ಪರಿವಿಡಿ
ಅಕ್ಟೋಬರ್ 15, 2008
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಡಿಸೆಂಬರ್ 1-7, 2008
ಯೆಹೋವನ “ಕಣ್ಣುಗಳು” ಎಲ್ಲರನ್ನೂ ಸೂಕ್ಷ್ಮವಾಗಿ ಪರಿಶೋಧಿಸುತ್ತವೆ
ಪುಟ 3
ಉಪಯೋಗಿಸಬೇಕಾದ ಗೀತೆಗಳು: 160, 34
ಡಿಸೆಂಬರ್ 8-14, 2008
ನಮ್ಮ ಒಳಿತಿಗಾಗಿಯೇ ಯೆಹೋವನು ನಮ್ಮ ಮೇಲೆ ಕಣ್ಣಿಡುತ್ತಾನೆ
ಪುಟ 7
ಉಪಯೋಗಿಸಬೇಕಾದ ಗೀತೆಗಳು: 81, 80
ಡಿಸೆಂಬರ್ 15-21, 2008
ಒಂದು ಹೃತ್ಪೂರ್ವಕ ಪ್ರಾರ್ಥನೆಗೆ ಯೆಹೋವನ ಉತ್ತರ
ಪುಟ 12
ಉಪಯೋಗಿಸಬೇಕಾದ ಗೀತೆಗಳು: 74, 90
ಡಿಸೆಂಬರ್ 22-28, 2008
ಮಾನಮರ್ಯಾದೆ ತೋರಿಸಲು ನೀವು ಮುಂದಾಗುತ್ತೀರೋ?
ಪುಟ 21
ಉಪಯೋಗಿಸಬೇಕಾದ ಗೀತೆಗಳು: 216, 155
ಡಿಸೆಂಬರ್ 29, 2008-ಜನವರಿ 4, 2009
ನಿತ್ಯಜೀವಕ್ಕಾಗಿ ನೀವೆಷ್ಟು ತ್ಯಾಗಮಾಡಲು ಸಿದ್ಧರಿದ್ದೀರಿ?
ಪುಟ 25
ಉಪಯೋಗಿಸಬೇಕಾದ ಗೀತೆಗಳು: 177, 212
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 3-11
ಈ ಎರಡು ಲೇಖನಗಳು, ನಮಗೆ ಸಂಭವಿಸುವ ಪ್ರತಿಯೊಂದು ವಿಷಯವೂ ಯೆಹೋವನಿಗೆ ಚೆನ್ನಾಗಿ ತಿಳಿದಿದೆಯೆಂಬ ಭರವಸೆಯನ್ನು ಕೊಡುತ್ತವೆ. ಆತನು ನಮ್ಮ ತಾಳ್ಮೆಯನ್ನು ಗಣ್ಯಮಾಡುತ್ತಾನೆ ಮತ್ತು ನಮ್ಮ ಚಿಂತೆಗಳನ್ನು ಬಲ್ಲವನಾಗಿದ್ದಾನೆ. ನಾವು ಪಡುವ ಪ್ರಯಾಸದ ಕುರಿತೂ ಆತನಿಗೆ ತಿಳಿದಿದೆ, ಮತ್ತು ತನ್ನ ಸೇವಕರನ್ನು ಬಾಧಿಸುವಂಥ ಯಾವುದೇ ವಿಷಯ ಆತನ ದೃಷ್ಟಿಗೆ ಮರೆಯಾಗಿಲ್ಲ. ಈ ಸಂಗತಿ ನಮಗೆ ತುಂಬ ಸಾಂತ್ವನಕೊಡುತ್ತದೆ.
ಅಧ್ಯಯನ ಲೇಖನ 3 ಪುಟ 12-16
ನಮ್ಮಲ್ಲಿ ಹೆಚ್ಚಿನವರಿಗೆ ಕೀರ್ತನೆ 83:18ರ ಮಾತುಗಳು ಚಿರಪರಿಚಿತವಾಗಿವೆ. ಆದರೆ ಆ ಕೀರ್ತನೆಯ ಉಳಿದ ಭಾಗದ ಕುರಿತೇನು? 83ನೇ ಕೀರ್ತನೆ ಇಂದು ಕ್ರೈಸ್ತರನ್ನು ಹೇಗೆ ಹುರಿದುಂಬಿಸುತ್ತದೆಂದು ಈ ಲೇಖನ ತೋರಿಸುತ್ತದೆ.
ಅಧ್ಯಯನ ಲೇಖನ 4 ಪುಟ 21-25
“ಮಾನಮರ್ಯಾದೆ ತೋರಿಸುವುದರಲ್ಲಿ ಮುಂದಾಗಿರಿ” ಅಂದನು ಪೌಲನು. ಇತರರಿಗೆ ಮಾನ ತೋರಿಸುವುದರ ಅರ್ಥವೇನು? ಯಾರು ಮಾನ ತೋರಿಸಬೇಕು ಮತ್ತು ಯಾರು ಪಡೆಯಬೇಕು? ಬೈಬಲಿನಲ್ಲಿ ನಮಗೆ ಯಾವ ಮಾದರಿಗಳಿವೆ? ಇದರ ಕುರಿತು ಈ ಲೇಖನದಲ್ಲಿ ಪ್ರಾಯೋಗಿಕ ಚರ್ಚೆಯಿದೆ.
ಅಧ್ಯಯನ ಲೇಖನ 5 ಪುಟ 25-29
ಒಮ್ಮೆ ಯೇಸು ಕೇಳಿದ್ದು: “ಒಬ್ಬನು ತನ್ನ ಪ್ರಾಣಕ್ಕೆ ಏನು ಈಡುಕೊಟ್ಟಾನು?” ನೀವು ಆ ಪ್ರಶ್ನೆಗೆ ಏನು ಉತ್ತರ ಕೊಡುವಿರಿ? “ಪ್ರಾಣ” ಎಂದು ಹೇಳುವಾಗ ಯೇಸು ಯಾವುದಕ್ಕೆ ಸೂಚಿಸುತ್ತಿದ್ದನು? ನಿಮ್ಮ ಪ್ರಾಣ ನಿಮಗೆಷ್ಟು ಅಮೂಲ್ಯವಾಗಿದೆ ಎಂಬುದರ ಬಗ್ಗೆ ನಿಮ್ಮ ಜೀವನ ಏನು ತೋರಿಸಿಕೊಡುತ್ತದೆ? ಯೇಸುವಿನ ಆ ವಿಚಾರಪ್ರೇರಕ ಪ್ರಶ್ನೆಯ ಕುರಿತು ಗಾಢವಾಗಿ ಧ್ಯಾನಿಸಲು ಈ ಲೇಖನವು ನಿಮಗೆ ಸಹಾಯಮಾಡುವುದು.
ಇತರ ಲೇಖನಗಳು:
“ನಿಶ್ಚಯವಾಗಿಯೂ ಇದು ದೇವರ ಅತಿ ಪವಿತ್ರ ಹಾಗೂ ಮಹೋನ್ನತ ಹೆಸರು”
ಪುಟ 16
ಪುಟ 17
ಯೆಹೋವನ ವಾಕ್ಯವು ಸಜೀವವಾದದ್ದು—ತೀತ, ಫಿಲೆಮೋನ ಮತ್ತು ಇಬ್ರಿಯರಿಗೆ ಬರೆದ ಪತ್ರಗಳ ಮುಖ್ಯಾಂಶಗಳು
ಪುಟ 30