ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 12/15 ಪು. 32
  • ಚಿನ್ನದ ಕಿವಿಯೋಲೆಯಿಂದ ಅಲಂಕೃತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಚಿನ್ನದ ಕಿವಿಯೋಲೆಯಿಂದ ಅಲಂಕೃತ
  • ಕಾವಲಿನಬುರುಜು—1997
ಕಾವಲಿನಬುರುಜು—1997
w97 12/15 ಪು. 32

ಚಿನ್ನದ ಕಿವಿಯೋಲೆಯಿಂದ ಅಲಂಕೃತ

ಅತ್ಯಂತ ಪ್ರಾಚೀನ ಸಮಯಗಳಿಂದಲೂ, ಚಿನ್ನದ ಒಡವೆಗಳು ಅವುಗಳ ಮೌಲ್ಯ ಹಾಗೂ ಸೌಂದರ್ಯಕ್ಕಾಗಿ ಬಹಳವಾಗಿ ಮಾನ್ಯಮಾಡಲ್ಪಟ್ಟಿವೆ. ಐಗುಪ್ತದ ಪ್ರಧಾನ ಮಂತ್ರಿಯಾದ ಸಂದರ್ಭದಲ್ಲಿ, ಯೋಸೇಫನು ಫರೋಹನಿಂದ ಚಿನ್ನದ ಕಂಠಹಾರವನ್ನು ಪಡೆದನು. (ಆದಿಕಾಂಡ 41:42) ರೆಬೆಕ್ಕಳಿಗೆ ಇಂದಿನ ಮೌಲ್ಯಗಳಲ್ಲಿ, ಸುಮಾರು 1,400 (ಯು.ಎಸ್‌.) ಡಾಲರುಗಳಷ್ಟು ಬೆಲೆಯುಳ್ಳ ಒಂದು ಚಿನ್ನದ ಮೂಗುತಿಯನ್ನು ಮತ್ತು ಎರಡು ಚಿನ್ನದ ಬಳೆಗಳನ್ನು ಕೊಡಲಾಯಿತು. (ಆದಿಕಾಂಡ 24:22) ಈ ಅಮೂಲ್ಯ ಕೊಡುಗೆಗಳು ಕೃತಜ್ಞತೆಯಿಂದ ಸ್ವೀಕರಿಸಲ್ಪಟ್ಟು, ಸಂತೋಷದಿಂದ ಧರಿಸಿಕೊಳ್ಳಲ್ಪಟ್ಟವು ಎಂಬುದರಲ್ಲಿ ಸಂದೇಹವೇ ಇಲ್ಲ.

ಬೈಬಲು, ಯೋಸೇಫ ಮತ್ತು ರೆಬೆಕ್ಕರಿಂದ ಧರಿಸಿಕೊಳ್ಳಲ್ಪಟ್ಟ ಒಡವೆಗಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿರುವ ಸಾಂಕೇತಿಕ ಒಡವೆಗಳ ಕುರಿತು ಮಾತಾಡುತ್ತದೆ. ಜ್ಞಾನೋಕ್ತಿ 25:12 ಹೇಳುವುದು: “ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು ಹೊನ್ನಿನ ಮುರುವಿಗೂ [“ಓಲೆಗೂ,” NW] ಅಪರಂಜಿಯ ಆಭರಣಕ್ಕೂ ಸಮಾನ.” ಸಲಹೆಗಾರನು ತನ್ನ ಸ್ವಂತ ಅಭಿಪ್ರಾಯಕ್ಕಿಂತಲೂ ದೇವರ ವಾಕ್ಯದ ಮೇಲೆ ಆಧರಿಸಿದ ಬುದ್ಧಿವಾದವನ್ನು ಕೊಡುವಾಗ, ಅವನು ನಿಜವಾಗಿಯೂ ಒಂದು ಅಮೂಲ್ಯವಾದ ಕೊಡುಗೆಯನ್ನು ಕೊಡುತ್ತಿದ್ದಾನೆ. ಏಕೆ? ಏಕೆಂದರೆ ಕಟ್ಟಕಡೆಗೆ ಅಂತಹ ಸಲಹೆಯು ಸ್ವತಃ ಯೆಹೋವನಿಂದಲೇ ಬರುತ್ತದೆ. ಬೈಬಲು ನಮಗೆ ಹೇಳುವುದು: “ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.” (ಜ್ಞಾನೋಕ್ತಿ 3:11, 12) ಕೇಳುಗನು ದೈನ್ಯಭಾವದಿಂದ ಸಲಹೆಯನ್ನು ಸ್ವೀಕರಿಸಿ, ಅನ್ವಯಿಸಿಕೊಳ್ಳುವಾಗ, ಅವನು ಚಿನ್ನದ ಕಿವಿಯೋಲೆಯಿಂದ ತನ್ನನ್ನು ಅಲಂಕರಿಸಿಕೊಳ್ಳುತ್ತಿದ್ದಾನೊ ಎಂಬಂತಿದೆ. ಅದು ಪ್ರೇರಿತ ಬೈಬಲ್‌ ಜ್ಞಾನೋಕ್ತಿಯು ಹೇಳುವಂತೆಯೇ ಇದೆ: “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ.”—ಜ್ಞಾನೋಕ್ತಿ 3:13, 14.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ