ಬೈಬಲ್—ಅರ್ಥಮಾಡಿಕೊಳ್ಳಲಿಕ್ಕಾಗಿರುವ ಒಂದು ಗ್ರಂಥ
ಬೈಬಲ್, ಅಕ್ಷರಾರ್ಥಕವಾಗಿ ಅನುಸರಿಸಲ್ಪಡಬೇಕಾದ ದೇವರ ಸ್ಪಷ್ಟವಾಗಿದ ವಾಕ್ಯವಾಗಿದೆ ಎಂದು ಕೆಲವು ಜನರು ನಂಬುತ್ತಾರೆ. ಇತರರಿಗೆ, “ಬೈಬಲಿನ ಸಂದೇಶವು ಅಧಿಕ ಹೆಚ್ಚು ಅನಿಶ್ಚಯಾರ್ಥವುಳ್ಳದ್ದಾಗಿದೆ.” ಹೀಗೆಂದು ಕೆನಡದ ಅತ್ಯಂತ ದೊಡ್ಡ ಪ್ರಾಟೆಸ್ಟಂಟ್ ಪಂಗಡಕ್ಕಾಗಿರುವ 12 ಸದಸ್ಯರ ನಂಬಿಕೆ ಹಾಗೂ ದೇವತಾಶಾಸ್ತ್ರದ ಕಮಿಟಿಯು ಹೇಳುತ್ತದೆ. ಕೆಲವರಿಗೆ “ಬೈಬಲ್ ಅಮೂರ್ತವಾಗಿ, ವ್ಯಕ್ತಿಸ್ವರೂಪವಲ್ಲದ್ದಾಗಿ ಮತ್ತು ಅಸಂಬದ್ಧವಾಗಿ ಪರಿಣಮಿಸುತ್ತದೆ,” ಎಂದು ಯುನೈಟೆಡ್ ಚರ್ಚಿನ ಪಾದ್ರಿಯಾದ, ಕಿಫ್ಲರ್ಡ್ ಎಲಿಯಟ್ಗೆ ಅನಿಸುತ್ತದೆ.
ಇಂತಹ ದೃಷ್ಟಿಕೋನಗಳು, ಉತ್ತರಗಳನ್ನು ಪಡೆಯಲು ಅರ್ಹವಾಗಿರುವ ತಕ್ಕದಾದ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಇವುಗಳಲ್ಲಿ ಪ್ರಾಮುಖ್ಯವಾದವುಗಳು, ಬೈಬಲನ್ನು ಏಕೆ ಬರೆಯಲಾಯಿತು? ಅರ್ಥಮಾಡಿಕೊಳ್ಳಲು ಅದು ತೀರ ದಿಗ್ಭಮ್ರೆಗೊಳಿಸುವಂಥದ್ದೂ ಜಟಿಲವೂ ಆಗಿದೆಯೊ? ಶಾಸ್ತ್ರಗಳ ಅರ್ಥವನ್ನು ಗ್ರಹಿಸಲು ಒಬ್ಬನಿಗೆ ಯಾವ ಸಹಾಯವು ಬೇಕಾಗಿದೆ? ಮತ್ತು ಈ ಗೊಂದಲಮಯ ಸಮಯಗಳಲ್ಲಿ ಬೈಬಲಿನ ನಿಷ್ಕೃಷ್ಟ ಜ್ಞಾನವು ಏಕೆ ಅಗತ್ಯವಾಗಿದೆ?
ಬೈಬಲನ್ನು ಏಕೆ ಬರೆಯಲಾಯಿತು?
ಅತ್ಯಂತ ಉನ್ನತ ದೇವರಾದ ಯೆಹೋವನ ಅನುಗ್ರಹ ಮತ್ತು ಮೆಚ್ಚುಗೆಯನ್ನು ಪಡೆಯುವವರಿಗೆ, ದೇವರ ವಾಕ್ಯದ ಅಧ್ಯಯನವು ಯಾವಾಗಲೂ ಒಂದು ಪೂರ್ವಾಪೇಕ್ಷಿತ ವಿಷಯವಾಗಿದೆ. ಅರಸರು, ಯಾಜಕರು, ಹೆತ್ತವರು, ಪುರುಷರು, ಸ್ತ್ರೀಯರು, ಮತ್ತು ಮಕ್ಕಳು—ಶ್ರೀಮಂತರು ಮತ್ತು ಬಡವರು ಒಂದೇ ರೀತಿಯಲ್ಲಿ—ದಾಖಲಿಸಲ್ಪಟ್ಟಿರುವ ದೇವರ ವಾಕ್ಯಕ್ಕೆ ಗಂಭೀರ ಹಾಗೂ ಪ್ರಾರ್ಥನಾಪೂರ್ವಕವಾದ ಪರಿಗಣನೆಯನ್ನು ನೀಡಲು, ಜೀವನದ ಪ್ರತಿದಿನದ ಕಾರ್ಯಗಳಿಂದ ಸಮಯವನ್ನು ತೆಗೆಯುವಂತೆ ಉಪದೇಶಿಸಲ್ಪಟ್ಟಿದ್ದರು.—ಧರ್ಮೋಪದೇಶಕಾಂಡ 6:6, 7; 17:18-20; 31:9-12; ನೆಹಮೀಯ 8:8; ಕೀರ್ತನೆ 1:1, 2; 119:7-11, 72, 98-100, 104, 142; ಜ್ಞಾನೋಕ್ತಿ 3:13-18.
ಉದಾಹರಣೆಗೆ, ಯೆಹೋಶುವನು ಹೀಗೆ ನಿರ್ದೇಶಿಸಲ್ಪಟ್ಟಿದ್ದನು: “ನಿನ್ನ ಆರಾಧನೆಯಲ್ಲಿ ಧರ್ಮಶಾಸ್ತ್ರದ ಪುಸ್ತಕವು ಯಾವಾಗಲೂ ಓದಲಾಗುತ್ತದೆ ಎಂಬುದನ್ನು ಖಚಿತಮಾಡಿಕೊ. ಅದನ್ನು ಹಗಲಿರುಳು ಅಭ್ಯಸಿಸು, ಮತ್ತು ಅದರಲ್ಲಿ ಬರೆದಿರುವ ಎಲ್ಲ ವಿಷಯಕ್ಕೆ ವಿಧೇಯನಾಗುತ್ತೀ ಎಂಬುದನ್ನು ಖಚಿತಮಾಡಿಕೊ. ಆಗ ನೀನು ಏಳಿಗೆ ಹೊಂದುವಿ ಮತ್ತು ಸಫಲನಾಗುವಿ.” (ಯೆಹೋಶುವ 1:8, ಟುಡೇಸ್ ಇಂಗ್ಲಿಷ್ ವರ್ಷನ್) ದೇವರ ಧರ್ಮಶಾಸ್ತ್ರದ ಇಂತಹ ಜಾಗರೂಕತೆಯ ಅಧ್ಯಯನ ಮತ್ತು ಅನ್ವಯವು, ಯಶಸ್ಸಿನಲ್ಲಿ ಮತ್ತು ಸಂತೋಷದಲ್ಲಿ ಫಲಿಸುವುದು. “ಎಲ್ಲಾ ಮನುಷ್ಯರು” ಆತನ ವಾಕ್ಯವಾದ ಬೈಬಲನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲ, ಆದರೆ ಜೀವನದ ಕೊಡುಗೆಯನ್ನು ಪಡೆಯುವ ಪ್ರತೀಕ್ಷೆಯೊಂದಿಗೆ, ಅದಕ್ಕೆ ವಿಧೇಯರೂ ಆಗುವರೆಂದು ಯೆಹೋವನು ಉದ್ದೇಶಿಸಿದನು.—1 ತಿಮೊಥೆಯ 2:3, 4; ಯೋಹಾನ 17:3.
ಅರ್ಥಮಾಡಿಕೊಳ್ಳಲು ತೀರ ಜಟಿಲವೊ?
ಪರಲೋಕಕ್ಕೆ ಯೇಸುವಿನ ಆರೋಹಣದ ಮುಂಚೆ, ಭೂವ್ಯಾಪಕವಾಗಿ ಬೈಬಲ್ ಶಿಕ್ಷಣದ ಒಂದು ಮಹಾ ಕಾರ್ಯಕ್ರಮವು ಮುಂದುವರಿಯಬೇಕೆಂದು ತಾನು ಬಯಸಿದ್ದನ್ನು ಅವನು ಸ್ಪಷ್ಟಗೊಳಿಸಿದನು. (ಅ. ಕೃತ್ಯಗಳು 1:8) ಬೈಬಲ್ ಅರ್ಥಮಾಡಿಕೊಳ್ಳಲಿಕ್ಕಾಗಿತ್ತೆಂದು ಅವನಿಗೆ ಗೊತ್ತಿತ್ತು. ಪರಲೋಕದಲ್ಲಿ ಮತ್ತು ಭೂಮಿಯ ಮೇಲೆ ಯೆಹೋವನು ಅವನಿಗೆ ಎಲ್ಲ ಅಧಿಕಾರವನ್ನು ಕೊಟ್ಟಿದ್ದಾನೆಂದು ವಿವರಿಸಿದ ಬಳಿಕ, ನೇರವಾದ ಆಜ್ಞೆಯನ್ನು ಅವನು ಪ್ರಕಟಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ.”—ಮತ್ತಾಯ 28:19, 20.
ದೀಕ್ಷಾಸ್ನಾನಕ್ಕೆ ಮುಂಚಿತವಾಗಿ ಹೊಸ ಶಿಷ್ಯರಿಗೆ ಯೆಹೋವನ ಕುರಿತು, ಆತನ ಮಗನ ಕುರಿತು, ಮತ್ತು ಪವಿತ್ರಾತ್ಮದ ಕಾರ್ಯವಿಧಾನದ ಕುರಿತು ಕಲಿಸಲ್ಪಡಬೇಕಿತ್ತು. ಹೆಚ್ಚಾಗಿ, ಕ್ರೈಸ್ತ ವಿಷಯಗಳ ವ್ಯವಸ್ಥೆಯ ನಿಯಮದಲ್ಲಿ ಅವರು ಶಿಕ್ಷಿಸಲ್ಪಡಬೇಕಿತ್ತು. (1 ಕೊರಿಂಥ 9:21; ಗಲಾತ್ಯ 6:2) ಈ ಫಲಿತಾಂಶವನ್ನು ಸಾಧಿಸಲು, ಯೋಗ್ಯರು ಪ್ರಥಮವಾಗಿ, ಬೈಬಲು ಯೆಹೋವನಿಂದ ಬಂದಿದೆ ಎಂಬುದನ್ನು ಮತ್ತು ಎರಡನೆಯದಾಗಿ ಅದು ಅರ್ಥಮಾಡಿಕೊಳ್ಳಲಿಕ್ಕಾಗಿದೆ ಎಂಬುದನ್ನು ನಂಬಬೇಕಿತ್ತು.—ಮತ್ತಾಯ 10:11-13.
ಬೈಬಲನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನಿಮ್ಮ ವತಿಯಿಂದ ಏನು ಅವಶ್ಯವಾಗಿದೆ? ಶಾಸ್ತ್ರಗಳನ್ನು ವಿವರಿಸಲು ದೇವ ಪುತ್ರನು ವಿಶೇಷವಾದ ಪ್ರಯತ್ನವನ್ನು ಮಾಡಿದನು. ಪವಿತ್ರ ಬರಹಗಳು ಸತ್ಯವಾಗಿವೆ ಎಂದು ಮತ್ತು ಅವು ಯೆಹೋವನ ಅಭಿವ್ಯಕ್ತಿಗೊಳಿಸಲ್ಪಟ್ಟ ಚಿತ್ತವನ್ನು ಹೊಂದಿವೆ ಎಂದು ಅವನು ತಿಳಿದಿದ್ದನು. (ಯೋಹಾನ 17:17) ಅವನ ಕೆಲಸದ ನೇಮಕದ ಕುರಿತು, ಯೇಸು ಕ್ರಿಸ್ತನು ಹೇಳಿದ್ದು: “ಈ ಒಂದು ಉದ್ದೇಶಕ್ಕಾಗಿ—ಸತ್ಯದ ಕುರಿತು ಮಾತಾಡಲು—ನಾನು ಹುಟ್ಟಿದೆನು ಮತ್ತು ಅದಕ್ಕೋಸ್ಕರ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದವರೆಲ್ಲರೂ ನನಗೆ ಕಿವಿಗೊಡುತ್ತಾರೆ.” (ಯೋಹಾನ 18:37, ಟಿಇವಿ; ಲೂಕ 4:43) ಗ್ರಹಣಶಕ್ತಿಯುಳ್ಳ ಹೃದಯಗಳನ್ನು ಮತ್ತು ಮನಸ್ಸುಗಳನ್ನು ಹೊಂದಿದ್ದ ವ್ಯಕ್ತಿಗಳಿಗೆ ಕಲಿಸುವುದರಿಂದ ಯೇಸು ಹಿಂಜರಿಯಲಿಲ್ಲ. ಲೂಕ 24:45 ರಲ್ಲಿ, ನಾವು ಹೀಗೆ ಹೇಳಲ್ಪಡುತ್ತೇವೆ: “ಆ ಮೇಲೆ ಅವರು ಶಾಸ್ತ್ರವಚನಗಳನ್ನು ತಿಳುಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದ”ನು.
ಯೇಸುವಿನ ಶುಶ್ರೂಷೆಯ ಸಮಯದಲ್ಲಿ “ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವ” ಶಾಸ್ತ್ರಗಳನ್ನು ಉಲ್ಲೇಖಿಸುತ್ತಾ ಮತ್ತು ವಿವರಿಸುತ್ತಾ, ಲಿಖಿತ ವಾಕ್ಯದಿಂದ ಅವನು ಉದಾರವಾಗಿ ಉದ್ಧರಿಸಿದನು. (ಲೂಕ 24:27, 44) ಅವನ ಶಾಸ್ತ್ರೀಯ ವಿವರಣೆಗಳನ್ನು ಕೇಳಿದವರು, ಅವನ ತಿಳಿವಳಿಕೆಯ ಸ್ಪಷ್ಟತೆಯಿಂದ ಹಾಗೂ ಕಲಿಸುವ ಅವನ ಸಾಮರ್ಥ್ಯದಿಂದ ಬಹಳವಾಗಿ ಪ್ರಭಾವಿಸಲ್ಪಟ್ಟರು. (ಮತ್ತಾಯ 7:28, 29; ಮಾರ್ಕ 1:22; ಲೂಕ 4:32; 24:32) ಯೇಸುವಿಗೆ, ಶಾಸ್ತ್ರಗಳು ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದ್ದ ಪುಸ್ತಕವಾಗಿತ್ತು.
ಬೈಬಲ್ ಮತ್ತು ಯೇಸುವಿನ ಹಿಂಬಾಲಕರು
ಯೇಸು ಕ್ರಿಸ್ತನ ಅನುಕರಣೆ ಮಾಡುವವನಾದ ಅಪೊಸ್ತಲ ಪೌಲನು, ಶಾಸ್ತ್ರಗಳಲ್ಲಿರುವ ವಿಷಯವನ್ನು ಇತರರಿಗೆ ಕಲಿಸುವ ಅಗತ್ಯವನ್ನು ಕಂಡನು. ಅವು ಅರ್ಥಮಾಡಿಕೊಳ್ಳಲಿಕ್ಕಾಗಿದವ್ದೆಂದು ಅವನಿಗೂ ಗೊತ್ತಿತ್ತು. ಆದುದರಿಂದಲೇ, ಅವನು ಬಹಿರಂಗವಾಗಿ ಕಲಿಸಿದನು ಮತ್ತು ನಿಸ್ಸಂಶಯವಾಗಿ ಅವುಗಳನ್ನು ಅರ್ಥಮಾಡಿಕೊಳ್ಳಲು ಬಯಸಿದವರ ಮನೆಗಳಲ್ಲಿ ಶಾಸ್ತ್ರಗಳನ್ನು ವಿವರಿಸಿದನು. ಅವನು ಹೀಗೆ ಹೇಳಿದಾಗ ಪೌಲನು ತನ್ನ ಸ್ಥಾನವನ್ನು ಗೊತ್ತುಪಡಿಸಿದನು: “ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯಲಿಲ್ಲವೆಂದು ನಿಮಗೆ ತಿಳಿದಿದೆ.” (ಅ. ಕೃತ್ಯಗಳು 20:20, ಟಿಇವಿ) ಅವನ ಚರ್ಚೆಗಳ ಸಮಯದಲ್ಲಿ, ತನ್ನ ವಿಚಾರಗಳನ್ನು ಉಲ್ಲೇಖಗಳೊಂದಿಗೆ ವಿವರಿಸುತ್ತಾ ಮತ್ತು ರುಜುಪಡಿಸುತ್ತಾ, ಅವನು ಶಾಸ್ತ್ರಗಳಿಂದ ವಿವೇಚಿಸಿದನು. (ಅ. ಕೃತ್ಯಗಳು 17:2, 3) ಶಾಸ್ತ್ರಗಳ ಅರ್ಥವನ್ನು ತಿಳಿದುಕೊಳ್ಳುವಂತೆ ಇತರರಿಗೆ ಸಹಾಯ ಮಾಡುವುದರಲ್ಲಿ ಅವನು ಆಸಕ್ತನಾಗಿದ್ದನು.
ಯೇಸು ಮತ್ತು ಅವನ ಶಿಷ್ಯರು ಕಲಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಬಯಕೆ ನಿಮಗಿದೆಯೊ? (1 ಪೇತ್ರ 2:2) ಪ್ರಾಚೀನ ಬೆರೋಯದ ನಿವಾಸಿಗಳಿಗೆ ಅಂತಹ ಬಯಕೆಯಿತ್ತು, ಮತ್ತು ಕ್ರಿಸ್ತನ ಕುರಿತು ಅಪೊಸ್ತಲ ಪೌಲನು ಏನನ್ನು ಕಲಿಸುತ್ತಿದ್ದನೊ ಅದನ್ನು ನಂಬಲು ಅವರು ಆತುರರಾಗಿದ್ದರು. ಆದುದರಿಂದ ಶಾಸ್ತ್ರಗಳನ್ನು ಪ್ರತಿನಿತ್ಯ ಅಭ್ಯಸಿಸುವಂತೆ ಮತ್ತು ಹೀಗೆ ಅವರು ಕೇಳಿದ ಸುವಾರ್ತೆಯು ನಿಜವಾಗಿಯೂ ಸತ್ಯವಾಗಿತ್ತು ಎಂಬ ವಿಷಯದಲ್ಲಿ ನಿಶ್ಚಿತರಾಗಿರುವಂತೆ ಅವರು ಉತ್ತೇಜಿಸಲ್ಪಟ್ಟರು. ಅವರ ಮನಸ್ಸುಗಳು ಗ್ರಹಣಶಕ್ತಿಯುಳ್ಳವುಗಳಾಗಿದ್ದ ಕಾರಣ, ‘ಅವರಲ್ಲಿ ಅನೇಕರು ವಿಶ್ವಾಸಿಗಳಾದರು.’—ಅ. ಕೃತ್ಯಗಳು 17:11, 12.
ಬೈಬಲನ್ನು ಅರ್ಥಮಾಡಿಕೊಳ್ಳಲು, ಒಬ್ಬನಿಗೆ ಸರಿಯಾದ ಹೃದಯದ ಸ್ಥಿತಿ, ಕಲಿಯಲು ಯಥಾರ್ಥವಾದ ಬಯಕೆ, ಮತ್ತು ‘ಒಬ್ಬನ ಆತ್ಮಿಕ ಅಗತ್ಯದ ಪ್ರಜ್ಞೆ’ ಇರಬೇಕು. (ಮತ್ತಾಯ 5:3, NW) “ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ಮಾತಾಡುತ್ತೀ” ಎಂದು ಯೇಸು ಕೇಳಲ್ಪಟ್ಟಾಗ, ಅವನು ಉತ್ತರಿಸಿದ್ದು: “ಪರಲೋಕರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ.” ಅವನು ‘ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವನು; ಲೋಕಾದಿಯಿಂದ ಮರೆಯಾಗಿದ್ದವುಗಳನ್ನು ಹೊರಪಡಿಸುವನು’ ಎಂಬುದಾಗಿ ಮುಂತಿಳಿಸಲಾಗಿತ್ತು. (ಮತ್ತಾಯ 13:10, 11, 35) ಆದುದರಿಂದ, ಸಾಂದರ್ಭಿಕವಾದ ಹಾಗೂ ಕುತೂಹಲವುಳ್ಳ ಕೇಳುಗನನ್ನು ಮನಃಪೂರ್ವಕವಾದ ಶೋಧಕನಿಂದ ಬೇರ್ಪಡಿಸಲು, ಯೇಸು ಸಾಮ್ಯಗಳ ಮೂಲಕ ಮಾತಾಡಿದನು. ಒಂದು ಸಂದರ್ಭದಲ್ಲಿ ಯೇಸುವಿನ ಶಿಷ್ಯರು ಯೇಸುವಿನೊಂದಿಗೆ ಒಂದು ಮನೆಯೊಳಗೆ ಹೋಗಿ, “ಹೊಲದಲ್ಲಿಯ ಹಣಜಿಯ ಸಾಮ್ಯದ ಅರ್ಥವನ್ನು ನಮಗೆ ಹೇಳು” ಎಂದಾಗ, ತಮ್ಮ ಮನಃಪೂರ್ವಕತೆಯನ್ನು ಅವರು ತೋರಿಸಿದರು.—ಮತ್ತಾಯ 13:36.
ಬೈಬಲನ್ನು ನಾವು ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಸಹಾಯದ ಅಗತ್ಯವಿದೆ ಎಂಬುದು ಸ್ಪಷ್ಟವಾಗಿಗಿದೆ. ಯುನೈಟೆಡ್ ಚರ್ಚಿನ ದೇವತಾಶಾಸ್ತ್ರ, ನಂಬಿಕೆ, ಮತ್ತು ವಿಶ್ವಕ್ರೈಸ್ತತ್ವದ ಸೆಕ್ರಿಟರಿ, ಪ್ರಾದಿ ಹ್ಯಾಲ್ ಲೆವೆಲಿನ್ ಹೇಳಿದ್ದು: “ಬೈಬಲ್ ನಮಗೆ ಯಾವ ಅರ್ಥದಲ್ಲಿದೆ ಮತ್ತು ಅದನ್ನು ಹೇಗೆ ಓದಲಾಗುತ್ತದೆ ಮತ್ತು ಅರ್ಥವಿವರಣೆ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟಗೊಳಿಸುವುದು ಬಹಳ ಪ್ರಾಮುಖ್ಯವಾಗಿದೆ.” ಆದರೆ ಎಲ್ಲರೂ ಅದನ್ನು ಗ್ರಹಿಸದಿದ್ದರೂ, ನಿಜತ್ವವು ಏನೆಂದರೆ, ನಾವು ಬೈಬಲನ್ನು ಸ್ವತಂತ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಮಗೆ ಸಹಾಯವು ಬೇಕಾಗಿದೆ.
ಯಾವ ಸಹಾಯವು ಲಭ್ಯವಿದೆ?
ಬೈಬಲಿನಲ್ಲಿ ಸ್ಪಷ್ಟತೆಯನ್ನು ಕೇಳಿಕೊಳ್ಳುವ ಕೆಲವು ದಿಗ್ಭಮ್ರೆಗೊಳಿಸುವ ನುಡಿಗಳು, ಕಂಗೆಡಿಸುವ ಪ್ರಶ್ನೆಗಳು, ಮತ್ತು ಗಾಢವಾದ ಹೇಳಿಕೆಗಳಿವೆ. ಅವು ಬರೆಯಲ್ಪಟ್ಟ ಸಮಯದಲ್ಲಿ ಅರ್ಥವಾಗುವ ಉದ್ದೇಶವನ್ನು ಹೊಂದಿರದ ಅರ್ಥಪೂರ್ಣ ಹೋಲಿಕೆಗಳನ್ನು ಬಳಸುತ್ತಾ, ಅವು ಉದ್ದೇಶಪೂರ್ವಕವಾಗಿ ಅಸ್ಪಷ್ಟವಾಗಿಗಿರಬಹುದು. ಆದರೆ ಅವು ಯೆಹೋವನ ಉದ್ದೇಶಗಳನ್ನು ಒಳಗೊಂಡಿದ್ದವು. ಉದಾಹರಣೆಗೆ, “ಮೃಗದ ಅಂಕೆಯು . . . ಆರುನೂರ ಅರುವತ್ತಾರು” ಆಗಿತ್ತೆಂದು ಪ್ರಕಟನೆ 13:18 ಹೇಳುತ್ತದೆ. “ಇದರಲ್ಲಿ ಜ್ಞಾನವು ಅಡಕವಾಗಿದೆ” ಎಂದು ವಚನವು ಹೇಳುವಾಗ, ಆ ಅಂಕೆಯ ಮಹತ್ವವನ್ನು ಅದು ವಿವರಿಸುವುದಿಲ್ಲ. ಹಾಗಿದ್ದರೂ, ಆತನ ಸಂಸ್ಥೆಯ ಮುಖಾಂತರ ಯೆಹೋವನು, ಅದರ ಅರ್ಥವನ್ನು ಇಂದು ತಿಳಿದುಕೊಳ್ಳುವಂತೆ ಆತನ ನಿಷ್ಠಾವಂತ ಸೇವಕರನ್ನು ಅನುಮತಿಸಿದ್ದಾನೆ. (“ಬೈಬಲನ್ನು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಮಾಧ್ಯಮ” ಎಂಬ ಪೆಟ್ಟಿಗೆಯನ್ನು ನೋಡಿರಿ.) ಈ ತಿಳಿವಳಿಕೆಯನ್ನು ನೀವು ಕೂಡ “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು” ವುದರಲ್ಲಿ ಅನುಭವಸ್ಥರಾಗಿರುವವರ ಸಹಾಯದಿಂದ ಪಡೆಯಬಲ್ಲಿರಿ.—2 ತಿಮೊಥೆಯ 2:2, 15, 23-25; 4:2-5; ಜ್ಞಾನೋಕ್ತಿ 2:1-5.
ಯೇಸು ಸಾಮ್ಯಗಳನ್ನು ಕೆಲವೊಮ್ಮೆ, ರಾಜ್ಯ ಸಂದೇಶದ ಕಡೆಗಿರುವ ಪ್ರತಿಕ್ರಿಯೆಯನ್ನು ಯಾ ಪ್ರತಿಕ್ರಿಯೆಯ ಕೊರತೆಯನ್ನು ತೋರಿಸಲು ಉಪಯೋಗಿಸಿದನು. ಮಿತ್ರರಿಂದ ಮತ್ತು ಸಂಬಂಧಿಕರಿಂದ ಬರುವ ವಿರೋಧದ ಮೂಲಕ ನಿರಾಶರಾಗುವುದರಿಂದ ಕೆಲವರು ಪ್ರಗತಿ ಹೊಂದಲಾರರೆಂದು ಅವನು ಸೂಚಿಸಿದನು. ಇತರರು ರಾಜ್ಯ ಸಂದೇಶದ ಕಡೆಗಿರುವ ತಮ್ಮ ಗಣ್ಯತೆಯನ್ನು ನಾಶಮಾಡುವಂತೆ ‘ಸಂಕಟವನ್ನು ಯಾ ಹಿಂಸೆಯನ್ನು’ ಅನುಮತಿಸುವರು. ಇನ್ನೂ ಇತರರು ಸುವಾರ್ತೆಗಾಗಿ ಅವರಲ್ಲಿದ್ದಿರಬಹುದಾದ ಯಾವುದೇ ಪ್ರೀತಿಯನ್ನು ಹೊರಗಿಡುವಂತೆ ಜೀವಿತದ ಪ್ರತಿದಿನದ ಕಾರ್ಯಗಳನ್ನು, ‘ಪ್ರಪಂಚದ ಚಿಂತೆಯನ್ನು ಮತ್ತು ಐಶ್ವರ್ಯಗಳ ಮೋಸಕರ ಶಕ್ತಿಯನ್ನು’ ಅನುಮತಿಸುವರು. ಇನ್ನೊಂದು ಕಡೆಯಲ್ಲಿ, ಆನಂದದಿಂದ ಪ್ರತಿಕ್ರಿಯಿಸುವವರು ಮತ್ತು ಅಮೂಲ್ಯವಾದ ವಾಕ್ಯವನ್ನು ಕೇಳಲು ಮತ್ತು ಅದರ ಅರ್ಥವನ್ನು ಪಡೆಯಲು ಸಿದ್ಧರೂ ಆಗಿರುವ ಜನರಿದ್ದಾರೆ. ಅವರು ಕ್ರೈಸ್ತಪ್ರಪಂಚದಲ್ಲಿ, ಬಹುಶಃ ಯೇಸು ಕ್ರಿಸ್ತನ ಹೆಸರಿನಲ್ಲಿ “ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡು” ತ್ತಿದ್ದಾರೆ. ಅಂತಹವರು ಯೆಹೋವನ ಮಾರ್ಗದಲ್ಲಿ ಶಿಕ್ಷಿಸಲ್ಪಡಲು ಮತ್ತು ಹೀಗೆ ಅವರು ಬೈಬಲಿನಲ್ಲಿ ಓದುತ್ತಿರುವುದನ್ನು ಅರ್ಥಮಾಡಿಕೊಳ್ಳಲು ತವಕಪಡುತ್ತಾರೆ.—ಮತ್ತಾಯ 13:3-9, 18-23; ಯೆಹೆಜ್ಕೇಲ 9:4; ಯೆಶಾಯ 2:2-4.
ವೈಯಕ್ತಿಕವಾಗಿ ಯೆಹೋವನ ಉದ್ದೇಶಗಳ ಬಗ್ಗೆ ಒಳನೋಟವನ್ನು ಪಡೆಯಲು ಬಯಸುವವರಿಗೆ, ಬೇಕಾದ ನೆರವನ್ನು ಒದಗಿಸಲಾಗಿದೆ ಎಂಬುದನ್ನು ಯೆಹೋವನು ನೋಡಿಕೊಳ್ಳಬಲ್ಲನು. ದೃಷ್ಟಾಂತಿಸಲು, ಯೆರೂಸಲೇಮಿನಿಂದ ಪ್ರಯಾಣಿಸಿದಾಗ ಯೆಶಾಯನ ಬೈಬಲ್ ಪುಸ್ತಕವನ್ನು ಪರಿಗಣಿಸುತ್ತಿದ್ದ ಒಬ್ಬ ಐಥಿಯೋಪ್ಯದ ಮನುಷ್ಯನನ್ನು ಸಹಾಯಿಸುವಂತೆ ಯೆಹೋವನ ಆತ್ಮವು ಸೌವಾರ್ತಿಕನಾದ ಫಿಲಿಪ್ಪನನ್ನು ನಿರ್ದೇಶಿಸಿತೆಂದು ಬೈಬಲ್ ವರದಿಸುತ್ತದೆ. ಮನೆಗೆ ಹೋಗುವ ದಾರಿಯಲ್ಲಿ, ಅವನು ಅದನ್ನು ತನ್ನ ರಥದಲ್ಲಿ ಓದುತ್ತಿದ್ದನು. ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನೆಗೆ ವಿಧೇಯತೆ ತೋರಿಸುತ್ತಾ, ಫಿಲಿಪ್ಪನು ರಥದ ಜೊತೆಯಲ್ಲಿ ಓಡಿ, ಕೇಳಿದ್ದು: ‘ನೀನು ಓದುವದು ನಿನಗೆ ತಿಳಿಯುತ್ತದೋ?’ ಆ ಮನುಷ್ಯನು ತನಗೆ ಸಹಾಯದ ಅಗತ್ಯವಿದೆ ಎಂದು ಅಂಗೀಕರಿಸುವಷ್ಟು ದೀನನೂ ಪ್ರಾಮಾಣಿಕನೂ ಆಗಿದ್ದನು. ಆತ್ಮಿಕವಾಗಿ ಹಸಿದಿದ್ದ ಮತ್ತು ಕಲಿಸಲು ಸಾಧ್ಯವಿದ್ದ ಈ ವ್ಯಕ್ತಿಗೆ ಫಿಲಿಪ್ಪನು ಆನಂದದಿಂದ ಉಪದೇಶಿಸಿದನು. ಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳುವಂತೆ ಉಪದೇಶವು ಅವನಿಗೆ ಸಹಾಯ ಮಾಡಿತು. ನಿತ್ಯ ಜೀವವನ್ನು ಪಡೆಯುವ ಸಲುವಾಗಿ ಯೆಹೋವನೊಂದಿಗೆ ಒಂದು ಅನುಗ್ರಹವುಳ್ಳ ಸಂಬಂಧವನ್ನು ಹೊಂದಿರಲು ಅವನೀಗ ಏನು ಮಾಡಬೇಕಿತ್ತೆಂದು ಅವನು ಕಲಿತನು. ಅವನು ದೇವರಿಗೆ ಮೆಚ್ಚಿಕೆಯಾಗಿರುವಂತಹ ಜೀವಿತವನ್ನು ಬೆನ್ನಟ್ಟಿದ, ಯೆಹೋವನ ದೀಕ್ಷಾಸ್ನಾನ ಪಡೆದ ಸಂತುಷ್ಟ ಸೇವಕನಾದನು.—ಅ. ಕೃತ್ಯಗಳು 8:26-39.
ನಿಮ್ಮ ಮನೆಯಲ್ಲಿ ನಿಮ್ಮೊಡನೆ ಒಂದು ಬೈಬಲಿರಬಹುದು, ಮತ್ತು ನೀವು ಅದನ್ನು ಅನೇಕ ಬಾರಿ ಓದಿರಬಹುದು. ಬಹುಶಃ ನೀವು ಆ ಪ್ರಾಮಾಣಿಕನಾದ, ದೀನ ಐಥಿಯೋಪ್ಯದವನು ಅನುಭವಿಸಿದ್ದ ಅದೇ ಸಮಸ್ಯೆಯನ್ನು ಅನುಭವಿಸಿದ್ದೀರಿ. ಅವನು ಓದಿದ್ದನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸಾಧ್ಯವಾಗಲಿಲ್ಲ. ಅವನಿಗೆ ಸಹಾಯದ ಅಗತ್ಯವಿತ್ತು ಮತ್ತು ಯೆಹೋವ ದೇವರು ಒದಗಿಸಲು ಸಂತೋಷಿಸಿದ ನೆರವನ್ನು ಸ್ವೀಕರಿಸಲು ಅವನು ಹಿಂಜರಿಯಲಿಲ್ಲ. ಫಿಲಿಪ್ಪನಂತೆ, ಆತನ ವಾಕ್ಯವಾದ ಬೈಬಲಿನಲ್ಲಿ ದೇವರ ಕುರಿತು ಬರೆದಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಮಗೆ ನೆರವು ನೀಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ. ಯೆಹೋವನು ಬೈಬಲನ್ನು ಒದಗಿಸಿದನೆಂದು ಮತ್ತು ಅದು ಅರ್ಥಮಾಡಿಕೊಳ್ಳಲಿಕ್ಕಾಗಿದೆ ಎಂದು ಅವರು ತಿಳಿದವರಾಗಿದ್ದಾರೆ.—1 ಕೊರಿಂಥ 2:10; ಎಫೆಸ 3:18; 2 ಪೇತ್ರ 3:16.
ಬೈಬಲ್ ಏಕೆ ಅಗತ್ಯವಾಗಿದೆ?
ಮಾನವ ಇತಿಹಾಸದ ಅತ್ಯಂತ ತುರ್ತಿನ ಸಮಯದಲ್ಲಿ ನಾವು ಜೀವಿಸುತ್ತಾ ಇದ್ದೇವೆ. ಬೈಬಲ್ ಇದನ್ನು “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಎಂದು ಸೂಚಿಸುತ್ತದೆ. (ಮತ್ತಾಯ 24:3, NW) ಇಸವಿ 1914 ರಿಂದ ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಸಂಭವಿಸುತ್ತಿರುವ ಅನೇಕ ಘಟನೆಗಳು ತೋರಿಸುವುದೇನೆಂದರೆ, ಬಹಳ ಬೇಗನೆ ದೇವರ ಸ್ವರ್ಗೀಯ ರಾಜ್ಯವು ‘ಆ ಸರಕಾರಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡುವುದು’.—ದಾನಿಯೇಲ 2:44.
ಬೈಬಲಿನಲ್ಲಿ, ಮತ್ತಾಯ 24 ನೆಯ ಅಧ್ಯಾಯದಲ್ಲಿ, ಮಾರ್ಕ 13 ನೆಯ ಅಧ್ಯಾಯದಲ್ಲಿ, ಮತ್ತು ಲೂಕ 21 ನೆಯ ಅಧ್ಯಾಯದಲ್ಲಿ ಏನನ್ನು ಮುಂತಿಳಿಸಲಾಗಿದೆ ಎಂಬುದನ್ನು ಸ್ವತಃ ನೀವೇ ಓದಿನೋಡಿರಿ. ವರ್ಣಿಸಲಾದ ಘಟನೆಗಳು ಭೌಗೋಲಿಕವಾಗಿ ಸಂಬಂಧಪಡುವ ಘಟನೆಗಳಾಗಿವೆ ಎಂದು ನೀವು ಗಮನಿಸುವಿರಿ. ಅವು ಇತರ ಎಲ್ಲ ಯುದ್ಧಗಳಿಂದ ಭಿನ್ನವಾಗಿರುವ ಲೋಕ ಯುದ್ಧಗಳನ್ನು ಒಳಗೊಂಡಿವೆ. ಒಂದನೆಯ ಲೋಕ ಯುದ್ಧದಂದಿನಿಂದ, ಮುಂತಿಳಿಸಲಾದ ಆಹಾರ ಅಭಾವಗಳನ್ನು, ಭೂಕಂಪಗಳನ್ನು, ಮತ್ತು ಅಸಾಮಾನ್ಯವಾದ ನಿಯಮರಾಹಿತ್ಯದ ಸಮಯನ್ನು ನಾವು ನೋಡಿದ್ದೇವೆ. ಲೋಕ ನಾಶನವು ಅಸನ್ನವಾಗಿದೆ ಎಂಬ ಸುಸ್ಪಷ್ಟ ಸಂಕೇತವನ್ನು ಒದಗಿಸುವ ಒಂದು ಪ್ರತಿಪಾದನೆಯನ್ನು ರಾಷ್ಟ್ರಗಳು ಮಾಡುವುದರಲ್ಲಿವೆ ಎಂದು ತೋರುತ್ತದೆ. ಇದರ ಕುರಿತಾಗಿ, ಅಪೊಸ್ತಲ ಪೌಲನು ಬರೆದದ್ದು: “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವದು. . . . ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು . . . ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.” (1 ಥೆಸಲೊನೀಕ 5:2, 3) ತಪ್ಪಿಸಿಕೊಳ್ಳಲಾರದವರು ಯಾರು? ಪೌಲನು ವಿವರಿಸುವುದು: “ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.” (2 ಥೆಸಲೊನೀಕ 1:7-9) ಮತ್ತಾಯ 24:14 ರಲ್ಲಿ, “ರಾಜ್ಯದ ಸುವಾರ್ತೆಯು ಸರ್ವಲೋಕದಲ್ಲಿ” ಸಾರಲ್ಪಡಬೇಕೆಂಬ ಆಜೆಗ್ಞೆ ವಿಧೇಯರಾಗುವವರ ಮೂಲಕ, ಸಂಘಟಿತ ಚಿಹ್ನೆಯ ಒಂದು ಭಾಗವು ನೆರವೇರಲಿಕ್ಕಿತ್ತು.
ಲಕ್ಷಾಂತರ ಯೆಹೋವನ ಸಾಕ್ಷಿಗಳು ಈ ಆಜ್ಞೆಯನ್ನು 231 ದೇಶಗಳಲ್ಲಿ ಮತ್ತು ಸಮುದ್ರದ ದ್ವೀಪಗಳಲ್ಲಿ ಪೂರೈಸುತ್ತಾ ಇದ್ದಾರೆ. ಅವರು ಜನರ ಮನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಯೆಹೋವನ ರಾಜ್ಯ ಸರಕಾರದ ಕುರಿತು ಕಲಿಯುವಂತೆ ಅವರನ್ನು ವೈಯಕ್ತಿಕವಾಗಿ ಆಮಂತ್ರಿಸುತ್ತಾರೆ. ಈ ವಿಷಯಗಳ ವ್ಯವಸ್ಥೆಯನ್ನು ಪಾರಾಗುವವರೊಳಗಿರಲು ಮತ್ತು ದುಃಖಿಸುವುದು, ನಿಟ್ಟುಸಿರು ಬಿಡುವುದು, ವೇದನೆ, ಯಾ ಮರಣವು ಇರದ ಪ್ರಮೋದವನ ಭೂಮಿಯಲ್ಲಿ ಜೀವಿಸಲು, ಪ್ರತಿಯೊಬ್ಬರು ತೆಗೆದುಕೊಳ್ಳಬೇಕಾದ ಕಾರ್ಯಗತಿಯನ್ನು ಅವರು ದಯಾಪರವಾಗಿ ಸೂಚಿಸುತ್ತಾರೆ.—ಪ್ರಕಟನೆ 21:3, 4.
ಈ ದುಷ್ಟ ಲೋಕಕ್ಕಾಗಿ ಸಮಯವು ಬಹಳ ಬೇಗನೆ ಮುಗಿಯುತ್ತಾ ಇದೆ, ಮತ್ತು ಈ ಲೋಕದ ಅಂತ್ಯವನ್ನು ಪಾರಾಗಲು ಬಯಸುವವರಿಗೆಲ್ಲ ‘ಸುವಾರ್ತೆಗೆ ವಿಧೇಯರಾಗುವುದರಲ್ಲಿ’ ಮತ್ತು ಹೀಗೆ ನಾಶನವನ್ನು ತಪ್ಪಿಸಿಕೊಳ್ಳುವುದರಲ್ಲಿ ಏನು ಒಳಗೊಂಡಿದೆ ಎಂಬುದನ್ನು ಕಲಿಯುವುದು ಅತ್ಯಗತ್ಯವಾಗಿದೆ. ಮುಂದಿನ ಸಮಯ ಯೆಹೋವನ ಸಾಕ್ಷಿಗಳು ನಿಮ್ಮ ಮನೆಗೆ ಭೇಟಿ ನೀಡುವಾಗ, ವಾರದ ಬೈಬಲ್ ಅಧ್ಯಯನವನ್ನು ಸ್ವೀಕರಿಸುವ ಆಮಂತ್ರಣವನ್ನು ಯಾಕೆ ಸ್ವೀಕರಿಸಬಾರದು? ಇನ್ನೂ ಉತ್ತಮವಾಗಿ, ನೀವು ಬೈಬಲನ್ನು ಅರ್ಥಮಾಡಿಕೊಳ್ಳಲು ಬಯಸುವುದರಿಂದ ನಿಮ್ಮೊಂದಿಗೆ ಅದನ್ನು ಅಭ್ಯಸಿಸುವಂತೆ ಅವರನ್ನು ಯಾಕೆ ಕೇಳಬಾರದು?
[ಪುಟ 8 ರಲ್ಲಿರುವ ಚೌಕ]
ಬೈಬಲನ್ನು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಮಾಧ್ಯಮ
ತನ್ನ ಮರಣ ಮತ್ತು ಪುನರುತ್ಥಾನದ ಬಳಿಕ, ಸಂಸರ್ಗದ ತನ್ನ ಮಾಧ್ಯಮವಾಗಿ ಕೆಲಸಮಾಡುವ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ಎಬ್ಬಿಸುವೆನೆಂದು ಯೇಸು ಆಶ್ವಾಸನೆ ನೀಡಿದನು. (ಮತ್ತಾಯ 24:45-47) “ದೇವರು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ಅನಾದಿಕಾಲದಿಂದ ಮಾಡಿದ ಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು . . . ಈಗ ಕ್ರೈಸ್ತ ಸಭೆಯ ಮೂಲಕ ಗೊತ್ತಾಗಬೇಕೆಂಬದನ್ನು ಉದ್ದೇಶಿಸಿದ್ದನು,” ಎಂದು ಅಪೊಸ್ತಲ ಪೌಲನು ಬರೆದಾಗ, ಈ ಮಾಧ್ಯಮವನ್ನು ಅವನು ಎಫೆಸದ ಸಭೆಗೆ ಗುರುತಿಸಿದನು. (ಎಫೆಸ 3:10, 11) ಸಾ.ಶ. 33ರ ಪಂಚಾಶತ್ತಮದಲ್ಲಿ ಜನಿಸಿದ ಅಭಿಷಿಕ್ತ ಕ್ರೈಸ್ತರ ಸಭೆಗೆ, “ಪ್ರಕಟವಾದ” ವಿಷಯಗಳು ವಹಿಸಿಕೊಡಲ್ಪಟ್ಟಿದ್ದವು. (ಧರ್ಮೋಪದೇಶಕಾಂಡ 29:29) ಒಂದು ಗುಂಪಿನೋಪಾದಿ, ಅಭಿಷಿಕ್ತ ಕ್ರೈಸ್ತರು ನಂಬಿಗಸ್ತನು ಮತ್ತು ವಿವೇಕಿಯಾದ ಆಳಿನಂತೆ ಕೆಲಸಮಾಡುತ್ತಾರೆ. (ಲೂಕ 12:42-44) ದೇವರಿಂದ ಬರುವ ಅವರ ನೇಮಿತ ಕೆಲಸವು, “ಪ್ರಕಟವಾದ” ವಿಷಯಗಳ ಆತ್ಮಿಕ ತಿಳಿವಳಿಕೆಯನ್ನು ಒದಗಿಸುವುದೇ ಆಗಿದೆ.
ಬೈಬಲ್ ಪ್ರವಾದನೆಯು ಮೆಸ್ಸೀಯನ ಕಡೆಗೆ ಸೂಚಿಸಿದಂತೆಯೇ, ಅದು ಈಗ ನಂಬಿಗಸ್ತ ಮತ್ತು ವಿವೇಕಿಯಾದ ಆಳಿನಂತೆ ಕೆಲಸಮಾಡುವ ಅಭಿಷಿಕ್ತ ಕ್ರೈಸ್ತ ಸಾಕ್ಷಿಗಳ ಒತ್ತಾದ ಮಂಡಳಿಯ ಕಡೆಗೂ ನಮ್ಮನ್ನು ನಿರ್ದೇಶಿಸುತ್ತದೆ.a ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಅದು ನಮಗೆ ಸಹಾಯ ಮಾಡುತ್ತದೆ. “ದೇವರ . . . ನಾನಾ ವಿಧವಾದ ಜ್ಞಾನ”ವು, ಯೆಹೋವನ ಸಂಸರ್ಗದ ಮಾಧ್ಯಮದಿಂದ—ನಂಬಿಗಸ್ತ ಮತ್ತು ವಿವೇಕಿಯಾದ ಆಳು—ಮಾತ್ರ ತಿಳಿದುಬರಲು ಸಾಧ್ಯವೆಂದು, ಬೈಬಲನ್ನು ಅರ್ಥಮಾಡಿಕೊಳ್ಳಲು ಬಯಸುವವರೆಲ್ಲರು ಗಣ್ಯಮಾಡಬೇಕು.—ಯೋಹಾನ 6:68.
[ಅಧ್ಯಯನ ಪ್ರಶ್ನೆಗಳು]