ತಂಬಾಕು ಮತ್ತು ವೈದಿಕರು
ಸುಮಾರು 115 ಕ್ಕಿಂತಲೂ ಹೆಚ್ಚು ವರುಷಗಳ ಹಿಂದೆ, ಔಷಧ ವೈದ್ಯನಾದ ಜಾನ್ ಕೌನ್, ದ ಯುಸ್ ಆಫ್ ಟೊಬ್ಯಾಕೊ ವರ್ಸಸ್ ಪ್ಯೂರಿಟಿ, ಚ್ಯಾಸಿಟ್ಟಿ ಆ್ಯಂಡ್ ಸೌಂಡ್ ಹೆಲ್ತ್ ಎಂಬ ಹೆಸರಿನ ಪುಸ್ತಕವನ್ನು ಬರೆದನು. ಇತ್ತೀಚೆಗಿನ ವರ್ಷಗಳಲ್ಲಿ ತಂಬಾಕುವಿನ ಹಾನಿಕಾರಕ ಪರಿಣಾಮಗಳ ಕುರಿತು ಏನು ಕಲಿಯಲ್ಪಟ್ಟಿದೆಯೋ ಅದರ ವೀಕ್ಷಣದಲ್ಲಿ, ವೈದಿಕರಿಂದ ಅದರ ಬಳಕೆಯ ಮೇಲೆ ಅವನ ಅವಲೋಕನಗಳು, ಇಂದು ದೇವರನ್ನು ಸೇವಿಸಲು ಬಯಸುವ ಯಾವನಿಗಾದರೂ ದೂರದೃಷ್ಟಿಯವುಗಳೂ, ಸಂಬಂಧಪಟ್ಟವುಗಳೂ ಆಗಿವೆ. ಅಧ್ಯಾಯ 4 ರಲ್ಲಿ, ತಂಬಾಕು ಉಪಯೋಗದ ನೈತಿಕ ಪರಿಣಾಮದೊಂದಿಗೆ ವ್ಯವಹರಿಸುತ್ತಾ, ಡಾ. ಕೌನ್ ಹೇಳಿಕೆಯನ್ನಿತ್ತದ್ದು:
“ತಂಬಾಕುವಿನ ಬಳಕೆ ದೈಹಿಕವಾಗಿ ತಪ್ಪಾಗಿರುವುದಾದರೆ—ಅದು ಸ್ಪಷ್ಟವಾಗಿಗಿ ತೋರಿಸಲ್ಪಟ್ಟಂತೆ—ಆವಶ್ಯಕವಾಗಿ ಅದು ನೈತಿಕವಾಗಿಯೂ ತಪ್ಪಾಗಿರತಕ್ಕದ್ದು; ಯಾಕಂದರೆ ‘ದೇಹವನ್ನು ಕೆಡಿಸುವ ಯಾ ಬಾಧಿಸುವ ಯಾವುದಾದರೂ, ಪರಿಣಾಮವಾಗಿ ನರವ್ಯೂಹಗಳ ವ್ಯವಸ್ಥೆಯನ್ನು ಮತ್ತು ಅದರ ಮೂಲಕ ಮಿದುಳನ್ನು, ಮತ್ತು ಫಲವಾಗಿ ಮನಸ್ಸನ್ನು ಕೆಡಿಸುತ್ತದೆ’ ಎಂಬುದು ಶರೀರಶಾಸ್ತ್ರದ ನಿಯಮವಾಗಿದೆ. ಒಬ್ಬ ಮನುಷ್ಯನ ಮನಸ್ಸು—ಅವನ ಆಲೋಚನೆಗಳು, ಅವನ ವ್ಯಕ್ತಪಡಿಸುವಿಕೆಗಳು, ಅವನ ಕೃತ್ಯಗಳು ಅವನ ಶಾರೀರಿಕ ಸ್ವಭಾವವನ್ನು ಅವನು ಉಪಯೋಗಿಸುವ ಯಾ ದುರುಪಯೋಗಿಸುವ ರೀತಿಯಿಂದ ಪ್ರಭಾವಿಸಲ್ಪಡುತ್ತವೆ. ತಂಬಾಕು, ಅದರ ಹೆಸರು ಮತ್ತು ಸಾಹಚರ್ಯದಲ್ಲಿಯೇ ಕೊಳಕು, ಮತ್ತು—ಅದು ಮಾಡುವ ಹಾನಿಯ ಕಡೆಗೆ ಗಮನ ಕೊಡದೆ ಇದ್ದರೂ—ಮನಸ್ಸಿನಲ್ಲಿ ಶುದ್ಧ, ನಿರ್ಮಲ, ನ್ಯಾಯದ, ನೈತಿಕ ಭಾವನೆಗಳು ಮತ್ತು ಕೃತ್ಯಗಳು ಹೇಗೆ ಉದ್ಭವಿಸಬಲ್ಲವು ಯಾ ಬೆಳೆಯಸಾಧ್ಯವಿದೆ. ಒಬ್ಬನು ಎಣಿಸುವುದಾದರೆ—ಅಂತಹ ಒಂದು ಸಂಗತಿಯನ್ನು ಎಣಿಸಬಹುದಾದರೆ—ಭೂಮಿಯ ಮೇಲೆ ಶುದ್ಧತೆ, ಪಾವಿತ್ರ್ಯತೆ, ಪ್ರೀತಿ ಮತ್ತು ಧರ್ಮಕಾರ್ಯವನ್ನು ಸಾರುತ್ತಾ ಮತ್ತು ಕಲಿಸುತ್ತಾ, ತನ್ನ ಆದರ್ಶಪ್ರಾಯ ಜೀವಿತವನ್ನು ನಡಿಸಿದ ಕ್ರಿಸ್ತನು—ತಂಬಾಕು ಸೇದಿದನು, ನಶ್ಯ ಎಳೆದನು ಮತ್ತು ವೀಳ್ಯ ಜಗಿದನು. ಆ ವಿಚಾರವು ತಾನೇ ದೈವದ್ರೋಹವೆಂದು ಧ್ವನಿಸುವುದಿಲ್ಲವೇ? ಆದಾಗ್ಯೂ, ಶುಶ್ರೂಷಕರು—ಅವನ ನಿಯಮದ ಮತ್ತು ಬೋಧನೆಗಳ ಅನುಯಾಯಿಗಳು, ಸಾರುವವರು, ಮತ್ತು ವ್ಯಾಖ್ಯಾನಗಾರರು—ಕೊಳಕೂ, ವಿಷಕಾರಿಯೂ ಆದ ಹಣಜಿಯಿಂದ, ಅವರ ದೇಹಗಳನ್ನು ಮಲಿನಗೊಳಿಸುತ್ತಾರೆ ಮತ್ತು ಅವರ ಆತ್ಮಗಳನ್ನು ಕಳಂಕಿಸುತ್ತಾರೆ. ಅಂತಹ ಪುರುಷರು, ಯಾ ಅವರ ಅನುಯಾಯಿಗಳು ಕ್ರಿಸ್ತನಂತಹ ಜೀವಿತಗಳನ್ನು—ಉನ್ನತ, ನೈತಿಕ ಜೀವಿತಗಳನ್ನು ನಡಿಸಬಲ್ಲರೋ? ಇಲ್ಲ ಎಂದು ನಾನೆಣಿಸುತ್ತೇನೆ.
“ಒಬ್ಬ ಹೊಟ್ಟೆಬಾಕನ, ಒಬ್ಬ ಅತಿಕುಡುಕನ, ಯಾ ಒಬ್ಬ ತಂಬಾಕು ಬಳಕೆದಾರನ ಕುರಿತಾಗಿ ಹೃದಯದ ಪವಿತ್ರತೆಯ ಸಂಬಂಧದಲ್ಲಿ ಕಲ್ಪಿಸಲು ನಿಮಗೆ ಸಾಧ್ಯವಾಗುವುದಾದರೆ, ಪ್ರಯತ್ನಿಸಿರಿ? ಇದರ ಸಾಹಚರ್ಯದೊಂದಿಗೆ ಏನೋ ಅಸ್ವಾಭಾವಿಕತೆಯು, ಅಸಹ್ಯತೆಯು, ಜುಗುಪ್ಸೆಯು ಇದೆ. ಶಾರೀರಿಕ ಅಪೇಕ್ಷೆಗಳು ಮತ್ತು ಬಾಹ್ಯ ಗ್ರಹಣಶಕ್ತಿಗಳು ಭ್ರಷ್ಟಗೊಂಡಂತೆ, ಆಂತರಿಕ ಮನುಷ್ಯನು, ನೈತಿಕ ಸ್ವಭಾವವು ಅಶ್ಲೀಲಗೊಳ್ಳುತ್ತದೆ. ಶುದ್ಧವಾದ ಆತ್ಮವು ಒಂದು ಕೊಳಕಾದ ಕೊಠಡಿಯಲ್ಲಿ ನಿವಾಸಿಸುವುದಿಲ್ಲ, ನಿವಾಸಿಸಲಾರದು. ಪ್ರಾಪಂಚಿಕ ಮತ್ತು ಆತ್ಮಿಕ ಸಂಗತಿಗಳ ನಡುವೆ ಒಂದು ಸ್ವಾಭಾವಿಕ ಅನುರೂಪತೆ ಇದೆ, ಹೀಗೆ ಒಂದರ ಗುಣಗಳು ಇನ್ನೊಂದರ ಲಕ್ಷಣವನ್ನು ಸೂಚಿಸುತ್ತವೆ. ಮತದ ಪ್ರಾಚಾರ್ಯ ಮತ್ತು ತಂಬಾಕುವಿನ ದಾಸ . . . ತಂಬಾಕುವಿನ ಬಳಕೆಯು ವಿನಾಶಕಾರಿ ಪದ್ಧತಿ ಮತ್ತು ನೈತಿಕವಾಗಿ ತಪ್ಪು ಎಂದವನು ಎಲ್ಲಾ ನಿಷ್ಕಾಪಟ್ಯದಿಂದ ಮತ್ತು ಯಥಾರ್ಥತೆಯಿಂದ ಅಂಗೀಕರಿಸಬಹುದು; ಆದರೂ ಅವನು ತನ್ನೊಳಗೆ ಮನಸ್ಸಿನ ಒಂದು ಆವೇಗ, ಅವನ ಅಂಗಗಳ ಒಂದು ಕೃತಕ ಉತ್ಪಾದಿತ ನಿಯಮವು ತಣಿಯದ ಹಂಬಲಿಕೆಯೊಂದಿಗೆ ಈ ಹವ್ಯಾಸವನ್ನು ಮುಂದರಿಸಲು ಪ್ರಚೋದಿಸುವುದನ್ನು ಕಾಣಬಹುದು, ಮತ್ತು ಈ ಕೃತಕ ನಿಯಮವು ಅವನ ಸ್ವಾಭಾವಿಕ ವಿವೇಚನೆ ಮತ್ತು ಮನಸ್ಸಾಕ್ಷಿಯ ಸಂಯೋಜನೆಗಿಂತಲೂ ಹೆಚ್ಚು ಬಲಾಢ್ಯವಾಗಿರಬಹುದು. ತಂಬಾಕು ಸೇವನೆಯು ನಮ್ಮ ಭೌತಿಕ ಅಂಗವ್ಯವಸ್ಥೆಯಲ್ಲಿ ಬೇರೂರಿಸಲ್ಪಟ್ಟ ದೇವರ ನಿಯಮಗಳಲ್ಲೊಂದರ ಸುಲಭಗ್ರಾಹ್ಯವಾದ ಅತಿಕ್ರಮಣವಲ್ಲವೇ? ದೇವರ ನಿಯಮದ ಯಾವುದೇ ಒಂದರ ಭಂಗಗೊಳಿಸುವಿಕೆಯು ನಿಯಮೋಲ್ಲಂಘನೆ ಮತ್ತು ಪಾಪವಲ್ಲವೇ? ಮತ್ತು ಮನುಷ್ಯನೊಬ್ಬನು ದೇವರ ನಿಯಮಗಳಲ್ಲೊಂದರ ಉಲ್ಲಂಘನೆಯಲ್ಲಿ ಹವ್ಯಾಸವಾಗಿ ಜೀವಿಸುತ್ತಿರುವುದಾದರೆ, ಇತರ ನಿಯಮಗಳನ್ನು ಉಲ್ಲಂಘಿಸಲು ಪರಿವರ್ತನೆಯು ಸುಲಭವೂ, ಸ್ವಾಭಾವಿಕವೂ ಆಗುವುದಿಲ್ಲವೇ? ಮತ್ತು ಕೊನೆಯಲ್ಲಿ, ಅವನ ಜೀವನಸಾರದ ನಿಯಮಗಳ ವಿರುದ್ಧ ಮುಂದರಿದ ಉಲ್ಲಂಘನೆಯ ಜೀವಿತವೊಂದನ್ನು ತನ್ನ ಸಹ ಜೀವಿಗಳಿಗೆ ತನ್ನ ಸ್ವಂತ ವರ್ತನೆಯಿಂದ ಶಿಫಾರಸು ಮಾಡುವ ಯಾವನೇ ಒಬ್ಬ ಮನುಷ್ಯನು ನೀತಿಬೋಧೆಯ ಶಿಕ್ಷಕನಾಗಿ ಹೇಗೆ ನಿಂತಾನು?”