ಲಕ್ಷಾಂತರ ಜನರು ಹೋಗುತ್ತಿದ್ದಾರೆ ನೀವೂ ಹೋಗುತ್ತಿದ್ದೀರೋ?
ಎಲ್ಲಿಗೆ ಹೋಗುತ್ತಿರುವುದು? ಯೇಸು ಕ್ರಿಸ್ತನ ಮರಣದ ವಾರ್ಷಿಕ ಆಚರಣೆಗೇ. 1996ನೇ ಇಸವಿಯಲ್ಲಿ, ಲೋಕವ್ಯಾಪಕವಾಗಿ ಒಟ್ಟು 1,29,21,933 ಜನರು ಹಾಜರಾದರು.
ಜನರು ಏಕೆ ಹೋಗುತ್ತಾರೆ? ಮಾನವಕುಲಕ್ಕೆ ಯೇಸುವಿನ ಮರಣವು ಯಾವ ಅರ್ಥದಲ್ಲಿದೆ ಎಂಬುದನ್ನು ಕಂಡುಕೊಳ್ಳುವುದಕ್ಕಾಗಿಯೇ. ಅದು ಅನಾರೋಗ್ಯ, ಕಷ್ಟಾನುಭವ, ಹಾಗೂ ಮರಣದಿಂದ ಉಪಶಮನವನ್ನು ಅರ್ಥೈಸುತ್ತದೆ. ಮೃತರಾಗಿರುವ ಪ್ರೀತಿಪಾತ್ರರೂ, ಪ್ರಮೋದವನಕ್ಕೆ ಪುನಃಸ್ಥಾಪಿಸಲ್ಪಟ್ಟ ಭೂಮಿಯ ಮೇಲೆ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು.
ಯೇಸು ಕ್ರಿಸ್ತನ ಮರಣವು ಅಂಥ ಆಶೀರ್ವಾದಗಳನ್ನು ಹೇಗೆ ತರಸಾಧ್ಯವಿದೆ? ಅದನ್ನು ತಿಳಿದುಕೊಳ್ಳಲಿಕ್ಕಾಗಿ ನೀವು ಆಮಂತ್ರಿಸಲ್ಪಟ್ಟಿದ್ದೀರಿ. ಈ ಪ್ರಮುಖ ಘಟನೆಯ ಸಮಯದಲ್ಲಿ ತಮ್ಮನ್ನು ಭೇಟಿಮಾಡುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಸ್ವಾಗತಿಸುತ್ತಾರೆ.
ನಿಮ್ಮ ಮನೆಗೆ ಬಹಳ ಸಮೀಪವಿರುವ ರಾಜ್ಯ ಸಭಾಗೃಹಕ್ಕೆ ಹಾಜರಾಗಿರಿ. ಈ ವರ್ಷದ ಆ ದಿನಾಂಕವು, ಮಾರ್ಚ್ 23ರ ಭಾನುವಾರದಂದು ಸೂರ್ಯಾಸ್ತಮಾನವಾದ ಬಳಿಕ ಬರಲಿದೆ. ನಿಖರವಾದ ಸಮಯಕ್ಕಾಗಿ ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ವಿಚಾರಿಸಿರಿ.