ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 5/15 ಪು. 31
  • ಮಲಾವಿಯಿಂದ ಸುವಾರ್ತೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಲಾವಿಯಿಂದ ಸುವಾರ್ತೆ!
  • ಕಾವಲಿನಬುರುಜು—1994
ಕಾವಲಿನಬುರುಜು—1994
w94 5/15 ಪು. 31

ಮಲಾವಿಯಿಂದ ಸುವಾರ್ತೆ!

ನವಂಬರ 15, 1993 ರಂದು, ಆಗ್ನೇಯ ಆಫ್ರಿಕನ್‌ ದೇಶವಾದ ಮಲಾವಿಯಲ್ಲಿ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲೇನ್ವಿಯ ಅಧಿಕೃತವಾಗಿ ದಾಖಲಿಸಲ್ಪಟ್ಟಿತು. ಇದು ಯೆಹೋವನ ಸಾಕ್ಷಿಗಳಿಗೆ ಶಾಸನಬದ್ಧ ಮಂಜೂರಾತಿಯನ್ನು ಮತ್ತು ಮಲಾವಿಯ ಜನರಿಗೆ ಬೈಬಲ್‌ ಸತ್ಯಗಳನ್ನು ಸಾರಲು ಸ್ವಾತಂತ್ರ್ಯವನ್ನು ಕೊಡುವುದು.

ಇಸವಿ 1948 ರಲ್ಲಿ, ಮಲಾವಿಯಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ಸುಸಂಘಟಿತಗೊಳಿಸಲು ವಾಚ್‌ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸನ್ನು ಅಲ್ಲಿ ಸ್ಥಾಪಿಸಲಾಗಿತ್ತು. ಜನವರಿ 8, 1957 ರಂದು, ವಾಚ್‌ಟವರ್‌ ಸೊಸೈಟಿಯನ್ನು ಅಧಿಕೃತವಾಗಿ ಪ್ರಥಮ ಬಾರಿಗೆ ದಾಖಲು ಮಾಡಲಾಯಿತು. ಹಲವಾರು ವರ್ಷಗಳ ಕಾಲ ಯೆಹೋವನ ಸಾಕ್ಷಿಗಳು ತೀವ್ರವಾದ ಬೆಳವಣಿಗೆಯನ್ನು ಅನುಭವಿಸಿದರು. ಆದರೆ 1964 ರಲ್ಲಿ ಘೋರವಾದ ಹಿಂಸೆಯು ಪ್ರಾರಂಭಿಸಿತು. ಯಾಕೆ?

ದೇವರಿಗೆ ವಿಧೇಯರಾಗುವಲ್ಲಿ ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ ಕಟ್ಟುನಿಟ್ಟಿನ ತಾಟಸ್ಥ್ಯವನ್ನು ಕಾಪಾಡಿಕೊಂಡರು. (ಯೋಹಾನ 17:16) ಸ್ಪಷ್ಟವಾಗಿಗಿಯೆ, ಕೆಲವರು ಈ ಶಾಸ್ತ್ರೀಯ ನಿಲುವನ್ನು ತಕ್ಕಮಟ್ಟಿಗೆ ಗ್ರಹಿಸಲಿಲ್ಲ ಮತ್ತು ಸಾಕ್ಷಿಗಳನ್ನು ಒಂದು ಅತಿರೇಕ ಧರ್ಮವೆಂಬಂತೆ ಹಾಗೂ ದೇಶಭ್ರಷ್ಟರಂತೆ ತಪ್ಪಾಗಿ ಪ್ರತಿನಿಧಿಸಿದರು. ಆದಕಾರಣ, ಈ ಶಾಂತಿ ಪ್ರಿಯ ಕ್ರೈಸ್ತರನ್ನು ಹಿಂಸಿಸುವುದು ನ್ಯಾಯವೆಂದು ಕೆಲವರಿಗೆ ಅನಿಸಿತು. ಅನೇಕ ಸಾಕ್ಷಿಗಳು ತಮ್ಮ ಕೆಲಸಗಳಿಂದ ತೆಗೆದುಹಾಕಲ್ಪಟ್ಟರು, ಹೊಡೆಯಲ್ಪಟ್ಟರು ಮತ್ತು ಬೇರೆ ರೀತಿಯಾಗಿ ಅಪಮಾನ ಮಾಡಲ್ಪಟ್ಟರು. ಕೆಲವರು ತಮ್ಮ ಮಕ್ಕಳಿಂದ ಬಲವಂತವಾಗಿ ಬೇರ್ಪಡಿಸಲ್ಪಟ್ಟರು.

ಇಸವಿ 1972 ರಲ್ಲಿ, 30,000 ಕ್ಕಿಂತಲೂ ಅಧಿಕ ಸಾಕ್ಷಿಗಳು ಮತ್ತು ಅವರೊಂದಿಗೆ ಬೈಬಲನ್ನು ಅಭ್ಯಾಸಮಾಡುತ್ತಿದ್ದ ಕೆಲವರು ತಮ್ಮ ಜೀವಗಳನ್ನು ಕಳೆದುಕೊಳ್ಳುವ ಭಯದಿಂದ ದೇಶವನ್ನು ಬಿಡಬೇಕಾಯಿತು. ನೆರೆಯ ಮೊಸಾಂಬಿಕ್‌ನಲ್ಲಿರುವ ಆಶ್ರಿತ ಶಿಬಿರಗಳಲ್ಲಿ ಸಾವಿರಾರು ಜನರು ನೆಲೆಸಿದರು. ಆದರೆ 1975 ರಲ್ಲಿ ಈ ಆಶ್ರಿತರನ್ನು ಪುನಃ ಮಲಾವಿಗೆ ಹಿಂದಿರುಗಿ ಕಳುಹಿಸಲಾಯಿತು, ಅಲ್ಲಿ ಅವರು ಹೆಚ್ಚಿನ ಹಿಂಸೆಯನ್ನು ಎದುರಿಸಬೇಕಿತ್ತು. ಅನೇಕರನ್ನು ಕೂಟ ಶಿಬಿರಗಳಲ್ಲಿ ಇರಿಸಲಾಯಿತು. ಈ ಗಲಭೆಯ ಮಧ್ಯೆ, ವಾಚ್‌ಟವರ್‌ ಸೊಸೈಟಿಯನ್ನು ಮಲಾವಿಯಲ್ಲಿರುವ ಶಾಸನಬದ್ಧ ಸಂಸ್ಥೆಗಳ ಅಧಿಕೃತ ಪಟ್ಟಿಯಿಂದ ತೆಗೆದುಹಾಕಲಾಯಿತು. ಆಗಿನಿಂದ ಯೆಹೋವನ ಸಾಕ್ಷಿಗಳು ಮತ್ತು ಅವರ ಶಾಸನಬದ್ಧ ಸಂಸ್ಥೆಗಳು ಆ ದೇಶದಲ್ಲಿ ನಿಷೇಧದ ಅಡಿಯಲ್ಲಿವೆ.

ಈ ಎಲ್ಲ ಬೆಳವಣಿಗೆಗಳ ಹೊರತೂ, ಸಾಕ್ಷಿಗಳು ಪ್ರತೀಕಾರ ಮಾಡಲಿಲ್ಲ. ಅವರು ಎಂದೂ ದೊಂಬಿ ರಚಿಸಲಿಲ್ಲ ಅಥವಾ ಸರಕಾರದ ವಿರುದ್ಧ ಪ್ರತಿಭಟಿಸಲು ಶಾಂತಿಭಂಗವನ್ನು ಮಾಡಲಿಲ್ಲ. ಬದಲಾಗಿ, ಸರಕಾರಿ “ಮೇಲಾಧಿಕಾರಿಗಳಿಗೆ” ಯೋಗ್ಯವಾದ ಮಾನ ಮತ್ತು ಗೌರವವನ್ನು ತೋರಿಸಲಿಕ್ಕಾಗಿರುವ ಅವರ ಕ್ರೈಸ್ತ ಕರ್ತವ್ಯವನ್ನು ಅವರು ಪ್ರಾರ್ಥನಾಪೂರ್ವಕವಾಗಿ ಕಾಪಾಡಿದರು. (ರೋಮಾಪುರ 13:1-7; 1 ತಿಮೊಥೆಯ 2:1, 2) ಬೈಬಲಿನಲ್ಲಿ ಸ್ಥಾಪಿಸಲ್ಪಟ್ಟಿರುವ ಕ್ರಿಸ್ತೀಯ ಜೀವಿತದ ಉನ್ನತ ಮಟ್ಟಗಳನ್ನು ಸಹ ಸಾಕ್ಷಿಗಳು ಎತ್ತಿಹಿಡಿದರು, ಮತ್ತು ಹೀಗೆ ಅವರು ನಡತೆಯಲ್ಲಿ ಅತ್ಯುತ್ತಮ ಮಾದರಿಯನ್ನು ಸ್ಥಾಪಿಸಿದ್ದಾರೆ.

ಹೊಸದಾಗಿ ಸಂಪಾದಿಸಿದ ಸ್ವಾತಂತ್ರ್ಯದೊಂದಿಗೆ, ಮಲಾವಿಯಲ್ಲಿರುವ ಯೆಹೋವನ ಸಾಕ್ಷಿಗಳು ಬೈಬಲ್‌ ಸತ್ಯಗಳನ್ನು ತುರ್ತಾಗಿ “ಅನುಕೂಲವಾದ ಕಾಲದಲ್ಲಿ” ಸಾರುವುದನ್ನು ಮುಂದುವರಿಸಲು ನಿಶ್ಚಯ ಮಾಡಿಕೊಂಡಿದ್ದಾರೆ.—2 ತಿಮೊಥೆಯ 4:2.

[ಪುಟ 31 ರಲ್ಲಿರುವ ಚಿತ್ರ]

ಇಸವಿ 1960 ಗಳಲ್ಲಿ ಮಲಾವಿ ಬೆತೆಲ್‌ ಕುಟುಂಬದೊಂದಿಗೆ ಎಮ್‌. ಜಿ. ಹೆನೆಲ್ಷ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ