು ನಮಗೆ ಏಕಿರಬಲ್ಲದು ಎಂಬುದನ್ನೂ ನಾವು ಪರಿಗಣಿಸುವೆವು. ಅಷ್ಟೇ ಅಲ್ಲದೆ, ಯೆಹೋವನಿಗೆ ಸೇರಿದ ಜನರಾಗಿರುವ ಎಲ್ಲರು ಯಾವ ಆಶೀರ್ವಾದಗಳನ್ನು ಪಡೆಯುತ್ತಾರೆಂಬುದನ್ನೂ ನಾವು ಕಲಿಯುವೆವು.
ಅಧ್ಯಯನ ಲೇಖನ 3 ಪುಟ 12-16
ಕ್ರಿಸ್ತನನ್ನು ಅನುಕರಿಸಲು ನಮ್ಮಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕಾದ ಐದು ಪ್ರಮುಖ ಕ್ಷೇತ್ರಗಳನ್ನು ಈ ಲೇಖನವು ಪರಿಶೀಲಿಸುತ್ತದೆ. ಅದನ್ನು ಮಾಡುವ ಮೂಲಕ ನಾವು ಕ್ರಿಸ್ತನ ನಿಜ ಹಿಂಬಾಲಕರಾಗಿ ತೋರಿಸಿಕೊಡುವೆವು ಮತ್ತು ನಿಜ ಕ್ರೈಸ್ತ ಸಭೆಯನ್ನು ಕುರಿಸದೃಶ ಜನರು ಗುರುತಿಸುವಂತೆ ಸಹಾಯಮಾಡಲು ಶಕ್ತರಾಗುವೆವು.
ಅಧ್ಯಯನ ಲೇಖನಗಳು 4, 5 ಪುಟ 24-32
ನಾಲ್ಕನೇ ಲೇಖನವು, ದೇವರನ್ನು ಬಿಟ್ಟು ಸ್ವತಂತ್ರವಾಗಿ ನಡಿಸಿದ ಮಾನವ ಆಳ್ವಿಕೆಯು ಹೇಗೆ ಆಪತ್ಕರವಾಗಿದೆಯೆಂಬುದನ್ನು ಹಾಗೂ ಅದು ಯೆಹೋವನ ಆಳ್ವಿಕೆಯ ಉತ್ಕೃಷ್ಟತೆಯನ್ನು ಎತ್ತಿಹಿಡಿಯಲು ಹೇಗೆ ನೆರವಾಯಿತು ಎಂಬುದನ್ನು ಪರಿಗಣಿಸುತ್ತದೆ. ಐದನೇ ಲೇಖನವು, ಯೆಹೋವನ ಆಳ್ವಿಕೆಯನ್ನು ನಾವು ಸ್ವೀಕರಿಸಿದ್ದೇವೆಂದು ಹೇಗೆ ತೋರಿಸಬಲ್ಲೆವು ಎಂಬುದನ್ನು ಚರ್ಚಿಸುತ್ತದೆ.
ಇತರ ಲೇಖನಗಳು:
ಸವಾಲುಗಳನ್ನು ಎದುರಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ 16
ಜೀವನದ ಪ್ರತಿದಿನವನ್ನು ದೇವರ ಮಹಿಮೆಗಾಗಿ ಬಳಸಿರಿ 21