“ಎಲ್ಲಾ ವಿಧದ ಜನರನ್ನು” ತಲಪುವುದು—ಬೆಲ್ಚಿಯಮ್ನಲ್ಲಿ
“ಎಲ್ಲಾ ವಿಧದ ಜನರು ರಕ್ಷಣೆಯನ್ನು ಹೊಂದಿ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಸೇರಬೇಕೆಂದು” ದೇವರ ಚಿತ್ತವಾಗಿದೆ ಎಂದು ಅಪೊಸ್ತಲ ಪೌಲನು ತನ್ನ ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಮರುಜ್ಞಾಪಕವಿತನ್ತು. ಇದಕ್ಕಾಗಿ ತಮಗೆ “ಒಂದು ಶಾಂತ ಮತ್ತು ನೆಮ್ಮದಿಯ” ಜೀವನವನ್ನು ದಯಪಾಲಿಸುವಂತೆ ಅವರು ಪ್ರಾರ್ಥಿಸಬೇಕಿತ್ತು, ಆ ಮೂಲಕ ಅವರು ರಾಜ್ಯದ ಸುವಾರ್ತೆಯನ್ನು ಕೇಳುವವರೆಲ್ಲರಿಗೆ ಅದನ್ನು ಘೋಷಿಸಬಹುದಿತ್ತು.—1 ತಿಮೊಥೆಯ 2:1-4, NW.
ಇಂದು ಸುವಾರ್ತೆಯಿಂದ “ಎಲ್ಲಾ ವಿಧದ ಜನರನ್ನು” ತಲಪುವುದು ಬೆಲ್ಚಿಯಮ್ನ ಯೆಹೋವನ ಸಾಕ್ಷಿಗಳಿಗೆ ಒಂದು ವಿಶೇಷಾರ್ಥವನ್ನು ತಕ್ಕೊಳ್ಳುತ್ತದೆ. ಎರಡನೆಯ ಲೋಕ ಯುದ್ಧದ ಅಂತ್ಯದಿಂದ, ಲೇಕ್ ತಂಗ್ಯಾನಿಕ ಮತ್ತು ಲೇಕ್ ಮಿಚಿಗನ್ನ ಅರ್ಧ ಭಾಗವನ್ನು ಸುಲಭವಾಗಿ ಹಿಡಿಯಬಲ್ಲ ಈ ಚಿಕ್ಕ ದೇಶವು, ಅದರ ಜಾತೀಯ ಮತ್ತು ಸಾಂಸ್ಕೃತಿಕ ರಚನೆಗಳಲ್ಲಿ ತೀವ್ರ ಬದಲಾವಣೆಗಳನ್ನು ಅನುಭವಿಸಿದೆ. ಅದರ ಮೂರು ಸಾಂಪ್ರದಾಯಿಕ ಸಮಾಜಗಳಾದ ಫೆಮ್ಲಿಷ್ (ಡಚ್), ಫ್ರೆಂಚ್ ಮತ್ತು ಜರ್ಮನ್ ಮಾತ್ರವಲ್ಲದೆ—ಈಗ ಬೆಲ್ಚಿಯಮ್ನಲ್ಲಿ ವೈವಿಧ್ಯ ಭಾಷೆಗಳ ಮತ್ತು ಸಂಸ್ಕೃತಿಗಳ ಗುಂಪುಗಳು ಇವೆ. ಅರಬ್ಬಿಯರು, ತುರ್ಕರು, ಭಾರತೀಯರು, ಚೀನಾದವರು, ಫಿಲಿಪಿನೊ, ಆಫ್ರಿಕನ್, ಮತ್ತು ಅಮೆರಿಕನ್ ನಿವಾಸಿಗಳೇ ಇವುಗಳಲ್ಲಿ ಕೇವಲ ಕೆಲವು ಹೆಸರುಗಳು. ಬೆಲ್ಚಿಯಮ್ನ ಪ್ರತಿ 10 ಜನರಲ್ಲಿ 1 ಅನ್ಯದೇಶೀಯ ಗೋತ್ರದವನೆಂದು ಅಂದಾಜು ಮಾಡಲಾಗಿದೆ.
ಹೀಗೆ, ಬೆಲ್ಚಿಯಮ್ನ ಸಾಕ್ಷಿಗಳು, ತಮ್ಮ ಲೋಕವ್ಯಾಪಕ ಜೊತೆ ಕ್ರೈಸ್ತರಂತೆ, “ಎಲ್ಲಾ ವಿಧದ ಜನರಿಗೆ” ಸುವಾರ್ತೆಯನ್ನು ತಲಪಿಸುವ ಪಂಥಾಹ್ವಾನವನ್ನು ಎದುರಿಸಿರುತ್ತಾರೆ. ಅಷ್ಟು ವಿವಿಧ ಜನಾಂಗಗಳವರ ನಡುವೆ ಸಾರುವಿಕೆ ಹೇಗೆ ನಡಿಯುತ್ತಿದೆ? ಪೂರಾ ರೀತಿಯಲ್ಲಿ ಬೇರೆಯಾದ ಒಂದು ಸಂಸ್ಕೃತಿಯ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಜನರನ್ನು ಒಬ್ಬನು ಗೋಚರಿಸುವುದು ಹೇಗೆ? ಮತ್ತು ಬೈಬಲಿನ ಸಂದೇಶಕ್ಕೆ ಅವರ ಪ್ರತಿಕ್ರಿಯೆ ಏನು?
ಮೊದಲಹೆಜ್ಜೆ ಫಲಗಳನ್ನು ತರುತ್ತದೆ
ರಾಜ್ಯದ ಸುವಾರ್ತೆಯ ಕುರಿತು “ಎಲ್ಲಾ ವಿಧದ ಜನ” ರೊಂದಿಗೆ ಮಾತಾಡುವುದು ಒಂದು ಸಂತೋಷದ ಮತ್ತು ಉತ್ತೇಜಕ ಅನುಭವವಾಗಿದೆ. ಕಾರ್ಯಮಗ್ನ ಬೀದಿಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ, ಸಾರ್ವಜನಿಕ ವಾಹನಗಳಲ್ಲಿ, ಮತ್ತು ಮನೆಯಿಂದ ಮನೆಗೆ ಹೋಗುವಾಗ ಎಲ್ಲಾ ಭೂಖಂಡಗಳ ಜನರು ಕಾಣಸಿಗುತ್ತಾರೆ. ತುಸು ಮೊದಲ ಹೆಜ್ಜೆಯೊಂದಿಗೆ ರಾಜ್ಯ ಪ್ರಚಾರಕನು ಸುಲಭವಾಗಿಯೇ ಒಂದು ಸಂಭಾಷಣೆಯನ್ನು ಪ್ರಾರಂಭಿಸಬಲ್ಲನು, ಮತ್ತು ಇದು ಹೆಚ್ಚಾಗಿ ಫಲದಾಯಕ ಫಲಿತಾಂಶಗಳಿಗೆ ನಡಿಸುತ್ತದೆ.
ಒಂದು ಬಸ್ ಸ್ಟಾಪ್ನಲ್ಲಿ ಒಬ್ಬಳು ಸಾಕ್ಷಿಯು, ಕೇವಲ ಒಂದು ನಸುನಗೆಯಿಂದ ಒಬ್ಬಾಕೆ ಆಫ್ರಿಕನ್ ಮಹಿಳೆಯೊಂದಿಗೆ ಒಂದು ಸಂಭಾಷಣೆ ಆರಂಭಿಸಿದಳು. ದೇವರ ರಾಜ್ಯದ ಕುರಿತು ಕೇಳಿದ ಆ ಮಹಿಳೆಯು ತರ್ವೆಯಾಗಿ ತನ್ನ ಸಂತೋಷ ವ್ಯಕ್ತಪಡಿಸಿದಳು, ಮತ್ತು ಬೈಬಲಿನ ಕುರಿತು ಹೆಚ್ಚನ್ನು ತಿಳಿಯಲು ಬಯಸಿದಳು. ಅವಳು ಕಾವಲಿನಬುರುಜು ಮತ್ತು ಎಚ್ಚರ! ವನ್ನು ಪಡಕೊಂಡಳು ಮತ್ತು ತನ್ನ ವಿಳಾಸವನ್ನು ಸಾಕ್ಷಿಗೆ ಕೊಟ್ಟಳು. ತಾನು ಅವಳನ್ನು ಬೇಗನೇ ಸಂದರ್ಶಿಸುವೆನೆಂದು ಹೇಳಿದಾಗ, ಮಹಿಳೆ ಆಕ್ಷೇಪಿಸಿದ್ದು: “ಇಲ್ಲ! ಇಲ್ಲ! ನೀನು ಬರುವಾಗ ನಾನು ಮನೆಯಲ್ಲಿರುವಂತೆ, ನಾವು ಒಂದು ನಿಶ್ಚಿತ ಭೇಟಿಯ ಏರ್ಪಾಡು ಮಾಡೋಣ.”
ಮೂರು ದಿನಗಳ ಅನಂತರ ಸಾಕ್ಷಿಯು ಭೇಟಿ ಮಾಡಲಿದ್ದಾಗ, ಆ ಮಹಿಳೆಯ ವಿಳಾಸವನ್ನು ಅವಳು ಕಳಕೊಂಡದ್ದು ಕಂಡು ಬಂತು. ಆದರೆ ಬೀದಿಯ ಹೆಸರನ್ನು ನೆನಪಿಸುತ್ತಾ, ಅವಳು ಪ್ರತಿಯೊಂದು ಮನೆಯನ್ನು ಪರೀಕ್ಷಿಸುತ್ತಾ ಒಂದು ಆಫ್ರಿಕನ್ ಹೆಸರು ಕಾಣಸಿಗುತ್ತದೋ ಎಂದು ನೋಡಿದಳು. ಯಾವುದಕ್ಕಾಗಿ ಹುಡುಕುತ್ತಿದ್ದಳೋ ಅದನ್ನು ಕಾಣದೆಯೇ ಅವಳು ಆ ಬೀದಿಯ ಕೊನೆಯನ್ನು ತಲಪಿದಳು. ಎಂತಹ ಮಹಾ ನಿರಾಶೆ! ಹೊರಡಲು ಸಿದ್ಧಳಾದಾಗ, ಥಟ್ಟನೇ, ಎಲ್ಲಿಂದ ಗೋಚರಿಸಿದಳೋ ತಿಳಿಯದೆಂಬಂತೆ, ಅವಳು ಹುಡುಕುತ್ತಿದ್ದ ಆದೇ ಮಹಿಳೆ ಅವಳ ಮುಂದೆ ನಿಂತಿದ್ದಳು, ಮತ್ತು ಭೇಟಿಗಾಗಿ ಅವರು ಏರ್ಪಡಿಸಿದ್ದ ಅದೇ ಸಮಯಕ್ಕೆ ಸರಿಯಾಗಿ! ಒಂದು ಮನೆ ಬೈಬಲ್ ಅಭ್ಯಾಸವು ಆರಂಭಿಸಿತು.
ವಿವಿಧ ಪದ್ಧತಿಗಳು, ನಂಬಿಕೆಗಳು ಮತ್ತು ಸಂಪ್ರದಾಯಗಳ ಕುರಿತೇನು? ದೃಷ್ಟಾಂತಕ್ಕಾಗಿ, ಹಿಂದೂ ನಂಬಿಕೆಗಳ ಕುರಿತೇನು? ಒಳ್ಳೇದು, ಒಬ್ಬ ಪಯನೀಯರಳಿಗೆ ರೀಸನಿಂಗ್ ಫ್ರಮ್ ದ ಸ್ಕ್ರಿಪರ್ಸ್ಚ್ ಪುಸ್ತಕದಿಂದ ತಾನು ಓದಿದ್ದ ವಿಷಯ ನೆನಪಿಗೆ ಬಂತು. ಅದು ಹೇಳುವುದು: “ಹಿಂದೂ ತತ್ವಜ್ಞಾನದ ಜಟಿಲತೆಗಳೊಂದಿಗೆ ವ್ಯವಹರಿಸುವ ಬದಲಾಗಿ, ಪವಿತ್ರ ಬೈಬಲಿನಲ್ಲಿ ಕಂಡುಬರುವ ತೃಪ್ತಿಕರವಾದ ಸತ್ಯವನ್ನು ಸಾದರಪಡಿಸಿರಿ. . . . ಆತನ ವಾಕ್ಯದ ಸ್ಪಷ್ಟವಾಗಿದ ಸತ್ಯಗಳು ನೀತಿಗಾಗಿ ಹಸಿದ ಮತ್ತು ಬಾಯಾರಿದವರ ಹೃದಯವನ್ನು ತಲಪುವುವು.”
ಭಾರತದ ಒಬ್ಬಾಕೆ ಸ್ತ್ರೀಯಾದ ಕಾಶಿಯನ್ನು ಭೇಟಿಯಾದಾಗ ಆ ಪಯನೀಯರಳು ಹಾಗೆಯೇ ಮಾಡಿದಳು, ಮತ್ತು ಆಕೆ ಬೈಬಲಭ್ಯಾಸ ಸ್ವೀಕರಿಸಿದಳು. ಕಾಶಿ ಏಕಪ್ರಕಾರವಾದ ಪ್ರಗತಿಯನ್ನು ಮಾಡಿದಳು ಮತ್ತು ವಿಳಂಬಿಸದೆ ಆಕೆ ತನ್ನ ಸ್ನೇಹಿತೆಯರಿಗೆ ತಾನು ಕಲಿಯುತ್ತಿದ್ದ ವಿಷಯಗಳ ಕುರಿತು ತಿಳಿಸಿದಳು. ಒಂದು ದಿನ ಪಯನೀಯರಳು ಒಬ್ಬ ರಾಯಭಾರಿಯ ಹೆಂಡತಿಯನ್ನು ಭೇಟಿಯಾದಳು, ಅವಳು ಕೇಳಿದ್ದು: “ಕಾಶಿಗೆ ಬೈಬಲ್ ಕಲಿಸುತ್ತಿರುವವಳು ನೀನೋ?” ಆ ಮಹಿಳೆಯು ಹೀಗಂದಾಗ ಪಯನೀಯರಳಿಗಾದ ಆಶ್ಚರ್ಯವೆಷ್ಟು: “ಅವಳೆಂತಹ ಒಬ್ಬ ಶಿಕ್ಷಕಿ! ಅನೇಕ ವಿಷಯಗಳಲ್ಲಿ ನನ್ನನ್ನು ಮನಗಾಣಿಸಲು ಅವಳು ಶಕ್ತಳಾಗಿದ್ದಾಳೆ. ಹಿಂದೂ ಆಗಿರುವ ಆಕೆಯು, ಕ್ಯಾತೊಲಿಕ್ ಆಗಿರುವ ನನಗೆ ಬೈಬಲ್ ಕಲಿಸುವುದನ್ನು ಊಹಿಸಿಕೊಳ್ಳಿ!”
ಫಿಲಿಪಿನೊ ಜನರನ್ನು ನೀವು ಭೇಟಿಯಾಗುವಾಗ, ಅವರಲ್ಲಿ ಹೆಚ್ಚಿನವರು ಬೈಬಲನ್ನು ಪ್ರೀತಿಸುತ್ತಾರೆಂದು ನಿಮಗೆ ಕೂಡಲೇ ತಿಳಿದುಬರುತ್ತದೆ. ಅವರು ಪ್ರೀತಿ ಸ್ವಭಾವದವರು ಮತ್ತು ಆದರಾತಿಥ್ಯ ಮಾಡುವವರು ಆಗಿದ್ದಾರೆ ಮತ್ತು ಅವರೊಡನೆ ಒಂದು ಸಂಭಾಷಣೆಯನ್ನು ಪ್ರಾರಂಭಿಸುವುದು ಅತಿ ಸುಲಭ. ಒಬ್ಬಳು ಫಿಲಿಪಿನೊ ಮಹಿಳೆ ಸುಲಭವಾಗಿ ಎರಡು ಪತ್ರಿಕೆಗಳನ್ನು ತಕ್ಕೊಂಡಳು, ಆದರೆ ಕ್ಯಾತೊಲಿಕ್ ಆಗಿದದ್ದರಿಂದ, ಅವನ್ನು ಬಿಸಾಡಿಬಿಟ್ಟಳು. ಕೆಲವು ವಾರಗಳ ಅನಂತರ ಅವಳು ಪುನಃ ಎರಡು ಪತ್ರಿಕೆಗಳನ್ನು ಸ್ವೀಕರಿಸಿದಳು, ಅವನ್ನು ತನ್ನ ಕೈಚೀಲದಲ್ಲಿ ಇಟ್ಟುಬಿಟ್ಟಳು. ಒಂದು ರಾತ್ರಿ ಆಕೆಗೆ ಓದಲು ಮನಸ್ಸಾಯಿತು. ಯಾವುದೇ ಆಸಕ್ತಿಯ ವಿಷಯಕ್ಕಾಗಿ ಸುತ್ತಲೂ ಹುಡುಕಿದ ಮೇಲೆ, ಆ ಪತ್ರಿಕೆಗಳು ಅವಳಿಗೆ ಸಿಕ್ಕಿದವು. ಅನುಮಾನದಿಂದ ಅವಳು ಓದತೊಡಗಿದಳು, ಮತ್ತು ಅವಳ ಅಸಕ್ತಿಯು ಬೆಳೆಯಿತು. ಅನಂತರ ಸ್ವಲ್ಪದರಲ್ಲೇ ಒಬ್ಬ ಸಾಕ್ಷಿಯು ಅವಳ ಮನೆಯನ್ನು ಸಂದರ್ಶಿಸಿದನು, ಮತ್ತು ಆ ಮಹಿಳೆ ಅನೇಕ ಪ್ರಶ್ನೆಗಳನ್ನು ಕೇಳಿದಳು. ಬೈಬಲು ಏನನ್ನುತ್ತದೋ ಅದರೊಂದಿಗೆ ತನ್ನ ಕ್ಯಾತೊಲಿಕ್ ನಂಬಿಕೆಯನ್ನು ಅವಳು ಎಂದಾದರೂ ಹೋಲಿಸಿದ್ದು ಇದೇ ಮೊದಲನೆಯ ಸಾರಿಯಾಗಿತ್ತು. ಸಮಂಜಸವಾದ, ಶಾಸ್ತ್ರೀಯ ನಿರೂಪಣೆಯು ಅವಳು ಕೊನೆಗೆ ಸತ್ಯವನ್ನು ಕಂಡುಕೊಂಡ ಮನವರಿಕೆಯನ್ನು ಅವಳಿಗೆ ಕೊಟ್ಟಿತು.
“ನಿನ್ನ ಆಹಾರವನ್ನು ಚೆಲ್ಲು”
ಅನೇಕ ಪರದೇಶದ ನಿವಾಸಿಗಳು ಬೆಲ್ಚಿಯಮ್ನಲ್ಲಿರುವುದು, ವ್ಯಾಪಾರದ ಕಾರಣಗಳಿಂದಾಗಿ ಅಥವಾ 150 ಅಂಗೀಕೃತ ರಾಯಭಾರ ನಿಲಯಗಳಲ್ಲೊಂದರಲ್ಲಿ ಅಥವಾ ಯೂರೋಪಿಯನ್ ಕಮ್ಯೂನಿಟಿ ಕಮಿಶನ್ನಲ್ಲಿ ಕೆಲಸಮಾಡಲಿಕ್ಕಾಗಿ. ಹೆಚ್ಚಿನವರು ಕೇವಲ ಕೆಲವೇ ವರ್ಷ ಉಳಿಯುತ್ತಾರೆ. ಅವರಿಗೆ ಸಾಕ್ಷಿ ಕೊಡುವುದು ಮತ್ತು ಅವರೊಂದಿಗೆ ಬೈಬಲ್ ಅಭ್ಯಾಸಿಸುವುದು ಮೊದಮೊದಲು ನಿಷ್ಫಲವೆಂದು ತೋರಬಹುದು. ಆದರೆ ಬೈಬಲ್ ನಮಗೆ ಜ್ಞಾಪಕ ಕೊಡುವುದು: “ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು.” (ಪ್ರಸಂಗಿ 11:1) ಆಗಿಂದಾಗ್ಗೆ ಫಲಿತಾಂಶಗಳು ಆಶ್ಚರ್ಯಕರವಾಗಿ ಫಲಕಾರಿಯಾಗಿವೆ.
ಒಬ್ಬ ಸಾಕ್ಷಿಯಿಂದ ಕ್ರಮವಾಗಿ ಪತ್ರಿಕೆಗಳನ್ನು ಪಡೆದ ಒಬ್ಬಾಕೆ ಅಮೆರಿಕನ್ ಮಹಿಳೆಯ ವಿಷಯವು ಹಾಗಿತ್ತು. ತಕ್ಕ ಸಮಯದಲ್ಲಿ ಬೈಬಲನ್ನು ಕ್ರಮವಾಗಿ ಅಭ್ಯಾಸಿಸುವ ಪ್ರಯೋಜನವನ್ನು ಸಾಕ್ಷಿಯು ತೋರಿಸಿಕೊಟ್ಟಳು, ಮತ್ತು ಬೈಬಲಭ್ಯಾಸ ನೀಡಿದಳು. ಆ ಸ್ತ್ರೀ ನೀಡಿಕೆಯನ್ನು ಸ್ವೀಕರಿಸಿದಳು ಮತ್ತು ತೀವ್ರ ಪ್ರಗತಿಯನ್ನು ಮಾಡಿದಳು. ಸತ್ಯ ಮತ್ತು ಸುಳ್ಳು ಧರ್ಮದ ನಡುವಣ ವ್ಯತ್ಯಾಸವನ್ನು ಅವಳು ತಡವಿಲ್ಲದೆ ಕಂಡುಕೊಂಡಳು. ಆದುದರಿಂದ ತನ್ನ ಮನೆಯಲ್ಲಿದ್ದ ಧಾರ್ಮಿಕ ವಿಗ್ರಹಗಳೆಲ್ಲವನ್ನು ತೆಗೆದು ಹಾಕಿದಳು. ಅನಂತರ ಆಕೆಗೆ ಅಮೆರಿಕಕ್ಕೆ ಹಿಂತಿರುಗುವ ಸಮಯವು ಬಂತು. ಅದು ಆಕೆಯ ಆತ್ಮಿಕ ಪ್ರಗತಿಯ ಅಂತ್ಯವೆಂದು ಅರ್ಥವಾಗಿತ್ತೋ? ಆ ಮಹಿಳೆಯು ಅವಳ ಅಭ್ಯಾಸ ಮುಂದುವರಿಸಿದಳೆಂದೂ, ಯೆಹೋವ ದೇವರಿಗೆ ತನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಂಡಿದ್ದಾಳೆಂದೂ ತಿಳಿಸಿದ ಒಂದು ಟೆಲಿಫೊನ್ ಕಾಲ್ ಅಮೆರಿಕದಲ್ಲಿನ ಒಬ್ಬಾಕೆ ಸಾಕ್ಷಿಯಿಂದ ಅವಳಿಗೆ ಬಂದಾಗ, ಆಕೆಗಾದ ಸಂತೋಷ ಮತ್ತು ಆಶ್ಚರ್ಯವನ್ನು ಊಹಿಸಿಕೊಳ್ಳಿರಿ! ವಾಸ್ತವದಲ್ಲಿ ಅವಳು ಆವಾಗಲೇ ಸಹಾಯಕ ಪಯನೀಯರ ಶುಶ್ರೂಷಕಳಾಗಿ ಸೇವೆಮಾಡುತ್ತಿದ್ದಳು.
ಭಾರತೀಯ ಸ್ತ್ರೀ ಕಾಶಿಯ ವಿಷಯದಲ್ಲಿ ಮತ್ತು ಆರಂಭದಲ್ಲಿ ತಿಳಿಸಿದ ಫಿಲಿಪಿನೊ ಮಹಿಳೆಯ ವಿಷಯದಲ್ಲೂ ಇದು ಸತ್ಯವಾಗಿತ್ತು. ಕಾಶಿ ಭಾರತಕ್ಕೆ ಹಿಂತಿರುಗಿದಾಗ, ಅವಳು ಮತ್ತು ಅವಳ ಗಂಡ ತಮ್ಮ ಬೈಬಲಭ್ಯಾಸವನ್ನು ಮುಂದುವರಿಸಿದರು. ಕಟ್ಟಕಡೆಗೆ ಅವರಿಬ್ಬರೂ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡರು ಮತ್ತು ಸಾರುವ ಕಾರ್ಯದಲ್ಲಿ ಪಾಲಿಗರಾದರು. ಅವರು ವಾಸಿಸಿದ್ದ ಕ್ಷೇತ್ರದಲ್ಲಿ ಬೇರೆ ಯಾರೂ ಸಾಕ್ಷಿಗಳು ಇರದರ್ದಿಂದ, ಅವರು ತಮ್ಮ ಮನೆಯನ್ನು ಒಂದು ಸಭಾ ಪುಸ್ತಕ ಅಭ್ಯಾಸಕ್ಕಾಗಿ ನೀಡಿಕೊಂಡರು. ಕಾಶಿಯು ತನ್ನ ಆರೋಗ್ಯ ಅನುಮತಿಸಿದಷ್ಟರ ಮಟ್ಟಿಗೆ ಒಬ್ಬ ಸಹಾಯಕ ಪಯನೀಯರಳಾಗಿ ಸೇವೆಮಾಡಿದಳು, ಮತ್ತು ಆಕೆ ಒಟ್ಟಿಗೆ 31 ಜನರನ್ನು ಒಳಗೂಡಿದ್ದ ಆರು ಮನೆ ಬೈಬಲಭ್ಯಾಸಗಳನ್ನು ನಡಿಸುತ್ತಿದ್ದಾಳೆ. ತದ್ರೀತಿಯಲ್ಲಿ, ಫಿಲಿಪಿನೊ ಮಹಿಳೆ ಅಮೆರಿಕಕ್ಕೆ ಸ್ಥಳ ಬದಲಾಯಿಸಿದಳು, ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ಪ್ರಗತಿಮಾಡಿದಳು, ಮತ್ತು ಕ್ರಮದ ಪಯನೀಯರಳಾದಳು. ಬೆಲ್ಚಿಯಮ್ನ ರಾಜ್ಯ ಪ್ರಚಾರಕರು ತಮ್ಮ ಕ್ಷೇತ್ರದ ಜನರಿಗೆ ಸಾರುವುದನ್ನು ಮುಂದರಿಸುವಾಗ ಆನಂದಿಸುವ ಇಂಥ ಸಂತೋಷದ ಫಲಿತಾಂಶಗಳು ಅನೇಕವಾಗಿವೆ.
ಭಾಷೆಗಳ ಪಂಥಾಹ್ವಾನ
“ಎಲ್ಲಾ ವಿಧದ ಜನರಿಗೆ” ಸಾರುವ ಕೆಲಸವನ್ನು ಪೂರೈಸುವುದಕ್ಕಾಗಿ, ಬ್ರಾಂಚ್ ಆಫೀಸಿಗೆ ನೂರಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಬೈಬಲ್ ಸಾಹಿತ್ಯವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅಲ್ಲಿ ಈಗ ಹತ್ತು ಭಾಷೆಗಳಲ್ಲಿ ಬೆಲ್ಚಿಯನ್ ಸಭೆಗಳಿವೆ. ಒಟ್ಟಿಗೆ 341 ಸಭೆಗಳಲ್ಲಿ 61 ಅನ್ಯ ಭಾಷೆಗಳದ್ದಾಗಿವೆ, ಮತ್ತು 26,000 ರಾಜ್ಯ ಪ್ರಚಾರಕರಲ್ಲಿ, 5,000 ವಿದೇಶಿ ಜನಾಂಗದವರು. ಒಂದು ಸಭೆಯಲ್ಲಿ 25 ವಿವಿಧ ದೇಶಗಳ ಪುರುಷರು ಮತ್ತು ಸ್ತ್ರೀಯರು ಕೂಡಿರುತ್ತಾರೆ. ಅವರ ಕೂಟಗಳಲ್ಲಿರುವ ರಂಗು ಮತ್ತು ವೈವಿಧ್ಯವನ್ನು ಊಹಿಸಿಕೊಳ್ಳಿರಿ! ಆದರೂ ಸಹೋದರರಲ್ಲಿರುವ ಪ್ರೀತಿ ಮತ್ತು ಐಕ್ಯತೆಯು ನಿಜ ಕ್ರೈಸ್ತ ಶಿಷ್ಯತ್ವಕ್ಕೆ ಒಂದು ಬಲವಾದ ಸಾಕ್ಷ್ಯವಾಗಿ ಇದೆ.—ಯೋಹಾನ 13:34, 35.
ಬೆಲ್ಚಿಯಮ್ನಲ್ಲಿ ಎಷ್ಟೋ ಮಂದಿ ನಿವಾಸಿಗಳಿಗೆ ಅನ್ಯ ಭಾಷೆಗಳಲ್ಲಿ ಸುವಾರ್ತೆ ಕೇಳುವ ಅಗತ್ಯವಿದೆಯಾದರ್ದಿಂದ, ತುರ್ಕಿ, ಅರಬ್ಬೀ, ಮತ್ತು ಚೀನಿಯಂತಹ ಕಷ್ಟದ ಭಾಷೆಗಳನ್ನು ಕಲಿಯುವ ಪಂಥಾಹ್ವಾನವನ್ನು ಕೆಲವು ಪ್ರಚಾರಕರು ಸ್ವೀಕರಿಸಿದ್ದಾರೆ. ಅವರ ಪ್ರಯತ್ನಗಳು ಹೇರಳವಾದ ಪ್ರತಿಫಲವನ್ನು ಕೊಟ್ಟಿವೆ.
ಅರಬ್ಬಿ ಜನತೆಯ ನಡುವೆ ಕಾರ್ಯನಡಿಸುವವರು, ಬೈಬಲಿನ ವ್ಯಾವಹಾರ್ಯ ಮೂಲ್ಯತೆಯನ್ನು ಎತ್ತಿಹೇಳುವ ಮೂಲಕ ಅದರಲ್ಲಿ ಅಸಕ್ತಿಯನ್ನು ಹೆಚ್ಚಾಗಿ ಚೇತರಿಸಲು ಶಕ್ತರಾಗಿರುವುದನ್ನು ಕಂಡಿದ್ದಾರೆ. ಒಬ್ಬ ರಾಜ್ಯ ಪ್ರಚಾರಕನು ಒಬ್ಬ ಅರಬ್ಬಿ ಪ್ರೊಫೆಸರನೊಂದಿಗೆ ಒಂದು ಅಸಕ್ತಿಭರಿತ ಚರ್ಚೆಯನ್ನು ನಡಿಸಿದನು, ತದನಂತರ ಮೂರು ವರ್ಷಗಳ ವರೆಗೆ ಆ ಪ್ರೊಫೆಸರನನ್ನು ಅವನು ಪುನಃ ಕಾಣಲು ಶಕ್ತನಾಗಲಿಲ್ಲ. ಸುಲಭವಾಗಿ ನಿರಾಶೆಗೊಳ್ಳದವನಾಗಿ, ಪ್ರಚಾರಕನು ಕೆಲವು ಬೈಬಲ್ ಪ್ರಶ್ನೆಗಳೊಂದಿಗೆ ಪ್ರೊಫೆಸರನಿಗೆ ಒಂದು ಪತ್ರವನ್ನು ಬಿಟ್ಟುಹೋಗಲು ನಿರ್ಣಯಿಸಿದನು. ಅದು ಅವನ ಕುತೂಹಲವನ್ನು ಎಷ್ಟು ಕೆರಳಿಸಿತೆಂದರೆ ಬೈಬಲಿನ ಒಂದು ವಾಸ್ತವವಾದ ಪರೀಕ್ಷೆಯನ್ನು ಮಾಡಲು ಅವನು ಸಿದ್ದನಾದನು. ತಾನು ಕಂಡುಕೊಂಡ ವಿಷಯಗಳಿಂದ ಅವನೆಷ್ಟು ಅಚ್ಚರಿಗೊಂಡನೆಂದರೆ, ಅವನು ಮತ್ತು ಅವನ ಪತ್ನಿ, ಇಬ್ಬರೂ ಮುಸ್ಲಿಮರು, ಬೈಬಲನ್ನು ಒಟ್ಟಾಗಿ ಓದುವಂತೆ ನಿಶ್ಚಿತ ಸಂಜೆಗಳನ್ನು ಬದಿಗಿಟ್ಟರು.
ಮುಖ್ಯ ನಗರಗಳ ದೊಡ್ಡ ಚೀನೀ ಜನಸಂಖ್ಯೆಗೆ ಸಹಾಯ ಕೊಡಲು ಪ್ರಯತ್ನಿಸುವವರಿಗೆ, ಭಾಷಾ ತಡೆಗಟ್ಟಿಗೆ ಕೂಡಿಸಿ ಇನ್ನೊಂದು ಅಡಿಯ್ಡನ್ನು ಪರಿಹರಿಸಲಿಕ್ಕಿದೆ. ಹೆಚ್ಚಿನ ಚೀನೀಯರು ದೇವರನ್ನು ನಿರ್ಮಾಣಿಕನಾಗಿ ಅಥವಾ ಬೈಬಲನ್ನು ದೇವರ ವಾಕ್ಯವಾಗಿ ನಂಬುವುದಿಲ್ಲ. ಆದರೂ ಅವರು ಕುತೂಹಲವುಳ್ಳವರಾಗಿದ್ದಾರೆ ಮತ್ತು ಇದೆಲ್ಲಾ ಏನೆಂದು ತಿಳುಕೊಳ್ಳಲು ಬಯಸುತ್ತಾರೆ. ಅವರು ತೀವ್ರಾಭಿಲಾಷೆಯ ಓದುಗರೂ ಆಗಿದ್ದಾರೆ. ತಮ್ಮೊಂದಿಗೆ ಬಿಟ್ಟುಹೋದ ಯಾವುದೇ ಬೈಬಲ್ ಸಾಹಿತ್ಯವನ್ನು ಅಥವಾ ಬೈಬಲಿನ ಹೆಚ್ಚು ಅಂಶವನ್ನು ಸಹ ಕೆಲವೇ ದಿನಗಳಲ್ಲಿ ಓದಿ ಮುಗಿಸುವುದು ಅವರಿಗೇನೂ ಅಸಾಮಾನ್ಯವಲ್ಲ. ಅವರ ಹೃದಯವು ಯೋಗ್ಯವಾಗಿದ್ದರೆ, ದೇವರ ವಾಕ್ಯದ ಬಲದಿಂದ ಅವರು ಪ್ರೇರಿಸಲ್ಪಡುತ್ತಾರೆ.
ಒಬ್ಬಾಕೆ ಚೀನೀ ಮಹಿಳೆಯು ಒಬ್ಬ ನಿರ್ಮಾಣಿಕನ ಇರುವಿಕೆಯ ಕಲ್ಪನೆಯನ್ನು ಸ್ವೀಕರಿಸಲು ಬಹು ಕಷ್ಟಕರವಾಗಿ ಕಂಡಳು. ಆದರೆ ಎರಡನೆಯ ಅಭ್ಯಾಸದ ಸಮಯದಲ್ಲಿ, ಅವಳ ಕಣ್ಣುಗಳು ಅಶ್ರುಭರಿತವಾದವು, ಅವಳಂದದ್ದು: “ನಾನೀಗ ಯೆಹೋವ ದೇವರಲ್ಲಿ ನಂಬಿಕೆ ಇಡುತ್ತೇನೆ ಯಾಕಂದರೆ ಬೈಬಲು 1,600 ವರ್ಷಗಳ ಕಾಲಾವಧಿಯಲ್ಲಿ 40 ವಿವಿಧ ಪುರುಷರಿಂದ ಬರೆಯಲ್ಪಟ್ಟದ್ದಾಗಿದ್ದರೂ, ಒಂದೇ ಮುಖ್ಯ ವಿಷಯದೊಂದಿಗೆ ಸಂಪೂರ್ಣ ಸಹಮತದಲ್ಲಿದೆಯಾದರೆ, ಅದರ ಬರೆವಣಿಗೆಯನ್ನು ಯೆಹೋವ ದೇವರೇ ಮಾರ್ಗದರ್ಶಿಸಿದ್ದಿರಬೇಕು. ಅದೆಷ್ಟು ನ್ಯಾಯಸಮ್ಮತ!”
ಇನ್ನೊಬ್ಬ ಚೀನೀ ಮಹಿಳೆಯನ್ನು ಒಬ್ಬಾಕೆ ಸಾಕ್ಷಿಯು ಟ್ರ್ಯಾಂ ಬಂಡಿಯಲ್ಲಿ ಗೋಚರಿಸಿದಳು. “ನೀನು ಕ್ರೈಸ್ತಳೋ?” ಕೇಳಿದಳು ಆಕೆ ಸಾಕ್ಷಿಗೆ. ಕ್ರೈಸ್ತರೆನಿಸಿಕೊಳ್ಳುವವರ ನಡುವೆ ಅಷ್ಟು ವಿರೋಧಗಳನ್ನು ಕಾಣಲು ತಾನು ಬಹು ನಿರಾಶೆಗೊಡಿದ್ದೇನೆಂದು ಅವಳು ಅನಂತರ ಹೇಳಿದಳು. ಅವಳು ಅಂದದ್ದನ್ನು ಸಾಕ್ಷಿ ಒಪ್ಪಿದಳು, ಆದರೆ ಬೈಬಲು ತನಗೆ ತಾನೇ ವಿರುದ್ಧವಾಗಿಲ್ಲವೆಂದು ವಿವರಿಸಿದಳು. ಅಷ್ಟರಲ್ಲಿ ಆ ಮಹಿಳೆಗೆ ಟ್ರ್ಯಾಂ ಬಂಡಿಯಿಂದ ಇಳಿಯಬೇಕಾಯಿತು. ಅವಳು ಸಾಕ್ಷಿಗೆ ತನ್ನ ವಿಳಾಸವನ್ನು ಕೊಟ್ಟಳು, ಮತ್ತು ಸಾಕ್ಷಿಯು ಅವಳನ್ನು ಸಂದರ್ಶಿಸಿದಾಗ, ಮಹಿಳೆಯು ಉದ್ಗರಿಸಿದ್ದು: “ನನಗೆ ಗೊತ್ತಿರುತ್ತಿದ್ದರೆ, ನಾನು ಒಂದು ವರ್ಷಕ್ಕೆ ಮುಂಚೆಯೇ ಟ್ರ್ಯಾಂ ಹಿಡಿಯುತ್ತಿದ್ದೆನು!” ಅದರ ಅರ್ಥವೇನೆಂದು ಕೇಳಲು ಆ ಸ್ತ್ರೀ ಉತ್ತರಿಸಿದ್ದು: “ನಾನು ಯೂನಿವರ್ಸಿಟಿಗೆ ಟ್ರ್ಯಾಂ ನಲ್ಲಿ ಹೋದದ್ದು ಅದು ಪ್ರಥಮ ಬಾರಿ. ನೀನು ಊಹಿಸಬಲ್ಲಿಯೋ? ಒಂದು ವರ್ಷ ನಷ್ಟಮಾಡಿಕೊಂಡೆ!” ಚೀನಾ ದೇಶಕ್ಕೆ ಹಿಂತಿರುಗುವ ಮುಂಚೆ ಕೇವಲ ಕೆಲವು ತಿಂಗಳುಗಳಾದರೂ ಕೂಡ ತಾನು ಬೈಬಲಭ್ಯಾಸ ಮಾಡಲು ಶಕ್ತಳಾದದ್ದಕ್ಕಾಗಿ ಅವಳು ಬಹಳ ಸಂತೋಷಪಟ್ಟಳು.
ಈ ಅನುಭಗಳಂಥವುಗಳು ಬೆಲ್ಚಿಯನ್ ಸಾಕ್ಷಿಗಳಿಗೆ ಒಂದು ಪಾಠವನ್ನು ಕಲಿಸಿವೆ. “ಮುಂಜಾನೆ ಬೀಜ ಬಿತ್ತು, ಸಂಜೆಯ ತನಕ ಕೈದೆಗೆಯಬೇಡ,” ಅನ್ನುತ್ತದೆ ಬೈಬಲು, “ಇದು ಸಫಲವೋ, ಅದು ಸಫಲವೋ, ಒಂದುವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” (ಪ್ರಸಂಗಿ 11:6) ಭಾಷೆ, ಪದ್ಧತಿ, ಮತ್ತು ಸಂಪ್ರದಾಯದ ತಡೆಗಟ್ಟುಗಳನ್ನು ಪರಿಹರಿಸುವುದಕ್ಕೆ ಮಾಡಲ್ಪಟ್ಟ ಪ್ರಯತ್ನಗಳು ಫಲಿತಾಂಶಗಳಿಗೆ ಬಹು ಅರ್ಹವಾಗಿವೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ದೇವರು ನಿಜವಾಗಿಯೂ “ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ,” ಎಂಬದನ್ನು ಈ ಹೃದಯಪ್ರೇರಕ ಅನುಭವಗಳು ರುಜುಪಡಿಸುತ್ತವೆ.—ಅ. ಕೃತ್ಯಗಳು 10:34, 35.