ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 4/15 ಪು. 32
  • ಲೋಕ ಶಾಂತಿ—ಯಾವ ಮೂಲದಿಂದ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೋಕ ಶಾಂತಿ—ಯಾವ ಮೂಲದಿಂದ?
  • ಕಾವಲಿನಬುರುಜು—1999
ಕಾವಲಿನಬುರುಜು—1999
w99 4/15 ಪು. 32

ಲೋಕ ಶಾಂತಿ—ಯಾವ ಮೂಲದಿಂದ?

ಶೈಕ್ಷಣಿಕ ಹಾಗೂ ಧಾರ್ಮಿಕ ಭೌಗೋಲೀಕರಣವು ಲೋಕ ಶಾಂತಿಯನ್ನು ತರುವುದೊ? ಇದು ವಿಶ್ವ ಸಂಸ್ಥೆಯ ಮಾಜಿ ಸಹಾಯಕ ಸೆಕ್ರಿಟರಿ ಜನರಲ್‌ ಹಾಗೂ ಶಾಂತಿಯ ಕುರಿತಾದ ಶಿಕ್ಷಣಕ್ಕಾಗಿ 1989ರಲ್ಲಿ ಯುನೆಸ್ಕೊ ಬಹುಮಾನವನ್ನು ಪಡೆದವರಾದ ಡಾ. ರಾಬರ್ಟ್‌ ಮಲರ್‌ ಅವರ ಕನಸಾಗಿದೆ. ದ ವ್ಯಾನ್ಕೂವರ್‌ ಸನ್‌ ಎಂಬ ವಾರ್ತಾಪತ್ರಿಕೆಯಲ್ಲಿ ವರದಿಸಲಾದಂತೆ, “ಭೂಗೋಲದ ಎಲ್ಲ ವಿದ್ಯಾರ್ಥಿಗಳಿಗೆ ಭೂಗ್ರಹ, ಮಾನವೀಯತೆ ಮತ್ತು ಅಹಿಂಸೆಯ ಕುರಿತಾದ ವಾಸ್ತವಾಂಶಗಳು ಹಾಗೂ ಮೌಲ್ಯಗಳು ಕಲಿಸಲ್ಪಡಬೇಕೆಂದು” ಡಾ. ಮಲರ್‌ “ಮನಗಾಣಿಸಲ್ಪಟ್ಟಿದ್ದಾರೆ.” ಶಾಂತಿಯ ಅತ್ಯುತ್ತಮ ನಿರೀಕ್ಷೆ ಯುಎನ್‌ ಆಗಿದೆ ಎಂದು ಲೋಕದ ಎಲ್ಲ ಬೋಧನಾ ಸಂಸ್ಥೆಗಳು ಮಕ್ಕಳಿಗೆ ಕಲಿಸುವ ದಿನವನ್ನು ಅವರು ಎದುರುನೋಡುತ್ತಾರೆ. “ಲೋಕದ ಎಲ್ಲ ಧರ್ಮಗಳು, ಸಂಯುಕ್ತ ಧರ್ಮಗಳು ಎಂಬುದಾಗಿ ಕರೆಯಲ್ಪಡುವ ಯುಎನ್‌ನಂತಹ ಒಂದು ಹೊಸ ಸಂಸ್ಥೆಯ ಸದಸ್ಯರಾಗಬೇಕೆಂದೂ” ಅವರು ನೆನಸುತ್ತಾರೆಂದು ಸನ್‌ ವರದಿಸುತ್ತದೆ. ಆಗ “ಎಲ್ಲ ಧಾರ್ಮಿಕ ಬೋಧನೆಯು ಅಹಿಂಸೆಯನ್ನು ಪ್ರವರ್ಧಿಸುವುದು.”

ಲೋಕ ಶಾಂತಿಯು ಎಂದಾದರೂ ಒಂದು ವಾಸ್ತವಿಕತೆಯಾಗುವುದೊ? ನಿಸ್ಸಂದೇಹವಾಗಿಯೂ! ಆದರೆ ಯಾವುದೇ ಮಾನವ ಮೂಲದಿಂದ ಅಲ್ಲ. 2,700 ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ಹಿಂದೆ, ಸಹೃದಯವುಳ್ಳ ಜನರು “ಯೆಹೋವನಿಂದ ಶಿಕ್ಷಿತರಾಗಿರುವರು” ಮತ್ತು ಅವರ ಶಾಂತಿಯು “ಅಧಿಕ”ವಾಗಿರುವುದೆಂದು ಒಬ್ಬ ಪ್ರೇರಿತ ಬರಹಗಾರನು ಮುಂತಿಳಿಸಿದಾಗ, ಶಾಂತಿಯ ಶಿಕ್ಷಣಕ್ಕಾಗಿರುವ ಸರ್ವಶ್ರೇಷ್ಠ ಮೂಲನು ಯಾರೆಂಬುದನ್ನು ಅವನು ಗುರುತಿಸಿದನು.—ಯೆಶಾಯ 54:13.

‘ಶಾಂತಿಯನ್ನು ದಯಪಾಲಿಸುವವನು’ ದೇವರೆಂದು ಬೈಬಲು ತಿಳಿಸುತ್ತದೆ. (ರೋಮಾಪುರ 16:20, NW) ತನ್ನ ಜನರು “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ,” ಮತ್ತು ಇನ್ನು ಮುಂದೆ ‘ಯುದ್ಧವನ್ನು ಅಭ್ಯಾಸಿಸದೆ’ “ತಮ್ಮ . . . ಕತ್ತಿಗಳನ್ನು ಗುಳಗಳನ್ನಾಗಿ” ಮಾಡಲಿ ಎಂದು ಯೆಹೋವನು ಉಪದೇಶಿಸುತ್ತಿರುವಂತೆ, ಈಗಲೂ ಒಂದು ಅದ್ಭುತಕರವಾದ ಭೌಗೋಲಿಕ ಶಿಕ್ಷಣ ಕಾರ್ಯಕ್ರಮವು ಜಾರಿಯಲ್ಲಿದೆ.—1 ಪೇತ್ರ 3:11; ಯೆಶಾಯ 2:2-4.

ಸತ್ಯದ ಮೇಲೆ ಆಧಾರಿತವೂ, ಕಪಟ ವಂಚನೆಗಳಿಂದ ಮುಕ್ತವೂ ಆಗಿರುವ ಆರಾಧನೆಯನ್ನು ದೇವರು ಸಮ್ಮತಿಸುತ್ತಾನೆ ಹಾಗೂ ಆಶೀರ್ವದಿಸುತ್ತಾನೆ. (ಮತ್ತಾಯ 15:7-9; ಯೋಹಾನ 4:23, 24) ದೇವರ ವಾಕ್ಯಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿರುವ ಸತ್ಯಾರಾಧನೆಯು ಮಾತ್ರ, ಶಾಂತಿ ಮತ್ತು ಐಕ್ಯದಲ್ಲಿ ವಾಸಿಸುವ ಹಾಗೂ ಒಬ್ಬರಿನ್ನೊಬ್ಬರಿಗಾಗಿ ಯಥಾರ್ಥವಾದ ಪ್ರೀತಿಯನ್ನು ತೋರಿಸುವ ಜನರನ್ನು ಉಂಟುಮಾಡಬಲ್ಲದು.—ಯೋಹಾನ 13:35.

ಲೋಕ ಶಾಂತಿಯ ಕುರಿತು ದೇವರ ವಾಕ್ಯವು ತಿಳಿಸುವ ಇನ್ನೂ ಹೆಚ್ಚಿನ ವಿಷಯವನ್ನು ಕಲಿತುಕೊಳ್ಳಲು, ಈ ಪತ್ರಿಕೆಯ ಪ್ರಕಾಶಕರನ್ನು ನೀವು ಸಂಪರ್ಕಿಸುವಂತೆ ನಾವು ಆಮಂತ್ರಿಸುತ್ತೇವೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ