ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 4/15 ಪು. 32
  • “ಅದು ಯೆಹೋವನ ಕೆಲಸವಾಗಿದೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಅದು ಯೆಹೋವನ ಕೆಲಸವಾಗಿದೆ”
  • ಕಾವಲಿನಬುರುಜು—1996
ಕಾವಲಿನಬುರುಜು—1996
w96 4/15 ಪು. 32

“ಅದು ಯೆಹೋವನ ಕೆಲಸವಾಗಿದೆ”

ಮೆಕ್ಸಿಕೊದ ಮಾಂಟೆರಿ ನಗರದ ಎಲ್‌ ನಾರ್ಟೆ ಎಂಬ ಒಂದು ವಾರ್ತಾಪತ್ರದಲ್ಲಿನ ಲೇಖನವೊಂದರ ಶೀರ್ಷಿಕೆ ಅದಾಗಿತ್ತು. ಆ ಲೇಖನವು ಯೆಹೋವನ ಸಾಕ್ಷಿಗಳ ಒಂದು ಹೊಸ ಎಸೆಂಬ್ಲಿ ಹಾಲ್‌ನ ಕುರಿತಾಗಿತ್ತು.

ಮಾಂಟೆರಿಯು, ಮೆಕ್ಸಿಕೊದ ಉತ್ತರ ಭಾಗದಲ್ಲಿ 23,00,000 (ಉಪನಗರಗಳನ್ನೂ ಸೇರಿಸಿ) ಜನಸಂಖ್ಯೆಯಿರುವ ಒಂದು ನಗರವಾಗಿದೆ, ಮತ್ತು ಅಲ್ಲಿ 19,200 ರಾಜ್ಯ ಪ್ರಚಾರಕರು ಇದ್ದಾರೆ. ಸುಮಾರು ಒಂದೂವರೆ ವರ್ಷದ ವರೆಗೆ, ಸಾಕ್ಷಿಗಳು 3,000 ಆರಾಮಕರ ಆಸನಗಳು ಮತ್ತು ಹವಾನಿಯಂತ್ರಣವಿರುವ ಒಂದು ಸೊಗಸಾದ ಹಾಗೂ ವ್ಯಾವಹಾರಿಕವಾದ ಎಸೆಂಬ್ಲಿ ಹಾಲ್‌ ಅನ್ನು ಕಟ್ಟಲು ತಮ್ಮ ಪ್ರಯತ್ನಗಳನ್ನು ಸೇರಿಸಿದರು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಒಬ್ಬ ಸದಸ್ಯನು ಸಮರ್ಪಣಾ ಭಾಷಣವನ್ನು ಸಾದರಪಡಿಸಿದಾಗ, ಸ್ಥಳಿಕ ಸಾಕ್ಷಿಗಳು ಹರ್ಷಿಸಿದರು. ಕಾರ್ಯಕ್ರಮವು, ಮಾಂಟೆರಿಯಲ್ಲಿನ ಕೆಲಸದ ಒಂದು ಸಂಕ್ಷಿಪ್ತ ಇತಿಹಾಸವನ್ನು ಒಳಗೂಡಿತ್ತು, ಮತ್ತು ನಿರ್ಮಾಣದಲ್ಲಿ ಭಾಗವಹಿಸಿದವರೊಂದಿಗೆ ಸಂದರ್ಶನಗಳು ಇದ್ದವು. ಅನಂತರ ಆ ಕೂಟವನ್ನು ಹಾಜರಾಗುತ್ತಿದ್ದ 4,500 ಮಂದಿ ಸರ್ಮಪಣಾ ಭಾಷಣವನ್ನು ಕೇಳಿ ಆನಂದಿಸಿದರು.

“ಹೆಚ್ಚು ಸಂಖ್ಯೆಯ, ಹೆಚ್ಚು ದೊಡ್ಡದಾದ, ಮತ್ತು ಹೆಚ್ಚು ಉತ್ತಮ ರಾಜ್ಯ ಸಭಾಗೃಹಗಳು ಮತ್ತು ಎಸೆಂಬ್ಲಿ ಹಾಲ್‌ಗಳು” ಎಂದು ವರ್ಣಿಸಲ್ಪಟ್ಟಿರುವ ಒಂದು ಕಾರ್ಯಾಚರಣೆಯ ಭಾಗವಾಗಿ, ಮೆಕ್ಸಿಕೊವಿನಲ್ಲಿ ನಿರ್ಮಿಸಲ್ಪಟ್ಟಿರುವ ಇತ್ತೀಚಿನ ಎಸೆಂಬ್ಲಿ ಹಾಲ್‌ಗಳಲ್ಲಿ ಇದು ಮೂರನೆಯದಾಗಿದೆ.

ಮೆಕ್ಸಿಕೊದಲ್ಲಿನ 4,43,000ಕ್ಕಿಂತಲೂ ಹೆಚ್ಚಿನ ಪ್ರಚಾರಕರೊಂದಿಗೆ, ಮತ್ತು 1995ರಲ್ಲಿ ಜ್ಞಾಪಕಕ್ಕಾಗಿ 14,92,500ರ ಹಾಜರಿಯೊಂದಿಗೆ, ಮಾಂಟೆರಿಯಲ್ಲಿರುವಂತಹ ಹೊಸ ಎಸೆಂಬ್ಲಿ ಹಾಲ್‌ಗಳು, ನಿಶ್ಚಯವಾಗಿಯೂ ದೈವಿಕ ಉದ್ದೇಶಕ್ಕೆ ಉಪಯುಕ್ತವಾಗಿರುವವು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ