ರಾಜ್ಯ ಕಾರ್ಯದಲ್ಲಿ ನಮ್ಮ ಕಣ್ಣನ್ನು “ಸರಳ” ವಾಗಿಡುವುದು
ಜರ್ಮನ್ ಡೆಮಾಕ್ರ್ಯಾಟಿಕ್ ರಿಪಬ್ಲಿಕ್ (ಜಿ.ಡಿ.ಆರ್.), ಅಥವಾ ಯಾವುದು ಪೂರ್ವ ಜರ್ಮನಿ ಎಂದು ಖ್ಯಾತವೋ ಅದು, ಕೇವಲ ನಡು ಪ್ರಾಯವನ್ನು ಮುಟ್ಟಿತ್ತಷ್ಟೆ. ನಾಲ್ವತ್ತೊಂದು ವರ್ಷಗಳ ಅಸ್ತಿತ್ವವು ಅಕ್ಟೋಬರ 3, 1990 ರಲ್ಲಿ ಕೊನೆಗೊಂಡಾಗ, ಗಾತ್ರದಲ್ಲಿ ಸ್ಥೂಲವಾಗಿ ಲೈಬೀರಿಯದಷ್ಟು ಅಥವಾ ಅಮೆರಿಕದ ಟೆನೆಸ್ಸೀ ರಾಜ್ಯದಷ್ಟು ದೊಡ್ಡದಾದ ಅದರ ಕ್ಷೇತ್ರವು, ಪಶ್ಚಿಮ ಜರ್ಮನಿ ಎಂದು ಕರೆಯಲ್ಪಡುತ್ತಿದ್ದ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯೊಳಗೆ ಅಖಂಡವಾಗಿ ಒಳಸೇರಿಸಲ್ಪಟ್ಟಿತು.
ಎರಡು ಜರ್ಮನಿಗಳ ಪುನರೇಕೀಕರಣವು ಭಾರೀ ಸಂಖ್ಯೆಯ ಸುಧಾರಣೆಗಳ ಅರ್ಥದಲ್ಲಿತ್ತು. ಎರಡು ದೇಶಗಳನ್ನು ಪ್ರತ್ಯೇಕಿಸಿದ್ದು ಕೇವಲ ಭೌತಿಕ ಮೇರೆಯಲ್ಲ, ಬದಲಿಗೆ ವಿಚಾರಶಾಸ್ತ್ರದ ಒಂದು ಸರಹದ್ದೇ. ಇದೆಲ್ಲವು ಅಲ್ಲಿನ ಜನರಿಗೆ ಯಾವ ಅರ್ಥದಲ್ಲಿತ್ತು, ಮತ್ತು ಯೆಹೋವನ ಸಾಕ್ಷಿಗಳಿಗೆ ಜೀವನವು ಬದಲಾದದ್ದು ಹೇಗೆ?
ಪುನರೇಕಿಕರಣವನ್ನು ಶಕ್ಯವನ್ನಾಗಿ ಮಾಡಿದ ನವಂಬರ 1989ರ ಕ್ರಾಂತಿ, ವೆಂಡ್, ನಾಲ್ಕು ದಶಕಗಳ ಗಡುಸಾದ ಸಮಾಜವಾದವನ್ನು ದಿಢೀರನೆ ಹಿಂಬಾಲಿಸಿ ಬಂತು. ಆ ನಾಲ್ಕು ದಶಕಗಳಲ್ಲಿ, ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ನಿಷೇಧಿಸಲ್ಪಟ್ಟಿದ್ದವು ಮತ್ತು ಅವರ ಹಿಂಸೆಯು ಕೆಲವೊಮ್ಮೆ ಉಗ್ರವಾಗಿತ್ತು.a ಜಿ.ಡಿ.ಆರ್.ಗೆ ಸ್ವಾತಂತ್ರ್ಯವು ದೊರೆತಾಗ, ಹಿರಿಹಿಗ್ಗಿನ ಭಾವನೆಯು ಜನತೆಯನ್ನು ಕೊಚ್ಚಿಕೊಂಡು ಹೋಯಿತು. ಆದರೆ ಸಡಗರವು ಕ್ಷಯಿಸಿದಾಗ, ಅನೇಕರು ಗಲಿಬಿಲಿಗೊಂಡರು, ಆಶಾಭಂಗಪಟ್ಟರು, ಭ್ರಮೆಮುಕ್ತರೂ ಆದರು. ಎರಡು ಜರ್ಮನಿಗಳನ್ನು ಏಕೈಕ ಸಾಮಾಜಿಕ, ರಾಜಕೀಯ, ಮತ್ತು ಆರ್ಥಿಕ ಒಕ್ಕೂಟವಾಗಿ ಒಂದುಗೂಡಿಸುವ ಕೆಲಸವು ಅಬೇಧ್ಯವಾಗಿ ಪರಿಣಮಿಸುತ್ತಾ ಇದೆ.
“162 ಟಾಗ್ ಡಾಯಿಟ್ಶ್ ಗೆಶ್ಟಿಕ್” (ಜರ್ಮನ್ ಇತಿಹಾಸದ 162 ದಿನಗಳು) ನ ವಿಶೇಷ ವರದಿಗನುಸಾರವಾಗಿ, ಡೇರ್ ಸ್ಪಿಗೆಲ್ ನಲ್ಲಿ, ಪುನರೇಕೀಕರಣವನ್ನು ಹಿಂಬಾಲಿಸಿ ನಿರುದ್ಯೋಗ, ಹಣದುಬ್ಬರ, ಮತ್ತು ಬಾಡಿಗೆಗಳಲ್ಲಿ ವೃದ್ಧಿಯ ಭಯವು ವಿಸ್ತಾರವಾಗಿ ಹರಡಿತ್ತು. “ನನಗೆ ಸಾಕಷ್ಟು ನಿವೃತ್ತಿ ವೇತನ ದೊರೆಯಲಿದೆಯೇ” ಎಂದು ಕೇಳಿದರು ಮುನ್ನಿನ ಜಿ.ಡಿ.ಆರ್. ನಲ್ಲಿ ಅನೇಕರು. ಮನೆಗಳನ್ನು ಒದಗಿಸುವ ಕುರಿತೇನು? “ಜಿ.ಡಿ.ಆರ್. ನಲ್ಲಿ ಎಲ್ಲೆಲ್ಲೂ, ಹಳೇ ಕಟ್ಟಡಗಳು ನಶಿಸಿಹೋಗುತ್ತಾ ಇವೆ, ಇಡೀ ಬೀದಿಗಳು ವಾಸಿಸಲು ಅಯೋಗ್ಯವಾಗಿ ಪರಿಣಮಿಸುತ್ತಾ ಇವೆ.” ಮಾಲಿನ್ಯವು ಭೀಕರವಾದ ಮಟ್ಟಗಳಿಗೆ ತಲಪಿದೆ.
ಅಂಥ ಸಾಮಾಜಿಕ ಮತ್ತು ಆರ್ಥಿಕ ಸಂಕ್ಷೋಭೆಯನ್ನು ಎದುರಿಸುವುದನ್ನು, ಮುನ್ನಿನ ಜಿ.ಡಿ.ಆರ್.ನ ಯೆಹೋವನ ಸಾಕ್ಷಿಗಳು ಹೇಗೆ ನಿರ್ವಹಿಸಿರುತ್ತಾರೆ?
ಕಣ್ಣನ್ನು ಸರಿಯಾಗಿ ಕೇಂದ್ರೀಕರಿಸಿಡುವುದು
ಯೆಹೋವನ ಸಾಕ್ಷಿಗಳಿಗೆ ವಿಚಾರಶಾಸ್ತ್ರದ ಸರಹದ್ದುಗಳಿಲ್ಲ. ಪೂರ್ವದಲ್ಲಿರಲಿ ಯಾ ಪಶ್ಚಿಮದಲ್ಲಿರಲಿ, ಅವರ ಬೈಬಲಾಧಾರಿತ ನಂಬಿಕೆಯು ಒಂದೇ ಆಗಿದೆ. ಅವರ ಸಾಮಾಜಿಕ ಪರಿಸರದ ಸ್ಥಿತ್ಯಂತರದೊಂದಿಗೆ, ಹೆಚ್ಚಿನ ಸಾಕ್ಷಿಗಳು ಯೆಹೋವನನ್ನು ಸೇವಿಸುವ ಮುಖ್ಯ ಗುರಿಯ ಮೇಲೆ ತಮ್ಮ ಕಣ್ಣುಗಳನ್ನು ನೆಟ್ಟಿಡುವ ಮೂಲಕ ಆತ್ಮಿಕ ಸಮತೆಯನ್ನು ಕಾಪಾಡುತ್ತಾರೆ. ಇದು ಯಾಕೆ ಅತ್ಯಗತ್ಯವಾಗಿದೆ?
ಯಾಕಂದರೆ, “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ [ಬದಲಾಗುತ್ತಾ, NW] ಇದೆ.” (1 ಕೊರಿಂಥ 7:31) ಒಬ್ಬ ಕ್ರೈಸ್ತ ಹಿರಿಯನು ಹೇಳುವುದೇನಂದರೆ ವೆಂಡ್ಗೆ ಮುಂಚಿನ ನಿಷೇಧದ ಕೆಳಗೆ ಸಾರುವುದಕ್ಕೆ ಧೈರ್ಯವು ಬೇಕಿತ್ತು; ಅದು ಸಾಕ್ಷಿಗಳಿಗೆ ಯೆಹೋವನಲ್ಲಿ ಆತುಕೊಳ್ಳಲು ಕಲಿಸಿತು ಮತ್ತು ಬೈಬಲನ್ನು ಉಪಯೋಗಿಸುವುದರಲ್ಲಿ ಅವರನ್ನು ತರಬೇತುಗೊಳಿಸಿತು. ಈಗಲಾದರೋ, “ನಾವು ಪ್ರಾಪಂಚಿಕತೆಯಿಂದ ಮತ್ತು ಜೀವಿತದ ಚಿಂತೆಗಳಿಂದ ಮೂಲೆಗೊತ್ತಲ್ಪಡದಂತೆ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ.”
ಸ್ವಾತಂತ್ರ್ಯ ಮತ್ತು ಪ್ರಗತಿಯು ಹೆಚ್ಚಾಗಿ ಪ್ರಾಪಂಚಿಕ ಸ್ಥಿತಿಗತಿಗಳಿಂದ ಅಳೆಯಲ್ಪಡುತ್ತವೆ. ಈ ಕ್ಷೇತ್ರದ ಹೆಚ್ಚಿನ ಜನರಿಗೆ, ಕಳೆದುಹೋದ ಸಮಯವನ್ನು ಅಥವಾ ಪ್ರಾಯಶಃ ಕಳಕೊಂಡ ಸುಖಭೋಗಗಳನ್ನು ತುಂಬಿಸಿಕೊಡುವ ಅಗತ್ಯ ಭಾಸವಾಗುತ್ತದೆ. ದಕ್ಷಿಣದಲ್ಲಿ ತುರಿಂಜಿಯ ಮತ್ತು ಸ್ಯಾಕ್ಸನಿ ಪಟ್ಟಣಗಳ ಮತ್ತು ಹಳ್ಳಿಗಳ ಕಲ್ಲುಗುಂಡುಗಳ ರಸ್ತೆಗಳ ಉದ್ದಕ್ಕೂ ಕಾರು ನಡಿಸುವಾಗ ಒಬ್ಬನಿಗೆ ಇದು ಸ್ಪಷ್ಟವಾಗಿಗುತ್ತದೆ. ರಸ್ತೆಗಳಿಗೆ ಪ್ರಾಯಶಃ ದುರುಸ್ತಿಯ ಅಗತ್ಯವಿದೆ, ನಿವಾಸಸ್ಥಾನಗಳು ವಿನೀತವಾಗಿವೆ, ಆದರೆ ಟೆಲಿವಿಷನ್ ಪ್ರಸಾರವನ್ನು ಪಡೆಯುವ ಉಪಗ್ರಹ ಪಾತ್ರೆಗಳ ಸಮೃದ್ಧಿ ಮಾತ್ರ ಅದೆಷ್ಟು. ಕಣ್ಣಿಗೆ ಕಾಣಿಸುವ ಪ್ರತಿಯೊಂದನ್ನು ಹೊಂದುವದರಿಂದ ಸುರಕ್ಷೆ ಮತ್ತು ಸಂತೋಷವು ಲಭಿಸುತ್ತದೆಂದು ನಂಬುವಂತೆ ಮೋಸಗೊಳಿಸಲ್ಪಡುವುದು ಒಬ್ಬ ವ್ಯಕ್ತಿಗೆ ಸುಲಭ. ಅದು ಎಂಥ ಗಂಡಾಂತರದ ಪಾಶವಾಗಿದೆ!
ಪರ್ವತ ಪ್ರಸಂಗದಲ್ಲಿ, ಪ್ರಾಪಂಚಿಕ ವಸ್ತುಗಳಿಗೆ ಮತ್ತು ಜೀವನದ ಚಿಂತೆಗಳಿಗೆ ಅನುಚಿತ ಗಮನವನ್ನು ಕೊಡುವ ಅಪಾಯಗಳ ಕುರಿತು ಯೇಸು ಮಾತಾಡಿದನು. “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ,” ಎಂದು ಎಚ್ಚರಿಸಿದನು ಆತನು. ಅವನು ಕೂಡಿಸಿದ್ದು: “ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವಲ್ಲಿ ನಿನ್ನ ಕಣ್ಣು ನೆಟ್ಟಗಿದ್ದರೆ [ಸರಳವಿದ್ದರೆ, NW] ನಿನ್ನ ದೇಹವೆಲ್ಲಾ ಬೆಳಕಾಗಿರುವದು.” (ಮತ್ತಾಯ 6:19, 22) ಅವನು ಯಾವ ಅರ್ಥದಲ್ಲಿ ಹೇಳಿದನು? ಒಂದು ಸರಳವಾದ ಕಣ್ಣು ಸ್ಫುಟವಾಗಿ ದೃಷ್ಟಿಯನ್ನು ಕೇಂದ್ರೀಕರಿಸುತ್ತದೆ ಮತ್ತು ಮನಸ್ಸಿಗೆ ಸ್ಪಷ್ಟವಾಗಿದ ಚಿತ್ರಗಳನ್ನು ರವಾನಿಸುತ್ತದೆ. ಸರಳವಾಗಿರುವ ಒಂದು ಆತ್ಮಿಕ ಕಣ್ಣು ದೇವರ ರಾಜ್ಯದ ಚಿತ್ರವನ್ನು ಸ್ಪಷ್ಟವಾಗಿಗಿಡುತ್ತದೆ. ಹೀಗೆ ತನ್ನ ಕಣ್ಣನ್ನು ಸರಳವಾಗಿ, ದೇವರ ರಾಜ್ಯದ ಮೇಲೆ ಸ್ಪಷ್ಟವಾಗಿಗಿ ಕೇಂದ್ರೀಕರಿಸಿ ಇಡಲು, ಮತ್ತು ಚಿಂತೆಗಳನ್ನು ಹಿನ್ನೆಲೆಗೆ ತಳ್ಳಲು ಒಬ್ಬ ಕ್ರೈಸ್ತನು ಮಾಡುವ ದೃಢ ನಿಶ್ಚಯವು ಅವನನ್ನು ಆತ್ಮಿಕ ಸಮತೆಯಲ್ಲಿಡಲು ನೆರವಾಗುತ್ತದೆ.
ವೆಂಡ್ ನ ಸಮಯದಲ್ಲಿ ಬೈಬಲಿನಲ್ಲಿ ಆಸಕ್ತಿ ತೋರಿಸಿದ ಸಿಕ್ವಾವ್, ಸ್ಯಾಕ್ಸನಿಯ ಒಬ್ಬ ದಂಪತಿಗಳ ಅನುಭವದಿಂದ ಇದನ್ನು ಉದಾಹರಿಸಬಹುದಾಗಿದೆ. ಅವರ ವ್ಯಾಪಾರವು ಬಹಳ ಸಮಯವನ್ನು ಕಬಳಿಸುತ್ತಿತ್ತು, ಆದರೂ ಅವರು ಎಲ್ಲಾ ಕ್ರೈಸ್ತ ಕೂಟಗಳನ್ನು ಹಾಜರಾಗುತ್ತಾ, ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಟ್ಟರು. “ನಮ್ಮ ವ್ಯಾಪಾರದ ದೃಷ್ಟಿಕೋನದಿಂದ ನಮಗೆ ಸಮಯ ಸಿಗುವ ಶಕ್ಯತೆ ಇಲ್ಲ,” ಎಂದು ಒಪ್ಪಿದರು ಅವರು, “ಆದರೆ ಆತ್ಮಿಕವಾಗಿ ನಮಗೆ ಅದು ಬೇಕು.” ಎಂಥ ವಿವೇಕಪ್ರದ ನಿರ್ಣಯವು!
ಸ್ಯಾಕ್ಸನಿಯಲ್ಲೇ ಇರುವ ಪ್ಲಾವನ್ನ ಒಂದು ಕುಟುಂಬವನ್ನು ಸಹ ಗಮನಿಸಿರಿ. ಗಂಡನು ಗಡಿಯಾರಗಾರನಾಗಿದ್ದನು, ತನ್ನ ಸ್ವಂತ ವ್ಯಾಪಾರವುಳ್ಳ ಕುಶಲ ಶಿಲ್ಪಿಯಾಗಿದ್ದನು. ವೆಂಡ್ ನ್ನು ಹಿಂಬಾಲಿಸಿ, ಅವನ ಕಟ್ಟಡದ ಬಾಡಿಗೆಯು ತೀವ್ರವಾಗಿ ಏರಿತು. ಅವನೇನು ಮಾಡಬೇಕು? “ಅದಕ್ಕೆ ಹೆಚ್ಚು ಹಣ ತಗಲುವುದು, ಮತ್ತು ನಾನು ಸತ್ಯವನ್ನು ಕಲಿತದ್ದು ಸತ್ಯವನ್ನು ನನ್ನ ಜೀವಿತದ ಮಹತ್ವದ ವಿಷಯವನ್ನಾಗಿ ಮಾಡುವದಕ್ಕಾಗಿ.” ಹೀಗೆ ಅವನು ಅಷ್ಟೊಂದು ಅನುಕೂಲವಲ್ಲದ ಆದರೆ ಕಡಿಮೆ ಬಾಡಿಗೆಯ ಸ್ಥಳಕ್ಕೆ ಜಾಗ ಬದಲಾಯಿಸಿದನು. ಹೌದು, ಗಡಿಯಾರಗಾರನು ತನ್ನ ಕಣ್ಣನ್ನು ಸರಳವಾಗಿಡುವ ಕುರಿತು ಬಹು ಬೇಗನೆ ಕಲಿತನು.
ಇನ್ನು ಕೆಲವರಾದರೋ ತೀರ ವೇಳೆಮೀರಿ ಕಲಿತರು. ಹೊಸತಾಗಿ ಪ್ರಸ್ತಾಪಿಸಲ್ಪಟ್ಟ ಮುಕ್ತ-ಮಾರುಗಟೆಯ್ಟ ಆರ್ಥಿಕ ವ್ಯಾಪಾರವು ಅತ್ಯಂತ ಲಾಭದಾಯಕವೆಂದು ವಿವೇಚಿಸುತ್ತಾ, ಒಬ್ಬ ಕ್ರೈಸ್ತ ಹಿರಿಯನು ವ್ಯಾಪಾರಕ್ಕಿಳಿದನು. ವ್ಯಾಪಾರ ಕಟ್ಟುಪಾಡುಗಳು ಆತ್ಮಿಕತೆಯನ್ನು ಹೊರಗಟ್ಟಲು ಬಿಡದಂತೆ ಅವನನ್ನು ಒಬ್ಬ ಸಂಚಾರ ಸೇವಕನು ದಯೆಯಿಂದ ಪ್ರೇರಿಸಿದನು. ಆದರೂ, ಶೋಚನೀಯವಾಗಿ, ಅದೇ ಸಂಭವಿಸಿತು. ಕೆಲವು ತಿಂಗಳುಗಳ ಅನಂತರ ಸಹೋದರನು ತನ್ನ ಹಿರಿಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟನು. ಅವನು ತದನಂತರ ಬರೆದದ್ದು: “ನನ್ನ ಸ್ವಂತ ಅನುಭವದ ಮೇಲೆ ಆಧಾರಿಸಿ, ಸೇವಾ ಸುಯೋಗಗಳಿಗೆ ಎಟಕಿಸಿಕೊಳ್ಳುವ ಯಾವನೇ ಸಹೋದರನಿಗೆ, ಅವನು ತನ್ನ ಸ್ವಂತ ವ್ಯಾಪಾರಕ್ಕೆ ಇಳಿಯದಂತೆ ನಾನು ಸಲಹೆ ಕೊಡುವೆನು.” ಕ್ರೈಸ್ತನೊಬ್ಬನಿಗೆ ತನ್ನ ಸ್ವಂತ ವ್ಯಾಪಾರವಿರುವುದು ತಪ್ಪು ಎಂದಿದರ ಅರ್ಥವಲ್ಲ. ಆದರೆ, ನಮಗೆ ಸ್ವಂತ ವ್ಯಾಪಾರ ಇರಲಿ ಯಾ ಇಲ್ಲದಿರಲಿ, ಆರ್ಥಿಕ ಚಿಂತೆಗಳಿಗೆ ತೀರ ಹೆಚ್ಚು ಗಮನಕೊಡುವುದು ನಮ್ಮನ್ನು ಐಶ್ವರ್ಯಕ್ಕೆ ಅನೈಚ್ಛಿಕ ದಾಸರನ್ನಾಗಿ ಮಾಡಬಲ್ಲದು. ಯೇಸು ಅದರ ಪರಿಣಾಮವನ್ನು ತೋರಿಸಿದ್ದಾನೆ: “ಯಾರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು.” (ಮತ್ತಾಯ 6:24) ಜರ್ಮನ್ ಕವಿಯಾದ ಗಟೆ ಹೇಳಿದ್ದು: “ತಾವು ಸ್ವತಂತ್ರರೆಂದು ತಪ್ಪಾಗಿ ನಂಬುವವರಿಗಿಂತ ಹೆಚ್ಚು ಆಶಾಹೀನ ದಾಸ್ಯದಲ್ಲಿರುವವರು ಬೇರೆ ಯಾರೂ ಇಲ್ಲ.”
ಒಂದು ಅಕ್ಷರಶಃ ಬಿರುಗಾಳಿಯಲ್ಲಿ ಸಿಕ್ಕಿರುವಾಗ, ನಮ್ಮ ಗುರಿಯನ್ನು ನಮ್ಮ ಎದುರಿಗಿಡಲು ಪ್ರಾಯಶಃ ನಮ್ಮ ಕಣ್ಣುಗಳನ್ನು ಮೆಳ್ಳೆಮಾಡಬೇಕಾದೀತು ಇಲ್ಲವೇ ಕಣ್ಣ ಸುತ್ತಲೂ ನಮ್ಮ ಕೈಗಳನ್ನು ದುಂಡಗಾಗಿ ಇರಿಸಬೇಕಾದೀತು. ರಾಜಕೀಯ, ಸಾಮಾಜಿಕ, ಮತ್ತು ಆರ್ಥಿಕ ಸಂಕ್ಷೋಭೆಯಲ್ಲಿ ಸುತ್ತುವರಿಯಲ್ಪಟ್ಟಾಗ, ನಮ್ಮ ಆತ್ಮಿಕ ಗುರಿಯನ್ನು ದೃಷ್ಟಿಯಲ್ಲಿಡಲು ಚಿತ್ತೈಕಾಗ್ರತೆಯು ಆವಶ್ಯಕವಾಗಿದೆ. ರಾಜ್ಯ ಕಾರ್ಯದಲ್ಲಿ ತಮ್ಮ ಕಣ್ಣನ್ನು ಸರಳವಾಗಿಡಲು ಕೆಲವು ಕ್ರೈಸ್ತರು ಏನು ಮಾಡುತ್ತಿದ್ದಾರೆ?
ಅಧಿಕಮಾಡಲ್ಪಟ್ಟ ರಾಜ್ಯ ಚಟುವಟಿಕೆ
ಹಿಂದಣ ಜಿ.ಡಿ.ಆರ್.ನ ಎಲ್ಲೆಲ್ಲೂ, ಸಾಕ್ಷಿಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಸಾರುವುದಕ್ಕೆ ಅಧಿಕ ಸಮಯವನ್ನು ಮೀಸಲಾಗಿಡುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕ್ಷೇತ್ರ ಸೇವೆಯಲ್ಲಿ ಕಳೆದ ಸರಾಸರಿ ಸಮಯವು 21 ಪ್ರತಿಶತ ಏರಿತು. ಫಲಿತಾಂಶವಾಗಿ ಮನೆ ಬೈಬಲಭ್ಯಾಸಗಳಲ್ಲಿ ಕೌತುಕಕಾರಿ 34 ಪ್ರತಿಶತ ಅಭಿವೃದ್ಧಿಯಾಯಿತು. ಅದಲ್ಲದೆ, ಕ್ರಮದ ಪಯನೀಯರರ ಸಂಖ್ಯೆಯು ಕೇವಲ ಎರಡೇ ವರ್ಷಗಳ ಹಿಂದೆ ಇದದ್ದಕ್ಕಿಂತ ಈಗ ನಾಲ್ಕು ಪಾಲಷ್ಟು ಹೆಚ್ಚಾಗಿದೆ! ಇತರರು ಚಿಂತಿಸುತ್ತಾ ದೂರುತ್ತಾ ಇರುವಾಗ, ಈ ಮುಂಚೆ ಜಿ.ಡಿ.ಆರ್. ಆಗಿದ್ದ ಇಲ್ಲಿರುವ 23,000 ಕ್ಕಿಂತಲೂ ಹೆಚ್ಚು ಕ್ರೈಸ್ತರಾದರೋ ತಮ್ಮ ಕಣ್ಣುಗಳನ್ನು ಸರಳವಾಗಿ ಇಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ರಾಜ್ಯ ಚಟುವಟಿಕೆಯಲ್ಲಿ ಅಚ್ಚರಿಗೊಳಿಸುವ ಅಭಿವೃದ್ಧಿಗೆ ಇದು ನೆರವಾಗಿಯದೆ.—ಹೋಲಿಸಿರಿ ಯೆಹೋಶುವ 6:15.
ಚಟುವಟಿಕೆಯ ಅಧಿಕಗೊಳಿಸುವಿಕೆಯೆಂದರೆ ದಕ್ಷಿಣದಲ್ಲಿ ಟೆರಿಟೊರಿಯು ಒಳ್ಳೇ ಆರೈಕೆಗೆ ಒಳಗಾಗಿರುವುದೇ, ಅಧಿಕತಮ ಸಾಕ್ಷಿಗಳು ಅಲ್ಲಿ ವಾಸಿಸುತ್ತಾರೆ. ಅನೇಕ ಸ್ಧಳಗಳ ಹೆಸರುಗಳು ಚರಿತ್ರೆಯಲ್ಲಿ ಗಮನಾರ್ಹವೂ ಚಿರಿಪರಿಚಿತವೂ ಆಗಿವೆ. ಉತ್ತಮ ಪಿಂಗಾಣಿ ನಿಮಗಿಷ್ಟವಿದ್ದರೆ, ಲೋಕದ ಕೆಲವು ಅತ್ಯಂತ ನಾಜೂಕು ಪಿಂಗಾಣಿ ಸಾಮಾನುಗಳಿಗೆ ಮೂಲವಾದ ಡ್ರೆಸ್ಡೆನ್ ಸಮೀಪದ ಮೈಸ್ಸನ್ ಶಹರವನ್ನು ನೀವು ಗುರುತಿಸುವಿರಿ. ಮೈಸ್ಸನ್ ಈಗ ಸುಮಾರು 130 ರಾಜ್ಯ ಪ್ರಚಾರಕರ ಮನೆಯಾಗಿರುತ್ತದೆ. ಅಥವಾ, “ಜರ್ಮನಿಯ ಸಾಂಸ್ಕೃತಿಕ ರಾಜಧಾನಿ” ವೈಮರ್ನ್ನು ಗಮನಿಸಿರಿ. ಶಹರದ ಮಧ್ಯದಲ್ಲಿರುವ ಗಟೆ-ಷಿಲರ್ಲ್ ಸ್ಮಾರಕವು, ಆ ಇಬ್ಬರು ಲೇಖಕರೊಂದಿಗೆ ವೈಮರ್ಗಿರುವ ಪ್ರತಿಷ್ಠೆಯ ಸಂಬಂಧಗಳಿಗೆ ಸಾಕ್ಷಿಕೊಡುತ್ತದೆ ಮತ್ತು ಅಲ್ಲಿರುವ ಅನೇಕರಿಗೆ ಅಭಿಮಾನದ ಮೂಲವಾಗಿದೆ. ಇಂದು ವೈಮರ್ ಅದರ 150 ಕ್ಕಿಂತಲೂ ಹೆಚ್ಚು ಸುವಾರ್ತಾ ಪ್ರಚಾರಕರಿಗಾಗಿ ಅಭಿಮಾನ ತಾಳಬಲ್ಲದು.
ಉತ್ತರದಲ್ಲಿಯಾದರೋ ಪ್ರಚಾರಕರು ಕೊಂಚವಾಗಿದ್ದು, ಸಭೆಗಳ ನಡುವಣ ಅಂತರವು ಹೆಚ್ಚು ದೂರವಾಗಿರುವುದರಿಂದ ವಿಷಯಗಳು ತೀರ ಭಿನ್ನವಾಗಿವೆ. ವಿಶೇಷವಾಗಿ ಕೆಲಸಗಳ ಅಭಾವವಿದೆ. ಕೆಲಸವಿರುವ ಅನೇಕರು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲಿಕ್ಕಾಗಿ ಓವರ್ಟೈಮ್ ಮಾಡುವ ಒತ್ತಾಯದ ಕೆಳಗಿದ್ದಾರೆ. ಉತ್ತರದಲ್ಲಿ ಪೂರ್ಣ-ಸಮಯ ಸಾರುವವನಾಗಿ ಸೇವೆಮಾಡುವ ಒಬ್ಬ ಸಹೋದರನು ವಿವರಿಸುವುದು: “ನಿಷೇಧದ ಕೆಳಗೆ ಪ್ರತಿಯೊಬ್ಬ ಸಹೋದರನಿಗೆ ಕ್ಷೇತ್ರ ಸೇವೆಯಲ್ಲಿ ಯೆಹೋವನ ಭದ್ರತೆಯ ಅಗತ್ಯವಿತ್ತು, ಅದರೆ ಕೆಲಸ ಸಿಕ್ಕುವುದು ಕಷ್ಟವಾಗಿರಲಿಲ್ಲ. ಆದರೆ ಈಗ ಸನ್ನಿವೇಶವು ವಿಪರ್ಯಸ್ತವಾಗಿದೆ. ನಮಗೆ ಸಾರುವ ಸ್ವಾತಂತ್ರ್ಯವಿದೆ, ಆದರೆ ಉದ್ಯೋಗದ ಸಂಬಂಧದಲ್ಲಿ ಆತನ ಮಾರ್ಗದರ್ಶನದ ಅಗತ್ಯ ನಮಗಿದೆ. ಅಂಥ ಒಂದು ಬದಲಾವಣೆಗೆ ಬಹಳಷ್ಟು ಒಗ್ಗಿಸಿಕೊಳ್ಳುವಿಕೆ ಬೇಕಾಗುತ್ತದೆ.”
ಅಧಿಕಾವರ್ತಿ ಸಾರಲು ಶಕ್ತರಾಗಿರುವುದಕ್ಕಾಗಿ ಸಹೋದರರು ಸಂತೋಷಿತರೋ? ವೊಲ್ಪ್ಗಾನ್ನ ನೋಟ ಹೀಗಿದೆ: “ಒಂದೇ ಟೆರಿಟೊರಿಯನ್ನು ಅದೇ ಪ್ರಚಾರಕನು ಪುನಃ ಪುನಃ ಸೇವೆ ಮಾಡುವುದು ಹೆಚ್ಚು ಒಳ್ಳೆಯದು. ಜನರಿಗೆ ಅವನಲ್ಲಿ ಭರವಸೆ ಬೆಳೆಯುತ್ತದೆ ಮತ್ತು ಅವರು ಮಾತುಕತೆಗೆ ಹೆಚ್ಚು ತೆರೆದವರಾಗುತ್ತಾರೆ.” ಅದಲ್ಲದೆ, ಮನೆಯವರು “ಮನೆಬಾಗಲಲ್ಲಿ ಧರ್ಮದ ಕುರಿತು ಮಾತಾಡಲು ಇನ್ನು ಮುಂದೆ ಸಂಕೋಚ ಪಡುವುದಿಲ್ಲ, ದಾರಿಹೋಕರು ಅದನ್ನು ಆಲಿಸುವ ಅಂತರದೊಳಗಿದ್ದಾಗ ಸಹ. ಧರ್ಮವು ಇನ್ನುಮುಂದೆ ನಿಷಿದ್ಧ ವಿಷಯವಾಗಿಲ್ಲ.” ರಾಲ್ಪ್ ಮತ್ತು ಮಾರ್ಟೀನ ಒಪ್ಪುತ್ತಾರೆ. “ನಮ್ಮ ಟೆರಿಟೊರಿಯಲ್ಲಿ ಅಡಿಗಡಿಗೆ ಸೇವೆಮಾಡಲು ನಾವು ಆನಂದಿಸುತ್ತೇವೆ. ಜನರನ್ನು ವೈಯಕ್ತಿಕವಾಗಿ ನಾವು ತಿಳಿಯಬಲ್ಲೆವು ಮತ್ತು ದೊರೆಯುವ ಬಹು ವಿಧಧ ಸಾಹಿತ್ಯದ ಕುರಿತು ಸಹ ನಾವು ಪುಳಕಿತರಾಗಿದ್ದೇವೆ.”
ನಮ್ಮ ಸಾಹಿತ್ಯಕ್ಕಾಗಿ ಗಣ್ಯತೆ
ರಾಲ್ಪ್ ಮತ್ತು ಮಾರ್ಟೀನ, ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಇವೊಲ್ಯೂಷನ್ ಆರ್ ಬೈ ಕ್ರಿಯೇಷನ್? ಪುಸ್ತಕವನ್ನು ವಿಶೇಷವಾಗಿ ಗಣ್ಯಮಾಡುತ್ತಾರೆ. ಮುಂಚಿನ ಜಿ.ಡಿ.ಆರ್. ನಲ್ಲಿ ನಾಸ್ತಿಕತೆಯನ್ನು ಸ್ವೀಕರಿಸಿದ್ದ ಅನೇಕರಿಗೆ ಈ ಪುಸ್ತಕವು ಒಂದು ಆಶ್ಚರ್ಯಕರ ಬೈಬಲ್ ಅಧ್ಯಯನ ಸಹಾಯಕವಾಗಿ ರುಜುವಾಗುತ್ತಾ ಇದೆ. ತದ್ರೀತಿಯ ಮಾಹಿತಿಯು ಅಡಕವಾಗಿರುವ ಚಿಕ್ಕದಾದ ಪ್ರಕಾಶನಕ್ಕಾಗಿ ಸಹ ಅವರು ಇಷ್ಟಪಟ್ಟರು. “ಡ್ರೆಸ್ಡೆನ್ನಲ್ಲಿ 1992 ರ ‘ಬೆಳಕು ವಾಹಕರ’ ಜಿಲ್ಲಾ ಅಧಿವೇಶನದಲ್ಲಿ ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಬ್ರೋಷರ್ ಹೊರಡಿಸಲ್ಪಟ್ಟಾಗ ನಾವೆಷ್ಟು ಪುಳಕಿತರಾದೆವು. ಅದು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿತ್ತು.”
ಸಾಕ್ಷಿಗಳಲ್ಲದ ಅನೇಕರು ವಾಚ್ ಟವರ್ ಪ್ರಕಾಶನಗಳನ್ನು ಮೆಚ್ಚ ತೊಡಗಿದ್ದಾರೆ. ಜುಲೈ 1992 ರಲ್ಲಿ ಸಾಮಾಜಿಕ ಶಿಕ್ಷಣದ ಒಬ್ಬ ಉಪನ್ಯಾಸಕಳು, ತಾನು ತನ್ನ ಉಪನ್ಯಾಸಗಳನ್ನು ತಯಾರಿಸಲು ಉಪಯೋಗಿಸುವ ಪ್ರಕಾಶನಗಳಿಗಾಗಿ, “ಅತ್ಯುಚ್ಚ ಆದರ ಮತ್ತು ಹೃತ್ಪೂರ್ವಕ ಉಪಕಾರಗಳನ್ನು” ವ್ಯಕ್ತಪಡಿಸಿ ಬರೆದಳು. ಜನವರಿ 1992 ರಲ್ಲಿ ರಾಸ್ಟಕ್ನ ಒಬ್ಬ ಮಹಿಳೆಯು ತನ್ನ ಮನೆಗೆ ಬಂದ ಇಬ್ಬರು ಸಾಕ್ಷಿಗಳಿಂದ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಪ್ರತಿಯನ್ನು ಸ್ವೀಕರಿಸಿದಳು. ಆಕೆ ಜರ್ಮನಿಯ ಬ್ರಾಂಚ್ ಆಫೀಸಿಗೆ ಬರೆದದ್ದು: “ನಾನು ಲ್ಯೂತರನ್ ಚರ್ಚಿಗೆ ಸೇರಿದವಳು. ಯೆಹೋವನ ಸಾಕ್ಷಿಗಳ ಸಂಸ್ಥೆಯ ಚಟುವಟಿಕೆಗಳಿಗಾಗಿ ನನಗೆ ಅತ್ಯುಚ್ಚ ಗೌರವವಿದೆ. ದೇವರ ಮಾರ್ಗದರ್ಶನದ ಹೊರತು ಮನುಷ್ಯನು ಇನ್ನುಮುಂದೆ ಅಸ್ತಿತ್ವದಲ್ಲಿರ ಶಕ್ತನಲ್ಲವೆಂದು ಅವರು ದೃಢ ನಿಶ್ಚಯದಿಂದ ಹೇಳುತ್ತಾರೆ.”
ಕ್ರೈಸ್ತಪ್ರಪಂಚದ ಚರ್ಚುಗಳು ತಮ್ಮ ಸದಸ್ಯರಿಗೆ ಕೊಟ್ಟಿರುವ ಮಾರ್ಗದರ್ಶನವಾದರೂ ಎಷ್ಟು? ಪ್ರತಿಷ್ಠಿತ ವಾರ್ತಾಪತ್ರ ಡಿ ಜಿಟ್ ದಶಂಬರ 1991 ರಲ್ಲಿ ಹೇಳಿದ್ದೇನಂದರೆ ಲ್ಯೂತರನ್ ಚರ್ಚು, “ಶಾಂತಿಯುಕ್ತ ಕ್ರಾಂತಿಯ ಮಾತೆಯೋಪಾದಿ ಕೊಂಡಾಟದಲ್ಲಿ ಹಾಯಾಗಿದ್ದರೂ, ಅದರ ಜನಪ್ರಿಯತೆಯು ತೀವ್ರವಾಗಿ ಕುಂದುತ್ತಾ ಬರುತ್ತಿರುವಂತೆ ತೋರುತ್ತಿದೆ.” ವಾಸ್ತವವಾಗಿ, ಲ್ಯೂತರನ್ ಚರ್ಚಿನ ಒಬ್ಬ ಸದಸ್ಯನು ಪ್ರಲಾಪಿಸಿದ್ದು: “ಜನರು ಮುಕ್ತ-ಮಾರುಗಟೆಯ್ಟ ಜೀವನವನ್ನು ಪರದೈಸದೊಂದಿಗೆ ತಪ್ಪಾಗಿ ಕಲಬೆರಕೆ ಮಾಡಿದ್ದಾರೆ.” ಮ್ಯಾಜ್ಬರ್ಗಿನ ಚರ್ಚ್ ಸದಸ್ಯನೊಬ್ಬನು ಮಾಹಿತಿಯನ್ನು ವಿನಂತಿಸುತ್ತಾ ಪತ್ರ ಬರೆದನು. ಯಾಕೆ? “ಅಪನಂಬಿಕೆಯಲ್ಲಿ ನಗುತ್ತಾ ವರ್ಷಗಳನ್ನು ಕಳೆದ ಮೇಲೆ,” ಆ ಸಂಭಾವಿತನು ಬರೆದದ್ದು, “ನನಗೀಗ ಈ ಲೋಕವು ತನ್ನ ಕಡೇ ದಿನಗಳಲ್ಲಿದೆ ಎಂದೂ ಮತ್ತು ಸಮೀಪದ ಭವಿಷ್ಯತ್ತಿನಲ್ಲಿ ಮಹಾ ತೊಂದರೆಗಳನ್ನು ನಾವು ಎದುರಿಸಲಿರುವೆವೆಂದೂ ಪೂರ್ಣ ಖಾತರಿಯಾಗಿದೆ.”—2 ತಿಮೊಥೆಯ 3:1-5.
ವಿಸ್ತರಣಕ್ಕಾಗಿ ಕಟ್ಟುವುದು
ವೆಂಡ್ ಗೆ ಮುಂಚೆ, ಜಿ.ಡಿ.ಆರ್. ನಲ್ಲಿ ರಾಜ್ಯ ಸಭಾಗೃಹಗಳಿಗೆ ಅನುಮತಿ ಇರಲಿಲ್ಲ. ಈಗ ಅವುಗಳು ಜರೂರಿಯಾಗಿ ಬೇಕಾಗಿವೆ; ಅವುಗಳ ಕಟ್ಟುವಿಕೆಗೆ ಪ್ರಥಮತೆಯನ್ನು ಕೊಡಲಾಗಿದೆ. ಗಮನಾರ್ಹ ಪರಿವರ್ತನೆಯನ್ನು ಅನುಭವಿಸಿದ ಸತ್ಯಾರಾಧನೆಯ ಇನ್ನೊಂದು ಭಾಗವು ಇದಾಗಿದೆ. ಈ ಬದಲಾವಣೆಯ ತೀವ್ರತೆ ಎಷ್ಟಾಗಿದೆಯೆಂಬದನ್ನು ಒಬ್ಬ ಸಹೋದರನ ಅನುಭವವು ಉದಾಹರಿಸುತ್ತದೆ.
ಮಾರ್ಚ್ 1990 ರಲ್ಲಿ, ಯೆಹೋವನ ಸಾಕ್ಷಿಗಳಿಗೆ ಜಿ.ಡಿ.ಆರ್. ನಲ್ಲಿ ನ್ಯಾಯಬದ್ಧ ಮಾನ್ಯತೆಯು ದೊರೆತ ಕೆಲವೇ ತಾಸುಗಳ ಬಳಿಕ, ಒಬ್ಬ ಸಹೋದರನನ್ನು ಅವನ ಜೀವನದಲ್ಲಿ ದ್ವನಿವರ್ಧಕವನ್ನು ಮೊತ್ತಮೊದಲಾಗಿ ಬಳಸುತ್ತಾ, ಒಂದು ಸಾಕ್ಷಿಗಳ ಗುಂಪಿಗೆ ಭಾಷಣ ಕೊಡುವಂತೆ ಆಮಂತ್ರಿಸಲಾಯಿತು. ಎರಡೂವರೆ ವರ್ಷಗಳ ಅನಂತರ, ಅವನು ಸಹವಸಿಸುತ್ತಿರುವ ಸಭೆಯು ಒಂದು ಹೊಚ್ಚ-ಹೊಸತು ರಾಜ್ಯ ಸಭಾಗೃಹದ ಸಮರ್ಪಣೆ ಮಾಡಿತು. ಇಸವಿ 1992 ರ ಅಂತ್ಯದೊಳಗೆ, 16 ಸಭೆಗಳಿಗಾಗಿ ಏಳು ರಾಜ್ಯ ಸಭಾಗೃಹಗಳು ಕಟ್ಟಲ್ಪಟ್ಟವು. ಬೇರೆ 30 ಕ್ಕಿಂತಲೂ ಹೆಚ್ಚು ಸಭಾಗೃಹಗಳು ಹಾಗೂ ಒಂದು ಆಕರ್ಷಕ ಅಸೆಂಬ್ಲಿ ಹಾಲ್ ಯೋಜನೆಯ ಹಂತದಲ್ಲಿವೆ.
ದೇವರ ರಾಜ್ಯದ ಮೇಲೆ ನೆಟ್ಟ ಕಣ್ಣು
“ವೆಂಡ್ ನ ಅನಂತರ ಸ್ವಲ್ಪ ಸಮಯದಲ್ಲೇ,” ಒಬ್ಬ ಕ್ರೈಸ್ತ ಹಿರಿಯನು ಅನ್ನುವುದು, “ಅನೇಕರು ಬೈಬಲನ್ನು ತಿರಸ್ಕರಿಸಿದರು. ಕಟ್ಟಕಡೆಗೆ ಒಳ್ಳೇ ಪರಿಸ್ಥಿತಿಗಳ ಒಂದು ವಾಗ್ದಾನವನ್ನು ಕೊಟ್ಟ ಹೊಸ ಸರಕಾರದಲ್ಲಿ ಅವರು ತಮ್ಮ ನಿರೀಕ್ಷೆ ಇಟ್ಟರು.” ಅವರ ನಿರೀಕ್ಷೆಯು ನೆರವೇರಿತೋ? “ಎರಡೇ ವರ್ಷಗಳೊಳಗೆ ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿದರು. ಮಾನವ ಸರಕಾರಗಳು ಶಾಂತಿ ಮತ್ತು ನೀತಿಯನ್ನೆಂದೂ ತರಲಾರವೆಂದು ಜನರೀಗ ನಮ್ಮೊಂದಿಗೆ ಒಪ್ಪುತ್ತಾರೆ.”
ಜಿ.ಡಿ.ಆರ್. ನಲ್ಲಿ ಗಡುಸು ಸಮಾಜವಾದದ ಗ್ರಹಣ ಕಂತಿದಾಗ ಜನಸಮೂಹಗಳು ಉಲ್ಲಾಸಪಟ್ಟವು, ಮತ್ತು ಯಾವುದನ್ನು ಪಾಶ್ಚಿಮಾತ್ಯ ವಿಚಾರಶಾಸ್ತ್ರದ ಸುವರ್ಣ ಅರುಣೋದಯವೆಂದು ಅವರು ಪರಿಗಣಿಸಿದರೋ ಅದರ ಬರವನ್ನು ಘೋಷಿಸಿದರು. ಆದರೆ ಅವರು ಆಶಾಭಂಗ ಹೊಂದಿದರು. ಯಾವ ಸರಕಾರವೇ ಅಧಿಕಾರದಲ್ಲಿರಲಿ, ಯೆಹೋವನ ಸಾಕ್ಷಿಗಳು ತಮ್ಮ ಕಣ್ಣನ್ನು ಸರಳವಾಗಿಡುತ್ತಾರೆ ಮತ್ತು ದಿಗಂತದಲ್ಲಿ ತಾರೆಯೋಪಾದಿ ಬೆಳಗುವ ದೇವರ ರಾಜ್ಯದ ಮೇಲೆ ಅದನ್ನು ದೃಢವಾಗಿ ನೆಲೆಗೊಳಿಸುತ್ತಾರೆ. ಅಂಥ ನಿರೀಕ್ಷೆಯು ಎಂದೂ ಆಶಾಭಂಗಕ್ಕೆ ನಡಿಸದು.—ರೋಮಾಪುರ 5:5.
[ಅಧ್ಯಯನ ಪ್ರಶ್ನೆಗಳು]
a “ನಿಷೇಧದ ಕೆಳಗೆ ಯೆಹೋವನು ನಮ್ಮ ಪರಾಮರಿಕೆ ಮಾಡಿದನು” ಭಾಗ 1-3, ಕಾವಲಿನಬುರುಜು, ಜುಲೈ 15, ಆಗಷ್ಟ್ 1, ಮತ್ತು ಆಗಷ್ಟ್ 15, 1992 ನೋಡಿರಿ.
[ಪುಟ 26 ರಲ್ಲಿರುವ ಚಿತ್ರಗಳು]
ಜರ್ಮನಿಯಲ್ಲಿ ಸಾಕ್ಷಿಗಳು ತಮ್ಮ ಸ್ವಾತಂತ್ರ್ಯವನ್ನು ರಾಜ್ಯ ಚಟುವಟಿಕೆಯಲ್ಲಿ ಹೆಚ್ಚೆಚ್ಚಾಗಿ ಒಳಗೂಡುವುದಕ್ಕೆ ಉಪಯೋಗಿಸುತ್ತಿದ್ದಾರೆ