ಅಬ್ರಹಾಮನು ಇಲ್ಲಿ ಹೂಳಲ್ಪಟ್ಟನು, ಇನ್ನೂ ಜೀವಂತನಾಗಿದಾನ್ದೊ?
ಶತಮಾನಗಳಿಂದ ಯೆಹೂದ್ಯರು, ಮುಸ್ಲಿಮರು, ಮತ್ತು ಕ್ರೈಸ್ತರು ಈ ಸ್ಥಳಕ್ಕೆ ಪ್ರಯಾಣಿಸಿದ್ದಾರೆ.
ಯೆರೂಸಲೆಮಿನ ದಕ್ಷಿಣಕ್ಕಿರುವ ಪ್ರಾಚೀನ ನಗರವಾದ ಹೆಬ್ರೋನ್ನಲ್ಲಿ ನೀವು ಅದನ್ನು ಸಂದರ್ಶಿಸಬಲ್ಲಿರಿ. ಈ ಕಟ್ಟಡವನ್ನು ಹಾರೀಮ್ ಎಲ್ ಖಲೀಲ್ ಎಂದೂ ಪೂರ್ವಜರ ಸಮಾಧಿಯೆಂದೂ ಕರೆಯಲಾಗುತ್ತದೆ. ಹೌದು, ಇದು ಪೂರ್ವಜರಾದ ಅಬ್ರಹಾಮ, ಇಸಾಕ್, ಮತ್ತು ಯಾಕೋಬ, ಅಷ್ಟೇ ಅಲ್ಲದೆ ಅವರವರ ಹೆಂಡತಿಯರಾದ ಸಾರಳು, ರೆಬೆಕ್ಕ, ಮತ್ತು ಲೇಯಳ ಶ್ಮಶಾನವೆಂದು ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿದೆ.
ತನ್ನ ಪ್ರಿಯ ಹೆಂಡತಿ ಸಾರಳ ಮರಣದ ಅನಂತರ, ಅಬ್ರಹಾಮನು ಹೆಬ್ರೋನ್ನ ಹತ್ತಿರ ಮಕ್ಪೇಲದಲಿ ಒಂದು ಗವಿಯವನ್ನು ಮತ್ತು ಸ್ವಲ್ಪ ಜಮೀನನ್ನು ಹೂಳುವ ಸ್ಥಳವಾಗಿ ಕೊಂಡುಕೊಂಡನೆಂದು ಬೈಬಲಿನಿಂದ ಜ್ಞಾಪಿಸಿಕೊಳ್ಳಿರಿ. (ಆದಿಕಾಂಡ 23:2-20) ತದನಂತರ, ಕುಟುಂಬದ ಇತರ ಸದಸ್ಯರನ್ನು ಹೂಳಲಾದಂತೆ ಇಲ್ಲಿ ಅಬ್ರಹಾಮನನ್ನು ಕೂಡ ಹೂಳಲಾಯಿತು. ಶತಮಾನಗಳಾನಂತರ, ಆ ಸಾಂಪ್ರದಾಯಿಕ ಹೂಳುವ ಸ್ಥಳದ ಸುತ್ತಲೂ, ಮಹಾ ಹೆರೋದನು ಒಂದು ಭಾವೋತ್ಪಾದಕ ಕಟ್ಟಡವನ್ನು ನಿರ್ಮಿಸಿದನು. ಅದನ್ನು ಬೇರೆ ಜಯಶಾಲಿಗಳು ಸಕಾಲದಲ್ಲಿ ತಮ್ಮ ಧಾರ್ಮಿಕ ವಿಶ್ವಾಸಗಳನ್ನು ಪ್ರತಿಬಿಂಬಿಸುತ್ತಾ ಬದಲಾಯಿಸಿ ವಿಸ್ತರಿಸಿದರು.
ಪ್ರವೇಶಿಸುವಾಗ, ನೀವು ಆರು ಸ್ಮಾರಕ ಸಮಾಧಿಗಳನ್ನು (ಕಟ್ಟಡ ಯಾ ಶೂನ್ಯ ಸಮಾಧಿಗಳು) ನೋಡುವಿರಿ. ಒಳಸೇರಿಕೆಯು, ಅಬ್ರಹಾಮನ ಮಗನಾದ ಇಸಾಕನಿಗಾಗಿರುವ ಸಮಾಧಿಯನ್ನು ತೋರಿಸುತ್ತದೆ. ಅದರ ಹತ್ತಿರ ನೆಲದಲ್ಲಿ ತೂತುಗಳಿವೆ, ಅವು ಕೆಳಗೆ ಏನಿದೆಯೋ ಅದಕ್ಕೆ ಪ್ರವೇಶ ಪಡೆಯಲು ಉಪಯೋಗಿಸಲ್ಪಟ್ಟಿವೆ. ಅನೇಕ ಪ್ರಾಚೀನ ಎಲುಬುಗಳು ಇದ್ದಿರಬಹುದಾದ ಕೋಣೆಗಳನ್ನು ತನಿಖೆಗಾರರು ಕಂಡುಹಿಡಿದಿದ್ದಾರೆ.
ಅಬ್ರಹಾಮನ ಕುರಿತೇನು? ಈ ಸ್ಥಳದ ಕೆಳಗೆ ಈಗ ಒಂದು ಗವಿಯಲ್ಲಿ ಅವನು ಹೂಳಲ್ಪಟ್ಟಿದ್ದರೆ, ಅವನು ಬಹಳ ಹಿಂದೆಯೇ ಸತ್ತಿರುತ್ತಾನೆ, ಸರಿಯಲ್ಲವೆ? ಹೆಚ್ಚಿನ ಸಂದರ್ಶಕರು ಒಪ್ಪುವರು. ಆದರೂ ಒಂದು ಅರ್ಥದಲ್ಲಿ ಅಬ್ರಹಾಮನು ಇನ್ನೂ ಜೀವಂತನಾಗಿದ್ದಾನೆಂದು ಅಬ್ರಹಾಮನಿಗಿಂತಲೂ ದೊಡ್ಡವನಾದ ಒಬ್ಬ ಪ್ರವಾದಿಯು ಹೇಳಿದನು. ಹೇಗೆ? ನಿಮ್ಮ ನಂಬಿಕೆಯ ಮೇಲೆ ಇದು ಯಾವ ಪ್ರಭಾವವನ್ನು ಬೀರಬಹುದು?
“ಮೃತರಾದ ನಿಮ್ಮ ಪ್ರಿಯರು—ಅವರು ಎಲ್ಲಿದ್ದಾರೆ?” (ಪುಟ 3) ಎಂಬ ಲೇಖನವನ್ನು ದಯವಿಟ್ಟು ಓದಿರಿ. ಅಬ್ರಹಾಮನು ಜೀವಂತನಾಗಿರುವುದರ ಕುರಿತು ಆ ಮಹಾ ಪ್ರವಾದಿಯು ಹೇಳಿದ್ದನ್ನು ಅದು ಸಾದರಪಡಿಸುತ್ತದೆ. ಆ ಮಾಹಿತಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಪರಿಮಿತ ಮೌಲ್ಯವುಳ್ಳದ್ದಾಗಿರಬಲ್ಲದು.