ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 11/15 ಪು. 32
  • ಒಂದು ವೃಕ್ಷದೋಪಾದಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ವೃಕ್ಷದೋಪಾದಿ
  • ಕಾವಲಿನಬುರುಜು—1993
ಕಾವಲಿನಬುರುಜು—1993
w93 11/15 ಪು. 32

ಒಂದು ವೃಕ್ಷದೋಪಾದಿ

“ನನ್ನಂಥ ಮೂರ್ಖರಿಂದ ಪದ್ಯಗಳು ರಚಿಸಲ್ಪಡುತ್ತವೆ, ಆದರೆ ದೇವರು ಮಾತ್ರ ವೃಕ್ಷವೊಂದನ್ನು ಸೃಷ್ಟಿಸಬಲ್ಲನು.” ಹೀಗೆ ವೃಕ್ಷಗಳ ಅನೇಕ ಗುಣಗಳನ್ನು ಶ್ಲಾಘಿಸುತ್ತಾ, ಕವಿ ಜಾಯ್ಸ್‌ ಕಿಲ್‌ಮರ್‌ ಅವುಗಳನ್ನು ಸೃಷ್ಟಿಮಾಡಿದ್ದಕ್ಕಾಗಿ ದೇವರಿಗೆ ಗಣ್ಯತೆಯನ್ನು ಸಲ್ಲಿಸಿದನು.

ಭವ್ಯ, ಮತ್ತು ಉಪಯೋಗಕರವಾದ ಅನೇಕ ವಿಧದ ವೃಕ್ಷಗಳನ್ನು ಯೆಹೋವ ದೇವರು ಉಂಟುಮಾಡಿದ್ದಾನೆ. ಚಿಕ್ಕ ವೃಕ್ಷಗಳು ಮತ್ತು ಅದೇ ರೀತಿ ಅಸಾಧಾರಣವಾಗಿ ಬೃಹತ್ಗಾತ್ರದ ವೃಕ್ಷಗಳು, ಎಷ್ಟೊಂದು ಸುಂದರವಾಗಿರ ಸಾಧ್ಯವಿದೆಯೆಂದರೆ ಅವುಗಳು ವಿವರಣೆಗೆ ನಿಲುಕದ್ದಾಗಿವೆ. ಅದಲ್ಲದೆ, ವೃಕ್ಷಗಳು ಆಹಾರವನ್ನು, ಇಂಧನವನ್ನು, ಮತ್ತು ಆಶ್ರಯವನ್ನು ಒದಗಿಸುತ್ತವೆ. ಮತ್ತು ವಿನ್ಯಾಸಕಾರರು ಮರದ ಹೊಸ ಉಪಯೋಗಗಳನ್ನು ಕಂಡುಕೊಳ್ಳುತ್ತಾ ಇದ್ದಾರೆ.

ಬೈಬಲಿನಲ್ಲಿ, ಕೆಲವೊಮ್ಮೆ ರಾಜ್ಯಗಳನ್ನು, ರಾಜರುಗಳನ್ನು, ಮತ್ತು ವ್ಯಕ್ತಿಗಳನ್ನು ಪ್ರತಿನಿಧಿಸಲಿಕ್ಕಾಗಿ ವೃಕ್ಷಗಳು ಸಾಂಕೇತಿಕವಾಗಿ ಉಪಯೋಗಿಸಲ್ಪಟ್ಟಿವೆ. (ಯೆಹೆಜ್ಕೇಲ 31:1-18; ದಾನಿಯೇಲ 4:10-26) ಯೆಹೋವನ ಅರಸುತನದಿಂದ ಮತ್ತು ಆತನ ಜನರ ಪುನಃ ಸ್ಥಾಪನೆಯಿಂದ ಫಲಿಸುವ ಹರ್ಷಭರಿತ, ಶಾಂತಿಭರಿತ, ಮತ್ತು ಫಲೋತ್ಪಾದಕ ಪರಿಸ್ಥಿತಿಗಳೊಂದಿಗೆ ಸಂಬಂಧಿಸಿ ವೃಕ್ಷಗಳು ಉಲ್ಲೇಖಿಸಲ್ಪಟ್ಟಿವೆ. (1 ಪೂರ್ವಕಾಲವೃತ್ತಾಂತ 16:33; ಯೆಶಾಯ 55:12; ಯೆಹೆಜ್ಕೇಲ 34:27; 36:30) ದೇವರ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು ಎಂದು ಶಾಸ್ತ್ರವಚನಗಳು ಸಹ ವಾಗ್ದಾನಿಸುತ್ತವೆ. (ಯೆಶಾಯ 65:22) ಕೆಲವು ಮರಗಳು ಅನೇಕ ಶತಮಾನಗಳ ವರೆಗೆ ಜೀವಿಸುತ್ತವೆ ಎಂಬುದನ್ನು ನಾವು ಗ್ರಹಿಸುವಾಗ ಇದು ಹೆಚ್ಚಿನ ಅರ್ಥವನ್ನು ಹೊಂದುತ್ತದೆ.

ದೇವರ ಧರ್ಮಶಾಸ್ತ್ರದಲ್ಲಿ ಆನಂದಿಸುವ ಒಬ್ಬ ಮನುಷ್ಯನು, “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು,” ಎಂದು ಬೈಬಲಿನ ಒಬ್ಬ ಕೀರ್ತನೆಗಾರನು ಹೇಳಿದ್ದನು. ಸಮೃದ್ಧವಾದ ನೀರಿನ ಮೂಲದಿಂದ ಬೆಳೆಸಲ್ಪಟ್ಟು ಸೊಂಪಾಗಿ ಬೆಳೆದ ಒಂದು ವೃಕ್ಷವು, ಕೀರ್ತನೆಗಾರನಿಗೆ “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವ” ಒಬ್ಬನಿಂದ ಆನಂದಿಸಲ್ಪಡುವ ಆತ್ಮಿಕ ಸಮೃದ್ಧಿಯನ್ನು ಕುರಿತು ಜ್ಞಾಪಿಸಿತು. (ಕೀರ್ತನೆ 1:1-3) ದೇವರ ನಿಯಮದಲ್ಲಿ ಮತ್ತು ಪವಿತ್ರ ವಾಕ್ಯದಲ್ಲಿ ಯಥಾರ್ಥವಾದ ಆನಂದವನ್ನು ನೀವು ಪಡೆದುಕೊಳ್ಳುವುದಾದರೆ, ನಿಮ್ಮ ಆಯುಸ್ಸು ವೃಕ್ಷದ ಆಯುಸ್ಸಿನಂತೆ ದೀರ್ಘವಾಗಬಲ್ಲದು. ವಾಸ್ತವದಲ್ಲಿ, ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಕುರಿತಾದ ನಿಷ್ಕೃಷ್ಟವಾದ ಜ್ಞಾನದೊಂದಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಮೂಲಕ, ನಿತ್ಯವಾಗಿ ಜೀವಿಸುವ ನಿರೀಕ್ಷೆಯಲ್ಲಿ ನೀವು ಆನಂದಿಸಬಲ್ಲಿರಿ.—ಯೋಹಾನ 17:3.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ