ಗಿಲ್ಯಡ್ ಶಾಲೆ—ತನ್ನ 100ನೆಯ ತರಗತಿಯನ್ನು ಕಳುಹಿಸುತ್ತದೆ
ಆಧುನಿಕ ದಿನಗಳಲ್ಲಿ, ದೇವರ ರಾಜ್ಯದ ಭೌಗೋಲಿಕ ಘೋಷಣೆಯಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. 1943ರಲ್ಲಿ ಗಿಲ್ಯಡ್ ಶಾಲೆ ಮಿಷನೆರಿಗಳನ್ನು ತರಬೇತುಗೊಳಿಸಲಾರಂಭಿಸಿದಂದಿನಿಂದ, ಅದರ ಪದವೀಧರರು 200ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆಮಾಡಿದ್ದಾರೆ. ಮಾರ್ಚ್ 2, 1996ರಲ್ಲಿ 100ನೆಯ ತರಗತಿಯು ಪದವಿ ಪಡೆಯಿತು.
ನ್ಯೂ ಯಾರ್ಕ್ನ ಪ್ಯಾಟರ್ಸನ್ನಲ್ಲಿ, ವಾಚ್ಟವರ್ ಎಡ್ಯುಕೇಶನಲ್ ಸೆಂಟರ್ನ ಪ್ರದೇಶದಲ್ಲಿ ಎರಡು ಮೀಟರುಗಳಿಗಿಂತಲೂ ಹೆಚ್ಚು ಹಿಮವು ಬಿದ್ದಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಅವರ ಪದವಿ ವಿತರಣೆಯ ದಿನವೂ ಹಿಮ ಬೀಳುತ್ತಿದ್ದದ್ದು ಆಶ್ಚರ್ಯವಲ್ಲ. ಆದರೂ, ಸಭಾಂಗಣವು ತುಂಬಿತ್ತು ಮತ್ತು ಸಭಾಂಗಣದ ಹೊರಗಣ ಪ್ರೇಕ್ಷಕ ವರ್ಗಗಳು—ಒಟ್ಟು 2,878 ಮಂದಿ—ಪ್ಯಾಟರ್ಸನ್, ವಾಲ್ಕಿಲ್ ಮತ್ತು ಬ್ರೂಕ್ಲಿನ್ನಿಂದ ಕೇಳಿಸಿಕೊಂಡವು.
ಆಡಳಿತ ಮಂಡಲಿಯ ಟೀಚಿಂಗ್ ಕಮಿಟಿಯ ಸದಸ್ಯ, ಥಿಯಡೋರ್ ಜರಸ್, ಅಧ್ಯಕ್ಷರಾಗಿ ವರ್ತಿಸಿದರು. ಅನೇಕ ದೇಶಗಳಿಂದ ಬಂದಿದ್ದ ಅತಿಥಿಗಳಿಗೆ ಹೃದಯೋಲ್ಲಾಸದ ಸ್ವಾಗತವನ್ನು ಕೋರಿದ ಬಳಿಕ, ಎಲ್ಲರೂ ಎದ್ದುನಿಂತು 52ನೆಯ ಗೀತವನ್ನು ಹಾಡುವಂತೆ ಅವರು ಆಮಂತ್ರಣಕೊಟ್ಟರು. ಅವರು “ನಮ್ಮ ತಂದೆಯ ಹೆಸರು” ಎಂಬ ಗೀತವನ್ನು ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ ಪುಸ್ತಕದಿಂದ ಹಾಡಿದಾಗ ಸಭಾಂಗಣವು ಯೆಹೋವನಿಗೆ ಸ್ತುತಿಯಿಂದ ಪ್ರತಿಧ್ವನಿತವಾಯಿತು. ಆ ಗೀತ ಮತ್ತು ಅದರೊಂದಿಗೆ ಯೆಹೋವನನ್ನು ಸ್ತುತಿಸಲು ವಿದ್ಯೆಯನ್ನು ಬಳಸುವ ಕುರಿತ ಅಧ್ಯಕ್ಷರ ಹೇಳಿಕೆಗಳು, ಅನುಸರಿಸಿ ಬರಲಿದ್ದ ಕಾರ್ಯಕ್ರಮಕ್ಕೆ ತಕ್ಕ ಸನ್ನಿವೇಶವನ್ನೊದಗಿಸಿದವು.
ಹಿರಿಯ ಪುರುಷರಿಂದ ಶಾಸ್ತ್ರೀಯ ಸಲಹೆ
ಕಾರ್ಯಕ್ರಮದ ಪ್ರಥಮ ಭಾಗವು ಯೆಹೋವನ ಅನೇಕ ದೀರ್ಘಕಾಲದ ಸೇವಕರಿಂದ ಪದವಿ ಪಡೆಯುತ್ತಿದ್ದ ತರಗತಿಗೆ ಕೊಡಲ್ಪಟ್ಟ ಚಿಕ್ಕ ಭಾಷಣಗಳಿಂದ ಕೂಡಿತ್ತು. ತನ್ನ ಪೂರ್ಣ ಸಮಯದ ಸೇವೆಯನ್ನು 1940ರಲ್ಲಿ ಆರಂಭಿಸಿದ್ದ, ಪ್ರಧಾನ ಕಾರ್ಯಾಲಯದ ಸಿಬ್ಬಂದಿಯ ಸದಸ್ಯ, ರಿಚರ್ಡ್ ಏಬ್ರಹ್ಯಾಮ್ಸನ್, “ಪುನರಳವಡಿಸಿಕೊಳ್ಳಲ್ಪಡುತ್ತ ಮುಂದುವರಿಯಿರಿ” ಎಂದು ತರಗತಿಯನ್ನು ಪ್ರೋತ್ಸಾಹಿಸಿದರು. ಕ್ರೈಸ್ತರೋಪಾದಿ ಅವರ ಜೀವನಗಳಲ್ಲಿ ಅವರು ಆಗಲೇ ಪುನರಳವಡಿಸುವಿಕೆಯ ಅನೇಕ ಅವಧಿಗಳನ್ನು—ಗಿಲ್ಯಡ್ನ ಐದು ತಿಂಗಳುಗಳ ಶಾಲಾಶಿಕ್ಷಣವನ್ನು ಸೇರಿಸಿ—ಅನುಭವಿಸಿದ್ದಾರೆಂದು ಅವರು ಜ್ಞಾಪಕ ಹುಟ್ಟಿಸಿದರು. ಹಾಗಾದರೆ ಅವರು ಏಕೆ ಪುನರಳವಡಿಸಿಕೊಳ್ಳಲ್ಪಡುತ್ತ ಮುಂದುವರಿಯಬೇಕು?
2 ಕೊರಿಂಥ 13:11ರಲ್ಲಿ ಅಪೊಸ್ತಲ ಪೌಲನು ಬಳಸಿದ ಅಭಿವ್ಯಕ್ತಿಯು, “ಯೆಹೋವನ ಹೆಚ್ಚು ನಿಷ್ಕೃಷ್ಟವಾದ ಮಟ್ಟವನ್ನು ತಲಪುವರೆ ಒಂದು ಪ್ರಗತಿಪರ ಕಾರ್ಯವಿಧಾನವನ್ನು, ಒಬ್ಬನನ್ನು ಯೆಹೋವನು ರಚಿಸುವಂತೆ ಅಥವಾ ಶುದ್ಧೀಕರಿಸುವಂತೆ ಮುಂದುವರಿಯುವ ಅಧೀನತೆಯನ್ನು, ಒಂದು ಸೂಕ್ಷ್ಮ ಅಳವಡಿಸುವಿಕೆಯನ್ನು ಸೂಚಿಸುತ್ತದೆ,” ಎಂದು ಭಾಷಣಕಾರರು ವಿವರಿಸಿದರು. ಪದವಿ ಪಡೆಯುವ ತರಗತಿಯು ತನ್ನ ವಿದೇಶೀಯ ನೇಮಕಗಳಲ್ಲಿ ಅದರ ನಂಬಿಕೆಯ ಮುಂದೆ ಬರುವ ಹೊಸ ಪಂಥಾಹ್ವಾನಗಳನ್ನು ಎದುರಿಸುವುದು. ಒಂದು ಹೊಸ ಭಾಷೆಯನ್ನು ಕಲಿಯುವ, ಒಂದು ವಿಭಿನ್ನ ಸಂಸ್ಕೃತಿಗೆ ಮತ್ತು ಜೀವನ ಪರಿಸ್ಥಿತಿಗಳಿಗೆ ಅಳವಡಿಸಿಕೊಳ್ಳುವ ಮತ್ತು ಸಮನಲ್ಲದ ರೀತಿಯ ಟೆರಿಟೊರಿಗಳಿಗೆ ಹೊಂದಿಕೊಳ್ಳುವ ಅಗತ್ಯವು ಅವರಿಗಿರುವುದು. ಅವರು ತಮ್ಮ ಮಿಷನೆರಿ ಗೃಹಗಳಲ್ಲಿ ಮತ್ತು ತಮ್ಮ ಹೊಸ ಸಭೆಗಳಲ್ಲಿ ವಿಭಿನ್ನ ವ್ಯಕ್ತಿತ್ವಗಳೊಂದಿಗೂ ವ್ಯವಹರಿಸಲಿರುವರು. ಈ ಎಲ್ಲ ಸ್ಥಿತಿಗತಿಗಳಿಗೆ ಅವರು, ಪುನರಳವಡಿಸಿಕೊಳ್ಳುವ ಇಷ್ಟದಿಂದ, ಜಾಗರೂಕತೆಯಿಂದ ಬೈಬಲ್ ಮೂಲಸೂತ್ರಗಳನ್ನು ಅನ್ವಯಿಸುವುದಾದರೆ, ಅವರು ಅಪೊಸ್ತಲ ಪೌಲನು ಬರೆದಂತೆ, “ಸಂತೋಷಪಡ”ಲೂ ಸಾಧ್ಯವಾಗುವುದು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಡಳಿತ ಮಂಡಲಿಯ ಐವರು ಸದಸ್ಯರಲ್ಲಿ ಒಬ್ಬರಾದ ಜಾನ್ ಬಾರ್, ತಮ್ಮ ಮುಖ್ಯ ವಿಷಯವನ್ನು 1 ಕೊರಿಂಥ 4:9ರಿಂದ ತೆಗೆದರು. ಕ್ರೈಸ್ತರು ದೇವದೂತರಿಗೂ ಮನುಷ್ಯರಿಗೂ ನೋಟವಾಗಿದ್ದಾರೆಂದು ಅವರು ತಮ್ಮ ಕೇಳುಗರಿಗೆ ಜ್ಞಾಪಕ ಹುಟ್ಟಿಸಿದರು. “ಇದರ ಜ್ಞಾನವು, ಜೀವನದಲ್ಲಿ ಒಬ್ಬ ಕ್ರೈಸ್ತನ ಪಥದ, ವಿಶೇಷವಾಗಿ, ತಾನು ಹೇಳುವುದರ ಮತ್ತು ಮಾಡುವುದರ ಮೂಲಕ, ಅದೃಶ್ಯವಾಗಿಯೂ ದೃಶ್ಯವಾಗಿಯೂ ಗಮನಿಸುತ್ತಿರುವವರ ಮೇಲೆ ಒತ್ತಲ್ಪಡುವ ಪರಿಣಾಮವನ್ನು ಮಾಡಸಾಧ್ಯವಿದೆಯೆಂದು ಅವನು ಗ್ರಹಿಸುವಾಗ ಪ್ರಮುಖತೆಗೆ ಮಹತ್ತಾಗಿ ಕೂಡಿಸುತ್ತದೆ,” ಎಂದರು ಅವರು. “100ನೆಯ ಗಿಲ್ಯಡ್ ತರಗತಿಯ ಪ್ರಿಯ ಸೋದರ ಸೋದರಿಯರಾದ ನೀವೆಲ್ಲರೂ ಭೂಮಿಯ ದೂರ ಹರಡಿರುವ ಮೂಲೆಗಳಿಗೆ ಹೋಗುವಾಗ ಇದೊಂದು ವಿಷಯವನ್ನು ಜ್ಞಾಪಿಸಿಕೊಳ್ಳುವುದು ಅತಿ ಒಳ್ಳೆಯದೆಂದು ನನ್ನ ಅಭಿಪ್ರಾಯ.”
48 ಮಂದಿ ವಿದ್ಯಾರ್ಥಿಗಳು, ಕುರಿಸದೃಶರು ಸತ್ಯವನ್ನು ಕಲಿಯುವಂತೆ ಅವರು ಸಹಾಯಿಸುವಾಗ, “ಒಬ್ಬ ಪಾಪಿಯು ದೇವರ ಕಡೆಗೆ ತಿರಿಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದು” ಎಂಬುದನ್ನು ಮನಸ್ಸಿನಲ್ಲಿಡುವಂತೆ ಸಹೋದರ ಬಾರ್ ಪ್ರೋತ್ಸಾಹಿಸಿದರು. (ಲೂಕ 15:10) 1 ಕೊರಿಂಥ 11:10ನ್ನು ಸೂಚಿಸುತ್ತ, ದೇವಪ್ರಭುತ್ವ ಏರ್ಪಾಡುಗಳ ಕುರಿತ ಒಬ್ಬನ ಮನೋಭಾವವು ನಾವು ನೋಡುವ ಸೋದರ ಸೋದರಿಯರ ಮೇಲೆ ಮಾತ್ರವಲ್ಲ ನಾವು ನೋಡದಿರುವ ದೇವದೂತರ ಮೇಲೆಯೂ ಪರಿಣಾಮ ಬೀರುತ್ತದೆಂದು ಅವರು ತೋರಿಸಿದರು. ಈ ಹೆಚ್ಚು ವಿಸ್ತಾರವಾದ ದೃಷ್ಟಿಕೋನವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಎಷ್ಟೊಂದು ಪ್ರಯೋಜನಕರ!
ಆಡಳಿತ ಮಂಡಲಿಯ ಇನ್ನೊಬ್ಬ ಸದಸ್ಯ, ಸ್ವತಃ ಗಿಲ್ಯಡ್ ಶಾಲೆಯ ಪದವೀಧರರೂ ಆದ ಗೆರಟ್ ಲೋಶ್, ಯೆಹೋವನು ‘ತನ್ನ ಜನರ ಸುತ್ತಲೂ ಇರುತ್ತಾನೆ,’ ಎಂಬುದನ್ನು ತೋರಿಸಲು ಕೀರ್ತನೆ 125:1, 2; ಜೆಕರ್ಯ 2:4, 5; ಮತ್ತು ಕೀರ್ತನೆ 71:21ರಂತಹ ವಚನಗಳನ್ನು ಚರ್ಚಿಸಿದರು. ಆತನು ಪ್ರತಿಯೊಂದು ಪಕ್ಕದಲ್ಲಿಯೂ ಅವರಿಗೆ ಸಂರಕ್ಷಣೆಯನ್ನು ಒದಗಿಸುತ್ತಾನೆ. ಅಂತಹ ಸಂರಕ್ಷಣೆಯನ್ನು ದೇವರು ಮಹಾ ಸಂಕಟದ ಸಮಯದಲ್ಲಿ ಮಾತ್ರ ಒದಗಿಸುವನೊ? “ಇಲ್ಲ” ಎಂದರು ಭಾಷಣಕಾರರು, “ಏಕೆಂದರೆ ಯೆಹೋವನು ಈಗಲೇ ತನ್ನ ಜನರಿಗೆ ಒಂದು ‘ಅಗ್ನಿಗೋಡೆ,’ ಒಂದು ಸಂರಕ್ಷಣೆಯಾಗಿದ್ದಾನೆ. ಯುದ್ಧಾನಂತರದ ವರ್ಷವಾದ 1919, ಆತ್ಮಿಕ ಇಸ್ರಾಯೇಲಿನ ಉಳಿಕೆಯವರು ಲೋಕವ್ಯಾಪಕವಾಗಿ ರಾಜ್ಯದ ಸುವಾರ್ತೆಯನ್ನು ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲು ಆತುರದಿಂದ ಬಯಸುವುದನ್ನು ಕಂಡುಕೊಂಡಿತು. ಅವರು ಸ್ವರ್ಗದಲ್ಲಿನ ಸಾಂಕೇತಿಕ ಯೆರೂಸಲೇಮಿನ ಪ್ರತಿನಿಧಿಗಳಾಗಿದ್ದರು. ಅಂತ್ಯಕಾಲದಲ್ಲಿ ಈ ಪ್ರತಿನಿಧಿಗಳಿಗೆ ಒಂದು ಗುಂಪಾಗಿ ದೈವಿಕ ಸಂರಕ್ಷಣೆಯ ಖಾತರಿಯನ್ನು ಯೆಹೋವನು ಕೊಡುತ್ತಾನೆ. ಹಾಗಿರುವಾಗ, ಅವರನ್ನು ಪರಿಣಾಮಕಾರಿಯಾಗಿ ಯಾರು ತಾನೇ ನಿಲ್ಲಿಸಬಲ್ಲನು? ಯಾವನೂ ಇಲ್ಲ.” ಅವರಿಗೂ, ದೈವಿಕ ಚಿತ್ತವನ್ನು ಮಾಡುವುದರಲ್ಲಿ ಅವರೊಡನೆ ಒತ್ತಾಗಿ ಕೂಡುವವರೆಲ್ಲರಿಗೂ ಇದೆಷ್ಟು ಪುನರಾಶ್ವಾಸನದಾಯಕ!
ಶಾಲಾ ಅಧ್ಯಾಪಕವರ್ಗದ ಹಿರಿಯ ಸದಸ್ಯ, ಯುಲೀಸಸ್ ಗ್ಲಾಸ್, ‘ಯೆಹೋವನ ಲೋಕವ್ಯಾಪಕ ಸಂಸ್ಥೆಯಲ್ಲಿ ತನ್ನ ಗೋಡೆಯ ಗೂಡಿನಂತಹ ಯೋಗ್ಯಸ್ಥಾನವನ್ನು ರೂಪಿಸುವುದನ್ನು ಮುಗಿಸುವಂತೆ’ ತರಗತಿಯನ್ನು ಪ್ರೋತ್ಸಾಹಿಸಿದರು. ಒಂದು ಗೂಡೆಂದರೆ ಒಬ್ಬ ವ್ಯಕ್ತಿಯ ಸಾಮರ್ಥ್ಯಗಳು ಅಥವಾ ಲಕ್ಷಣಕ್ಕೆ ವಿಶೇಷವಾಗಿ ತಕ್ಕದ್ದಾಗಿರುವ ಒಂದು ಸ್ಥಾನ ಅಥವಾ ಚಟುವಟಿಕೆ. “ಭಾವೀ ಮಿಷನೆರಿಗಳಾದ ನೀವು ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಂಸ್ಥೆಯಲ್ಲಿ ನಿಮ್ಮ ಸ್ಥಾನವನ್ನು ಕಂಡುಕೊಂಡಿದ್ದೀರಿ,” ಎಂದು ಅವರು ಘೋಷಿಸಿದರು. “ಆದರೆ ಇದು ಈಗ ಅಮೂಲ್ಯವಾಗಿರುವುದಾದರೂ, ಇದು ಒಬ್ಬ ಮಿಷನೆರಿಯಾಗಿ ನಿಮ್ಮ ಜೀವಿತದ ಆರಂಭ ಮಾತ್ರ.” ಅವರು ತಮ್ಮ ಸಾಮರ್ಥ್ಯಗಳನ್ನು ಒಳ್ಳೆಯದಾಗಿ ಬಳಸಲು ಮತ್ತು ಯೆಹೋವನು ಮತ್ತು ಆತನ ಸಂಸ್ಥೆಯು ತಮಗೆ ಕೊಡುತ್ತಿರುವ ವಿಶೇಷ ನೇಮಕಗಳಿಗೆ ಅರ್ಹರಾಗಲು ಅವರು ತಮ್ಮನ್ನು ಅನ್ವಯಿಸಿಕೊಳ್ಳುವುದು ಅಗತ್ಯ.
ಕಾರ್ಯಕ್ರಮದ ಈ ಭಾಗದ ಕೊನೆಯ ಭಾಷಣವು, ಬೊಲಿವಿಯದಲ್ಲಿ 17 ವರ್ಷಕಾಲ ಸೇವೆ ಮಾಡಿರುವ ಗಿಲ್ಯಡ್ ಅಧ್ಯಾಪಕ ವರ್ಗದ ಸದಸ್ಯ, ವಾಲೆಸ್ ಲಿವರನ್ಸ್ ಅವರಿಂದ ಕೊಡಲ್ಪಟ್ಟಿತು. “ನೀವು ದೇವರನ್ನು ಪರೀಕ್ಷೆಮಾಡಿ ನೋಡುವಿರೊ?” ಎಂದು ಅವರು ವಿದ್ಯಾರ್ಥಿವರ್ಗವನ್ನು ಕೇಳಿದರು. ಅವರು ಅದನ್ನು ಹೇಗೆ ಮಾಡಬೇಕು? ಇಸ್ರಾಯೇಲ್ ಜನಾಂಗವು ದೇವರನ್ನು ತಪ್ಪಾದ ರೀತಿಯಲ್ಲಿ ಪರೀಕ್ಷೆಮಾಡಿ ನೋಡಿತು. (ಧರ್ಮೋಪದೇಶಕಾಂಡ 6:16) “ಗೊಣಗುವ, ಮರ್ಮರಿಸುವ ಅಥವಾ ಪ್ರಾಯಶಃ ವಿಷಯಗಳನ್ನು ಆತನು ನಿರ್ವಹಿಸುವ ವಿಧದಲ್ಲಿ ನಂಬಿಕೆಯ ಅಭಾವವನ್ನು ತೋರಿಸುವ ಮೂಲಕ ದೇವರನ್ನು ಪರೀಕ್ಷಿಸಿ ನೋಡುವುದು ತಪ್ಪೆಂಬುದು ಸುವ್ಯಕ್ತ,” ಎಂದರು ಭಾಷಣಕಾರರು. “ನೀವು ನಿಮ್ಮ ಹೊಸ ನೇಮಕದಲ್ಲಿ ಹೋಗಿಸೇರುವಾಗ, ಆ ಪ್ರವೃತ್ತಿಯನ್ನು ತಡೆಗಟ್ಟಿರಿ,” ಎಂದು ಅವರು ಪ್ರೋತ್ಸಾಹಿಸಿದರು. ಹಾಗಾದರೆ, ದೇವರನ್ನು ಪರೀಕ್ಷೆಮಾಡಿ ನೋಡುವ ಸರಿಯಾದ ವಿಧವು ಯಾವುದು? “ಆತನ ಮಾತು ನಿಜವೆಂದು ನಂಬಿ, ಆತನು ಏನು ಹೇಳುತ್ತಾನೊ ಅದರಂತೆ ನಿಷ್ಕೃಷ್ಟವಾಗಿ ಮಾಡಿ, ಬಳಿಕ ಪರಿಣಾಮವನ್ನು ಆತನ ಕೈಗಳಲ್ಲಿ ಬಿಡುವ ಮೂಲಕವೇ” ಎಂದು ಸಹೋದರ ಲಿವರನ್ಸ್ ವಿವರಿಸಿದರು. ಮಲಾಕಿಯ 3:10ರಲ್ಲಿ ನೋಡಲಾಗುವಂತೆ, ಯೆಹೋವನು ತನ್ನ ಜನರನ್ನು ಆಮಂತ್ರಿಸುವುದು: “ನನ್ನನ್ನು . . . ಪರೀಕ್ಷಿಸಿರಿ.” ಅವರು ನಂಬಿಗಸ್ತಿಕೆಯಿಂದ ತಮ್ಮ ದಶಮಾಂಶಗಳನ್ನು ಆಲಯದ ಭಂಡಾರದೊಳಗೆ ತರುವಲ್ಲಿ, ತಾನು ಅವರನ್ನು ಆಶೀರ್ವದಿಸುವೆನೆಂದು ಆತನು ವಚನ ಕೊಟ್ಟನು. “ನಿಮ್ಮ ಮಿಷನೆರಿ ನೇಮಕವನ್ನು ತದ್ರೀತಿಯಾಗಿ ಏಕೆ ನೋಡಬಾರದು?” ಎಂದು ಕೇಳಿದರು ಭಾಷಣಕಾರರು. “ಅದರಲ್ಲಿ ನೀವು ಜಯಪ್ರದರಾಗುವಂತೆ ಯೆಹೋವನು ಬಯಸುತ್ತಾನಾದ ಕಾರಣ, ಆತನನ್ನು ಪರೀಕ್ಷೆಮಾಡಿ ನೋಡಿರಿ. ನಿಮ್ಮ ನೇಮಕಕ್ಕೆ ಅಂಟಿಕೊಳ್ಳಿರಿ. ನೀವು ಮಾಡಬೇಕೆಂದು ಆತನು ಬಯಸುವ ಅಳವಡಿಸುವಿಕೆಗಳನ್ನು ಮಾಡಿರಿ. ತಾಳಿಕೊಳ್ಳಿರಿ. ಆತನು ನಿಮ್ಮನ್ನು ಆಶೀರ್ವದಿಸುವನೊ ಇಲ್ಲವೊ ನೋಡಿರಿ.” ಯೆಹೋವನನ್ನು ಸೇವಿಸುತ್ತಿರುವ ಸಕಲರಿಗೆ ಎಷ್ಟು ಉತ್ತಮ ಸಲಹೆ!
ಒಂದು ಗೀತಾನಂತರ ಕಾರ್ಯಕ್ರಮವು ಭಾಷಣಗಳಿಂದ ಆಹ್ಲಾದಕರವಾದ ಸಂದರ್ಶನಗಳ ಸರಣಿಗೆ ಬದಲಾವಣೆಹೊಂದಿತು.
ಕ್ಷೇತ್ರದಿಂದ ಪ್ರಾಯೋಗಿಕ ಅಭಿವ್ಯಕ್ತಿಗಳು
ಗಿಲ್ಯಡ್ ಅಧ್ಯಾಪಕವರ್ಗದ ಒಬ್ಬ ಹೊಸ ಸದಸ್ಯರಾದ ಮಾರ್ಕ್ ನೂಮರ್, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾಗ ಅವರಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಆಗಿದ್ದ ಅನುಭವಗಳನ್ನು ಹೇಳುವಂತೆ ಕರೆಕೊಟ್ಟರು. ಶುಶ್ರೂಷೆಯಲ್ಲಿ ಆರಂಭಿಕ ಹೆಜ್ಜೆಯನ್ನು ತೆಗೆದುಕೊಳ್ಳುವ ಬೆಲೆಯನ್ನು ಇವು ಎತ್ತಿತೋರಿಸಿ ಪ್ರೇಕ್ಷಕ ವರ್ಗವು ಉಪಯೋಗಿಸಸಾಧ್ಯವಿರುವಂತಹ ಪ್ರಾಯೋಗಿಕ ಅಭಿಪ್ರಾಯಗಳನ್ನು ಅವರಿಗೆ ಕೊಟ್ಟಿತು.
ತಮ್ಮ ಶಾಲಾವ್ಯಾಸಂಗಾವಧಿಯಲ್ಲಿ, ಈ ಗಿಲ್ಯಡ್ ತರಗತಿಯಲ್ಲಿದ್ದ ವಿದ್ಯಾರ್ಥಿಗಳು, ಯಾರು ಕೂಡ ಪ್ಯಾಟರ್ಸನ್ ಎಡ್ಯುಕೇಶನ್ ಸೆಂಟರ್ನಲ್ಲಿ ವಿಶೇಷ ತರಬೇತು ಪಡೆಯುತ್ತಿದ್ದರೊ, ಆ 42 ದೇಶಗಳ ಬ್ರಾಂಚ್ ಕಮಿಟಿ ಸದಸ್ಯರೊಂದಿಗೆ ಜೊತೆಗೂಡಶಕ್ತರಾದುದರಿಂದ ವಿಶೇಷವಾದ ಲಾಭವನ್ನು ಪಡೆದುಕೊಂಡರು. ಇವರಲ್ಲಿ ಅನೇಕರು ಅನೇಕ ವರ್ಷಗಳ ಮೊದಲು ಗಿಲ್ಯಡ್ನಿಂದ ಪದವಿ ಪಡೆದಿದ್ದರು. ಕಾರ್ಯಕ್ರಮದಲ್ಲಿ, 3, 5, 51 ಮತ್ತು 92ನೆಯ ತರಗತಿಗಳ ಹಾಗೂ ಜರ್ಮನಿಯ ಗಿಲ್ಯಡ್ ಎಕ್ಸ್ಟೆನ್ಷನ್ ಶಾಲೆಯ ಪ್ರತಿನಿಧಿಗಳೊಂದಿಗೆ ಸಂದರ್ಶನಗಳನ್ನು ನಡೆಸಲಾಯಿತು. ಅವರ ಹೇಳಿಕೆಗಳು ಎಷ್ಟೊಂದು ಪ್ರಯೋಜನಕರವಾಗಿದ್ದವು!
ತಮ್ಮ ನೇಮಕಗಳಲ್ಲಿ ಯೆಹೋವನ ಸ್ತುತಿಗಾರರ ಸಂಖ್ಯೆಯು ಕೇವಲ ಕೆಲವೇ ಮಂದಿಯಿಂದ ಹತ್ತಾರು ಸಾವಿರಕ್ಕೆ ಏರಿದ್ದನ್ನು ನೋಡಿದಾಗ ಮಿಷನೆರಿಗಳಿಗೆ ಹೇಗೆನಿಸಿತೆಂಬುದನ್ನು ಅವರು ಹೇಳಿದರು. ಆ್ಯಂಡೆಸ್ ಪರ್ವತಗಳಲ್ಲಿ ಮತ್ತು ಆ್ಯಮಸಾನ್ ನದೀಮೂಲದ ಹಳ್ಳಿಗಳಲ್ಲಿ ಚದರಿರುವ ಮನೆಗಳಿಗೆ ಸುವಾರ್ತೆಯನ್ನು ಒಯ್ಯುವುದರಲ್ಲಿ ತಮಗಿದ್ದ ಭಾಗದ ಕುರಿತು ಅವರು ಹೇಳಿದರು. ಅನಕ್ಷರಸ್ಥ ಜನರಿಗೆ ಸಾಕ್ಷಿನೀಡುವ ಕುರಿತು ಅವರು ಚರ್ಚಿಸಿದರು. ಹೊಸ ಭಾಷೆಗಳನ್ನು ಕಲಿಯುವುದರಲ್ಲಿ ತಮ್ಮ ಸ್ವಂತ ಹೋರಾಟ ಮತ್ತು ಪದವೀಧರರು ಎಷ್ಟು ಬೇಗನೆ ಚೈನೀಸ್ನಂತಹ ಭಾಷೆಯಲ್ಲಿ ಸಾಕ್ಷಿಕೊಡಶಕ್ತರಾಗುವರೆಂದು ಮತ್ತು ಎಷ್ಟು ಬೇಗನೆ ಭಾಷಣಕೊಡಶಕ್ತರಾಗುವರೆಂದು ವಾಸ್ತವವಾಗಿ ನಿರೀಕ್ಷಿಸಬಹುದು ಎಂಬುದರ ಕುರಿತು ಅವರು ಹೇಳಿದರು. ಅವರು ಸ್ಪ್ಯಾನಿಷ್ ಮತ್ತು ಚೈನೀಸ್ ಭಾಷೆಗಳಲ್ಲಿ ಮಾದರಿ ನಿರೂಪಣೆಗಳನ್ನು ಸಹ ಪ್ರತ್ಯಕ್ಷಾಭಿನಯಮಾಡಿದರು. ಮಿಷನೆರಿಗಳು ಜನರ ಭಾಷೆಯನ್ನು ಮಾತ್ರವಲ್ಲ ಅವರ ಯೋಚನೆಗಳನ್ನು ಸಹ ಕಲಿತಾಗ ಅತ್ಯಂತ ಪರಿಣಾಮಕಾರಿ ಆಗಿರುತ್ತಾರೆಂದು ಅವರು ಒತ್ತಿಹೇಳಿದರು. ಅನೇಕ ವೇಳೆ ಬಡದೇಶಗಳ ಒರಟಾದ ಜೀವನ ಸ್ಥಿತಿಗಳ ಕುರಿತು ಮಾತಾಡಿ ಅವರು ಹೇಳಿದ್ದು: “ಈ ಸನ್ನಿವೇಶಕ್ಕೆ ಅನೇಕ ವೇಳೆ ಶೋಷಣೆಯೊಂದಿಗೆ ಸಂಬಂಧವಿದೆಯೆಂಬುದನ್ನು ಮಿಷನೆರಿಗಳು ಅಂಗೀಕರಿಸಬೇಕು. ಯೇಸುವಿಗನಿಸಿದಂತೆ—ಕುರುಬನಿಲ್ಲದ ಕುರಿಗಳಂತಿದ್ದ ಜನರಿಗಾಗಿ ಅವನಲ್ಲಿ ಕನಿಕರವಿತ್ತು—ಮಿಷನೆರಿಗೂ ಅನಿಸುವಲ್ಲಿ ಅವನು ಅತ್ಯುತ್ತಮವಾದದ್ದನ್ನು ಮಾಡುತ್ತಾನೆ.”
ಒಂದು ಗೀತಾನಂತರ ಕಾರ್ಯಕ್ರಮವು ಆಡಳಿತ ಮಂಡಲಿಯ ಒಬ್ಬ ಸದಸ್ಯ ಏ. ಡಿ. ಷ್ರೋಡರ್ ಅವರ ಭಾಷಣದಿಂದ ಮುಂದುವರಿಯಿತು. 1943ರಲ್ಲಿ ಗಿಲ್ಯಡ್ ಶಾಲೆ ಪ್ರಾರಂಭಗೊಂಡಾಗ ಅದರ ಆದಿಶಿಕ್ಷಕರಲ್ಲಿ ಒಬ್ಬರಾಗಿದ್ದ ಸುಯೋಗ ಅವರಿಗಿತ್ತು. ಕಾರ್ಯಕ್ರಮಕ್ಕೆ ಉಚಿತವಾದ ಮುಕ್ತಾಯದೋಪಾದಿ ಅವರು, “ಯೆಹೋವನಿಗೆ ಪರಮಾಧಿಕಾರಿಯಾದ ಕರ್ತನೋಪಾದಿ ಜಯಕಾರವೆತ್ತುವುದು,” ಎಂಬ ವಿಷಯವನ್ನು ಚರ್ಚಿಸಿದರು. 24ನೆಯ ಕೀರ್ತನೆಯ ಕುರಿತ ಸಹೋದರ ಷ್ರೋಡರರ ಮಗ್ನಗೊಳಿಸುವ ಚರ್ಚೆಯು, ಪರಮಾಧಿಕಾರಿ ಕರ್ತನೋಪಾದಿ ಯೆಹೋವನಿಗೆ ಜಯಕಾರವೆತ್ತುವುದು ಎಷ್ಟು ಮಹತ್ತಾದ ಸುಯೋಗವೆಂದು ಉಪಸ್ಥಿತರೆಲ್ಲರು ಮನಗಾಣುವಂತೆ ಮಾಡಿತು.
ಪದವಿಪತ್ರಗಳ ವಿತರಣೆಯಾಗಿ ಕೊನೆಯ ಗೀತವಾದ ಮೇಲೆ, ಆಡಳಿತ ಮಂಡಲಿಯ ಕಾರ್ಲ್ ಕ್ಲೈನ್ ಹೃತ್ಪೂರ್ವಕವಾದ ಪ್ರಾರ್ಥನೆಯಿಂದ ಮುಕ್ತಾಯಗೊಳಿಸಿದರು. ಅದು ಎಷ್ಟು ಪ್ರಾಯೋಗಿಕ ಹಾಗೂ ಆತ್ಮಿಕವಾಗಿ ಚೈತನ್ಯದಾಯಕ ಕಾರ್ಯಕ್ರಮವಾಗಿತ್ತು!
ಪದವಿಪ್ರಾಪ್ತಿಯ ಬಳಿಕದ ದಿನಗಳಲ್ಲಿ, 100ನೆಯ ತರಗತಿಯ 48 ಮಂದಿ ಸದಸ್ಯರು 17 ದೇಶಗಳಲ್ಲಿ ತಮ್ಮ ಮಿಷನೆರಿ ನೇಮಕಗಳಿಗೆ ಹೊರಡಲಾರಂಭಿಸಿದರು. ಆದರೆ ಅವರು ಆಗ ತಾನೇ ತಮ್ಮ ಶುಶ್ರೂಷೆಯನ್ನು ಆರಂಭಿಸಿರಲಿಲ್ಲ. ಅವರಿಗೆ ಆಗಲೇ ಪೂರ್ಣ ಸಮಯದ ಕ್ರೈಸ್ತ ಶುಶ್ರೂಷೆಯ ಬುಡಭದ್ರವಾದ ದಾಖಲೆಯಿತ್ತು. ಅವರು ಗಿಲ್ಯಡ್ಗೆ ದಾಖಲಾದಾಗ, ಅವರ ಪ್ರಾಯದ ಸರಾಸರಿಯು 33 ವರ್ಷಗಳಾಗಿದ್ದು, ಅವರು 12ಕ್ಕೂ ಹೆಚ್ಚು ವರ್ಷಗಳನ್ನು ಪೂರ್ಣ ಸಮಯದ ಶುಶ್ರೂಷೆಗೆ ಅರ್ಪಿಸಿದ್ದರು. ಅವರಲ್ಲಿ ಕೆಲವರು ವಾಚ್ ಟವರ್ ಸೊಸೈಟಿಯ ಜಗದ್ವ್ಯಾಪಕ ಬೆತೆಲ್ ಕುಟುಂಬದ ಸದಸ್ಯರಾಗಿದ್ದರು. ಇತರರು ಸಂಚರಣ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು. ಅನೇಕ ವಿದ್ಯಾರ್ಥಿಗಳು ಯಾವುದಾದರೊಂದು ವಿಧದ ವಿದೇಶೀ ಸೇವೆಯಲ್ಲಿ—ಆಫ್ರಿಕ, ಯೂರೋಪ್, ದಕ್ಷಿಣ ಅಮೆರಿಕ, ಸಮುದ್ರದ ದ್ವೀಪಗಳಲ್ಲಿ ಮತ್ತು ತಮ್ಮ ಸ್ವದೇಶಗಳಲ್ಲಿ ವಿದೇಶೀ ಭಾಷಾಗುಂಪುಗಳ ಮಧ್ಯೆ—ಆಗಲೇ ಭಾಗವಹಿಸಿದ್ದರು. ಆದರೆ ಈಗ ಅವರು ಯಾರು, ‘ಜಗತ್ತಿನಲ್ಲಿ ನಮ್ಮ ಅಗತ್ಯವಿರುವ ಎಲ್ಲಿಯಾದರೂ ನಾವು ಸೇವೆ ಮಾಡುವೆವು,’ ಎಂದು ಹೇಳಶಕ್ತರಾಗಲು ಸಂತೋಷಪಟ್ಟಿದ್ದರೊ ಅಂತಹ ಅನೇಕ ಮಿಷನೆರಿಗಳನ್ನು ಜೊತೆಗೂಡುತ್ತಿದ್ದಾರೆ. ಅವರ ಹೃತ್ಪೂರ್ವಕ ಬಯಕೆಯು ಯೆಹೋವನನ್ನು ಕೊಂಡಾಡಲು ತಮ್ಮ ಜೀವನಗಳನ್ನು ಉಪಯೋಗಿಸುವುದೇ ಆಗಿದೆ.
[ಪುಟ 27 ರಲ್ಲಿರುವ ಚೌಕ]
ತರಗತಿಯ ಅಂಕಿಅಂಶಗಳು:
ಪ್ರತಿನಿಧಿಸಲ್ಪಟ್ಟಿರುವ ದೇಶಗಳ ಸಂಖ್ಯೆ: 8
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 17
ವಿದ್ಯಾರ್ಥಿಗಳ ಸಂಖ್ಯೆ: 48
ಸರಾಸರಿ ವಯಸ್ಸು: 33.75
ಸತ್ಯದಲ್ಲಿ ಸರಾಸರಿ ವರ್ಷಗಳು: 17.31
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12.06
[ಪುಟ 26 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 100ನೆಯ ಪದವಿಪ್ರಾಪ್ತಿಸುತ್ತಿರುವ ತರಗತಿ
ಕೆಳಗಣ ಪಟ್ಟಿಯಲ್ಲಿ, ಸಾಲುಗಳನ್ನು ಮುಂದಿನಿಂದ ಹಿಂದಿನ ತನಕ ಲೆಕ್ಕಿಸಲಾಗುತ್ತದೆ, ಮತ್ತು ಹೆಸರುಗಳು ಪ್ರತಿಯೊಂದು ಸಾಲಿನಲ್ಲಿ ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಡುತ್ತವೆ.
(1) ಷರ್ಲಿ, ಎಮ್.; ಗ್ರುಂಡ್ಸ್ಟ್ರಾಮ್, ಎಮ್.; ಜೆನಾರ್ಡಿನಿ, ಡಿ.; ಜೈಮೊ, ಜೆ.; ಷಾಡ್, ಡಬ್ಲ್ಯೂ.; ಫೇಅರ್, ಪಿ.; ಬುಕ್ಯಾನನ್, ಸಿ.; ರಾಬಿನ್ಸನ್, ಡಿ. (2) ಪೈನ್, ಸಿ.; ಕ್ರಾವ್ಸ್, ಬಿ.; ರಾಸೀಕಾಟ್, ಟಿ.; ಹಾನ್ಸನ್, ಎ.; ಬೀಟ್ಸ್, ಟಿ.; ಬರ್ಗ್, ಜೆ.; ಗಾರ್ಸೀಯ, ಎನ್.; ಫ್ಲೆಮಿಂಗ್, ಕೆ. (3) ವಿನರೀ, ಎಲ್.; ವಿನರೀ, ಎಲ್.; ಹಾರ್ಪ್ಸ್, ಸಿ.; ಜೈಮೊ, ಸಿ.; ಬರ್ಗ್, ಟಿ.; ಮ್ಯಾನ್, ಸಿ.; ಬೆರೀಅಸ್, ವಿ.; ಫೈಫರ್, ಸಿ. (4) ರ್ಯಾಂಡಲ್, ಎಲ್.; ಜೆನಾರ್ಡಿನಿ, ಎಸ್., ಕ್ರಾವ್ಸ್, ಏಚ್.; ಫ್ಲೆಮಿಂಗ್, ಆರ್.; ಡಾಬಾಡೀ, ಎಸ್.; ಷರ್ಲಿ, ಟಿ.; ಸ್ಟೀವನ್ಸನ್, ಜಿ.; ಬುಕ್ಯಾನನ್, ಬಿ. (5) ರಾಬಿನ್ಸನ್, ಟಿ.; ಗಾರ್ಸೀಯ, ಜೆ.; ಹಾರ್ಪ್ಸ್, ಪಿ.; ರಾಸಿಕಾಟ್, ಡಿ.; ಡಾಬಾಡೀ, ಎಫ್.; ಫೇಅರ್, ಎಮ್.; ಸ್ಟೀವನ್ಸನ್, ಜಿ.; ಷಾಡ್, ಡಿ. (6) ಬೀಟ್ಸ್, ಎಲ್.; ಫೈಫರ್, ಎ.; ಬೆರೀಅಸ್, ಎಮ್.; ಪೈನ್, ಜೆ.; ಮ್ಯಾನ್, ಎಲ್.; ರ್ಯಾಂಡಲ್, ಪಿ.; ಗ್ರುಂಡ್ಸ್ಟ್ರಾಮ್, ಜೆ.; ಹ್ಯಾನ್ಸನ್, ಜಿ.