ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ನೈಜೀರಿಯ
ಆಫ್ರಿಕದ ಪಾಶ್ಚಾತ್ಯ ಉಬ್ಬಿನ ತಳದಲ್ಲಿರುವ ತಿರುವಿನೊಳಗೆ ನೈಜೀರಿಯವು ತುರುಕಲ್ಪಟ್ಟಿದೆ. ಗಿನೀ ಕೊಲಿಯ್ಲಲ್ಲಿ ನೆಲೆಸಿರುವ ನೈಜೀರಿಯವು ಭೂಮಧ್ಯರೇಖೆಯ ಉತ್ತರಕ್ಕಿದೆ ಮತ್ತು 8 ಕೋಟಿ 80 ಲಕ್ಷಕ್ಕಿಂತಲೂ ಅಧಿಕ ನಿವಾಸಿಗಳನ್ನು ಹೊಂದಿದೆ.a
ಕಳೆದ ಎರಡು ಸೇವಾ ವರ್ಷಗಳಲ್ಲಿ, ವಾಚ್ ಟವರ್ ಸೊಸೈಟಿಯ ನೈಜಿರೀಯ ಬ್ರಾಂಚ್ ಆಫೀಸು, ಎಳೆಯರಿಗೆ ವಿಶೇಷ ಗಮನವನ್ನು ನೀಡಿದೆ. ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ನಡೆಸಲಾದ ಒಂದು ಸಮೀಕ್ಷೆಯು ತೋರಿಸಿತೇನೆಂದರೆ, 1992 ರಲ್ಲಿ ನೈಜಿರೀಯದಲ್ಲಿ ಸುವಾರ್ತೆಯನ್ನು ಸಾರಲು ಆರಂಭಿಸಿದವರಲ್ಲಿ 80 ಪ್ರತಿಶತ ವ್ಯಕ್ತಿಗಳು 10 ಮತ್ತು 20 ವರ್ಷ ವಯಸ್ಸಿನ ವಯೋಮಿತಿಯಲಿದ್ದರು. ಆ ವರ್ಷ ದೀಕ್ಷಾಸ್ನಾನ ಪಡೆದವರಲ್ಲಿ, 63 ಪ್ರತಿಶತ ವ್ಯಕ್ತಿಗಳು ಆ ವಯೋಮಿತಿಗೆ ಸೇರಿದವರಾಗಿದ್ದರು.
ಪಯನೀಯರ್ ಸೇವೆ ಮಾಡಲು ಯುವ ಜನರು ಪ್ರಯತ್ನಿಸುತ್ತಾರೆ
ಅನೇಕ ಯುವ ಜನರು ಪೂರ್ಣ ಸಮಯದ ಸಾರುವ ಕೆಲಸವನ್ನು ಪಯನೀಯರರಂತೆ ಪ್ರವೇಶಿಸುತ್ತಿದ್ದಾರೆ. ಹನ್ನಳೆಂಬ ಒಬ್ಬಾಕೆ ಪಯನೀಯರ್ ಹೇಳುವುದು: “ನಾನು ಶಾಲೆಯನ್ನು ಮುಗಿಸುವುದರಲ್ಲಿದ್ದಾಗ, ಪಯನೀಯರ್ ಸೇವಾ ಶಾಲೆಯನ್ನು ಹಾಜರಾಗುತ್ತಿದ್ದವರನ್ನು ನಾನು ಸಂದರ್ಶಿಸಿದೆ, ಅಲ್ಲಿ ನಾನು ಇಬ್ಬರು ವೃದ್ಧ ಸಹೋದರಿಯರನ್ನು ಭೇಟಿಯಾದೆ. ನಾನು ನನ್ನಲ್ಲಿಯೇ ಯೋಚಿಸಿದೆ, ‘ಆ ಇಬ್ಬರು, ಪಯನೀಯರ್ ಸೇವೆಯನ್ನು ಮಾಡಶಕ್ತರಾಗಿರುವಲ್ಲಿ, ನಾನು ಏಕೆ ಮಾಡಸಾಧ್ಯವಿಲ್ಲ?’
“ಆದುದರಿಂದ ಶಾಲೆಯನ್ನು ಮುಗಿಸಿದ ಅನಂತರ ನಾನು ಒಬ್ಬಾಕೆ ಪಯನೀಯರಳಾದೆ. ಮೂರು ತಿಂಗಳುಗಳ ತರುವಾಯ, 26 ವರ್ಷ ಪ್ರಾಯದ ಜೋಜ್ಫೀನ್—ಒಬ್ಬಾಕೆ ಜುಜು ಆರಾಧಕಳು—ಎಂಬವಳನ್ನು ನಾನು ಭೇಟಿಯಾದೆ. ಆಕೆ ಹೇಳಿದ್ದು: ‘ಯೆಹೋವನ ಸಾಕ್ಷಿಗಳಾದ ನೀವು ಕೆಟ್ಟ ಜನರಾಗಿದ್ದೀರಿ. ನೀವು ಕ್ರಿಸ್ಮಸನ್ನು ಆಚರಿಸುವುದಿಲ್ಲ ಅಥವಾ ತಾಯಿತಿಗಳನ್ನು ಬಳಸುವುದಿಲ್ಲ.’ ಆಕೆಯೊಂದಿಗೆ ಬೈಬಲನ್ನು ಅಭ್ಯಸಿಸಲು ಆಕೆ ಅನುಮತಿಸುವುದಾದರೆ, ನಾವು ಆ ವಿಷಯಗಳನ್ನು ಯಾಕೆ ಆಚರಿಸುವುದಿಲ್ಲವೆಂದು ಆಕೆ ಕಲಿಯುವಳೆಂದು ನಾನು ಉತ್ತರಿಸಿದೆ. ಹಿಂದಿರುಗುವಂತೆ ಆಕೆ ನನ್ನನ್ನು ಆಮಂತ್ರಿಸಿದಳು. ಆಕೆ ಬೇಗನೆ ಕೂಟಗಳನ್ನು ಹಾಜರಾಗಲು ತೊಡಗಿದಳು ಮತ್ತು ಆಕೆಯ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದಳು. ದಶಂಬರ 1990 ರಲ್ಲಿ ಆಕೆ ದೀಕ್ಷಾಸ್ನಾನ ಪಡೆದುಕೊಂಡಳು. ಆಗಸ್ಟ್ 1991 ರಿಂದ, ಜೋಜ್ಫೀನ್ ಒಬ್ಬಾಕೆ ಪಯನೀಯರಳಾಗಿದ್ದಾಳೆ. ಪಯನೀಯರ್ ಸೇವಾ ಶಾಲೆಯನ್ನು ಆಕೆ ಕಳೆದ ವರ್ಷ ಹಾಜರಾದಾಗ, ತನ್ನ ಸಹಪಾಠಿಗಳಿಗೆ ಆಕೆ ನನ್ನನ್ನು ಆಕೆಯ ಆತ್ಮಿಕ ತಾಯಿಯೋಪಾದಿ ಪರಿಚಯಪಡಿಸಿದಳು!”
ವಿಡಿಯೊ ಮತ್ತು ರಾಜ್ಯ ಸಭಾಗೃಹ
ರಾಜ್ಯ ಸಭಾಗೃಹವೊಂದಕ್ಕೆ ಜಮೀನನ್ನು ಪಡೆಯುವಂತೆ ಸೊಸೈಟಿಯ ವಿಡಿಯೊ ರೆಕಾರ್ಡಿಂಗ್ಗಳಲ್ಲಿ ಒಂದು, ಸಣ್ಣ ಸಭೆಯೊಂದಕ್ಕೆ ಸಹಾಯವನ್ನು ನೀಡಿತು. ಜಮೀನನ್ನು ಖರೀದಿಸಲು ಹುಡುಕುತ್ತಾ, ನಾಲ್ಕು ಸಹೋದರರು ಓನೋಜೀಯನ್ನು—ಕ್ಷೇತ್ರದ ಸಾಂಪ್ರದಾಯಿಕ ಅರಸ—ಸಮೀಪಿಸಿದರು. ಅವರಿಗೊಂದು ಜಾಗವನ್ನು ಅವನು 20,000 ನೈರಾಕ್ಕೆ [1,025 ಅಮೆರಿಕನ್ ಡಾಲರುಗಳು] ನೀಡಿದನು. ಅಷ್ಟೊಂದು ಹಣವನ್ನು ಕೊಡಲು ಸಭೆಗೆ ಸಾಧ್ಯವಿರಲಿಲ್ಲ, ಯಾಕೆಂದರೆ ಯೋಜನೆಗೆ ಹಣಕಾಸನ್ನು ನೀಡುವವರು ಕೇವಲ 17 ಪ್ರಚಾರಕರು ಮಾತ್ರ ಅಲಿದ್ದರು. ಇನ್ನೊಂದು ಜಾಗದ ಬಗ್ಗೆ ತಾನು ಯೋಚಿಸುವೆನೆಂದು ಓನೋಜೀಯು ಹೇಳಿದನು.
ಕೆಲವು ತಿಂಗಳುಗಳ ಅನಂತರ, ಸಭಾ ಹಿರಿಯರಲ್ಲಿ ಒಬ್ಬನು ಓನೋಜೀಯ ಮನೆಗೆ ಭೇಟಿನೀಡಿದನು. ತನ್ನ ಪಟ್ಟಾಭಿಷೇಕದ ವಿಡಿಯೊ ರೆಕಾರ್ಡಿಂಗನ್ನು ಓನೋಜೀಯು ವೀಕ್ಷಿಸುತ್ತಾ ಇದ್ದನು. ಹಿರಿಯನು ಹೇಳಿದ್ದು: “ನೀವು ನೋಡಬೇಕೆಂದು ನಾನು ಅಪೇಕ್ಷಿಸುವ ಒಂದು ವಿಡಿಯೊ ನನ್ನಲ್ಲಿದೆ. ಅದು ಯೆಹೋವನ ಸಾಕ್ಷಿಗಳು—ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್ನಲ್ಲಿ) ಎಂಬುದಾಗಿದೆ.”
ತದನಂತರ, ವಿಡಿಯೊದ ಕುರಿತು ಒನೋಜೀಯು ಏನು ನೆನಸಿದನೆಂದು ಹಿರಿಯನು ಕೇಳಿದನು. “ಚಿತ್ರವನ್ನು ನಾನು ಐದು ಬಾರಿ ನೋಡಿದೆ,” ಎಂದು ಓನೋಜೀಯು ಹೇಳಿದನು. ವಿಡಿಯೊದಲ್ಲಿ ಅವನು ನೋಡಿದ ರಾಜ್ಯ ಸಭಾಗೃಹಗಳ ಕುರಿತು ಹಿರಿಯನು ಓನೋಜೀಗೆ ಜ್ಞಾಪಿಸಿದನು ಮತ್ತು ಸಮನಾದ ಒಂದನ್ನು ಸ್ಥಳೀಯ ಸಭೆಯು ಕಟ್ಟಲು ಬಯಸಿತ್ತೆಂದು ವಿವರಿಸಿದನು. ಸಭೆ ಈಗಾಗಲೇ ಪಡೆದಿದ್ದ ಸಣ್ಣ ಜಾಗದ ಪಕ್ಕದಲ್ಲಿರುವ ಸ್ವಲ್ಪ ಜಮೀನನ್ನು ಅದು ಖರೀದಿಸಬಹುದೊ ಎಂದು ಹಿರಿಯನು ಕೇಳಿದನು. ಓನೋಜೀಯು ಉತ್ತರಿಸಿದ್ದು: “ನಿನ್ನೆ ರಾತ್ರಿ ವಿಡಿಯೊವನ್ನು ನೋಡಿಯಾದ ನಂತರ, ಅದೇ ವಿಷಯದ ಕುರಿತು ನಾನು ಯೋಚಿಸಿದೆ.” ಅದರ ಮೇಲೆ, ಅವನು ಸಭೆಯ ಜಮೀನಿನ ಪಕ್ಕದಲ್ಲಿ 20 ಅಡಿ ಜಾಗವನ್ನು ಅಳೆದನು. “ಇದನ್ನು ನೀವು ಇಟ್ಟುಕೊಳ್ಳಿರಿ,” ಎಂದು ಅವನು ಹೇಳಿದನು. “ನಿಡಿದಾಗಿ, ನಿಮಗೆ ಅಗತ್ಯವಿದ್ದಷ್ಟು ಜಾಗವನ್ನು ನೀವು ತೆಗೆದುಕೊಳ್ಳಬಲ್ಲಿರಿ. ದಾಖಲೆಗಳನ್ನು ತಯಾರಿಸಿರಿ, ನಾನು ಅವುಗಳ ಮೇಲೆ ಸಹಿಹಾಕುವೆನು.”
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, 1994 ಕ್ಯಾಲೆಂಡರ್ ಆಫ್ ಜಿಹೋವಸ್ ವಿಟ್ನೆಸಸ್ ನೋಡಿರಿ.
[ಪುಟ 9 ರಲ್ಲಿರುವ ಚೌಕ]
ದೇಶದ ಪಾರ್ಶ್ವ ದೃಶ್ಯ
ಇಸವಿ 1993ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 1,74,582
ಪ್ರಮಾಣ: 1 ಸಾಕ್ಷಿಗೆ 507
ಜ್ಞಾಪಕ ಹಾಜರಿ: 4,73,245
ಸರಾಸರಿ ಪಯನೀಯರ್ ಪ್ರಚಾರಕರು: 19,777
ಸರಾಸರಿ ಬೈಬಲ್ ಅಧ್ಯಯನಗಳು: 2,42,028
ದೀಕ್ಷಾಸ್ನಾನ ಪಡೆದವರು: 8,888
ಸಭೆಗಳು: 3,289
ಬ್ರಾಂಚ್ ಆಫೀಸ್: ಬೆನಿನ್ ನಗರ, ಎಡೊ ರಾಜ್ಯ