ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 12/15 ಪು. 30
  • ನಿಮಗೆ ನೆನಪಿದೆಯೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೆ?
  • ಕಾವಲಿನಬುರುಜು—1997
  • ಅನುರೂಪ ಮಾಹಿತಿ
  • ಸ್ವತ್ಯಾಗ ಮತ್ತು ನಿಷ್ಠೆಯ ಒಂದು ಮಾದರಿ
    ಕಾವಲಿನಬುರುಜು—1997
  • ‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುತ್ತಾ ಇರ್ರಿ’
    ಕಾವಲಿನಬುರುಜು—1997
  • ಎಲೀಷನು ಅಗ್ನಿಮಯ ರಥರಥಾಶ್ವಗಳನ್ನು ನೋಡಿದನು! ನೀವು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಕಾವಲಿನಬುರುಜು—1997
w97 12/15 ಪು. 30

ನಿಮಗೆ ನೆನಪಿದೆಯೆ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳ ವಾಚನವನ್ನು ನೀವು ಗಣ್ಯಮಾಡಿದ್ದೀರೊ? ಹಾಗಾದರೆ, ಈ ಮುಂದಿನ ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರೊ ಎಂಬುದನ್ನು ನೋಡಿ:

◻ ಒಬ್ಬ ಕ್ರೈಸ್ತ ಯುವ ವ್ಯಕ್ತಿಗೆ ವಿದ್ಯೆಯ ಮುಖ್ಯ ಉದ್ದೇಶವು ಏನಾಗಿದೆ?

ವಿದ್ಯೆಯ ಮುಖ್ಯ ಉದ್ದೇಶವು, ಒಬ್ಬ ಯುವ ವ್ಯಕ್ತಿಯನ್ನು ಅವನು ಯೆಹೋವನ ಪರಿಣಾಮಕಾರಿಯಾದ ಶುಶ್ರೂಷಕನಾಗುವಂತೆ ಸಜ್ಜುಗೊಳಿಸುವುದೇ ಆಗಿರತಕ್ಕದ್ದು. ಮತ್ತು ಆ ಗುರಿಯನ್ನು ಸಾಧಿಸಲಿಕ್ಕಾಗಿರುವ ಅತಿ ಪ್ರಾಮುಖ್ಯವಾದ ವಿದ್ಯೆಯು ಆತ್ಮಿಕ ವಿದ್ಯೆಯಾಗಿದೆ.—8/15, ಪುಟ 21.

◻ ಒಬ್ಬ ಜೊತೆ ಕ್ರೈಸ್ತನ ಗಂಭೀರತರದ ತಪ್ಪುಕೃತ್ಯವನ್ನು ಹಿರಿಯರಿಗೆ ವರದಿಸುವುದಕ್ಕಾಗಿರುವ ಕಾರಣಗಳು ಯಾವುವು?

ತಪ್ಪುಕೃತ್ಯವನ್ನು ವರದಿಸುವುದಕ್ಕಾಗಿರುವ ಒಂದು ಕಾರಣವು ಯಾವುದೆಂದರೆ, ಅದು ಸಭೆಯ ಶುದ್ಧತೆಯನ್ನು ಕಾಪಾಡುವ ಕಾರ್ಯಮಾಡುತ್ತದೆ. ಮತ್ತೊಂದು ಕಾರಣವು ಏನೆಂದರೆ, ಹಾಗೆ ಮಾಡುವುದು, ದೇವರ ಕಡೆಗೆ, ಸಭೆಯ ಕಡೆಗೆ, ಹಾಗೂ ತಪ್ಪಿತಸ್ಥನ ಕಡೆಗೆ ತೋರಿಸಲ್ಪಡುವ ಕ್ರಿಸ್ತೀಯ ತತ್ವಾಧಾರಿತ ಪ್ರೀತಿಯ ಒಂದು ಕೃತ್ಯವಾಗಿದೆ.—8/15, ಪುಟಗಳು 28, 30.

◻ “ಯೆಹೋವನ ದಿನದ ಸಾನ್ನಿಧ್ಯವನ್ನು . . . ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳು”ವುದರ ಅರ್ಥವೇನು? (2 ಪೇತ್ರ 3:12, NW)

ನಾವು “ಯೆಹೋವನ ದಿನ”ವನ್ನು ನಮ್ಮ ಮನಸ್ಸುಗಳಿಂದ ತೆಗೆದು ಬಿಡುವುದಿಲ್ಲ ಎಂಬುದನ್ನು ಅದು ಅರ್ಥೈಸುತ್ತದೆ. ಯೆಹೋವನು ಈ ವಿಷಯಗಳ ವ್ಯವಸ್ಥೆಯನ್ನು ನಾಶಮಾಡುವ ದಿನವು ಅತಿ ನಿಕಟವೆಂಬುದನ್ನು ನಾವು ಮರೆಯಬಾರದು. ಅದು ನಮಗೆ ಎಷ್ಟು ವಾಸ್ತವವಾಗಿರಬೇಕೆಂದರೆ, ನಾವು ಅದನ್ನು ಸನಿಹದಲ್ಲಿ, ಮುಂದೆಯೇ ಇರುವಂತೆ ಸ್ಪಷ್ಟವಾಗಿ ನೋಡಬೇಕು. (ಚೆಫನ್ಯ 1:7, 14)—9/1, ಪುಟ 19.

◻ ಈ ದುಷ್ಟ ವ್ಯವಸ್ಥೆಯ ಕೊನೆಯ ದಿವಸಗಳು ಅನೇಕರ ನಿರೀಕ್ಷೆಗಿಂತ ದೀರ್ಘಕಾಲ ಮುಂದುವರಿದಿರುವುದೇಕೆ?

ಸರ್ವ ಮಾನವಕುಲದ ಸುಹಿತಗಳನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಆತನಿಗೆ ಚಿಂತೆಯಿರುವುದು ಜನರ ಜೀವಗಳಲ್ಲಿ. (ಯೆಹೆಜ್ಕೇಲ 33:11) ಅಂತ್ಯವು ನಮ್ಮ ಸರ್ವ ವಿವೇಕದ ಸೃಷ್ಟಿಕರ್ತನ ಉದ್ದೇಶವನ್ನು ನೆರವೇರಿಸುವರೆ ತಕ್ಕ ಕಾಲದಲ್ಲಿ ಬರುವುದೆಂದು ನಾವು ಭರವಸೆಯಿಂದಿರಬಲ್ಲೆವು.—9/1, ಪುಟ 22.

◻ ಪೂರ್ಣ ಸಮಯದ ಸೇವೆಯಲ್ಲಿರುವವರು, ಅವರು ಎದುರಿಸಬಹುದಾದ ಸಮಸ್ಯೆಗಳ ಎದುರಿನಲ್ಲೂ ತಮ್ಮ ಆನಂದವನ್ನು ಹೇಗೆ ಕಾಪಾಡಿಕೊಳ್ಳಬಲ್ಲರು?

ಅವರು ತಮಗಿರುವ ಅನೇಕ ಆಶೀರ್ವಾದಗಳ ಕುರಿತು ಯೋಚಿಸಬೇಕು ಮತ್ತು ಇತರ ಸಾವಿರಾರು ಜನರು ಹೆಚ್ಚು ಭಾರಿಯಾದ ಕಷ್ಟಗಳನ್ನು ಅನುಭವಿಸುತ್ತಾರೆಂಬುದನ್ನು ಗ್ರಹಿಸಬೇಕು. (1 ಪೇತ್ರ 5:6-9)—9/15, ಪುಟ 24.

◻ ಬೈಬಲನ್ನು ಭಾಷಾಂತರಿಸುವ ವಿಷಯದಲ್ಲಿ ವಿಲ್ಯಮ್‌ ಟಿಂಡಲ್‌ನ ಗುರಿಯು ಏನಾಗಿತ್ತು?

ಶಾಸ್ತ್ರಗಳು ಸಾಮಾನ್ಯ ವ್ಯಕ್ತಿಗೆ ಸಾಧ್ಯವಾದಷ್ಟು ನಿಷ್ಕೃಷ್ಟ ಮತ್ತು ಸರಳ ಮಾತುಗಳಲ್ಲಿ ಮಾತಾಡುವಂತೆ ಬಿಡುವುದು ಟಿಂಡಲ್‌ನ ಗುರಿಯಾಗಿತ್ತು.—9/15, ಪುಟ 27.

◻ ನಾವು ದೇವರ ವಾಕ್ಯದ ನಿಷ್ಠಾವಂತ ಪಕ್ಷವಾದಿಗಳಾಗಿದ್ದೇವೆಂಬುದನ್ನು ನಾವು ಹೇಗೆ ತೋರಿಸಸಾಧ್ಯವಿದೆ?

ಇತರರಿಗೆ ಹುರುಪಿನಿಂದ ಸಾರುವ ಮೂಲಕ ನಾವು ದೇವರ ವಾಕ್ಯಕ್ಕೆ ನಮ್ಮ ನಿಷ್ಠೆಯನ್ನು ತೋರಿಸುತ್ತೇವೆ. ಶಿಕ್ಷಕರೋಪಾದಿ, ನಾವು ಬೈಬಲನ್ನು ಜಾಗರೂಕವಾಗಿ ಉಪಯೋಗಿಸಬೇಕು, ನಮ್ಮ ವಿಚಾರಗಳಿಗೆ ಒಪ್ಪುವಂತೆ ಮಾಡಲಿಕ್ಕಾಗಿ, ಅದು ಹೇಳುವುದನ್ನು ಎಂದಿಗೂ ತಿರುಚಬಾರದು ಇಲ್ಲವೆ ಅತಿಶಯಿಸಬಾರದು. (2 ತಿಮೊಥೆಯ 2:15)—10/1, ಪುಟ 20.

◻ ಲೋಕದ ವಿಷಕಾರಿ ಆತ್ಮವು ನಮ್ಮ ಸಮಗ್ರತೆಯನ್ನು ಹೇಗೆ ದುರ್ಬಲಗೊಳಿಸಸಾಧ್ಯವಿದೆ?

ಲೋಕದ ಆತ್ಮವು ನಮ್ಮ ಸಮಗ್ರತೆಯನ್ನು ದುರ್ಬಲಗೊಳಿಸಸಾಧ್ಯವಿದೆ. ನಾವು ಏನನ್ನು ಹೊಂದಿರುತ್ತೇವೊ ಅದರೊಂದಿಗೆ ಅತೃಪ್ತರಾಗುವಂತೆ ಮತ್ತು ದೇವರ ಅಭಿರುಚಿಗಳಿಗಿಂತ ನಮ್ಮ ಸ್ವಂತ ಅಗತ್ಯಗಳು ಮತ್ತು ಅಭಿರುಚಿಗಳಿಗೆ ಆದ್ಯತೆ ಕೊಡುವಂತೆ ಅದು ನಮ್ಮನ್ನು ವ್ಯಾಕುಲಗೊಳಿಸಸಾಧ್ಯವಿದೆ. (ಮತ್ತಾಯ 16:21-23ನ್ನು ಹೋಲಿಸಿರಿ.)—10/1, ಪುಟ 29.

◻ ಪೂರ್ಣಪ್ರಾಣದಿಂದ ಯೆಹೋವನನ್ನು ಸೇವಿಸುವುದರ ಅರ್ಥವೇನು?

ಒಬ್ಬನ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯಗಳೊಂದಿಗೆ, ಒಬ್ಬ ಇಡೀ ವ್ಯಕ್ತಿಯನ್ನು “ಪ್ರಾಣವು” ಸೂಚಿಸುತ್ತದೆ. ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುವುದರ ಅರ್ಥವು, ನಮ್ಮ ಮನಶ್ಶಕ್ತಿಯನ್ನೆಲ್ಲ ಉಪಯೋಗಿಸಿ, ದೇವರ ಸೇವೆಯಲ್ಲಿ ನಮ್ಮ ಶಕ್ತಿಗಳನ್ನು ಸಾಧ್ಯವಿರುವಷ್ಟರ ಮಟ್ಟಿಗೆ ನಿರ್ದೇಶಿಸುತ್ತ ನಮ್ಮನ್ನು ಕೊಟ್ಟುಕೊಳ್ಳುವುದೇ ಆಗಿದೆ. (ಮಾರ್ಕ 12:29, 30)—10/15, ಪುಟ 13.

◻ ದೈವಿಕ ತತ್ತ್ವವುಳ್ಳ ವ್ಯಕ್ತಿಯಾಗಿರುವುದಕ್ಕಿರುವ ಕೀಲಿ ಕೈ ಯಾವುದು?

ದೈವಿಕ ತತ್ತ್ವವುಳ್ಳ ವ್ಯಕ್ತಿಯಾಗಿರುವುದಕ್ಕಿರುವ ಕೀಲಿ ಕೈ ನಿಜವಾಗಿಯೂ ಯೆಹೋವನನ್ನು, ಆತನ ಇಷ್ಟಾನಿಷ್ಟಗಳನ್ನು ಮತ್ತು ಆತನ ಉದ್ದೇಶಗಳನ್ನು ತಿಳಿಯವುದೇ ಆಗಿದೆ. ದೇವರ ಕುರಿತ ಈ ಆಧಾರ ತತ್ತ್ವಗಳು ನಮ್ಮ ಜೀವಿತಗಳನ್ನು ಆಳುವಾಗ, ಅವು ಕಾರ್ಯತಃ, ಸಜೀವವಾದ ಮೂಲತತ್ತ್ವಗಳಾಗುತ್ತವೆ. (ಯೆರೆಮೀಯ 22:16; ಇಬ್ರಿಯ 4:12)—10/15, ಪುಟ 29.

◻ ಮಾನವ ಆಳಿಕೆಯ ಕಡೆಗೆ ಯೆಹೋವನ ಸೇವಕರಿಗೆ ಯಾವ ಸಮತೆಯ ಮನೋಭಾವವಿದೆ?

ಅವರು ದೇವರ ರಾಜ್ಯದ ರಾಯಭಾರಿಗಳೊ ಉಪರಾಯಭಾರಿಗಳೊ ಆಗಿ ಸೇವೆಮಾಡುವುದರಿಂದ ರಾಜಕೀಯ ವಿಚಾರಗಳಲ್ಲಿ ತಟಸ್ಥರಾಗಿದ್ದಾರೆ. (2 ಕೊರಿಂಥ 5:20) ಇನ್ನೊಂದು ಕಡೆಯಲ್ಲಿ, ಅವರು ಅಧಿಕಾರದಲ್ಲಿರುವವರಿಗೆ ಶುದ್ಧಾಂತಃಕರಣದ ಅಧೀನತೆಯಲ್ಲಿದ್ದಾರೆ.—11/1, ಪುಟ 17.

◻ ಪ್ರವಾದಿಯಾದ ಎಲೀಷನು ತೆಗೆದುಕೊಂಡ ಮಾರ್ಗಕ್ರಮದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

ಎಲೀಯನೊಂದಿಗಿನ ವಿಶೇಷ ಸೇವೆಗೆ ಆಮಂತ್ರಣವು ನೀಡಲ್ಪಟ್ಟಾಗ, ಆ ಕೂಡಲೆ ಎಲೀಷನು ತನ್ನ ಹೊಲವನ್ನು ಬಿಟ್ಟು, ಎಲೀಯನ ಸೇವೆಮಾಡಲು ಹೋದನು. ಅವನ ಕರ್ತವ್ಯಗಳಲ್ಲಿ ಕೆಲವು ದಾಸ್ಯ ವೃತ್ತಿಯವುಗಳಾಗಿದ್ದವು ಎಂಬುದು ಸುವ್ಯಕ್ತ. (2 ಅರಸುಗಳು 3:11) ಇಂದು ದೇವರ ಸೇವಕರಲ್ಲಿ ಕೆಲವರು, ತದ್ರೀತಿಯ ಸ್ವತ್ಯಾಗದ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅವರು ಬಹು ದೂರದ ಟೆರಿಟೊರಿಗಳಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ತಮ್ಮ ಜೀವನೋಪಾಯಗಳನ್ನು ಬಿಟ್ಟುಬಂದಿದ್ದಾರೆ.—11/1, ಪುಟ 31.

◻ ಯಾಕೋಬನ ಪತ್ರದಲ್ಲಿ ಯಾವ ಪ್ರಯೋಜನಕರವಾದ ಸಲಹೆಯಿದೆ?

ಅದು ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತೋರಿಸಿ, ಪಕ್ಷಪಾತದ ವಿರುದ್ಧ ನಮಗೆ ಸಲಹೆ ನೀಡಿ, ನಾವು ಸತ್ಕಾರ್ಯಗಳಲ್ಲಿ ತೊಡಗುವಂತೆ ಪ್ರಚೋದಿಸುತ್ತದೆ. ನಮ್ಮ ನಾಲಗೆಯನ್ನು ನಿಯಂತ್ರಿಸಿಕೊಳ್ಳುವಂತೆ, ಲೌಕಿಕ ಪ್ರಭಾವಗಳನ್ನು ತಡೆಯುವಂತೆ, ಮತ್ತು ಶಾಂತಿಯನ್ನು ವರ್ಧಿಸುವಂತೆ ಯಾಕೋಬನು ನಮ್ಮನ್ನು ಉತ್ತೇಜಿಸುತ್ತಾನೆ. ನಾವು ತಾಳ್ಮೆಯುಳ್ಳವರೂ ಪ್ರಾರ್ಥನಾಪರರೂ ಆಗಿರುವಂತೆ ಅವನ ಮಾತುಗಳು ನಮಗೆ ಸಹಾಯಮಾಡಬಲ್ಲವು.—11/15, ಪುಟ 24.

◻ ಯೆಹೋವನು “ಕ್ಷಮಿಸಲು ಸಿದ್ಧ”ನಾಗಿರುವುದು ಏಕೆ? (ಕೀರ್ತನೆ 86:5, NW)

ಯೆಹೋವನು ಕ್ಷಮಿಸಲು ಸಿದ್ಧನಾಗಿದ್ದಾನೆ ಏಕೆಂದರೆ, ನಾವು ಧೂಳಿನ ಜೀವಿಗಳಾಗಿದ್ದೇವೆ, ಅಪರಿಪೂರ್ಣತೆಯ ಪರಿಣಾಮವಾಗಿ ದೌರ್ಬಲ್ಯಗಳು ಅಥವಾ ಬಲಹೀನತೆಗಳನ್ನು ಹೊಂದಿದ್ದೇವೆಂಬುದನ್ನು ಆತನು ಮರೆತುಬಿಡುವುದಿಲ್ಲ. (ಕೀರ್ತನೆ 103:12-14)—12/1, ಪುಟಗಳು 10, 11.

◻ ಇತರರನ್ನು ಕ್ಷಮಿಸಲು ನಾವು ಸಿದ್ಧರಾಗಿರಬೇಕು ಏಕೆ?

ಕರುಣೆಗಾಗಿ ಒಂದು ಆಧಾರವಿರುವಾಗ ನಾವು ಇತರರನ್ನು ಕ್ಷಮಿಸಲು ನಿರಾಕರಿಸುವಲ್ಲಿ, ಅದು ದೇವರೊಂದಿಗಿನ ನಮ್ಮ ಸ್ವಂತ ಸಂಬಂಧವನ್ನು ಪ್ರತಿಕೂಲವಾಗಿ ಬಾಧಿಸಬಲ್ಲದು. (ಮತ್ತಾಯ 6:14, 15)—12/1, ಪುಟ 17.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ