ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 8/15 ಪು. 31
  • ನಿಮಗೆ ನೆನಪಿದೆಯೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೆ?
  • ಕಾವಲಿನಬುರುಜು—1995
  • ಅನುರೂಪ ಮಾಹಿತಿ
  • ತನ್ನ ಅಚ್ಚನ್ನು ಬಿಟ್ಟುಹೋದ ಒಬ್ಬ ಮುದ್ರಣಕಾರ
    ಕಾವಲಿನಬುರುಜು—1995
  • ಸತ್ಯಕ್ಕಾಗಿ ಏಕೆ ಅನ್ವೇಷಿಸಬೇಕು?
    ಕಾವಲಿನಬುರುಜು—1995
  • ಕ್ರೈಸ್ತರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತಾರೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಧಾರ್ಮಿಕ ಸತ್ಯವು ಪ್ರಾಪ್ಯವೋ?
    ಕಾವಲಿನಬುರುಜು—1995
ಇನ್ನಷ್ಟು
ಕಾವಲಿನಬುರುಜು—1995
w95 8/15 ಪು. 31

ನಿಮಗೆ ನೆನಪಿದೆಯೆ?

ಇತ್ತೀಚಿಗಿನ ಕಾವಲಿನಬುರುಜು ಸಂಚಿಕೆಗಳನ್ನು ಓದುವುದರಲ್ಲಿ ನೀವು ಆನಂದಿಸಿದ್ದೀರೋ? ಹಾಗಿರುವಲ್ಲಿ, ಕೆಳಗಿನವುಗಳನ್ನು ನೆನಪಿಗೆ ತರುವುದನ್ನು ನೀವು ಅಭಿರುಚಿಯುಳ್ಳದ್ದಾಗಿ ಕಾಣುವಿರಿ:

▫ ಧಾರ್ಮಿಕ ಸತ್ಯವು ಪ್ರಾಪ್ಯವೋ?

ಯೇಸು ಕ್ರಿಸ್ತನು ಹೇಳಿದ್ದು: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:32) ಯೇಸುವು ಸತ್ಯವು ಪ್ರಾಪ್ಯ ಎಂಬುದನ್ನು ಸೂಚಿಸಿದನು ಮಾತ್ರವಲ್ಲದೆ ದೇವರ ನಮ್ಮ ಆರಾಧನೆಯಲ್ಲಿ ಅದನ್ನು ಕಂಡುಹಿಡಿಯುವುದು ಅವಶ್ಯವೆಂದು ತೋರಿಸಿದನು. ಒಬ್ಬ ಸಮಾರ್ಯದ ಸ್ತ್ರೀಗೆ ಆತನು ಹೇಳಿದ್ದು: “ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸು” ವರು. (ಯೋಹಾನ 4:23)—4/15, ಪುಟ 5.

▫ ರಾಬರ್‌ ಏಟ್ಯೆನ್‌ ಯಾರು, ಮತ್ತು ಅವನು ತನ್ನ ಅಚ್ಚನ್ನು ಹೇಗೆ ಬಿಟ್ಟುಹೋದನು?

ರಾಬರ್‌ ಏಟ್ಯೆನ್‌ 16 ನೆಯ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಮುದ್ರಣಕಾರನು. ಪವಿತ್ರ ಶಾಸ್ತ್ರಗಳ ಪ್ರಕಾಶನಕ್ಕಾಗಿ ಅವನು ತನ್ನ ಜೀವಿತವನ್ನು ಮೀಸಲಾಗಿಟ್ಟನು ಮತ್ತು ಆದಿಯಲ್ಲಿ ಬರೆದಿದ್ದಂತೆ ಬೈಬಲಿನ ಮಾತುಗಳನ್ನು ಬಯಲುಮಾಡಲು ಶ್ರಮಿಸಿದನು. ಬೈಬಲ್‌ ವಾಕ್ಯಗಳನ್ನು ಅಂಕಿಗಳಿರುವ ವಚನಗಳಾಗಿ ವಿಭಾಗಿಸಲಿಕ್ಕಾಗಿರುವ ಅವನ ಪದ್ಧತಿಯು, ಇಂದು ಸಾರ್ವತ್ರಿಕವಾಗಿ ಉಪಯೋಗಿಸಲ್ಪಡುತ್ತಿರುವ ಪದ್ಧತಿಯಾಗಿದೆ.—4/15, ಪುಟಗಳು 10, 14.

▫ ದೈನಿಕ ಬೈಬಲ್‌ ವಾಚನದಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

ನಮಗೆ ಶಾಸ್ತ್ರಗಳು ಸತತವಾಗಿ ನವೀನ ಅರ್ಥವನ್ನು ಪಡೆದುಕೊಳ್ಳುತ್ತವೆ, ಮತ್ತು ನಾವು ನೋಡಿರುವಂತಹ, ಕೇಳಿರುವಂತಹ, ಮತ್ತು ವೈಯಕ್ತಿಕವಾಗಿ ಅನುಭವಿಸಿರುವಂತಹ ವಿಷಯಗಳ ನೋಟದಲ್ಲಿ, ಕಡೆಯ ದಿವಸಗಳ ಕುರಿತಾದ ಪ್ರವಾದನೆಗಳು ಹೆಚ್ಚು ಮನತಟ್ಟುವಂತಹವುಗಳಾಗುತ್ತವೆ. ಜೀವನದಲ್ಲಿ ನಮ್ಮ ಸ್ವಂತ ಅನುಭವವನ್ನು ವಿಸ್ತರಿಸಿದಂತೆ ಮತ್ತು ನಾವು ಸಮಸ್ಯೆಗಳನ್ನು ನಿಭಾಯಿಸಿದಂತೆ, ಬೈಬಲಿನ ಸಲಹೆಯನ್ನು ನಾವು ಅಧಿಕ ಪೂರ್ಣವಾಗಿ ಗಣ್ಯಮಾಡುತ್ತೇವೆ. (ಜ್ಞಾನೋಕ್ತಿ 4:18)—5/1, ಪುಟ 15.

▫ ಬೈಬಲ್‌ ವಚನಗಳನ್ನು ಹೇಗೆ ಜ್ಞಾಪಕದಲ್ಲಿಟ್ಟುಕೊಳ್ಳಸಾಧ್ಯವಿದೆ?

ಬೈಬಲನ್ನು ಓದಿದಂತೆ, ನೀವು ಜ್ಞಾಪಕದಲ್ಲಿಟ್ಟುಕೊಳ್ಳಲು ಬಯಸುವ ಆಯ್ದ ವಚನಗಳನ್ನು ಗುರುತಿಸಿರಿ, ಅಥವಾ ಅವುಗಳನ್ನು ಕಾರ್ಡ್‌ಗಳ ಮೇಲೆ ಬರೆದು ನೀವು ಅವುಗಳನ್ನು ದಿನಾಲೂ ಎಲ್ಲಿ ನೋಡುವಿರೊ ಆ ಸ್ಥಳದಲ್ಲಿ ಇಡಿರಿ. ಈ ವಚನಗಳನ್ನು ಬಾಯಿಪಾಠ ಮಾಡಲು ನೀವು ಪ್ರಯತ್ನಿಸಿದಂತೆ, ಅವುಗಳ ಕುರಿತು ಮನನ ಮಾಡಿರಿ ಮತ್ತು ಅವುಗಳ ಉಪಯೋಗ ಮಾಡಿರಿ. ಒಂದೇ ಸಮಯದಲ್ಲಿ ಬಹಳ ಹೆಚ್ಚನ್ನು ಬಾಯಿಪಾಠ ಮಾಡಲು ಪ್ರಯತ್ನಿಸಬೇಡಿ, ಬಹುಶಃ ಪ್ರತಿ ವಾರ ಒಂದು ಅಥವಾ ಎರಡನ್ನು ಮಾತ್ರ ಬಾಯಿಪಾಠ ಮಾಡಿರಿ.—5/1, ಪುಟಗಳು 16, 17.

▫ ಇತರ ಸುವಾರ್ತಾ ಬರಹಗಾರರು ಒದಗಿಸಿದಂತಹ ವಿಷಯಕ್ಕೆ ಕೂಡಿಸಿ, ಯಾವ ಸಮಾಚಾರವನ್ನು ಲೂಕನ ಸುವಾರ್ತೆಯು ಒಳಗೊಂಡಿದೆ?

ಲೂಕನಿಂದ ದಾಖಲಿಸಲ್ಪಟ್ಟದ್ದರಲ್ಲಿ ಹೆಚ್ಚಿನದು ಮತ್ತಾಯನ ವೃತ್ತಾಂತಕ್ಕೆ ತದ್ರೀತಿಯದ್ದಾಗಿದ್ದರೂ, 59 ಪ್ರತಿಶತವು ಭಿನ್ನವಾಗಿದೆ. ತನ್ನ ಪುಸ್ತಕಕ್ಕೆ ಅಪೂರ್ವವಾದ ಆರು ಅದ್ಭುತ ಕಾರ್ಯಗಳನ್ನು ಲೂಕನು ದಾಖಲಿಸಿದನು, ಮತ್ತು ಇತರ ಸುವಾರ್ತಾ ಬರಹಗಾರರಿಂದ ಪ್ರಸ್ತಾಪಿಸಲ್ಪಡದ, ಯೇಸುವಿನ ದೃಷ್ಟಾಂತಗಳನ್ನು ಎರಡು ಪಟ್ಟು ಹೆಚ್ಚಾಗಿ ವರದಿಸಿದನು.—5/15, ಪುಟ 12.

▫ 1935 ರಲ್ಲಿ, ಸತ್ಯದ ಕುರಿತಾದ ಬೆಳಕಿನ ಯಾವ ಪ್ರಮುಖ ಬೆಳಗು ಪ್ರಕಟಿಸಲ್ಪಟ್ಟಿತು?

ಆ ವರ್ಷದಲ್ಲಿ, ಪ್ರಕಟನೆ 7:9, 14 ರಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಮಹಾ ಸಮೂಹವು, ಎರಡನೆಯ ಸ್ವರ್ಗೀಯ ವರ್ಗಕ್ಕಲ್ಲ, ಬದಲಾಗಿ ಯಾರ ನಿರೀಕ್ಷೆಗಳು ಐಹಿಕವಾಗಿವೆಯೋ ಅವರಿಗೆ ಸೂಚಕವಾಗುತ್ತದೆಂದು ಯೆಹೋವನ ಜನರು ತಿಳಿದುಕೊಂಡರು. (ಯೋಹಾನ 10:16)—5/15, ಪುಟ 20.

▫ ನಾವು ದುಃಖಿಸುವವರಿಗೆ ಯಾವ ಪ್ರಾಯೋಗಿಕ ವಿಧಗಳಲ್ಲಿ ಸಾಂತ್ವನಪಡಿಸಬಲ್ಲೆವು?

ಕಿವಿಗೊಡಿರಿ. ಪುನರಾಶ್ವಾಸನೆಯನ್ನು ಒದಗಿಸಿರಿ. ಲಭ್ಯವಾಗಿರ್ರಿ. ಸೂಕ್ತವಾಗಿರುವಾಗ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಒಂದು ಸಾಂತ್ವನದಾಯಕ ಪತ್ರ ಅಥವಾ ಕಾರ್ಡನ್ನು ಬರೆಯಿರಿ. ಅವರೊಂದಿಗೆ ಪ್ರಾರ್ಥಿಸಿರಿ. (ಯಾಕೋಬ 5:16) ಅವರಿಗೆ ಸಹಾಯ ಮಾಡುವುದನ್ನು ಮುಂದುವರಿಸಿರಿ.—6/1, ಪುಟಗಳು 13, 14.

▫ ಧಾರ್ಮಿಕವಾಗಿ ವಿಭಜಿತವಾಗಿರುವ ಕುಟುಂಬಗಳಲ್ಲಿ ಜೀವಿಸುತ್ತಿರುವವರಿಗೆ ತಾಳಿಕೊಳ್ಳುವಂತೆ ಸಹಾಯ ಮಾಡಲು, ಆತ್ಮಿಕ ಸಹೋದರರು ಮತ್ತು ಸಹೋದರಿಯರು ಏನು ಮಾಡಬಲ್ಲರು?

ಕ್ರಮವಾಗಿ ಅವರಿಗೆ ಪ್ರೋತ್ಸಾಹದಾಯಕ, ಸಕಾರಾತ್ಮಕ, ಮತ್ತು ಸಾಂತ್ವನದಾಯಕ ಮಾತುಗಳನ್ನಾಡಿರಿ. (1 ಥೆಸಲೊನೀಕ 5:14) ಇದು ಅವರ ಮನಸ್ಸು ಮತ್ತು ದೇಹಕ್ಕೆ ನವಚೈತನ್ಯದಂತೆ ಕಾರ್ಯನಡಿಸುತ್ತದೆ. ವ್ಯಾವಹಾರಿಕವಾಗಿ ಮತ್ತು ಸೂಕ್ತವಾಗಿರುವಾಗ, ನಿಮ್ಮ ದೇವಪ್ರಭುತ್ವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಅವರನ್ನು ಒಳಗೂಡಿಸಿರಿ. ಅವರನ್ನು ನಿಮ್ಮ ಪ್ರಾರ್ಥನೆಗಳಲ್ಲಿ ಒಳಗೂಡಿಸಿರಿ. (ರೋಮಾಪುರ 1:9; ಎಫೆಸ 1:16)—6/1, ಪುಟ 29.

▫ ಕ್ಷೇತ್ರ ಶುಶ್ರೂಷೆಯನ್ನು ನಡಿಸುವಾಗ ತಾಳ್ಮೆಯನ್ನು ಅಭ್ಯಾಸಿಸುವುದರಿಂದ ಯಾವ ಪ್ರತಿಫಲಗಳು ಬರುತ್ತವೆ?

ಯಾವುದೇ ನಿರಾಸಕ್ತಿಯನ್ನು ಅಥವಾ ವಿರೋಧವನ್ನು ತಾಳಿಕೊಳ್ಳಲು ತಾಳ್ಮೆಯು ರಾಜ್ಯ ಪ್ರಚಾರಕನಿಗೆ ಸಹಾಯ ಮಾಡುತ್ತದೆ. ಕೋಪಗೊಂಡ ಮನೆಯವರೊಂದಿಗೆ ವಾದಮಾಡುವ ಬದಲಾಗಿ, ತಾಳ್ಮೆಯುಳ್ಳ ಶುಶ್ರೂಷಕರು ಮೃದು ಉತ್ತರವನ್ನು ಕೊಡಶಕ್ತರಾಗುವರು, ಇಲ್ಲವೆ ಮೌನವಾಗಿ ಬಿಟ್ಟುಹೋಗಿ, ಶಾಂತಿ ಮತ್ತು ಸಂತೋಷವನ್ನು ಉಳಿಸಿಕೊಳ್ಳುವರು. (ಮತ್ತಾಯ 10:12, 13) ಅಷ್ಟಲ್ಲದೆ, ಕುರಿಸದೃಶರು ರಾಜ್ಯ ಸಂದೇಶಕ್ಕೆ ಆಕರ್ಷಿಸಲ್ಪಡುವರು.—6/15, ಪುಟ 9.

▫ ಬೈಬಲ್‌ ಸತ್ಯವನ್ನು ತಿಳಿದಿರುವುದು ಏಕೆ ಅಷ್ಟು ಅಮೂಲ್ಯವಾಗಿದೆ?

ಸತ್ಯವನ್ನು ತಿಳಿದಿರುವುದು ನಮ್ಮನ್ನು ಸುಳ್ಳುಗಳು, ಮೋಸಗಳು, ಮತ್ತು ಮೂಢನಂಬಿಕೆಗಳಿಂದ ಮುಕ್ತಗೊಳಿಸುತ್ತದೆ. ನಾವು ಅದರ ಪ್ರಕಾರ ಜೀವಿಸುವಾಗ, ಕಷ್ಟಗಳನ್ನು ತಾಳಿಕೊಳ್ಳಲು ನಮ್ಮನ್ನು ಸತ್ಯವು ಬಲಪಡಿಸುತ್ತದೆ ಮತ್ತು ಪರೀಕ್ಷೆಯ ಕೆಳಗೆ ಸ್ಥಿರರಾಗಿ ನಿಲ್ಲುವಂತೆ ಶಕ್ತರನ್ನಾಗಿ ಮಾಡುವ ನಿರೀಕ್ಷೆಯಿಂದ ನಮ್ಮನ್ನು ಪ್ರೇರಿಸುತ್ತದೆ.—7/1, ಪುಟ 8.

▫ ಪ್ರಾಕೃತಿಕ ಇಸ್ರಾಯೇಲಿನಿಂದ ಯಾವ ಪ್ರಧಾನ ಜವಾಬ್ದಾರಿಯನ್ನು ಅಭಿಷಿಕ್ತ ಕ್ರೈಸ್ತ ಸಭೆಯು ವಹಿಸಿಕೊಂಡಿತು?

ಜನಾಂಗಗಳ ಮಧ್ಯೆ ಯೆಹೋವನ ಮಹತ್ವಕ್ಕೆ ಸಾಕ್ಷಿನೀಡುವ ಸುಯೋಗ. (ಯೆಶಾಯ 43:21; 1 ಪೇತ್ರ 2:9)—7/1, ಪುಟ 19.

▫ ಒಬ್ಬ ಗಂಡನು ತನ್ನ ಹೆಂಡತಿಗೆ ‘ಮಾನವನ್ನು ಸಲ್ಲಿಸ’ ಬೇಕೆಂಬ ಅಪೊಸ್ತಲ ಪೇತ್ರನ ಮಾತುಗಳಿಂದ ಏನು ಅರ್ಥೈಸಲ್ಪಡುತ್ತದೆ? (1 ಪೇತ್ರ 3:7)

ತನ್ನ ಪತ್ನಿಗೆ ಮಾನಕೊಡುವ ಪುರುಷನು ಅವಳನ್ನು ಅಪಮಾನಪಡಿಸುವುದಿಲ್ಲ ಅಥವಾ ತೃಣೀಕರಿಸುವುದಿಲ್ಲ. ಬದಲಿಗೆ, ತಾನು ಅವಳನ್ನು ಗೌರವಿಸುತ್ತೇನೆಂದು—ಖಾಸಗಿಯಾಗಿ ಮತ್ತು ಬಹಿರಂಗವಾಗಿ—ತನ್ನ ನುಡಿಗಳಿಂದಲೂ ಕಾರ್ಯಗಳಿಂದಲೂ ಪ್ರದರ್ಶಿಸುತ್ತಾನೆ. (ಜ್ಞಾನೋಕ್ತಿ 31:10-31)—7/15, ಪುಟ 19.

▫ ಪಶ್ಚಾತ್ತಾಪಪಡದ ತಪ್ಪುಗಾರನನ್ನು ಸಭೆಯಿಂದ ಹೊರಗೆ ಹಾಕುವುದು ಪ್ರೀತಿಯುಳ್ಳದ್ದು ಎಂದು ಏಕೆ ಹೇಳಸಾಧ್ಯವಿದೆ?

ಬಹಿಷ್ಕಾರ ಮಾಡುವುದು ಯೆಹೋವನಿಗಾಗಿ ಮತ್ತು ಆತನ ಮಾರ್ಗಗಳಿಗಾಗಿ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿರುತ್ತದೆ. (ಕೀರ್ತನೆ 97:10) ಇದು ನೀತಿಯ ಪಥವನ್ನು ಬೆನ್ನಟ್ಟುವವರಿಗಾಗಿ ಪ್ರೀತಿಯನ್ನು ತೋರಿಸುತ್ತದೆ, ಯಾಕಂದರೆ ಅವರ ಮೇಲೆ ಕೆಟ್ಟ ಪ್ರಭಾವವನ್ನು ಹಾಕಬಹುದಾದ ಒಬ್ಬನನ್ನು ಅದು ಅವರ ಮಧ್ಯದಿಂದ ತೆಗೆದುಹಾಕುತ್ತದೆ. ಅದು ಸಭೆಯ ಶುದ್ಧತೆಯನ್ನು ಸಹ ಕಾಪಾಡುತ್ತದೆ. (1 ಕೊರಿಂಥ 5:1-13)—7/15, ಪುಟ 25.

▫ ಮತ್ತಾಯ 24:45-47 ರಲ್ಲಿ ಯೇಸುವಿನಿಂದ ಉಲ್ಲೇಖಿಸಲ್ಪಟ್ಟ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಇಂದು ಹೇಗೆ ಗುರುತಿಸಲ್ಪಡಬಲ್ಲದು?

“ರಾಜ್ಯದ ಈ ಸುವಾರ್ತೆಯ”ನ್ನು ಸಾರುವುದರಲ್ಲಿ ಮತ್ತು ಕಲಿಸುವುದರಲ್ಲಿ, ಬೈಬಲಾಧಾರಿತವಾದ ಪ್ರಕಾಶನಗಳನ್ನು ಒದಗಿಸುವುದರಲ್ಲಿ ಅವರು ಮಾಡುವ ಕಾರ್ಯ, ಮತ್ತು ದೇವರ ವಾಕ್ಯವಾದ ಬೈಬಲಿಗೆ ಅವರ ನಿಕಟವಾದ ಅಂಟಿಕೊಳ್ಳುವಿಕೆಯಿಂದ, ಅವರು ವಿಶೇಷವಾಗಿ ಗುರುತಿಸಲ್ಪಡುತ್ತಾರೆ. (ಮತ್ತಾಯ 24:14; 28:19, 20)—8/1, ಪುಟ 16.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ