ಹೊರತೋರಿಕೆಗಳು ಮೋಸಕರವಾಗಿರಬಲ್ಲವು
“ಹೊರತೋರಿಕೆಗಳನ್ನು ನಂಬುವುದಕ್ಕಾಗದು,” ಎಂದನು ಐರಿಷ್ ನಾಟಕಕಾರ ರಿಚರ್ಡ್ ಷೆರಿಡನ್. ಇದು ವೃಕ್ಷಗಳ ಹಾಗೂ ಜನರ ವಿಷಯದಲ್ಲಿ ಸತ್ಯವಾಗಿದೆ.
ಯೇಸು ಕ್ರಿಸ್ತನು ಸಾ.ಶ. 33 ರ ಮಾರ್ಚ್ನ ಕೊನೆಯ ಒಂದು ದಿನದಲ್ಲಿ ಒಂದು ಅಂಜೂರದ ಮರವನ್ನು ಕಂಡನು ಮತ್ತು ಅವನ ಶಿಷ್ಯರು ಬೇಥಾನ್ಯದಿಂದ ಯೆರೂಸಲೇಮಿಗೆ ನಡೆಯುತ್ತಾ ಇದ್ದರು. ಮರವು ತುಂಬಾ ಎಲೆಗಳನ್ನು ಬಿಟ್ಟಿತ್ತು, ಆದರೆ ಸಮೀಪ ಪರೀಕ್ಷೆಯು ಅದರಲ್ಲಿ ಯಾವ ಹಣ್ಣೂ ಇಲ್ಲದಿದದ್ದನ್ನು ಬಯಲುಪಡಿಸಿತು. ಆದುದರಿಂದ ಯೇಸು ಅದಕ್ಕೆ ಹೇಳಿದ್ದು: “ಇನ್ನು ಮೇಲೆ ಒಬ್ಬರೂ ನಿನ್ನಲ್ಲಿ ಹಣ್ಣನ್ನು ಎಂದೆಂದಿಗೂ ತಿನ್ನದ ಹಾಗಾಗಲಿ.”—ಮಾರ್ಕ 11:12-14.
“ಅದು ಅಂಜೂರದ ಹಣ್ಣಿನ ಕಾಲವಲ್ಲ” ಎಂದು ಮಾರ್ಕನು ವಿವರಿಸಿರಲಾಗಿ, ಯೇಸು ಅದನ್ನು ಶಪಿಸಿದ್ದಾದರೂ ಏಕೆ? (ಮಾರ್ಕ 11:13) ಒಳ್ಳೇದು, ಒಂದು ಅಂಜೂರದ ಮರವು ಎಲೆಗಳನ್ನು ಬಿಡುವಾಗ, ಸಾಮಾನ್ಯವಾಗಿ ಅದು ಹೊತ್ತಿಗೆ ಮುಂಚೆ ಅಂಜೂರಗಳನ್ನೂ ಉತ್ಪಾದಿಸುತ್ತದೆ. ವರ್ಷದ ಆ ಸಮಯದಲ್ಲಿ ಒಂದು ಅಂಜೂರದ ಮರಕ್ಕೆ ಎಲೆಗಳಿರುವುದು ಬಹಳ ಅಪರೂಪ. ಆದರೆ ಅದರಲ್ಲಿ ಎಲೆಗಳಿದದ್ದರಿಂದ, ಯೇಸು ಯೋಗ್ಯವಾಗಿ ಅದರಲ್ಲಿ ಅಂಜೂರದ ಹಣ್ಣುಗಳನ್ನು ನಿರೀಕ್ಷಿಸಿದ್ದನು. (ಮೇಲಿನ ಚಿತ್ರ ನೋಡಿರಿ.) ಮರವು ಎಲೆಗಳನ್ನು ಮಾತ್ರವೇ ಬಿಟ್ಟಿದ್ದ ನಿಜತ್ವವು, ಅದು ಫಲಕೊಡದ ಮರವಾಗಿರುವ ಅರ್ಥದಲ್ಲಿತ್ತು. ಅದರ ಹೊರ ತೋರ್ಕೆಯು ಮೋಸಕರವಾಗಿತ್ತು. ಫಲ ವೃಕ್ಷಗಳಿಗೆ ತೆರಿಗೆ ಹಾಕಲ್ಪಡುತ್ತಿದ್ದದರಿಂದ, ಒಂದು ಫಲಕೊಡದ ಮರವು ಒಂದು ಆರ್ಥಿಕ ಹೊರೆಯಾಗಿತ್ತು ಮತ್ತು ಕಡಿದುಹಾಕಲ್ಪಡುವ ಅಗತ್ಯವಿತ್ತು.
ಆ ಫಲಬಿಡದ ಅಂಜೂರದ ಮರವನ್ನು ನಂಬಿಕೆಯ ಕುರಿತಾದ ಒಂದು ಪ್ರಾಮುಖ್ಯ ಪಾಠವನ್ನು ಉದಾಹರಿಸುವುದಕ್ಕೆ ಯೇಸು ಉಪಯೋಗಿಸಿದನು. ಮಾರಣೆಯ ದಿನ ಅವನ ಶಿಷ್ಯರು, ಆ ಅಂಜೂರದ ಮರವು ಈವಾಗಲೇ ಒಣಗಿಹೋಗಿರುವುದನ್ನು ಕಂಡು ಆಶ್ಚರ್ಯಪಟ್ಟರು. ಯೇಸು ವಿವರಿಸಿದ್ದು: “ನಿಮಗೆ ದೇವರಲ್ಲಿ ನಂಬಿಕೆ ಇರಲಿ. . . . ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಾನು ಹೇಳುತ್ತೇನೆ.” (ಮಾರ್ಕ 11:22-24) ನಂಬಿಕೆಯಲ್ಲಿ ಪ್ರಾರ್ಥಿಸುವ ಅಗತ್ಯವನ್ನು ಉದಾಹರಿಸಿದ್ದು ಮಾತ್ರವಲ್ಲದೆ, ಆ ಒಣಗಿಹೋದ ಅಂಜೂರದ ಮರವು, ನಂಬಿಕೆ ಇಲ್ಲದ ಒಂದು ಜನಾಂಗಕ್ಕೆ ಏನು ಸಂಭವಿಸುವುದೆಂಬದನ್ನೂ ಸುಸ್ಪಷ್ಟವಾಗಿಗಿ ತೋರಿಸಿತು.
ಕೆಲವು ತಿಂಗಳ ಹಿಂದೆ ಯೇಸು ಯೆಹೂದ್ಯ ಜನಾಂಗವನ್ನು, ಮೂರು ವರ್ಷಗಳಿಂದ ಫಲಕೊಡದ ಮತ್ತು ಫಲಕೊಡದೇ ಹೋದಲ್ಲಿ ಕಡಿಯಲ್ಪಡಲಿದ್ದ ಒಂದು ಅಂಜೂರದ ಮರಕ್ಕೆ ಹೋಲಿಸಿದ್ದನು. (ಲೂಕ 13:6-9) ತನ್ನ ಮರಣಕ್ಕೆ ಕೇವಲ ನಾಲ್ಕು ದಿನಕ್ಕೆ ಮುಂಚೆ ಯೇಸು ಆ ಅಂಜೂರದ ಮರವನ್ನು ಶಪಿಸಿದ ಮೂಲಕ, ಯೆಹೂದ್ಯ ಜನಾಂಗವು ಹೇಗೆ ಪಶ್ಚಾತ್ತಾಪ ಯೋಗ್ಯವಾದ ಫಲಗಳನ್ನು ಉತ್ಪಾದಿಸಲಿಲ್ಲ ಮತ್ತು ಹೀಗೆ ನಾಶನದ ಸಾಲಿನಲ್ಲಿತ್ತೆಂಬದನ್ನು ತೋರಿಸಿಕೊಟ್ಟನು. ಆ ಜನಾಂಗವು—ಆ ಅಂಜೂರದ ಮರದಂತೆ—ಹೊರತೋರ್ಕೆಯಲ್ಲಿ ಆರೋಗ್ಯಕರವಾಗಿ ತೋರಿಬಂದರೂ, ಒಂದು ಸಮೀಪ ನೋಟವು, ಮೆಸ್ಸೀಯನ ತಿರಸ್ಕರಿಸುವಿಕೆಯಲ್ಲಿ ಕೊನೆಗೊಂಡ ನಂಬಿಕೆಯ ಒಂದು ಕೊರತೆಯನ್ನು ಪ್ರಕಟಪಡಿಸಿತು.—ಲೂಕ 3:8, 9.
ತನ್ನ ಪರ್ವತ ಪ್ರಸಂಗದಲ್ಲಿ ಯೇಸು, “ಸುಳ್ಳು ಪ್ರವಾದಿಗಳ” ವಿರುದ್ಧವಾಗಿ ಎಚ್ಚರಿಸಿದ್ದನು ಮತ್ತು ಅಂದದ್ದು: “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷೇಹಣ್ಣುಗಳನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವದುಂಟೇ? ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” (ಮತ್ತಾಯ 7:15-20) ಯೇಸುವಿನ ಈ ಮಾತುಗಳು ಮತ್ತು ಶಪಿಸಲ್ಪಟ್ಟ ಆ ಅಂಜೂರದ ಮರದ ವೃತ್ತಾಂತವು, ನಾವು ಆತ್ಮಿಕವಾಗಿ ಎಚ್ಚರವಾಗಿರುವ ಅಗತ್ಯವನ್ನು ಸ್ಪಷ್ಟವಾಗಿಗಿ ತೋರಿಸುತ್ತವೆ, ಯಾಕಂದರೆ ಧಾರ್ಮಿಕ ಹೊರತೋರಿಕೆಗಳು ಸಹ ಮೋಸಕರವಾಗಿರಬಲ್ಲವು. (w92 11/15)