ಧರ್ಮ—ಒಂದು ನಿಷಿದ್ಧ ವಿಷಯವೂ?
“ನಾನು ಎಂದೂ ಚರ್ಚಿಸದಿರುವ ಎರಡು ವಿಷಯಗಳಿವೆ: ಧರ್ಮ ಮತ್ತು ರಾಜಕೀಯ!” ಯೆಹೋವನ ಸಾಕ್ಷಿಗಳು ಇತರರೊಂದಿಗೆ ಬೈಬಲಿನ ಕುರಿತಾಗಿ ಮಾತಾಡುವಾಗ ಪದೇ ಪದೇ ಬರುವಂತಹ ಒಂದು ಪ್ರತಿಕ್ರಿಯೆ ಅದಾಗಿದೆ. ಮತ್ತು ಆ ದೃಷ್ಟಿಕೋನವು ಗ್ರಾಹ್ಯವಾದದ್ದು.
ಜನರು ರಾಜಕೀಯವನ್ನು ಚರ್ಚಿಸುವಾಗ, ಕೋಪವು ಕೆರಳಬಹುದು ಮತ್ತು ಜಗಳವು ಪರಿಣಮಿಸಬಹುದು. ಅನೇಕರು ಅರ್ಥರಹಿತವಾದ ವಾಗ್ದಾನಗಳಿಂದ ವಂಚಿಸಲ್ಪಡುವದಿಲ್ಲ ಮತ್ತು ರಾಜಕಾರಣಿಗಳು ಹೆಚ್ಚಾಗಿ ಕೇವಲ ಅಧಿಕಾರ, ಖ್ಯಾತಿ, ಮತ್ತು ಹಣವನ್ನು ಹುಡುಕುತ್ತಿದ್ದಾರೆಂಬದನ್ನು ಗ್ರಹಿಸುತ್ತಾರೆ. ಅಸಂತೋಷಕರವಾಗಿ, ರಾಜಕೀಯ ಭಿನ್ನತೆಗಳು ಕೆಲವೊಮ್ಮೆ ಹಿಂಸೆಗೆ ನಡೆಸುತ್ತವೆ.
‘ಆದರೆ, ಧರ್ಮದ ವಿಷಯದಲ್ಲೂ ಇದು ಸತ್ಯವಾಗಿದೆಯಲ್ಲವೋ? ಧಾರ್ಮಿಕ ಹುರುಪು ಸದ್ಯದ ದಿನದ ಅನೇಕ ಕಲಹಗಳನ್ನು ಹೊತ್ತಿಸಿಲ್ಲವೋ?’ ಎಂದು ನೀವು ತರ್ಕಿಸಬಹುದು. ಉತ್ತರ ಐರ್ಲಂಡ್‌ನಲ್ಲಿ, ರೋಮನ್ ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರು ಬಹು ಸಮಯದಿಂದ ಒಬ್ಬರಿನ್ನೊಬ್ಬರ ವಿರುದ್ಧ ಹೋರಾಡಿದ್ದಾರೆ. ಬಾಲ್ಕನ್ ರಾಜ್ಯಗಳಲ್ಲಿ, ಈಸರ್ನ್ಟ್ ಆರ್ತೊಡಾಕ್ಸ್ ಚರ್ಚಿನ ಸದಸ್ಯರು, ರೋಮನ್ ಕ್ಯಾತೊಲಿಕರು, ಮತ್ತು ಇತರರು ಭೂಪ್ರದೇಶಕ್ಕಾಗಿ ಹೋರಾಡುತ್ತಿದ್ದಾರೆ. ಪರಿಣಾಮವೇನು? ಘೋರಕೃತ್ಯಗಳು ಮತ್ತು ಮುಂದುವರಿದ ಹಗೆಸಾಧನೆಯೇ.
ಮರಣದ ಬೆದರಿಕೆಯೊಂದಿಗೆ ಎದುರಿಸಲ್ಪಟ್ಟು, ಅನೇಕರು ತಮ್ಮ ಮತ್ತು ತಮ್ಮ ಕುಟುಂಬಗಳ ವೈಯಕ್ತಿಕ ನಂಬಿಕೆಗಳನ್ನು ಬಚ್ಚಿಡಲು ಪ್ರಯತ್ನಿಸುತ್ತಾರೆ. ಆಫ್ರಿಕದಲ್ಲಿ, ಕ್ರೈಸ್ತಪ್ರಪಂಚದ ಜನರು, ಮತ್ತು ಇತರ ವಿದೇಶೀ ಹಾಗೂ ಕುಲಸಂಬಂಧವಾದ ಧರ್ಮಾವಲಂಬಿಗಳ ನಡುವೆ ಶತಮಾನಗಳಿಂದ ಧಾರ್ಮಿಕ ವೈರವು, ಹೆತ್ತವರು ತಮ್ಮ ಮಕ್ಕಳಿಗೆ ಸ್ಪಲ್ಪ ಮಟ್ಟದ ಸುರಕ್ಷೆಯನ್ನು ಕೊಡಬಹುದಾದಂತಹ ಎರಡು ಹೆಸರುಗಳನ್ನು ಕೊಡುವಂತೆ ಪ್ರಚೋದಿಸಿದೆ, ಮತ್ತು ಆ ಪದ್ಧತಿಯು ಇಂದು ಸಹ ದೃಢವಾಗಿ ನಿಂತಿದೆ. ಹೀಗೆ, ಒಬ್ಬ ಎಳೆಯ ಹುಡುಗನು, ಒಂದೇ ಹೆಸರನ್ನು ಉಪಯೋಗಿಸಿ ಇನ್ನೊಂದನ್ನು ಉಪಯೋಗಿಸದೆ ಒಬ್ಬ ಚರ್ಚು ಸದಸ್ಯನಾಗಿ ಅಥವಾ ಇನ್ನೊಂದು ಧರ್ಮದವನೆಂದು ಹೇಳಿಕೊಳ್ಳುತ್ತಾ ತನ್ನನ್ನು ಸಾದರಪಡಿಸಬಲ್ಲನು. ವ್ಯಕ್ತಿಯೊಬ್ಬನ ಧಾರ್ಮಿಕ ನಂಬಿಕೆಗಳು ಆತನ ಜೀವ ನಷ್ಟವನ್ನು ಮಾಡಬಲ್ಲವಾದರೆ, ಆತನು ತನ್ನ ಧರ್ಮವನ್ನು ಬಹಿರಂಗವಾಗಿ ಚರ್ಚಿಸಲು ಹಿಂಜರಿಯುವುದು ಆಶ್ಚರ್ಯಜನಕವಲ್ಲ.
ಇತರರಿಗೆ, ಅವರ ಜೀವಗಳು ಬೆದರಿಸಲ್ಪಡದಿದ್ದರೂ, ಧರ್ಮವು ಒಂದು ನಿಷಿದ್ಧ ವಿಷಯವಾಗಿದೆ. ತಮ್ಮ ನಂಬಿಕೆಗಳ ಕುರಿತಾಗಿ ಭಿನ್ನ ನಂಬಿಕೆಯ ಒಬ್ಬ ವ್ಯಕ್ತಿಯೊಂದಿಗೆ ಮಾತಾಡುವುದು ಒಂದು ಅರ್ಥಹೀನ ತರ್ಕಕ್ಕೆ ನಡಿಸುವುದೆಂದು ಅವರು ಭಯಪಡುತ್ತಾರೆ. ಇನ್ನಿತರರು, ಎಲ್ಲಾ ಧರ್ಮಗಳು ಒಳ್ಳೆಯದೆಂದು ನಂಬುತ್ತಾರೆ. ಒಬ್ಬ ವ್ಯಕ್ತಿಯು ಏನನ್ನು ನಂಬುತ್ತಾನೋ ಅದು ಅವನನ್ನು ತೃಪ್ತಿಪಡಿಸುತ್ತದಾದರೆ, ಭಿನ್ನತೆಗಳ ಕುರಿತಾಗಿ ಮಾತಾಡುವುದು ಒಂದು ನಿರರ್ಥಕ ಚಟುವಟಿಕೆಯೆಂದು ಕೆಲವರು ಹೇಳುತ್ತಾರೆ.
ಧರ್ಮದ ಸಾರದ ಕುರಿತಾದ ಗಂಭೀರ ವಿದ್ಯಾರ್ಥಿಗಳು ಸಹ ತಮ್ಮೊಳಗೆ ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. “ಧರ್ಮಗಳ ಅಧ್ಯಯನ ಮತ್ತು ವರ್ಗೀಕರಣ” ಎಂಬ ಲೇಖನದಲ್ಲಿ ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟಾನಿಕ ಒಪ್ಪಿಕೊಳ್ಳುವುದು: “ವಿರಳವಾಗಿ . . . ವಿದ್ವಾಂಸರ ನಡುವೆ [ಧರ್ಮದ] ಸಾರದ ಕುರಿತಾಗಿ ಒಮ್ಮತವಿತ್ತು . . . ಹೀಗೆ, ಈ ವಿಷಯವು ಇತಿಹಾಸದಲ್ಲೆಲ್ಲಾ ವಾಗ್ವಾದದ ಅಂಶಗಳನ್ನು ಹೊಂದಿತ್ತು.”
ಒಂದು ಶಬ್ದಕೋಶವು ಧರ್ಮವನ್ನು “ವಿಶ್ವದ ಸೃಷ್ಟಿಕರ್ತನು ಮತ್ತು ಅಧಿಕಾರಿಯಾಗಿ ಅಂಗೀಕರಿಸಲಾಗಿರುವ ಒಂದು ಅತಿಮಾನುಷ ಶಕ್ತಿಯಲ್ಲಿ ಮನುಷ್ಯನ ನಂಬಿಕೆ ಮತ್ತು ಪೂಜ್ಯಭಾವನೆಯ ಅಭಿವ್ಯಕ್ತಿ” ಯಾಗಿ ಅರ್ಥನಿರೂಪಿಸುತ್ತದೆ. ಧರ್ಮವು ಜೀವನದಲ್ಲಿ ಒಂದು ಪ್ರಮುಖ ಪಾತ್ರವನ್ನಾಡುವದಕ್ಕೆ ಇದು ಕರೆನೀಡುತ್ತದೆ. ಖಂಡಿತವಾಗಿಯೂ, ಮಾನವ ಇತಿಹಾಸವನ್ನು ರೂಪಿಸುವದರಲ್ಲಿ ಧರ್ಮವು ಒಂದು ಸಾರ್ವತ್ರಿಕ ಅಂಶವಾಗಿತ್ತು. “ಧರ್ಮದ ಯಾವುದೇ ಒಂದು ರೂಪದ ಮೂಲಕ ಜೀವನಕ್ಕೆ ವ್ಯವಸ್ಥೆ ಮತ್ತು ಅರ್ಥವನ್ನು ಕೊಡಲು ಪ್ರಯತ್ನಿಸಿರದ ಯಾವುದೇ ಸಮಾಜವಿಲ್ಲ” ಎಂದು ಆಕ್ಸ್‌ಫರ್ಡ್ ಇಲಸ್ಟ್ರೇಟಡ್ ಎನ್‌ಸೈಕ್ಲೊಪೀಡಿಯ ಆಫ್ ಪೀಪಲ್ಸ್ ಆ್ಯಂಡ್ ಕಲ್ಚರ್ಸ್ ಗಮನಿಸುತ್ತದೆ. ಜೀವಿತಕ್ಕೆ “ವ್ಯವಸ್ಥಾಪನೆ” ಮತ್ತು “ಅರ್ಥ” ಗಳಂತಹ ಮೂಲಭೂತ ವಿಷಯಗಳನ್ನು ಒಳಗೂಡಿಸುತ್ತಾ, ಧರ್ಮವು ನಿಶ್ಚಯವಾಗಿಯೂ ವಾಗ್ವಾದಗಳಿಗಿಂತ ಏನೋ ಹೆಚ್ಚಾದದ್ದಕ್ಕೆ ಅರ್ಹವಾಗುವುದು. ಯುಕ್ತವಾಗಿ, ಅದು ಇನ್ನೊಬ್ಬರೊಂದಿಗೆ ಚರ್ಚೆ—ಅಂದರೆ, ಒಂದು ಸಂಪೂರ್ಣವಾದ ಪರಿಗಣನೆಗೆ ಅರ್ಹವಾಗಿದೆ. ಆದರೆ ಯಾರೊಂದಿಗೆ, ಮತ್ತು ಅದರಿಂದ ಯಾವ ಪ್ರಯೋಜನವು ಪರಿಣಮಿಸುವುದು?