ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 11/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • “ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಯಾಜಕನಾಗಿದ್ದೀ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ದೇವರ ಒಡಂಬಡಿಕೆಗಳಿಂದ ನೀವು ಪ್ರಯೋಜನ ಪಡೆಯುವಿರೋ?
    ಕಾವಲಿನಬುರುಜು—1990
ಕಾವಲಿನಬುರುಜು—1993
w93 11/15 ಪು. 31

ವಾಚಕರಿಂದ ಪ್ರಶ್ನೆಗಳು

ಮೆಲ್ಕಿಜೆದೇಕ ಎಂಬ ಹೆಸರುಳ್ಳ ಪ್ರಾಚೀನ ಯಾಜಕನು ನೈಜ ಮಾನವನಾಗಿದ್ದರಿಂದ, ಅವನಿಗೆ “ವಂಶಾವಳಿಯೂ ಇಲ್ಲ” ಎಂದು ಬೈಬಲ್‌ ಯಾಕೆ ಹೇಳುತ್ತದೆ?

ಈ ಹೇಳಿಕೆಯನ್ನು ಇಬ್ರಿಯ 7:3 ರಲ್ಲಿ ಮಾಡಲಾಗಿದೆ. ವಚನವನ್ನು ಅದರ ಪೂರ್ವಾಪರ ಸಂದರ್ಭದಲ್ಲಿ ಗಮನಿಸಿರಿ:

“ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಪರಾತ್ಪರನಾದ ದೇವರ ಯಾಜಕನೂ ಆಗಿದ್ದನು; ರಾಜರನ್ನು ಹೊಡೆದು ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು; ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿನ ಅರ್ಥವು ನೀತಿರಾಜ ಎಂಬದು; ಇದಲ್ಲದೆ ಅವನು ಸಾಲೇಮಿನರಾಜ ಅಂದರೆ ಸಮಾಧಾನರಾಜ; ಅವನಿಗೆ ತಂದೆಯೂ ತಾಯಿಯೂ ವಂಶಾವಳಿಯೂ ಇಲ್ಲ, ಜನ್ಮದ ಆರಂಭವೂ ಆಯುಷ್ಯದ ಅಂತ್ಯವೂ ಇಲ್ಲ. ಅವನು ದೇವರ ಮಗನಿಗೆ ಸಮಾನಮಾಡಲ್ಪಟ್ಟಿದ್ದಾನೆ. ಅವನು ನಿರಂತರವಾಗಿ ಯಾಜಕನಾಗಿರುವವನು.”—ಇಬ್ರಿಯ 7:1-3.

ತಿಳಿಸಲಾದಂತೆ, ಮೆಲ್ಕಿಜೆದೇಕನು ತನಗೆ ಯಾರೊಂದಿಗೆ ನೇರವಾದ ವ್ಯವಹಾರವಿತ್ತೊ ಆ ಅಬ್ರಹಾಮನಷ್ಟೇ ನೈಜ ಮಾನವನಾಗಿದ್ದನು. (ಆದಿಕಾಂಡ 14:17-20; ಇಬ್ರಿಯ 7:4-10) ವಿಷಯವು ಹಾಗಿರುವಲ್ಲಿ, ಮೆಲ್ಕಿಜೆದೇಕನಿಗೆ ಹೆತ್ತವರು—ಒಬ್ಬ ತಂದೆ ಮತ್ತು ಒಬ್ಬಾಕೆ ತಾಯಿ ಇದ್ದಿರಬೇಕು, ಮತ್ತು ಅವನಿಗೆ ಸಂತಾನವೂ ಇದ್ದಿರಬಹುದು. ಆದಕಾರಣ, ಒಬ್ಬ ಮಾನವನಂತೆ ಅವನಿಗೆ ಒಂದು ವಂಶಾವಳಿ, ಯಾ ವಂಶಾವಳಿಯ ಚಿತ್ರವು ಇತ್ತು. ಶಾರೀರಿಕ ಜೀವನದ ಅಂತ್ಯವೂ ಕೂಡ ಅವನಿಗಿತ್ತು. ರೋಮಾಪುರ 5:12, 14 ರಲ್ಲಿ ಅಪೊಸ್ತಲ ಪೌಲನ ಹೇಳಿಕೆಗೆ ಹೊಂದಾಣಿಕೆಯಲ್ಲಿ, ಯಾವುದೊ ಒಂದು ಸಮಯದಲ್ಲಿ ಮೆಲ್ಕಿಜೆದೇಕನು ಸತ್ತನು. ಮೆಲ್ಕಿಜೆದೇಕನು ಸತ್ತು ಹೀಗೆ ಒಬ್ಬ ಯಾಜಕನಂತೆ ಸೇವೆ ಸಲ್ಲಿಸುವುದನ್ನು ನಿಲ್ಲಿಸಿದ್ದು ಯಾವಾಗ ಎಂದು ನಮಗೆ ಗೊತ್ತಿರದೆ ಇರುವುದರಿಂದ, ಆ ಸಂಬಂಧದಲ್ಲಿ, ಯಾವುದೇ ಜ್ಞಾತ ಅಂತ್ಯವಿಲ್ಲದೇ, ಅವನು ಸೇವೆ ಸಲ್ಲಿಸಿದನು.

ಇಬ್ರಿಯ ಪುಸ್ತಕದಲ್ಲಿ, ಶ್ರೇಷ್ಠ ಮಹಾ ಯಾಜಕನಂತೆ ಯೇಸು ಕ್ರಿಸ್ತನ ಪಾತ್ರವನ್ನು ಚರ್ಚಿಸುವಾಗ, ಪೌಲನು ಮೆಲ್ಕಿಜೆದೇಕನ ಕುರಿತು ಹೇಳಿಕೆಗಳನ್ನು ಮಾಡಿದನು. ಯೇಸುವಿನ ಈ ಯಾಜಕ ಪಾತ್ರದಲ್ಲಿ, ಮೆಲ್ಕಿಜೆದೇಕನನ್ನು ಒಂದು ರೀತಿ, ಯಾ ನಮೂನೆಯಂತೆ ಸೂಚಿಸುತ್ತಾ, ಪೌಲನು ಅಂದದ್ದು: “ಯೇಸು . . . ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿದ್ದಾನೆ.” (ಇಬ್ರಿಯ 6:20) ಯಾವ ಅರ್ಥದಲ್ಲಿ?

ಬೈಬಲ್‌ ದಾಖಲೆಯು ಮೆಲ್ಕಿಜೆದೇಕನ ವಂಶಾವಳಿಯ—ಅವನ ಪೂರ್ವಜರ ಯಾ ಸಂಭಾವ್ಯ ಸಂತತಿಯವರ ಕುರಿತು ವಿವರಗಳನ್ನು ಕೊಡುವುದಿಲ್ಲ ಎಂದು ಪೌಲನು ಗ್ರಹಿಸಿರಬೇಕು. ಆ ಮಾಹಿತಿಯು ಕೇವಲ ಬೈಬಲ್‌ ದಾಖಲೆಯ ವಿಷಯವಾಗಿಲ್ಲ. ಆದುದರಿಂದ ಪೌಲನಿಗೆ ಯಾ ನಮಗೆ ಏನು ಗೊತ್ತಿದೆ ಎಂಬ ನೋಟದಿಂದ, ಮೆಲ್ಕಿಜೆದೇಕನು “ವಂಶಾವಳಿಯು ಇಲ್ಲದೆ” (ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಷನ್‌ ಆಫ್‌ ದ ಹೋಲಿ ಸ್ಕ್ರಿಪ್‌ಚರ್ಸ್‌; ಅಮೆರಿಕನ್‌ ಸ್ಟಾಂಡರ್ಡ್‌ ವರ್ಷನ್‌), “ಅನುವಂಶಿಕ ಪಟ್ಟಿಯಿಲ್ಲದೆ” (ಡಬ್ಲ್ಯೂ. ಜೆ. ಕಾನಿಬೇರ್‌), ಯಾ “ವಂಶ ವೃಕ್ಷವಿಲ್ಲದೆ” (ಜೆ. ಬಿ. ಫಿಲಿಪ್ಸ್‌) ಇರುವವನು ಎಂಬುದಾಗಿ ಸರಿಯಾಗಿಯೇ ಹೇಳಸಾಧ್ಯವಿದೆ.

ಯಾವ ರೀತಿಯಲ್ಲಿ ಯೇಸು ಹಾಗಿದ್ದನು? ಯೇಸುವಿನ ತಂದೆ ಯೆಹೋವ ದೇವರು ಮತ್ತು ಅವನ ಮಾನವ ತಾಯಿ, ಯೂದಾಯ ಕುಲದ ಮರಿಯಳಾಗಿದ್ದಳು ಎಂದು ನಮಗೆ ಗೊತ್ತಿದೆ. ಆದರೂ, ಮೆಲ್ಕಿಜೆದೇಕ ಮತ್ತು ಯೇಸುವಿನ ನಡುವೆ ಹೋಲಿಕೆಯೊಂದಿತ್ತು. ಅದು ಹೇಗೆ? ಇಸ್ರಾಯೇಲ್‌ ಜನಾಂಗದಲ್ಲಿ ಯಾಜಕರಿಗಾಗಿ ಇದ್ದ ಕುಲ, ಲೇವಿ ಕುಲದಲ್ಲಿ ಯೇಸು ಹುಟ್ಟಿರಲಿಲ್ಲ. ಇಲ್ಲ, ಯೇಸು ಮಾನವ ವಂಶಾವಳಿಯ ಮುಖಾಂತರ ಯಾಜಕನಾಗಿರಲಿಲ್ಲ. “ಶರೀರಧರ್ಮವಿಷಯವಾದ ನಿಯಮದ ಪ್ರಕಾರವಾಗಿರದೆ,” ಅಂದರೆ ಒಂದು ಯಾಜಕ ಕುಲ ಯಾ ಕುಟುಂಬದಲ್ಲಿ ಹುಟ್ಟದೆ ಇರುವ ಮೂಲಕ ಯಾಜಕನಾದ ಮೆಲ್ಕಿಜೆದೇಕನೂ ಕೂಡ ಮಾನವ ವಂಶಾವಳಿಯ ಮೂಲಕ ಯಾಜಕನಾಗಿರಲಿಲ್ಲ. (ಇಬ್ರಿಯ 7:15, 16) ತಾನೊಬ್ಬ ಯಾಜಕನಾಗಿದ್ದ ಮಾನವ ತಂದೆಯ ಮುಖಾಂತರ ಒಬ್ಬ ಯಾಜಕನಾಗುವ ಬದಲು, ಯೇಸು “ದೇವರಿಂದ ಮೆಲ್ಕಿಜೆದೇಕನ ತರಹದ ಮಹಾಯಾಜಕನೆನಿಸಿಕೊಂಡನು.”—ಇಬ್ರಿಯ 5:10.

ಇನ್ನೂ ಹೆಚ್ಚಾಗಿ, ಯೇಸುವಿಗೆ ಅವನ ಯಾಜಕತ್ವಕ್ಕೆ ಯಾವುದೇ ಸಂತತಿಯವರು ಯಾ ಉತ್ತರಾಧಿಕಾರಿಗಳು ಇರಲಿಲ್ಲ. ಈ ಅರ್ಥದಲ್ಲಿಯೂ ಕೂಡ, ಅವನಿಗೆ ವಂಶಾವಳಿ ಇರಲಿಲ್ಲ. ಸಹಾಯಕಾರಿ ಬೋಧಕನಂತೆ ಅವನು ತನ್ನ ಯಾಜಕ ಸೇವೆಯನ್ನು ನಿರಂತರವಾಗಿ ವಹಿಸಿಕೊಂಡು ಹೋಗುವನು. ಈ ನಿರಂತರವಾದ ಸೇವೆಯ ಕುರಿತು ಪೌಲನು ಹೀಗೆ ಹೇಳಿಕೆಯನ್ನು ಕೊಟ್ಟನು:

“[ಯೇಸುವಾದರೋ] ಸದಾಕಾಲವಿರುವದರಿಂದ ಆತನ ಯಾಜಕತ್ವವು ಮತ್ತೊಬ್ಬರಿಗೆ ಹೋಗುವಂಥದಲ್ಲ. ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.”—ಇಬ್ರಿಯ 7:24, 25.

ಆದುದರಿಂದ, ಇಬ್ರಿಯ 7:3 ರಲ್ಲಿರುವ ಪೌಲನ ಮಾತುಗಳ ನಮ್ಮ ಪರಿಗಣನೆಯು, ನಮ್ಮ ತಲೆಯಲ್ಲಿ ಶೇಖರಿಸಲಾಗುವ ಕೇವಲ ಜ್ಞಾನದ ಅಂಶಕ್ಕಿಂತಲೂ ಹೆಚ್ಚಿನದ್ದಾಗಿರಬೇಕು. ನಿರಂತರವಾಗಿ ಪಾಪದ ಕ್ಷಮೆಯನ್ನು ಪಡೆಯಲು ನಮಗಾಗಿ ಯೆಹೋವ ದೇವರು ಮಾಡಿರುವ ಪ್ರೀತಿಪರ ಒದಗಿಸುವಿಕೆಗಾಗಿ ಮತ್ತು ಸಹಾಯವನ್ನು ಮತ್ತು ಶಾಶ್ವತವಾದ ಮಾರ್ಗದರ್ಶವನ್ನು ನಾವು ಪಡೆಯುವುದಕ್ಕಾಗಿ ಆತನು ಏರ್ಪಡಿಸಿದ ಮಾರ್ಗಕ್ಕಾಗಿ ನಮ್ಮ ಗಣ್ಯತೆಯನ್ನು ಅದು ಬಲಪಡಿಸಬೇಕು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ