ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದುವುದನ್ನು ನೀವು ಆನಂದಿಸಿದ್ದೀರೊ? ಹಾಗಿರುವಲ್ಲಿ, ಈ ಮುಂದಿನ ವಿಷಯಗಳನ್ನು ಜ್ಞಾಪಕಕ್ಕೆ ತರುವುದನ್ನು ನೀವು ಆಸಕ್ತಿಕರವಾಗಿ ಕಂಡುಕೊಳ್ಳುವಿರಿ:
◻ ಮತ್ತಾಯ 24:3, 27, 37, 39ರಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್ ಶಬ್ದವಾದ ಪ್ಯಾರೂಸೀಯದ ಅರ್ಥವೇನು?
ವೈನ್ಸ್ ಎಕ್ಸ್‌ಪೊಸಿಟರಿ ಡಿಕ್‌ಷನರಿ ಆಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ಹೇಳುವುದು: “ಪ್ಯಾರೂಸೀಯ, . . . ಆಗಮನ ಮತ್ತು ತತ್ಪರಿಣಾಮವಾದ ಸಾನ್ನಿಧ್ಯ, ಇವೆರಡನ್ನೂ ತೋರಿಸುತ್ತದೆ.” ಆದಕಾರಣ ಅದು ಆಗಮನದ ಕ್ಷಣವನ್ನು ಮಾತ್ರವಲ್ಲ, ಆಗಮನದಿಂದ ಹಿಡಿದು ಮುಂದಕ್ಕೆ ವ್ಯಾಪಿಸುವ ಒಂದು ಸಾನ್ನಿಧ್ಯವಾಗಿದೆ.—8/15, ಪುಟ 11.
◻ ಪ್ರಥಮ ಶತಮಾನದಲ್ಲಿ “ನರಜೀವಿಗಳು” ರಕ್ಷಿಸಲ್ಪಡಸಾಧ್ಯವಾಗುವಂತೆ ‘ಆ ದಿನಗಳು ಮೊಟಕುಗೊಳಿಸಲ್ಪಟ್ಟದ್ದು’ ಹೇಗೆ, ಮತ್ತು ಅದು ಒಂದು ದೊಡ್ಡ ಪ್ರಮಾಣದಲ್ಲಿ ಹೇಗೆ ಸಂಭವಿಸುವುದು? (ಮತ್ತಾಯ 24:22, NW)
ಸಾ.ಶ. 66ರಲ್ಲಿ, ರೋಮನರು ಅನಿರೀಕ್ಷಿತವಾಗಿ ಯೆರೂಸಲೇಮಿನ ಮೇಲಿನ ತಮ್ಮ ಮುತ್ತಿಗೆಯನ್ನು ಮೊಟಕುಗೊಳಿಸಿದಾಗ, ಕ್ರೈಸ್ತ “ನರಜೀವಿಗಳು” ಓಡಿಹೋಗುವಂತೆ ಅನುಮತಿಸಿದರು. ತದ್ರೀತಿಯಲ್ಲಿ, ಮಹಾ ಬಾಬೆಲಿನ ಮೇಲೆ ಬರಲಿರುವ ಆಕ್ರಮಣವು ಹೇಗಾದರೂ ಮೊಟಕುಗೊಳಿಸಲ್ಪಡುವುದೆಂಬುದನ್ನು ನಾವು ನಿರೀಕ್ಷಿಸುತ್ತೇವೆ. ಈ ರೀತಿಯಲ್ಲಿ ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಸಂಗಡಿಗರು ಸಂಭಾವ್ಯ ನಾಶನದಿಂದ ರಕ್ಷಿಸಲ್ಪಡುವರು.—8/15, ಪುಟಗಳು 18-20.
◻ ಒಬ್ಬ ವ್ಯಕ್ತಿಯು ಜ್ಞಾಪಕದ ಸಂಕೇತಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದರೆ ಅಥವಾ ಹಾಗೆ ಮಾಡುವುದನ್ನು ನಿಲ್ಲಿಸುವುದಾದರೆ, ನಮ್ಮ ಪ್ರತಿಕ್ರಿಯೆ ಏನಾಗಿರಬೇಕು?
ಬೇರೆ ಕ್ರೈಸ್ತರು ಚಿಂತಿತರಾಗಿರುವ ಅಗತ್ಯವಿಲ್ಲ. ಯೇಸು ಹೇಳಿದ್ದು: “ನಾನೇ ಒಳ್ಳೇ ಕುರುಬನು . . . ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ.” ಅಷ್ಟೇ ಖಂಡಿತವಾಗಿ, ನಿಜವಾಗಿ ತಾನು ಯಾರನ್ನು ಆತ್ಮಿಕ ಪುತ್ರರನ್ನಾಗಿ ಆರಿಸಿಕೊಂಡಿದ್ದೇನೆಂಬುದು ಯೆಹೋವನಿಗೆ ತಿಳಿದಿದೆ. (ಯೋಹಾನ 10:14; ರೋಮಾಪುರ 8:16, 17)—8/15, ಪುಟ 31.
◻ ಮೋಶೆಯ ಧರ್ಮಶಾಸ್ತ್ರದ ಮುಖ್ಯ ಉದ್ದೇಶವೇನಾಗಿತ್ತು?
ಅದು ಪ್ರಧಾನವಾಗಿ ಇಸ್ರಾಯೇಲ್ಯರನ್ನು ಅವರ ಪಾಪಪೂರ್ಣ ಸ್ಥಿತಿಯಿಂದ ವಿಮೋಚಿಸಲಿದ್ದ ಮೆಸ್ಸೀಯನಿಗಾಗಿ ಅವರಿಗಿರುವ ಅಗತ್ಯವನ್ನು ಕಲಿಸಿತು. (ಗಲಾತ್ಯ 3:24) ಧರ್ಮಶಾಸ್ತ್ರವು ದೈವಿಕ ಭಯ ಮತ್ತು ವಿಧೇಯತೆಯನ್ನೂ ಕಲಿಸಿತು, ಮತ್ತು ಇದು ಇಸ್ರಾಯೇಲಿಗೆ ಸುತ್ತುಮುತ್ತಲಿನ ಜನಾಂಗಗಳ ಭ್ರಷ್ಟ ಆಚಾರಗಳಿಂದ ಪ್ರತ್ಯೇಕವಾಗಿರಿಸಿಕೊಳ್ಳಲು ಸಹಾಯ ಮಾಡಿತು. (ಯಾಜಕಕಾಂಡ 18:24, 25)—9/1, ಪುಟ 9.
◻ ಹೊಸ ಒಡಂಬಡಿಕೆಯ ಉದ್ದೇಶವೇನು? (ಯೆರೆಮೀಯ 31:31-34)
ಅದು, ಸರ್ವ ಮಾನವಕುಲವನ್ನು ಆಶೀರ್ವದಿಸಲಿಕ್ಕಾಗಿ ರಾಜರನ್ನೂ ಯಾಜಕರನ್ನೂ ಒಳಗೊಂಡ ಒಂದು ಜನಾಂಗವನ್ನು ಉತ್ಪಾದಿಸುವುದೇ ಆಗಿದೆ. (ವಿಮೋಚನಕಾಂಡ 19:6; 1 ಪೇತ್ರ 2:9; ಪ್ರಕಟನೆ 5:10)—9/1, ಪುಟಗಳು 14, 15.
◻ ನಾವು ತಪ್ಪೊಪ್ಪಿಕೊಳ್ಳುವ ಕಲೆಯನ್ನು ಏಕೆ ಅಭ್ಯಾಸಿಸಬೇಕು?
ಒಂದು ತಪ್ಪೊಪ್ಪಿಕೆಯು, ಅಪರಿಪೂರ್ಣತೆಯಿಂದ ಉಂಟುಮಾಡಲ್ಪಟ್ಟ ನೋವನ್ನು ಶಮನಗೊಳಿಸಲು ಸಹಾಯಮಾಡಬಲ್ಲದು ಮತ್ತು ಅದು ವಿಷಮ ಸಂಬಂಧಗಳನ್ನು ವಾಸಿಮಾಡಬಲ್ಲದು. ನಾವು ಮಾಡುವ ಪ್ರತಿಯೊಂದು ತಪ್ಪೊಪ್ಪಿಕೊಳ್ಳುವಿಕೆಯು ದೈನ್ಯಭಾವದಲ್ಲಿನ ಒಂದು ಪಾಠವಾಗಿದೆ, ಹಾಗೂ ಇದು ನಮ್ಮನ್ನು ಇತರರ ಅನಿಸಿಕೆಗಳಿಗೆ ಹೆಚ್ಚು ಸಂವೇದನಾಶೀಲರಾಗುವಂತೆ ತರಬೇತುಗೊಳಿಸುತ್ತದೆ.—9/15, ಪುಟ 24.
◻ ನೋಹನ ದಿನದ ಭೌಗೋಲಿಕ ಜಲಪ್ರಳಯವು ಒಂದು ಐತಿಹಾಸಿಕ ವಾಸ್ತವಾಂಶವಾಗಿದೆಯೊ?
ಹೌದು. ಒಂದು ಭೌಗೋಲಿಕ ಜಲಪ್ರಳಯವನ್ನು ತಿಳಿಯಪಡಿಸುವ ಪುರಾತನ ವೃತ್ತಾಂತಗಳು ಲೋಕದ ಸುತ್ತಲೆಲ್ಲಾ—ಅಮೆರಿಕದಿಂದ ಹಿಡಿದು ಆಸ್ಟ್ರೇಲಿಯದ ವರೆಗೆ—ಕಂಡುಕೊಳ್ಳಲ್ಪಡಸಾಧ್ಯವಿದೆ. ವ್ಯಾಪಕವಾಗಿ ಹರಡಿರುವ ಈ ಮುಖ್ಯವಿಷಯದ ಇರುವು, ಬೈಬಲಿನಲ್ಲಿ ವರದಿಸಲಾದಂತೆ ಒಂದು ಜಗದ್ವ್ಯಾಪಕ ಮಹಾ ಪ್ರಳಯವು ಖಂಡಿತವಾಗಿಯೂ ಸಂಭವಿಸಿತೆಂಬ ನಿಜತ್ವಕ್ಕೆ ಸಮರ್ಥನೆಯನ್ನು ಕೂಡಿಸುತ್ತದೆ. (ಆದಿಕಾಂಡ 7:11-20)—9/15, ಪುಟ 25.
◻ ಆತಿಥ್ಯವನ್ನು ತೋರಿಸುವುದರಲ್ಲಿ ಏನು ಒಳಗೂಡಿದೆ? (ರೋಮಾಪುರ 12:13)
ಆತಿಥ್ಯವು, “ಪ್ರೀತಿ” ಮತ್ತು “ಅಪರಿಚಿತ” ಎಂದು ಅರ್ಥೈಸುವ ಎರಡು ಮೂಲಪದಗಳಿರುವ ಒಂದು ಗ್ರೀಕ್ ಪದದಿಂದ ಭಾಷಾಂತರಿಸಲಾಗಿದೆ. ಹೀಗೆ, ಆತಿಥ್ಯವು ಮುಖ್ಯವಾಗಿ, “ಅಪರಿಚಿತರ ಪ್ರೀತಿ” ಎಂಬುದನ್ನು ಅರ್ಥೈಸುತ್ತದೆ. ಆದರೆ ಅದು ಕರ್ತವ್ಯ ಪ್ರಜ್ಞೆಯ ಕಾರಣ ಮೂಲತತ್ವಾಧಾರಿತ ಪ್ರೀತಿಗಿಂತ ಹೆಚ್ಚನ್ನು ಒಳಗೂಡಿಸುತ್ತದೆ. ಅದು ನೈಜ ಅಕ್ಕರೆ, ವಾತ್ಸಲ್ಯ ಮತ್ತು ಮಿತ್ರತ್ವದ ಮೇಲೆ ಆಧಾರಿತವಾಗಿದೆ.—10/1, ಪುಟ 9.
◻ ಕೊರಿಂಥದವರಿಗೆ ಬರೆದ ತನ್ನ ಪ್ರಥಮ ಪತ್ರದ ಅಧ್ಯಾಯ 7ರಲ್ಲಿ, ವಿವಾಹ ಮತ್ತು ಅವಿವಾಹಿತತನದ ವಿಷಯದಲ್ಲಿ ಪೌಲನ ವಾಗ್ವಾದವೇನಾಗಿದೆ?
ವಿವಾಹವು ನ್ಯಾಯಸಮ್ಮತವಾಗಿದೆ ಮತ್ತು, ನಿರ್ದಿಷ್ಟ ಪರಿಸ್ಥಿತಿಗಳ ಕೆಳಗೆ, ಕೆಲವರಿಗಾಗಿ ಸೂಕ್ತವಾದದ್ದಾಗಿದೆ. ಆದರೂ, ಅತ್ಯಲ್ಪ ಅಪಕರ್ಷಣೆಯಿಂದ ಯೆಹೋವನ ಸೇವೆಮಾಡಲು ಬಯಸುವ ಕ್ರೈಸ್ತ ಪುರುಷ ಅಥವಾ ಸ್ತ್ರೀಗಾಗಿ ಅವಿವಾಹಿತತನವು ನಿರ್ವಿವಾದವಾಗಿ ಪ್ರಯೋಜನಕರವಾದದ್ದಾಗಿದೆ.—10/15, ಪುಟ 13.
◻ ಒಬ್ಬ ಹಿರಿಯನು ‘ತನ್ನ ಸ್ವಂತದವರಿಗೆ . . . ಒದಗಿಸುವುದು’ ಹೇಗೆ? (1 ತಿಮೊಥೆಯ 5:8)
ಒಬ್ಬ ಹಿರಿಯನು ‘ತನ್ನ ಸ್ವಂತದವರಿಗೆ’—ತನ್ನ ಹೆಂಡತಿ ಹಾಗೂ ಮಕ್ಕಳಿಗೆ—ಪ್ರಾಪಂಚಿಕವಾಗಿ, ಆತ್ಮಿಕವಾಗಿ ಮತ್ತು ಭಾವಾತ್ಮಕವಾಗಿ “ಒದಗಿಸ”ಬೇಕು.—10/15, ಪುಟ 22.
◻ ಯೆಹೋವನು ತನ್ನ ಸೇವಕರಿಗೆ ಸಾಂತ್ವನವನ್ನು ಹೇಗೆ ಒದಗಿಸುತ್ತಾನೆ?
ದೇವರ ಪವಿತ್ರಾತ್ಮವು “ಸಾಂತ್ವನ ಕೊಡುವವ”ನೋಪಾದಿ ಕ್ರಿಯೆಗೈಯುತ್ತದೆ. (ಯೋಹಾನ 14:16, NW ಪಾದಟಿಪ್ಪಣಿ) ದೇವರು ಸಾಂತ್ವನವನ್ನು ಒದಗಿಸುವ ಇನ್ನೊಂದು ವಿಧವು, ಬೈಬಲಿನ ಮುಖಾಂತರವೇ. (ರೋಮಾಪುರ 15:4) ದೇವರಿಗೆ ನಮ್ಮ ವ್ಯಕ್ತಿಗತ ಆವಶ್ಯಕತೆಗಳು ಗೊತ್ತಿವೆ, ಮತ್ತು ಪೌಲನು ಕೊರಿಂಥದವರ ಕುರಿತಾದ ತೀತನ ವರದಿಯಿಂದ ಸಾಂತ್ವನವನ್ನು ಪಡೆದಂತೆ, ನಾವೂ ಒಬ್ಬರಿಗೊಬ್ಬರು ಸಾಂತ್ವನ ತರುವವರಾಗುವಂತೆ ಆತನು ನಮ್ಮನ್ನು ಉಪಯೋಗಿಸಬಲ್ಲನು. (2 ಕೊರಿಂಥ 7:11-13)—11/1, ಪುಟಗಳು 10, 12.
◻ 2 ಕೊರಿಂಥ 1:3ರಲ್ಲಿ ಕಂಡುಬರುವ, “ಕೋಮಲವಾದ ಕರುಣೆಗಳ ಪಿತ”ನೆಂಬುದಾಗಿ ಯೆಹೋವನ ಕುರಿತಾದ ಪೌಲನ ವರ್ಣನೆಯಿಂದ ಏನು ಸೂಚಿಸಲ್ಪಟ್ಟಿದೆ?
“ಕೋಮಲವಾದ ಕರುಣೆಗಳು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ನಾಮಪದವು, ಇನ್ನೊಬ್ಬನ ಬಾಧೆಗಳಿಗಾಗಿ ಶೋಕವನ್ನು ವ್ಯಕ್ತಪಡಿಸಲು ಉಪಯೋಗಿಸಲ್ಪಡುವ ಒಂದು ಪದದಿಂದ ಬರುತ್ತದೆ. ಹೀಗೆ, ಸಂಕಟವನ್ನು ಅನುಭವಿಸುತ್ತಿರುವ ತನ್ನ ನಂಬಿಗಸ್ತ ಸೇವಕರೆಲ್ಲರ ಕಡೆಗೆ ದೇವರ ಕೋಮಲವಾದ ಅನಿಸಿಕೆಗಳನ್ನು ಪೌಲನು ವರ್ಣಿಸುತ್ತಾನೆ.—11/1, ಪುಟ 13.
◻ ವಾರ್ಷಿಕ ದೋಷಪರಿಹಾರಕ ದಿನದಂದು, ಇಸ್ರಾಯೇಲ್ಯರ ಉಪವಾಸಮಾಡುವಿಕೆಯಿಂದ ಏನು ಸಾಧಿಸಲ್ಪಟ್ಟಿತು? (ಯಾಜಕಕಾಂಡ 16:29-31; 23:27)
ಉಪವಾಸಮಾಡುವಿಕೆಯ ಆಚರಣೆಯು, ತಮ್ಮ ಪಾಪಪೂರ್ಣತೆ ಹಾಗೂ ವಿಮೋಚನೆಗಾಗಿರುವ ಅಗತ್ಯದ ಹೆಚ್ಚಿನ ಅರಿವಿಗೆ ಇಸ್ರಾಯೇಲಿನ ಜನರನ್ನು ಪ್ರೇರಿಸಿತು. ಅದರ ಮೂಲಕ ಅವರು ತಮ್ಮ ಪಾಪಗಳಿಗಾಗಿ ದುಃಖವನ್ನು ಮತ್ತು ದೇವರ ಎದುರಿನಲ್ಲಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದರು.—11/15, ಪುಟ 5.
◻ “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂದು ಯುವ ಜನರಿಗೆ ಕೊಡಲ್ಪಟ್ಟಿರುವ ಆಜ್ಞೆಯಿಂದ ಏನು ಸೂಚಿಸಲ್ಪಟ್ಟಿದೆ? (ಪ್ರಸಂಗಿ 12:1)
“ಸ್ಮರಿಸು” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದವು ಅನೇಕ ವೇಳೆ, “ಮನಸ್ಸಿನ ಮಮತೆಯನ್ನು ಮತ್ತು ಸ್ಮರಣೆಯನ್ನು ಜೊತೆಗೂಡುವ ಕ್ರಿಯೆಯನ್ನು” ಸೂಚಿಸುತ್ತದೆಂದು ಒಂದು ಪ್ರಮಾಣಗ್ರಂಥವು ಹೇಳುತ್ತದೆ. ಆದುದರಿಂದ ಈ ಆಜ್ಞೆಗೆ ಲಕ್ಷ್ಯಕೊಡುವುದು, ಯೆಹೋವನ ಕುರಿತು ಕೇವಲ ಯೋಚಿಸುವುದಕ್ಕಿಂತ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಅದು ಕ್ರಿಯೆಯನ್ನು, ಆತನಿಗೆ ಮೆಚ್ಚಿಕೆಯಾಗುವಂತಹದ್ದನ್ನು ಮಾಡುವುದನ್ನು ಒಳಗೊಳ್ಳುತ್ತದೆ.—12/1, ಪುಟ 16.