ನಿಜ ಸುರಕ್ಷೆಯು ಶಕ್ಯವಾಗಿದೆಯೇ?
ಲಘು ಲೇಖನಗಾರ ರಾಲ್ಪ್ ವಾಲ್ಡೊ ಎಮರ್ಸನ್ ಒಮ್ಮೆ ಘೋಷಿಸಿದ್ದು: “ಅಲ್ಪಮತಿಗಳಾದ ಮನುಷ್ಯರು ಅದೃಷ್ಟದಲ್ಲಿ ನಂಬಿಕೆ ಇಡುತ್ತಾರೆ . . . ನೈತಿಕ ಮತ್ತು ಮಾನಸಿಕವಾಗಿ ಪ್ರಬಲ ಮನುಷ್ಯರಾದರೋ ಕಾರಣ ಕಾರ್ಯಭಾವವನ್ನು ನಂಬುತ್ತಾರೆ.” ಹೌದು, ಮಾಂತ್ರಿಕ ತಾಯಿತಿಗಳ ಮತ್ತು ಭಾಗ್ಯೋದಯ ರಕ್ಷೆಗಳ ಶಕ್ತಿಯಲ್ಲಿ ನಂಬಿಕೆಯಿಡುವ ಒಬ್ಬ ವ್ಯಕ್ತಿಯು ತನ್ನ ಜೀವಿತದ ಹತೋಟಿಯನ್ನು ಅದೃಶ್ಯ ಶಕಿಗ್ತಳಿಗೆ ವಶ ಮಾಡುತ್ತಾನೆ. ಅವನು ತರ್ಕಬದ್ಧತೆ ಮತ್ತು ವಿವೇಚನೆಯನ್ನು ಗಾಳಿಗೆ ತೂರಿ ಅಸಂಬದ್ಧವಾದ, ಮೂಢಾಚರಣೆಯ ಅಂಜಿಕೆಗಳಿಗೆ ಅಧೀನನಾಗುತ್ತಾನೆ.
ಬೈಬಲಾದರೋ ಒಬ್ಬನನ್ನು ಅಂತಹ ಭಯಗಳಿಂದ ಮುಕ್ತಗೊಳಿಸಬಲ್ಲದು. ತಾಯಿತಿಗಳು ಮತ್ತು ರಕ್ಷೆಗಳು ನಿಷ್ಫಲವೂ, ಶಕಿಹ್ತೀನವೂ ಆಗಿವೆಯೆಂದು ಅದು ತೋರಿಸುತ್ತದೆ. ಅದು ಹೇಗೆ? ಒಳ್ಳೇದು, ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಕ್ಕೆ ಅನುಸಾರವಾಗಿ, “ತಾಯಿತಿಗಳು ತಮ್ಮ ಶಕ್ತಿಯನ್ನು [ಬೇರೆ ವಿಷಯಗಳಲ್ಲದೆ] ನೈಸರ್ಗಿಕ ಶಕಿಗ್ತಳೊಂದಿಗಿನ ತಮ್ಮ ಸಂಬಂಧದಿಂದ ಪಡೆಯುತ್ತವೆಂದು ನೆನಸಲಾಗುತ್ತದೆ.” ಈ ಶಕ್ತಿಗಳು ‘ಮೃತರ ಆತ್ಮಗಳು’ ಅಥವಾ ‘ಅದೃಷ್ಟದ ಶಕ್ತಿ’ ಆಗಿರಬಹುದು. ಆದರೆ “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲು ಸ್ಪಷ್ಟವಾಗಿಗಿ ಹೇಳುತ್ತದೆ. (ಪ್ರಸಂಗಿ 9:5) ಹೀಗೆ, ಜೀವಿತರಿಗೆ ನೆರವಾಗಬಲ್ಲ ಯಾ ಹಾನಿಮಾಡಬಲ್ಲ ಸತ್ತವರ ಯಾವ ಆತ್ಮಗಳೂ ಇಲ್ಲ; ನಿಮ್ಮ ಪರವಾಗಿ ಕಾರ್ಯನಡಿಸಬಲ್ಲ ಅದೃಷ್ಟದಂತಹ ಯಾವ ಅದೃಶ್ಯ ಶಕ್ತಿಯು ಕೂಡ ಇಲ್ಲ.
ಬೈಬಲಿನ ಕಾಲದಲ್ಲಿ ದೇವರು, ತನ್ನನ್ನು ತೊರೆದವರನ್ನು, ತನ್ನ ಪವಿತ್ರ ಪರ್ವತವನ್ನು ಮರೆತುಬಿಟ್ಟವರನ್ನು, “ಶುಭದಾಯಕ ದೇವತೆಗೆ ಔತಣವನ್ನು ಅಣಿಮಾಡಿ ಗತಿದಾಯಕ ದೇವತೆಗೆ ಮದ್ಯವನ್ನು ತುಂಬಾ ಬೆರಸಿದ” ವರನ್ನು, ಖಂಡಿಸಿದ್ದನು. ಸುರಕ್ಷೆಯನ್ನು ಪಡೆಯುವ ಬದಲಾಗಿ, ಆ ಅದೃಷ್ಟದ ಪ್ರತಿಪಾದಕರು ನಾಶನಕ್ಕೆ ಗುರಿಮಾಡಲ್ಪಟ್ಟರು. “ನಿಮಗೆ ಕತ್ತಿಯನ್ನೇ ಗತಿಮಾಡುವೆನು” ಎಂದನು ಯೆಹೋವ ದೇವರು.—ಯೆಶಾಯ 65:11, 12.
ಮಂತ್ರ ವಿದ್ಯೆಗಳನ್ನು ಅಭ್ಯಾಸಿಸುವ ಮೂಲಕ, ಪುರಾತನ ಬಬಿಲೊನ್ ಜನಾಂಗವು ತದ್ರೀತಿಯಲ್ಲಿ ನಿಗೂಢ ಶಕ್ತಿಗಳ ಸುರಕ್ಷೆಯಲ್ಲಿ ತನ್ನ ನಂಬಿಕೆಯನ್ನಿಟ್ಟಿತು. ಆದರೆ ಬಬಿಲೊನ್ ವಿಪತ್ತನ್ನು ಅನುಭವಿಸಿತು. “ನಿನ್ನ ಮಂತ್ರ ತಂತ್ರಗಳನ್ನೂ ವಿಕಾರವಾದ ನಿನ್ನ ಮಾಟಗಳನ್ನೂ ಪ್ರಯೋಗಿಸು,” ಎಂದು ಆಹ್ವಾನಿಸಿದನು ಪ್ರವಾದಿ ಯೆಶಾಯನು. “ಅವುಗಳಿಂದ ಒಂದು ವೇಳೆ ನಿನಗೆ ಸಹಾಯ ಸಿಕ್ಕೀತು. . . . ಆದರೆ ಇಲ್ಲ! ನಿನ್ನ ಅನೇಕ ತಂತ್ರಗಳ ಮಧ್ಯೆಯೂ ನೀನು ಶಕಿಹ್ತೀನೆ.” (ಯೆಶಾಯ 47:12, 13, ದ ನ್ಯೂ ಇಂಗ್ಲಿಷ್ ಬೈಬಲ್) ತಕ್ಕ ಸಮಯದಲ್ಲಿ ಆ ಜನಾಂಗವು ಸಂಪೂರ್ಣವಾಗಿ ಅಸ್ತಿತ್ವರಹಿತವಾಯಿತು. ಮಂತ್ರವಿದ್ಯೆಯಲ್ಲಿ ನಂಬಿಕೆಯು ನಿಷ್ಫಲವಾಯಿತು. ತದ್ರೀತಿಯಲ್ಲಿ. ಯಾವ ಮಾಂತ್ರಿಕ ತಾಯಿತಿವಾಗಲಿ, ರಕ್ಷೆಯಾಗಲಿ, ಯಾ ರಕ್ಷಾಬಂಧವಾಗಲಿ ನಿಮ್ಮ ಸಹಾಯಕ್ಕಾಗಿ ಯಾ ಸುರಕ್ಷೆಗಾಗಿ ಏನನ್ನೂ ಮಾಡಲಾರವು.
ಮೂರ್ತಿಪೂಜೆಯ ಒಂದು ವಿಧ
ಅದರೂ ಒಂದು ಹರಳನ್ನು, ಕುಂದಿಲಿಯ ಕಾಲನ್ನು, ಅಥವಾ ಒಂದು ಧಾರ್ಮಿಕ ಪದಕವನ್ನು ಒಯ್ಯುವುದರಲ್ಲಿ ಕೆಲವರು ಯಾವ ಹಾನಿಯನ್ನೂ ಕಾಣಲಿಕ್ಕಿಲ್ಲ. ಇವುಗಳು ಕೇವಲ ಅಲ್ಪ ಬೆಲೆಯ ನಿರಪಾಯ ಒಡವೆಗಳಂತಿವೆಯಲ್ಲವೇ? ಬೈಬಲಿಗನುಸಾರವಾಗಿ ಅಲ್ಲ. ಮಂತ್ರ ವಿದ್ಯೆಯ ಸಾಧನ ಸಾಮಗ್ರಿಗಳು ಖಂಡಿತವಾಗಿಯೂ ನಿರಪಾಯಕರವಲ್ಲ.
ತಾಯಿತಿಗಳ ಉಪಯೋಗವು ಮೂರ್ತಿಪೂಜೆಯ ಒಂದು ವಿಧಾನವಾಗಿದ್ದು—ದೇವರ ವಾಕ್ಯದಿಂದ ಸ್ಪಷ್ಟವಾಗಿಗಿ ಖಂಡಿಸಲ್ಪಟ್ಟಿದೆ. (ವಿಮೋಚನಕಾಂಡ 20:4, 5) ಒಬ್ಬ ವ್ಯಕ್ತಿಯು ತಾನು ಒಂದು ತಾಯಿತಿಯನ್ನು ಅಥವಾ ರಕ್ಷಾಬಂಧವನ್ನು ನೇರವಾಗಿ ಆರಾಧಿಸುತ್ತೇನೆಂದು ಭಾವಿಸಲಿಕ್ಕಿಲ್ಲ ನಿಜ. ಆದರೆ ಒಬ್ಬನು ಒಂದನ್ನು ಕೇವಲ ಹೊಂದಿರುವುದಾದರೂ ಕೂಡ, ಅದೃಶ್ಯ ಮಂತ್ರ ಶಕಿಗ್ತಳೆಡೆಗೆ ಪೂಜ್ಯಭಾವನೆ, ಭಕ್ತಿಯುಕ್ತ ಮನೋಭಾವವನ್ನು ಅದು ಪ್ರದರ್ಶಿಸುವುದಿಲ್ಲವೇ? ಮತ್ತು (ಮುತ್ತಿಡುವಂತಹ) ಭಕ್ತಿಯುಕ್ತ ಗಮನವು ರಕ್ಷೆಗಳಿಗೆ ತಾನೇ ಕೆಲವೊಮ್ಮೆ ಕೊಡಲ್ಪಡುವುದು ಸತ್ಯವಲ್ಲವೇ? ಆದರೂ 1 ಯೋಹಾನ 5:21 ರಲ್ಲಿ ಬೈಬಲು ಕ್ರೈಸ್ತರಿಗೆ ಬುದ್ಧಿಹೇಳಿದ್ದು: “ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.” ರಕ್ಷೆಗಳಾಗಿ ಅಥವಾ ತಾಯಿತಿಗಳಾಗಿ ವೀಕ್ಷಿಸಲ್ಪಡುವ ವಸ್ತುಗಳೂ ಇದರಲ್ಲಿ ಸೇರಿರವೇ?
ಮಂತ್ರವಿದ್ಯೆಯ ಪಾಶ
ತಾಯಿತಿಗಳ ಉಪಯೋಗದ ಮೂಲಕ ಅನೇಕರು ಮಂತ್ರ ವಿದ್ಯೆಯ ಉರ್ಲಿಗೆ ಬಿದ್ದಿರುತ್ತಾರೆ. ಕೆಲವರು ಒಂದು ಹರಳನ್ನು ಅಥವಾ ಒಂದು ಮಾಂತ್ರಿಕ ಗುಟುಕನ್ನು ಮನವೊಪ್ಪಿಗೆಗಿಂತ ಹೆಚ್ಚು ವಾಡಿಕೆಯಾಗಿ ಒಯ್ಯಬಹುದಾಗಿದೆ ನಿಜ. ಆದರೆ ವೇಶ್ಯೆಯೊಬ್ಬಳೊಂದಿಗೆ ಪ್ರಣಯ ಚೇಷ್ಟೇಯು ಏಯ್ಡ್ಸ್ನ ಸಂಪರ್ಕಕ್ಕೆ ನಡಿಸಬಹುದಾಗಿರುವಂತೆಯೇ ಮಾಂತ್ರಿಕ ವಿದ್ಯೆಯೊಂದಿಗೆ ಚೇಷ್ಟೇಯು ಸಹ ವಿಪತ್ಕಾರಕ ಫಲಿತಾಂಶಗಳನ್ನು ತರಬಹುದು. ಮಂತ್ರತಂತ್ರಗಳನ್ನು ಮಾಡುವುದು, ಶಕುನ ನೋಡುವದು, ಕಣಿಹೇಳುವುದೇ ಮುಂತಾದ ಪದ್ಧತಿಗಳನ್ನು ನಡಿಸುವುದರಿಂದ ಯೆಹೋವನು ಇಸ್ರಾಯೇಲ್ಯರನ್ನು ನಿಷೇಧಿಸಿದ್ದು ಸಕಾರಣಕ್ಕಾಗಿಯೇ. “ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ,” ಎಂದು ಎಚ್ಚರಿಸುತ್ತದೆ ಬೈಬಲು.—ಧರ್ಮೋಪದೇಶಕಾಂಡ 18:10-14.
ಈ ಕಟ್ಟುನಿಟ್ಟಿನ ನಿಷೇಧವೇಕೆ? ಯಾಕಂದರೆ ಅಂಥ ಪದ್ಧತಿಗಳ ಹಿಂದಿರುವ ಅದೃಶ್ಯ ಶಕ್ತಿಗಳು ಮೃತರ ಆತ್ಮಗಳೂ ಅಲ್ಲ ಅಥವಾ ಅದೃಷ್ಟದ ಶಕ್ತಿಯೂ ಇಲ್ಲ, ಬದಲಾಗಿ, ಪಿಶಾಚನಾದ ಸೈತಾನನೂ, ಅವನ ದುರಾತ್ಮಗಳೂ ಆಗಿವೆ.a ಮತ್ತು ತಾಯಿತಿಗಳ ಉಪಯೋಗವು ನೇರವಾಗಿ ಪ್ರೇತಾರಾಧನೆಯೊಂದಿಗೆ ಜೋಡಿಸಲ್ಪಟ್ಟಿದೆ. ವೈನ್ಸ್ ಎಕ್ಸ್ಪೊಸಿಟರಿ ಆಫ್ ದ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ಹೇಳುವುದು: “ಮಂತ್ರ ವಿದ್ಯೆಯಲ್ಲಿ, ಸಾಧಾರಣ ಯಾ ತೀವ್ರ ತೆರದ ಮಾದಕ ದ್ರವ್ಯದ ಉಪಯೋಗವು, ವಿವಿಧ ರೀತಿಯ ರಕ್ಷೆಗಳು ಮತ್ತು ತಾಯಿತಿಗಳೇ ಮುಂತಾದ ಒದಗಿಸುವಿಕೆಯೊಂದಿಗೆ, ಐಂದ್ರಜಾಲಿಕ ಶಕಿಗ್ತಳಿಗೆ ಮಂತ್ರಪಠನ ಮತ್ತು ಅಪ್ಪೀಲುಗಳಿಂದ ಸಾಮಾನ್ಯವಾಗಿ ಜತೆಗೂಡಿದ್ದಾಗಿದೆ.”
ಆದುದರಿಂದ ಮಾಂತ್ರಿಕ ರಕ್ಷೆಯನ್ನು ಹೊಂದಿರುವ ಒಬ್ಬನು ಪ್ರೇತಾರಾಧನೆಯಲ್ಲಿ ಆಟವಾಡುತ್ತಾನೆ. “ಈ ವಿಷಯಗಳ ವ್ಯವಸ್ಥೆಯ ದೇವರಾದ”—ಪಿಶಾಚನಾದ ಸೈತಾನನ ಕುಟಿಲ ಪ್ರಭಾವ ಮತ್ತು ಹತೋಟಿಯ ಕೆಳಗೆ ತರಲ್ಪಡುವ ಕೇಡಿಗೆ ಒಳಗಾಗಿದ್ದಾನೆ. (2 ಕೊರಿಂಥ 4:4, NW) ಹೀಗಿರಲಾಗಿ ಸಕಾರಣಕ್ಕಾಗಿಯೇ, ಸಕಲ ವಿಧವಾದ ಪ್ರೇತಾರಾಧನೆಯಿಂದ ದೂರವಿರುವಂತೆ ಬೈಬಲು ನಮಗೆ ಆಜ್ಞಾಪಿಸಿಯದೆ.—ಗಲಾತ್ಯ 5:19-21.
ಮೂಢ ನಂಬಿಕೆಯಿಂದ ಮುಕ್ತರಾಗುವುದು
ಆದರೂ ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಅವಲೋಕಿಸುವುದು: “ಜನರು ಎಷ್ಟರ ತನಕ ಒಬ್ಬರಿಗೊಬ್ಬರು ಭಯಪಡುತ್ತಾರೋ ಮತ್ತು ಭವಿಷ್ಯತ್ತಿನ ಕುರಿತು ಅನಿಶ್ಚಯತೆಗಳಿಂದ ಕೂಡಿರುತ್ತಾರೋ ಆ ತನಕ ಮೂಢ ನಂಬಿಕೆಗಳಿಗೆ ಪ್ರಾಯಶಃ ಜೀವನದಲ್ಲಿ ಒಂದು ಭಾಗವು ಇದ್ದೇ ಇರುವುದು.” ಆದರೆ ಅನೇಕರು ಹಾನಿಕಾರಕ ಮೂಢ ನಂಬಿಕೆಗಳಿಂದ ತಮ್ಮನ್ನು ಮುಕ್ತಗೊಳಿಸುವಂತೆ ಯೆಹೋವನ ಸಾಕ್ಷಿಗಳು ಸಹಾಯ ಮಾಡುತ್ತಿದ್ದಾರೆ. ಒಬ್ಬ ದಕ್ಷಿಣ ಆಫ್ರಿಕದ ಮಹಿಳೆಯು ನೆನಪಿಸಿಕೊಳ್ಳುವುದು: “ನಾನು ದುರಾತ್ಮಗಳಿಂದ ಪೀಡಿಸಲ್ಪಟ್ಟಿದೆನ್ದು, ಮತ್ತು ಅವುಗಳ ವಿರುದ್ಧ ನನ್ನನ್ನು ರಕ್ಷಿಸಲು ನನ್ನ ಮನೆ ತುಂಬಾ ಮ್ಯೂಟಿ ಇತ್ತು.” ಮಂತ್ರ ವಿದ್ಯೆಯೊಂದಿಗೆ ಆಟವಾಡುವ ಅಪಾಯವನ್ನು ಕಾಣುವಂತೆ ಯೆಹೋವನ ಸಾಕ್ಷಿಗಳು ಅವಳಿಗೆ ಸಹಾಯ ಮಾಡಿದರು. ಅವಳ ಪ್ರತಿಕ್ರಿಯೆ? “ಪ್ರೇತಾರಾಧನೆಗೆ ಸಂಬಂಧಿಸಿದ ನನ್ನಲ್ಲಿದ್ದ ಎಲ್ಲವನ್ನು ನಾನು ಬಿಸಾಡಿಬಿಡಲು ತೊಡಗಿದೆ,” ಎಂದಳು ಅವಳು. “ನನ್ನ ಆರೋಗ್ಯವು ಸುಧಾರಿಸಿತು. ನಾನು ನನ್ನ ಜೀವನವನ್ನು ಯೆಹೋವನ ಸೇವೆಗಾಗಿ ಸಮರ್ಪಿಸಿಕೊಂಡು, ದೀಕ್ಷಾಸ್ನಾನವನ್ನು ಪಡೆದೆನು.” ಈಗ ಆಕೆ ಮೂಢ ನಂಬಿಕೆಯಿಂದ ಮತ್ತು ಪ್ರೇತಾರಾಧನೆಯಿಂದ ಮುಕ್ತಳಾಗಿದ್ದಾಳೆ.
ಪ್ರೇತಾರಾಧನೆಯನ್ನು ತನ್ನ ವಾಸಿಕಾರಕ ಕಲೆಯೊಂದಿಗೆ ಮಿಶ್ರಮಾಡಿದ ನೈಜೀರಿಯದ ಬೇರುಮದ್ದಿನ ವೈದ್ಯನನ್ನೂ ಗಮನಿಸಿರಿ. ಯೆಹೋವನ ಸಾಕ್ಷಿಗಳು ಸಂದರ್ಶಿಸುವಾಗ ಅವನು ಆಗಿಂದಾಗ್ಗೆ ಬೆದರಿಕೆಗಳನ್ನು ಮತ್ತು ಶಾಪಗಳನ್ನು ಉಪಯೋಗಿಸುತ್ತಾ, ಅವರನ್ನು ಬಲವಂತವಾಗಿ ಮನೆಯಿಂದ ದೂರ ಅಟಿಬ್ಟಿಡುತ್ತಿದ್ದನು. ಒಮ್ಮೆ ಅವನು ಒಂದು ವಿಶೇಷ ಔಷಧ ಗುಟುಕನ್ನು ಕೂಡ ತಯಾರಿಸಿ, ಅದರ ಮೇಲೆ ಯಾವುದೋ ಮಂತ್ರಪಠನ ಮಾಡಿ, ಒಬ್ಬ ಸಾಕ್ಷಿಯ ಮುಖಕ್ಕೆ ಅದನ್ನು ಊದಿಬಿಟ್ಟನು. “ಏಳು ದಿನಗಳೊಳಗೆ ನೀನು ಸತ್ತೇಹೋಗುವಿ!,” ಎಂದು ಚೀರಾಡಿದನವನು. ಏಳು ದಿನಗಳಾದ ಬಳಿಕ ಸಾಕ್ಷಿಯು ಹಿಂತಿರುಗಿದನು, ಭೂತವನ್ನೇ ಕಂಡನೆಂದು ನಂಬುತ್ತಾ, ಬೇರುಮದ್ದು ವೈದ್ಯನನ್ನು ಹೊರಗೆ ಧಾವಿಸುವಂತೆ ಇದು ಮಾಡಿತು! ಅವನ ಮಾಂತ್ರಿಕ ವಿದ್ಯೆಯು ಈಗ ನಿಷ್ಫಲವೆಂದು ಬಯಲಾಯಿತು, ಅವನು ಬೈಬಲ್ ಅಧ್ಯಯನ ಮಾಡಲು ಒಪ್ಪಿದನು, ಮತ್ತು ಕಟ್ಟಕಡೆಗೆ ಸ್ವತಃ ಒಬ್ಬ ಯೆಹೋವನ ಸಾಕ್ಷಿಯಾದನು.
ಭಯ ಮತ್ತು ಮೂಢಭಕ್ತಿಯ ಸಂಕೋಲೆಗಳಿಂದ ನೀವು ಸಹ ಮುಕ್ತರಾಗಬಲ್ಲಿರಿ. ಇದು ಸುಲಭವಾಗಿರಲಿಕ್ಕಿಲ್ಲವೆಂಬದು ಗ್ರಾಹ್ಯ. ತಾಯಿತಿಗಳ ಮತ್ತು ರಕ್ಷೆಗಳ ಉಪಯೋಗವು ಸರ್ವಸಾಮಾನ್ಯವಾಗಿರುವ ಒಂದು ಸಂಸ್ಕೃತಿಯಲ್ಲಿ ಪ್ರಾಯಶಃ ನೀವು ಬೆಳೆದಿರಬಹುದು. ಪುರಾತನ ಎಫೆಸದಲ್ಲಿನ ಕ್ರೈಸ್ತರು ಅಂಥ ಪಂಥಾಹ್ವಾನವನ್ನು ಎದುರಿಸಿದ್ದರು. ಪ್ರೇತಾರಾಧನೆಯಿಂದ ಆಳವಾಗಿ ಪ್ರಭಾವಿಸಲ್ಪಟ್ಟಿದ್ದ ಒಂದು ಸಂಸ್ಕೃತಿಯಲ್ಲಿ ಅವರು ಜೀವಿಸಿದ್ದರು. ದೇವರ ವಾಕ್ಯದ ಸತ್ಯವನ್ನು ಅವರು ಕಲಿತಾಗ ಅವರೇನು ಮಾಡಿದರು? ಬೈಬಲ್ ಹೇಳುವುದು: “ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಕ್ರಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೇಳ್ಳಿನಾಣ್ಯ ಆಯಿತೆಂದು ತಿಳಿದುಕೊಂಡರು.”—ಅ. ಕೃತ್ಯಗಳು 19:19.
ದೇವರ ಸುರಕ್ಷೆಯನ್ನು ಗಳಿಸುವುದು
ಮಾಂತ್ರಿಕ ವಿದ್ಯೆಯ ಎಲ್ಲಾ ಕುರುಹುಗಳನ್ನು ನೀವು ನಿಮ್ಮಿಂದ ತೊಡೆದು ಹಾಕಿದರೆ, ಯಾವುದೇ ಸುರಕ್ಷೆಯಿಲ್ಲದೆ ನೀವು ಬಿಡಲ್ಪಡುವುದಿಲ್ಲವೇ? ಪ್ರತಿಯಾಗಿ, “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.” (ಕೀರ್ತನೆ 46:1) ದೇವರ ಸುರಕ್ಷೆಯು ಈ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಆತನು ನಾಶಮಾಡುವಾಗ ವಿಶೇಷವಾಗಿ ಪ್ರದರ್ಶಿಸಲ್ಪಡುವುದು. “ಕರ್ತನು [ಯೆಹೋವನು, NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.”—2 ಪೇತ್ರ 2:9; ಹೋಲಿಸಿರಿ ಕೀರ್ತನೆ 37:40.
ಈ ಮಧ್ಯೆ, ‘ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.’ (ಪ್ರಸಂಗಿ 9:11) ತನ್ನ ಸೇವಕರು ಒಂದು “ನಿರಾತಂಕ” ಜೀವನವನ್ನು ನಡಿಸುವರೆಂದೂ ಎಲ್ಲಾ ವೈಯಕ್ತಿಕ ಹಾನಿಯಿಂದ ಆತನು ಅವರನ್ನು ತಪ್ಪಿಸುವನೆಂದೂ ದೇವರು ವಾಗ್ದಾನಿಸುವುದಿಲ್ಲ. ಆದಾಗ್ಯೂ, ನಮ್ಮ ಆತ್ಮಿಕತೆಯನ್ನು ಮತ್ತು ಆತನೊಂದಿಗಿನ ನಮ್ಮ ಸಂಬಂಧವನ್ನು ರಕ್ಷಿಸಲು ಆತನು ವಚನ ಕೊಡುತ್ತಾನೆ. (ಕೀರ್ತನೆ 91:1-9) ಹೇಗೆ? ಒಂದನೆಯದಾಗಿ, ನಮಗೆ ಪ್ರಯೋಜನವಾಗಬಲ್ಲ ಮತ್ತು ಸೈತಾನನ ಭ್ರಷಕ್ಟಾರಕ ಪ್ರಭಾವದಿಂದ ರಕ್ಷಿಸಬಲ್ಲ ನಿಯಮಗಳನ್ನೂ, ತತ್ವಗಳನ್ನೂ ಆತನು ನಮಗೆ ಕೊಡುತ್ತಾನೆ. (ಯೆಶಾಯ 48:17) ಯೆಹೋವನ ಮಾರ್ಗಗಳ ಜ್ಞಾನವನ್ನು ನಾವು ಸಂಪಾದಿಸುವ ಮೂಲಕ, ‘ಬುದ್ಧಿಯು ನಮಗೆ ಕಾವಲಾಗಿರುವದು, ವಿವೇಕವು’—ದೃಷ್ಟಾಂತಕ್ಕೆ, ನಿಷ್ಪಯ್ರೋಜಕ ಯಾ ಹಾನಿಕಾರಕ ಚಟುವಟಿಕೆಗಳಿಂದ—‘ನಮ್ಮನ್ನು ಕಾಪಾಡುವದು’.—ಜ್ಞಾನೋಕ್ತಿ 2:11.
ನಮ್ಮನ್ನು ದೇವರು ರಕ್ಷಿಸುವ ಇನ್ನೊಂದು ವಿಧವು, ಪರೀಕ್ಷೆಯ ಸಮಯದಲ್ಲಿ “ಬಲಾಧಿಕ್ಯವನ್ನು” ಒದಗಿಸುವ ಮೂಲಕವೇ. (2 ಕೊರಿಂಥ 4:7) ಮತ್ತು ಪರಿಸ್ಥಿತಿಗಳು ಒಬ್ಬ ಕ್ರೈಸ್ತನನ್ನು ಜಜ್ಜಿಬಿಡುವ ಬೆದರಿಕೆಯನ್ನು ಹಾಕುವಾಗ, ಹೃದಯ ಮತ್ತು ಮಾನಸಿಕ ಶಕ್ತಿಗಳನ್ನು ಕಾಪಾಡುವಂತೆ ಆತನು “ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿ” ಯನ್ನು ಕೊಡುತ್ತಾನೆ. (ಫಿಲಿಪ್ಪಿ 4:7) ಹೌದು, ಕ್ರೈಸ್ತನು “ಸೈತಾನನ ತಂತ್ರೋಪಾಯಗಳನ್ನು . . . ಎದುರಿಸಿ ನಿಲ್ಲುವದಕ್ಕೆ ಶಕ್ತ” ನಾಗುವಂತೆ ಸಜ್ಜುಗೊಳಿಸಲ್ಪಟ್ಟಿದ್ದಾನೆ.—ಎಫೆಸ 6:11-13.
ಅಂಥ ಸುರಕ್ಷೆಯನ್ನು ನೀವು ಹೇಗೆ ಹೊಂದಬಲ್ಲಿರಿ? ಯೆಹೋವನ ಮತ್ತು ಆತನ ಪುತ್ರ ಯೇಸು ಕ್ರಿಸ್ತನ ಕುರಿತ ಜ್ಞಾನವನ್ನು ತೆಗೆದುಕೊಳ್ಳುವ ಮೂಲಕ ಪ್ರಾರಂಭಿಸಿರಿ. (ಯೋಹಾನ 17:3) ಈ ವಿಷಯಗಳಲ್ಲಿ ನಿಮಗೆ ನೆರವಾಗಲು ಯೆಹೋವನ ಸಾಕ್ಷಿಗಳು ಹೆಚ್ಚನ್ನು ಮಾಡಬಲ್ಲರು. ಯೆಹೋವನೊಂದಿಗೆ ಒಂದು ಬೆಚ್ಚಗೆನ ಸಂಬಂಧವನ್ನು ನೀವು ಬೆಳೆಸುವಾಗ, ಆತನ ದಯೆಯುಳ್ಳ ಸುರಕ್ಷೆಯನ್ನು ನೀವು ಅನುಭವಿಸಲು ತೊಡಗುವಿರಿ. ಕೀರ್ತನೆ 91:14 ರಲ್ಲಿ ನಾವು ಓದುವಂತೆ, ದೇವರು ಹೇಳುವುದು: “ಅವನು ನನ್ನಲ್ಲಿ ಆಸಕ್ತನಾಗಿರುವುದರಿಂದ ಅವನನ್ನು ರಕ್ಷಿಸುವೆನು. ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.”
ನಿಶ್ಚಯವಾಗಿ, ನೀವು ದೇವರಿಗೆ ನಂಬಿಗಸ್ತರಾಗಿರುವುದಾದರೆ, ಬರಲಿರುವ ಹೊಸ ಲೋಕದಲ್ಲಿ ನಿಮ್ಮನ್ನು ಕಟ್ಟಕಡೆಗೆ ನಿತ್ಯಜೀವದಿಂದ ಆತನು ಆಶೀರ್ವದಿಸುವನು. ಆ ಸಮಯದಲ್ಲಿ ಜೀವಿಸುವವರ ವಿಷಯವಾಗಿ ಯೆಹೋವನು ಖಾತರಿ ಕೊಡುವದು: “ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದದೆ.” (ಮೀಕ 4:4) ರೋಗ ಮತ್ತು ಮರಣವು ಇನ್ನು ಮುಂದೆ ಇರುವುದಿಲ್ಲ. (ಪ್ರಕಟನೆ 21:4) ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ನೀವು ಬೆಳೆಸುವುದಾದರೆ—ಈಗಲೂ ಕೂಡ ಸ್ವಲ್ಪ ಮಟ್ಟಿಗೆ ಸುರಕ್ಷೆಯಲ್ಲಿ ನೀವು ಆನಂದಿಸಬಲ್ಲಿರಿ. ಕೀರ್ತನೆಗಾರನಂತೆ, ನೀವು ಹೀಗನ್ನ ಶಕ್ತರಾಗುವಿರಿ: “ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.”—ಕೀರ್ತನೆ 121:2.
[ಅಧ್ಯಯನ ಪ್ರಶ್ನೆಗಳು]
a ಅಧಿಕ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಸ್ಪಿರಿಟ್ಸ್ ಆಫ್ ದ ಡೆಡ್—ಕ್ಯಾನ್ ದೆ ಹೆಲ್ಪ್ ಯು ಆರ್ ಹಾರ್ಮ್ ಯು? ಬ್ರೋಷರನ್ನು ನೋಡಿರಿ.
[ಪುಟ 6 ರಲ್ಲಿರುವ ಚಿತ್ರ]
ಎಫೆಸದ ಕ್ರೈಸ್ತರು ಮಾಂತ್ರಿಕ ವಿದ್ಯೆಗೆ ಸಂಬಂಧಪಟ್ಟ ಎಲ್ಲವನ್ನು ತೊಡೆದುಹಾಕಿದರು
[ಪುಟ 7 ರಲ್ಲಿರುವ ಚಿತ್ರ]
ದೇವರ ರಾಜ್ಯದ ಕೆಳಗೆ, ಭಯವು ಇನ್ನಿರದು