ಗಿಲ್ಯಾದ್ ಪದವೀಧರರು—ಸುವಾರ್ತೆಯನ್ನು ಪ್ರಸರಿಸಲು ಆತುರವುಳ್ಳವರು
“ನಾವು ಎಂದಾದರೂ ಊಹಿಸಬಹುದಾಗಿದ್ದ ಅತ್ಯಂತ ಅದ್ಭುತಕರ ಸಂಗತಿ.” ತಮ್ಮ ಮಿಷನೆರಿ ತರಬೇತಿಯ ಕುರಿತು ಆನ್ಡರ್ಸ್ ಮತ್ತು ಆಮಾಲ್ಯ ಗ್ರೋಟ್ ಅವರಿಗೆ ಆ ರೀತಿ ಅನಿಸಿತು. “ಗಿಲ್ಯಾದ್ ತರಬೇತಿಯು ನಮ್ಮನ್ನು ಪ್ರಚೋದಿಸಿದೆ ಮತ್ತು ತಯಾರಿಸಿದೆ, ಆದುದರಿಂದ ನಾವು ನಮ್ಮ ಹೊಸ ನೇಮಕಗಳಿಗೆ ಹೋಗಲು ಆತುರವುಳ್ಳವರಾಗಿದ್ದೇವೆ,” ಎಂದು ಕೂಡಿಸುವುದರಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 97 ನೆಯ ತರಗತಿಯ ಎಲ್ಲ 48 ಪದವೀಧರರ ಭಾವನೆಗಳನ್ನು ಅವರು ವ್ಯಕ್ತಪಡಿಸಿದರು.
ಪದವಿ ವಿತರಣೆಯ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳು ಹೇಳಿಕೆ ನೀಡುವಾಗ ನಾವು ಈ ಆನಂದವನ್ನು ಅರ್ಥಮಾಡಿಕೊಳ್ಳಬಲ್ಲೆವು; ಆ ಘಟನೆಗಾಗಿ 1994, ಸಪ್ಟಂಬರ 4 ರಂದು 6,420 ಮಂದಿ ನೆರೆದುಬಂದರು.
“ಆಡಳಿತ ಮಂಡಲಿಯ ತೀಯಡೊರ್ ಜರಸ್, ‘ಯೆಹೋವನಿಂದ ಕಲಿಸಲ್ಪಡುವುದು’ ಎಂಬ ಮುಖ್ಯ ವಿಷಯದ ಮೇಲೆ ಮಾತಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರೆಂದು” ಡೇವಿಡ್ ಏಬೆಲ್ ಮತ್ತು ಅವನ ಹೆಂಡತಿ ಕೆಲಿ ಹೇಳಿದರು. “ಸಹೋದರ ಜರಸ್ ಹೇಳಿದ ಈ ಅಂಶವನ್ನು ನಾವು ಎಂದಿಗೂ ಮರೆಯಲಾರೆವು: ‘ಯೆಹೋವನಿಗೆ ಹೋಲಿಕೆಯಲ್ಲಿ ನಮ್ಮ ಸ್ವಂತ ಸಣ್ಣತನವನ್ನು ನಾವು ಅಂಗೀಕರಿಸಬೇಕು,’ ಮತ್ತು ಅದನ್ನು ಯೋಬ ಅಧ್ಯಾಯಗಳು 38 ಮತ್ತು 39 ರಲ್ಲಿ ಕಂಡುಕೊಳ್ಳಲ್ಪಡುವ ಶಕ್ತಿಶಾಲಿ ಪಾಠಗಳ ಮೂಲಕ ದೃಷ್ಟಾಂತಿಸಿದರು. ಗಿಲ್ಯಾದ್ ಶಾಲೆಯ ಮೂಲಕ ನಮ್ಮ ಬೈಬಲ್ ಜ್ಞಾನವನ್ನು ನಾವು ಹೆಚ್ಚಿಸಿಕೊಂಡಿದ್ದೇವಾದರೂ, ಪ್ರತಿಯೊಂದು ಪ್ರಶ್ನೆಗೆ ಉತ್ತರವು ನಮಗೆ ಗೊತ್ತಿರುವುದಿಲ್ಲವೆಂದು ಸಹೋದರ ಜರಸ್ ನಿರ್ದಿಷ್ಟವಾಗಿ ಉಲ್ಲೇಖಿಸಿದರು. ದೇವರ ವಾಕ್ಯವನ್ನು ಅಭ್ಯಸಿಸುವುದನ್ನು ನಾವು ಮುಂದುವರಿಸಲೇಬೇಕು.”
ಕ್ರಿಸ್ಯ್ಟಾನ್ ಮತ್ತು ಆನ್ಜೆಲ್ ಕೋಫಿ ಈಗ ಮಾತಾಡಿದರು: “‘ಒಂದು ಒಳ್ಳೆಯ ಅಸ್ತಿವಾರದ ಮೌಲ್ಯವೇನಾಗಿದೆ?’ ಎಂಬ ಮುಖ್ಯ ವಿಷಯದ ಮೇಲೆ, ಮ್ಯಾಕ್ಸ್ ಲಾರ್ಸನ್ ಅವರಿಂದ ಕೊಡಲ್ಪಟ್ಟ ಭಾಷಣದಿಂದ ನಾವು ಪ್ರಭಾವಿತರಾದೆವು. ಒಂದು ಭೂಕಂಪದ ಸಂದರ್ಭದಲ್ಲೂ ಸ್ಥಿರವಾಗಿ ಉಳಿಯುವುದಕ್ಕಾಗಿ ಗಟ್ಟಿಯಾದ ನೆಲದಲ್ಲಿ, ಆಳವಾದ ಅಸ್ತಿವಾರದ ಅಗತ್ಯವಿರುವ ಒಂದು ಕಟ್ಟಡಕ್ಕೆ ಅವರು ನಮ್ಮನ್ನು ಹೋಲಿಸಿದ್ದು ನಮಗೆ ಇಷ್ಟವಾಯಿತು. ಶ್ರದ್ಧಾಪೂರ್ವಕವಾಗಿ ಅಭ್ಯಸಿಸುವುದರ ಮೂಲಕ, ನಾವು ಯೆಹೋವನೊಂದಿಗೆ ನಿಕಟವಾದೊಂದು ಸಂಬಂಧವನ್ನು ವಿಕಸಿಸಬಲ್ಲೆವು ಮತ್ತು ಕಷ್ಟದ ಸಮಯಗಳಲ್ಲಿ ಸ್ಥಿರರಾಗಿ ಉಳಿಯಸಾಧ್ಯವಿರುವಂತೆ ನಮ್ಮ ನಂಬಿಕೆಯನ್ನು ಆಳವಾದ ಜ್ಞಾನದ ಮೇಲೆ ಆಧರಿಸಬಲ್ಲೆವು.”
“‘ಹೊಲಗಳು ಬೆಳ್ಳಗಾಗಿ ಕೊಯ್ಲಿಗೆ ನಿಂತಿವೆ’ ಎಂಬ ಮುಖ್ಯ ವಿಷಯದ ಮೇಲೆ, ಶಾಲೆಯ ಅಧ್ಯಕ್ಷರಾದ ಮಿಲ್ಟನ್ ಹೆನ್ಶೆಲ್ ಅವರಿಂದ ಕೊಡಲ್ಪಟ್ಟ ಭಾಷಣವು, ದೀರ್ಘ ಸಮಯದ ವರೆಗೆ ಜ್ಞಾಪಕದಲ್ಲಿರುವುದೆಂದು,” ಗ್ಯಾರಿ ಮತ್ತು ಲಿನ್ ಎಲ್ಫರ್ಸ್ ಗಮನಿಸಿದರು. “ಹಿಂದಿನ ಕಾರ್ಮಿಕರಿಂದ ಈಗಾಗಲೇ ಬಿತ್ತನೆಮಾಡಲ್ಪಟ್ಟಿರುವ ಒಂದು ಹೊಲವನ್ನು ಪ್ರವೇಶಿಸುವ ಸುಯೋಗ ನಮಗಿದೆ ಎಂಬುದನ್ನು, ಮುಖ್ಯ ವಚನವಾದ ಯೋಹಾನ 4:35-38 ಒತ್ತಿಹೇಳಿತು. ಜರೂರಿಯ ಪ್ರಜ್ಞೆಯೊಂದಿಗೆ ಕೆಲಸಮಾಡುವಂತೆ ಇದು ನಮ್ಮನ್ನು ಪ್ರೇರಿಸುವುದು.” ಇದರೊಂದಿಗೆ ಸಮ್ಮತಿಸುತ್ತಾ, ಯಾನ್ ಮತ್ತು ಸೀರ್ಪಾ ವಾಟೊಲಾ ಗಮನಿಸಿದ್ದು: “ಬಾಲಿಕ್ಟ್ ರಾಜ್ಯಗಳಿಂದ ಬಂದ ಇತ್ತೀಚೆಗಿನ ವರದಿಯನ್ನು ನೀಡುವ ಮೂಲಕ, ಇನ್ನೂ ಭವಿಷ್ಯದಲ್ಲಿ ಆಗಲಿರುವ ಕೊಯ್ಲಿನ ಕುರಿತಾದ ನಮ್ಮ ನಿರೀಕ್ಷೆಯನ್ನು ಸಹೋದರ ಹೆನ್ಶೆಲ್ ಕೆರಳಿಸಿದರು. ಎಸ್ಟೋನಿಯದಲ್ಲಿ 51 ಪ್ರತಿಶತ, ಲ್ಯಾಟಿಯ್ವದಲ್ಲಿ 106 ಪ್ರತಿಶತ, ಮತ್ತು ಲಿತುಏನಿಯದಲ್ಲಿ 51 ಪ್ರತಿಶತ ಅಭಿವೃದ್ಧಿಯಾಗಿದೆ. ಎಷ್ಟು ರೋಮಾಂಚಕ! ಅಧಿಕ ಕೆಲಸಗಾರರನ್ನು ಕಳುಹಿಸುವಂತೆ ಅಲ್ಲಿಯ ಸಹೋದರರು ಯಜಮಾನನನ್ನು ಬೇಡಿಕೊಳ್ಳುತ್ತಿದ್ದಾರೆ. ಇದನ್ನು ಕೇಳಲು ನಾವು ವಿಶೇಷವಾಗಿ ಆನಂದಿತರಾಗಿದೆವ್ದು ಯಾಕೆಂದರೆ ನಮ್ಮ ನೇಮಕ ಎಸ್ಟೋನಿಯಕ್ಕೆ!”
“‘ಯೆಹೋವನಲ್ಲಿ ಭರವಸೆಯಿಡಿರಿ’ ಎಂಬ ಮುಖ್ಯ ವಿಷಯದ ಮೇಲೆ ಮುಂದಿನ ಭಾಷಣವನ್ನು ಜೊಯೆಲ್ ಆ್ಯಡಮ್ಸ್ ನೀಡಿದರು,” ಎಂದು ಕೆವಿನ್ ಮತ್ತು ಎವಿಲಿನ್ ಕಾರ್ಟೀನಾ ಜ್ಞಾಪಿಸಿಕೊಂಡರು. “ಕೆಲವೊಮ್ಮೆ ನಾವು ಯೆಹೋವನಲ್ಲಿ ಭರವಸೆಯಿಡಬಲ್ಲೆವೆಂದು ಮತ್ತು ಕೆಲವೊಮ್ಮೆ ನಮ್ಮ ಸ್ವಂತ ವಿವೇಕದ ಮೇಲೆ ಆತುಕೊಳ್ಳಬಲ್ಲೆವೆಂದು ನಾವು ಎಂದಿಗೂ ನೆನಸಬಾರದೆಂದು ಅವರು ನಮಗೆ ಸಲಹೆಕೊಟ್ಟರು. ನಮ್ಮ ನೇಮಕದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುವೆವು—ಆರೋಗ್ಯ, ಆಹಾರ, ಭಾಷೆ, ರೂಢಿಗಳು, ಮತ್ತು ಮುಂತಾದವುಗಳು. ನಾವು ಯೆಹೋವನಲ್ಲಿ ಭರವಸೆಯಿಡುವಂತೆ ಇವೆಲ್ಲವೂ ಅಗತ್ಯಪಡಿಸುವವು.”
ಮುಂದಿನ ಭಾಷಣಕಾರರು ಆಡಳಿತ ಮಂಡಳಿಯ ಒಬ್ಬ ಸದಸ್ಯರಾದ ಗೆರಿಟ್ ಲ್ಯೂಶ್ ಆಗಿದ್ದರು. ಅವರು “ಯೆಹೋವನ ಕರುಣೆಯನ್ನು ಪ್ರತಿಬಿಂಬಿಸುತ್ತಾ ಇರ್ರಿ” ಎಂಬ ಮುಖ್ಯ ವಿಷಯವನ್ನು ವಿಕಸಿಸಿದರು. ಆ್ಯಲನ್ ಮತ್ತು ಆ್ಯನ್ ಮರೀ ಗೋಕಾವಿ ಹೇಳಿದ್ದು: “ನಮ್ಮ ಜೊತೆ ಮಿಷನೆರಿಗಳಿಗೆ ಮತ್ತು ನಾವು ಸುವಾರ್ತೆಯನ್ನು ಯಾರೊಂದಿಗೆ ಹಂಚಿಕೊಳ್ಳುತ್ತೇವೊ ಅವರಿಗೆ ಕರುಣೆಯನ್ನು ವಿಸ್ತರಿಸುವುದು ಕ್ರೈಸ್ತ ಪ್ರೌಢತೆಯ ಸೂಚನೆಯಾಗಿದೆ ಎಂದು ಅವರು ತೋರಿಸಿದರು. ವಿದೇಶೀ ನೇಮಕಗಳು ತ್ಯಾಗವನ್ನು ಕೇಳಿಕೊಳ್ಳುತ್ತವೆ, ಆದರೆ ಕರುಣೆಯಿಲ್ಲದಿದ್ದರೆ, ನಮ್ಮ ತ್ಯಾಗವು ಬಹಳ ಅಲ್ಪ ಮೌಲ್ಯದ್ದಾಗಿರುವುದು.” (ಮತ್ತಾಯ 9:13) ಪೀಟರ್ ಮತ್ತು ಫ್ಲ್ಯೂರ್ ಹಪ್ಸ್ಟನ್ ಕೂಡಿಸಿದ್ದು: “ನಮ್ಮ ಸಹೋದರ ಸಹೋದರಿಯರ ಕಡೆಗೆ ನಾವು ಕರುಣೆಯುಳ್ಳವರಾಗಿರಬೇಕೆಂದೂ, ಅವರ ತಪ್ಪುಗಳು ದೊಡ್ಡದಾಗಿ ಕಾಣುವ ಬದಲು ಅತ್ಯಂತ ಕಡಮೆಯಾಗಿ ತೋರುವಂತೆ ದುರ್ಬೀನಿನ ಮುಂಭಾಗದಿಂದ—ಸಾಂಕೇತಿಕವಾಗಿ ಮಾತಾಡುವುದಾದರೆ—ಅವರನ್ನು ವೀಕ್ಷಿಸುವಂತೆಯೂ ಸಹೋದರ ಲ್ಯೂಶ್ ಹೇಳಿದರು.”
“ನಮ್ಮ ಗಿಲ್ಯಾದ್ ಶಿಕ್ಷಕರಲ್ಲಿ ಒಬ್ಬರಾದ ಜ್ಯಾಕ್ ರೆಡ್ಫರ್ಡ್, ‘ನೀವು ಗದರಿಕೆಯನ್ನು ಸ್ವೀಕರಿಸಬಲ್ಲಿರೊ?’ ಎಂಬ ಮುಖ್ಯ ವಿಷಯವನ್ನು ಅನುಸರಿಸಿದರು” ಎಂದು ಮಿಕಿ ಮತ್ತು ಶೆರಿ ಮಿನ್ಸ್ಕಿ ಜ್ಞಾಪಿಸಿಕೊಂಡರು. “ಗದರಿಕೆಯ ಸ್ವೀಕಾರವನ್ನು ಹೆಮ್ಮೆಯು ಕಠಿನವಾಗಿ ಮಾಡುತ್ತದೆಂದು ಮತ್ತು ನಾವು ಸಲಹೆಗೆ ಬಹಳ ಸೂಕ್ಷ್ಮವೇದಿಗಳಾಗಿರುವುದಾದರೆ, ಅದರ ಪ್ರಯೋಜನಗಳನ್ನು ನಾವು ಕಳೆದುಕೊಳ್ಳುವೆವು ಎಂದು ಅವರು ಸೂಚಿಸಿದರು. ಆಮೇಲೆ ಪ್ರಲಾಪ 3:27-31ರ ಮೇಲೆ ಆಧಾರಿಸಿ, ಗದರಿಕೆಯನ್ನು ಸ್ವೀಕರಿಸುವುದರ ಕುರಿತು ಕೆಲವು ಪ್ರಾಯೋಗಿಕ ಸೂಚನೆಗಳನ್ನು ಅವರು ನೀಡಿದರು.” ಚಾರ್ಲ್ಸ್ ಮತ್ತು ಜೋನ್ ಹೆಲ್ಡ್ ಕೂಡಿಸಿದ್ದು: “ಹೆಚ್ಚಿನ ಸಮಯ ನಮ್ಮ ಸ್ವಂತ ನ್ಯೂನತೆಗಳ ವಿಷಯದಲ್ಲಿ ನಾವು ಕುರುಡರಾಗಿರುತ್ತೇವೆ; ಆದುದರಿಂದ, ನಾವು ಗದರಿಕೆಯನ್ನು, ನಮಗೆ ಅರಿವಿರದ ವಿಷಯಗಳಿಗೆ ನಮ್ಮ ಕಣ್ಣುಗಳನ್ನು ತೆರೆಯುವ ಒಂದು ಮಾರ್ಗವಾಗಿ ವೀಕ್ಷಿಸಬೇಕು. ಯೆಹೋವನಿಂದ ಬರುವ ಗದರಿಕೆ ಯಾ ಸಲಹೆಯು ನಮಗಾಗಿರುವ ಆತನ ಪ್ರೀತಿಯ ಪ್ರಮಾಣವಾಗಿದೆ.”
“ಇನ್ನೊಬ್ಬ ಶಿಕ್ಷಕರಾದ ಯುಲಿಸೀಸ್ ಗ್ಲಾಸ್, ‘ಜೀವನಕ್ಕೆ ನಡೆಸುವ ಪ್ರಾಯೋಗಿಕ ವಿವೇಕವನ್ನು ಸಂಪಾದಿಸಿರಿ’ ಎಂಬ ಮುಖ್ಯ ವಿಷಯದ ಮೇಲೆ ಮಾತಾಡಿದರು. ‘ನೀವು ಕಲಿತಿರುವ ವಿಷಯವನ್ನು ಹೇಗೆ ಅನ್ವಯಿಸುವಿರಿ?’ ಎಂಬುದಾಗಿ ಕೇಳಿದರು” ಎಂದು ಕೆನೆತ್ ಮತ್ತು ಲಿಜ್ಬೆತ್ ಆರ್ಡ್ಶೆಲ್ ಹೇಳಿದರು. “ಜ್ಞಾನೋಕ್ತಿ 30:24-26ರ ಮೇಲೆ ಆಧಾರಿತ, ಚಿಕ್ಕ ಬೆಟ್ಟದ ಮೊಲದ ಕುರಿತು ಮತ್ತು ಜೀವಿತಕ್ಕಾಗಿ ಅದನ್ನು ಯೆಹೋವನು ಹೇಗೆ ಪೂರ್ಣವಾಗಿ ಸಜ್ಜುಗೊಳಿಸಿದ್ದಾನೆಂದು ತೋರಿಸುವ ಒಂದು ದೃಷ್ಟಾಂತವನ್ನು ಅವರು ಕೊಟ್ಟರು. ಇನ್ನೊಂದು ಕಡೆಯಲ್ಲಿ ನಾವು, ಹುಟ್ಟಿನಿಂದ ವಿವೇಕಿಗಳಾಗಿಲ್ಲ, ಆದುದರಿಂದ ವಿವೇಕವನ್ನು ಸಂಪಾದಿಸಲು ಪ್ರಯಾಸಪಡುವ ಅಗತ್ಯ ನಮಗಿದೆ. ಅದನ್ನು ಮಾಡಲು ನಮಗೆ ಬೇಕಾದ ಎಲ್ಲ ವಿಷಯಗಳಿಂದ ಯೆಹೋವನು ನಮ್ಮನ್ನು ಸಜ್ಜುಗೊಳಿಸಿದ್ದಾನೆ. ನಾವು ಪ್ರೀತಿಯಲ್ಲಿ ಯೆಹೋವನ ಕಡೆಗೆ ಮತು ಒಬ್ಬರು ಇನ್ನೊಬ್ಬರ ಕಡೆಗೆ ನಿಕಟವಾದಂತೆ, ನಾವು ಬಹಳಷ್ಟನ್ನು ಸಾಧಿಸುವೆವು.”
ಪ್ರಧಾನ ಭಾಷಣ
“ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಸಹೋದರ ಕಾರ್ಲ್ ಎಫ್. ಕ್ಲೈನ್, ‘ರತ್ನಗಳಲ್ಲಿ ಒಂದು ರತ್ನ’ ಎಂಬ ತಮ್ಮ ಭಾಷಣದಲ್ಲಿ, 19 ನೆಯ ಕೀರ್ತನೆಯನ್ನು ನಮ್ಮೊಂದಿಗೆ ಉತ್ಸಾಹದಿಂದ ಪರಿಗಣಿಸಿದರೆಂದು” ಜೇ ಮತ್ತು ಗೆನ್ವ್ ಆಬ್ರಾಸಿನ್ಸ್ಕಾಸ್ ಹೇಳಿದರು. “ಯೆಹೋವನಿಗಾಗಿ ಕೀರ್ತನೆಗಾರನಾದ ದಾವೀದನಿಗಿದ್ದ ಆಳವಾದ ಗಣ್ಯತೆಯನ್ನು ಮತ್ತು ದೇವರ ವಾಕ್ಯಕ್ಕಾಗಿ ಅವನಿಗಿದ್ದ ಪ್ರೀತಿಯನ್ನು ಅವರು ಎತ್ತಿತೋರಿಸಿದರು.” “ಕೀರ್ತನೆಯನ್ನು ಮೂರು ಭಾಗಗಳಾಗಿ ಸಹೋದರ ಕ್ಲೈನ್ ವಿಭಾಗಿಸಿದರು,” ಎಂದು ಕೀತ್ ಮತ್ತು ಡಾನ ಹಾರ್ನ್ಬ್ಯಾಕ್ ಗಮನಿಸಿದರು. “ಭಾಗ 1 (ವಚನಗಳು 1-6) ದೇವರ ಸೃಷ್ಟಿಗಾಗಿ ದಾವೀದನ ಗಣ್ಯತೆಯನ್ನು ತೋರಿಸುತ್ತದೆ, ಭಾಗ 2 (ವಚನಗಳು 7-10) ದೇವರ ನಿಯಮಗಳಿಗಾಗಿ ಅವನ ಗಣ್ಯತೆಯನ್ನು ವ್ಯಕ್ತಪಡಿಸುತ್ತದೆ, ಮತ್ತು ಭಾಗ 3 (ವಚನಗಳು 11-14) ದಾವೀದನಂತೆ ನಮಗೆ ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಹೊಂದಿರುವ ಬಯಕೆ ಇರಬೇಕು ಎಂಬುದನ್ನು ನಮಗೆ ಜ್ಞಾಪಿಸುತ್ತದೆ.”
“ನಾವು ಕೆಟ್ಟದನ್ನು ತೊರೆಯಬೇಕಾದರೆ, ಯೆಹೋವನ ಭಯವು ಪ್ರಾಮುಖ್ಯವಾಗಿದೆ ಎಂಬ ವಿಚಾರವನ್ನು ನಾವು ಆನಂದಿಸಿದೆವು. ಆತನ ದೃಷ್ಟಿಯಲ್ಲಿ ಯಾವುದು ಶುದ್ಧವಾಗಿದೆಯೊ ಅದನ್ನು ಮಾಡುವಂತೆ ಅದು ನಮ್ಮನ್ನು ನಡೆಸುತ್ತದೆ,” ಎಂದು ಡೇವಿಡ್ ಮತ್ತು ರೇಲೀನ್ ಲಾಂಗ್ ಹೇಳಿದರು. ಫ್ರಾಂಕ್ ಮತ್ತು ವೀಬಕ ಮ್ಯಾಸನ್ ಒಪ್ಪಿದರು. “ಯೆಹೋವನ ಮರುಜ್ಞಾಪನಗಳು, ನಿಯಮಗಳು, ಮತ್ತು ಕಟ್ಟಳೆಗಳು ಎಷ್ಟು ಪ್ರಯೋಜನಕಾರಿಯಾಗಿವೆ ಎಂಬುದರ ಬಗ್ಗೆ ಸಹೋದರ ಕ್ಲೈನ್ರ ಹೇಳಿಕೆಗಳು, ನಾವು ಗಿಲ್ಯಡ್ನಲ್ಲಿ ಕಲಿತ ವಿಷಯಗಳನ್ನು ಉತ್ತಮವಾಗಿ ಸಾರಾಂಶಿಸಿದವು,” ಎಂದು ಅವರು ಹೇಳಿದರು. “ಭವಿಷ್ಯದಲ್ಲಿ ದೇವರ ವಾಕ್ಯಕ್ಕೆ ಕಿವಿಗೊಡುವ ಮತ್ತು ಅದನ್ನು ರತ್ನಗಳ ನಿಧಿ ಪೆಟ್ಟಿಗೆಯೋಪಾದಿ ಭಾವಿಸುವ ಇನ್ನೂ ಹೆಚ್ಚಾದ ದೃಢಸಂಕಲ್ಪವನ್ನು ಹೊಂದಿರುವಂತೆ ಭಾಷಣವು ಮಾಡಿತು.”
ಪ್ರಧಾನ ಭಾಷಣವನ್ನು ಹಿಂಬಾಲಿಸಿ, ವಿದ್ಯಾರ್ಥಿಗಳು ತಮ್ಮ ಪ್ರಶಸ್ತಿಪತ್ರಗಳನ್ನು ಪಡೆದರು ಮತ್ತು ಅವರ ವಿದೇಶೀ ನೇಮಕಗಳ ಪ್ರಕಟನೆ ಮಾಡಲಾಯಿತು. ಉಪಾಹಾರಗಳಿಗೆ ಸ್ವಲ್ಪಕಾಲ ನಿಲ್ಲಿಸಿದ ಬಳಿಕ, ಅಪರಾಹ್ಣದ ಅವಧಿಗಾಗಿ ಎಲ್ಲರು ಮತ್ತೆ ಸೇರಿದರು. ಸಂಕ್ಷೇಪಿಸಲ್ಪಟ್ಟ ಕಾವಲಿನಬುರುಜು ಅಧ್ಯಯನದ ಸಂದರ್ಭದಲ್ಲಿ ಮುಂದಿಡಲ್ಪಟ್ಟ ಪ್ರಶ್ನೆಗಳನ್ನು ಉತ್ತರಿಸುವುದರಲ್ಲಿ ಪದವೀಧರರು ಭಾಗವಹಿಸಿದರು.
“‘ಭೂಮಿಯಲ್ಲೆಲ್ಲಾ ರಾಜ್ಯ ಘೋಷಕರಾಗುವಂತೆ ತರಬೇತುಗೊಳಿಸಲ್ಪಟ್ಟದ್ದು,’ ಎಂಬ ವಿದ್ಯಾರ್ಥಿ ಕಾರ್ಯಕ್ರಮವು ಹಿಂಬಾಲಿಸಿ ಬಂದಿತೆಂದು” ಬಾಬ್ ಮತ್ತು ಶಾನನ್ ಲ್ಯಾಕಟಾಸ್ ಜ್ಞಾಪಿಸಿಕೊಂಡರು. “ಕಾರ್ಯಕ್ರಮದ ಮೊದಲನೆಯ ಭಾಗವು, ನಮ್ಮ ಐದು ತಿಂಗಳುಗಳ ಪಾಠಕ್ರಮದಲ್ಲಿ ಕ್ಷೇತ್ರ ಸೇವೆಯಲ್ಲಿ ಪಡೆದ ವಿದ್ಯಾರ್ಥಿ ಅನುಭವಗಳನ್ನು ಸಾದರಪಡಿಸಿತು. ನಮ್ಮ ಶುಶ್ರೂಷೆಯಲ್ಲಿ ಪ್ರಶ್ನೆಗಳ ನಿಪುಣ ಬಳಕೆಯ ಮೇಲೆ ಅದು ಕೇಂದ್ರೀಕರಿಸಿತು ಮತ್ತು ಇಂಟರ್ವ್ಯೂ ವಿಭಾಗವು, ಮಿಷನೆರಿ ಜೀವಿತದ ಸವಾಲುಗಳನ್ನು ಮತ್ತು ಬದಲಾಗುವ ಪರಿಸ್ಥಿತಿಗಳನ್ನು ಎದುರಿಸುವ ಸಕಾರಾತ್ಮಕ ವಿಧಗಳನ್ನು ತೋರಿಸಿತು. ಕಾಸ್ಟ ರೀಕ, ಭಾರತ, ಮತ್ತು ಮಲಾವಿ ದೇಶಗಳ ಮೂರು ಜಾರುಚಿತ್ರ (ಸ್ಲೈಡ್) ನಿರೂಪಣೆಗಳು, ಯೆಹೋವನ ಲೋಕವ್ಯಾಪಕ ಸಂಸ್ಥೆಯ ಒಂದು ನಸು ನೋಟವನ್ನು ನಮಗೆ ನೀಡಿದವು.”
“ಹಿಂಬಾಲಿಸಿದ ಬಂದ, ದೇವಪ್ರಭುತ್ವವಾದಿಗಳಾಗಿರಿ, ಲೌಕಿಕರಲ್ಲ ಎಂಬ ನಾಟಕವು, ಕೆಲವು ಲೌಕಿಕ, ಸ್ವತಂತ್ರ ಮನೋಭಾವವುಳ್ಳ ಸಂಬಂಧಿಕರು ನಮ್ಮ ಮೇಲೆ ಬೀರಬಹುದಾದ ಕೆಟ್ಟ ಪರಿಣಾಮವನ್ನು ದೃಷ್ಟಾಂತಿಸಿತು,” ಎಂದು ಜೆಸಿ ಮತ್ತು ಮಿಶೆಲ್ ಡಂಕನ್ ಗಮನಿಸಿದರು. “ಕ್ರೈಸ್ತರು ದೇವಪ್ರಭುತ್ವದ ಮಾರ್ಗದರ್ಶನಗಳನ್ನು ಮತ್ತು ನಿರ್ದೇಶನಗಳನ್ನು ಆವಶ್ಯಕವೆಂದೂ ಪ್ರಯೋಜನಕಾರಿಯೆಂದೂ ಗ್ರಹಿಸಬೇಕೆಂದು ಅದು ತೋರಿಸಿತು,” ಎಂಬುದಾಗಿ ವೆಂಸೆಲ್ ಮತ್ತು ಕೆಲಿ ಕೋಲಾ ಕೂಡಿಸಿದರು.
ಅಂತಿಮ ಗೀತೆ ಮತ್ತು ಪ್ರಾರ್ಥನೆಯು ಮನೋಹರವಾದ ಆ ಕಾರ್ಯಕ್ರಮವನ್ನು ಸಮಾಪ್ತಿಗೆ ತಂದಿತು. 18 ದೇಶಗಳಲ್ಲಿದ್ದ ವಿದೇಶೀ ನೇಮಕಗಳಿಗೆ ತಮ್ಮ ಹೊರಡುವಿಕೆಯ ನಿರೀಕ್ಷೆಯಲ್ಲಿ ಪದವೀಧರರು ಅಲ್ಲಿಂದ ಬಿಟ್ಟುಹೋದಾಗ, ಅವರ ವಿಚಾರಗಳು ಟಾಮಿ ಮತ್ತು ಯೇಎಲ್ ಕಾವುಕೊ ಅವರ ಈ ಬೀಳ್ಕೊಳ್ಳುವ ಹೇಳಿಕೆಯ ಮೂಲಕ ಚೆನ್ನಾಗಿ ವ್ಯಕ್ತಪಡಿಸಲ್ಪಟ್ಟವು: “ನಮ್ಮ ನೇಮಕಗಳಿಗೆ ಹೋಗಲು ಮತ್ತು ನಾವು ಕಲಿತಿರುವ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕಲು ನಾವು ಬಹಳ ಆತುರವುಳ್ಳವರಾಗಿದ್ದೇವೆ. ನಾವು ಬಹಳಷ್ಟನ್ನು ಪಡೆದಿದ್ದೇವೆ—ಕೊಡುವುದು ಈಗ ನಮ್ಮ ಸರದಿಯಾಗಿದೆ.”
[ಪುಟ 26 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವಿ ಪಡೆಯುತ್ತಿರುವ 97 ನೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳನ್ನು ಮುಂದಿನಿಂದ ಹಿಂದಿನ ವರೆಗೆ ಲೆಕ್ಕಿಸಲಾಗಿದ್ದು ಹೆಸರುಗಳು ಪ್ರತಿ ಸಾಲಿನಲ್ಲಿ ಎಡದಿಂದ ಬಲಕ್ಕೆ ಕೊಡಲ್ಪಟ್ಟಿವೆ.
(1) ಹಾಂಗ್, ಜೆ.; ಹಾಂಗ್, ಡಿ.; ಗ್ರೋಟ್, ಎ.; ಕಾರ್ಟೀನಾ, ಇ.; ಲ್ಯಾಕಟಾಸ್, ಎಸ್.; ಹಾರ್ನ್ಬ್ಯಾಕ್, ಡಿ.; ಆಸೆವೆಡೊ, ಎಲ್.; ಕೋಫಿ, ಎ. (2) ಎಲ್ಫರ್ಸ್, ಎಲ್.; ಗೋಕಾವಿ, ಎ.; ಆರ್ಡ್ಶೆಲ್, ಎಲ್.; ಆಬ್ರಾಸಿನ್ಸ್ಕಾಸ್, ಜಿ.; ನಾಟ್, ಕೆ.; ಲಿಜ್ಅರ್, ಟಿ.; ಏಬೆಲ್, ಕೆ.; ಏಬೆಲ್, ಡಿ. (3) ಡಂಕನ್, ಎಮ್.; ಗೋಕಾವಿ, ಎ.; ಹೆಲ್ಡ್, ಜೆ.; ಹಪ್ಸ್ಟನ್, ಎಫ್.; ಲ್ಯಾಕಟಾಸ್, ಬಿ.; ಲಾಂಗ್, ಆರ್.; ಮಿನ್ಸ್ಕಿ, ಎಸ್.; ಆಸೆವೆಡೊ, ಇ. (4) ಆರ್ಡ್ಶೆಲ್, ಕೆ.; ಕಾವುಕೊ, ಜೆ.; ವಾಟೊಲಾ, ಎಸ್.; ಕಾರ್ಟೀನಾ, ಕೆ.; ಕಾರ್ಸನ್, ಎನ್.; ಮಿನ್ಸ್ಕಿ, ಎಮ್.; ಲಿಜ್ಅರ್, ಜಿ.; ಕೋಲಾ, ಕೆ. (5) ಡಂಕನ್, ಜೆ.; ಆಬ್ರಾಸಿನ್ಸ್ಕಾಸ್, ಜೆ.; ವಾಟೊಲಾ, ಜೆ.; ಮ್ಯಾಸನ್, ಎಫ್.; ಮ್ಯಾಸನ್, ವಿ.; ಲಾಂಗ್, ಡಿ.; ಕಾರ್ಸನ್, ಸಿ.; ಎಲ್ಫರ್ಸ್, ಜಿ. (6) ಕಾವುಕೊ, ಟಿ.; ಹಪ್ಸ್ಟನ್, ಪಿ.; ಹೆಲ್ಡ್, ಸಿ.; ಗ್ರೋಟ್, ಎ.; ಹಾರ್ನ್ಬ್ಯಾಕ್, ಕೆ.; ಕೋಲಾ, ಡಬ್ಲ್ಯೂ.; ನಾಟ್, ಡಿ.; ಕೋಫಿ, ಸಿ.