ಜ್ಞಾಪಿಸಿಕೊಳ್ಳಬೇಕಾದ ಒಂದು ದಿನ
ಯೇಸು ತನ್ನ ಮರಣದ ಮುಂಚಿನ ಸಂಜೆಯಂದು, ಅಪೊಸ್ತಲರಿಗೆ ಹುಳಿಯಿಲ್ಲದ ರೊಟ್ಟಿಯನ್ನು ಮತ್ತು ದ್ರಾಕ್ಷಾರಸವನ್ನು ಕೊಟ್ಟು, ಅದನ್ನು ತಿನ್ನುವಂತೆ ಹಾಗೂ ಕುಡಿಯುವಂತೆ ಹೇಳಿದನು. “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂದೂ ಅವನು ಅವರಿಗೆ ಹೇಳಿದನು.—ಲೂಕ 22:19.
ಈ ವರ್ಷ ಆ ಘಟನೆಯ ವಾರ್ಷಿಕೋತ್ಸವವು ಗುರುವಾರ, ಏಪ್ರಿಲ್ 1ರ ಸೂರ್ಯಾಸ್ತಮಾನದ ನಂತರ ಜರುಗಲಿದೆ. ಲೋಕದ ಎಲ್ಲೆಡೆಯೂ ಇರುವ ಯೆಹೋವನ ಸಾಕ್ಷಿಗಳು, ಯೇಸು ಆಜ್ಞಾಪಿಸಿದ ರೀತಿಯಲ್ಲಿ ಈ ಸ್ಮಾರಕ ದಿನವನ್ನು ಆಚರಿಸಲು ಆ ವಿಶೇಷವಾದ ರಾತ್ರಿಯಂದು ಕೂಡಿಬರುವರು. ಈ ಆಚರಣೆಯಲ್ಲಿ ನೀವು ನಮ್ಮೊಂದಿಗೆ ಕೂಡಿಬರುವಂತೆ ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತೇವೆ. ಈ ವಿಶೇಷ ಕೂಟದ ನಿರ್ದಿಷ್ಟ ಸಮಯ ಹಾಗೂ ಸ್ಥಳಕ್ಕಾಗಿ ದಯವಿಟ್ಟು ಸ್ಥಳೀಯ ಯೆಹೋವನ ಸಾಕ್ಷಿಗಳನ್ನು ವಿಚಾರಿಸಿರಿ.