ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 5/1 ಪು. 25
  • ನಿಮ್ಮ ಮಕ್ಕಳೊಂದಿಗೆ ಓದಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮಕ್ಕಳೊಂದಿಗೆ ಓದಿರಿ
  • ಕಾವಲಿನಬುರುಜು—1999
ಕಾವಲಿನಬುರುಜು—1999
w99 5/1 ಪು. 25

ನಿಮ್ಮ ಮಕ್ಕಳೊಂದಿಗೆ ಓದಿರಿ

ಬ್ರೆಸಿಲಿನ ವೇಸಾ ಪತ್ರಿಕೆಗನುಸಾರ, “ಓದುವ ವಿಷಯವಾಗಿ ಮನೆಯಲ್ಲಿ ಒಳ್ಳೆಯ ಮಾದರಿಯಿರದ ಮಕ್ಕಳಿಗೆ ಹೋಲಿಸುವಾಗ, ಶ್ರದ್ಧೆಯ ಓದುಗರ ಮಕ್ಕಳು ಪುಸ್ತಕಗಳಿಗಾಗಿ ಒಲವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. “ಜೊತೆಯಾಗಿ ಓದುವುದರಿಂದ ಹೆತ್ತವರ ಮತ್ತು ಮಕ್ಕಳ ನಡುವಿನ ಆಪ್ತತೆಯು ಬಲಗೊಳ್ಳುತ್ತದೆ ಮತ್ತು ಮಗುವು ಪುಸ್ತಕದ ವಿಷಯಗಳನ್ನು ಉತ್ತಮವಾಗಿ ಗ್ರಹಿಸಿಕೊಳ್ಳುವಂತೆ ಸಾಧ್ಯವಾಗುತ್ತದೆ” ಎಂಬುದಾಗಿ ಮಕ್ಕಳ ಬೆಳವಣಿಗೆಯಲ್ಲಿ ವಿಶೇಷಜ್ಞೆಯಾಗಿರುವ ಮಾರ್ತಾ ಹೋಪ ಗಮನಿಸುತ್ತಾರೆ.

ಮಕ್ಕಳಿಗೆ ಗಟ್ಟಿಯಾಗಿ ಓದಿಹೇಳುವಾಗ, ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಅವಕಾಶವೂ ನಿಮಗಿರುತ್ತದೆ. ವಿಷಯದೊಂದಿಗಿರುವ ಯಾವುದೇ ಚಿತ್ರವನ್ನು ನೀವು ಚರ್ಚಿಸಬಲ್ಲಿರಿ. “ಪುಸ್ತಕಗಳ ವಿಷಯವನ್ನು ಮಗುವು ಎಷ್ಟು ಹೆಚ್ಚು ಅರ್ಥಮಾಡಿಕೊಳ್ಳುವದೊ, ಅಷ್ಟೇ ಹೆಚ್ಚಾಗಿ ತನ್ನ ಕುತೂಹಲವನ್ನು ತಣಿಸಲು ಬಯಸಿದಾಗಲೆಲ್ಲ ಅವುಗಳಿಗಾಗಿ ಹುಡುಕುವಂತೆ ಪ್ರಚೋದಿಸಲ್ಪಡುವದು.”

ಯೆಹೋವನ ಸಾಕ್ಷಿಗಳಲ್ಲಿ ಅನೇಕ ಹೆತ್ತವರು ತಮ್ಮ ಮಕ್ಕಳೊಂದಿಗೆ ಓದುವುದರಲ್ಲಿ ಆನಂದಿಸುತ್ತಾರೆ. ಅವರು ಬೈಬಲ್‌ ಕಥೆಗಳ ನನ್ನ ಪುಸ್ತಕ, ಮಹಾ ಬೋಧಕನಿಗೆ ಕಿವಿಗೊಡುವುದು, ಮತ್ತು ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷಗಳಂತಹ ಪ್ರಕಾಶನಗಳನ್ನು ಓದಬಹುದು.a ಮಕ್ಕಳು ಒಳ್ಳೆಯ ಓದುಗರಾಗುವಂತೆ ಇಂತಹ ಪುಸ್ತಕಗಳು ಸಹಾಯ ಮಾಡುತ್ತವಲ್ಲದೆ, ಲೋಕದ ಜನಪ್ರಿಯ ಗ್ರಂಥವಾದ ಪವಿತ್ರ ಬೈಬಲಿನಲ್ಲಿ ಅವರ ಆಸಕ್ತಿಯನ್ನೂ ಹೆಚ್ಚಿಸುತ್ತವೆ. ಆದುದರಿಂದ, ನೀವು ಒಬ್ಬ ಹೆತ್ತವರಾಗಿರುವುದಾದರೆ, ದೇವರ ವಾಕ್ಯವನ್ನು ಅತ್ಯಾಸಕ್ತಿಯಿಂದ ಓದುವ ಮೂಲಕ ನಿಮ್ಮ ಮಕ್ಕಳಿಗೆ ಮಾದರಿಯನ್ನಿಡಿರಿ. (ಯೆಹೋಶುವ 1:7, 8) ಮತ್ತು ಅವಶ್ಯವಾಗಿ, ಅವರಿಗೆ ಓದಿಹೇಳಲು ಸಮಯವನ್ನು ತೆಗೆದುಕೊಳ್ಳಿರಿ!

[ಪಾದಟಿಪ್ಪಣಿ]

a ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ