ಈತಿಯೋಪ್ಯದ “ದೈವಿಕ ಬೋಧನೆ” ಅಧಿವೇಶನ ಒಂದು ವಿಶೇಷ ಸಂತಸದ ಸಮಯ
ಸ್ವಾತಂತ್ರ್ಯದಲ್ಲಿ ಅದು ಈತಿಯೋಪ್ಯದ ಮೊದಲನೆಯ ಜಿಲ್ಲಾ ಅಧಿವೇಶನವಲ್ಲ, ಆದರೆ ಅದು ನಿಶ್ಚಯವಾಗಿಯೂ ವಿಶೇಷವಾಗಿತ್ತು. ನವಂಬರ 11, 1991 ರಲ್ಲಿ ಶಾಸನಬದ್ಧ ಅಂಗೀಕಾರವನ್ನು ಪಡೆದಂದಿನಿಂದ, ಯೆಹೋವನ ಸಾಕ್ಷಿಗಳು ಆ್ಯಡಿಸಾಬಬದ ಮಧ್ಯದಲ್ಲಿರುವ ದೇಶದ ಅತಿ ದೊಡ್ಡ ಕ್ರೀಡಾಂಗಣವಾದ ಸಿಟಿ ಸ್ಟೇಡಿಯಮ್ನಲ್ಲಿ ಕೂಡಿಬಂದದ್ದು ಇದು ಮೂರನೆಯ ಬಾರಿ. ಈ ಕ್ರೀಡಾಂಗಣವು ಆರಂಭದಲ್ಲಿ ಭಾನುವಾರದಂದು ಲಭ್ಯವಿರದರ್ದಿಂದ ಮತ್ತು ಸಾಕಷ್ಟು ದೊಡ್ಡದ್ದದ ಬೇರೆ ಯಾವ ಸೌಕರ್ಯವು ದೊರೆಯದ್ದರಿಂದ, ಕಾರ್ಯಕ್ರಮವನ್ನು ಜನವರಿ 13-15, 1994 ರಂದು, ಗುರುವಾರದಿಂದ ಶನಿವಾರದ ತನಕ, ಮೂರು ದಿನಗಳಿಗೆ ಸಂಕುಚಿಸಲಾಯಿತು.
ಈ ಮೂರು ದಿನಗಳು ನೀಲ ಆಕಾಶದ ಕೆಳಗೆ ಹಿತಕರವಾದ ಮಿತ ಹವಾಮಾನದಲ್ಲಿ ಮಾತ್ರವಲ್ಲ, “ದೈವಿಕ ಬೋಧನೆ”ಯ ಪೂರ್ಣ ಪ್ರಭಾವದೊಂದಿಗೆ ಆತ್ಮಿಕ ಜ್ಞಾನೋದಯದಲ್ಲೂ ಸುಖವನ್ನನುಭವಿಸಿದವು. ವೇದಿಕೆಯ ಸುತ್ತಲೂ ಆಕರ್ಷಕ ಪುಷ್ಪದೇರ್ಪಾಡಿನ ಹಿನ್ನೆಲೆಯಲ್ಲಿ, ಅಧಿವೇಶನದ ಮುಖ್ಯ ವಿಷಯವು ಎಂಹ್ಯಾರಿಕ್ ಲಿಪಿಯಲ್ಲಿ ಪ್ರಧಾನವಾಗಿ ಎದ್ದುಕಾಣುತ್ತಿತ್ತು.
ಆದರೆ ಅಧಿವೇಶನವನ್ನು ವಿಶಿಷ್ಟವನ್ನಾಗಿ ಮಾಡಿದ್ದು ಯಾವುದು? ಸಮೃದ್ಧ ಕಾರ್ಯಕ್ರಮದೊಂದಿಗೆ ಪ್ರತಿಯೊಬ್ಬರ ಯೋಚನೆಗಳು ಮತ್ತು ಅನಿಸಿಕೆಗಳು ನಮ್ಮ ಪ್ರೀತಿಯುಳ್ಳ ಅಂತಾರಾಷ್ಟ್ರೀಯ ಬಾಂಧವ್ಯದ ಮೇಲೆ ಮತ್ತು ರಾಜ್ಯದ ಬೆಳವಣಿಗೆಯ ರೂಪದಲ್ಲಿ ಆತನ ಜನರ ಮೇಲೆ ದೇವರ ಆಶೀರ್ವಾದದ ಸ್ಪಷ್ಟ ಪ್ರದರ್ಶನೆಗಳ ಮೇಲೆ ಕೇಂದ್ರೀಕೃತವಾಗಿದ್ದವು. ಜಿಬೂಟಿ ಮತ್ತು ಯೆಮೆನ್ ಕೂಡ ಸೇರಿ, 16 ದೇಶಗಳಿಂದ, ಸುಮಾರು 270 ವಿದೇಶೀ ಪ್ರತಿನಿಧಿಗಳು ಅಲಿದ್ದರು. ಅರ್ಧಕ್ಕಿಂತಲೂ ಹೆಚ್ಚು ಮಂದಿ ಯೂರೋಪ್ ಮತ್ತು ಉತ್ತರ ಅಮೆರಿಕದ ಚಳಿ ಹವೆಯಿಂದ ಬಂದಿದ್ದರು. ಭೇಟಿಕಾರರಲ್ಲಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸದಸ್ಯರಲ್ಲಿ ಇಬ್ಬರಾದ ಲೈಡ್ ಬ್ಯಾರಿ ಮತ್ತು ಡ್ಯಾನಿಯೆಲ್ ಸಿಡ್ಲಿಕ್ ಕೂಡಿದ್ದರು.
ತಮ್ಮ ಸಂದರ್ಶಕ ಸಹೋದರರಿಗಾಗಿ ಹೃದಯಪೂರ್ವಕವಾದ ಪ್ರೀತಿಯ ಜತೆಯಲ್ಲಿ ಈತಿಯೋಪ್ಯದ ಸಾಂಪ್ರದಾಯಿಕ ಅತಿಥಿ ಸತ್ಕಾರವು ವಿಪುಲವಾಗಿ ಪ್ರವಹಿಸಿ ಭಾಷಾ ತಡೆಗಟ್ಟುಗಳನ್ನು ಜಯಿಸಿದವು. ವಂದನೆಗಳು ಬರಿಯ ಹಸ್ತಲಾಘವಳಲ್ಲ, ಬದಲಿಗೆ ಆಲಿಂಗನಗಳು ಮತ್ತು ಚುಂಬನಗಳು, ಆರುಮಡಿಯ ತನಕ! ಹೆಚ್ಚಿನ ಸಂದರ್ಶಕರು ಈತಿಯೋಪ್ಯದಲ್ಲಿ ರಾಜ್ಯ ಕಾರ್ಯದ ಕುರಿತು ಓದಿದ್ದರು ಮತ್ತು ತಮ್ಮ ಈತಿಯೋಪ್ಯ ಬಂಧುಗಳು ಸೆರೆವಾಸ ಮತ್ತು ಹಿಂಸೆಯ ಇತರ ರೂಪಗಳನ್ನು ತಾಳಿಕೊಂಡ ಶೋಧಿಸಲ್ಪಟ್ಟ ಸಮಗ್ರತೆ ಪಾಲಕರೆಂದು ಅವರಿಗೆ ತಿಳಿದಿತ್ತು.a ಆದರೆ ಸಂತಸದ ವದನಗಳನ್ನು ತೋರಿಸುವ ಎಷ್ಟೋ ಯುವ ಜನರನ್ನು ಮತ್ತು ಹೆಚ್ಚಿನ ದೇಶಗಳಲ್ಲಿ ಇಂದು ಕಡಮೆಯಾಗುತ್ತಿರುವ ವಿನಯಶೀಲತೆಯನ್ನು ಕಾಣಲು ಸಂದರ್ಶಕರು ಆಶ್ಚರ್ಯಪಟ್ಟರು. ಇಥಿಯೋಪ್ಯದ ಹೆಚ್ಚಿನ ಸಹೋದರಿಯರು ತಮ್ಮ ಬೆಳ್ಳಗಿನ, ಕೌಶಲವುಳ್ಳ ಕಸೂತಿಹಾಕಿದ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟಿದ್ದರು, ಇದು ನಿಜವಾಗಿ ಗೆಲವಿನ ಆತ್ಮಕ್ಕೆ ಹೆಚ್ಚನ್ನು ಕೂಡಿಸಿತು.
ಶುಕ್ರವಾರದ ದೀಕ್ಷಾಸ್ನಾನವು ರೋಮಾಂಚಕವಾಗಿ ಪರಿಣಮಿಸಿತು. ವರ್ಷ 10 ರಿಂದ 80ರ ಪ್ರಾಯದವರಾದ 530 ಹೊಸತಾಗಿ ಸಮರ್ಪಿತ ವ್ಯಕ್ತಿಗಳ ಒಂದು ಉದ್ದ ಸಾಲು ಸ್ಟೇಡಿಯಮ್ನ ಅರ್ಧ ಕ್ರೀಡಾರಂಗವನ್ನು ವ್ಯಾಪಿಸಿತ್ತು. ಯಾರೂ ನಿರೀಕ್ಷಿಸಿದದ್ದಕ್ಕಿಂತ ಇದು ಬಹಳ ಹೆಚ್ಚಾಗಿತ್ತು—ದೇಶದಲ್ಲಿರುವ ಪ್ರತಿ 7 ಸಾಕ್ಷಿಗಳಿಗೆ 1 ಕ್ಕಿಂತ ಹೆಚ್ಚು. ಇಲ್ಲಿ ತನ್ನ ಜನರ ಮೇಲೆ ಯೆಹೋವನ ಆಶೀರ್ವಾದದ ಎಂತಹ ಒಂದು ಪುರಾವೆ! ಇಷ್ಟು ಜನರ ಸ್ನಾನದ ದೃಶ್ಯವನ್ನು ಕಾಣುತ್ತಲೆ ಅನೇಕ ಆನಂದಾಶ್ರುಗಳು ಸುರಿದವು, ಇದು 40ಕ್ಕೂ ಮಿಕ್ಕಿದ ಇಟೆಲಿಯ ಪ್ರತಿನಿಧಿಗಳ ಇಂಪಾದ ಹಾಡುವಿಕೆಯಿಂದ ಇನ್ನಷ್ಟು ವರ್ಧಿಸಿತು. ಯೆಶಾಯ 60:5ರ ಪ್ರವಾದನಾ ಮಾತುಗಳನ್ನು ಅನೇಕರು ನೆನಪಿಸಿದರು: “ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದುರುತ್ತಾ ಉಬ್ಬುವದು; ಏಕಂದರೆ ಸಮುದ್ರವ್ಯಾಪಾರಸಮೃದ್ಧಯು ನಿನ್ನ ಕಡೆಗೆ ತಿರುಗುವದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವದು.”
ಸಂತಸಕ್ಕೆ ವಿಶಿಷ್ಟ ಕಾರಣಗಳು
ಶುಕ್ರವಾರದಂದು ಈತಿಯೋಪ್ಯದಲ್ಲಿನ ರಾಜ್ಯ ಕಾರ್ಯದ ಚಿಕ್ಕಾರಂಭಗಳು ಸಾಕ್ಷತ್ದರ್ಶನಗಳಲ್ಲಿ ಪುನರ್ದೃಶ್ಯಕ್ಕೆ ತರಲ್ಪಟ್ಟಾಗ, ಯೆಹೋವನ ಆಶೀರ್ವಾದವು ಇನ್ನಷ್ಟು ಸ್ಪಷ್ಟಪಡಿಸಲ್ಪಟ್ಟಿತು. ವರ್ಷ 1950 ಗಳಲ್ಲಿ ಮತ್ತು 1970 ಗಳಲ್ಲಿ ಅಲ್ಲಿ ಸೇವೆ ಮಾಡಿದ ಮಿಷನೆರಿಗಳ ಒಂದು ಗುಂಪಿನೊಂದಿಗೆ ಅವು ನಡಿಸಲ್ಪಟ್ಟವು. ಅವರು ಆ್ಯಡಿಸಾಬಬದಲ್ಲಿ ಆಗಮಿಸಿದ ಸಪ್ಟಂಬರ 14, 1950 ರಿಂದ ಆರಂಭಿಸಿ, ಅವರು ನಡಿಸಿದ ಬೈಬಲ್ ಶಿಕ್ಷಣದ ಕಾರ್ಯವನ್ನು ರೇ ಕ್ಯಾಸನ್, ಜಾನ್ ಕ್ಯಾಂಫಸ್, ಹೇವುಡ್ ವಾರ್ಡ್ ಇವರು ವರ್ಣಿಸುವುದನ್ನು 8,000 ಕ್ಕಿಂತಲೂ ಹೆಚ್ಚು ಮಂದಿ ಆಲಿಸಿದರು. ಸಾಮಾನ್ಯ ಶಿಕ್ಷಣದಲ್ಲಿ ಅವರು ಸಕ್ರಿಯರಾಗುವಂತೆ ಆ ದಿನಗಳ ಸಾಮ್ರಾಜ್ಯದ ಸರಕಾರವು ಆವಶ್ಯಪಡಿಸಿತ್ತು. ಆದುದರಿಂದ ಅವರು ಶಹರದ ಮಧ್ಯೆ ವಿವಿಧ ಅಧ್ಯಯನ ವಿಷಯಗಳುಳ್ಳ ಪ್ರೌಢ ವಿದ್ಯಾಭ್ಯಾಸದ ಒಂದು ಶಾಲೆಯನ್ನು ಸ್ಥಾಪಿಸಿದರು. ಅದರೆ ತಮ್ಮ ಬಿಡುವು ಹೊತ್ತಿನಲ್ಲಿ ಈ ಮಿಷನೆರಿಗಳು ದೈವಿಕ ಬೋಧನೆಯಲ್ಲಿ ಕೇಂದ್ರಿತವಾದ ಶಿಕ್ಷಣವನ್ನು ಪ್ರವರ್ಧಿಸಲು ಹುಡುಕಿದರು. ಎಂಹ್ಯಾರಿಕ್ ಎಂಬ 250 ಅಕ್ಷರಗಳ ಒಂದು ವರ್ಣಮಾಲೆಯುಳ್ಳ ಒಂದು ಜಟಿಲವಾದ ಭಾಷೆಯನ್ನು ಕಲಿಯಲು ಅವರಿಗೆ ಬಹಳ ಕಷ್ಟಪಡಬೇಕಾಯಿತು. ತಮ್ಮ ಮೊದಲನೆಯ ಮನೆ ಬೈಬಲಭ್ಯಾಸವನ್ನು ನಡಿಸುವುದರಲ್ಲಿ ಅವರು ಯಶಸ್ವಿಯಾಗುವ ಮುಂಚೆ ಸುಮಾರು ಅರ್ಧ ವರ್ಷ ದಾಟಿಹೋಯಿತು. ಸುಮಾರು 43 ವರ್ಷಗಳ ತರುವಾಯ, ಈ ಹಿಂದಣ ಶಾಲಾ ಮಾಸ್ಟರುಗಳನ್ನು ನೆನಪಿಸಿದ ಜನರನ್ನು ಅವರು ದಾರಿಯಲ್ಲಿ ಭೇಟಿಯಾದರು. ಅಧಿವೇಶನದಲ್ಲಾದರೊ, ನಂಬಿಕೆಯ ಕಟ್ಟಾಳುಗಳಾಗಿರುವ ಹಿಂದಿನ ಬೈಬಲ್ ವಿದ್ಯಾರ್ಥಿಗಳಲ್ಲಿ ಅನೇಕರ ಪುನರ್ಮಿಲನದಲ್ಲಿ ಅವರು ಉಲ್ಲಾಸಿಸಿದರು, ಅವರು ತಮ್ಮ ಸ್ವಂತ ಆತ್ಮಿಕ ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಇವರಿಗೆ ಪರಿಚಯಮಾಡಿಕೊಟ್ಟರು.—1 ಥೆಸಲೊನೀಕ 2:19, 20.
ಹರ್ಷಭರಿತ ಮತ್ತು ಅತಿ ಗಮನಕೊಡುವ ಸಭಿಕರು ಹಿಂದಣ ಮಿಷನೆರಿಗಳ ಸಾಕ್ಷತ್ದರ್ಶನಗಳಿಗೆ ಮಾತ್ರವಲ್ಲ ವಿದೇಶಿ ಪ್ರತಿನಿಧಿಗಳಿಂದ—ಬ್ರಿಟನ್, ಕೆನಡ, ಜರ್ಮನಿ, ಇಸ್ರಾಯೆಲ್, ಇಟೆಲಿ, ಕೆನ್ಯ, ನೆದರ್ಲೆಂಡ್, ಮತ್ತು ಅಮೆರಿಕದಿಂದ—ತರಲ್ಪಟ್ಟ ವರದಿಗಳಿಗೆ ಮತ್ತು ಅಭಿವಂದನೆಗಳಿಗೆ ಸಹ ದೀರ್ಘ ಕರತಾಡನವನ್ನಿತ್ತರು. ಇದು ಪುನಃ ದೇವರ ಜನರ ಪ್ರೀತಿಯುಳ್ಳ ಲೋಕವ್ಯಾಪಕ ಬಾಂಧವ್ಯವನ್ನು ಒತ್ತಿಹೇಳಿತು. ಮುಖ್ಯ ಭಾಷಣಗಳು ಆಡಳಿತ ಮಂಡಲಿಯ ಅಭಿಷಿಕ್ತ ಸಹೋದರರಿಂದ ನೀಡಲ್ಪಟ್ಟವು, ಹಾಗೂ ಅವರ ಹೃತ್ಪೂರ್ವಕವಾದ ಪ್ರಾರ್ಥನೆಗಳು ಸಭಿಕರನ್ನು ಆಳವಾಗಿ ಸ್ಪರ್ಶಿಸಿದವು. ತಮ್ಮ ನಿರ್ಮಾಣಿಕನನ್ನು ಸ್ಮರಿಸುವ ಯುವಜನರ ಕುರಿತ ನಾಟಕದ ಪಾತ್ರಧಾರಿಗಳಲ್ಲಿ ಸ್ಟೇಡಿಯಮ್ನ ಯುವ ಜನರು ತಮ್ಮನ್ನು ಕಾಣಶಕ್ತರಾದರು, ಆ ನಾಟಕವು ಅತಿ ಸಹಜವಾಗಿ ಮತ್ತು ಸಜೀವ ರೀತಿಯಲ್ಲಿ ಸಾದರಪಡಿಸಲ್ಪಟ್ಟಿತು. ಇಂಗ್ಲಿಷ್ನಲ್ಲಿ ಹೊಸ ಬಿಡುಗಡೆಗಳಲ್ಲದೆ, ಮೂರು ಹೊಸ ಎಂಹ್ಯಾರಿಕ್ ಬಿಡುಗಡೆಗಳು ಬಹಳ ಉತ್ಸಾಹವನ್ನು ಉತ್ಪಾದಿಸಿದವು.b
ಮಧ್ಯಂತರ ವಿರಾಮಗಳಲ್ಲಿ ಮತ್ತು ಬೇರೆ ಸಮಯಗಳಲ್ಲಿ ಅನೇಕ ಅಮೂಲ್ಯ ವ್ಯಕ್ತಿಗಳೊಂದಿಗೆ ಪರಿಚಯಮಾಡುವ ಉತ್ತಮ ಸಂದರ್ಭಗಳು ಅಲ್ಲಿದ್ದವು. ದೃಷ್ಟಾಂತಕ್ಕಾಗಿ, ಸರಿ ಎದುರಿನ ಸಾಲಿನಲ್ಲಿ, ಕೈಯಿಂದ ಮಾಡಿದ ಕೈಕೋಲಿನೊಂದಿಗೆ, ಈತಿಯೋಪ್ಯದ ಅತಿ ವಯೋವೃದ್ಧ ಪ್ರಚಾರಕರಾದ ತೂಲು ಮಕೂರ್ಯ ಕೂತಿದ್ದರು. ಕಳೆದ ವರ್ಷ, 113ರ ಹಣ್ಣು ವಯಸ್ಸಿನಲ್ಲಿ, ಅವರಿಗೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ದೀಕ್ಷಾಸ್ನಾನವಾಯಿತು. ಈ ಅಧಿವೇಶನದಲ್ಲಿ ಅವರ 80 ವರ್ಷ ವಯಸ್ಸಿನ ಪತ್ನಿಯು ಅವರ ಮಾದರಿಯನ್ನು ಅನುಸರಿಸುವುದನ್ನು, ಹಾಗೂ ಅವರ ಆತ್ಮಿಕ ಸಹೋದರಿಯಾಗುವುದನ್ನು ಕಾಣುವ ಸಂತೋಷವು ಸಹ ಅವರದ್ದಾಯಿತು. ಇಡೀ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯು ಎಳೆಯ ಜನರಿಗೆ ಉತ್ತಮ ಪ್ರೇರೇಪಣೆಯಾಗಿತ್ತು. ಅಂಥವರಲ್ಲಿ ಒಬ್ಬನು ಯೊಹಾನೆಸ್ ಗೋರೆಮ್ಸ್. ಇವನು 16 ವಯಸ್ಸಿನವನು ಮತ್ತು ಇನ್ನೂ ಶಾಲೆಯ ವಿದ್ಯಾರ್ಥಿಯಾಗಿರುವ ಇವನು ಈವಾಗಲೆ ಕ್ರಮದ ಪಯನೀಯರ ಪ್ರಚಾರಕನಾಗಿ ನಾಲ್ಕು ವರ್ಷಗಳ ವರೆಗೆ ಸೇವೆಮಾಡಿದ್ದಾನೆ. ಅವನು ಮತ್ತು ಅವನಿಗಿಂತಲೂ ಚಿಕ್ಕವರಾದ ಇತರ ಶಾಲಾ-ವಯಸ್ಸಿನ ಪಯನೀಯರರು, ಶಾಲೆಗೆ ಹೋಗುವ ದಾರಿಯಲ್ಲಿ ಬೆಳಿಗ್ಗೆ ಬೇಗ ಸಾಕ್ಷಿಕೊಡುವ ಮೂಲಕ ಅಥವಾ ಶಾಲಾಮಧ್ಯಂತರದ ಮತ್ತು ಅನಂತರದ ವಿರಾಮ ಸಮಯವನ್ನು ಉಪಯೋಗಿಸುವ ಮೂಲಕ ಸದವಕಾಶಗಳನ್ನು ಖರೀದಿಸಲು ಕಲಿತಿದ್ದಾರೆ.
ಸಮಗ್ರತೆಯ ಎಂತಹ ಮಾದರಿಗಳು!
ಸಭಿಕರಲ್ಲಿ ನೂರಾರು ಮಂದಿ ಹಿಂದಿನ ಸರಕಾರಗಳ ಕೆಳಗೆ ಸೆರೆವಾಸ ಮತ್ತು ಹಿಂಸೆಯನ್ನು ಅನುಭವಿಸಿದ್ದರು. ಮ್ಯಾಂಡಫ್ರೊ ಯಿಫ್ರು ಅಂಥ ಐದು ವರ್ಪಗಳ ಸೆರೆವಾಸವನ್ನು ನೆನಪಿಗೆ ತರುತ್ತಾನೆ, ಆದರೆ ಈಗ ಆ್ಯಡಿಸಾಬಬದಲ್ಲಿ ಭಾಷಾಂತರ, ಪ್ರಿಂಟಿಂಗ್, ಮತ್ತು ಶಿಪ್ಪಿಂಗ್ನ ಉಸ್ತುವಾರಿ ನೋಡುವ, ಹೊಸತಾಗಿ ಸ್ಥಾಪಿಸಿದ ಆಫೀಸಿನಲ್ಲಿ ಸೇಮೊಡುವುದರಲ್ಲಿ ಅವನು ಆನಂದಿಸುತ್ತಾನೆ. ಅವನೊಂದಿಗೆ ಸೇವೆಮಾಡುವ ಇನ್ನೊಬ್ಬ ಯುವಕನಾದ ಜೆಕಾರಿಯಸ್ ಎಷತು, ಅವನ ತಂದೆ ಸೆರೆವಾಸದ ಮೂರು ವರ್ಷಗಳ ಸಮಯದಲ್ಲಿ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿದಕ್ಕಾಗಿ ಎಂಟು ವರ್ಷಗಳ ಹಿಂದೆ ಕೊಲೆಮಾಡಲ್ಪಟ್ಟಾಗ, ತನ್ನ ಸಮಗ್ರತೆಯಿಂದ ತಿರುಗಲಿಲ್ಲ. ಐದು ಮಕ್ಕಳಲ್ಲಿ ಒಬ್ಬನಾದ ಜೆಕಾರಿಯಸ್, ತನ್ನ ತಂದೆಯು ಸೆರೆಮನೆಗೆ ಹೋದಾಗ ಹತ್ತು ವರ್ಷ ಪ್ರಾಯದವನಾಗಿದ್ದನು. ಈಗ ಹದಿವರ್ಷಗಳ ಕೊನೆಯಲ್ಲಿದ್ದು ಇನ್ನೂ ಶಾಲೆಯಲ್ಲಿರುವ ಮೆಸ್ವಟ್ ಗರ್ಮ ಮತ್ತು ಅವನ ಅಕ್ಕ ಯೊಆಲನ್ ಭಾವಚಿತ್ರಗಳಿಂದ ಮಾತ್ರ ತಮ್ಮ ತಂದೆಯನ್ನು ನೆನಪಿಸುತ್ತಾರೆ, ಯಾಕಂದರೆ ತನ್ನ ತಾಟಸ್ಥ್ಯಕ್ಕಾಗಿ ಫಕ್ಕನೆ ಅವನು ಕೊಲ್ಲಲ್ಪಟ್ಟಾಗ ಅವರು ತೀರ ಚಿಕ್ಕವರಾಗಿದ್ದರು. ಅವನ ನಿಷ್ಠೆಯು ಅವರನ್ನು ಪ್ರೇರೇಪಿಸಿತು, ಮತ್ತು ಅವರ ತಂದೆಯು ಅವನ ಮರಣದ ಸಮಯದಲ್ಲಿ ಮಾಡುತ್ತಿದ್ದಂತೆ ಅವರಿಬ್ಬರೂ ಕ್ರಮದ ಪಯನೀಯರರಾಗಿ ಸೇವೆಮಾಡುತ್ತಿದ್ದಾರೆ.
ಇನ್ನೊಬ್ಬ ಸಮಗ್ರತೆ ಪಾಲಕನು ವಿಶೇಷ ಪಯನೀಯರನಾಗಿ ರಿಫ್ಟ್ ವ್ಯಾಲಿಯ ಒಂದು ಸುಂದರ ಪ್ರಾಂತದಲ್ಲಿ ಈಗ ಸೇವೆಮಾಡುತ್ತಿರುವ ಟಾಮಿರಾಟ್ ಯಾಡೆಟ್. ತನ್ನ ಕ್ರೈಸ್ತ ತಾಟಸ್ಥ್ಯದಿಂದಾಗಿ, ಕೆಲವೊಮ್ಮೆ ಬೇಡಿಗಳಲ್ಲಿ ಮತ್ತು ತೀವ್ರವಾದ ಹೊಡೆತಗಳಿಗೆ ಅಧೀನನಾಗಿ ಅವನು ಮೂರು ವರ್ಷಗಳನ್ನು ಏಳು ವಿಭಿನ್ನ ಸೆರೆಮನೆಗಳಲ್ಲಿ ಕಳೆದನು. ಆದರೂ, ಸೆರೆಮನೆಯಲ್ಲಿ ಅವನು ದೇವರ ರಾಜ್ಯಕ್ಕಾಗಿ ನಿಲುವನ್ನು ತೆಗೆದುಕೊಳ್ಳುವಂತೆ ಒಂದು ಡಜನ್ಗಿಂತಲೂ ಅಧಿಕ ಜನರಿಗೆ ಸಹಾಯಮಾಡಿದನು.
ಈಗ ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆಮಾಡುತ್ತಿರುವ ಟೆಸ್ಫು ಟಮೆಲ್ಸೋ, ವಿಶೇಷ ಪಯನೀಯರನಾಗಿದ್ದ ವರ್ಷಗಳಲ್ಲಿ 17 ಸಾರಿ ಸೆರೆಮನೆಗೆ ಹಾಕಲ್ಪಟ್ಟನು. ಅವನಿಗೆ ಹೊಡೆತಗಳಿಂದಾದ ಕಲೆಗಳಿವೆ, ಆದರೆ ತನ್ನ ಹಿಂದಿನ ನೇಮಕಗಳಲ್ಲಿ ಸಭೆಗಳನ್ನು ಕಾಣಲು ಅವನು ಪುಳಕಿತಗೊಳ್ಳುತ್ತಾನೆ. ಆಕಾಕಿ ಸಭೆಯ ಹಲವಾರು ಮಂದಿ ಸಹೋದರ ಮತ್ತು ಸಹೋದರಿಯರು ಸೆರೆವಾಸ ಮತ್ತು ಕ್ರೌರ್ಯವನ್ನು ಅನುಭವಿಸಿದರು, ಆದರೂ ಸಭೆಯು ನೂರಕ್ಕಿಂತಲೂ ಹೆಚ್ಚು ಪ್ರಚಾರಕರ ಸಂಖ್ಯೆಗೆ ಬೆಳೆದಿದೆ. ಅವರು ಈತಿಯೋಪ್ಯದಲ್ಲಿ ಯೆಹೋವನ ಸಾಕ್ಷಿಗಳ ಪ್ರಥಮ ರಾಜ್ಯ ಸಭಾಗೃಹವನ್ನು ಕಟ್ಟಿದ್ದಾರೆ. ರಾಜಧಾನಿಯ ಸುಮಾರು 300 ಕಿಲೊಮೀಟರ್ ಉತ್ತರಕ್ಕಿರುವ ಚಿತ್ರಯೋಗ್ಯ ದೃಶ್ಯದ ಒಂದು ಶಹರವಾದ ಡೇಸೆದಿಂದ, ಮರಣಕ್ಕೆ ಅತಿ ಹತ್ತಿರವಾಗಿದ್ದ ಮತ್ತು ಗುರಿಪಡಿಸಲ್ಪಟ್ಟ ಚಿತ್ರಹಿಂಸೆಯಿಂದ ಸ್ಥಳಿಕ ಸಹೋದರನೊಬ್ಬನು ಸಾಯುವುದನ್ನು ಕಂಡ ಐದು ಮಂದಿಯ ಒಂದು ಗುಂಪು ಬಂದಿತ್ತು. ಅವರಲ್ಲೊಬ್ಬ ಹಿರಿಯನಾದ ಮೆಸರೇಷ ಕಾಸನು, ಆರು ವರ್ಷಗಳ ಸೆರೆವಾಸವನ್ನು ತಾನು ತಾಳಿಕೊಂಡದ್ದು ತಾನು ಯಾವುದೇ ರೀತಿಯಲ್ಲಿ ವಿಶಿಷ್ಟನಾಗಿದ್ದ ಕಾರಣದಿಂದಲ್ಲ, ಕೇವಲ ಯೆಹೋವನಲ್ಲಿ ಆತುಕೊಳ್ಳಲು ಕಲಿತ ಕಾರಣದಿಂದಲೆ ಎಂದು ವಿವರಿಸಿದನು.—ರೋಮಾಪುರ 8:35-39; ಅ. ಕೃತ್ಯಗಳು 8:1 ಹೋಲಿಸಿ.
ಇತ್ತೀಚೆಗೆ ಕೂಡ, ಇತರರು ಪರೀಕ್ಷೆಯ ಕೆಳಗೆ ತಮ್ಮ ನಂಬಿಗಸ್ತಿಕೆಯನ್ನು ತೋರಿಸಿದರು. ಸಾಕ್ಷಿಗಳ ತಾಟಸ್ಥ್ಯದ ಕಾರಣ ಅವರಿಗೆ ಪೊಲೀಸ್ ಸುರಕ್ಷೆ, ಸಂಚಾರ ದಸ್ತಾವೇಜುಗಳು, ವಿವಾಹ ಸರ್ಟಿಫಿಕೆಟ್ಗಳು, ಆಸ್ಪತ್ರೆ ಚಿಕಿತ್ಸೆ, ಮತ್ತು ಉದ್ಯೋಗಗಳು ನಿರಾಕರಿಸಲ್ಪಟ್ಟಿದ್ದ ಒಂದು ಸಮೀಪದ ದೇಶದಿಂದ ಒಂದು ದೊಡ್ಡ ಗುಂಪು ಅಧಿವೇಶನಕ್ಕೆ ಬಂದಿತು. ಕೆಂಪು ಸಮುದ್ರದಲ್ಲಿನ ಎರೆಟ್ರಿಯನ್ ಬಂದರಾದ ಮಸಾವದ ಸಮೀಪ ಯುದ್ಧವು ಅತ್ಯುಗ್ರವಾಗಿದ್ದಾಗ, ಮಕ್ಕಳೂ ಸೇರಿ, ಎಲ್ಲಾ ಒಟ್ಟಿಗೆ 39 ಮಂದಿ ಇದ್ದ ಇಡೀ ಸಭೆಯು, ಹಿಂದಿನ ಸರಕಾರದಿಂದ ಅವರ ಮನೆಗಳ ಮೇಲೆ ಗುಂಡಿನ ಸುರಿಮಳೆಯನ್ನು ಪಾರಾಗಲಿಕ್ಕಾಗಿ, ಮರುಭೂಮಿಯ ಒಂದು ತಗ್ಗಾದ ಸೇತುವೆಯ ಕೆಳಗೆ ಸುಮಾರು ನಾಲ್ಕು ತಿಂಗಳು ವಾಸಿಸಿದರು. ಈ ಸೆಕೆ ಮತ್ತು ಅನುಭೋಗ ಕಳೆತದ ಹಿನ್ನೆಲೆಯಲ್ಲೂ, ಅವರ ದೈನಂದಿನ ಶಾಸ್ತ್ರವಚನಗಳ ಚರ್ಚೆ ಮತ್ತು ಬೇರೆ ಕೂಟಗಳು ಅವರಿಗೆ ಮಹಾ ಬಲವನ್ನು ಕೊಟ್ಟವು ಮತ್ತು ಯೆಹೋವನಿಗೆ ಹಾಗೂ ಒಬ್ಬರೊಬ್ಬರಿಗೆ ಆಪ್ತ ಸೇರಿಕೆಯನ್ನು ತಂದಿತು. ನೀಲ ನೈಲ್ ನದಿಯ ಉಗಮದ ಸಮೀಪ ಸೇವೆಮಾಡುತ್ತಿದ್ದ ಇಬ್ಬರು ವಿಶೇಷ ಪಯನೀಯರ ಸಹೋದರಿಯರು, ಆರ್ತೊಡಾಕ್ಸ್ ಚರ್ಚಿನಿಂದ ಚಿತಾಯಿಸಲ್ಪಟ್ಟ ದೊಂಬಿ ಬೆದರಿಕೆಗಳನ್ನು ಮತ್ತು ಕಿರುಕುಳಗಳನ್ನು ತಾಳಿಕೊಂಡರು, ಆದರೆ ಇಬ್ಬರೂ ಬಿಡದೆ ಮುಂದುವರಿದರು ಮತ್ತು ಈ ಅಧಿವೇಶನದಲ್ಲಿ ಹಲವಾರು ಮಂದಿ ಬೈಬಲ್ ವಿದ್ಯಾರ್ಥಿಗಳು ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸುವುದನ್ನು ಕಂಡರು.
ಒಬ್ಬ ಸಹೋದರನು, ಸೊಮಾಲಿಯದ ಅನತಿದೂರದಲ್ಲಿರುವ ಶುಷ್ಕ ಓಗ್ಯಾಡನ್ ಪ್ರದೇಶದ ಒಳಭಾಗದ ಒಂದು ಉದ್ಯೋಗದಲ್ಲಿ ತನ್ನ ಏಕಾಂತತೆಯ ಪರೀಕ್ಷೆಯನ್ನು ಜ್ಞಾಪಿಸಿಕೊಂಡನು. ಅವನು ಸಾರುವ ಮೂಲಕ ಮತ್ತು ಆಮೇಲೆ ವೈದ್ಯಕೀಯ ಡಾಕ್ಟರುಗಳೂ ಸೇರಿದ್ದ ಆಸಕ್ತ ಜನರೊಂದಿಗೆ ಕೂಟಗಳನ್ನು ನಡಿಸುವ ಮೂಲಕ ಆತ್ಮಿಕವಾಗಿ ತನ್ನನ್ನು ಜೀವಂತವಾಗಿಟ್ಟನು, ದೈವಿಕ ಬೋಧನೆಯಿಂದ ಪ್ರಯೋಜನ ಹೊಂದಿದ ಅವರು ಈಗ ಇತರರಿಗೆ ಕಲಿಸುತ್ತಾರೆ. ಸಮಗ್ರತೆ ಪಾಲಿಸುವ ಇನ್ನೊಂದು ಉತ್ತಮ ಉದಾಹರಣೆಯು ಆ್ಯಡಿಸಾಬಬದಲ್ಲಿನ ಒಬ್ಬ ವಿಶೇಷ ಪಯನೀಯರನದ್ದಾಗಿದೆ, ಅವನು 1992 ರಲ್ಲಿ, ಆರ್ತೊಡಾಕ್ಸ್ ಪಾದ್ರಿಗಳಿಂದ ಪ್ರಚೋದಿಸಲ್ಪಟ್ಟ ಒಂದು ದೊಂಬಿಯಿಂದ ಕ್ರೂರವಾಗಿ ಹೊಡೆಯಲ್ಪಟ್ಟು, ಸತ್ತನೆಂದು ನೆನಸಿ ಬಿಡಲ್ಪಟ್ಟನು. ಸಂತೋಷಕರವಾಗಿ, ಅವನು ಗುಣಹೊಂದಿದನು ಮತ್ತು ಅದೇ ಕ್ಷೇತ್ರದಲ್ಲಿ ಸೇವೆಯನ್ನು ಮುಂದರಿಸುತ್ತಿದ್ದಾನೆ. ಅವನ ಮುಖದಲ್ಲಿ ಹೊಳೆಯುವ ಮಂದಹಾಸವು ಕಹಿಯ ಯಾವ ಕುರುಹನ್ನೂ ಪ್ರಕಟಿಸುವುದಿಲ್ಲ. ಅವನಿಗೆ, ಪರೀಕ್ಷಿತರಾದ ಬೇರೆಲ್ಲರಿಗೆ ಮತ್ತು ಹೊಸಬರಿಗೆ ಆದಂತೆ, ಈ “ದೈವಿಕ ಬೋಧನೆ” ಅಧಿವೇಶನವು ಒಂದು ಸಂತಸದ ಹಬ್ಬವಾಗಿತ್ತು.
ಅಧಿವೇಶನದ ಸಂಘಟನೆಯು ಸುಗಮವಾಗಿ ಕಾರ್ಯನಡಿಸಿತು, ಒಳಗೂಡಿದ ಸ್ವಯಂಸೇವಕರು ಅನೇಕಾನೇಕ ವರ್ಷಗಳ ಅನುಭವವಿದ್ದವರೆಂದು ಸಂದರ್ಶಕರು ನೆನಸುವಂತೆ ಮಾಡಿತು. ವಾಸ್ತವದಲ್ಲಿ, ಕಳೆದ ಎರಡು ವರ್ಷಗಳಲ್ಲಿ ಅವರು ತೀವ್ರ ಪ್ರಗತಿಯನ್ನು ಮಾಡಿದವರಾಗಿದ್ದಾರೆ. ಮೂರು ದಿನದ ಅಧಿವೇಶನವು ಅಪೇಕ್ಷಿಸಿದಕ್ಕಿಂತ ಹೆಚ್ಚು ಶೀಘ್ರವಾಗಿ ಕೊನೆಗೊಂಡಿತು. ಶನಿವಾರದ ಉಚ್ಚಾಂಕ ಉಪಸ್ಥಿತಿ 9,556. ರಾಷ್ಟ್ರೀಯ ಟೆಲಿವಿಷನ್, ರೇಡಿಯೊ, ಮತ್ತು ವಾರ್ತಾಪತ್ರಗಳು ಮೆಚ್ಚಿಗೆಯ ವರದಿಯನ್ನು ಕೊಟ್ಟವು. ಯೆಹೋವನು ತನ್ನ ಜನರನ್ನು ಆತ್ಮಿಕವಾಗಿ ಸಮೃದ್ಧರನ್ನಾಗಿ ಮಾಡುತ್ತಿದ್ದಾನೆಂದು ಎಲ್ಲರೂ ಕಾಣಸಾಧ್ಯವಾಯಿತು. ಸಭಿಕರಲ್ಲಿ “ದೈವಿಕ ಬೋಧನೆ” ಯಿಂದ ಪ್ರಯೋಜನ ಹೊಂದಲಾರಂಭಿಸಿದ ಸಾವಿರಾರು ಆಸಕ್ತ ಜನರು ಕೂಡಿದ್ದರು. ಸುಮಾರು 5 ಕೋಟಿ ಜನರ ಈ ದೇಶದಲ್ಲಿ ಒಂದು ವಿಸ್ತಾರವಾದ ಹೊಲವು ಯೆಹೋವನ ಸಾಕ್ಷಿಗಳಿಗೆ ತೆರೆದಿದೆ, ಮತ್ತು ಈ ಅಧಿವೇಶನವು ಎಲ್ಲರನ್ನು, ಈ ವಿಷಯಗಳ ವ್ಯವಸ್ಥೆಯಲ್ಲಿ ಉಳಿದ ಸಮಯವನ್ನು ಪ್ರಾಮಾಣಿಕ ಜನರು ಸಹ ದೈವಿಕ ಬೋಧನೆಯಿಂದ ಪ್ರಯೋಜನ ಪಡೆಯುವಂತೆ ನೆರವಾಗುವ ಅವರ ದೃಢ ನಿಶ್ಚಯವನ್ನು ಬಲಗೊಳಿಸಿತು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಅ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇವರಿಂದ ಪ್ರಕಾಶಿಸಲ್ಪಟ್ಟ 1992 ಯಿಯರ್ ಬುಕ್ ಆಫ್ ಜೆಹೋವಸ್ ವಿಟ್ನೆಸಸ್ ನೋಡಿರಿ.
b ಯುವರ್ ಯೂತ್—ಗೆಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್, ಮೇಕಿಂಗ್ ಯುವರ್ ಫ್ಯಾಮಿಲಿ ಲೈಫ್ ಹ್ಯಾಪಿ, ಮತ್ತು ಜೆಹೋವಸ್ ವಿಟ್ನೆಸಸ್—ಯುನೈಟೆಡ್ಲಿ ಡೂಯಿಂಗ್ ಗಾಡ್ಸ್ ವಿಲ್ ವರ್ಲ್ಡ್ವೈಡ್.
[ಪುಟ 23 ರಲ್ಲಿರುವ ಚಿತ್ರಗಳು]
ಆ್ಯಡಿಸಾಬಬ, ಜನವರಿ 13-15, 1994
[ಪುಟ 24 ರಲ್ಲಿರುವ ಚಿತ್ರಗಳು]
ಆ್ಯಡಿಸಾಬಬದಲ್ಲಿ ಪಯನೀಯರರ ಒಂದು ಗುಂಪು (ಬಲಗಡೆ); ಸೆರೆಯಲ್ಲಿ ಹಾಕಲ್ಪಟ್ಟ ಎಲ್ಲಾ ಸಮಗ್ರತೆ ಪಾಲಕರು (ಕೆಳಗೆ); 113 ವರ್ಷ ಪ್ರಾಯದ ಸಾಕ್ಷಿ ಮತ್ತು ಅವರ ಹೆಂಡತಿ