ಪ್ರತ್ಯೇಕವೂ ಚಿಕ್ಕದೂ ಆಗಿರುವ ಒಂದು ದ್ವೀಪ
ಸೆಂಟ್ ಹೆಲೆನದ ದ್ವೀಪವನ್ನು ವರ್ಣಿಸಲಿಕ್ಕಾಗಿ, “ಪ್ರತ್ಯೇಕ” ಮತ್ತು “ಚಿಕ್ಕ” ಎಂಬಂತಹ ಗುಣವಾಚಕಗಳು ಅನೇಕಾವರ್ತಿ ಉಪಯೋಗಿಸಲ್ಪಡುತ್ತವೆ. ಈ ವರ್ಣನೆಯು ಅದಕ್ಕೆ ಯೋಗ್ಯವಾಗಿದೆ. ಏಕೆಂದರೆ ಈ ದ್ವೀಪವು 17 ಕಿಲೊಮೀಟರುಗಳಷ್ಟು ಉದ್ದವೂ 10 ಕಿಲೊಮೀಟರುಗಳಷ್ಟು ಅಗಲವೂ ಇದೆ. ಮತ್ತು ಅತ್ಯಂತ ಸಮೀಪದಲ್ಲಿರುವ ದೇಶವಾದ ಆಫ್ರಿಕ ದೇಶದ ನೈರುತ್ಯ ತೀರದಿಂದ ಇದು 1,950 ಕಿಲೊಮೀಟರುಗಳಷ್ಟು ದೂರದಲ್ಲಿದೆ. 1815ರಲ್ಲಿ, ನೆಪೋಲಿಯನ್ ಬೋನಪಾರ್ಟನು ಯುದ್ಧದಲ್ಲಿ ಸೋತುಹೋದಾಗ, ಒಬ್ಬ ದೇಶಭ್ರಷ್ಟನೋಪಾದಿ ಇದೇ ದ್ವೀಪದಲ್ಲಿ ತನ್ನ ಜೀವನದ ಕಡೆಯ ವರ್ಷಗಳನ್ನು ಕಳೆಯುವಂತೆ ಅವನನ್ನು ಬಿಡಲಾಗಿತ್ತು.
ಮಹಾಸಾಗರದಿಂದ ನೋಡುವುದಾದರೆ ಇದು ಒಂದು ದುರ್ಗಮ ಕೋಟೆಯಂತೆ ಕಂಡುಬರುತ್ತದೆ. ವಾಸ್ತವದಲ್ಲಿ ಇದು ಒಂದು ನಂದಿಹೋದ ಜ್ವಾಲಾಮುಖಿಯಾಗಿದ್ದು, ಅಟ್ಲಾಂಟಿಕ್ ಮಹಾಸಾಗರದಿಂದ ಮೇಲೆದ್ದಿದೆ. ಈ ದ್ವೀಪದ ತೀರದಲ್ಲಿ ಸುಮಾರು 500ರಿಂದ 700 ಮೀಟರುಗಳಷ್ಟು ಎತ್ತರದ ಕಡಿದಾದ ಚಿಕ್ಕಪುಟ್ಟ ಬೆಟ್ಟಗಳಿವೆ. ಇವುಗಳ ಮಧ್ಯದಲ್ಲಿ 818 ಮೀಟರ್ಗಳಷ್ಟು ಎತ್ತರದ ಆಕ್ಟೇಯನ್ ಪರ್ವತವಿದೆ. ಇದು ಇಡೀ ದ್ವೀಪದ ಉನ್ನತ ಸ್ಥಾನವಾಗಿದೆ. ದಕ್ಷಿಣ ಅಟ್ಲಾಂಟಿಕ್ನ ನೇರವಾದ ತಣ್ಣನೆಯ ಗಾಳಿ ಮತ್ತು ಮಹಾಸಾಗರದ ಹೊನಲಿನ ಕಾರಣದಿಂದ, ಇಲ್ಲಿಯ ಹವಾಮಾನವು ಸರ್ವಸಾಮಾನ್ಯವಾಗಿ ಹಿತಕರವಾಗಿರುತ್ತದೆ ಮತ್ತು ವಾತಾವರಣವು ಆಹ್ಲಾದಕರವಾಗಿರುತ್ತದೆ. ಆದರೆ ಮಹಾಸಾಗರದ ತೀರದಿಂದ ಹಿಡಿದು ಪರ್ವತಮಯವಾಗಿರುವ ಒಳಭಾಗದ ವರೆಗೆ, ಬೇರೆ ಬೇರೆ ರೀತಿಯ ಹವಾಗುಣವಿದೆ ಮತ್ತು ವಿವಿಧ ರೀತಿಯ ಸಸ್ಯಗಳು ಇವೆ.
17ನೆಯ ಶತಮಾನದ ಕೊನೆಯ ಭಾಗದಿಂದ, ಸೆಂಟ್ ಹೆಲೆನವು ಬ್ರಿಟಿಷರ ಸೊತ್ತಾಗಿ ಪರಿಣಮಿಸಿದೆ. ಈ ದ್ವೀಪದ ಜನಸಂಖ್ಯೆಯು 5,000 ಆಗಿದ್ದು, ಯೂರೋಪಿಯನ್, ಏಷಿಯನ್, ಹಾಗೂ ಆಫ್ರಿಕನ್ ಮೂಲಗಳಿಂದ ಬಂದ ಜನರು ಇಲ್ಲಿದ್ದಾರೆ. ಇಡೀ ದ್ವೀಪದಾದ್ಯಂತ ಇಂಗ್ಲಿಷ್ ಭಾಷೆಯು ಉಪಯೋಗಿಸಲ್ಪಡುತ್ತದೆ, ಆದರೆ ಈ ಭಾಷೆಯನ್ನು ವಿಚಿತ್ರವಾದ ಶೈಲಿಯಲ್ಲಿ ಉಚ್ಚರಿಸಲಾಗುತ್ತದೆ. ಇಲ್ಲಿ ವಿಮಾನ ನಿಲ್ದಾಣವಿಲ್ಲ; ಹೊರಜಗತ್ತಿನೊಂದಿಗೆ ಇರುವ ಒಂದೇ ಒಂದು ಸಂಪರ್ಕ ಮಾಧ್ಯಮವು ಹಡಗಾಗಿದೆ. ಕ್ರಮವಾಗಿ ಹಡಗುಗಳು ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್ಗೆ ಹೋಗುತ್ತಾ ಬರುತ್ತಾ ಇರುತ್ತವೆ. ಮತ್ತು ಉಪಗ್ರಹದ ಕಾರಣದಿಂದ, ಇತ್ತೀಚೆಗೆ 1990ಗಳ ಮಧ್ಯಭಾಗದಲ್ಲಿಯೇ ಟೆಲಿವಿಷನ್ ಪ್ರಸಾರವು ಆರಂಭವಾಯಿತು.
1930ಗಳ ಆರಂಭದಲ್ಲಿ, ಪ್ರಪ್ರಥಮ ಬಾರಿಗೆ ದೇವರ ರಾಜ್ಯದ ಸುವಾರ್ತೆಯು ಈ ದ್ವೀಪದ ತೀರವನ್ನು ತಲಪಿತು. (ಮತ್ತಾಯ 24:14) ಗತ ವರ್ಷಗಳಲ್ಲಿ, ದ್ವೀಪದ ಅನೇಕ ನಿವಾಸಿಗಳು ಈ ನಿಧಿಯನ್ನು ತಮ್ಮದಾಗಿ ಮಾಡಿಕೊಂಡರು; ಈ ನಿಧಿಯ ಮುಂದೆ ಪ್ರಾಪಂಚಿಕ ಸಂಪತ್ತು ಕ್ಷುಲ್ಲಕವಾಗಿದೆ. (ಮತ್ತಾಯ 6:19, 20) ಇಂದು, ಸೆಂಟ್ ಹೆಲೆನ ದ್ವೀಪದಲ್ಲಿರುವ ಒಬ್ಬ ಸಾಕ್ಷಿಯು ಸುಮಾರು 31 ಜನರಿಗೆ ಸಾಕ್ಷಿ ನೀಡಬೇಕಾಗಿದೆ; ಇದು ಲೋಕದಲ್ಲೇ ಅತ್ಯುತ್ತಮವಾದದ್ದಾಗಿದೆ!
[ಪುಟ 24ರಲ್ಲಿರುವಚಿತ್ರ]
(For fully formatted text, see publication)
ಸೆಂಟ್ ಹೆಲೆನ
ಜೇಮ್ಸ್ಟೌನ್
ಲೆವಲ್ವುಡ್
ಆಫ್ರಿಕ
ಅಟ್ಲಾಂಟಿಕ್ ಮಹಾಸಾಗರ
ಸೆಂಟ್ ಹೆಲೆನ