“ಹೆಸರಿನೊಳಗೆ” ದೀಕ್ಷಾಸ್ನಾನ
ಈಜಿಪ್ಟಿನ ಮರಳಿನಲ್ಲಿ ಈ ಶತಕದ ಆರಂಭದಲ್ಲಿ ದೊರೆತ ಸಾವಿರಾರು ಪುರಾತನ ಐಹಿಕ ಪಪೈರಸ್ ದಾಖಲೆಗಳ ಅಧ್ಯಯನವೊಂದು ಕ್ರೈಸ್ತ ಗ್ರೀಕ್ ಬರಹಗಳ ಮೇಲೆ ಆಸಕ್ತಕರ ಪ್ರಕಾಶವನ್ನು ಚೆಲ್ಲುತ್ತವೆ. ಹೇಗೆ? ಕೆಲವು ನಿರ್ದಿಷ್ಟ ಶಬ್ದಗಳು ಬಳಸಲ್ಪಟ್ಟ ವಿಧವನ್ನು ಪರಿಗಣಿಸುವುದರಿಂದ, ಶಾಸ್ತ್ರೀಯ ಅಳವಡಿಸುವಿಕೆಯಲ್ಲಿ ಅದೇ ಶಬ್ದಗಳ ಹೆಚ್ಚು ನಿಖರವಾದ ತಿಳಿವಳಿಕೆಯೊಂದಕ್ಕೆ ನಾವು ಮಾರ್ಗದರ್ಶಿಸಲ್ಪಡುತ್ತೇವೆ.
ಪರಲೋಕಕ್ಕೆ ಆರೋಹಣ ಮಾಡುವ ಮೊದಲು ತನ್ನ ಶಿಷ್ಯರಿಗೆ ಯೇಸುವು ಆಜ್ಞಾಪಿಸಿದಾಗ, “ಹೆಸರಿನೊಳಗೆ” ಎಂಬುದರ ಯೇಸುವಿನ ಬಳಕೆಯು ಒಂದು ಉದಾಹರಣೆಯಾಗಿದೆ: “ಆದ್ದರಿಂದ ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.” ಯೇಸುವಿನ ಅರ್ಥವೇನಾಗಿತ್ತು?—ಮತ್ತಾಯ 28:19.
“ಹೆಸರಿನಲ್ಲಿ,” ಯಾ “ಹೆಸರಿನೊಳಗೆ” (ಕಿಂಗ್‌ಡಂ ಇಂಟರ್‌ಲಿನಿಯರ್), ಎಂಬ ವಾಕ್ಸರಣಿಯನ್ನು ಐಹಿಕ ಬರಹಗಳಲ್ಲಿ, “ಯಾರಾದರೊಬ್ಬರ ಲೆಕ್ಕಕ್ಕೆ” ಸಲಿಕೆಗಳಿಗೆ ಸೂಚಿತವಾಗಿ ಬಳಸಲ್ಪಟ್ಟಿದೆ ಎಂದು ವಿದ್ವಾಂಸರು ಕಂಡುಹಿಡಿದಿದ್ದಾರೆ. ದೇವತಾ ಶಾಸ್ತ್ರಜ್ಞ ಪ್ರಾಚಾರ್ಯ ಡಾ. ಜಿ. ಆಡಲ್ಫ್ ಡೈಸ್‌ಮಾನ್ ನಂಬುವುದೇನಂದರೆ ಪಪೈರಿಯ ಪುರಾವೆಯ ನೋಟದಲ್ಲಿ, “ಒಳಗೂಡಿರುವ ಕಲ್ಪನೆಯು . . . ಕರ್ತನ ಹೆಸರಿನೊಳಗೆ ದೀಕ್ಷಾಸ್ನಾನ ಮಾಡಿಸುವುದು ಯಾ ದೇವರ ಪುತ್ರನ ಹೆಸರಿನೊಳಗೆ ನಂಬುವುದು ಎಂಬ ವಾಕ್ಸರಣಿಗಳು, ದೀಕ್ಷಾಸ್ನಾನ ಯಾ ನಂಬಿಕೆಯು ದೇವರಿಗೆ ಯಾ ದೇವರ ಮಗನಿಗೆ ಸೇರಿರುವುದು ಎಂಬುದನ್ನು ಸ್ಥಾಪಿಸುತ್ತದೆ.”—ಓರೆಅಕ್ಷರಗಳು ಡೈಸ್‌ಮಾನ್‌ರದ್ದು.
ಆಸಕ್ತಿಕರವಾಗಿಯೇ, ತಿಯೊಲಾಜಿಕಲ್ ಡಿಕ್‌ಷನರಿ ಆಫ್ ದಿ ನ್ಯೂ ಟೆಸ್ಟಮೆಂಟ್ ನಲ್ಲಿ ವಿವರಿಸಲ್ಪಟ್ಟಂತೆ, ಯೇಸುವಿನ ದಿನಗಳ ಯೆಹೂದ್ಯರಿಂದ ತದ್ರೀತಿಯ ವಾಕ್ಸರಣಿಯು ಬಳಸಲ್ಪಟ್ಟಿತ್ತು: “ಮತಾಂತರಿಯನ್ನು ಯೂದಾಯ ಮತದೊಳಗೆ ಸ್ವೀಕರಿಸಲು, ‘ಮತಾಂತರಿಯ ಹೆಸರಿನಲ್ಲಿ’ ಅವನ ಸುನ್ನತಿಯು ಆಯಿತು . . . . ಅವನನ್ನು ಒಡಂಬಡಿಕೆಯೊಳಗೆ ಸ್ವೀಕರಿಸಲು, ಈ ಸುನ್ನತಿಯು . . . ‘ಒಡಂಬಡಿಕೆಯ ಹೆಸರಿನಲ್ಲಿ’ ನಡೆಯುತ್ತದೆ.” ಆ ಮೂಲಕ ಒಂದು ಸಂಬಂಧವು ಸ್ಥಾಪಿಸಲ್ಪಟ್ಟಿತು ಮತ್ತು ಯೆಹೂದ್ಯೇತರನು ಒಡಂಬಡಿಕೆಯ ಅಧಿಕಾರದ ಕೆಳಗೆ ಒಬ್ಬ ಮತಾಂತರಿಯಾಗುತ್ತಾನೆ.
ಆದುದರಿಂದ, ಕ್ರೈಸ್ತನಿಗೆ ಸಮರ್ಪಣೆಯನ್ನು ಹಿಂಬಾಲಿಸುವ ದೀಕ್ಷಾಸ್ನಾನವು ಯೆಹೋವ ದೇವರೊಂದಿಗೆ, ಅವನ ಮಗನಾದ ಯೇಸು ಕ್ರಿಸ್ತನೊಂದಿಗೆ, ಮತ್ತು ಪವಿತ್ರಾತ್ಮದೊಂದಿಗೆ ಒಂದು ಆಪ್ತ ಸಂಬಂಧವನ್ನು ಸ್ಥಾಪಿಸುತ್ತದೆ. ಮತಾಂತರಿಯು ಜೀವನದ ತನ್ನ ಹೊಸ ಪಥದಲ್ಲಿ ಅವರ ಯಥಾಯೋಗ್ಯ ಅಧಿಕಾರವನ್ನು ಅಂಗೀಕರಿಸುತ್ತಾನೆ. ಹೆಸರಿಸಲ್ಪಟ್ಟ ಮೂವರಲ್ಲಿ ಪ್ರತಿಯೊಬ್ಬರ ವಿಷಯದಲ್ಲಿ ಇದು ಹೇಗೆ ಸತ್ಯವಾಗಿದೆ ಎಂದು ಪರಿಗಣಿಸಿರಿ.
ದೇವರ ಅಧಿಕಾರವನ್ನು ಅಂಗೀಕರಿಸುವುದರಿಂದ, ನಾವು ಅವನ ಸಾಮೀಪ್ಯಕ್ಕೆ ಎಳೆಯಲ್ಪಡುತ್ತೇವೆ ಮತ್ತು ಅವನೊಂದಿಗೆ ಒಂದು ಸಂಬಂಧದೊಳಗೆ ಪ್ರವೇಶಿಸುತ್ತೇವೆ. (ಇಬ್ರಿಯ 12:9; ಯಾಕೋಬ 4:7, 8) ಯೇಸು ಕ್ರಿಸ್ತನ ವಿಮೋಚನ ಯಜ್ಞದ ಬೆಲೆಯಿಂದ ಕ್ರಯಕ್ಕೆ ಕೊಳ್ಳಲ್ಪಟ್ಟು, ಅವನ ದಾಸರೋಪಾದಿ ನಾವು ದೇವರ ಸೊತ್ತಾಗುತ್ತೇವೆ. (1 ಕೊರಿಂಥ 3:23; 6:20) ಅವರು ತಮ್ಮ ಬಳಿಗೆ ಸತ್ಯವನ್ನು ಕೊಂಡೊಯ್ದ ಯಾವನೇ ಮಾನವನಿಗೆ ಸೇರಿದವರಾಗಿರದೆ, ಯೇಸು ಕ್ರಿಸ್ತನಿಗೆ ಸೇರಿದವರು ಎಂದು ಮೊದಲನೆಯ ಶತಕದ ಕ್ರೈಸ್ತರಿಗೆ ಕೂಡ ಅಪೊಸ್ತಲ ಪೌಲನು ಹೇಳಿದನು. (1 ಕೊರಿಂಥ 1:12, 13; 7:23; ಹೋಲಿಸಿರಿ ಮತ್ತಾಯ 16:24.) ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯುವುದರಲ್ಲಿ, ಯೇಸುವು “ಮಾರ್ಗವೂ ಸತ್ಯವೂ ಜೀವವೂ” ಆಗಿದ್ದಾನೆಂಬ ವಾಸ್ತವಾಂಶವನ್ನು ಅಂಗೀಕರಿಸುವುದೂ ಸೂಚಿತವಾಗಿರುತ್ತದೆ.—ಯೋಹಾನ 14:6.
ಯೆಹೋವನೊಂದಿಗೆ ಮತ್ತು ಯೇಸು ಕ್ರಿಸ್ತನೊಂದಿಗೆ ನಮ್ಮ ಯೋಗ್ಯ ಸಂಬಂಧಕ್ಕೆ ಪವಿತ್ರಾತ್ಮವು ಕೂಡ ಅತ್ಯಾವಶ್ಯಕವಾಗಿದೆ. ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯುವುದು, ನಮ್ಮೊಂದಿಗಿನ ದೇವರ ವ್ಯವಹಾರಗಳಲ್ಲಿ ಪವಿತ್ರಾತ್ಮನ ಪಾತ್ರವನ್ನು ನಾವು ಅಂಗೀಕರಿಸುತ್ತೇವೆ ಎಂದು ತೋರಿಸುತ್ತದೆ. ಅದರ ಮಾರ್ಗದರ್ಶನವನ್ನು ನಾವು ಅನುಸರಿಸಲು ಬಯಸುತ್ತೇವೆ, ಅದನ್ನು ಅಲಕ್ಷಿಸಲು ಯಾ ಅದಕ್ಕೆ ವಿರುದ್ಧವಾಗಿ ವರ್ತಿಸಲು, ನಮ್ಮ ಮೂಲಕ ಅದರ ಕಾರ್ಯವನ್ನು ತಡೆಗಟ್ಟಲು ಬಯಸುವುದಿಲ್ಲ ಎಂಬುದು ನಮ್ಮ ಉದ್ದೇಶವಾಗಿದೆ. (ಎಫೆಸ 4:30; 1 ಥೆಸಲೊನೀಕ 5:19) ಯಾವ ರೀತಿಯಲ್ಲಿ ಯೂದಾಯ ಮತದಲ್ಲಿ “ಒಡಂಬಡಿಕೆಯ ಹೆಸರಿನಲ್ಲಿ” ಎಂಬ ಪ್ರಯೋಗವು ಯಾವುದೇ ಕಷ್ಟವನ್ನು ಉಂಟುಮಾಡಲಿಲ್ಲವೊ, ಹಾಗೆಯೇ, ಆತ್ಮದ ಅಮೂರ್ತ ಸ್ವಭಾವವು, ಅದರ ಪ್ರಯೋಗದಲ್ಲಾಗಲಿ ಯಾ ಅರ್ಥದಲ್ಲಾಗಲಿ ಯಾವುದೆ ಸಮಸ್ಯೆಯನ್ನು ಉಂಟುಮಾಡುವುದಿಲ್ಲ.
ಆದಕಾರಣ, ಸಮರ್ಪಣೆ ಮತ್ತು ದೀಕ್ಷಾಸ್ನಾನದ ಸಮಯದಲ್ಲಿ, ನಮ್ಮ ಹೊಸ ಸಂಬಂಧದಲ್ಲಿ ಏನೆಲ್ಲಾ ಒಳಗೂಡಿರುತ್ತದೆ ಎಂದು ಪ್ರಾರ್ಥನಾಪೂರ್ವಕವಾಗಿ ಪ್ರತಿಬಿಂಬಿಸುವ ಜರೂರಿ ನಮಗಿದೆ. ಯೇಸು ಕ್ರಿಸ್ತನ ಮಾದರಿಯಲ್ಲಿ ಮತ್ತು ವಿಮೋಚನೆಯ ಒದಗಿಸುವಿಕೆಯಲ್ಲಿ ಪ್ರದರ್ಶಿಸಲ್ಪಟ್ಟ, ಮತ್ತು ಲೋಕವ್ಯಾಪಕ ಪ್ರೀತಿ ಮತ್ತು ಐಕ್ಯತೆಯಲ್ಲಿ ದೇವರ ಸೇವಕರೆಲ್ಲರನ್ನೂ ಮಾರ್ಗದರ್ಶಿಸುವ ಪವಿತ್ರಾತ್ಮನ ಮೂಲಕ ಈಡೇರಿಸಲ್ಪಟ್ಟ ದೇವರ ಚಿತ್ತಕ್ಕೆ ಅಧೀನತೆಯನ್ನು ಅದು ಅಪೇಕ್ಷಿಸುತ್ತದೆ.