ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 12/15 ಪು. 30
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು—1995
  • ಅನುರೂಪ ಮಾಹಿತಿ
  • ನ್ಯಾಯಾಸನದ ಮುಂದೆ ನೀವು ಹೇಗೆ ನಿಲ್ಲುವಿರಿ?
    ಕಾವಲಿನಬುರುಜು—1995
  • ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?
    ಕಾವಲಿನಬುರುಜು—1995
  • ನಿಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿರಿ
    ಕಾವಲಿನಬುರುಜು—1995
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು—1995
w95 12/15 ಪು. 30

ನಿಮಗೆ ನೆನಪಿದೆಯೇ?

ಇತ್ತೀಚೆಗಿನ ಕಾವಲಿನಬುರುಜು ಸಂಚಿಕೆಗಳನ್ನು ನೀವು ಜಾಗರೂಕತೆಯಿಂದ ವಿಚಾರಿಸಿದ್ದೀರೋ? ಈ ಮುಂದಿನ ವಿಷಯಗಳನ್ನು ಜ್ಞಾಪಿಸಿಕೊಳ್ಳುವುದನ್ನು ನೀವು ಆಸಕ್ತಿಕರವಾಗಿ ಕಂಡುಕೊಳ್ಳಬಹುದು:

◻ ಮತ್ತಾಯ 11:28ರಲ್ಲಿರುವ ಆತನ ಆಮಂತ್ರಣಕ್ಕೆ ಹೊಂದಿಕೆಯಲ್ಲಿ ಒಬ್ಬನು ‘ಯೇಸುವಿನ ಬಳಿಗೆ’ ಬರುವುದು ಹೇಗೆ?

ಯೇಸು ಅಂದದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24) ಆದುದರಿಂದ, ಯೇಸುವಿನ ಬಳಿಗೆ ಬರಲಿಕ್ಕಾಗಿ, ಒಬ್ಬನು ತನ್ನ ಸ್ವಂತ ಚಿತ್ತವನ್ನು ದೇವರ ಮತ್ತು ಕ್ರಿಸ್ತನ ಚಿತ್ತಕ್ಕೆ ಅಧೀನಪಡಿಸುವುದನ್ನು, ಜವಾಬ್ದಾರಿಯ ಒಂದು ನಿರ್ದಿಷ್ಟ ಹೊರೆಯನ್ನು ಸ್ವೀಕರಿಸುತ್ತಾ ಅದನ್ನು ಸದಾ ಮಾಡುತ್ತಿರುವುದನ್ನು ಸೂಚಿಸುತ್ತದೆ.—8/15, ಪುಟ 17.

◻ ಮತ್ತಾಯ 7:13, 14ರಲ್ಲಿ ಯೇಸು ಹೇಳಿದಂತಹ ‘ಜೀವಕ್ಕೆ ನಡೆಸುವ ಇಕ್ಕಟ್ಟಾದ ದಾರಿ’ಯನ್ನು “ಸ್ವಲ್ಪ ಜನ” ಮಾತ್ರ ಕಂಡುಹಿಡಿಯುತ್ತಾರೆ ಏಕೆ?

ಇಕ್ಕಟ್ಟಾದ ಮಾರ್ಗವು ದೇವರ ನಿಯಮಗಳು ಮತ್ತು ಮೂಲ ತತ್ವಗಳಿಂದ ನಿರ್ಬಂಧಿಸಲ್ಪಟ್ಟಿದೆ. ಆದುದರಿಂದ, ತನ್ನ ಜೀವಿತವನ್ನು ದೇವರ ಮಟ್ಟಗಳಿಗೆ ಸರಿಹೊಂದಿಸಲು ಪ್ರಾಮಾಣಿಕವಾಗಿ ಬಯಸುತ್ತಿರುವ ಯಾರಾದರೊಬ್ಬರಿಗೆ ಮಾತ್ರವೇ ಇದು ಹಿಡಿಸುವುದು. ನಿರ್ಬಂಧಿತವಾಗಿ ತೋರುವುದಾದರೂ ‘ಇಕ್ಕಟ್ಟಾದ ಹಾದಿಯು,’ ವ್ಯಕ್ತಿಯೊಬ್ಬನನ್ನು ಪ್ರಾಮುಖ್ಯವಾದ ಪ್ರತಿಯೊಂದು ವಿಷಯದಲ್ಲಿ ಸ್ವತಂತ್ರನನ್ನಾಗಿ ಮಾಡುತ್ತದೆ. “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣ”ದಿಂದ ಅದರ ಗಡಿರೇಖೆಗಳು ಸ್ಥಾಪಿಸಲ್ಪಟ್ಟಿವೆ. (ಯಾಕೋಬ 1:25)—9/1, ಪುಟ 5.

◻ ವಿವೇಚನಾಶಕ್ತಿಯನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?

ವಿವೇಚನಾಶಕ್ತಿಯು ಸುಲಭವಾಗಿ ಅಥವಾ ಸಹಜವಾಗಿ ಬರುವುದಿಲ್ಲ. ಆದರೆ ತಾಳ್ಮೆ, ಪ್ರಾರ್ಥನೆ, ಶ್ರದ್ಧಾಪೂರ್ವಕವಾದ ಪ್ರಯತ್ನ, ಬುದ್ಧಿವಂತ ಸಹವಾಸ, ಬೈಬಲಿನ ಅಧ್ಯಯನ ಮತ್ತು ಅದರ ಕುರಿತಾದ ಧ್ಯಾನ, ಹಾಗೂ ಯೆಹೋವನ ಪವಿತ್ರಾತ್ಮದ ಮೇಲೆ ಅವಲಂಬನೆಯಿಂದಾಗಿ, ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳಸಾಧ್ಯವಿದೆ.—9/1, ಪುಟ 21.

◻ ಮಾನುಷ ಈರ್ಷ್ಯೆಯು ಹೇಗೆ ಒಂದು ಸದುದ್ದೇಶವನ್ನು ಸಾಧಿಸಬಲ್ಲದು?

ಪ್ರಿಯನೊಬ್ಬನನ್ನು ಕೆಟ್ಟ ಪ್ರಭಾವಗಳಿಂದ ರಕ್ಷಿಸಲು ಅದು ಒಬ್ಬ ವ್ಯಕ್ತಿಯನ್ನು ಪ್ರೇರೇಪಿಸಬಲ್ಲದು. ಅಷ್ಟಲ್ಲದೆ, ಮನುಷ್ಯರು ಯೆಹೋವನಿಗಾಗಿ ಮತ್ತು ಆತನ ಆರಾಧನೆಗಾಗಿ ಈರ್ಷ್ಯೆಯನ್ನು ಯೋಗ್ಯವಾಗಿ ತೋರಿಸಬಲ್ಲರು. (1 ಅರಸುಗಳು 19:10)—9/15, ಪುಟಗಳು 8, 9.

◻ ಆದಿಕಾಂಡ 50:23 (NW)ರಲ್ಲಿರುವ “ಅವರು ಯೋಸೇಫನ ತೊಡೆಗಳ ಮೇಲೆ ಹುಟ್ಟಿದವರಾಗಿದ್ದರು” ಎಂಬ, ಯೋಸೇಫನ ಮರಿಮಕ್ಕಳ ಕುರಿತಾದ ಅಭಿವ್ಯಕ್ತಿಯಿಂದ ಏನು ಅರ್ಥೈಸಲ್ಪಡುತ್ತದೆ?

ಯೋಸೇಫನು ಆ ಮಕ್ಕಳನ್ನು ತನ್ನ ವಂಶಜರಾಗಿ ಅಂಗೀಕರಿಸಿದನೆಂದು ಇದರ ಸರಳಾರ್ಥವಾಗಿರಬಲ್ಲದು. ಮಕ್ಕಳನ್ನು ಅವನು ತನ್ನ ತೊಡೆಯ ಮೇಲೆ ಕುಲುಕಾಡಿಸುತ್ತಾ, ಅವರೊಂದಿಗೆ ಮಮತೆಯಿಂದ ಆಟವಾಡಿದನೆಂದೂ ಅದು ಸೂಚಿಸಬಲ್ಲದು. ಇಂದು ತಂದೆಗಳು ತದ್ರೀತಿಯ ಮಮತೆಯನ್ನು ತಮ್ಮ ಮಕ್ಕಳಿಗೆ ತೋರಿಸುವುದು ಒಳ್ಳೆಯದು.—9/15, ಪುಟಗಳು 20, 21.

◻ ಒಂದು ಯಶಸ್ವೀ ವಿವಾಹ ಮತ್ತು ಕುಟುಂಬ ಜೀವಿತಕ್ಕಾಗಿ ಯಾವುದು ಅತ್ಯಾವಶ್ಯಕವಾಗಿ ಪ್ರಾಮುಖ್ಯವಾಗಿದೆ?

ಅಂತಹ ಒಳ್ಳೆಯ ಫಲಿತಾಂಶಗಳನ್ನು ಗಳಿಸಲು, ವಿವಾಹ ಸಂಗಾತಿಗಳು ಯಾವಾಗಲೂ ದೇವರ ಚಿತ್ತವನ್ನು ಪ್ರಥಮವಾಗಿಡಬೇಕು. ಹಾಗೆ ಮಾಡುವಾಗ, ವಿವಾಹ ಸಂಗಾತಿಗಳು ದೇವರ ವಾಕ್ಯದ ಸಲಹೆಯನ್ನು ಅನ್ವಯಿಸುವ ಮೂಲಕ ಜೊತೆಯಾಗಿ ಉಳಿಯಲು ಮತ್ತು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವರು. ಹೀಗೆ ದೇವರ ಚಿತ್ತವು ಅಲಕ್ಷ್ಯ ಮಾಡಲ್ಪಡುವಾಗ ಫಲಿಸುವ ಎಲ್ಲಾ ರೀತಿಯ ಮನೋವ್ಯಥೆಗಳನ್ನು ಅವರು ಹೋಗಲಾಡಿಸುತ್ತಾರೆ. (ಕೀರ್ತನೆ 19:7-11)—10/1, ಪುಟ 11.

◻ ದೈವಭಕ್ತಿಯುಳ್ಳ ತುರ್ತುಪ್ರಜ್ಞೆಯು ಇಂದು ಎಷ್ಟು ಮುಖ್ಯವಾಗಿದೆ?

ದೈವಭಕ್ತಿಯುಳ್ಳ ತುರ್ತುಪ್ರಜ್ಞೆಯು ಯೆಹೋವನಿಗೆ ಪೂರ್ಣಪ್ರಾಣದ ಸೇವೆಯ ಒಂದು ಆವಶ್ಯಕ ಭಾಗವಾಗಿದೆ. ದೇವರ ಸೇವಕರು, “ಮನಗುಂದಿದವರಾಗಿ ಬೇಸರ”ಗೊಳ್ಳುವಂತೆ ಮಾಡುವ ಸೈತಾನನ ಪ್ರಯತ್ನಗಳನ್ನು ಅದು ದೂರಗೊಳಿಸಿ, ಅವಕ್ಕೆ ಭಂಗತರಲು ಸಹಾಯ ಮಾಡುತ್ತದೆ. (ಇಬ್ರಿಯ 12:3) ಅದು ಲೋಕದಲ್ಲಿ ಮತ್ತು ಅದರ ವಂಚನೆಯ ಪ್ರಾಪಂಚಿಕತೆಯಲ್ಲಿ ಅವರು ಮಿತಿಮೀರಿ ಸಿಕ್ಕಿಕೊಳ್ಳುವುದರಿಂದ ಅವರನ್ನು ಕಾಪಾಡುತ್ತಾ, ಮೇಲಿನ ವಿಷಯಗಳ—“ವಾಸ್ತವವಾದ ಜೀವ”ದ—ಮೇಲೆ ಅವರ ಮನಸ್ಸನ್ನಿರಿಸುತ್ತದೆ. (1 ತಿಮೊಥೆಯ 6:19)—10/1, ಪುಟ 28.

◻ ಕುರಿಗಳ ಮತ್ತು ಆಡುಗಳ ದೃಷ್ಟಾಂತದಲ್ಲಿ, ಯೇಸು ಯಾವಾಗ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ ಮತ್ತು ಯಾಕೆ? (ಮತ್ತಾಯ 25:31-33)

ಅವನು ಅರಸನಾಗುವ ಅರ್ಥದಲ್ಲಿ ಕುಳಿತಿರುವುದನ್ನು ದೃಷ್ಟಾಂತವು ತೋರಿಸುವುದಿಲ್ಲ. ಬದಲಾಗಿ, ಅವನು ನ್ಯಾಯಧೀಶನಾಗಿ ಕುಳಿತುಕೊಳ್ಳುತ್ತಾನೆ. ಆ ನ್ಯಾಯತೀರ್ಪುಗೊಳಿಸುವಿಕೆಯು ಅನೇಕ ವರ್ಷಗಳ ಒಂದು ವಿಸ್ತೃತ ಅವಧಿಯಲ್ಲಿ ಮುಂದುವರಿಯುವ ಒಂದು ವಿಷಯವಾಗಿರುವುದಿಲ್ಲ. ಅದಕ್ಕೆ ಬದಲಾಗಿ, ಯೇಸು ಒಂದು ಸೀಮಿತ ಸಮಯದಲ್ಲಿ ಜನಾಂಗಗಳ ಮೇಲೆ ನ್ಯಾಯತೀರ್ಪನ್ನು ವಿಧಿಸಿ ಅದನ್ನು ಜಾರಿಗೆ ತರುವನು.—10/15, ಪುಟಗಳು 22, 23.

◻ ಯೇಸುವಿನಿಂದ ಅಷ್ಟು ಹೆಚ್ಚಾಗಿ ಸೂಚಿಸಲ್ಪಟ್ಟಿರುವ “ಸಂತತಿ” ಯಾವುದು?

ಯೇಸು “ಈ ಸಂತತಿ” ಎಂಬ ಪದವನ್ನು, ಯಾರು ತಮ್ಮ “ಕುರುಡ ಮಾರ್ಗದರ್ಶಿ”ಗಳೊಂದಿಗೆ ಕೂಡಿ ಯೆಹೂದಿ ಜನಾಂಗವಾಗಿ ಸಂಯೋಜಿತರಾಗಿದ್ದರೋ ಆ ಸಮಕಾಲೀನ ಜನ ಸಮುದಾಯಕ್ಕೆ ಅನ್ವಯಿಸಿದನು. (ಮತ್ತಾಯ 11:16; 15:14, NW; 24:34)—11/1, ಪುಟ 14.

◻ ಮತ್ತಾಯ 24:34-39ರಲ್ಲಿರುವ ಯೇಸುವಿನ ಪ್ರವಾದನೆಯ ಕೊನೆಯ ನೆರವೇರಿಕೆಯಲ್ಲಿ, “ಈ ಸಂತತಿ” ಎಂಬ ಅಭಿವ್ಯಕ್ತಿಯು ಯಾವುದಕ್ಕೆ ಸೂಚಿಸುತ್ತದೆ?

ಕ್ರಿಸ್ತನ ಸಾನ್ನಿಧ್ಯದ ಸೂಚನೆಯನ್ನು ಕಾಣುವ, ಆದರೆ ತಮ್ಮ ಮಾರ್ಗಗಳನ್ನು ಸರಿಪಡಿಸಿಕೊಳ್ಳಲು ತಪ್ಪುವ ಭೂಜನರಿಗೆ ಯೇಸು ಸೂಚಿಸುತ್ತಾನೆ ಎಂಬುದು ವ್ಯಕ್ತ.—11/1, ಪುಟ 19, 31.

◻ ಆಶ್ರಯ ನಗರಗಳ ಏರ್ಪಾಡು ಮತ್ತು ಅವುಗಳ ನಿರ್ಬಂಧಗಳು ಪುರಾತನ ಇಸ್ರಾಯೇಲಿನ ಜನರಿಗೆ ಹೇಗೆ ಪ್ರಯೋಜನ ತಂದವು?

ಅವರು ಮಾನವ ಜೀವದ ಕುರಿತು ಅಜಾಗರೂಕರೂ ಉದಾಸೀನರೂ ಆಗಿರಬಾರದೆಂಬ ವಿಷಯವನ್ನು ಇಸ್ರಾಯೇಲ್ಯರ ಮನಸ್ಸುಗಳ ಮೇಲೆ ಅದು ಅಚ್ಚೊತ್ತಿತ್ತು. ದಯೆಯನ್ನು ತೋರಿಸುವುದು ಸೂಕ್ತವಾಗಿರುವಾಗ, ಹಾಗೆ ಮಾಡುವ ಅಗತ್ಯವನ್ನೂ ಅದು ಒತ್ತಿಹೇಳಿತು. (ಯಾಕೋಬ 2:13)—11/15, ಪುಟ 14.

◻ ಪ್ರತಿನಿಧಿರೂಪದ ಆಶ್ರಯ ನಗರ ಏನಾಗಿದೆ?

ರಕ್ತದ ಪಾವಿತ್ರ್ಯದ ಕುರಿತಾದ ಆತನ ಆಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಮ್ಮನ್ನು ಮರಣದಿಂದ ರಕ್ಷಿಸಲಿಕ್ಕಾಗಿರುವ ದೇವರ ಮುನ್ನೇರ್ಪಾಡಾಗಿದೆ. (ಆದಿಕಾಂಡ 9:6)—11/15, ಪುಟ 17.

◻ ಕ್ರೈಸ್ತ ಸಹೋದರತ್ವವು ನಾವು “ಪುನಃ ಬಲವನ್ನು ಪಡೆಯ”ಲು ಹೇಗೆ ಸಹಾಯ ಮಾಡಬಲ್ಲದು? (ಯೆಶಾಯ 40:31, NW)

ನಮ್ಮ ಕ್ರೈಸ್ತ ಸಹೋದರ ಮತ್ತು ಸಹೋದರಿಯರಲ್ಲಿ, ತದ್ರೀತಿಯ ಒತ್ತಡಗಳನ್ನು ಮತ್ತು ಶೋಧನೆಗಳನ್ನು ಎದುರಿಸುತ್ತಿರುವ ಮತ್ತು ಬಹುಮಟ್ಟಿಗೆ ನಮ್ಮಂತಹದ್ದೇ ಅನಿಸಿಕೆಗಳನ್ನು ಅನುಭವಿಸುತ್ತಿರಬಹುದಾದ ಕೆಲವರು ಇದ್ದಾರೆ. (1 ಪೇತ್ರ 5:9) ನಾವೇನನ್ನು ಅನುಭವಿಸುತ್ತಿದ್ದೇವೋ ಅದು ಅಸಾಮಾನ್ಯವಲ್ಲ ಮತ್ತು ನಮ್ಮ ಅನಿಸಿಕೆಗಳು ವಿಚಿತ್ರವಾದವುಗಳಲ್ಲವೆಂಬುದನ್ನು ತಿಳಿಯುವುದು ಪುನರ್‌ಆಶ್ವಾಸನೀಯವೂ ನಂಬಿಕೆಯನ್ನು ಬಲಪಡಿಸುವಂತಹದ್ದೂ ಆಗಿದೆ.—12/1, ಪುಟಗಳು 15, 16.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ