ಬರವು ಮುಂತಿಳಿಸಲ್ಪಟ್ಟಿದೆ
ಇತ್ತೀಚಿಗಿನ ವರುಷಗಳಲ್ಲಿ ಬರದ ಘೋರತೆಯು ಜಾಗತಿಕ ವಾರ್ತಾ ವರದಿಗಳಲ್ಲಿ ವೇದನೀಯವಾಗಿ ಚಿರಪರಿಚಿತವಾಗಿದೆ. ಇಥಿಯೋಪ್ಯ ಮತ್ತು ಇತರ ಕಡೆಗಳಿಂದ ಕಷ್ಟಾನುಭವದ ಅವಿಸ್ಮರಣೀಯ ಸ್ವರೂಪಗಳು ಬಂದಿರುತ್ತವೆ. ಇಸವಿ 1992 ರಲ್ಲಿ ಲೋಕದ ಗಮನವು, ಅನಾವೃಷ್ಟಿ ಮತ್ತು ಯುದ್ಧದಿಂದಾದ, ಸೊಮಾಲಿಯದ ಬರಗಾಲದ ಶೋಚನೀಯ ಬಲಿಪಶುಗಳೆಡೆಗೆ ಸೆಳೆಯಲ್ಪಟ್ಟಿತ್ತು. ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್ ಸಪ್ಟಂಬರ 1992 ರಲ್ಲಿ ವರದಿಸಿದ್ದು: “ಸೊಮಾಲಿಯ ದೇಶದ ಎಷ್ಟು ಜನರು ಸತ್ತರೆಂದು ಯಾರಿಗೂ ಗೊತ್ತಿಲ್ಲ, ಆದರೆ ರೆಡ್ ಕ್ರಾಸ್, ಆ ಸಂಖ್ಯೆಯು 1,00,000 ಕ್ಕಿಂತಲೂ ಹೆಚ್ಚೆಂದು ಹೇಳುತ್ತದೆ. ಸಾವಿರಾರು ಅಲ್ಲದಿದ್ದರೆ, ನೂರಾರು ಜನರು ಪ್ರತಿ ದಿನ ಸಾಯುತ್ತಿದ್ದಾರೆ.”
ಒಳಗೊಂಡಿರುವ ವ್ಯಕ್ತಿಗಳ ದುಃಖ ಮತ್ತು ಬೇನೆಯನ್ನು ಅಂಕಿಗಳು ನಿಜವಾಗಿಯೂ ತಿಳಿಸುವುದಿಲ್ಲ. ರೆಫ್ಯುಜೀಸ್ ಇಂಟರ್‌ನ್ಯಾಷನಲ್‌ನ ಯೂರೋಪಿಯನ್ ಪ್ರತಿನಿಧಿ ಯುವೆಟ್ ಪಯರ್‌ಪೊಲಿ, ಯುಎನ್ ಪತ್ರಿಕೆ ರೆಫ್ಯುಜೀಸ್ ನಲ್ಲಿ ಬರೆದದ್ದು: “ನ್ಯೂ ಯಾರ್ಕ್ ಯಾ ಜಿನೇವದಲ್ಲಿ, ನಿರಾಶ್ರಿತರ ಪ್ರಶ್ನೆಯು ತೀರ ಮುಚ್ಚುಮರೆಯಿಲ್ಲದೆ ಗೋಚರವಾಗುತ್ತಿದೆ; ನಮೂದಿತ ಅಂಕಿಗಳಿಗೆ ಎಷ್ಟೊಂದು ಸೊನ್ನೆಗಳು ಸೇರಿಸಲ್ಪಡುತ್ತವೆಯೆಂದರೆ ಅವನ್ನು ಗ್ರಹಿಸಲು ಕಷ್ಟವಾಗುತ್ತದೆ. ಆದರೆ ಸಾವಿರಾರು ಕಿಲೊಮೀಟರ್ ದೂರದಲ್ಲಿ, ಬಹುಮಟ್ಟಿಗೆ ಅರಾಜಕತೆಯೇ ಇರುವ ದೇಶಗಳ ಸರಹದ್ದುಗಳಲ್ಲಿ ಬಲವಾದ ಬಾವಾವೇಶದಿಂದ ನಿಮ್ಮ ಗಂಟಲು ಸಂಕುಚಿತವಾದಂತಾಗುತ್ತದೆ ಮತ್ತು ಕಷ್ಟಾನುಭವದ ಪ್ರಮಾಣವು ನಿಮ್ಮನ್ನು ಚೀರಲು ಬಯಸುವಂತೆ ಮಾಡುತ್ತದೆ.”
ಸೊಮಾಲಿಯಕ್ಕೆ ಸಹಾಯಮಾಡುವ ತಮ್ಮ ಪ್ರಯತ್ನಗಳು, ಮಾಡಿರುವ ಮಾನವ ಹಿತಸಾಧನೆಯ ಕಾರ್ಯಗತಿಯಲ್ಲಿ ಅತ್ಯಂತ ದೊಡ್ಡದನ್ನು ಪ್ರತಿನಿಧಿಸುತ್ತದೆಂದು ರೆಡ್ ಕ್ರಾಸ್ ಹೇಳುತ್ತದಾದರೂ, ಅದು ಬಹು ತಡವಾಗಿ ಬಂದ ತೀರ ಕೊಂಚ ಸಹಾಯವೆಂದು ಅನೇಕ ಪ್ರೇಕ್ಷಕರು ದೂರಿಡುತ್ತಾರೆ. ಪಯರ್‌ಪೊಲಿ ಪ್ರಲಾಪಿಸಿದ್ದು: “ದಾನಕೊಟ್ಟಿರುವ ದೇಶಗಳಿಗೆ ಅದನ್ನು ಮುಂದುವರಿಸಲು ಮನಸ್ಸಿಲ್ಲ. . . . ಛಿದ್ರಗೊಳ್ಳುತ್ತಿರುವ ಆಫ್ರಿಕವನ್ನು ಬೆಂಬಲಿಸುತ್ತಾ ಅವು ಬೇಸತ್ತುಹೋಗಿವೆ. . . . ಅವರು ಆಫ್ರಿಕನರನ್ನು ಅವರ ಅಸಮರ್ಪಕ ನಿರ್ವಹಣೆಗಾಗಿ, ಅವರ ಮುಖಂಡರ ಲೋಭಕ್ಕಾಗಿ, ಕೊನೆಯಿಲ್ಲದಂತೆ ಕಾಣುವ ಹೋರಾಟಗಳಿಗಾಗಿ ದೂರುತ್ತಾರೆ.”
“ಅಲ್ಲಲ್ಲಿ” ಬರಗಳು ಬರುವ ಒಂದು ಸಮಯದ ಕುರಿತು ಬೈಬಲ್ ಮುಂತಿಳಿಸಿತ್ತು. ಈ ಬರಗಳು, ಬೇರೆ ಅನೇಕ ವಿಕಸನಗಳಾದ ಯುದ್ಧಗಳು, ಭೂಕಂಪಗಳು, ಅಂಟುಜಾಡ್ಯಗಳೇ ಮುಂತಾದವುಗಳ ಸಮೇತ, ದೇವರ ರಾಜ್ಯವು ಹತ್ತಿರವಿದೆ ಎಂಬದನ್ನು ಸೂಚಿಸುತ್ತದೆ. (ಲೂಕ 21:11, 31) ಬೈಬಲು ಮತ್ತೂ ತೋರಿಸುವದೇನಂದರೆ ಈ ಧರ್ಮಶೀಲ ದೇವರ ರಾಜ್ಯದ ಕೆಳಗೆ ಮಾನವ ಕುಲದವರೆಲ್ಲರಿಗಾಗಿ ಹೇರಳವಾದ ಆಹಾರವಿರುವದು: “ಭೂಮಿಯಲ್ಲೆಲ್ಲಾ ಧಾನ್ಯವು ಸಮೃದ್ಧಿಯಾಗಿರುವುದು” ಎಂದು ಬರೆದನು ಕೀರ್ತನೆಗಾರನು. “ಬೆಟ್ಟಗಳ ಮೇಲೆಲ್ಲಾ ಬೆಳೆಯು ತುಂಬಿತುಳುಕುವುದು.”—ಕೀರ್ತನೆ 72:16, NW.