ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ಯೆಹೋವನ ನಾಮವು ಬಲವಾದ ಬುರುಜು”
ನಾವು ಅಸ್ಥಿರವಾದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ. ಸ್ಥಿರವೆಂದು ಭಾಸವಾಗುತ್ತಿರುವ ನಮ್ಮ ಜೀವಿತಗಳು ರಾತ್ರಿಬೆಳಗಾಗುವುದರೊಳಗೆ ಬದಲಾಗಬಲ್ಲವು, ಮತ್ತು ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಅವರು ಅದನ್ನು ತಿಳಿದುಕೊಳ್ಳುವ ಮೊದಲೇ ಮಹಾ ಗಂಡಾಂತರದಲ್ಲಿ ತಮ್ಮನ್ನು ಕೆಲವರು ಕಂಡುಕೊಂಡಿದ್ದಾರೆ. ಅಪಾಯವು ರಾಜಕೀಯ ಉತ್ಕ್ರಾಂತಿಯಿಂದ, ಒಬ್ಬ ಹಿಂಸಾಚಾರದ ಆಕ್ರಮಣಕಾರನಿಂದ, ಒಂದು ನೈಸರ್ಗಿಕ ವಿಪತ್ತಿನಿಂದ ಯಾ ಒಂದು ಗಂಭೀರವಾದ ರೋಗದಿಂದ ಬರಬಹುದು. ವಿದ್ಯಮಾನವು ಏನೇ ಆಗಿರಲಿ, ತನ್ನ ಜೀವವು ಅಪಾಯದಲ್ಲಿರುವಾಗ, ಕ್ರೈಸ್ತನೊಬ್ಬನು ಎಲ್ಲಿಗೆ ತೆರಳತಕ್ಕದ್ದು?
ವಾಚ್ ಟವರ್ ಸೊಸೈಟಿಯ ಶಾಖೆಗಳಲ್ಲೊಂದರಲ್ಲಿ ಜೀವಿಸುತ್ತಿರುವ ಒಬ್ಬ ಮಿಷನೆರಿಯಾದ ಡೇವಿಡ್, ಒಂದು ಭಯಾನಕ ಅನುಭವದಿಂದ ಆ ಪ್ರಶ್ನೆಗೆ ಉತ್ತರವನ್ನು ಕಲಿತನು. ನೇಮಿತ ಡ್ರೈವರ್ನೋಪಾದಿ, ದಿನನಿತ್ಯವೂ ಪ್ರಯಾಣಿಸುವ ಬೆತೆಲ್ ಕೆಲಸಗಾರರನ್ನು (ಶಾಖಾ ಆಫೀಸಿನಿಂದ ಹೊರಗೆ ವಾಸಿಸುತ್ತಿರುವ ಸ್ವಯಂಸೇವಕರನ್ನು) ತರಲು ಅವನು ಒಂದು ದಿನ ಬಹಳ ಬೆಳಿಗ್ಗೆಯೇ ಹೊರಟನು. ಇನ್ನೂ ಕತ್ತಲಾಗಿಯೇ ಇತ್ತು. ಅವನು ರೊಜಲಿಯಾಳನ್ನು ತೆಗೆದುಕೊಂಡು, ಒಂದು ಪೊಲೀಸ್ ಸೇಶ್ಟನನ್ನು ದಾಟಿಹೋಗುತ್ತಿರುವಾಗ, ಅವನು ಮೊದಲ ಬಂದೂಕು ಹೊಡೆತವನ್ನು ಕೇಳಿದನು.
ಅನಂತರ ಸಂಗತಿಗಳು ವೇಗವಾಗಿ ಸಂಭವಿಸಿದವು. ಒಂದು ದೊಡ್ಡ ಸುಡುಮದ್ದಿನೋಪಾದಿ ಶಬ್ದವನ್ನು ಅವನು ಕೇಳಿದನು ಮತ್ತು ಅವನ ಟಯರುಗಳೊಂದರಿಂದ ಗಾಳಿಯು ಹೊರಗೆ ಹೋಗುವುದು ಅವನಿಗೆ ತಿಳಿದುಬಂತು. ಒಬ್ಬ ಸೈನಿಕನು ರಸ್ತೆಯ ನಡುವೆಯೇ ನಿಂತು, ತನ್ನೆಡೆಗೆ ಬಂದೂಕನ್ನು ನೇರವಾಗಿ ಗುರಿಯಿಡುವುದನ್ನು ಅವನು ಫಕ್ಕನೆ ನೋಡಿದನು. ಏಕಕಾಲದಲ್ಲಿ ಬಹುತೇಕ ಮೂರು ಸಂಗತಿಗಳು ಸಂಭವಿಸಿದವು: ಕಿಟಕಿಗಳನ್ನು ಪುಡಿಪುಡಿಮಾಡುತ್ತಾ, ಜೀಪಿನ ಪಕ್ಕವನ್ನು ತೂತುಮಾಡುವ ಗುಂಡಿನೇಟುಗಳ ಸರಣಿ; ಡೇವಿಡ್ ಮತ್ತು ರೊಜಲಿಯಾ ಥಟ್ಟನೆ ಬಗ್ಗಿದರು; ಕಣ್ಣಿನ ಮಟ್ಟದಲ್ಲಿ ಗಾಳಿತಡೆಯ (ವಿಂಡ್ಶೀಲ್ಡ್) ಮೂಲಕ ಸೈನಿಕನು ಗುಂಡುಹೊಡೆದನು.
ಪುನಃ ಪುನಃ ಜೀಪ್ ಗುಂಡೇಟುಗಳಿಂದ ಹೊಡೆಯಲ್ಪಡುತ್ತಿರುವಂತೆ, ಡೇವಿಡ್ ಇನ್ನೂ ಬಾಗಿಕೊಂಡಿರುವಾಗಲೂ, ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಬ್ರೇಕನ್ನು ಒತ್ತಿದನು. ಡೇವಿಡ್ ಮತ್ತು ರೊಜಲಿಯಾ ಇಬ್ಬರೂ ತಾವು ಸಾಯಲಿದ್ದೇವೆಂದು ಎಣಿಸಿದರು. ಅವರು ಗಟ್ಟಿಯಾಗಿ ಯೆಹೋವನಿಗೆ ಪ್ರಾರ್ಥಿಸಿ, ತಮ್ಮ ಮೇಲೆ ಕಾಪಿಡುವಂತೆ ಅವನನ್ನು ಬೇಡಿಕೊಂಡರು. ತನ್ನ ಮರಣದ ಕುರಿತು ಅವಳ ಕುಟುಂಬದವರು ಕೇಳಿದಾಗ ಅವರು ಹೇಗೆ ಪ್ರತಿಕ್ರಿಯಿಸುವರು ಎಂದು ಅವಳು ಆ ಕ್ಷಣಗಳಲ್ಲಿ ಯೋಚಿಸುತ್ತಿದ್ದಳೆಂದು ಅನಂತರ ರೊಜಲಿಯಾ ಹೇಳಿದಳು!
ಇನ್ನೂ ಜೀವಂತರು!
ಗುಂಡೇಟುಗಳ ಮತ್ತು ಗಾಜುಗಳ ಪುಡಿಮಾಡುವಿಕೆಯ ಶಬ್ದವು ಕಟ್ಟಕಡೆಗೆ ನಿಂತಿತು, ಮತ್ತು ಡೇವಿಡ್ ರೊಜಲಿಯಾಳೆಡೆಗೆ ಕಣ್ಣುಹಾಯಿಸಿದನು. ಅವಳ ಬೆನ್ನ ಮೇಲೆ ಒಂದು ಚಿಕ್ಕ, ಉರುಟಾದ ರಕ್ತಕಲೆಯನ್ನು ಕಂಡಾಗ, ಅವನು ಬಹಳವಾಗಿ ಹೆದರಿದನು. ಆದರೆ ಒಂದು ಗುಂಡೇಟಿನ ಬದಲು, ಹಾರಿಬಂದ ಒಂದು ಗಾಜಿನ ತುಂಡು ಅಲ್ಲಿ ನೆಟ್ಟಿಕೊಂಡಿತ್ತು. ಬೀಳುತ್ತಿರುವ ಗಾಜಿನ ಮೂಲಕ ಆದ ಗಾಯಗಳಿಂದಾಗಿ ಅವಳ ಮೊಣಕಾಲುಗಳಿಂದ ರಕ್ತವು ಸುರಿಯುತ್ತಿತ್ತು, ಬೇರೆ ರೀತಿಯಲ್ಲಿ ಅವಳು ಚೆನ್ನಾಗಿದ್ದಳೆಂದು ತೋರಿಬಂತು.
ಬಿಳಿ ತೋಳುಪಟ್ಟೆಗಳೊಂದಿಗೆ ಮಿಲಿಟರಿ ಸಮವಸ್ತ್ರಧಾರಿಗಳಾದ ಪುರುಷರು ಜೀಪಿನ ಬಳಿಗೆ ಬಂದರು ಮತ್ತು ಅವರ ಕೈಗಳನ್ನು ಮೇಲೆತ್ತಿಕೊಂಡು ಹೊರಗೆ ಬರಲು ಆಜ್ಞೆಯನ್ನಿತ್ತರು. ಉನ್ನತ ಹುದ್ದೆಯವನೆಂದು ತೋರಿಬಂದ ಒಬ್ಬನು ಸೈನಿಕನೆಡೆಗೆ ತಿರುಗಿ ಹೇಳಿದ್ದು: “ನಾಗರಿಕರೆಡೆಗೆ ಗುಂಡು ಹೊಡೆಯಬಾರದೆಂದು ನಿನಗೆ ಹೇಳಲ್ಪಟ್ಟಿತ್ತು.” ಅವನು ಗುಂಡೇಟುಗಳ ಶಬ್ದವನ್ನು ಕೇಳಿದನು ಮತ್ತು ಅದು ಜೀಪಿನಿಂದ ಬಂದದ್ದು ಎಂದು ಎಣಿಸಿದನೆಂದು ಸೈನಿಕನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದನು.
ರೊಜಲಿಯಾ ಮತ್ತು ತಾನು ಯೆಹೋವನ ಸಾಕ್ಷಿಗಳೆಂದು ಡೇವಿಡ್ ಗುರುತಿಸಿಕೊಂಡಾಗ, ಪ್ರತಿಕ್ರಿಯೆಯು ಸಹಾಯಕರವಾಗಿತ್ತು. ಅವನೇನು ಮಾಡುತ್ತಿದ್ದನೆಂದು ವಿವರಿಸಿದನು, ಆದರೂ ಸೈನಿಕರು ಅವರನ್ನು ಇನ್ನೂ ತಡೆಹಿಡಿಯಲು ಬಯಸಿದರು. ಪ್ರಾಯಶಃ ನಡೆದಿದ್ದು ಏನಂದರೆ, ಒಂದು ಮಿಲಿಟರಿ ವಿಭಾಗವು ಕ್ಷಿಪ್ರಕ್ರಾಂತಿಯನ್ನು ನಡಿಸಿದ್ದರು, ಮತ್ತು ಡೇವಿಡ್ ಹಾಗೂ ರೊಜಲಿಯಾ ಜೀಪಿನಲ್ಲಿ ದಾಟಿಹೋಗುತ್ತಿರುವಾಗ, ಈ ಸೈನಿಕರು ಪೊಲೀಸ್ ಸೇಶ್ಟನನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯಾಚರಣೆಯಲಿದ್ದರು.
ರೊಜಲಿಯಾ ಅತಿಯಾಗಿ ಕಲಕಲ್ಪಟ್ಟಳಾದರೂ, ಅವರನ್ನು ಬಿಡುಗಡೆಗೊಳಿಸಲು ಡೇವಿಡ್ ಅವರೊಡನೆ ವಿನಂತಿ ಮಾಡುತ್ತಿದ್ದಂತೆ, ಧೈರ್ಯದಿಂದ ಶಾಂತವಾಗಿದ್ದಳು. ಕಟ್ಟಕಡೆಗೆ ಜೀಪಿನ ಹೊರತಾಗಿ ಹೋಗಲು ಅವರನ್ನು ಅನುಮತಿಸಲಾಯಿತು. ಹತ್ತಿರದ ಮಾರ್ಗದ ತನಕ ನಡೆದು, ಶಾಖಾ ಆಫೀಸಿಗೆ ಹೋಗುವ ಬಸ್ಸೊಂದನ್ನು ಅವರಿಗೆ ಹಿಡಿಯಬೇಕಾಯಿತು, ಅಲ್ಲಿ ರೋಗ ಚಿಕಿತ್ಸಾಲಯದಲ್ಲಿ ರೊಜಲಿಯಾಳ ಶುಶ್ರೂಷೆ ಮಾಡಲಾಯಿತು.
ಪ್ರಾರ್ಥನೆಯ ಶಕ್ತಿ
ಡೇವಿಡ್ ಈ ಅನುಭವದಿಂದ ಒಂದು ಸಂಗತಿಯನ್ನು ಕಲಿತನು—ತೀವ್ರಾಸಕ್ತಿಯ ಪ್ರಾರ್ಥನೆಯ ಶಕ್ತಿಯನ್ನು ಕಡಿಮೆ ಅಂದಾಜು ಎಂದಿಗೂ ಮಾಡಕೂಡದು, ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದು ಸ್ವತಃ ಧೈರ್ಯದಿಂದ ಗುರುತಿಸಿಕೊಳ್ಳುವುದು ಕೆಲವೊಮ್ಮೆ ಒಂದು ಭದ್ರತೆಯಾಗಿರುತ್ತದೆ ಎಂದು ಎಂದಿಗೂ ಮರೆಯಕೂಡದು. “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು” ಎಂಬುದು ಅಕ್ಷರಶಃ ಸತ್ಯವಾಗಿರಲೂಬಹುದು.—ಜ್ಞಾನೋಕ್ತಿ 15:29; 18:10; ಫಿಲಿಪ್ಪಿ 4:6.
[ಪುಟ 19 ರಲ್ಲಿರುವ ಚಿತ್ರ ಕೃಪೆ]
Fotografía de Publicaciones Capriles, Caracas, Venezuela