ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 2/15 ಪು. 30
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ಯೇಸು ಕ್ರಿಸ್ತನು ಮೋಶೆಯಂಥ ಪ್ರವಾದಿ ಆಗಿದ್ದನು ಹೇಗೆ?
    ಕಾವಲಿನಬುರುಜು—1992
  • ಮೋಶೆಯಲ್ಲಿದ್ದಂಥ ನಂಬಿಕೆ ನಿಮ್ಮಲ್ಲೂ ಇರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಮಹಾ ಮೋಶೆಯನ್ನು ಮಾನ್ಯಮಾಡುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಕಾವಲಿನಬುರುಜು—1993
w93 2/15 ಪು. 30

ವಾಚಕರಿಂದ ಪ್ರಶ್ನೆಗಳು

ಇಬ್ರಿಯರಿಗೆ 11:26 ರಲ್ಲಿ ಮೋಶೆಯು “ಕ್ರಿಸ್ತ”ನಾಗಿ ಹೇಳಲ್ಪಟ್ಟಿದ್ದಾನೋ ಅಥವಾ ಅವನು ಯೇಸು ಕ್ರಿಸ್ತನ ಒಂದು ಚಿತ್ರರೂಪವಾಗಿದ್ದನೋ?

ಮೋಶೆಯ ನಂಬಿಕೆಯನ್ನು ಚರ್ಚಿಸುವಾಗ, ಮೋಶೆಯು, “ಐಗುಪ್ತದೇಶದ ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠಭಾಗ್ಯವೆಂದೆಣಿಕೊಂಡನು; ಯಾಕಂದರೆ ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು” ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿಯ 11:26) ಪೌಲನು ಮೋಶೆಯನ್ನು ಒಂದು ಅರ್ಥದಲ್ಲಿ “ಕ್ರಿಸ್ತ” ನಾಗಿ ಅಥವಾ ಅಭಿಷಿಕ್ತನಾಗಿ ನಿರ್ದೇಶಿಸುತ್ತಿರುವಂತೆ ತೋರುತ್ತದೆ.

ಹಲವಾರು ವಿಷಯಗಳಲ್ಲಿ ಮೋಶೆಯು ಬರಲಿರುವ ಮೆಸ್ಸೀಯನಿಗೆ ಒಂದು ಮಾದರಿಯಾಗಿದ್ದನೆಂಬದು ಗ್ರಾಹ್ಯ. ಮೋಶೆಯು ತಾನೇ ಒಬ್ಬ ಪ್ರವಾದಿಯಾಗಿದ್ದರೂ, ‘ಅವನಂಥ’ ಮಹಾ ಪ್ರವಾದಿಯೊಬ್ಬನ ಬರೋಣವನ್ನು ಅವನು ಮುಂತಿಳಿಸಿದ್ದನು. ಅನೇಕ ಯೆಹೂದ್ಯರು ಯೇಸುವು “ಆ ಪ್ರವಾದಿ” ಎಂದು ಅರಿತಿದ್ದರು, ಅದನ್ನು ಆತನ ಹಿಂಬಾಲಕರು ದೃಢಪಡಿಸಿದ್ದರು. (ಧರ್ಮೋಪದೇಶಕಾಂಡ 18:15-19; ಯೋಹಾನ 1:21; 5:46; 6:14; 7:40; ಅ. ಕೃತ್ಯಗಳು 3:22, 23; 7:37) ಮೋಶೆಯು ನಿಯಮದೊಡಂಬಡಿಕೆಯ ಮಧ್ಯಸ್ಥನೂ ಆಗಿದ್ದನು, ಆದರೆ ಯೇಸು ಮಹಿಮೆಯುಳ್ಳ ಹೊಸ ಒಡಂಬಡಿಕೆ, “ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿ” ರುವ ಒಂದು “ಶ್ರೇಷ್ಠವಾದ ಯಾಜಕೋದ್ಯೋಗವನ್ನು” ಪಡೆದಿದ್ದಾನೆ. (ಇಬ್ರಿಯ 8:6; 9:15; 12:24; ಗಲಾತ್ಯ 3:19; 1 ತಿಮೊಥೆಯ 2:5) ಹೀಗೆ ಕೆಲವು ವಿಷಯಗಳಲ್ಲಿ ಮೋಶೆಯು ಬರಲಿರುವ ಮೆಸ್ಸೀಯನ ಒಂದು ಚಿತ್ರರೂಪವಾಗಿದ್ದನೆಂದು ಹೇಳಬಹುದಾಗಿದೆ.

ಆದರೂ ಅದು ಇಬ್ರಿಯ 11:26 ರ ಪ್ರಧಾನ ಅರ್ಥವಾಗಿರುವಂತೆ ತೋರುವುದಿಲ್ಲ. ಐಗುಪ್ತದಲ್ಲಿ ತಾನೇನನ್ನು ಅನುಭವಿಸಿದನೋ ಅದನ್ನು ಮೆಸ್ಸೀಯನ ನಿಮಿತ್ತವಾಗಿ ಅಥವಾ ಆತನ ಪ್ರತಿನಿಧಿತ್ವದಲ್ಲಿ ಶ್ರೇಷ್ಠಭಾಗ್ಯವೆಂದೆಣಿಸಿ ಮಾಡುವಂತೆ, ಮೋಶೆಗೆ ಮೆಸ್ಸೀಯನ ಕುರಿತಾದ ವಿವರಗಳು ತಿಳಿದಿದ್ದವೆಂಬದಕ್ಕೆ ಯಾವ ಸೂಚನೆಯೂ ಇಲ್ಲ.

ಕ್ರೈಸ್ತರು “ಕ್ರಿಸ್ತನ ನಿಮಿತ್ತ ಬಾಧೆ” ಗಳನ್ನು ಅನುಭವಿಸಿದ ಅವನ ಹೇಳಿಕೆಗೆ ಸಮಾನವಾದ ಅರ್ಥವನ್ನು ಇಬ್ರಿಯ 11:26 ರ ಪೌಲನ ಮಾತುಗಳೂ ಕೊಡುತ್ತವೆ ಎಂದು ಕೆಲವರು ಸೂಚಿಸಿದ್ದಾರೆ. (2 ಕೊರಿಂಥ 1:5) ಯೇಸು ಕ್ರಿಸ್ತನು ಕಷ್ಟವನ್ನು ಅನುಭವಿಸಿದನ್ದೆಂದೂ ಮತ್ತು ಅವರು ಅವನ ‘ಬಾಧೆಗಳಲ್ಲಿ ಪಾಲುಗಾರರಾಗುವದಾದರೆ (ಪರಲೋಕದಲ್ಲಿ) ಮಹಿಮೆಯಲ್ಲಿಯೂ ಪಾಲುಗಾರರಾಗುವರು’ ಎಂದೂ ಅಭಿಷಿಕ್ತ ಕ್ರೈಸ್ತರಿಗೆ ತಿಳಿದಿತ್ತು. ಆದರೆ ಬರಲಿರುವ ಮೆಸ್ಸೀಯನು ಏನನ್ನು ಅನುಭವಿಸುವನೆಂದು ಮೋಶೆಗೆ ತಿಳಿದಿರಲಿಲ್ಲ, ಅಲ್ಲದೆ, ಒಂದು ಸ್ವರ್ಗೀಯ ನಿರೀಕ್ಷೆಯೂ ಮೋಶೆಗೆ ಇರಲಿಲ್ಲ.—ರೋಮಾಪುರ 8:17; ಕೊಲೊಸ್ಸೆ 1:24.

ಮೋಶೆಯು “ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠಭಾಗ್ಯವೆಂದೆಣಿಕೊಂಡದ್ದು” ಹೇಗೆಂಬದರ ಒಂದು ಸರಳವಾದ ತಿಳಿವಳಿಕೆಯು ಇದೆ.

ಇಬ್ರಿಯ 11:26 ರಲ್ಲಿ ಪೌಲನು “ಕ್ರಿಸ್ತನು” ಎಂದು ಬರೆದಾಗ, ಅವನು ಕ್ರಿಸ್ಟಾವ್‌ ಎಂಬ ಗ್ರೀಕ್‌ ಪದವನ್ನು ಉಪಯೋಗಿಸಿದನು, ಇದು ಹೀಬ್ರು ಮಶೀಯಾಕ್‌, ಅಥವಾ ಮೆಸ್ಸೀಯಗೆ ಸಮಾನಾರ್ಥವುಳ್ಳ ಪದವಾಗಿದೆ. “ಮೆಸ್ಸೀಯ” ಮತ್ತು “ಕ್ರಿಸ್ತ” ಈ ಎರಡರ ಅರ್ಥವೂ “ಅಭಿಷಿಕ್ತನು” ಎಂದಾಗಿದೆ. ಹೀಗೆ ಮೋಶೆಯು ‘ಅಭಿಷಿಕ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠಭಾಗ್ಯವೆಂದೆಣಿಕೊಂಡ’ ಕುರಿತಾಗಿ ಪೌಲನು ಬರೆದಿದ್ದಾನೆ. ಸ್ವತಃ ಮೋಶೆಯನ್ನು “ಅಭಿಷಿಕ್ತನು” ಎಂದು ಕರೆಯ ಸಾಧ್ಯವಿದೆಯೇ?

ಹೌದು. ಬೈಬಲ್‌ ಸಮಯಗಳಲ್ಲಿ ಒಬ್ಬ ವ್ಯಕ್ತಿಯ ತಲೆಯ ಮೇಲೆ ತೈಲವನ್ನು ಸುರಿಯುವ ಮೂಲಕ ಅವನನ್ನು ಒಂದು ವಿಶೇಷ ಅಧಿಕಾರ ಸ್ಥಾನಕ್ಕೆ ದೃಢೀಕರಿಸಬಹುದಿತ್ತು. “ಸಮುವೇಲನು ಎಣ್ಣೇ ಕುಪ್ಪಿಯಿಂದ ಅವನ [ಸೌಲನ] ತಲೆಯ ಮೇಲೆ ತೈಲವನ್ನು ಹೊಯ್ದನು.” “ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು [ದಾವೀದನನ್ನು] ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೇ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು.” (ಸಮುವೇಲ 10:1; 16:13; ಹೋಲಿಸಿರಿ ವಿಮೋಚನಕಾಂಡ 30:25, 30; ಯಾಜಕಕಾಂಡ 8:12; 2 ಸಮುವೇಲ 22:51; ಕೀರ್ತನೆ 133:2.) ಆದರೂ, ಪ್ರವಾದಿಯಾದ ಎಲೀಷ ಮತ್ತು ಸಿರಿಯದ ರಾಜ ಹಜಾಯೇಲನಂಥ ಕೆಲವರು, ಅವರ ಮೇಲೆ ಅಕ್ಷರಾರ್ಥ ತೈಲವು ಸುರಿಯಲ್ಪಟ್ಟ ಯಾವ ರುಜುವಾತು ಇಲ್ಲದಿದ್ದರೂ “ಅಭಿಷಿಕ್ತ” ರಾಗಿ ಸಂಬೋಧಿಸಲ್ಪಟ್ಟಿದ್ದಾರೆ. (1 ಅರಸು 19:15, 16; ಕೀರ್ತನೆ 105:14, 15; ಯೆಶಾಯ 45:1) ಆದಕಾರಣ, ಆಯ್ಕೆಹೊಂದಿದ ಮೂಲಕ ಅಥವಾ ವಿಶೇಷ ನಿಯೋಗವನ್ನು ಪಡೆದ ಮೂಲಕ ಒಬ್ಬ ವ್ಯಕ್ತಿಯು “ಅಭಿಷಿಕ್ತನು” ಆಗಿರ ಸಾಧ್ಯವಿದೆ.

ಈ ಅರ್ಥದಲ್ಲಿ ಮೋಶೆಯು ಸ್ವತಃ ದೇವರ ಅಭಿಷಿಕ್ತನಾಗಿದ್ದನು, ಮತ್ತು ಕೆಲವು ಬೈಬಲುಗಳು ಇಬ್ರಿಯರಿಗೆ 11:26 ರಲ್ಲಿ “ದೇವರ ಅಭಿಷಿಕ್ತನು” ಅಥವಾ “ಅಭಿಷಿಕ್ತನು” ಎಂಬ ತರ್ಜುಮೆಗಳನ್ನು ಸಹ ನೀಡಿವೆ. ಮೋಶೆಯು ಯೆಹೋವನ ಪ್ರತಿನಿಧಿಯಾಗಿ ನಿಯೋಗವನ್ನು ಹೊಂದಿದವನು ಮತ್ತು ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಹೊರತಂದವನಾಗಿದ್ದನು. (ವಿಮೋಚನಕಾಂಡ 3:2-12, 15-17) ಐಗುಪ್ತದ ಐಶ್ವರ್ಯ ಮತ್ತು ವೈಭವದ ನಡುವೆ ಮೋಶೆಯು ಬೆಳೆದವನಾಗಿದ್ದರೂ, ತಾನು ಸ್ವೀಕರಿಸಿದ ಮತ್ತು ನೆರವೇರಿಸಿದ ತನ್ನ ನಿಯೋಗವನ್ನು ಅತಿ ಮಹತ್ವದ್ದಾಗಿ ನೆಚ್ಚಿದ್ದನು. ಇದಕ್ಕನುಗುಣವಾಗಿ, ಮೋಶೆಯು “ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠಭಾಗ್ಯವೆಂದೆಣಿಸಿಕೊಂಡನು,” ಎಂಬದಾಗಿ ಪೌಲನು ಬರೆಯಶಕ್ತನಾದನು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ