ಗಿಲ್ಯಾದ್ ಪದವೀಧರರು—“ನಿಜವಾದ ಮಿಷನೆರಿಗಳು!”
“ಒಬ್ಬ ಮಿಷನೆರಿಯೆಂದರೇನು?” ಹತ್ತಿರಹತ್ತಿರ ನಾಲ್ಕು ದಶಕಗಳ ಹಿಂದೆ ಒಂದು ವಾರ್ತಾಪತ್ರಿಕೆಯ ಸಂಪಾದಕೀಯವು ಆ ಪ್ರಶ್ನೆಯನ್ನು ಮುಂದಿಟ್ಟಿತ್ತು. ನಿಜವಾದ ಮಿಷನೆರಿಗಳು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯ ಸಾಧನಗಳಾಗಿದ್ದಾರೆಂದು ಲೇಖಕನು ವಾದಿಸಿದನು. ಆದಾಗಲೂ, ಮಾರ್ಚ್ 5, 1995, ಆದಿತ್ಯವಾರದಂದು, ಯೆಹೋವನ ಸಾಕ್ಷಿಗಳ ಜರ್ಸಿ ಸಿಟಿ ಎಸೆಂಬ್ಲಿ ಹಾಲ್ನಲ್ಲಿ, ಒಂದು ತೀರ ಭಿನ್ನವಾದ ರೀತಿಯ ಉತ್ತರವು ಅರ್ಥವತಾಗ್ತಿ ಕೊಡಲ್ಪಟ್ಟಿತ್ತು. ಸಂದರ್ಭವು ಯಾವುದಾಗಿತ್ತು? ಲೋಕದ ಎಲ್ಲಾ ಭಾಗಗಳಿಗೂ ಮಿಷನೆರಿಗಳನ್ನು ಕಳುಹಿಸಿರುವ ಒಂದು ಶಾಲೆಯಾಗಿರುವ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 98 ನೆಯ ತರಗತಿಯ ಪದವಿ ಪ್ರಾಪ್ತಿಯ ದಿನ!
ಆರಂಭದ ಸಂಗೀತ ಮತ್ತು ಪ್ರಾರ್ಥನೆಯ ನಂತರ, ಆಡಳಿತ ಮಂಡಳಿಯ ಆಲ್ಬರ್ಟ್ ಡಿ. ಶ್ರೋಡರ್ ಉಪಸ್ಥಿತರಾಗಿದ್ದ ಎಲ್ಲಾ 6,430 ಮಂದಿಯನ್ನು ಹೃದಯೋಲ್ಲಾಸದಿಂದ ಸ್ವಾಗತಿಸಿದರು. ತಮ್ಮ ಪೀಠಿಕಾ ಹೇಳಿಕೆಗಳಲ್ಲಿ, ಗಿಲ್ಯಾದ್ ಪದವೀಧರರು ಮಿಷನೆರಿಗಳೆಂದು ತಮ್ಮನ್ನು ಕರೆದುಕೊಳ್ಳುವ ಇತರರಿಂದ ಯಾಕೆ ಭಿನ್ನರಾಗಿದ್ದಾರೆಂದು ಸಹೋದರ ಶ್ರೋಡರ್ ಸ್ಪಷ್ಟಪಡಿಸಿದರು. ಅವರಂದದ್ದು: “ಗಿಲ್ಯಾದಿನ ಮುಖ್ಯ ಪಠ್ಯಪುಸ್ತಕವು ಬೈಬಲ್ ಆಗಿರುತ್ತದೆ.” ಗಿಲ್ಯಾದಿನ ಪದವೀಧರರು ಸಮಾಜ ಕಾರ್ಯಕರ್ತರಲ್ಲ, ಬದಲಾಗಿ ದೇವರ ವಾಕ್ಯದ ಶಿಕ್ಷಕರಾಗಿರಲು ತರಬೇತುಗೊಳಿಸಲ್ಪಡುತ್ತಾರೆ. ಈ ರೀತಿಯಲ್ಲಿ ಅವರು ವಿದೇಶೀ ಕ್ಷೇತ್ರಗಳಲ್ಲಿರುವ ಜನರ ಆತ್ಮಿಕ ಅಗತ್ಯಗಳನ್ನು ಪರಾಮರಿಸಲು ಅಪೂರ್ವವಾಗಿ ಅರ್ಹರಾಗಿರುತ್ತಾರೆ.
ಗಿಲ್ಯಾದ್ ಪದವೀಧರರು “ನಿಜವಾದ” ಮಿಷನೆರಿಗಳಾಗಿರುವದಕ್ಕೆ ರುಜುವಾತನ್ನು ಕೊಡುವ ಇನ್ನೂ ಹಲವಾರು ಕ್ಷೇತ್ರಗಳ ಕುರಿತಾಗಿ ಮುಂದಿನ ಭಾಷಣಕರ್ತರು ಚರ್ಚಿಸಿದರು. “ಮಿಷನೆರಿಗಳೋಪಾದಿ ಒಳ್ಳೆಯ ಫಲವನ್ನು ಕೊಡುತ್ತಾ ಮುಂದುವರಿಯಿರಿ” ಎಂಬ ವಿಷಯದ ಮೇಲೆ ಚಾರ್ಲ್ಸ್ ಮಾಲಹ್ಯಾನ್ ಅವರೊಂದಿಗೆ ಮಾತಾಡಿದರು. ಕೊಲೊಸ್ಸೆ 1:9, 10 ರಲ್ಲಿರುವ ಅಪೊಸ್ತಲ ಪೌಲನ ಮಾತುಗಳನ್ನು ಬಳಸುತ್ತಾ, ಗಿಲ್ಯಾದಿನಲ್ಲಿ ಕಳೆದ ಐದು ತಿಂಗಳುಗಳು, ಅವರು “ದೇವರ ಕುರಿತಾದ ನಿಷ್ಕೃಷ್ಟ ಜ್ಞಾನದಲ್ಲಿ” ವೃದ್ಧಿಸಲು ಸಹಾಯ ಮಾಡಿದವೆಂದು ಸಹೋದರ ಮಾಲಹ್ಯಾನ್ ಪದವೀಧರರಿಗೆ ನೆನಪು ಹುಟ್ಟಿಸಿದರು. ಇದು ಅವರಿಗೆ ಎರಡು ವಿಧಗಳಲ್ಲಿ ಫಲವನ್ನು ಉತ್ಪಾದಿಸುವಂತೆ ಸಹಾಯ ಮಾಡಲಿತ್ತು: ದೇವರ ಆತ್ಮದ ಫಲವನ್ನು ಪ್ರದರ್ಶಿಸುವ ಮೂಲಕ ಮತ್ತು ಇತರರೊಂದಿಗೆ ಬೈಬಲ್ ಸತ್ಯತೆಗಳನ್ನು ಹಂಚುವ ಮೂಲಕ.
ಆಡಳಿತ ಮಂಡಳಿಯ ಡ್ಯಾನಿಯಲ್ ಸಿಡ್ಲಿಕ್, “ನಿಮ್ಮ ಜೀವದೊಂದಿಗೆ ಒಪ್ಪಂದಕ್ಕೆ ಬರಬೇಡಿರಿ” ಎಂಬ ಗಂಭೀರವಾದ ವಿಷಯವನ್ನು ಆಮೇಲೆ ಮಾತಾಡಿದರು. ಅವರು ಯೇಸುವಿನ ಪ್ರಶ್ನೆಯನ್ನು ಪ್ರಸ್ತಾಪಿಸಿದರು: “ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಟ್ಟಾನು?” (ಮತ್ತಾಯ 16:26) ಸಹೋದರ ಸಿಡ್ಲಿಕ್ ಅವಲೋಕಿಸಿದ್ದು: “ಮನುಷ್ಯರು ಒಂದು ಹೆಚ್ಚು ಸುಲಭವಾದ, ಶಾಂತ ಜೀವನ ರೀತಿಗಾಗಿ ತಮ್ಮ ಪ್ರಾಣಗಳನ್ನು ವಿನಿಮಯಮಾಡಿದ್ದಾರೆ.” ಆದಾಗಲೂ, ಸಜೀವ ನಂಬಿಕೆಯುಳ್ಳವರು, ಕಷ್ಟಗಳು ಮತ್ತು ಪರೀಕ್ಷೆಗಳ ಎದುರಿನಲ್ಲಿ ರಾಜಿಯಾಗಲಾರರು. ಒಬ್ಬನ ಆತ್ಮ, ಅಥವಾ ಜೀವವನ್ನು ಪಡೆಯಲು, ಒಬ್ಬನು ‘ಕೊಡಲು’ ಅಂದರೆ ತ್ಯಾಗಮಾಡಲು ಮನಸ್ಸುಳ್ಳವನಾಗಿರಬೇಕೆಂದು ಯೇಸುವಿನ ಮಾತುಗಳು ಸೂಚಿಸುತ್ತವೆ. ಯೆಹೋವನಿಗೆ ತಮ್ಮ ಎಲ್ಲವನ್ನೂ, ತಮ್ಮ ತೀರ ಅತ್ಯುತ್ತಮವಾದದ್ದನ್ನು, ಆತನ ಸೇವೆಯಲ್ಲಿ ಕೊಡಲು ಹೊಸ ಮಿಷನೆರಿಗಳು ಪ್ರಬೋಧಿಸಲ್ಪಟ್ಟರು!
ಮುಂದೆ, ಸರ್ವಿಸ್ ಡಿಪಾರ್ಟ್ಮೆಂಟ್ ಕಮಿಟಿಯ ವಿಲ್ಯಮ್ ವಾನ್ ಡೀ ವಾಲ್ “ಅಪೊಸ್ತಲ ಪೌಲನು—ಅನುಕರಿಸಲು ಅರ್ಹವಾದ ಒಂದು ಮಾದರಿ” ಎಂಬ ವಿಷಯದ ಮೇಲೆ ಮಾತಾಡಿದರು. ಸಹೋದರ ವಾನ್ ಡೀ ವಾಲ್ ವಿವರಿಸಿದ್ದು: “ಪೌಲನು ಪ್ರಥಮ ಶತಮಾನದಲ್ಲಿ ಮಿಷನೆರಿ ಕಾರ್ಯದ ನುಗ್ಗುಮೊನೆಯಾದನು.” ಹಾಗಿರುವಾಗ, ಸೂಕ್ತವಾಗಿಯೇ ಇಂದು ಮಿಷನೆರಿಗಳಿಗಾಗಿ ಅಪೊಸ್ತಲ ಪೌಲನು ಒಂದು ಒಳ್ಳೆಯ ಮಾದರಿಯನ್ನು ಇಟ್ಟ ನಾಲ್ಕು ಕ್ಷೇತ್ರಗಳನ್ನು ಎತ್ತಿತೋರಿಸಲಾಯಿತು: (1) ಜನರಿಗಾಗಿ ಪೌಲನ ಯಥಾರ್ಥ ಚಿಂತೆ ಮತ್ತು ಪ್ರೀತಿ, (2) ಶುಶ್ರೂಷೆಯಲ್ಲಿ ಅವನ ಪರಿಣಾಮಕಾರಿತ್ವ, (3) ತನ್ನನ್ನೇ ಪ್ರವರ್ತಿಸಿಕೊಳ್ಳುವ ಅವನ ನಿರಭಿಮಾನದ ನಿರಾಕರಣೆ, (4) ಯೆಹೋವನಲ್ಲಿ ಅವನ ಪ್ರಶ್ನಾರಹಿತ ಭರವಸೆ.
“ನಿಮ್ಮ ಹೊಸ ನೇಮಕದಲ್ಲಿ ಯೆಹೋವನು ನಿಮ್ಮನ್ನು ಪರೀಕ್ಷಿಸಲಿ” ಎಂಬುದು ಆಡಳಿತ ಮಂಡಳಿಯ ಲೈಮನ್ ಎ. ಸ್ವಿಂಗಲ್ ರವರಿಂದ ಚರ್ಚಿಸಲ್ಪಟ್ಟ ವಿಷಯವಾಗಿತ್ತು. ದಿನದ ವಚನವಾದ ಕೀರ್ತನೆ 139:16ನ್ನು ಉಪಯೋಗಿಸುತ್ತಾ, ಹೊಸ ಮಿಷನೆರಿಗಳಾಗಿ ಅವರು ತಮ್ಮ ನೇಮಕಗಳಲ್ಲಿ ಸಮಸ್ಯೆಗಳನ್ನು ಎದುರಿಸುವರು ಮತ್ತು ಯೆಹೋವನಿಗೆ ಪರಿಹಾರಗಳು ತಿಳಿದಿವೆಯೆಂದು ಸಹೋದರ ಸ್ವಿಂಗಲ್ ಅಂಗೀಕರಿಸಿದರು. “ನಿಮಗೆ ಒಂದು ಸಮಸ್ಯೆಯಿರುವಾಗ ಅವನ ಬಳಿ ಹೋಗಿರಿ, ಅವನೊಂದಿಗೆ ಮಾತಾಡಿರಿ. ಅವನ ಚಿತ್ತವೇನೆಂದು ಗ್ರಹಿಸಲು ಪ್ರಯತ್ನಿಸಿರಿ” ಎಂದು ಅವರು ಪ್ರಬೋಧಿಸಿದರು.
ಆಡಳಿತ ಮಂಡಳಿಯ ಜಾನ್ ಈ. ಬಾರ್ “ನಿಮ್ಮ ನಂಬಿಕೆಯು ಅತಿಶಯವಾಗಿ ಬೆಳೆಯುತ್ತಿದೆ” ಎಂಬ ವಿಷಯದ ಮೇಲೆ ನಂತರ ಮಾತಾಡಿದರು. (2 ಥೆಸಲೊನೀಕ 1:3) ಲೂಕ 17:1 ರಲ್ಲಿ, ಯೇಸು ಹೀಗಂದದ್ದನ್ನು ನಾವು ಓದುತ್ತೇವೆ: “ತೊಡಕುಗಳು ಬಾರದೆ ಇರಲಾರವು.” ಜೊತೆಮಿಷನೆರಿಗಳ ವ್ಯಕ್ತಿತ್ವಗಳಿಂದಾಗಿ ಕೆಲವರು ಎಡವಿ ಬಿದ್ದಿದ್ದಾರೆ. ಆದರೆ ಕ್ಷಮಾಶೀಲರಾಗಿರಲು ಅಗತ್ಯವಿರುವ ನಂಬಿಕೆಯನ್ನು ಹೊಂದಿರಲು ಸಹೋದರ ಬಾರ್ ಮಿಷನೆರಿಗಳನ್ನು ಉತ್ತೇಜಿಸಿದರು. ನಿಶ್ಚಯವಾಗಿಯೂ, ಇದೇ ಪೂರ್ವಾಪರ ಸಂದರ್ಭದಲ್ಲಿ ಯೇಸುವಿನ ಶಿಷ್ಯರು ಹೀಗೆ ಬೇಡಿಕೊಂಡಿದ್ದರು: “ನಮ್ಮ ನಂಬಿಕೆಯನ್ನು ಹೆಚ್ಚಿಸು.” (ಲೂಕ 17:2-5) ಸಂಸ್ಥೆಯ ವಿವಿಧ ಅಳವಡಿಸುವಿಕೆಗಳಿಂದಾಗಿಯೂ ಮಿಷನೆರಿಗಳ ನಂಬಿಕೆಯು ಪರೀಕ್ಷಿಸಲ್ಪಡಬಹುದು. “ಇವುಗಳನ್ನು ಸ್ವೀಕರಿಸುವ ನಂಬಿಕೆ ನಮ್ಮಲ್ಲಿದೆಯೋ ಅಥವಾ ಅವು ಪರ್ವತ ಸದೃಶ ಅಡಚಣೆಗಳಾಗುವವೊ?” ಎಂದು ಸಹೋದರ ಬಾರ್ ಕೇಳಿದರು.
ಅನಂತರ ಇಬ್ಬರು ಗಿಲ್ಯಾದ್ ಶಿಕ್ಷಕರಿಂದ ಸ್ವಲ್ಪ ಬುದ್ಧಿವಾದ ಬಂತು. ಒಂದು ಸಕಾರಾತ್ಮಕ ಮನೋಭಾವವನ್ನು ಕಾಪಾಡಲು ಜ್ಯಾಕ್ ರೆಡ್ಫರ್ಡ್ ಪದವೀಧರರನ್ನು ಉತ್ತೇಜಿಸಿದರು. ಜೊತೆ ಮಿಷನೆರಿಗಳಿಂದ ಸ್ವಲ್ಪ ಕಿರುಕುಳಕ್ಕೆ ಪ್ರತಿವರ್ತನೆಯಾಗಿ ತನ್ನ ನೇಮಕವನ್ನು ಬಿಟ್ಟ ಒಬ್ಬ ಮಿಷನೆರಿಯ ಕುರಿತಾಗಿ ಅವರು ಹೇಳಿದರು. ಆದಾಗಲೂ, ಶಾಸ್ತ್ರಗಳು ನಾವು ಅನಾವಶ್ಯಕವಾಗಿ ಸಿಟ್ಟೇಳುವ ವಿರುದ್ಧ ನಮ್ಮನ್ನು ಎಚ್ಚರಿಸುತ್ತವೆ. (ಪ್ರಸಂಗಿ 7:9) “ಸರಿಯಾದ ಮನೋಭಾವವನ್ನು ಹೊಂದಿರ್ರಿ” ಎಂದು ಅವರು ಪ್ರಬೋಧಿಸಿದರು. “ನಿಮ್ಮ ಸುತ್ತಲಿರುವ ಇತರರ ತಪ್ಪುಗಳು ಮತ್ತು ಅಪರಿಪೂರ್ಣತೆಗಳನ್ನು ಕ್ಷಮಿಸುವವರಾಗಿರಿ.”
ಗಿಲ್ಯಾದ್ ರಿಜಿಸ್ಟ್ರಾರ್ ಯು. ವಿ. ಗ್ಲಾಸ್, ನಂತರ ಕೇಳಿದ್ದು: “‘ಕಾಲ ಮತ್ತು ಮುಂಗಾಣದ ಸಂಭವವನ್ನು’ ನಿಭಾಯಿಸಲು ನೀವು ತಯಾರಾಗಿದ್ದೀರೋ”? (ಪ್ರಸಂಗಿ 9:11, NW) “ನಮ್ಮ ಜೀವನ ನಮೂನೆಯು ಯಾವಾಗಲೂ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ, ಮತ್ತು ಕೆಲವು, ಆಘಾತವನ್ನು ಕೊಡಬಲ್ಲವು” ಎಂದು ಸಹೋದರ ಗ್ಲಾಸ್ ಗಮನಿಸಿದರು. ಕೆಲವು ಮಿಷನೆರಿಗಳು ಕೆಡುತ್ತಿರುವ ಆರೋಗ್ಯ, ರೋಗ, ಮತ್ತು ಕುಟುಂಬ ಸಮಸ್ಯೆಗಳೊಂದಿಗೆ ಅನಿರೀಕ್ಷಿತವಾಗಿ ಎದುರಿಸಲ್ಪಟ್ಟಿದ್ದಾರೆ ಮತ್ತು ತಮ್ಮ ನೇಮಕಗಳನ್ನು ಬಿಟ್ಟುಹೋಗುವಂತೆ ಒತ್ತಾಯಿಸಲ್ಪಟ್ಟಿದ್ದಾರೆ. ಸಹೋದರ ಗ್ಲಾಸ್ ಅಂದದ್ದು: “ಮುಂಗಾಣದ ಸಂಭವವು ಏನೇ ಆಗಿರಲಿ, ಯೆಹೋವನಿಗೆ ಅದರ ಕುರಿತಾಗಿ ಅರಿವಿದೆ ಮತ್ತು ಆತನು ಚಿಂತಿತನಾಗಿದ್ದಾನೆಂದು ನಮಗೆ ತಿಳಿದಿದೆ. ನಮ್ಮ ಭರವಸೆಯನ್ನು ನಾವು ಅವನ ಮೇಲೆ ಹಾಕಿದರೆ, ನಾವು ವಿಜಯಿಗಳಾಗಿ ಹೊರಬರುವೆವೆಂದು ನಮಗೆ ತಿಳಿದಿದೆ!”
“ಮಿಷನೆರಿ ಸೇವೆಗಾಗಿ ಮೀಸಲಾಗಿರಿಸಲ್ಪಟ್ಟಿರುವುದು” ಎಂಬ ಶಿರೋನಾಮವುಳ್ಳ ಭಾಷಣವು ಬೆಳಗ್ಗಿನ ಭಾಷಣಗಳ ಸರಣಿಯನ್ನು ಕೊನೆಗೊಳಿಸಿತು. “ಒಬ್ಬ ಮಿಷನೆರಿಯೆಂದರೇನು?” ಎಂದು ಆರಂಭದಲ್ಲಿ ಎಬ್ಬಿಸಲ್ಪಟ್ಟ ಪ್ರಶ್ನೆಯನ್ನು, ಆಡಳಿತ ಮಂಡಳಿಯ ತೀಯಡೋರ್ ಜರಸ್ ಸಂಬೋಧಿಸಿ ಮಾತಾಡಿದರು. ಉತ್ತರವಾಗಿ, ಅವರು ಪೌಲ ಮತ್ತು ಬಾರ್ನಬರ ಮಿಷನೆರಿ ಕಾರ್ಯದ ಕುರಿತಾಗಿ ಅ. ಕೃತ್ಯಗಳು 13 ಮತ್ತು 14ನೆಯ ಅಧ್ಯಾಯಗಳನ್ನು ಚರ್ಚಿಸಿದರು. ಸ್ಪಷ್ಟವಾಗಿಗಿ, ಆ ಕಾರ್ಯವು, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಮೇಲಲ್ಲ, ಬದಲಾಗಿ ‘ಶುಭಸಮಾಚಾರವನ್ನು ಸಾರುವುದರ’ ಮೇಲೆ ಕೇಂದ್ರೀಕರಿಸಿತು. (ಅ. ಕೃತ್ಯಗಳು 13:32) ಸಹೋದರ ಜರಸ್ ಕೇಳಿದ್ದು: “ಒಬ್ಬ ನಿಜವಾದ ಮಿಷನೆರಿ ಹೇಗಿರಬೇಕೆಂದು ಪೌಲ ಮತ್ತು ಬಾರ್ನಬರು ಪ್ರದರ್ಶಿಸಿದರೆಂದು ನೀವು ಒಪ್ಪುವದಿಲ್ಲವೋ?” ಅನಂತರ, ಒಬ್ಬ ಸೌವಾರ್ತಿಕನಾಗಿ ಹೃದಯೋಲ್ಲಾಸಗೊಳಿಸುವ ತನ್ನ ಸ್ವಂತ ಅನುಭವಗಳನ್ನು ಹಂಚಲು ಮೆಕ್ಸಿಕೊವಿನ ನುರಿತ ಮಿಷನೆರಿ ರಾಬರ್ಟ್ ಟ್ರೇಸಿಯವರನ್ನು ಕೇಳಿಕೊಳ್ಳಲಾಯಿತು.
ಸಹೋದರ ಶ್ರೋಡರ್ 48 ಪದವೀಧರರಿಗೆ ಪದವಿ ಪ್ರಶಸ್ತಿಪತ್ರಗಳನ್ನು ವಿತರಿಸಿದಾಗ ಬೆಳಗ್ಗಿನ ಕಾರ್ಯಕ್ರಮವು ತನ್ನ ಪರಮಾವಧಿಯನ್ನು ತಲಪಿತು. ಮಿಷನೆರಿಗಳು ನೇಮಿಸಲ್ಪಟ್ಟಿದ್ದ 21 ದೇಶಗಳ ಹೆಸರುಗಳನ್ನು ಕೇಳಲು ಸಭಿಕರು ರೋಮಾಂಚನಗೊಂಡರು: ಈಕಟ್ವೋರಿಯಲ್ ಗಿನಿ, ಎಕಡ್ವಾರ್, ಎಸ್ಟೋನಿಯ, ಕೊಸ್ಟರೀಕ, ಕೋಟ್ಡೀವಾರ್, ಗಿನೀ-ಬಿಸೊ, ನಿಕರಾಗುವ, ಟೈವಾನ್, ಪೆರು, ಪ್ಯಾರಗ್ವೈ, ಬಾರ್ಬೇಡಸ್, ಬೆನಿನ್, ಬೊಲಿವಿಯ, ಮೊರೀಷಿಯಸ್, ಮೊಸಾಂಬೀಕ್, ಲೀವರ್ಡ್ ಐಲೆಂಡ್ಸ್, ಲ್ಯಾಟ್ವಿಯ, ವೆನಿಸ್ವೇಲ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಸೆನಿಗಲ್ ಮತ್ತು ಹೊಂಡ್ಯುರಸ್.
ಮಧ್ಯಾಹ್ನದ ಊಟಕ್ಕಾಗಿದ್ದ ವಿರಾಮದ ನಂತರ, ಸಭಿಕರು ಪುನಃ ಒಟ್ಟುಗೂಡಿದರು ಮತ್ತು ಸರ್ವಿಸ್ ಡಿಪಾರ್ಟ್ಮೆಂಟಿನ ರಾಬರ್ಟ್ ಪಿ. ಜಾನ್ಸನ್ರಿಂದ ನಡಿಸಲ್ಪಟ್ಟ ಕಾವಲಿನಬುರುಜು ವಿನ ಒಂದು ಸಾರ್ವಸ್ಯಕರ ಅಭ್ಯಾಸವನ್ನು ಆನಂದಿಸಿದರು. 98 ನೆಯ ತರಗತಿಯ ಸದಸ್ಯರು ಪ್ರಶ್ನೆಗಳನ್ನು ಉತ್ತರಿಸಿದರು. ಗಿಲ್ಯಾದ್ ಸಿಬ್ಬಂದಿ ವರ್ಗದ ಸದಸ್ಯರಿಂದ ನಡಿಸಲ್ಪಟ್ಟ ಸಂದರ್ಶನಗಳ ಒಂದು ಹರ್ಷದಾಯಕ ಸರಣಿಗಳಿಂದ ಇದು ಹಿಂಬಾಲಿಸಲ್ಪಟ್ಟಿತು. ಪದವೀಧರರು ಕ್ಷೇತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಮತ್ತು ತಮ್ಮ ವಿದೇಶೀ ನೇಮಕಗಳ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ಸಭಿಕರು ಮಹತ್ತಾಗಿ ಪ್ರೋತ್ಸಾಹಿಸಲ್ಪಟ್ಟರು.
ಆರುವರೆ ವರ್ಷಗಳಿಗೆ ಗಿಲ್ಯಾದ್, ನ್ಯೂ ಯಾರ್ಕಿನ ವಾಲ್ಕಿಲ್ನಲ್ಲಿರುವ ವಾಚ್ಟವರ್ ಸೊಸೈಟಿಯ ಸೌಕರ್ಯಗಳಲ್ಲಿ ನೆಲೆಸಿತ್ತು. ಆದಾಗಲೂ, ಎಪ್ರಿಲ್ 1995 ರಲ್ಲಿ, ಶಾಲೆಯನ್ನು ನ್ಯೂ ಯಾರ್ಕಿನ ಪ್ಯಾಟರ್ಸನ್ನಲ್ಲಿರುವ ಹೊಸ ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ಗೆ ಸ್ಥಳಾಂತರಿಸಲಾಯಿತು. ವಾಲ್ಕಿಲ್ನಲ್ಲಿದ್ದ ಬೆತೆಲ್ ಕುಟುಂಬಕ್ಕೆ ಈ ಬದಲಾವಣೆಯ ಕುರಿತಾಗಿ ಹೇಗನಿಸಿತು? ಈ ಪದವಿ ವಿತರಣಾ ಕಾರ್ಯಕ್ರಮದಲ್ಲಿ ವಾಲ್ಕಿಲ್ನಿಂದ ಅನೇಕರನ್ನು ಸಂದರ್ಶಿಸಲಾಯಿತು. ಅವರ ಮನಮುಟ್ಟುವ ಅಭಿವ್ಯಕ್ತಿಗಳು, ಗಿಲ್ಯಾದ್ ಪದವೀಧರರು ಅವರ ಮೇಲೆ ಒಂದು ಶಾಶ್ವತ ಪ್ರಭಾವವನ್ನು ಬೀರಿದ್ದಾರೆಂದು ವ್ಯಕ್ತಪಡಿಸಿದವು. ಸ್ಪಷ್ಟವಾಗಿಗಿ, ನಮ್ರರು, ಸ್ವ-ತ್ಯಾಗಿಗಳು, ಇತರರಿಗೆ ಸಹಾಯ ಮಾಡುವ ಕುರಿತಾಗಿ ಆಳವಾಗಿ ಚಿಂತಿತರಾದ, ಈ ಸಿದ್ಧಮನಸ್ಸಿನ ಪುರುಷರು ಮತ್ತು ಸ್ತ್ರೀಯರು ನಿಜವಾದ ಮಿಷನೆರಿಗಳಾಗಿದ್ದಾರೆ.
ಪದವಿ ಪ್ರಾಪ್ತಿ ಕಾರ್ಯಕ್ರಮವು ಮುಕ್ತಾಯಗೊಂಡಾಗ, ಗಿಲ್ಯಾದ್ ಶಾಲೆಯು 50 ವರ್ಷಗಳಿಂದ ಏನನ್ನು ಮಾಡಿದೆಯೋ ಅದನ್ನು—ನಿಜವಾದ ಮಿಷನೆರಿಗಳನ್ನು ಉತ್ಪಾದಿಸುವದನ್ನು—ಯಶಸ್ವಿಯಾಗಿ ಮುಂದುವರಿಸುವುದೆಂದು ಉಪಸ್ಥಿತರಿದ್ದವರೆಲ್ಲರೂ ಭರವಸೆಯಿಂದಿದ್ದರು!
[ಪುಟ 18 ರಲ್ಲಿರುವ ಚೌಕ]
ತರಗತಿಯ ಅಂಕಿ ಅಂಶಗಳು:
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 8
ನೇಮಿಸಲ್ಪಟ್ಟಿರುವ ದೇಶಗಳ ಸಂಖ್ಯೆ: 21
ವಿದ್ಯಾರ್ಥಿಗಳ ಸಂಖ್ಯೆ: 48
ಸರಾಸರಿ ವಯಸ್ಸು: 32.72
ಸತ್ಯದಲ್ಲಿ ಸರಾಸರಿ ವರ್ಷಗಳು: 15.48
ಪೂರ್ಣ ಸಮಯದ ಸೇವೆಯಲ್ಲಿ ಸರಾಸರಿ ವರ್ಷಗಳು: 10.91
[ಪುಟ 18 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವಿ ಪಡೆದ 98 ನೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳನ್ನು ಮುಂದಿನಿಂದ ಹಿಂದಕ್ಕೆ ಲೆಕ್ಕಿಸಲಾಗಿದ್ದು, ಹೆಸರುಗಳು ಪ್ರತಿ ಸಾಲಿನಲ್ಲಿ ಎಡದಿಂದ ಬಲಕ್ಕೆ ಕೊಡಲ್ಪಟ್ಟಿವೆ.
(1) ಎಸ್ಲಿಂಗರ್, ಎ.; ಮ್ಯಾನ್, ಟಿ.; ರಿವೇರಾ, ಜಿ.; ಬಾರೆರ್ಮೊ, ಎಮ್.; ವಾಸ್, ಎಮ್.; ದುರ್ಗಾ, ಕೆ.; ಸಿಲ್ವರಕ್ಸ್, ಎಚ್.; ಅಲ್ವರಾಡೊ, ಡಿ. (2) ಟೋತ್, ಬಿ.; ಸೆಗಾರಾ, ಎಸ್.; ಹಾರ್ಟ್, ಆರ್.; ರೊರಾಕ್, ಐ.; ಎಸ್ಕೊಬಾರ್, ಪಿ.; ಐಸ್ಟ್ರಪ್, ಜೆ.; ಸ್ಲೈ, ಎಲ್.; ರಿವೇರಾ, ಈ. (3) ಆರ್ಚಾರ್ಡ್, ಡಿ.; ಸ್ನೇತ್, ಎಸ್.; ಮಾರ್ಸೀಎಲ್, ಪಿ.; ಕೊಲ್ಯನನ್, ಡಿ.; ವಾಡೆಲ್, ಎಸ್; ಬ್ಲ್ಯಾಕ್ಬರ್ನ್, ಎಲ್.; ಎಸ್ಕೊಬಾರ್, ಎಮ್.; ಆರ್ಚಾರ್ಡ್, ಕೆ. (4) ಹಾರ್ಟ್, ಎಮ್.; ಟೋತ್, ಎಸ್.; ಕೊಲ್ಯನನ್, ಜೆ.; ಬೆರ್ಯಮ್ಯಾನ್, ಎಚ್.; ಮ್ಯಾನ್, ಡಿ.; ಬ್ಲ್ಯಾಕ್ಬರ್ನ್, ಜೆ.; ಪಾರ್ಕ್, ಡಿ.; ವಾಸ್, ಎಫ್. (5) ಸೆಗಾರಾ, ಎಸ್.; ಸ್ಲೈ, ಎಲ್.; ಲೆಸ್ಲಿ, ಎಲ್.; ಬೆರ್ಯಮ್ಯಾನ್, ಬಿ.; ಬಾರೆರ್ಮೊ, ಡಬ್ಲ್ಯು.; ಅಲ್ವರಾಡೊ, ಜೆ.; ಲೆಸ್ಲಿ, ಡಿ.; ಪಾರ್ಕ್, ಡಿ. (6) ಸಿಲ್ವರಕ್ಸ್, ಕೆ.; ಎಸ್ಲಿಂಗರ್, ಆರ್.; ವಾಡೆಲ್, ಜೆ.; ಸ್ನೇತ್, ಕೆ.; ದುರ್ಗಾ, ಎ.; ರೊರಾಕ್, ಎಫ್.; ಐಸ್ಟ್ರಪ್, ಸಿ.; ಮಾರ್ಸೀಎಲ್, ಡಿ.