ನಮಗೋಸ್ಕರ ಯೆಹೋವನು ಮಾಡಿರುವದನ್ನು ನೋಡಿರಿ!
“ಅಂಥ ಒಂದು ಸಂದರ್ಭಕ್ಕಾಗಿ ನಾವು ಪ್ರಾರ್ಥಿಸುತ್ತಿದ್ದೆವು,” ಎಂದು ಒಬ್ಬನಂದನು. ಮತ್ತೊಬ್ಬನು ಪ್ರತಿ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಪ್ರಾರ್ಥಿಸಿದನು. ಏತಕ್ಕಾಗಿ? ಆತನಂದದ್ದು “ಎಂದೋ ಒಂದು ದಿನ ಯೆಹೋವನನ್ನು ಬಹಿರಂಗವಾಗಿ ಆರಾಧಿಸಲು ನಮಗೆ ಸ್ವಾತಂತ್ರ್ಯವಿರುವದಕ್ಕಾಗಿ.” ಜನವರಿ 1992 ರಲ್ಲಿ, ಇಥಿಯೋಪ್ಯದ ಯೆಹೋವನ ಸಾಕ್ಷಿಗಳು ಆ್ಯಡಿಸ್ ಆಬಬಾದಲ್ಲಿ ತಮ್ಮ “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಕ್ಕೆ ಕೂಡಿಬಂದಾಗ ಈ ನಮ್ರ ಮತ್ತು ನಿಷ್ಕಪಟವಾದ ಪ್ರಾರ್ಥನೆಗಳು ಉತ್ತರಿಸಲ್ಪಟ್ಟಿದ್ದವೆಂದು ಸ್ಪಷ್ಟವಾಗಿಯಿತು.
ಇಥಿಯೋಪ್ಯದ ಅಧಿವೇಶನವು, ಆಫ್ರಿಕದಲ್ಲಿ ಸಂಗತಿಗಳು ಹೇಗೆ ಬದಲಾಗುತ್ತಿವೆ ಎಂಬುದಕ್ಕೆ ಸೂಚನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿಯ ನಿಷೇಧಿಸಲ್ಪಟ್ಟ ಅಥವಾ ನಿರ್ಬಂಧಿಸಲ್ಪಟ್ಟ 13 ದೇಶಗಳಲ್ಲಿ ಶಾಸನ ಸಮ್ಮತ ಸ್ವಾತಂತ್ರ್ಯವನ್ನು ಸ್ವೀಕರಿಸಲು ಯೆಹೋವನ ಜನರು ಸಂತೋಷಿಸಿದ್ದಾರೆ. ಇಥಿಯೋಪಿಯದದಲ್ಲಿನ 34 ವರ್ಷಗಳ ಸರಕಾರಿ ನಿರ್ಬಂಧವು ನೊವೆಂಬರ್ 11, 1991 ರಲ್ಲಿ ಮುಕ್ತಾಯವಾಯಿತು, ಸರಕಾರಿ ಅಧಿಕಾರಿಗಳು ಸಮ್ಮತಿಗೆ ಅನುಮತಿಸಿದರು ಮತ್ತು ರೆಜಿಸ್ಟ್ರೇಶನ್ ಮಾಡಲಾಯಿತು. ತಕ್ಷಣವೇ ಸಾಕ್ಷಿಗಳು ಅಂತಾರಾಷ್ಟ್ರೀಯ ಅಧಿವೇಶನವನ್ನು ನಡೆಸಲು ಏರ್ಪಾಡು ಮಾಡಿದರು. ಆದರೂ ಆ್ಯಡಿಸ್ ಆಬಬಾ ನಗರದ ಕ್ರೀಡಾಂಗಣದಲ್ಲಿ ನೆರೆದ 7,573 ಜನರನ್ನು ನೋಡುವಾಗ ಪ್ರತಿಯೊಬ್ಬರಿಗೂ ಊಹೆಗೂ ಮೀರಿದ ಸಂತೋಷವಾಗಿತ್ತು. ಒಟ್ಟುಗೂಡಿದ ಅನೇಕರಿಗೆ ಇದು ಸ್ವಪ್ನವನ್ನು ನೋಡುತ್ತಿರುವ ಹಾಗಿತ್ತು. ಪದೇ ಪದೇ ಅವರು ಮತ್ತೊಬ್ಬರಿಗೆ ಹೀಗೆ ಹೇಳುತ್ತಿದ್ದರು: “ಸಹೋದರರೆ, ನಮಗೋಸ್ಕರ ಯೆಹೋವನು ಮಾಡಿರುವ ಕಾರ್ಯಗಳನ್ನು ನೋಡಿರಿ!”—ಹೋಲಿಸಿರಿ ಕೀರ್ತನೆ 66:1-5; 126:1.
ಅವರು 34 ವರ್ಷ ನಿಷೇಧಕ್ಕೊಳಪಟ್ಟ ಕಾರಣ, ಕೆಲವೊಂದು ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅನೇಕರಿಗೆ ಸುಂದರವಾದ ರಾಜ್ಯ ಸಂಗೀತಗಳ ಪರಿಚಯವಿರಲಿ. ಅಧಿವೇಶನವು ಆರಂಭವಾಗುವ ಮುಂಚೆ ಅವರು ಹಾಡುಗಳನ್ನು ಹೇಗೆ ಕಲಿಯುವರು? ಅಧಿವೇಶನದ ಕಾರ್ಯಕ್ರಮದಲ್ಲಿ ಉಪಯೋಗಿಸುವ 17 ಹಾಡುಗಳೊಟ್ಟಿಗೆ 40 ಹಾಡುಗಳನ್ನು ಆ್ಯಮ್ಹ್ಯಾರಿಕ್ ಭಾಷೆಗೆ ಅನುವಾದಿಸಲಾಯಿತು. ಬಳಿಕ, ಆಡಿಯೊ ಕ್ಯಾಸೆಟ್ನಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಲು ವಿಶೇಷ ಗಾಯಕಮಂಡಳಿಯನ್ನು ರಚಿಸಲಾಯಿತು. ರಾಜಧಾನಿಯಲ್ಲಿರುವ ಪ್ರತಿಯೊಂದು ಸಭೆಗೆ ಟೇಪಿನ ಪ್ರತಿಯನ್ನು ಕೊಡಲಾಯಿತು. ಮತ್ತು ಕೂಟಗಳ ಆರಂಭಕ್ಕೆ ಮುಂಚೆ ಮತ್ತು ಆ ಮೇಲೆ ಇಡೀ ಸಭೆ 30 ನಿಮಿಷಗಳ ವರೆಗೆ ಸಂಗೀತಗಳನ್ನು ಅಭ್ಯಾಸಮಾಡಿತು. ಅದರ ಪರಿಣಾಮ? ಅಧಿವೇಶನದ ಸಮಯದಲ್ಲಿ ಕ್ರೀಡಾಂಗಣವು ಪೂರ್ಣಹೃದಯದ ಮತ್ತು ಹರ್ಷದ ಹಾಡುಗಳಿಂದ ತುಂಬಿತ್ತು.
ದೇಶದ ಪೂರ್ವ ಭಾಗದಲ್ಲಾದ ಆತಂಕಗಳಿಂದ ಡಿರಿಡವಾ ಮತ್ತು ಹಾರರ್ಗಳಿಂದ ರಾಜಧಾನಿಗೆ ಹೋಗುವ ರಸ್ತೆ ಸಂಪರ್ಕವು ಕಡಿದುಹೋಗಿತ್ತು. ಅಲ್ಲಿಗೆ ಪ್ರಯಾಣಿಸಲು ಇರುವ ಒಂದೇ ಮಾರ್ಗವೆಂದರೆ ವಿಮಾನದ ಮೂಲಕವೆ. ವಿಮಾನದ ಟಿಕೇಟ್ಗೆ ವ್ಯಯಮಾಡಲು ಶಕ್ತರಾಗಿರದಿದ್ದರೂ ಅಧಿವೇಶನಕ್ಕೆ ಹಾಜರಾಗಲು ನಿಶ್ಚಯಿಸಿದ ಎಂಟು ಸಹೋದರರು ಹಾರರ್ನಲ್ಲಿರುವ ಮಿಲಿಟರಿ ತಾಣಕ್ಕೆ ಹೋಗಿ ಸೈನಿಕರ ವಿಮಾನಗಳ ಮೂಲಕ ತಮ್ಮನ್ನು ತಲುಪಿಸುವಂತೆ ವಿನಂತಿಸಿದರು. ಅವರಿಗೆ ಆಶ್ಚರ್ಯವಾಗುವಂತೆ, ವಿನಂತಿಗೆ ಸಮ್ಮತಿ ದೊರಕಿತು. ಅಧಿವೇಶನಕ್ಕೆ ಹಾಜರಾಗಲು ಅವರಿಗೆ ಉಚಿತ ಪ್ರಯಾಣವೇರ್ಪಡಿಸಲ್ಪಟ್ಟಿತು.
ಮೂರು ದಶಕಗಳಿಂದ ತೊಂದರೆಗಳನ್ನೂ, ಹಿಂಸೆಗಳನ್ನೂ ತಾಳಿದ್ದ ಮತ್ತು ವಿಶ್ವಾಸದ ಕಾರಣ ತಮ್ಮ ಗೆಳೆಯರು ಹತಿಸಲ್ಪಟ್ಟದ್ದನ್ನೂ ಕಂಡಿದ್ದ ಇವರ ಪ್ರಾರ್ಥನೆಯನ್ನು ಯೆಹೋವನು ಉತ್ತರಿಸಿದ್ದಕ್ಕಾಗಿ ಇಥಿಯೋಪ್ಯದ ಸಹೋದರರಿಗೆ ಸಂತೋಷದ ಕಂಬನಿಗಳುರುಳಿದವು. ಒಬ್ಬ ಪ್ರತಿನಿಧಿ ಹೇಳಿದ್ದು: “ನಾನು ಅಧಿವೇಶನದ ಆರಂಭದಿಂದಲೂ ಅತೆನ್ತು.” ಮತ್ತೊಬ್ಬನಂದದ್ದು: “ನಿಮಗೆ ಹೃದಯಗಳನ್ನೋದುವ ಸಾಮರ್ಥ್ಯಗಳಿದ್ದರೆ ನಾನು ಎಷ್ಟು ಸಂತೋಷವಾಗಿದ್ದೇನೆಂದು ನೀವು ಕಾಣಬಹುದು.” ಹೌದು, ಈ ನಂಬಿಗಸ್ತ ಸಾಕ್ಷಿಗಳಿಗೆ ಯೆಹೋವನು ಎಂಥ ಆಶ್ಚರ್ಯಕರ ಕಾರ್ಯಗಳನ್ನು ಮಾಡಿದ್ದಾನೆ!—ಕೀರ್ತನೆ 66:16, 19.
ಪಶ್ಚಿಮ ಮತ್ತು ಮಧ್ಯ ಆಫ್ರಿಕಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ
ಯೆಹೋವನ ಸಾಕ್ಷಿಗಳ ಕಾರ್ಯಕ್ಕೆ ನ್ಯಾಯಸಮ್ಮತಿ ದೊರಕಿದ ಇನ್ನೊಂದು ದೇಶ ಬೆನಿನ್. ಅದರ ಬಗ್ಗೆ ಸಾಕ್ಷಿಗಳು ಯಾವ ಅಭಿಪ್ರಾಯ ಹೊಂದಿದ್ದಾರೆ? ಒಬ್ಬ ಭಾಷಣಕರ್ತನು ಅಲ್ಲಿಯ ಒಂದು ಕ್ರೈಸ್ತಕೂಟದಲ್ಲಿ ಹೇಳುವದು: “ಈ ದೇಶದಲ್ಲಿ ಆರಾಧನಾ ಸ್ವಾತಂತ್ರ್ಯವು ಯೆಹೋವನಿಂದ ಬಂದ ಕೊಡುಗೆಯಾಗಿದೆ.” ಹೌದು, ಆರಾಧನೆಯಲ್ಲಿ ಒಟ್ಟು ಸೇರುವ ಮತ್ತು ತಮ್ಮ ನೆರೆಯವರೊಂದಿಗೆ ಯೆಹೋವನ ರಾಜ್ಯದ ಕುರಿತು ಮಾತಾಡುವ ವಿಷಯದಲ್ಲಿ ಈಗ ಅವರು ಅನಿರ್ಬಂಧಿತ ಸ್ವಾತಂತ್ರ್ಯದಲ್ಲಿ—ನಮ್ಮಲ್ಲಿ ಅನೇಕರು ಮಾಮೂಲಿಯಾಗಿ ತಕ್ಕೊಳುವ ಸ್ವಾತಂತ್ರ್ಯಗಳು—ಆನಂದಿಸ ಸಾಧ್ಯವಾಗಿರುವದರಿಂದ ಅಲ್ಲಿಯ ಯೆಹೋವನ ಸೇವಕರು ಆಳವಾಗಿ ಆಭಾರಿಗಳಾಗಿರುತ್ತಾರೆ.
ಅವರು ಹೇಗೆ ತಮ್ಮ ಸಂತೋಷವನ್ನು ತೋರಿಸುವರು? ಮೇಲೆ ಹೇಳಿದ ಬಾಷಣಕರ್ತನು ಒಂದು ಮಾರ್ಗವನ್ನು ಸೂಚಿಸುತ್ತಾ ಹೇಳುವದು: “ನಾವು ಶುಶ್ರೂಷೆಯಲ್ಲಿ ಭಾಗಿಗಳಾಗಿರುವುದು—ವಿಶೇಷವಾಗಿ ಮನೆಯಿಂದ ಮನೆಗೆ ಸುವಾರ್ತೆಯೊಂದಿಗೆ ಹೋಗುವದು—ನಮಗೆ ದೊರಕಿದ ಬಿಡುಗಡೆಗೆ ಗಣ್ಯತೆಯನ್ನು ಪ್ರತಿಬಿಂಬಿಸುತ್ತದೆ.” ಬೆನಿನ್ನಲ್ಲಿ ನಿಶ್ಚಯವಾಗಿಯೂ ಇದು ನಿಜ. ರುಜುವಾತಿಗನುಸಾರ ಪಯನೀಯರರ ಅಂಕಿಗಳತ್ತ ನೋಡಿರಿ. ಜನವರಿ 1990 ರಲ್ಲಿ, 14 ವರ್ಷಗಳ ನಿರ್ಬಂಧ ತೆಗೆದಾಗ 77 ಪ್ರಚಾರಕರು ಕ್ರಮದ ಪೂರ್ಣಸಮಯದ ಸೇವೆಯಲ್ಲಿ ತಲ್ಲೀನರಾಗಿದ್ದರು. ಎರಡು ವರ್ಷಗಳ ನಂತರ ಅದು ಮುಮ್ಮಡಿಗಿಂತ ಹೆಚ್ಚಾಗಿ, 244 ಕ್ಕೇರಿತು!
ನಿರ್ಬಂಧ ತೆಗೆಯುವದಕ್ಕೆ ಮುಂಚೆ ಬೆನಿನ್ನಲ್ಲಿರುವ ಸಾಕ್ಷಿಗಳು ಕ್ರಿಯಾಶೀಲರಾಗಿದ್ದಿಲ್ಲವೆಂದಲ್ಲ. ವಾಸ್ತವದಲ್ಲಿ ಅವರ ತಾಳ್ಮೆಯು, ಅವರನ್ನು, ದಸ್ತಗಿರಿ ಮಾಡಿದ ಮೇಲೆ ತಂದು ಬಂಧನದಲ್ಲಿಟ್ಟ ಶಿಬಿರವನ್ನು ನೋಡಿಕೊಳ್ಳಲು ನೇಮಿಸಲ್ಪಟ್ಟ ಒಬ್ಬ ಸೈನಿಕ ಅಧಿಕಾರಿಯ ಮೇಲೆ ಆಳವಾದ ಪರಿಣಾಮ ಬೀರಿತು. ಅವರು ಯೆಹೋವನನ್ನು ಸೇವಿಸಲು ಮಾಡಿದ ನಿರ್ಧಾರ ಪದೇ ಪದೇ ದಸ್ತಗಿರಿಗೆ ನಡಿಸಿದ್ದರಿಂದ ಆತನು ಅವರೊಟ್ಟಿಗೆ ಎಡೆಬಿಡದ ಸಂಪರ್ಕಕ್ಕೆ ಬರುವಂತಾಯಿತು. ಆದರೆ ಇದು ಕೇವಲ ಅವನಿಗೆ ಮೊದಲು, ಅನಿರ್ಬಂಧಿತ ಸಮಯದಲ್ಲಿ ಅವರೊಟ್ಟಿಗೆ ನಡೆಸಿದ ಸಂತೋಷಕರವಾದ ಬೈಬಲ್ ಚರ್ಚೆಗಳನ್ನು ನೆನಪಿಗೆ ತರಲು ಸಹಾಯ ಮಾಡಿತು.
ಕೊನೆಯದಾಗಿ, ಅವರ ಬಲವಾದ ನಂಬಿಕೆ ಅವನಲ್ಲಿ ಆತ್ಮಿಕ ಹಸಿವೆಯನ್ನು ಎಚ್ಚರಿಸಿತು. ಅವನು ವಿವಿಧ ಚರ್ಚುಗಳನ್ನು ಮತ್ತು ಒಳಪಂಗಡಗಳನ್ನು ಸಂದರ್ಶಿಸಿದನು. ಆದರೆ ಇದು ಆತನ ಹಸಿವನ್ನು ಎಂದಿಗೂ ತೃಪ್ತಿಗೊಳಿಸಲಿಲ್ಲ. ಆ ಮೇಲೆ 1990 ರ ಜನವರಿಯಲ್ಲಿ ನಿರ್ಬಂಧ ತೆಗೆದ ನಂತರ ಆತನಿಗೆ ಸಾಕ್ಷಿಗಳೊಟ್ಟಿಗೆ ಅಡಚಣೆಯಿಲ್ಲದೇ ಬೈಬಲ್ ಚರ್ಚೆ ಮಾಡಸಾಧ್ಯವಾಯಿತು. ಹೀಗೆ ಆತನು ತನ್ನ ಆತ್ಮಿಕ ಅಗತ್ಯತೆಗೆ ಉತ್ತರವನ್ನು ಕಂಡುಕೊಂಡನು. ಆತನು ಈಗ ದೀಕ್ಷಾಸ್ನಾನ ಹೊಂದಿ ಪಯನೀಯರನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಒಂದು ರೀತಿಯಲ್ಲಿ, ಆತನ ಬದಲಾವಣೆಯು ತಾರ್ಸದ ಸೌಲನಿಗೆ ಸಂಭವಿಸಿದ್ದನ್ನು ಬೆನಿನ್ ಸಹೋದರರಿಗೆ ನೆನಪಿಸುತ್ತದೆ: “ಪೂರ್ವದಲ್ಲಿ ನಮ್ಮನ್ನು ಹಿಂಸೆ ಪಡಿಸಿದವನು ತಾನು ಹಾಳು ಮಾಡುತ್ತಿದ್ದ ಮತವನ್ನು ಈಗ ಪ್ರಸಿದ್ಧಿಪಡಿಸುತ್ತಾನೆ.”—ಗಲಾತ್ಯ 1:23.
ಡಿಸೆಂಬರ್ 1991 ರಲ್ಲಿ, ಪಶ್ಚಿಮ ಆಫ್ರಿಕದ ಇನ್ನೊಂದು ದೇಶವಾದ ನೈಜರ್ನಲ್ಲಿ ಯೆಹೋವನ ಸಾಕ್ಷಿಗಳು ಕಾನೂನು ಸಮ್ಮತ ಸಂಸ್ಥೆಯೆಂದು ರೆಜಿಸರ್ಟ್ ಮಾಡಲಾಯಿತು. ಅವರ ಕಾರ್ಯಗಳ ಮೇಲೆ ನಿರ್ಬಂಧವು ಮುಕ್ತಾಯವಾಯಿತು. ಇಲ್ಲಿ ಕೂಡ ಸಂಭ್ರಮದ ಪ್ರತಿಕ್ರಿಯೆ ಇತ್ತು. ನೈಜರನ್ನು ನೋಡಿಕೊಳ್ಳುತ್ತಿರುವ ನೈಜೀರಿಯ ಶಾಖೆ, ಅಧಿವೇಶನದ ಪ್ರತಿಕ್ರಿಯೆಯ ಬಗ್ಗೆ ವರದಿಸುವದು: “ಮೆರಾಡಿ ಅಧಿವೇಶನದಲ್ಲಿ ಶುಕ್ರವಾರ ಮುಖ್ಯ ಭಾಷಣದ ನಂತರ ನೈಜರ್ನಲ್ಲಿ ನ್ಯಾಯಸಮ್ಮತಿ ದೊರಕಿದ ಬಗ್ಗೆ ಸಹೋದರರಿಗೆ ಪ್ರಕಟಿಸಲಾಯಿತು. ಅವರೆಲ್ಲ ಭಾವೋದ್ರೇಕಗೊಂಡು ಅನೇಕ ನಿಮಿಷಗಳ ವರೆಗೆ ಚಪ್ಪಾಳೆ ತಟ್ಟಿದರು. ಅಧಿವೇಶನದ ಮುಕ್ತಾಯದಲ್ಲಿ ಸಹೋದರರು ತುಂಬಾ ಭಾವಪ್ರದರ್ಶನ ಮಾಡಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಆ ಶುಭಸಮಾಚಾರಕ್ಕಾಗಿ ಸಂತೋಷಿಸಿದರು.” ನಾವು ಸಹ ಈ ದೃಶ್ಯವನ್ನು ಕಲ್ಪಿಸಿಕೊಳ್ಳಬಲ್ಲೆವು ಮತ್ತು ಅವರೊಂದಿಗೆ ಸಂತೋಷಿಸುತ್ತೇವೆ.
ಅಲ್ಲಿ ಅವರು ಹೊಸದಾಗಿ ಕಂಡುಕೊಂಡ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸುವರು? ನೈಜರ್ನ ಒಬ್ಬ ಪಯನೀಯರ ಸಹೋದರಿಗೆ ಈ ಪ್ರಶ್ನೆಯ ಬಗ್ಗೆ ಯಾವುದೇ ಸಂಶಯವಿಲ್ಲ. ಅವಳು ಬರೆಯುವದು: “ನೈಜರ್ನ ನಮ್ಮ ಟೆರಿಟೊರಿಯಲ್ಲಿ ನಿಜತ್ವಗಳು ತೋರಿಸುವದೇನಂದರೆ ಅಂತ್ಯ ಬರುವ ಮೊದಲು ಮಹಾ ಬಾಬೆಲಿಂದ ಬಹುಸಂಖ್ಯಾಕರು ಹೊರಬರಲಿದ್ದಾರೆ. ಇದರ ರುಜುವಾತಾಗಿ ನಾನು ಪ್ರತಿ ತಿಂಗಳು 80 ರಿಂದ 85 ಪುನರ್ಭೇಟಿಗಳನ್ನು ಮತ್ತು 13 ಅಥವಾ 14 ಬೈಬಲ್ ಅಧ್ಯಯನಗಳನ್ನು ವರದಿ ಮಾಡಲು ಸಾಧ್ಯವಾಗಿದೆ, ನನ್ನ ಅನೇಕ ಕರೆಗಳನ್ನು ಬೇರೆ ಪ್ರಚಾರಕರಿಗೆ ಕೊಟ್ಟಿರುವುದಾದರೂ ಕೂಡ.” ಈ ನಂಬಿಗಸ್ತ ಸಹೋದರಿಯು ಹೇಳುವದು: “ನನ್ನ ಅನಾರೋಗ್ಯದ ಕಾರಣದಿಂದಾಗಿ ಕ್ಷೇತ್ರಸೇವೆಯಲ್ಲಿ ನನಗೆ ಮನಸ್ಸಿರುವಷ್ಟು ಸಮಯವನ್ನು ವ್ಯಯಿಸಲಾರೆ, ಆದರೆ ಪ್ರತಿಯೊಬ್ಬರು ಅವರಿಗೆಷ್ಟು ಸಾಧ್ಯವಿದೆಯೋ ಅಷ್ಟನ್ನು ಮಾಡುತ್ತಾರೆ.”
ಮಧ್ಯ ಆಫ್ರಿಕದ ರುಆಂಡದಲ್ಲಿ ಯೆಹೋವನ ಸಾಕ್ಷಿಗಳ ಪರಿಸ್ಥಿತಿಯು ನಾಟಕೀಯವಾಗಿ ಬದಲಾಗಿದೆ. ಏಪ್ರಿಲ್ ‘1992 ರಲ್ಲಿ ಇವರು ನ್ಯಾಯಸಮ್ಮತ ಸಂಸ್ಥೆಯೆಂಬದಾಗಿ ಕೊನೆಯದಾಗಿ ಪ್ರಮಾಣ ಪತ್ರವನ್ನು ನೀಡಲಾಯಿತು. ಈ ಪ್ರಮಾಣ ಪತ್ರವು ಜ್ಞಾಪಕಾಚರಣೆಯ ವಾರದಲ್ಲಿಯೇ ತಲುಪಿದುದರಿಂದ 1,526 ಪ್ರಚಾರಕರಿರುವ ರುಆಂಡವು ಈ ಘಟನೆಗೆ 6,228 ಹಾಜರಿಯನ್ನು ಕಂಡು ರೊಮಾಂಚಗೊಂಡಿತು. ಈ ಪ್ರಿಯ ಸಹೋದರರು ಸುವಾರ್ತೆಯನ್ನು ಪ್ರಕಟಿಸುವದರಲ್ಲಿ ಹೆಚ್ಚು ಚಟುವಟಿಕೆಯುಳ್ಳವರಾಗಿ ತಮ್ಮ ಸಂತೋಷ ಮತ್ತು ಗಣ್ಯತೆಯನ್ನು ಪ್ರದರ್ಶಿಸುವರೋ? ನಿಸ್ಸಂಶಯವಾಗಿ! ಅದೇ ಏಪ್ರಿಲ್ ತಿಂಗಳಲ್ಲಿ ಸಭೆಯ ಪ್ರಚಾರಕರು ಸಾರುವ ಕೆಲಸದಲ್ಲಿ ಸರಾಸರಿ 27.7 ತಾಸುಗಳನ್ನು ಮತ್ತು 17 ಪುನರ್ಭೇಟಿಗಳನ್ನು ಮಾಡಿದರು, ಸರಾಸರಿ 2.4 ಬೈಬಲ್ ಅಧ್ಯಯನಗಳನ್ನು ನಡೆಸಿದರು. ಅವರಲ್ಲಿ ಸುಮಾರು 40 ಪ್ರತಿಶತ ಕೆಲವು ವಿಧದ ಪೂರ್ಣಸಮಯದ ಸೇವೆಯಲ್ಲಿದ್ದಾರೆ.
ದಕ್ಷಿಣ ಆಫ್ರಿಕದಲ್ಲಿ ನ್ಯಾಯಬದ್ಧತೆ ಪಡೆದುದು
ದಕ್ಷಿಣ ಆಫ್ರಿಕದ ಎರಡು ಸುಂದರ ಕೆಳಪ್ರದೇಶಗಳಾದ ಮೊಸಾಂಬೀಕ್ ಮತ್ತು ಅಂಗೋಲದಲ್ಲಿ ಹೊಸ ಸ್ವಾತಂತ್ರ್ಯದ ಗಾಳಿ ಬೀಸಿತು. ಮೊಸಾಂಬೀಕ್ನಲ್ಲಿ 1991 ರ ಫೆಬ್ರುವರಿಯಲ್ಲಿ ಕಾನೂನು ಬದ್ಧತೆಗೆ ಮನ್ನಣೆ ದೊರಕಿತು. ಅಲ್ಲಿ ಪರಿಸ್ಥಿತಿ ಶಾಂತವಾದಾಗ, ಆಂತರಿಕ ಯುದ್ದಗಳಿಂದ ದುಃಖಕರವಾಗಿ ಧ್ವಂಸಗೊಂಡಿದ್ದ ಈ ದೇಶಕ್ಕೆ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯು ಮಿಷನೆರಿಗಳನ್ನು ಕಳುಹಿಸಿತು. ಇದು ಫಲವತ್ತಾದ ನೆಲವೆಂದು ಮಿಷನೆರಿಗಳು ಕಂಡುಕೊಂಡರು. ಬೈಬಲ್ ಸಾಹಿತ್ಯಗಳು—ವಿಶೇಷವಾಗಿ ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದ್ಯಾಟ್ ವರ್ಕ್ ಪುಸ್ತಕಕ್ಕೆ—ಹೆಚ್ಚಾದ ಗಿರಾಕಿಯಿದೆ. ಒಬ್ಬಾಕೆ ಮಿಷನೆರಿ, ತಾನು ಎರಡು ತಾಸಿಗಿಂತಲೂ ಕಡಿಮೆ ಸಮಯದಲ್ಲಿ 50 ಪುಸ್ತಕಗಳನ್ನು ನೀಡಿದೆನೆಂದು ವರದಿ ಮಾಡುತ್ತಾಳೆ.
ಆಸಕ್ತಿಯುಳ್ಳ ಜನರು ಬೇಗನೆ ಪ್ರತಿಕ್ರಿಯಿಸುತ್ತಾರೆ. ಸೊಸೈಟಿಗೆ ಕಳುಹಿಸಲ್ಪಟ್ಟಿದ್ದ ಒಂದು ವಿಳಾಸಕ್ಕೆ ಒಬ್ಬ ಮಿಷನೆರಿ ಭೇಟಿಕೊಟ್ಟಾಗ ಅದು ಮಿಲಿಟರಿಯಲ್ಲಿದ್ದ ಒಬ್ಬ ಮನುಷ್ಯನದ್ದಾಗಿತ್ತು. ಆತನೊಟ್ಟಿಗೆ ಮತ್ತು ಆತನ ಇಬ್ಬರು ಸಂಬಂಧಿಗಳೊಡನೆ ಒಳ್ಳೆಯ ಚರ್ಚೆಯು ನಡೆಯಿತು. ಪುನರ್ಭೇಟಿಯಲ್ಲಿ ಅವನು ಮತ್ತು ಬೇರೆ ಐವರೊಂದಿಗೆ ಮತ್ತೊಂದು ಫಲಕಾರಿಯಾದ ಚರ್ಚೆಯು ನಡೆಯಿತು. ಅನಂತರ ಬಹಿರಂಗ ಭಾಷಣಕ್ಕೆ ಮತ್ತು ಕಾವಲಿನಬುರುಜು ಅಧ್ಯಯನಕ್ಕೆ ಹಾಜರಾಗಲು ಕೊಟ್ಟ ಆಹ್ವಾನಕ್ಕೆ ಅವರು ಒಪ್ಪಿಕೊಂಡರು. ಇದೆಲ್ಲವು ನಡೆದದ್ದು ನಾಲ್ಕೇ ದಿನಗಳಲ್ಲಿ.
ಅಂಗೋಲದಲ್ಲಿ ಸಾಕ್ಷಿಗಳು, ಯಾವುದು 1992 ರ ಏಪ್ರಿಲ್ನಲ್ಲಿ ಅವರ ಕೆಲಸ ಕಾನೂನು ಸಮ್ಮತವಾಗುವುದರಲ್ಲಿ ಅಂತ್ಯಗೊಂಡಿತೋ, ಆ ಹೆಚ್ಚಿದ ಸ್ವಾತಂತ್ರ್ಯದಲ್ಲಿ ಆನಂದಿಸಿದ್ದಾರೆ. ಅವರು ಅವರ ಹೆಚ್ಚಿನ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸುತ್ತಿದ್ದಾರೆ? ಅವರು ಕ್ಷೇತ್ರಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ! ಅಂಗೋಲಾದಲ್ಲಿ ಸುಮಾರು 17,000 ಪ್ರಚಾರಕರಿದ್ದಾರೆ, ಈ ಪ್ರಚಾರಕರು ಹೆಚ್ಚು ಕಡಿಮೆ 60,000 ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಭವಿಷ್ಯದ ವೃದ್ಧಿಗಾಗಿ ಎಂಥ ಪ್ರತೀಕ್ಷೆ!
ಎಳೆಯರು ಸಾಕ್ಷಿಕಾರ್ಯದಲ್ಲಿ ಭಾಗವಹಿಸುತ್ತಾರೆ
ಇತ್ತೀಚಿಗೆ ಈ ದೇಶಗಳಲ್ಲಿ ಸಾರುವ ಕಾರ್ಯಕ್ಕೆ ಕಾನೂನು ಸಮ್ಮತಿ ದೊರಕಿದರೂ, ಎಳೆಯರು ಮತ್ತು ದೀಕ್ಷಾಸ್ನಾನ ಹೊಂದದವರು ಸಹ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಗಣ್ಯತೆಯನ್ನು ತೋರಿಸುತ್ತಿದ್ದಾರೆ. ಕೇಪ್ ವರ್ಡ್ ರಿಪಬ್ಲಿಕ್ನಲ್ಲಿ 1990 ರ ನೊವೆಂಬರ್ನಲ್ಲಿ ಯೆಹೋವನ ಸಾಕ್ಷಿಗಳಿಗೆ ಕಾನೂನು ಸಮ್ಮತಿ ದೊರಕಿತು. ಅಲ್ಲಿ ನಡೆದ ಒಂದು ಅಧಿವೇಶನದಲ್ಲಿ 17 ವರ್ಷದ ಬಾಲಕಿಯು ವಿಶ್ವಾಸದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಲು ಎದ್ದು ನಿಂತಳು. ದೀಕ್ಷಾಸ್ನಾನದ ನಂತರ ಒಬ್ಬ ಸಂದರ್ಶಕನು ಅವಳ ಸುತ್ತಲು ಜನ ಗುಂಪಾಗಿರುವದನ್ನು ಕಂಡನು. ಅವಳನ್ನು ಅಭಿನಂದಿಸಲು ಹೋದ ಅವನು ಅವರೆಲ್ಲ ಯಾರೆಂದು ಕೇಳಿದನು. ಅವಳು ಉತ್ತರಿಸಿದ್ದು, “ಓ, ಇವರೆಲ್ಲ ನನ್ನ ಬೈಬಲ್ ಅಧ್ಯಯನಗಳು.” ಅವಳು 7 ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದಳು. ಅವರು ಅಲ್ಲಿ ಅವಳ ದೀಕ್ಷಾಸ್ನಾನಕ್ಕಾಗಿ ಅಭಿನಂದಿಸುತ್ತಿದ್ದರು. ಮತ್ತು ಅವಳು ಆಗಲೇ ಸಹಾಯಕ ಪಯನೀಯರಳಾಗಲು ಅರ್ಜಿ ಹಾಕಿದಳ್ದು. ಮತ್ತು ಕ್ರಮೇಣ ಅರ್ಹತೆ ಪಡೆದು ಕ್ರಮದ ಪಯನೀಯರಳಾಗಲು ಮುನ್ನೋಡುತ್ತಿದ್ದಳು.
ಅಂಗೋಲಾದಲ್ಲಿ ಹತ್ತು ವರ್ಷದ ಬಾಲಕಿಗೆ ನೀನು ಪ್ರಚಾರಕಳಾಗಿದ್ದೀಯೊ ಎಂದು ಕೇಳಲಾಯಿತು. ಅವಳು ಉತ್ತರಿಸಿದ್ದು: “ಹೌದು.” ಅವಳು ಬೈಬಲ್ ಅಧ್ಯಯನಗಳನ್ನು ನಡಿಸುತಿದ್ದಳೋ? “ಖಂಡಿತವಾಗಿ.” ಎಷ್ಟು? “ಏಳು,” ಎಂದು ಉತ್ತರಿಸಿದಳು ಆ ಹತ್ತು ವರ್ಷದ ಬಾಲಕಿ.
ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ನಾವು ಓದುವದು, ಮೊದಲನೇ ಶತಮಾನದ ಒಂದು ಸಂದರ್ಭದಲ್ಲಿ, “ಯೂದಾಯ ಗಲಿಲಾಯ ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನ ಹೊಂದಿತು. ಮತ್ತು ಭಕ್ತಿಯಲ್ಲಿ ಬೆಳೆದು ಯೆಹೋವನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಹೆಚ್ಚುತ್ತಾ ಬಂತು.” (ಅ. ಕೃತ್ಯಗಳು 9:31) ನಾವು ಆಫ್ರಿಕದಲ್ಲಿರುವ ಸಹೋದರರ ಸಲುವಾಗಿ ಇದು ಸಮಾಧಾನದ ಸಮಯವಾಗಿ ಪರಿಣಮಿಸಲಿ ಎಂದು ಪ್ರಾರ್ಥಿಸುತ್ತೇವೆ. ಅವರು ಬಲಹೊಂದುತ್ತಿರುವಂತೆ ನಾವು ಅವರೊಡನೆ ಸಂತೋಷಿಸಿ, ಸುವಾರ್ತೆ ಹರಡಿಸುವ ಅವರ ಸ್ವಾತಂತ್ರ್ಯದ ಲಾಭವನ್ನು ಪಡೆದು ಅವರು ಬಹು ಜನರಾಗುತ್ತಿರುವಾಗ ಯೆಹೋವನ ಆತ್ಮ ಅವರ ಮೇಲಿರಲಿ ಎಂದು ಪ್ರಾರ್ಥಿಸುತ್ತೇವೆ.
[ಪುಟ 24ರಲ್ಲಿರುವಚಿತ್ರ]
(For fully formatted text, see publication)
ಯೆಹೋವನ ಸಾಕ್ಷಿಗಳು ನ್ಯಾಯಬದ್ಧವಾಗಿ ಮಾಡಲ್ಪಟ್ಟ ಯಾ ಅವರ ಮೇಲಿದ್ದ ನಿರ್ಬಂಧಗಳು ತೆಗೆಯಲ್ಪಟ್ಟ ದೇಶಗಳು
1. ಗ್ಯಾಂಬಿಯ, ಡಿಸೆಂಬರ್ 1989
2. ಬೆನಿನ್, ಜನವರಿ 1990
3. ಕೇಪ್ ವರ್ಡ್ ರಿಪಬ್ಲಿಕ್, ನೊವೆಂಬರ್ 1990
4. ಮೊಸಾಂಬೀಕ್, ಫೆಬ್ರವರಿ 1991
5. ಘಾನ, ನೊವೆಂಬರ್ 1991
6. ಇಥಿಯೋಪಿಯ, ನೊವೆಂಬರ್ 1991
7. ಕಾಂಗೊ, ನೊವೆಂಬರ್ 1991
8. ನೈಜರ್, ಡಿಸೆಂಬರ್ 1991
9. ಟೋಗೊ, ಡಿಸೆಂಬರ್ 1991
10. ಚಾಡ್, ಜನವರಿ 1992
11. ಕೆನ್ಯ, ಮಾರ್ಚ್ 1992
12. ಅಂಗೋಲ, ಏಪ್ರಿಲ್ 1992
13. ರುಆಂಡ, ಏಪ್ರಿಲ್ 1992
[ಪುಟ 23 ರಲ್ಲಿರುವ ಚಿತ್ರ]
ಬೆನಿನ್ನಲ್ಲಿ ರಾಜ್ಯ ಪ್ರಚಾರಕನೊಬ್ಬನು ತನ್ನ ಮಾತಾಡುವ ಡೋಲಿನಿಂದ ಮತ್ತಾಯ 24:14 ರ ಮಾತುಗಳನ್ನು ಬಾರಿಸುತ್ತಾನೆ
[ಪುಟ 25 ರಲ್ಲಿರುವ ಚಿತ್ರ]
ಆಫ್ರಿಕದ ಅನೇಕ ದೇಶಗಳಲ್ಲಿ ನಿಜ ಕ್ರೈಸ್ತರು ತಮಗೆ ಹೊಸದಾಗಿ ದೊರೆತ ಸ್ವಾತಂತ್ರ್ಯದ ಒಳ್ಳೆಯ ಉಪಯೋಗವನ್ನು ಮಾಡುತ್ತಾರೆ
[ಪುಟ 26 ರಲ್ಲಿರುವ ಚಿತ್ರ]
ಹೊಸ ಸಾಕ್ಷಿಗಳು ಯೆಹೋವನಿಗೆ ಅವರ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸುತ್ತಾರೆ