ಇಂತಹ ದೃಶ್ಯಗಳನ್ನು ನೋಡುವುದರಿಂದ ನಮಗೆಂದಾದರೂ ಬಿಡುಗಡೆ ದೊರೆಯುವುದೊ?
ಈ ದಿವಸಗಳಲ್ಲಿ ನಾವು ಎಲ್ಲಿಯೇ ಹೋಗಲಿ, ಉದ್ವೇಗ, ಘರ್ಷಣೆ, ಹಾಗೂ ಯುದ್ಧದ ಪ್ರತೀಕಗಳನ್ನೇ ನೋಡುತ್ತೇವೆ. ಆದರೆ ಈಗಾಗಲೇ ನಿಮಗೆ ತಿಳಿದಿರುವ ದುರ್ವಾರ್ತೆಗಳಿಗೆ ಹೆಚ್ಚನ್ನು ಕೂಡಿಸುವುದೇ ಈ ಪತ್ರಿಕೆಯ ಉದ್ದೇಶವಾಗಿರುವುದಿಲ್ಲ. ಬದಲಾಗಿ, ಈ ವಿಶೇಷ ಸಂಚಿಕೆಯು, ಕಡಿಮೆಪಕ್ಷ ಎರಡು ಸಾಂತ್ವನದಾಯಕ ಸತ್ಯತೆಗಳನ್ನು ನಿಮಗೆ ಪರಿಚಯಿಸುವುದು. ಮೊದಲನೆಯದಾಗಿ, ಬೈಬಲಿನಲ್ಲಿರುವ ಪುರಾತನ ಪ್ರವಾದನೆಗಳು, ವಾಸ್ತವವಾಗಿ ನಮ್ಮ ಯುಗದಲ್ಲಿ ನಡೆಯಲಿದ್ದಂತಹ ಆಘಾತಕರವಾದ ದುರ್ವಾರ್ತೆಗಳಲ್ಲಿ ಹೆಚ್ಚಿನವುಗಳನ್ನು ಮುಂತಿಳಿಸಿದವು ಎಂಬುದನ್ನು; ಎರಡನೆಯದಾಗಿ, ಈ ಪ್ರವಾದನೆಗಳ ಪುಸ್ತಕವೇ, ಇಲ್ಲಿ ಚಿತ್ರಿಸಲ್ಪಟ್ಟಿರುವಂತಹ ದೃಶ್ಯಗಳು ಇತಿಹಾಸದ ವಿಷಯಗಳಾಗುವಂತಹ ಒಂದು ದಿನದ ಕುರಿತಾಗಿ ಮುಂತಿಳಿಸುತ್ತದೆ ಎಂಬುದನ್ನು. ಇನ್ನುಮುಂದೆ ಯುದ್ಧಗಳಿರುವುದಿಲ್ಲ. ಇನ್ನುಮುಂದೆ ಬಾಂಬ್ ದಾಳಿಗಳಿರುವುದಿಲ್ಲ, ಮರೆಯಿಂದ ಗುಂಡುಹಾರಿಸುವುದಿಲ್ಲ, ನೆಲದ ಸಿಡಿಮದ್ದುಗಳಿರುವುದಿಲ್ಲ, ಭಯೋತ್ಪಾದನೆಯಿರುವುದಿಲ್ಲ. ಕಡುಸಂಕಟಕ್ಕೊಳಗಾಗಿರುವ ಅನಾಥರು ಅಥವಾ ನಿರ್ಗತಿಕ ನಿರಾಶ್ರಿತರು ಇನ್ನಿರುವುದಿಲ್ಲ. ನಿಜವಾದ, ಮನಸ್ಸನ್ನು ಮುದಗೊಳಿಸುವ ಶಾಂತಿಯ ಒಂದು ಲೋಕವಿರುವುದು. ಅಂತಹ ಒಂದು ಸಮಯವನ್ನು ನೋಡಲು ನೀವು ಇಷ್ಟಪಡುತ್ತೀರೊ? ಬೈಬಲು ಹೇಳಲಿಕ್ಕಿರುವಂತಹ ವಿಷಯವನ್ನು ಪರಿಗಣಿಸುವಂತೆ ನಾವು ನಿಮ್ಮನ್ನು ಪ್ರಚೋದಿಸುತ್ತೇವೆ. ಎಂದಾದರೂ ಸಾಧ್ಯವಿದೆಯೆಂದು ನೀವು ಆಲೋಚಿಸಿರದಷ್ಟು ಹೆಚ್ಚು ಸಾಂತ್ವನವನ್ನು ನೀವು ಬೈಬಲಿನಲ್ಲಿ ಕಂಡುಕೊಳ್ಳಬಹುದು.