ಪುನಸ್ಸಾಪ್ಥಿತವಾದ “ದೇಶ” ದಲ್ಲಿ ಒಡಗೂಡಿ ಜೀವಿಸುವವರು
“ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು.”—ಯೆಶಾಯ 61:6.
1, 2. (ಎ) ಇಸ್ರಾಯೇಲಲ್ಲಿ ಮತಾವಲಂಬಿಗಳ ಸನ್ನಿವೇಶ ಏನಾಗಿತ್ತು? (ಬಿ) ಆಧುನಿಕ ಸಮಯಗಳಲ್ಲಿ “ಮಹಾ ಸಮೂಹ” ದ ಸದಸ್ಯರು ಯಾವ ಮನೋಭಾವವನ್ನು ತೋರಿಸಿದ್ದಾರೆ?
ಪುರಾತನ ಕಾಲಗಳಲ್ಲಿ, ಇಸ್ರಾಯೇಲು ನಂಬಿಗಸ್ತಿಕೆಯಿಂದಿದ್ದಾಗ ಲೋಕ ರಂಗದಲ್ಲಿ ಯೆಹೋವನ ಮಹಿಮೆಗೆ ಸಾಕ್ಷಿಯಾಗಿ ಸೇವೆಮಾಡಿತು. (ಯೆಶಾಯ 41:8, 9; 43:10) ಅನೇಕ ವಿದೇಶೀಯರು ಪ್ರತಿವರ್ತನೆ ತೋರಿಸಿ ಯೆಹೋವನನ್ನು, ಆತನು ಆರಿಸಿದ ಜನರೊಂದಿಗೆ ಆರಾಧಿಸಲು ಬಂದರು. ಕಾರ್ಯತಃ, ಅವರು ಇಸ್ರಾಯೇಲಿಗೆ, ರೂತಳು ನವೋಮಿಗೆ ಹೇಳಿದಂತೆ, “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು,” ಎಂದು ಹೇಳಿದರು. (ರೂತಳು 1:16) ಪುರುಷರು ಸುನ್ನತಿ ಮಾಡಿಸಿಕೊಳ್ಳುತ್ತಾ ಅವರು ಧರ್ಮಶಾಸ್ತ್ರದ ಒಡಂಬಡಿಕೆಯ ಷರತ್ತುಗಳಿಗೆ ಅಧೀನರಾದರು. (ವಿಮೋಚನಕಾಂಡ 12:43-48) ಕೆಲವು ಸ್ತ್ರೀಯರು ಇಸ್ರಾಯೇಲ್ಯರನ್ನು ಮದುವೆಯಾದರು. ಯೆರಿಕೋವಿನ ರಾಹಾಬಳು ಮತ್ತು ಮೋವಾಬ್ಯಳಾಗಿದ್ದ ರೂತಳು ಯೇಸು ಕ್ರಿಸ್ತನ ಪೂರ್ವಜೆಯರಾದರು. (ಮತ್ತಾಯ 1:5) ಅಂತಹ ಮತಾವಲಂಬಿಗಳು ಇಸ್ರಾಯೇಲ್ ಸಮೂಹದ ಭಾಗವಾಗಿದ್ದರು.—ಧರ್ಮೋಪದೇಶಕಾಂಡ 23:7, 8.
2 ಇಸ್ರಾಯೇಲಿನಲ್ಲಿದ್ದ ಮತಾವಲಂಬಿಗಳ ಹಾಗೆಯೇ, ಇಂದು “ಮಹಾ ಸಮೂಹವು” ಅಭಿಷಿಕ್ತ ಉಳಿಕೆಯವರಿಗೆ, “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದಿದ್ದೆ” ಎಂದು ಹೇಳಿದ್ದಾರೆ. (ಪ್ರಕಟನೆ 7:9; ಜೆಕರ್ಯ 8:23) ಅವರು ಈ ಅಭಿಷಿಕ್ತ ಕ್ರೈಸ್ತರು ಯೆಹೋವನ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿದ್ದಾರೆಂದು ಗುರುತಿಸಿ, ಅವರೊಂದಿಗೆ ಎಷ್ಟು ಒತ್ತಾಗಿ ಸೇರಿ ಕೆಲಸಮಾಡುತ್ತಾರೆಂದರೆ, ಅಭಿಷಿಕ್ತರು ಮತ್ತು “ಬೇರೆ ಕುರಿಗಳು” “ಒಂದೇ ಹಿಂಡು . . . ಒಬ್ಬನೇ ಕುರುಬ” ನವರಾಗಿದ್ದಾರೆ. (ಮತ್ತಾಯ 24:45-47; ಯೋಹಾನ 10:16) ಅಭಿಷಿಕ್ತ ಸಹೋದರರೆಲ್ಲ ತಮ್ಮ ಸ್ವರ್ಗೀಯ ಪ್ರತಿಫಲವನ್ನು ಪಡೆದಾಗ ಮಹಾ ಸಮೂಹದವರಿಗೆ ಏನಾಗುವುದು? ಅವರು ಭಯಪಡಬೇಕಾಗಿಲ್ಲ. ಈ “ಕಡೇ ದಿವಸ” ಗಳಲ್ಲೆಲ್ಲ ಯೆಹೋವನು ಆ ಸಮಯಕ್ಕಾಗಿ ಸಿದ್ಧತೆಯನ್ನು ಮಾಡಿದ್ದಾನೆ.—2 ತಿಮೊಥೆಯ 3:1.
ಒಂದು ಆತ್ಮಿಕ “ದೇಶ”
3. ಪೇತ್ರನು ಪ್ರವಾದಿಸಿದ “ನೂತನಾಕಾಶಮಂಡಲ” ಎಂದರೇನು, ಮತ್ತು ಅದು ಯಾವಾಗ ಸ್ಥಾಪನೆಯಾಯಿತು?
3 ಯಾವುದರ ಭಾಗವಾಗಿ ಆ 1,44,000 ಮಂದಿ ಅಭಿಷಿಕ್ತ ಕ್ರೈಸ್ತರಿರುವರೋ ಆ ಸ್ವರ್ಗೀಯ ಆಡಳಿತೆಯ ಏರ್ಪಾಡು ಅಪೊಸ್ತಲ ಪೇತ್ರನಿಂದ ಪ್ರವಾದಿಸಲ್ಪಟ್ಟಿತು. ಅವನು ಹೇಳಿದ್ದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಈ “ನೂತನಾಕಾಶಮಂಡಲ” 1914 ರಲ್ಲಿ, ಕ್ರಿಸ್ತನು ಸ್ವರ್ಗೀಯ ರಾಜ್ಯದಲ್ಲಿ ಅರಸನಾಗಿ ಸಿಂಹಾಸನಕ್ಕೇರಿದಾಗ ಸ್ಥಾಪನೆಯಾಯಿತು. ಆದರೆ, “ನೂತನಭೂಮಂಡಲ”ದ ವಿಷಯದಲ್ಲೇನು?
4. (ಎ) 1919 ರಲ್ಲಿ ಯಾವ ಅನಿರೀಕ್ಷಿತ ಘಟನೆ ನಡೆಯಿತು? (ಬಿ) ‘ಕ್ಷಣಮಾತ್ರದಲ್ಲಿ ಹುಟ್ಟಿದ ಜನಾಂಗವು’ ಯಾವುದು ಮತ್ತು ‘ಪ್ರಸವವೇದನೆಯಿಂದ ಹುಟ್ಟಿದ ದೇಶ’ ಯಾವುದು?
4 1919 ರಲ್ಲಿ, ಯೆಹೋವನು ಅಭಿಷಿಕ್ತ ಉಳಿಕೆಯವರನ್ನು ಮಹಾ ಬಾಬೆಲಿನ ಸೆರೆಯೊಳಗಿಂದ ಹೊರತಂದನು. (ಪ್ರಕಟನೆ 18:4) ಕ್ರೈಸ್ತ ಪ್ರಪಂಚದ ಮುಖಂಡರಿಗಾದರೋ, ಈ ನಾಟಕೀಯ ಸಂಭವವು ಪೂರ್ತಿ ಅನಿರೀಕ್ಷಿತವಾಗಿತ್ತು. ಇದರ ಕುರಿತು ಬೈಬಲು ಹೇಳುವುದು: “ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಂಥಾ ಸಂಗತಿಯನ್ನು ಕಂಡವರಾರು? ಒಂದು ದಿನದಲ್ಲಿ ರಾಷ್ಟವ್ರು [“ದೇಶ,” NW] ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ?” (ಯೆಶಾಯ 66:8) ಅಭಿಷಿಕ್ತ ಸಭೆಯು ಜನಾಂಗಗಳ ಮುಂದೆ ಥಟ್ಟನೆ ವಿಮೋಚಿತ ಜನವಾಗಿ ತೋರಿಬಂದಾಗ, ಅದು ನಿಶ್ಚಯವಾಗಿಯೂ ‘ಕ್ಷಣಮಾತ್ರದಲ್ಲಿ ಹುಟ್ಟಿದ’ ಜನಾಂಗವಾಗಿತ್ತು. ಆದರೆ “ದೇಶ”ವು ಏನಾಗಿತ್ತು? ಒಂದು ಅರ್ಥದಲ್ಲಿ, ಇದು ಪೂರ್ವಕಾಲದ ಇಸ್ರಾಯೇಲ್ ದೇಶದ ಆತ್ಮಿಕ ಸಮಾನಾರ್ಥವಾಗಿತ್ತು. ನವಜನಿತ “ಜನಾಂಗ”ಕ್ಕೆ ಕೊಡಲ್ಪಟ್ಟ ಕ್ರಿಯಾಕ್ಷೇತ್ರವು, ಎಲ್ಲಿ ಯೆಶಾಯ ಪುಸ್ತಕದ ಪ್ರಮೋದವನ ಪ್ರವಾದನೆಗಳಿಗೆ ಒಂದು ಆಧುನಿಕ, ಆತ್ಮಿಕ ನೆರವೇರಿಕೆಯಿದೆಯೋ ಆ ಸ್ಥಳವು ಇದಾಗಿತ್ತು. (ಯೆಶಾಯ 32:16-20; 35:1-7; ಹೋಲಿಸಿ ಇಬ್ರಿಯ 12:12-14.) ಒಬ್ಬ ಕ್ರೈಸ್ತನು ಶಾರೀರಿಕವಾಗಿ ಎಲ್ಲಿಯೇ ಇರಲಿ, ಅವನು ಆ “ದೇಶ” ದಲ್ಲಿದ್ದಾನೆ.
5. 1919 ರಲ್ಲಿ ಯಾವ ನಾಭಿಯು ಅಸ್ತಿತ್ವಕ್ಕೆ ಬಂತು? ವಿವರಿಸಿ.
5 ಇದಕ್ಕೂ ಪೇತ್ರನು ಪ್ರವಾದಿಸಿದ “ನೂತನಭೂಮಂಡಲ”ಕ್ಕೂ ಸಂಬಂಧವೇನಾಗಿತ್ತು? ಒಳ್ಳೆಯದು, 1919 ರಲ್ಲಿ, ಪುನಸ್ಸಾಪ್ಥಿತವಾದ “ದೇಶ” ದಲ್ಲಿ ಹುಟ್ಟಿದ ಆ ಹೊಸ “ಜನಾಂಗವು,” ಯೆಹೋವನ ಅಭಿಷಿಕ್ತ ಮತ್ತು ಅಭಿಷಿಕ್ತ್ಯೇತರ ಸುತ್ತಿಗಾರರಿಂದ ಕೂಡಿರುವ ಒಂದು ಜಗದ್ವ್ಯಾಪಕ ಸಂಸ್ಥೆಯಾಗಿ ಬೆಳೆಯಲಿಕ್ಕಿತ್ತು. ಈ ಸಂಸ್ಥೆಯು ಅರ್ಮಗೆದೋನಿನಿಂದ ದೇವರ ನೂತನ ಲೋಕದೊಳಗೆ ಪಾರಾಗುವುದು. ಈ ವಿಧದಲ್ಲಿ ಆ ಜನಾಂಗವನ್ನು, ಸೈತಾನನ ಜಗತ್ತಿನ ನಾಶದ ಬಳಿಕ ಅಸ್ತಿತ್ವದಲ್ಲಿರುವ ನೀತಿಭರಿತವಾದ ಮಾನವ ಸಮಾಜದ, ನೂತನ ಭೂಮಂಡಲದ, ನಾಭಿಯಾಗಿ ವೀಕ್ಷಿಸಸಾಧ್ಯವಿದೆ.a 1930 ಗಳ ಮಧ್ಯಭಾಗದೊಳಗೆ, ಅಭಿಷಿಕ್ತರನ್ನು, ಒಂದು ಗುಂಪಾಗಿ, ಪುನಸ್ಸಾಪ್ಥಿತವಾದ ದೇಶದೊಳಗೆ ಒಟ್ಟುಗೂಡಿಸಲಾಗಿತ್ತು. ಅಂದಿನಿಂದ, ಪ್ರಾಧಾನ್ಯವು, ಇಂದು ಬಹುಮಟ್ಟಿಗೆ 50 ಲಕ್ಷಗಳಾಗಿರುವ ಬೇರೆ ಕುರಿಗಳ ಮಹಾ ಸಮೂಹದ ಒಟ್ಟುಗೂಡಿಸುವಿಕೆಯ ಮೇಲಿದೆ. (ಪ್ರಕಟನೆ 14:15, 16) ಆ “ದೇಶ” ಮಿತಿಮೀರಿ ಜನನಿಬಿಡವಾಗಿದೆಯೊ? ಇಲ್ಲ, ಅದರ ಮೇರೆಗಳನ್ನು ಅಗತ್ಯವಿರುವಷ್ಟು ವ್ಯಾಪಕವಾಗಿ ವಿಸ್ತರಿಸಸಾಧ್ಯವಿದೆ. (ಯೆಶಾಯ 26:15) ವಾಸ್ತವವಾಗಿ, ಆ ಅಭಿಷಿಕ್ತ ಉಳಿಕೆಯವರು ಆ “ದೇಶ” ವನ್ನು “ಫಲ” ದಿಂದ—ಆರೋಗ್ಯಕರವಾದ, ಚೇತನಗೊಳಿಸುವ ಆತ್ಮಿಕಾಹಾರದಿಂದ—ತುಂಬಿಸುವಾಗ ಅದರ ಜನಸಂಖ್ಯೆಯು ವೃದ್ಧಿಯಾಗುವುದನ್ನು ನೋಡುವುದು ರೋಮಾಂಚಕ. (ಯೆಶಾಯ 27:6) ಆದರೆ ಪುನಸ್ಸಾಪ್ಥಿತವಾದ ದೇವಜನರ ಆ “ದೇಶ” ದಲ್ಲಿ ಈ ಬೇರೆ ಕುರಿಗಳ ಸ್ಥಾನವೇನು?
“ದೇಶ” ದಲ್ಲಿ ಕ್ರಿಯಾಸಕ್ತ ವಿದೇಶೀಯರು
6. ದೇವಜನರ “ದೇಶ” ದಲ್ಲಿ ವಿದೇಶೀಯರು ಹೇಗೆ ಕ್ರಿಯಾಶೀಲರಾಗಿದ್ದಾರೆ?
6 ಇಸ್ರಾಯೇಲ್ ದೇಶದಲ್ಲಿ ಮತಾವಲಂಬಿಗಳು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾದ ಹಾಗೆಯೇ, ಇಂದು ಪುನಸ್ಸಾಪ್ಥಿತವಾಗಿರುವ “ದೇಶ” ದಲ್ಲಿ ಮಹಾ ಸಮೂಹದವರೂ ಯೆಹೋವನ ಆಜೆಗ್ಞಳಿಗೆ ವಿಧೇಯರಾಗುತ್ತಾರೆ. ತಮ್ಮ ಅಭಿಷಿಕ್ತ ಸಹೋದರರಿಂದ ಶಿಕ್ಷಿತರಾಗಿ, ಅವರು ಮಿಥ್ಯಾರಾಧನೆಯ ಸಕಲ ವಿಧಗಳಿಂದ ದೂರವಿದ್ದು, ರಕ್ತದ ಪಾವಿತ್ರ್ಯವನ್ನು ಪಾಲಿಸುತ್ತಾರೆ. (ಅ. ಕೃತ್ಯಗಳು 15:19, 20; ಗಲಾತ್ಯ 5:19, 20; ಕೊಲೊಸ್ಸೆ 3:5) ಅವರು ಯೆಹೋವನನ್ನು ತಮ್ಮ ಪೂರ್ಣ ಹೃದಯ, ಮನ, ಆತ್ಮ ಮತ್ತು ಶಕಿಯ್ತಿಂದ ಪ್ರೀತಿಸಿ, ತಮ್ಮ ನೆರೆಯವರನ್ನೂ ತಮ್ಮಂತೆಯೇ ಪ್ರೀತಿಸುತ್ತಾರೆ. (ಮತ್ತಾಯ 22:37; ಯಾಕೋಬ 2:8) ಪೂರ್ವಕಾಲದ ಇಸ್ರಾಯೇಲಿನಲ್ಲಿ ಮತಾವಲಂಬಿಗಳು ಸೊಲೊಮೋನನ ಆಲಯದ ರಚನೆಯಲ್ಲಿ ಸಹಾಯಮಾಡಿ ಸತ್ಯಾರಾಧನೆಯ ಪುನಸ್ಸಾಪ್ಥನೆಯನ್ನು ಬೆಂಬಲಿಸಿದರು. (1 ಪೂರ್ವಕಾಲವೃತ್ತಾಂತ 22:2; 2 ಪೂರ್ವಕಾಲವೃತ್ತಾಂತ 15:8-14; 30:25) ಇಂದು, ಮಹಾ ಸಮೂಹದವರು ಕೂಡ ನಿರ್ಮಾಣ ಯೋಜನೆಗಳಲ್ಲಿ ಭಾಗಿಗಳಾಗುತ್ತಾರೆ. ದೃಷ್ಟಾಂತಕ್ಕಾಗಿ, ಅವರು ಸಭೆಗಳನ್ನು ಮತ್ತು ಸರ್ಕಿಟ್ಗಳನ್ನು ಕಟ್ಟುವುದರಲ್ಲಿ ಸಹಾಯಮಾಡುವುದಲ್ಲದೆ, ರಾಜ್ಯ ಸಭಾಗೃಹಗಳು, ಎಸೆಂಬ್ಲಿ ಹಾಲ್ಗಳು ಮತ್ತು ಬ್ರಾಂಚ್ ಸೌಕರ್ಯಗಳಂತಹ ಪ್ರಾಪಂಚಿಕ ಕಟ್ಟಡ ಯೋಜನೆಗಳನ್ನು ಕೈಕೊಳ್ಳುತ್ತಾರೆ.
7. ದೇಶಭ್ರಷ್ಟತೆಯ ತರುವಾಯದ ಯೆರೂಸಲೇಮಲ್ಲಿ, ದೇವಾಲಯದ ಸೇವೆಗಳನ್ನು ಸಲ್ಲಿಸಲು ಸಾಕಷ್ಟು ಲೇವಿಯರು ಇಲ್ಲದಿದ್ದಾಗ ಏನು ನಡೆಯಿತು?
7 ಸಾ.ಶ.ಪೂ. 537 ರಲ್ಲಿ, ಇಸ್ರಾಯೇಲ್ಯರು ದೇಶಭ್ರಷ್ಟರಾಗಿದ್ದ ಬಾಬೆಲಿನಿಂದ ಹಿಂದಿರುಗಿ ಬಂದಾಗ, ಅವರು ಆ ಪುನರ್ನಿರ್ಮಿತ ದೇವಾಲಯದಲ್ಲಿ ಸೇವೆಯನ್ನು ವ್ಯವಸ್ಥಾಪಿಸಲು ತೊಡಗಿದರು. ಆದರೂ, ಹಿಂದಿರುಗಿ ಬಂದಿದ್ದ ಲೇವಿಯರು ಹೆಚ್ಚು ಸಂಖ್ಯೆಯಲ್ಲಿರಲಿಲ್ಲ. ಆದಕಾರಣ, ನೆತಿನಿಮರಿಗೆ—ಆ ಹಿಂದೆ ಲೇವಿಯರಿಗೆ ಸಹಾಯ ಮಾಡುತ್ತಿದ್ದ, ಸುನ್ನತಿಯಾಗಿರುವ ಅನ್ಯ ನಿವಾಸಿಗಳಿಗೆ—ಆಲಯದ ಸೇವೆಯಲ್ಲಿ ಹೆಚ್ಚಿನ ಸುಯೋಗಗಳು ಕೊಡಲ್ಪಟ್ಟವು. ಆದರೂ, ಅವರು ಅಭಿಷಿಕ್ತ ಆರೋನ ವಂಶದ ಯಾಜಕರಿಗೆ ಸಮಾನರಾಗಿರಲಿಲ್ಲ.b—ಎಜ್ರ 7:24; 8:15-20; ನೆಹೆಮೀಯ 3:22-26.
8, 9. ಬೇರೆ ಕುರಿಗಳು ಈ ಕಡೆಯ ದಿನಗಳಲ್ಲಿ ಪವಿತ್ರ ಸೇವೆ ಸಲ್ಲಿಸುವ ಕೆಲಸದಲ್ಲಿ ಹೇಗೆ ಹೆಚ್ಚಿಕೆಯ ಭಾಗವನ್ನು ತೆಗೆದುಕೊಂಡಿದ್ದಾರೆ?
8 ಇಂದು ಅಭಿಷಿಕ್ತ ಕ್ರೈಸ್ತರು ಈ ನಮೂನೆಯನ್ನು ಅನುಸರಿಸಿದ್ದಾರೆ. “ಅಂತ್ಯಕಾಲ” ಮುಂದುವರಿದಂತೆ ಅಭಿಷಿಕ್ತರಲ್ಲಿ ಉಳಿದವರು ದೇವಜನರ “ದೇಶ” ದಲ್ಲಿ ಕಡಮೆಯಾಗುತ್ತ ಬಂದಿದ್ದಾರೆ. (ದಾನಿಯೇಲ 12:9; ಪ್ರಕಟನೆ 12:17) ಈ ಕಾರಣದಿಂದ, ಮಹಾ ಸಮೂಹದವರು ಈಗ “ಪವಿತ್ರ ಸೇವೆ” ಸಲ್ಲಿಸುವುದರಲ್ಲಿ ಅಧಿಕಾಂಶ ಕೆಲಸವನ್ನು ಪೂರೈಸುತ್ತಾರೆ. (ಪ್ರಕಟನೆ 7:15) ತಮ್ಮ ಅಭಿಷಿಕ್ತ ಸಹೋದರರ ಮಾರ್ಗದರ್ಶನವನ್ನು ಅನುಸರಿಸುತ್ತಾ, ಅವರು ‘ದೇವರಿಗೆ ಸ್ತೊತ್ರಯಜ್ಞವನ್ನು, ಅಂದರೆ, ಯಾವುವು ಆತನ ಹೆಸರಿಗೆ ಬಹಿರಂಗ ಘೋಷಣೆಯನ್ನು ಮಾಡುತ್ತವೆಯೋ ಆ ತುಟಿಗಳ ಫಲಗಳನ್ನು ಅರ್ಪಿಸುತ್ತಾರೆ.’ ಅವರು ‘ಇತರರಿಗೆ ಒಳ್ಳೆಯದನ್ನು ಮಾಡುವುದನ್ನು ಮತ್ತು ಅವರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವುದನ್ನು ಮರೆಯುವುದಿಲ್ಲ.’ ಏಕೆಂದರೆ, ‘ಇಂತಹ ಯಜ್ಞಗಳಿಂದ ದೇವರು ಸುತೃಪ್ತನು,’ ಎಂದು ಅವರಿಗೆ ಗೊತ್ತು.—ಇಬ್ರಿಯ 13:15, 16.
9 ಇದಲ್ಲದೆ, ಮಹಾ ಸಮೂಹದವರು ಪ್ರತಿವರ್ಷ ಲಕ್ಷಗಟ್ಟಲೆಯಲ್ಲಿ ಹೆಚ್ಚಾಗುತ್ತಿರುವುದರೊಂದಿಗೆ, ಮೇಲ್ವಿಚಾರಣೆಗೆ ಸದಾ ಹೆಚ್ಚುತ್ತಿರುವ ಆವಶ್ಯಕತೆಯಿದೆ. ಒಂದು ಸಮಯದಲ್ಲಿ ಇದನ್ನು ಅಭಿಷಿಕ್ತ ಕ್ರೈಸ್ತರು ಏಕಮಾತ್ರರಾಗಿ ನಿರ್ವಹಿಸುತ್ತಿದ್ದರು. ಈಗ, ಹೆಚ್ಚಿನ ಸಭೆಗಳು, ಹಾಗೂ ಸರ್ಕಿಟ್ಗಳು, ಡಿಸ್ಟ್ರಿಕ್ಟ್ಗಳು, ಮತ್ತು ಬ್ರಾಂಚ್ಗಳ ಮೇಲ್ವಿಚಾರಣೆಯನ್ನು ಅನಿವಾರ್ಯವಾಗಿ ಬೇರೆ ಕುರಿಗಳಿಗೆ ಕೊಡಲಾಗಿದೆ. 1992 ರಲ್ಲಿ ಇವರಲ್ಲಿ ಕೆಲವರಿಗೆ, ಆಡಳಿತ ಮಂಡಳಿಯ ಕಮಿಟಿಗಳ ಕೂಟಗಳಲ್ಲಿ ಉಪಸ್ಥಿತರಿರುವ ಮತ್ತು ಮತಾಧಿಕಾರವಿಲ್ಲದ ಸಹಾಯಕರಾಗಿ ಸೇವೆಸಲ್ಲಿಸುವ ಸುಯೋಗವನ್ನು ಕೊಡಲಾಯಿತು. ಆದಾಗಿಯೂ, ಬೇರೆ ಕುರಿಗಳು ತಮ್ಮ ಅಭಿಷಿಕ್ತ ಜೊತೆಕ್ರೈಸ್ತರಿಗೆ ನಿಷ್ಠರಾಗಿ ಉಳಿಯುತ್ತ, ಯೆಹೋವನ ನಂಬಿಗಸ್ತನೂ ವಿವೇಕಿಯೂ ಆದ ಆಳಾಗಿರುವ ಅವರನ್ನು ಬೆಂಬಲಿಸುವುದನ್ನು ತಮ್ಮ ಸುಯೋಗವೆಂದೆಣಿಸುತ್ತಾರೆ.—ಮತ್ತಾಯ 25:34-40.
“ಕುಲಪಾಲಕನಂತೆ”
10, 11. ಕೆಲ ಫಿಲಿಷ್ಟಿಯರ ನಮೂನೆಯನ್ನು ಅನುಸರಿಸುತ್ತ, ದೇವಜನರ ಕೆಲವು ಮಾಜಿ ವೈರಿಗಳಿಗೆ ಹೇಗೆ ಹೃದಯ ಬದಲಾವಣೆಯಾಯಿತು? ಫಲಿತಾಂಶವೇನು?
10 ನಂಬಿಗಸ್ತನೂ ವಿವೇಕಿಯೂ ಆದ ಆಳು ಜವಾಬ್ದಾರಿಯ ಸ್ಥಾನಗಳಲ್ಲಿ ಬೇರೆ ಕುರಿಗಳನ್ನು ಉಪಯೋಗಿಸಿರುವ ವಿಧವು ಜೆಕರ್ಯ 9:6, 7 ರಲ್ಲಿ ಪ್ರವಾದಿಸಲ್ಪಟ್ಟಿತು. ಅಲ್ಲಿ ನಾವು ಓದುವುದು: “ಫಿಲಿಷ್ಟಿಯದ ಗರ್ವವನ್ನು ಭಂಗಪಡಿಸುವೆನು. ಅವರು ಸವಿಯುವ ರಕ್ತವನ್ನು ಬಾಯೊಳಗಿಂದ ತೆಗೆದುಬಿಡುವೆನು; ಅವರು ಕಚ್ಚುವ ಅಸಹ್ಯಪದಾರ್ಥಗಳನ್ನು ಹಲ್ಲುಗಳ ಮಧ್ಯದಿಂದ ಕಿತ್ತುಹಾಕುವೆನು; ಅವರೂ ಇಸ್ರಾಯೇಲಿನ ದೇವರಿಗೆ ಶೇಷಜನವಾಗಿ ನಿಲ್ಲುವರು; ಯೆಹೂದದಲ್ಲಿ ಕುಲಪಾಲಕನಂತಿರುವರು; ಎಕ್ರೋನಿನವರು ಯೆಬೂಸಿಯರ ಹಾಗಿರುವರು.”c ಫಿಲಿಷ್ಟಿಯರು, ಇಂದು ಸೈತಾನನ ಲೋಕದಂತೆ, ಇಸ್ರಾಯೇಲಿನ ಬದ್ಧ ವೈರಿಗಳಾಗಿದ್ದರು. (1 ಯೋಹಾನ 5:19) ಫಿಲಿಷ್ಟಿಯರು ಒಂದು ಜನಾಂಗದೋಪಾದಿ ಕೊನೆಗೆ ಹೇಗೆ ನಾಶಮಾಡಲ್ಪಟ್ಟರೋ, ಹಾಗೆಯೇ ಧಾರ್ಮಿಕ, ರಾಜಕೀಯ ಮತ್ತು ವಾಣಿಜ್ಯ ಘಟಕಗಳಿರುವ ಈ ಜಗತ್ತು ಯೆಹೋವನ ನಾಶಕಾರಕ ರೋಷವನ್ನು ಬೇಗನೆ ಅನುಭವಿಸುವುದು.—ಪ್ರಕಟನೆ 18:21; 19:19-21.
11 ಆದರೂ, ಜೆಕರ್ಯನ ಮಾತುಗಳಿಗನುಸಾರ, ಕೆಲವು ಮಂದಿ ಫಿಲಿಷ್ಟಿಯರು ತಮ್ಮ ಹೃದಯವನ್ನು ಬದಲಾಯಿಸಿಕೊಂಡರು ಮತ್ತು ಇಂದಿನ ಕೆಲವು ಲೌಕಿಕರು ಯೆಹೋವನ ವೈರಿಗಳಾಗಿಯೇ ಉಳಿಯುವುದಿಲ್ಲವೆಂದು ಇದು ಮುನ್ಸೂಚಿಸಿತು. ಅವರು ಅಸಹ್ಯ ಸಂಸ್ಕಾರಗಳೂ ಹೇಯವಾದ ಯಜ್ಞಗಳೂ ಕೂಡಿರುವ ತಮ್ಮ ಧಾರ್ಮಿಕ ವಿಗ್ರಹಾರಾಧನೆಯನ್ನು ನಿಲ್ಲಿಸಿ ಯೆಹೋವನ ದೃಷ್ಟಿಯಲ್ಲಿ ಶುದ್ಧರಾಗುವರು. ನಮ್ಮ ದಿನಗಳಲ್ಲಿ ಇಂತಹ ಸುಧಾರಣೆ ಹೊಂದಿದ “ಫಿಲಿಷ್ಟಿಯರು” ಮಹಾ ಸಮೂಹದವರಲ್ಲಿ ಕಾಣಸಿಗುತ್ತಾರೆ.
12. ಆಧುನಿಕ ಸಮಯಗಳಲ್ಲಿ, “ಎಕ್ರೋನು” “ಯೆಬೂಸಿಯರ ಹಾಗೆ” ಆಗಿರುವುದು ಹೇಗೆ?
12 ಆ ಪ್ರವಾದನೆಗನುಸಾರ, ಫಿಲಿಷ್ಟಿಯದ ದೊಡ್ಡ ನಗರವಾದ ಎಕ್ರೋನಿನವರು “ಯೆಬೂಸಿಯರ ಹಾಗಿರುವರು.” ಯೆಬೂಸಿಯರೂ ಒಂದೊಮ್ಮೆ ಇಸ್ರಾಯೇಲಿನ ವೈರಿಗಳಾಗಿದ್ದರು. ದಾವೀದನು ಜಯಿಸುವ ತನಕ ಯೆರೂಸಲೇಮು ಅವರ ವಶದಲ್ಲಿತ್ತು. ಆದರೂ, ಇಸ್ರಾಯೇಲಿನೊಂದಿಗೆ ಮಾಡಿದ ಯುದ್ಧದಲ್ಲಿ ಬದುಕಿ ಉಳಿದ ಕೆಲವರು ಮತಾವಲಂಬಿಗಳಾದರೆಂದು ವ್ಯಕ್ತವಾಗುತ್ತದೆ. ಅವರು ಇಸ್ರಾಯೇಲ್ ದೇಶದಲ್ಲಿ ದಾಸರಾಗಿ ಸೇವೆಮಾಡಿದ್ದಲ್ಲದೆ, ದೇವಾಲಯದ ರಚನೆಯಲ್ಲಿ ಕೆಲಸಮಾಡುವ ಸುಯೋಗವೂ ಅವರಿಗಿತ್ತು. (2 ಸಮುವೇಲ 5:4-9; 2 ಪೂರ್ವಕಾಲವೃತ್ತಾಂತ 8:1-18) ಇಂದು, ಯೆಹೋವನನ್ನು ಆರಾಧಿಸಲು ಬರುವ ‘ಎಕ್ರೋನಿನವರಿಗೆ’ ಸಹ, ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಮೇಲ್ವಿಚಾರಣೆಯಲ್ಲಿ “ದೇಶ” ದಲ್ಲಿ ಸೇವೆಮಾಡುವ ಸುಯೋಗಗಳಿವೆ.
13. ಪುರಾತನಕಾಲದ ಲೋಕದಲ್ಲಿ ಕುಲಪಾಲಕರು ಏನಾಗಿದ್ದರು?
13 ಫಿಲಿಷ್ಟಿಯನು ಯೆಹೂದದ ಒಬ್ಬ ಕುಲಪಾಲಕನಂತಿರುವನೆಂದು ಜೆಕರ್ಯನು ಹೇಳುತ್ತಾನೆ. ಆಲಪ್ ಎಂಬ ಹೀಬ್ರು ಪದವನ್ನು “ಕುಲಪಾಲಕ” (ಶೇಕ್, NW) ಎಂದು ಭಾಷಾಂತರಿಸಿದಾಗ, “ಒಂದು ಸಾವಿರ ಮಂದಿಯ ಮುಖಂಡ” (ಅಥವಾ, “ಕಿಲಿಯಾರ್ಕ್”) ಎಂದರ್ಥವಾಗುತ್ತದೆ. ಅದೊಂದು ಅತಿ ಉನ್ನತ ಹುದೆಯ್ದಾಗಿತ್ತು. ಆದಿಯ ಏದೋಮ್ ಜನಾಂಗದಲ್ಲಿ ಕೇವಲ 13 ಕುಲಪಾಲಕರು ಇದ್ದರೆಂದು ಸ್ಪಷ್ಟವಾಗಿಗುತ್ತದೆ. (ಆದಿಕಾಂಡ 36:15-19) ಇಸ್ರಾಯೇಲಿನ ಕುರಿತು ಮಾತಾಡುವಾಗ, “ಕುಲಪಾಲಕ” ಎಂಬ ಪದವು ಅನೇಕ ವೇಳೆ ಬಳಸಲ್ಪಡದಿದ್ದರೂ “ಸಹಸ್ರಾಧಿಪತಿ” ಎಂಬ ಪದ ಪದೇಪದೇ ಸಂಭವಿಸುತ್ತದೆ. ಮೋಶೆಯು ಇಸ್ರಾಯೇಲಿನ ಜನಾಂಗದ ಪ್ರತಿನಿಧಿಗಳನ್ನು ಕರೆದಾಗ, “ಇಸ್ರಾಯೇಲ್ಯರಲ್ಲಿ ಸಹಸ್ರಾಧಿಪತಿಗಳನ್ನು” ಕರೆದನು.d ಇವರು 12 ಜನರಿದ್ದರು. ಇವರು ಮೋಶೆಗೆ ಮಾತ್ರ ಅಧೀನರಾಗಿದ್ದರೆಂದು ಸ್ಪಷ್ಟವಾಗಿಗುತ್ತದೆ. (ಅರಣ್ಯಕಾಂಡ 1:4-16) ಇದೇ ರೀತಿ, ಸೈನ್ಯ ವ್ಯವಸ್ಥಾಪನೆಯಲ್ಲಿ, ಸಹಸ್ರಾಧಿಪತಿಗಳು ಸೇನಾಪತಿ ಅಥವಾ ರಾಜನಿಗೆ ಮಾತ್ರ ಎರಡನೆಯವರಾಗಿದ್ದರು.—2 ಸಮುವೇಲ 18:1, 2; 2 ಪೂರ್ವಕಾಲವೃತ್ತಾಂತ 25:5.
14. ಇಂದು “ಫಿಲಿಷ್ಟಿಯರು” ಕುಲಪಾಲಕನಂತಾಗಿರುವುದು ಹೇಗೆ?
14 ಪಶ್ಚಾತ್ತಾಪಪಟ್ಟ ಫಿಲಿಷ್ಟಿಯನು ಇಸ್ರಾಯೇಲಿನಲ್ಲಿ ನಿಜವಾಗಿಯೂ ಒಬ್ಬ ಕುಲಪಾಲಕನಾಗುವನೆಂದು ಜೆಕರ್ಯನು ಪ್ರವಾದಿಸಲಿಲ್ಲ. ಅವನು ಪ್ರಾಕೃತಿಕವಾಗಿ ಹುಟ್ಟಿದ ಇಸ್ರಾಯೇಲ್ಯನಲ್ಲವಾಗಿದುದ್ದರಿಂದ ಅದು ಯೋಗ್ಯವಾಗಿರಲಿಲ್ಲ. ಬದಲಾಗಿ, ಅವನು ಕುಲಪಾಲಕನಂತಿದ್ದನು, ಕುಲಪಾಲಕನಿಗೆ ಸಮಾನವಾದ ಅಧಿಕಾರದ ಸ್ಥಾನವನ್ನು ಅವನು ಹಿಡಿದಿದ್ದನು. ಅದು ಹಾಗೆಯೇ ಪರಿಣಮಿಸಿದೆ. ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದವರು ಸಂಖ್ಯೆಯಲ್ಲಿ ಕಡಮೆಯಾದಂತೆ ಮತ್ತು ಬದುಕಿರುವವರಲ್ಲಿ ಅನೇಕರಿಗೆ ವಯಸ್ಸು ಮೀರಿರುವುದರಿಂದ, ಈ ಕುಂದನ್ನು ನಿವಾರಿಸಲಿಕ್ಕೋ ಎಂಬಂತೆ ಸುಶಿಕ್ಷಿತರಾದ ಬೇರೆ ಕುರಿಗಳು ಆ ಸ್ಥಾನವನ್ನು ತುಂಬುತ್ತಾರೆ. ಅವರು ತಮ್ಮ ಅಭಿಷಿಕ್ತ ಸಹೋದರರ ಸ್ಥಾನವನ್ನು ಮೋಸದಿಂದ ಭರ್ತಿಮಾಡಬಯಸುವುದಿಲ್ಲ. ಬದಲಿಗೆ, ದೇವರ ಸಂಸ್ಥೆಯು ಒಂದು ವ್ಯವಸ್ಥಾಪಿತ ರೀತಿಯಲ್ಲಿ ಮುಂದುವರಿಯಶಕ್ತವಾಗುವಂತೆ, ನಂಬಿಗಸ್ತನೂ ವಿವೇಕಿಯೂ ಆದ ಆಳು “ದೇಶ” ದಲ್ಲಿ ಅಗತ್ಯವಿರುವ ಹಾಗೆ ಅವರಿಗೆ ಅಧಿಕಾರವನ್ನು ಕೊಡುತ್ತಾನೆ. ಇಂತಹ ಪ್ರಗತಿಪರ ಕಾರ್ಯಗತಿಯು ಇನ್ನೊಂದು ಪ್ರವಾದನೆಯಲ್ಲಿಯೂ ತೋರಿಬರುತ್ತದೆ.
ಉಳುವವರು ಮತ್ತು ಯಾಜಕರು
15. (ಎ) ಯೆಶಾಯ 61:5, 6ರ ನೆರವೇರಿಕೆಯಲ್ಲಿ, “ಯೆಹೋವನ ಯಾಜಕರು” ಯಾರು, ಮತ್ತು ಅವರು ಈ ಸ್ಥಾನದಲ್ಲಿ ಪೂರ್ಣಾರ್ಥದಲ್ಲಿ ಯಾವಾಗ ಸೇವೆಮಾಡುತ್ತಾರೆ? (ಬಿ) ಇಸ್ರಾಯೇಲಿನ ವ್ಯವಸಾಯದ ಕೆಲಸ ಮಾಡುವ ವಿದೇಶೀಯರು ಯಾರು, ಮತ್ತು ಆತ್ಮಿಕಾರ್ಥದಲ್ಲಿ, ಈ ಕೆಲಸವು ಏನನ್ನು ಒಳಗೂಡುತ್ತದೆ?
15 ಯೆಶಾಯ 61:5, 6 ಓದುವುದು: “ಆಗ ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ತೋಟಗಾರರೂ ಆಗುವರು. ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು; ಜನಾಂಗಗಳ ಆಸ್ತಿಯನ್ನನುಭವಿಸುವಿರಿ, ಅವುಗಳ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.” ಇಂದು “ಯೆಹೋವನ ಯಾಜಕರು” ಅಭಿಷಿಕ್ತ ಕ್ರೈಸ್ತರಾಗಿದ್ದಾರೆ. ಅಂತಿಮ ಹಾಗೂ ಪೂರ್ಣಾರ್ಥದಲ್ಲಿ, ಅವರು, “ಯೆಹೋವನ ಯಾಜಕರು . . . ನಮ್ಮ ದೇವರ ಸೇವಕರು,” ಆಗಿ ಸ್ವರ್ಗೀಯ ರಾಜ್ಯದಲ್ಲಿ ಸೇವೆಮಾಡುವರು. (ಪ್ರಕಟನೆ 4:9-11) ವ್ಯವಸಾಯದ ಕೆಲಸಕ್ಕೆ ಜವಾಬ್ದಾರರಾಗಿರುವ “ವಿದೇಶೀಯರು” ಯಾರು? ಇವರು ದೇವರ ಇಸ್ರಾಯೇಲ್ಯರ “ದೇಶ” ದಲ್ಲಿ ವಾಸಿಸುವ ಬೇರೆ ಕುರಿಗಳೇ. ಅವರಿಗೆ ಕೊಡಲ್ಪಟ್ಟಿರುವ ಮೇಯಿಸುವ, ಉಳುವ ಮತ್ತು ತೋಟಗಾರಿಕೆಯ ಕೆಲಸಗಳೆಂದರೇನು? ಪ್ರಾಮುಖ್ಯವಾದ ಆತ್ಮಿಕ ಅರ್ಥದಲ್ಲಿ, ಜನರಿಗೆ ಸಹಾಯಮಾಡುವ, ಪೋಷಿಸುವ ಮತ್ತು ಕೊಯ್ಯುವ ಕೆಲಸಗಳಿಗೆ ಇವು ಸಂಬಂಧಿಸಿವೆ.—ಯೆಶಾಯ 5:7; ಮತ್ತಾಯ 9:37, 38; 1 ಕೊರಿಂಥ 3:9; 1 ಪೇತ್ರ 5:2.
16. ದೇವಜನರ “ದೇಶ” ದಲ್ಲಿ ಕಟ್ಟಕಡೆಗೆ ಎಲ್ಲ ಕೆಲಸವನ್ನು ಯಾರು ನಿರ್ವಹಿಸುವರು?
16 ಪ್ರಸ್ತುತ, ಆತ್ಮಿಕ ಇಸ್ರಾಯೇಲ್ಯರ ಒಂದು ಚಿಕ್ಕ ಸಂಖ್ಯೆಯು ಆತ್ಮಿಕ ಪಾಲನೆ, ವ್ಯವಸಾಯ ಮತ್ತು ತೋಟಗಾರಿಕೆಯಲ್ಲಿ ಭಾಗವಹಿಸುತ್ತ ಭೂಮಿಯಲ್ಲಿ ಉಳಿದದೆ. ಅಭಿಷಿಕ್ತ ಸಭೆಯು ಪೂರ್ಣವಾಗಿ ಕೊನೆಗೆ ಕ್ರಿಸ್ತನೊಂದಿಗೆ ಐಕ್ಯವಾಗುವಾಗ, ಈ ಕೆಲಸವನ್ನೆಲ್ಲ ಬೇರೆ ಕುರಿಗಳಿಗೆ ಬಿಡಲಾಗುವುದು. ಆಗ ಆ “ದೇಶ”ದ ಮಾನವ ಮೇಲ್ವಿಚಾರಣೆಯೂ ಅರ್ಹತೆಯಿರುವ, ಮತ್ತು ಯೆಹೋವನು ಯೆಹೆಜ್ಕೇಲ ಪುಸ್ತಕದಲ್ಲಿ ಪ್ರಭು ವರ್ಗವೆಂದು ಸೂಚಿಸಿರುವ ಬೇರೆ ಕುರಿಗಳ ಕೈಗಳಲ್ಲಿರುವುದು.—ಯೆಹೆಜ್ಕೇಲ 45, 46 ಅಧ್ಯಾಯಗಳು.e
“ದೇಶ” ಬಾಳುತ್ತದೆ
17. ಈ ಕೊನೆಯ ದಿವಸಗಳಲ್ಲೆಲ್ಲ ಯೆಹೋವನು ಯಾವ ತಯಾರಿಗಳನ್ನು ಮಾಡುತ್ತಿದ್ದಾನೆ?
17 ಹೌದು, ಮಹಾ ಸಮೂಹವು ಭಯಪಡುವ ಅವಶ್ಯವಿಲ್ಲ! ಯೆಹೋವನು ಅವರಿಗೆ ಯಥೇಷ್ಟವಾದ ತಯಾರಿಗಳನ್ನು ಮಾಡಿದ್ದಾನೆ. ಈ ಕೊನೆಯ ದಿವಸಗಳಲ್ಲಿ ಭೂಮಿಯ ಮೇಲೆ ಒಂದು ಅತಿ ಪ್ರಾಮುಖ್ಯ ವಿಕಸನವು ಅಭಿಷಿಕ್ತರ ಒಟ್ಟುಗೂಡಿಸುವಿಕೆ ಮತ್ತು ಮುದ್ರೆಹಾಕಿಸುವಿಕೆಯಾಗಿದೆ. (ಪ್ರಕಟನೆ 7:3) ಆದರೂ, ಇದು ಮಾಡಲ್ಪಡುವುದನ್ನು ನೋಡಿಕೊಳ್ಳುವಾಗ, ಯೆಹೋವನು ಬೇರೆ ಕುರಿಗಳನ್ನು ಒಂದು ಪುನಸ್ಸಾಪ್ಥಿತ ಆತ್ಮಿಕ ದೇಶದಲ್ಲಿ ಅವರೊಂದಿಗೆ ಜೊತೆಗೂಡಿಸಿದ್ದಾನೆ. ಅಲ್ಲಿ ಅವರನ್ನು ಆತ್ಮಿಕ ರೀತಿಯಲ್ಲಿ ಉಣಿಸಿ ಅವರಿಗೆ ಕ್ರೈಸ್ತ ಜೀವಿತದ ತರಬೇತನ್ನು ಕೊಡಲಾಗಿದೆ. ಇದಲ್ಲದೆ, ಅವರು ಮೇಲ್ವಿಚಾರಣೆಯನ್ನು ಸೇರಿಸಿ, ಪವಿತ್ರ ಸೇವೆಯಲ್ಲಿ ಸುಶಿಕ್ಷಿತರಾಗಿದ್ದಾರೆ. ಇದಕ್ಕಾಗಿ ಅವರು ಯೆಹೋವನಿಗೂ ತಮ್ಮ ಅಭಿಷಿಕ್ತ ಸಹೋದರರಿಗೂ ಹೃತ್ಪೂರ್ವಕವಾಗಿ ಕೃತಜ್ಞರು.
18. ಯಾವ ಸಂಭವಗಳ ಮಧ್ಯ ಬೇರೆ ಕುರಿಗಳು ಆತ್ಮಿಕ ಇಸ್ರಾಯೇಲಿನ “ದೇಶ”ದಲ್ಲಿ ನಿಷ್ಠೆಯಿಂದ ಉಳಿಯುವರು?
18 ಮಾಗೋಗಿನ ಗೋಗನು ದೇವಜನರ ಮೇಲೆ ತನ್ನ ಅಂತಿಮ ಆಕ್ರಮಣವನ್ನು ಮಾಡುವಾಗ, ಬೇರೆ ಕುರಿಗಳು ಅಭಿಷಿಕ್ತ ಉಳಿಕೆಯವರೊಂದಿಗೆ, “ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿಗಳು ತುಂಬಿದ ದೇಶ” ದಲ್ಲಿ ದೃಢವಾಗಿ ನಿಲ್ಲುವರು. ಅವರು ಜನಾಂಗಗಳ ನಾಶನವನ್ನು ಪಾರಾಗಿ ದೇವರ ನೂತನ ಲೋಕದೊಳಗೆ ಪ್ರವೇಶಿಸುವಾಗ ಬೇರೆ ಕುರಿಗಳು ಇನ್ನೂ ಆ “ದೇಶ” ದಲ್ಲಿರುವರು. (ಯೆಹೆಜ್ಕೇಲ 38:11; 39:12, 13; ದಾನಿಯೇಲ 12:1; ಪ್ರಕಟನೆ 7:9, 14) ನಂಬಿಗಸ್ತರಾಗಿ ಮುಂದುವರಿಯುವಲ್ಲಿ, ಅವರಿಗೆ ಆ ಆಹ್ಲಾದಕರವಾದ ಸ್ಥಳವನ್ನು ಎಂದಿಗೂ ಬಿಟ್ಟುಹೋಗಬೇಕಾಗಿರದು.—ಯೆಶಾಯ 11:9.
19, 20. (ಎ)ನೂತನ ಲೋಕದಲ್ಲಿ “ದೇಶ”ದ ನಿವಾಸಿಗಳು ಯಾವ ಮಹಾ ಮೇಲ್ವಿಚಾರಣೆಯಲ್ಲಿ ಆನಂದಿಸುವರು? (ಬಿ) ಮಹಾ ಹಾತೊರೆಯುವಿಕೆಯಿಂದ ನಾವು ಯಾವುದನ್ನು ಮುನ್ನೋಡುತ್ತೇವೆ?
19 ಪುರಾತನಕಾಲದ ಇಸ್ರಾಯೇಲನ್ನು ಮಾನವ ರಾಜರು ಆಳುತ್ತಿದ್ದರು ಮತ್ತು ಅದಕ್ಕೆ ಲೇವಿಕುಲದ ಯಾಜಕರಿದ್ದರು. ನೂತನ ಜಗತ್ತಿನಲ್ಲಿ, ಕ್ರೈಸ್ತರಿಗೆ ಹೆಚ್ಚು ಮಹತ್ವದ ಮೇಲ್ವಿಚಾರಣೆಯಿರುವುದು: ಯೆಹೋವ ದೇವರ ಕೆಳಗೆ ಅವರು ಮಹಾ ಮುಖ್ಯ ಯಾಜಕ ಮತ್ತು ಅರಸ ಯೇಸು ಕ್ರಿಸ್ತನಿಗೆ ಮತ್ತು ಮೊದಲು ಯಾರಲ್ಲಿ ಕೆಲವರು ಭೂಮಿಯಲ್ಲಿ ತಮ್ಮ ಕ್ರೈಸ್ತ ಸೋದರಸೋದರಿಯರಾಗಿ ತಮಗೆ ಪರಿಚಿತರಾಗಿದ್ದರೋ ಆ 1,44,000 ಮಂದಿ ಜೊತೆ ಯಾಜಕರು ಮತ್ತು ರಾಜರುಗಳಿಗೆ ಅಧೀನರಾಗಿರುವರು. (ಪ್ರಕಟನೆ 21:1) ಆ ಆತ್ಮಿಕ ದೇಶದ ನಂಬಿಗಸ್ತ ನಿವಾಸಿಗಳು, ಪದಶಃ ಪ್ರಮೋದವನವಾಗಿರುವ ಪುನಸ್ಸಾಪ್ಥಿತ ಭೂಮಿಯಲ್ಲಿ, ಹೊಸ ಯೆರೂಸಲೇಮಿನ ಮೂಲಕ ಪ್ರವಹಿಸುವ ವಾಸಿಮಾಡುವ ಆಶೀರ್ವಾದಗಳಲ್ಲಿ ಆನಂದಿಸುತ್ತಾ ಜೀವಿಸುವರು.—ಯೆಶಾಯ 32:1; ಪ್ರಕಟನೆ 21:2; 22:1, 2.
20 ಯೆಹೋವನ ಉದ್ದೇಶಗಳನ್ನು ನೆರವೇರಿಸಲು ಆತನ ಮಹಾ ದಿವ್ಯರಥವು ನಿಲ್ಲಿಸಲಾಗದ್ದಾಗಿ ಮುಂದೆ ಹೋಗುವಾಗ, ನಮಗೆ ನೇಮಕವಾದ ಭಾಗವನ್ನು ನೆರವೇರಿಸಲು ನಾವೆಲ್ಲರೂ ಮಹಾ ನಿರೀಕ್ಷಣೆಯಿಂದ ಮುನ್ನೋಡುತ್ತೇವೆ. (ಯೆಹೆಜ್ಕೇಲ 1:1-28) ಆ ಉದ್ದೇಶಗಳು ಕೊನೆಯದಾಗಿ ನೆರವೇರುವಾಗ, ಯೆಹೋವನ ವಿಜಯೋತ್ಸವದ ಪವಿತ್ರೀಕರಣವನ್ನು ಎಂತಹ ಆನಂದದಿಂದ ಆಚರಿಸಲಾಗುವುದೆಂದು ಭಾವಿಸಿರಿ! ಪ್ರಕಟನೆ 5:13 ರಲ್ಲಿ ದಾಖಲಿಸಲಾದ ಆ ಬಲವಾದ ಆನಂದ ಗೀತೆಯು ಆಗ ಸಕಲ ಸೃಷ್ಟಿಯಿಂದ ಹಾಡಲ್ಪಡುವುದು: “ಸಿಂಹಾಸನಾಸೀನನಿಗೂ ಯಜ್ಞದ ಕುರಿಯಾದಾತನಿಗೂ ಸ್ತೋತ್ರ ಮಾನ ಪ್ರಭಾವ ಅಧಿಪತ್ಯಗಳು ಯುಗಯುಗಾಂತರಗಳಲ್ಲಿಯೂ ಇರಲಿ”! ನಮ್ಮ ಸ್ಥಳವು ಸ್ವರ್ಗದಲ್ಲಿರಲಿ, ಭೂಮಿಯಲ್ಲಿರಲಿ, ನಮ್ಮ ಸರ್ವಗಳನ್ನು ಆ ಘನವಾದ ಸುತ್ತಿಯ ಮೇಳ ಗೀತೆಯಲ್ಲಿ ಸೇರಿಸಲಿಕ್ಕಾಗಿ ಅಲ್ಲಿರಲು ನಾವು ಹಾತೊರೆಯುವುದಿಲವ್ಲೆ?
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್., ಇವರಿಂದ 1953 ರಲ್ಲಿ ಪ್ರಕಾಶಿತ, “ನ್ಯೂ ಹೆವನ್ಸ್ ಆ್ಯಂಡ್ ಎ ನ್ಯೂ ಅರ್ತ್,” ಪುಟಗಳು 322-3 ನೋಡಿ.
b ಇದರ ಪೂರ್ತ ಚರ್ಚೆಗಾಗಿ, ಎಪ್ರಿಲ್ 15, 1992ರ ದ ವಾಚ್ಟವರ್ ಸಂಚಿಕೆಯ, “ಯೆಹೋವನ ಏರ್ಪಾಡು, ‘ಕೊಡಲ್ಪಟ್ಟವರು,’” ಎಂಬ ಲೇಖನ ನೋಡಿ.
c ಮಾನವ ಕುಲಕ್ಕೆ ಪುನಪ್ಥಿಸಲ್ಪಟ್ಟ ಪ್ರಮೋದವನ—ದೇವಪ್ರಭುತ್ವದಿಂದ! (ಇಂಗ್ಲಿಷ್) ಎಂಬ 1972 ರಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇನ್ಕ್., ಪ್ರಕಾಶಿತ ಪುಸ್ತಕದ 264-9 ಪುಟಗಳನ್ನು ನೋಡಿ.
d ಹೀಬ್ರು: ರಾಶೇ ಅಲ್ಫೆ ಯಿಸ್ರಯೆಲ್, ಎಂಬುದು ಸೆಪುವ್ಟಜಿಂ ನಲ್ಲಿ ಕಿಲಿಆರ್ಕೊಯಿ ಇಸ್ರಾಯೇಲ್ “ಇಸ್ರಾಯೇಲಿನ ಕಿಲಿಯಾರ್ಕ್ಗಳು” ಎಂದು ಭಾಷಾಂತರಿತವಾಗಿದೆ.
e “ನಾನೇ ಯೆಹೋವನು ಎಂದು ಜನಾಂಗಗಳು ತಿಳಿಯುವರು”—ಹೇಗೆ?, (ಇಂಗ್ಲಿಷ್) ಎಂಬ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್., ಇವರಿಂದ1971 ರಲ್ಲಿ ಪ್ರಕಾಶಿತ, ಪುಟಗಳು 401-7 ನೋಡಿ.
ನೀವು ಹೇಗೆ ಉತ್ತರಿಸುತ್ತೀರಿ?
◻ 1919 ರಲ್ಲಿ ಯಾವ “ದೇಶ” ಪುನಸ್ಸಾಪ್ಥಿತವಾಯಿತು, ಮತ್ತು ಅದು ಹೇಗೆ ನಿವಾಸಿಗಳಿಂದ ತುಂಬಿಸಲ್ಪಟ್ಟಿತು?
◻ ದೇವರ ಪುನಸ್ಸಾಪ್ಥಿತ ಜನರ “ದೇಶ” ದಲ್ಲಿ ಬೇರೆ ಕುರಿಗಳಿಗೆ ಹೇಗೆ ಹೆಚ್ಚಿಕೆಯ ಜವಾಬ್ದಾರಿಕೆಗಳು ಕೊಡಲ್ಪಟ್ಟಿವೆ?
◻ ಮಹಾ ಸಮೂಹದ ಸದಸ್ಯರು “ಯೆಬೂಸಿಯರ ಹಾಗೆ” ಇರುವುದು ಯಾವ ವಿಧದಲ್ಲಿ? “ಯೆಹೂದದಲ್ಲಿ ಕುಲಪಾಲಕನಂತೆ” ಇರುವುದು ಯಾವ ವಿಧದಲ್ಲಿ?
◻ ನಂಬಿಗಸ್ತ ಬೇರೆ ಕುರಿಗಳು “ದೇಶ” ದಲ್ಲಿ ಎಷ್ಟು ಕಾಲ ಇರುವರು?
[ಪುಟ 23 ರಲ್ಲಿರುವ ಚಿತ್ರ]
ಆಧುನಿಕ ಫಿಲಿಷ್ಟಿಯನು “ಯೆಹೂದದಲ್ಲಿ ಕುಲಪಾಲಕನಂತಿರುವನು”
[ಪುಟ 24 ರಲ್ಲಿರುವ ಚಿತ್ರಗಳು]
ಅಭಿಷಿಕ್ತರೂ ಬೇರೆ ಕುರಿಗಳೂ ಆತ್ಮಿಕ ದೇಶದಲ್ಲಿ ಒಡಗೂಡಿ ಸೇವೆಮಾಡುತ್ತಾರೆ