ಸಾರುವುದು ಮಾಪೂಟೊದಲ್ಲಿ—ಮೋಸಂಬೀಕ್ನ ಆಸಕ್ತಿ ಕೆರಳಿಸುವ ರಾಜಧಾನಿ!
ಮೋಸಂಬೀಕ್ನಲ್ಲಿ ಯೆಹೋವನ ಸಾಕ್ಷಿಗಳಿಗೆ 1991 ರಲ್ಲಿ ಕಾನೂನುಬದ್ಧ ಮನ್ನಣೆ ಕೊಡಲ್ಪಟ್ಟಿತು. ಅಂದಿನಿಂದ ಆಫ್ರಿಕದ ಆಗ್ನೇಯ ಕರಾವಳಿಯಲ್ಲಿರುವ ಉಷ್ಣವಲಯದ ಈ ದೇಶದಲ್ಲಿ ದೇವರ ರಾಜ್ಯದ ಶುಭ ವಾರ್ತೆಯ ಸಾರುವಿಕೆಯು ಪ್ರದರ್ಶನಾತ್ಮಕ ಪ್ರಗತಿಯನ್ನು ಮಾಡುತ್ತಾ ಇದೆ. ಮುಂದಿನದ್ದು ಮೋಸಂಬೀಕ್ನಲ್ಲಿ, ವಿಶೇಷವಾಗಿ ರಾಜಧಾನಿ ಮಾಪೂಟೊದಲ್ಲಿ ಅವರ ಬೈಬಲ್ ಶಿಕ್ಷಣ ಕಾರ್ಯವನ್ನು ನಡೆಸಿಕೊಂಡು ಹೋಗುವ ಯೆಹೋವನ ಸಾಕ್ಷಿಗಳ ವರದಿಯಾಗಿದೆ.
ಬೆಚ್ಚಗೆನ ಹಿಂದೂ ಮಹಾಸಾಗರದಿಂದ ಹವಾಮಾನವು ಪ್ರಭಾವಿಸಲ್ಪಟ್ಟು, ಮೋಸಂಬೀಕ್ ಆಹ್ಲಾದದಾಯಕವಾದ ವಾತಾವರಣವೊಂದರಲ್ಲಿ ಆನಂದಿಸುತ್ತದೆ. ಕರಾವಳಿಯಲ್ಲಿ ಮನೋಹರವಾದ ತೆಂಗಿನ ಅಂಚಿನ ತೀರಗಳು ಮತ್ತು ಹವಳ ದಿಬ್ಬಗಳು ಸಮೃದ್ಧಿಯಾಗಿದೆ. ಮರೆಯಾಗಿರುವ ನೀರುಗಳಿರುವ ಒಂದು ಮಹಾ ಕೊಲ್ಲಿ ದೇಶದ ದಕ್ಷಿಣದಲ್ಲಿದೆ—ಇದು ಅದರ ರಾಜಧಾನಿಯಾದ ಮಾಪೂಟೊಗೆ ಆದರ್ಶ ಸ್ಥಾನವಾಗಿದೆ.
ಆದಾಗ್ಯೂ, ಈ ಪ್ರದೇಶದ ಸೊಗಸು ಮತ್ತು ಪ್ರಶಾಂತತೆಯು ಅದರ ಇತಿಹಾಸದ ಹಿಂಸಾಚಾರವನ್ನು ಹುಸಿಮಾಡುತ್ತದೆ. ಶತಮಾನಗಳಿಂದ ಅದು ಪರದೇಶಿ ಪ್ರಭುತ್ವದ—ಮೊದಲು ಅರಬರು ಮತ್ತು ಅನಂತರ ಪೋರ್ಚುಗೀಸರು—ಕೆಳಗೆ ಹೋರಾಟ ನಡಿಸಿತು. ದೇಶದ ಐಶ್ವರ್ಯ ಭಂಡಾರವನ್ನು—ದಂತ, ಚಿನ್ನ, ಮತ್ತು ಗುಲಾಮರು—ದೋಚಲು ಕ್ಯಾತೊಲಿಕ್ ಚರ್ಚ್ನ ಪೂರ್ಣ ಆಶೀರ್ವಾದದಿಂದ ಕೊನೆಯವರು ಆಗಮಿಸಿದರು. ಕೊನೆಗೂ, ಶತಮಾನಗಳ ವಸಾಹತುಶಾಹಿ ದಬ್ಬಾಳಿಕೆಯ ನಂತರ, ಕಟುವಾದ ಆಂತರಿಕ ಘರ್ಷಣೆಯೊಂದು ಸ್ಪೋಟಿಸಿದ್ದರಿಂದ, ಅದು 1975 ರಲ್ಲಿ ಸ್ವಾತಂತ್ರ್ಯಕ್ಕೆ ನಡಿಸಿತು. ದೌರ್ಭಾಗ್ಯವಶಾತ್, ಬದಲಾವಣೆಯು ಜೀವಿತದಲ್ಲಿ ಭದ್ರತೆಯನ್ನೇನೂ ತರಲಿಲ್ಲ, ಯಾಕಂದರೆ ದೇಶವು ಆಂತರಿಕ ಯುದ್ಧದಲ್ಲಿ ಸಿಲುಕಿಕೊಂಡಿತು, ಪರಿಣಾಮವು ಜನರಿಗೆ, ವಿಶೇಷವಾಗಿ ನಿರಪರಾಧಿ ಗ್ರಾಮೀಣ ಜನಸಮೂಹಕ್ಕೆ ಬಹಳಷ್ಟು ಸಂಕಟಮಯವಾಗಿತ್ತು.
ರಾಜಧಾನಿ ಮಾಪೂಟೊ
ಕಳೆದ ದಶಕದಲ್ಲಿ, ಸಾವಿರಾರು ಮೋಸಂಬೀಕಾನರು ಪಟ್ಟಣ ಮತ್ತು ನಗರಗಳ ತುಲನಾತ್ಮಕ ಭದ್ರತೆಗೆ ಪಲಾಯನಗೈದರು. ಇದು ಮಾಪೂಟೊದಲ್ಲಿ ವಿಶೇಷವಾಗಿ ಗಮನಾರ್ಹವಾಗಿದೆ, ಇಲ್ಲಿ ವಿಚಿತ್ರ ನಮೂನೆಯ ಪೋರ್ಚುಗೀಸ್ ವಾಸ್ತುಶಿಲ್ಪ ಮತ್ತು ರಂಗುರಂಗಿನ ಆಫ್ರಿಕದ ಮಿಶ್ರಣವು ನಗರಕ್ಕೆ ರೋಮಾಂಚಕರ ವಾತಾವರಣವನ್ನು ನೀಡುತ್ತದೆ. ಇಂದಿನ ಮಾಪೂಟೊದ ಅಗಲವಾದ, ಮರಗಳ ಸಾಲುಗಳ ಬೀದಿಗಳಲ್ಲಿ ತಿರುಗಾಟ ಮಾಡುವಾಗ, ಅವರ ದೈನಂದಿನ ವ್ಯವಹಾರಗಳಲ್ಲಿ ಜನಸಂದಣಿಗಳು ಸಡಗರದಲ್ಲಿರುವದು ಮೊದಲಾಗಿ ನಿಮ್ಮ ಗಮನವನ್ನು ಸೆಳೆಯುವದು. ಆದರೆ ಅಲ್ಲೊಂದು ವ್ಯತ್ಯಾಸವಿದೆ. “ಪ್ರತಿದಿನ ಜೀವನದ ದಟ್ಟನೆ ಮತ್ತು ತೊಂದರೆಯಲ್ಲೂ, ಒಂದು ನಸುನಗೆಯೊಂದಿಗೆ ಜನರು ಯಾವಾಗಲೂ ಸಿದ್ಧರಾಗಿದ್ದಾರೆ,” ಮಾಪೂಟೊದಲ್ಲಿ ಮಿಷನೆರಿಯಾಗಿರುವ ರೊಡ್ರಿಗೊ ಅವಲೋಕಿಸಿದರು. “ಒರಟಾಗಿರುವ ಜನರನ್ನು ನೀವು ಕಾಣುವದೇ ಕಷ್ಟ!” ಹೌದು, ಅಂತಸ್ಫುರಣದ ಮತ್ತು ಸ್ನೇಹತನದ ಜನರಾಗಿದ್ದಾರೆ ಎಂಬುದಕ್ಕೆ ಮೋಸಂಬೀಕಾನರು ಹೆಸರುವಾಸಿಯಾಗಿದ್ದಾರೆ.
ಆಫ್ರಿಕದ ಹೆಚ್ಚಿನೆಡೆಗಳಲ್ಲಿ ಇರುವಂತೆ, ಜನರನ್ನು ಭೇಟಿ ಮಾಡುವ ಒಂದು ಸ್ವಾಭಾವಿಕ ಸ್ಥಳ ಸ್ಥಳೀಯ ಮಾರುಕಟ್ಟೆಗಳಾಗಿರುತ್ತವೆ. ಅಲ್ಲಿಗೆ ನೀವು ಚಾಪಾ 100ರ ಮೇಲೆ ಸವಾರಿ ಮಾಡಿ ಹೋಗಸಾಧ್ಯವಿದೆ, ಆದು ಸಾರ್ವಜನಿಕ ಸಂಚಾರಕ್ಕಾಗಿ ಉಪಯೋಗಿಸಲ್ಪಡುವ ಸಾಮಾನುಕೊಂಡೊಯ್ಯುವ ಟ್ರಕ್ಗಳಿಗೆ ಇರುವ ಸ್ಥಳೀಯ ಹೆಸರಾಗಿದೆ. ವಾಡಿಕೆಯಂತೆ, ಒಳಗಿರುವದಕ್ಕಿಂತ ಟ್ರಕ್ನ ಹೊರಭಾಗದಲ್ಲಿ ಜೋತಾಡಿ ಹೋಗುವ ಜನರು ಹೆಚ್ಚೆಂದು ತೋರುತ್ತದೆ. ಪ್ರಾಯಶಃ ನಡೆದುಕೊಂಡು ಹೋಗುವದೇ ವಾಸಿ.
ಮೋಸಂಬೀಕಾನರು ತಿದ್ದಲಾಗದ ವ್ಯಾಪಾರಿಗಳು. ರಸ್ತೆಯ ಪಕ್ಕದ ಕಾಲ್ದಾರಿಗಳ ಮೇಲೆ ಮತ್ತು ರಸ್ತೆಯ ಮೂಲೆಗಳಲ್ಲಿ ಸಣ್ಣ ಗೂಡಂಗಡಿಗಳನ್ನು ಇಟ್ಟು ಸ್ವತಃ ಉದ್ಯೋಗಸ್ಥರಾಗಿರುವ ಅನೇಕರನ್ನು ಸಂದರ್ಶಕನೊಬ್ಬನು ನೋಡದೆ ಇರಲಾರನು. ಪೊಚ್ಚಪೊಸ ಹಣ್ಣುಗಳು, ತರಕಾರಿ, ಗಿಡಮೂಲಿಕೆಗಳು, ಯಾ ಸಂಬಾರ ಜಿನಸಿಗಳನ್ನು ನೀವು ಖರೀದಿಸಲು ಬಯಸುವಿರೋ? ಪ್ರತಿಯೊಬ್ಬರಿಗೂ ಬೇಕಾಗುವಷ್ಟು ಅಲ್ಲಿ ಇದೆ. ಒಂದು ಸಜೀವ ಕೋಳಿ, ಗೇರುಬೀಜ, ಯಾ ನಿಮ್ಮ ಮನೆಯನ್ನು ಕಟ್ಟಲು ಬೇಕಾದ ಆಪುಹುಲ್ಲು ಇವುಗಳ ಕುರಿತೇನು? ಯಾವುದೇ ತೊಂದರೆಯೆಂಬುದು ಇಲ್ಲ ಮತ್ತು ಎಲ್ಲವೂ ಮಿತ್ರತ್ವದ ಆತ್ಮದಿಂದ ನಡೆಯುತ್ತದೆ. ನಿಮ್ಮ ಪಾದರಕ್ಷೆಗಳಿಗೆ ಉಜ್ಜಿ ಹೊಳಪು ಹಾಕುವ ಯಾ ನಿಮ್ಮ ಕಾರನ್ನು ತೊಳೆದು ಕೊಡುವ ಸೇವಾ ಸೌಲಭ್ಯಗಳು ಕೂಡ ದೊರಕುವುವು. ಒಂದು ಕಾದ ಕಬ್ಬಿಣದ ಪಟ್ಟಿ ಮತ್ತು ಪ್ಲಾಸ್ಟಿಕ್ ಹಾಳೆಯನ್ನು ಬಳಸಿ, ಒಬ್ಬ ಎಳೆಯ ಹುಡುಗನು ನಿಮ್ಮ ಅಮೂಲ್ಯ ದಸ್ತಾವೇಜುಗಳನ್ನು ಹೊದಿಸ್ದಿಯೂ ಕೂಡ ಕೊಡುವನು.
ವಾಸ್ತವದಲ್ಲಿ, ರಸ್ತೇಪಕ್ಕದ ಎಲ್ಲಾ ವ್ಯಾಪಾರಗಳು ಕಾನೂನುಸಮ್ಮತವಾಗಿರುವದಿಲ್ಲ. ಹೇಗಾದರೂ ಅದನ್ನು ಮಾಡಲಾಗುತ್ತದೆ. ಕಾನೂನುರೀತ್ಯ ತಿರುಗು ವ್ಯಾಪಾರಿಗಳನ್ನು ಡೂಂಬ ನೆಂಗೆ ಎಂದು ಕರೆಯುತ್ತಾರೆ, ಅದರ ಅರ್ಥ “ನಿಮ್ಮ ಕಾಲುಗಳ ಮೇಲೆ ಆಧರಿಸಿರಿ.” ಅಧಿಕಾರಿಗಳು ಪರೀಕ್ಷಿಸಲು ಬರುವಾಗ, ಅವರ ಅಪಾಯಕ್ಕೀಡಾದ ವ್ಯಾಪಾರದ ಉಳಿಕೆಗಾಗಿ ಕಾಲುಗಳ ಚುರುಕುತನ ಆವಶ್ಯಕವಾಗಿರುವದರಿಂದ ಇದು ನಿಸ್ಸಂದೇಹ.
ವಾಸನೆಯ ಆಧಾರದಲ್ಲಿ, ಒಂದು ಮೀನು ಮಾರುಕಟ್ಟೆಯ ಬಳಿ ನಾವು ಸಮೀಪಿಸುತ್ತಿರಬೇಕು! ಪ್ರತಿದಿನ ಅಪರಾಹ್ನದಲ್ಲಿ ತಡವಾಗಿ, ಕೊಸ್ಟ ಡೊ ಸೊಲ್ನ ಸಮುದ್ರತೀರಗಳುದ್ದಕ್ಕೂ, ದಿನದಲ್ಲಿ ತಾವು ಹಿಡಿದ ಮೀನುಗಳನ್ನು ಅವರು ತಂದಂತೆ, ಮೀನು ದೋಣಿಗಳು ಚಟುವಟಿಕೆಯಿಂದಾವೃತವಾಗುತ್ತವೆ. ಎಲ್ಲಾ ರೂಪದ ಮತ್ತು ಆಕಾರದ ಮೀನುಗಳೊಟ್ಟಿಗೆ, ಅಲ್ಲಿ ಏಡಿಗಳು, ದೊಡ್ಡ ಸಿಗಡಿಗಳು, ಮತ್ತು, ನಿಶ್ಚಯವಾಗಿಯೂ ಪ್ರಖ್ಯಾತ ಮೋಸಂಬೀಕನ್ ಸಿಗಡಿಗಳು ಕೂಡ ಇರುತ್ತವೆ. ಆದಾಗ್ಯೂ, ಮಾಪೂಟೊದಲ್ಲಿ ಮತ್ತು ಸುತ್ತಲೂ ನಡೆಯುತ್ತಾ ಇರುವ ಇನ್ನೊಂದು ವಿಧದ ಮೀನುಹಿಡಿಯುವಿಕೆಯಲ್ಲಿ ನೀವು ಆಸಕ್ತರಿರಬಹುದು.
“ಮನುಷ್ಯರನ್ನು ಹಿಡಿಯುವ ಬೆಸ್ತರು”
ಮೋಸಂಬೀಕ್ನಲ್ಲಿ ಕಾನೂನುಮನ್ನಣೆ ದೊರಕಿದಂದಿನಿಂದ, ಯೆಹೋವನ ಸಾಕ್ಷಿಗಳು ಸಾರ್ವಜನಿಕರಿಂದ ಉತ್ತಮ ಪ್ರತಿವರ್ತನೆಯನ್ನು ಪಡೆದಿರುತ್ತಾರೆ. ಒಬ್ಬ ವ್ಯಕ್ತಿಯು ಹೀಗನ್ನುತ್ತಾ ತನ್ನ ಗಣ್ಯತೆಯನ್ನು ವ್ಯಕ್ತಪಡಿಸಿದನು: “ರಸ್ತೆಗಳಲ್ಲಿ ನಿಮ್ಮಲಿನ್ಲ ಅನೇಕರನ್ನು ನಾನು ಲಂಡನ್ನಲ್ಲಿ ನೋಡಿದ್ದೆ. ವಾಸ್ತವದಲ್ಲಿ, ನಾನೆಲ್ಲಿಯೇ ಇದ್ದರೂ, ಯೆಹೋವನ ಸಾಕ್ಷಿಗಳನ್ನು ನಾನು ನೋಡುತ್ತೇನೆ. ಇಲಿಯ್ಲೂ ನಿಮ್ಮನ್ನು ನೋಡುವುದು ನನಗೆ ಒಳ್ಳೆಯ ಭಾವನೆಯನ್ನು ತರುತ್ತದೆ.”
ಸ್ಥಳೀಕ ಭಾಷೆಗಳಾದ ಪೋರ್ಚುಗೀಸ್ ಮತ್ತು ಟ್ಸೋಂಗನಲ್ಲಿ ಬೈಬಲ್ಗಳನ್ನು ಮತ್ತು ಬೈಬಲಾಧಾರಿತ ಸಾಹಿತ್ಯಗಳ ಸ್ವೀಕರಿಸುವಿಕೆಯು ಯಾವುದೇ ಒಂದು ನಿರ್ದೇಶಕವಾಗಿದ್ದಲ್ಲ, ಇದು ಖಂಡಿತವಾಗಿಯೂ ಆತ್ಮಿಕತೆಯ ಒಲವು ಉಳ್ಳ ಒಂದು ಜನಾಂಗವಾಗಿದೆ. ಪೌಲಾ ಎಂಬ ಇನ್ನೊಬ್ಬ ಮಿಷನೆರಿ ವರದಿಸುವುದೇನಂದರೆ ಸಾಮಾನ್ಯ ಒಂದು ಶನಿವಾರ ಬೆಳಿಗ್ಗೆ, ಬಜಾರಿನಲ್ಲಿ ಯಾ ಕೇಂದ್ರ ಮಾರುಕಟ್ಟೆಯಲ್ಲಿ 50 ಕ್ಕಿಂತಲೂ ಹೆಚ್ಚು ಪತ್ರಿಕೆಗಳನ್ನು ವಿತರಿಸಲು ಸಾಧ್ಯವಾಗುತ್ತದೆ. ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಟ್ ವರ್ಕ್ ಪುಸ್ತಕವು ಅತೀ ಜನಪ್ರಿಯವೆಂದು ರುಜುವಾಗಿದೆ. ಯುದ್ಧದಿಂದ ಅನೇಕ ಯುವಕರು ಸ್ಥಳದಿಂದ ಉಚ್ಛಾಟಿಸಲ್ಪಟ್ಟಿದ್ದಾರೆ ಯಾ ಅನಾಥರಾಗಿದ್ದಾರೆ, ಮತ್ತು ಆ ಪುಸ್ತಕವು ಒದಗಿಸುವ ಮೌಲ್ಯಗಳನ್ನೂ, ನಿರ್ದೇಶನಗಳನ್ನೂ ಅವರು ಗಣ್ಯಮಾಡುತ್ತಾರೆಂದು ತೋರುತ್ತದೆ.
ಪ್ರತಿನಿಧಿರೂಪವಾಗಿರುವ ಹಿಂಜರಿಯದ ಒಂದು ಆಫ್ರಿಕನ್ ಶೈಲಿಯಲ್ಲಿ, ಏನು ಹೇಳಲ್ಪಡುತ್ತದೋ ಅದನ್ನು ಆಲಿಸಲು ಮಿಷನೆರಿಯ ಸುತ್ತಲೂ ಆಸಕ್ತಿಯುಳ್ಳ ವ್ಯಕ್ತಿಗಳ ದೊಡ್ಡ ಗುಂಪುಗಳು ಒಟ್ಟುಗೂಡುತ್ತವೆ. ಕಾಲ್ದಾರಿಗಳ ಅಂಥ ನೆರವಿಗಳು ಕೆಲವೊಮ್ಮೆ ಆಸಕ್ತಿಯ ಶಾಸ್ತ್ರೀಯ ಚರ್ಚೆಗಳಾಗಿ ವಿಕಸಿಸುತ್ತವೆ. ಸಹೋದರಿಯೊಬ್ಬಳು ಒಂದು ಆಸಕ್ತಿಯ ಅನುಭವವನ್ನು ನೆನಪಿಗೆ ತರುತ್ತಾಳೆ.
“ಒಂದು ಸಂದರ್ಭದಲ್ಲಿ ರಸ್ತೇ ಸಾಕ್ಷಿಯನ್ನು ಮಾಡುತ್ತಿರುವಾಗ, ನನ್ನ ಹತ್ತಿರ ಮಿಲಿಟರಿ ಜೀಪ್ ನನ್ನ ಫಕ್ಕದಲ್ಲಿ ಕರ್ಕಶ ಶಬ್ದಮಾಡುತ್ತಾ ನಿಂತಾಗ ನನಗೆ ಭಯವಾಯಿತು. ಹತ್ತಿರದಲ್ಲಿ ನಿಂತಿದ್ದ ಕೆಲವರೆಡೆಗೆ ಎಳೆಯ ಸೈನಿಕನೊಬ್ಬನು ಕೂಗಿದ್ದು: ‘ಹೇ, ನೀನು ಅಲ್ಲಿದ್ದ ಹೆಂಗಸಿಗೆ ಇಲ್ಲಿ ಬರಲು ಹೇಳು.’ ನಾನು ಅವನ ಹತ್ತಿರ ಹೋದಾಗ, ಸೈನಿಕನ ಮುಖವು ಹೀಗೆ ಹೇಳುತ್ತಿರುವಾಗ ನಗೆಯಿಂದ ಅರಳಿತು: ‘ನೀವು ಒಳ್ಳೆಯ ಜನರು. ನೀವು ಇಲ್ಲಿರುವದನ್ನು ನೋಡಲು ನಾವು ಸಂತೋಷಿಸುತ್ತೇವೆ. ಎಳೆಯರ ಕುರಿತು ನಿಮ್ಮ ಹತ್ತಿರ ಒಂದು ಪುಸ್ತಕವಿದೆ ಎಂದು ನಾನು ನಂಬುತ್ತೇನೆ. ನನಗೂ ಕೂಡಾ ಒಂದು ಬೇಕು.’ ನನ್ನ ಹತ್ತಿರ ಒಂದೂ ಇಲ್ಲ, ಆದರೆ ಅವುಗಳು ಬಂದಕೂಡಲೆ ಅವನ ಮನೆಗೆ ಒಂದನ್ನು ನಾನು ತಲುಪಿಸುತ್ತೇನೆ ಎಂದು ಆಶ್ವಾಸನೆಯನ್ನಿತ್ತೆನು.”
ಡಿಪೋ ವಿತರಣೆಗಳು
ಸಾಹಿತ್ಯದ ವರ್ಧಿಸುತ್ತಿರುವ ಬೇಡಿಕೆಯನ್ನು ಪೂರೈಸಲು ದಕ್ಷಿಣ ಆಫ್ರಿಕದ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸು ಮಾಪೂಟೊದ ಒಂದು ಡಿಪೋಗೆ ಎರಡು ವಾರಗಳಿಗೊಮ್ಮೆ ಸಾಹಿತ್ಯ ಸರಬರಾಯಿಯನ್ನು ಮಾಡುತ್ತದೆ. ಮಾನೆಲ್ವ್, ಒಬ್ಬ ಮಿಷನೆರಿ, ಡಿಪೋವನ್ನು ನೋಡಿಕೊಳ್ಳುತ್ತಾರೆ ಮತ್ತು ಸಾಹಿತ್ಯದ ವಿತರಣೆಯನ್ನು ಸಂಸ್ಥಾಪಿಸುವದಕ್ಕೆ ಜವಾಬ್ದಾರರಾಗಿದ್ದಾರೆ.
ಒಂದು ಬೆಳಿಗ್ಗೆ ಮಧ್ಯ ವಯಸ್ಸಿನ ಮನುಷ್ಯನೊಬ್ಬನು ಆರಾಮವಾಗಿ ಒಳಗೆ ಬಂದು, ಈ ಸ್ಥಳವನ್ನು ಯಾವುದಕ್ಕೆ ಉಪಯೋಗಿಸಲಾಗಿದೆ ಎಂದು ವಿಚಾರಿಸುತ್ತಾನೆ. ಇದು ಬೈಬಲ್ ಸಾಹಿತ್ಯಗಳ ಒಂದು ಡಿಪೋ ಎಂದು ಮಾನೆಲ್ವ್ ಉತ್ತರಿಸುತ್ತಾರೆ. ಆ ಮನುಷ್ಯನು ಹೊರಗೆ ನಡೆಯುತ್ತಾನೆ, ಆದರೆ ಒಂದು ನಿಮಿಷದೊಳಗೆ ಅವನು ಹಿಂದುರಿಗಿದನು.
“ನೀನು ಹೇಳಿದ್ದು ಇವು ಬೈಬಲ್ ಪುಸ್ತಕಗಳೆಂದು, ಅಲ್ಲವೇ?” ಅವನು ಕೇಳಿದನು.
“ಹೌದು, ಅದು ಸರಿ,” ಮಾನೆಲ್ವ್ ಉತ್ತರಿಸಿದನು.
“ಇದು ಯಾವ ಸಂಸ್ಥೆಯದ್ದಾಗಿದೆ?” ಮನುಷ್ಯನು ವಿಚಾರಿಸಿದನು.
“ಯೆಹೋವನ ಸಾಕ್ಷಿಗಳು,” ಎಂದು ಮಾನೆಲ್ವ್ ಪ್ರತ್ಯುತ್ತರ ನೀಡುತ್ತಾ, ಕೂಡಿಸಿದ್ದು, “ಈ ಸಾಹಿತ್ಯವನ್ನು ನಮ್ಮ ಸ್ಥಳೀಕ ಸಭೆಗಳಿಗೆ ಪೂರೈಸುತ್ತಾ ಇರುತ್ತೇವೆ.”
“ಆಹ್, ಯೆಹೋವನ ಸಾಕ್ಷಿಗಳು!” ಮನುಷ್ಯನ ಮುಖವು ಬೆಳಗಿತು. “ನಿಮ್ಮ ವಿಷಯದಲ್ಲಿ ನಾನು ಮೆಚ್ಚುವಂಥದ್ದು ಹೇರಳವಾಗಿದೆ. ಆದರೆ ಅದೇ ಸಮಯದಲ್ಲಿ, ನಾನು ಮೆಚ್ಚದಿರುವಂಥದ್ದು ಕೂಡ ಇದೆ.”
“ಒಳ್ಳೇದು, ನಮ್ಮ ವಿಷಯದಲ್ಲಿ ನೀನು ಮೆಚ್ಚುವಂಥದ್ದು ಯಾವುದು?” ಮಾನೆಲ್ವ್ ಜಾಣತನದಿಂದ ಕೇಳುತ್ತಾನೆ.
“ನೀವು ಉತ್ಪಾದಿಸುವ ಆಸಕ್ತಿಯ ಮತ್ತು ಶೈಕ್ಷಣಿಕ ಪುಸ್ತಕಗಳನ್ನು ನಾನು ಪ್ರೀತಿಸುತ್ತೇನೆ,” ಮನುಷ್ಯನು ವಿವರಿಸುತ್ತಾನೆ. “ನಾನು ಮೆಚ್ಚದಿರುವುದೇನಂದರೆ ಅವುಗಳು ಎಂದಿಗೂ ನನಗೆ ಬೇಕಾಗುವಷ್ಟು ಸಿಗುವುದಿಲ್ಲ. ನಿಮ್ಮಂಥ ಸಾಹಿತ್ಯಗಳಿಗಾಗಿ ಇಲ್ಲಿ ಮಾಪೂಟೊದಲ್ಲಿರುವ ನಾವು ಎಷ್ಟೊಂದು ಹಸಿದಿದ್ದೇವೆ ಎಂಬುದನ್ನು ನೀವು ನಂಬಸಾಧ್ಯವಿಲ್ಲ.” ಅನಂತರ ಅವನು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳ ಲಿಖಿತ ಪಟ್ಟಿಯೊಂದನ್ನು ಹೊರಗೆಳೆದನು, ಅದರಲ್ಲಿ ಅವನಿಗೆ ದೊರಕದ ಕಾವಲಿನಬುರುಜು ಮತ್ತು ಎಚ್ಚರ! ದ ಹಿಂದಿನ ಸಂಚಿಕೆಗಳೂ ಸೇರಿದ್ದವು.
“ನನ್ನೊಂದಿಗೆ ಈ ಪಟ್ಟಿಯನ್ನು ನಾನು ಯಾವಾಗಲೂ ಕೊಂಡೊಯ್ಯುತ್ತೇನೆ,” ಅವನು ಮಾನೆಲ್ವ್ಗೆ ಹೇಳಿದನು. “ನಾನು ಯೆಹೋವನ ಸಾಕ್ಷಿಗಳನ್ನು ಭೇಟಿಯಾಗುವಾಗೆಲ್ಲಾ, ಅವರಲ್ಲಿ ಯಾವುದೆಲ್ಲಾ ಪ್ರಕಾಶನಗಳು ಇವೆಯೋ ಅವನ್ನು ಪಡೆದುಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ನನ್ನ ಪಟ್ಟಿಯಲ್ಲಿರುವದನ್ನು ಪಡೆಯಲು ನಿಮಗೆ ಸಹಾಯಮಾಡಲು ಸಾಧ್ಯವಿದ್ದರೆ, ನಾನು ಹೆಚ್ಚು ಬೆಲೆ ತೆರಲು ಸಿದ್ಧನಾಗಿದ್ದೇನೆ.”
ಸಂಭಾಷಣೆಯು ಮುಂದರಿಯಿತು. ಕ್ರಿಯೇಶನ್ ಪುಸ್ತಕವನ್ನು ಅವನು ಓದಿದಾಗ, 1950 ರ ದಶಕದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವನ್ನು ಆ ಮನುಷ್ಯನು ಮೊದಲಾಗಿ ಹೊಂದಿದ್ದನು ಎಂದು ಮಾನೆಲ್ವ್ಗೆ ತಿಳಿಯಿತು. ಆದರೆ ಪೋರ್ಚುಗೀಸ್ ಸರಕಾರದ ಕೆಳಗೆ ಯೆಹೋವನ ಸಾಕ್ಷಿಗಳ ಕಾರ್ಯವು ನಿಷೇಧಿಸಲ್ಪಟ್ಟಂದಿನಿಂದ ಪ್ರಗತಿಯು ಕೊಂಚವೇ ಆಗಿತ್ತು.
ಅವನ ಆಫೀಸಿಗೆ ತದನಂತರ ಭೇಟಿಯನ್ನಿತ್ತಾಗ, ವಾಚ್ ಟವರ್ ಪ್ರಕಾಶನಗಳೆಲ್ಲವೂ ಪ್ಲಾಸ್ಟಿಕ್ನಿಂದ ಚೆನ್ನಾಗಿ ಕಟ್ಟಿ, ನೀಟಾಗಿ ಫೈಲ್ ಮಾಡಿ ಇಟ್ಟಿದ್ದನ್ನು ಮಾನೆಲ್ವ್ ಗಮನಿಸಿದರು. ಅವನ ಸಂಗ್ರಹವನ್ನು ಪೂರ್ಣಗೊಳಿಸಲು ಬೇಕಾದ ಪ್ರಕಾಶನಗಳನ್ನು ಮಾನೆಲ್ವ್ ಒದಗಿಸಲು ಶಕ್ತರಾದರು, ಮತ್ತು ಆ ಮನುಷ್ಯನೊಂದಿಗೆ ಮತ್ತು ಅವನ ಕುಟುಂಬದೊಂದಿಗೆ ಬೈಬಲ್ ಅಧ್ಯಯನವೊಂದನ್ನು ನಡಿಸಲು ಅವರು ಏರ್ಪಡಿಸಿದರು.
ಈ ಎಲ್ಲಾ ಆತ್ಮಿಕ ನೆಡುವಿಕೆ ಮತ್ತು ನೀರುಹೊಯ್ಯುವಿಕೆಯು, ದೇವರು “ಅದನ್ನು ಬೆಳೆಸುತ್ತಾ ಬಂದಂತೆ” ತುಂಬಾ ಫಲವನ್ನು ನೀಡುತ್ತದೆ. ಮೋಸಂಬೀಕ್ನಲ್ಲಿ ಯೋಗ್ಯಹೃದಯದ ವ್ಯಕ್ತಿಗಳ ಕೊಯ್ಲು ಹೇರಳ ಬೆಳೆಯನ್ನು ಕೊಡಲಿದೆ ಎಂಬ ಬಲವಾದ ಸೂಚನೆಗಳು ಅಲ್ಲಿವೆ!—1 ಕೊರಿಂಥ 3:6; ಯೋಹಾನ 4:36.
ಅಡಿಗ್ಡಳಿದ್ದಾಗ್ಯೂ ದೇವಪ್ರಭುತ್ವ ಪ್ರಗತಿ
ಇಂದು, ಮಾಪೂಟೊ ಶಹರದಲ್ಲಿ ಮತ್ತು ಸುತ್ತಲೂ 50 ಕ್ಕಿಂತಲೂ ಹೆಚ್ಚು ಸಭೆಗಳಿವೆ. ಆದಾಗ್ಯೂ, ಅಲ್ಲಿ ಎಲ್ಲಿಯೂ ಯೆಹೋವನ ಸಾಕ್ಷಿಗಳ ಒಂದೇ ಒಂದು ರಾಜ್ಯ ಸಭಾಗೃಹವು ಕಾಣಲು ಸಿಗುವುದಿಲ್ಲ. ಅದು ಹಾಗೆ ಯಾಕೆ? ಮುಗ್ಗಟ್ಟಿನ ಅರ್ಥಿಕ ಪರಿಸ್ಥಿತಿಯ ಕಾರಣದಿಂದ, ಅನೇಕ ವರ್ಷಗಳಿಂದ ಕೆಲವು ಸಭೆಗಳಿಗೆ ಜಾಗವಿರುವುದಾದರೂ, ಅದನ್ನು ಕಟ್ಟಲು ಅವುಗಳಿಗೆ ಸಾಧ್ಯವಾಗಿಲ್ಲ.a
ಆದರೂ, ಅಂಥ ಅಡಿಗ್ಡಳು ಪ್ರಗತಿಯನ್ನು ತಡೆಯಲಾರವು. ಮೋಸಂಬೀಕ್ನ ದಕ್ಷಿಣಭಾಗದಲ್ಲಿ ಈಗ 5,000 ಕ್ಕಿಂತಲೂ ಹೆಚ್ಚು ಮನೆ ಬೈಬಲ್ ಅಭ್ಯಾಸಗಳು ನಡಿಸಲ್ಪಡುತ್ತಿವೆ. ಅಭ್ಯಾಸಗಳಿಗಾಗಿ ಎಷ್ಟೊಂದು ಮಹತ್ತಾದ ಬೇಡಿಕೆಯೆಂದರೆ ಕೆಲವೊಂದು ನಿರ್ದಿಷ್ಟ ಆದ್ಯತೆಗಳನ್ನು ಇಡಬೇಕಾಗಿದೆ. ಒಬ್ಬನು ಅಭ್ಯಾಸಕ್ಕೆ ವಿನಂತಿಸುವುದಾದರೆ, ಅವನು ಎಲ್ಲಾ ಸಭಾಕೂಟಗಳಿಗೆ ಹಾಜರಾಗಲಿರುವನು ಎಂದು ಸಾಮಾನ್ಯವಾಗಿ ಪರಿಗಣಿಸಲ್ಪಡುತ್ತದೆ.
ಜೋಪಡಿನಗರದಲ್ಲಿರುವ ಒಂದು ಸಭೆಯಲ್ಲಿ ಇತ್ತೀಚಿಗೆ, ಸುವಾರ್ತೆಯ ಪ್ರಚಾರಕರು ಕೇವಲ 71 ಇರುವುದಾದರೂ, ಆದಿತ್ಯವಾರದ ಕೂಟಗಳಿಗೆ 189 ಹಾಜರಾಗುತ್ತಾರೆ. ಈ ದೊಡ್ಡ ಗುಂಪು ಮನೆಯೊಂದರ ತೆರೆದ ಅಂಗಣದಲ್ಲಿ ಕೂಡಿಬರುತ್ತದೆ. ಉಬ್ಬುತಗ್ಗುಮಾಡಿದ ಕಬ್ಬಿಣದ ತಗಡುಗಳ ಮತ್ತು ಆಪುಹುಲ್ಲಿನ ಬೇಲಿಯ ಮೂಲಕ ಈ ಪ್ರದೇಶವನ್ನು ಸಾರ್ವಜನಿಕರ ದೃಷ್ಟಿಯಿಂದ ಮರೆಮಾಡಲಾಗಿದೆ. ಪ್ರತಿಯೊಂದು ಕೂಟದ ಮೊದಲು, ಆ ಜಾಗವನ್ನು ಶುಭ್ರವಾಗಿ ಗುಡಿಸಲಾಗುತ್ತದೆ, ಮತ್ತು ಅನೇಕ ಪ್ರಾಯಸರ್ಥ ಸಹಿತ ಸಭಿಕರಲ್ಲಿ ಅಧಿಕ ಭಾಗ ನೆಲದ ಮೇಲೆ ಹಾಸಲಾದ ಆಪುಹುಲ್ಲಿನ ಚಾಪೆಗಳ ಮೇಲೆ ಕುಳಿತುಕೊಳ್ಳುತ್ತಾರೆ. ಕಾರ್ಯಕ್ರಮಕ್ಕೆ ಎಂಥ ಏಕಾಗ್ರತೆಯ ಗಮನವನ್ನು ಅವರು ನೀಡುತ್ತಾರೆ! ಅಭ್ಯಾಸವನ್ನು ಅನುಸರಿಸಲು ಅನೇಕ ಹೊಸಬರೊಂದಿಗೆ ಕಾವಲಿನಬುರುಜು ಪ್ರತಿಯೊಂದು ಇಲ್ಲದಿರುವ ಕಾರಣ ಪ್ಯಾರಗ್ರಾಫ್ಗಳನ್ನು ಓದುವಾಗ ಅವರು ಗಮನಕೊಟ್ಟು ಕೇಳಲು ಕಲಿಯುತ್ತಾರೆ, ಮತ್ತು ಚಾಲಕನು ಕೇಳುವ ಪ್ರಶ್ನೆಗಳಿಗೆ ಪ್ರತಿವರ್ತನೆಯಲ್ಲಿ ಹೆಚ್ಚಿನ ಕೈಗಳು ಮೇಲಕ್ಕೆ ಬರುತ್ತವೆ.
ಇನ್ನೊಂದು 59 ಪ್ರಚಾರಕರ ಸಭೆಯಲ್ಲಿ ಕ್ರಮವಾದ ಹಾಜರಿಯು 140 ಕ್ಕಿಂತಲೂ ಹೆಚ್ಚಿರುತ್ತದೆ. ಅವರು ಸಾಮಾನ್ಯವಾಗಿ ತೆರೆದ ತಾರಸಿಯ ಮೇಲೆ ಕೂಡುತ್ತಾರೆ. ಆದರೆ ಮಳೆಯ ಹವಾಮಾನದಲ್ಲಿ, ಒಂದು ಸಣ್ಣ ವಾಸದ ಮಹಡಿಯ ಎರಡು ಕೋಣೆಗಳಲ್ಲಿ ಸಭೆಯು ಒತ್ತಾಗಿ ಸೇರುತ್ತದೆ. ಕಿಕ್ಕಿರಿದ ಸಭಿಕರು ಮುನ್ನಂಗಳದಲ್ಲಿ, ಅಡಿಗೆಮನೆಯಲ್ಲಿ, ಮತ್ತು ಬ್ಯಾಲ್ಕನಿಯಲ್ಲಿ ತುಂಬಿತುಳುಕುತ್ತಾರೆ. ಎಳೆಯರ ಸಹಿತ ಪ್ರತಿಯೊಬ್ಬರು ಕಾರ್ಯಕ್ರಮವನ್ನು ತೀವ್ರಾಸಕಿಯ್ತಿಂದ ಅನುಸರಿಸುವಾಗ, ಗಣ್ಯತೆ ಮತ್ತು ಲಕ್ಷ್ಯವಿಡುವಿಕೆಯನ್ನು ಒಬ್ಬನು ಪುನೊಮ್ಮೆ ಗಮನಿಸದೆ ಇರಲು ಸಾಧ್ಯವಿಲ್ಲ.
ಮೋಸಂಬೀಕ್ನಲ್ಲಿ ಭಾವಿ ಬೆಳವಣಿಗೆಯ ಪ್ರತೀಕ್ಷೆಯು ಸಮ್ಮೇಳನಗಳಲ್ಲಿ ಅಲ್ಲದೆ ಬೇರೆಲಿಯ್ಲೂ ಹೆಚ್ಚು ತೋರಿಬರುವುದಿಲ್ಲ. ನಗರದ ಕೇಂದ್ರದಲ್ಲಿರುವ ಗೂಳಿಕಾಳಗದ ಕಣವೊಂದರಲ್ಲಿ ಇತ್ತೀಚಿಗೆ ಸರ್ಕಿಟ್ ಸಮ್ಮೇಳನವೊಂದು ಜರುಗಿತು. ಆ ಅಧಿವೇಶನಗಳಿಗೆ 10,000 ಕ್ಕಿಂತಲೂ ಹೆಚ್ಚಿನ ಜನರು ಹಾಜರಾದಾಗ, ಹೆಚ್ಚುಕಡಿಮೆ ಇದ್ದ 3,000 ಪ್ರಚಾರಕರಿಗೆ ಆದ ಆಶ್ಚರ್ಯ ಎಷ್ಟೆಂದು ನೀವು ಊಹಿಸಶಕ್ತರೊ?
“ಬೆಳೆಯು ಬಹಳ”
ಮೋಸಂಬೀಕ್ನಲ್ಲಿ ಇನ್ನೂ ಬಹಳಷ್ಟು ಕೆಲಸಮಾಡಲು ಇದೆ ಎಂದು ಇವೆಲ್ಲಾ ಅನುಭವಗಳು ಸ್ಪಷ್ಟವಾಗಿಗಿ ತೋರಿಸುತ್ತವೆ. ಬ್ರಾಂಚ್ ಆಫೀಸಿನಿಂದ ಕಳುಹಿಸಲ್ಪಟ್ಟ ಸಂಚರಣಾ ಮೇಲ್ವಿಚಾರಕರ ಮೊದಲ ಭೇಟಿಯನ್ನು ಕೆಲವು ಸಭೆಗಳು ಕೇವಲ ಇತ್ತೀಚಿಗೆ ಪಡೆದಿವೆ. ಸಭೆಗಳಲ್ಲಿ ಯೋಗ್ಯವಾದ ಸಂಸ್ಥಾಪನಾ ಕಾರ್ಯವಿಧಾನಗಳನ್ನು ಜಾರಿಗೆ ತರುವಂತೆ ಸಹಾಯಮಾಡಲು ಹೆಚ್ಚು ಆವಶ್ಯಕವಾದ ನೆರವನ್ನು ಅವರು ಪಡೆಯುತ್ತಿದ್ದಾರೆ.
ಇತ್ತೀಚಿನ ಗಿಲ್ಯಾದ್ ಮಿಷನೆರಿಗಳ ಆಗಮನವನ್ನು ಕೂಡ ಸಭೆಗಳು ಬಹಳವಾಗಿ ಗಣ್ಯಮಾಡುತ್ತಿವೆ. ಮಾಪೂಟೊದ ಹಿರಿಯನಾಗಿರುವ ಫ್ರಾನ್ಸಿಸ್ಕೊ ಅವಲೋಕಿಸುವುದು: “ಇದು ನಮಗಾಗಿ ಮುನ್ನಡೆಯ ಒಂದು ದೊಡ್ಡ ಹೆಜ್ಜೆಯಾಗಿರುತ್ತದೆ. ನಮ್ಮಲ್ಲಿ ಹುರುಪು ಇತ್ತು. ನಮ್ಮಲ್ಲಿ ಪ್ರೀತಿ ಇತ್ತು. ಆದರೂ, ಅನೇಕ ಸಂಸ್ಥಾಪನಾ ವಿಷಯಗಳಲ್ಲಿ ನಾವು ಹೆಚ್ಚಿನ ಸಂಪರ್ಕ ಕಳೆದುಕೊಂಡಿದ್ದೆವು. ವಿಷಯಗಳನ್ನು ಹೇಗೆ ಮಾಡಬೇಕು ಎಂದು ಪ್ರತ್ಯಕ್ಷ ಅನುಭವವಿರುವ ಯಾರಾದರೊಬ್ಬರು ನಿಜವಾಗಿಯೂ ನಮಗೆ ಬೇಕಾಗಿದ್ದಾರೆ. ಈಗ, ನಮ್ಮೊಂದಿಗೆ ಮಿಷನೆರಿಗಳು ಇರುವುದಕ್ಕಾಗಿ ನಾವು ತುಂಬಾ ಸಂತೋಷಿತರಾಗಿದ್ದೇವೆ.”
ಮಿಷನೆರಿಗಳು ಅವರ ವತಿಯಿಂದ ತಮ್ಮ ಸಹೋದರರ ಸೇವೆಯನ್ನು ಮಾಡಲು ಆನಂದಿತರಾಗಿದ್ದಾರೆ. ಬ್ರೆಸೀಲ್ನಲ್ಲಿ 20 ವರ್ಷಗಳಷ್ಟು ಸೇವೆಯನ್ನು ಸಲ್ಲಿಸಿದ ನಂತರ, ಇತ್ತೀಚಿಗೆ ಮೋಸಂಬೀಕ್ಗೆ ನೇಮಕಾತಿ ಹೊಂದಿದ ಹಾನ್ಸ್ ಹೀಗೆ ಸಾರಾಂಶಿಸಿದರು: “ಮೋಸಂಬೀಕನ್ ಟೆರಿಟೊರಿಯಲ್ಲಿ ಕೆಲಸಮಾಡುವುದು ಒಂದು ಮಹತ್ತಾದ ಸುಯೋಗ! ಇಲ್ಲಿ ಬೃಹತ್ ಪ್ರಮಾಣದ ಅಭಿವೃದ್ಧಿಯ ಅಂಚಿನಲ್ಲಿ ನಾವಿದ್ದೇವೆ ಎಂಬ ಅರಿವು ನಮಗೆ ಆಗುತ್ತದೆ. ಇಲ್ಲಿ ಬಹಳಷ್ಟು ಕೆಲಸ ಮಾಡಲಿಕ್ಕದೆ. ಕೇವಲ ಮಾಪೂಟೊದಲ್ಲಿಯೇ ನಾವು ಇನ್ನು 10 ಯಾ 20 ಮಿಷನೆರಿಗಳನ್ನು ಉಪಯೋಗಿಸಬಲ್ಲೆವು.”
ಮೋಸಂಬೀಕ್ನಲ್ಲಿ ಈಗ ಪಡೆಯುತ್ತಿರುವ ದೇವಪ್ರಭುತ್ವದ ರಭಸವು ಯೇಸುವಿನ ತುರ್ತಿನ ಮಾತುಗಳಲ್ಲೊಂದನ್ನು ನೆನಪಿಗೆ ತರುತ್ತದೆ: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಮತ್ತಾಯ 9:37, 38) ಮೋಸಂಬೀಕ್ನಲ್ಲಿರುವ ತನ್ನ ಸೇವಕರ ಪರವಾಗಿರುವ ತುರ್ತಿನ ವಿನಂತಿಗೆ ಯೆಹೋವನು ಉತ್ತರಿಸುವನು ಎಂದು ನಂಬಲು ಅಲ್ಲಿ ಸಕಾರಣವಿದೆ.
ವಾಯುವ್ಯ ಮೋಸಂಬೀಕ್ನಲ್ಲಿನ ಬಂಧನ ಕೇಂದ್ರಗಳಲ್ಲಿ ಸಾವಿರಾರು ಯೆಹೋವನ ಸಾಕ್ಷಿಗಳು 12 ಯಾ ಹೆಚ್ಚು ವರ್ಷಗಳನ್ನು ಕಳೆದಿದ್ದರು. ಇತ್ತೀಚಿಗೆ ಅವರಲ್ಲಿ ಕೆಲವರು ಮಾಪೂಟೊಗೆ ಹಿಂತೆರಳಿದಾಗ, ಅವರಿಗಿದ್ದ ಒಂದೇ ಲೌಕಿಕ ಸ್ವತ್ತು ಅಂದರೆ ಅವರ ಸೊಂಟಗಳ ಸುತ್ತಲೂ ಕಟ್ಟಿಕೊಳ್ಳುವ ಒಂದು ಬಟ್ಟೆ ತುಂಡು ಮಾತ್ರ. ಅವರಲ್ಲಿ ಸಮೃದ್ಧವಾಗಿ ಇದದ್ದೇನಂದರೆ ನಂಬಿಕೆ! ಹತ್ತಿರ ದೇಶಗಳಲ್ಲಿದ್ದ ಅವರ ಜತೆ ಸಾಕ್ಷಿಗಳು ಕೊಟ್ಟ ಆಹಾರ ಮತ್ತು ವಸ್ತ್ರಗಳ ಉದಾರವಾದ ಕೊಡುಗೆಗಳು ಜೀವಿತವನ್ನು ಹೊಸತಾಗಿ ಆರಂಭಿಸಲು ಅವರಿಗೆ ಸಹಾಯ ಮಾಡಿದವು.
[ಅಧ್ಯಯನ ಪ್ರಶ್ನೆಗಳು]
a ಇಲ್ಲಿ ಉದ್ಯೋಗ ಸಿಗುವಷ್ಟು ಒಬ್ಬ ಮನುಷ್ಯನು ಭಾಗ್ಯವಂತನಾದರೆ, ಅವನ ಪ್ರತಿ ತಿಂಗಳ ಸರಾಸರಿ ಸಂಬಳವು ಸುಮಾರು ರೂ. 500 ರಿಂದ 750 ರಷ್ಟಾಗಿದೆ.
[ಪುಟ 23 ರಲ್ಲಿರುವ ಚಿತ್ರ]
ಶನಿವಾರ ಬೆಳಿಗ್ಗೆಯ ಸಾಕ್ಷಿಸೇವೆಗಾಗಿ ಒಂದು ಉತ್ತಮ ಹಾಜರಾತಿಯಲ್ಲಿ ಸಭೆಗಳು ಆನಂದಿಸುತ್ತವೆ
[ಪುಟ 24 ರಲ್ಲಿರುವ ಚಿತ್ರಗಳು]
ಐದು ವರ್ಷ ವಯಸ್ಸಿನ ಸೈಮೀಟುವನ್ನು ಭೇಟಿಮಾಡಿರಿ. ಅವನು ಬಂಧನ ಶಿಬಿರವೊಂದರಲ್ಲಿ ಜನಿಸಿದ್ದನು. ಇಂದು ಸೈಮೀಟುವಿನ ಹೆತ್ತವರು ಮಾಪೂಟೊಗೆ ಹಿಂತೆರಳುವುದರಲ್ಲಿ ಸಂತೋಷಿಸುತ್ತಾರೆ. ಪ್ರತಿ ವಾರ ಸೈಮೀಟುವಿನ ತಂದೆ, ಫಾನ್ಸಿಸ್ಕೊ, ಬೈಬಲ್ ಅಭ್ಯಾಸವೊಂದಕ್ಕೆ ಇಡೀ ಕುಟುಂಬವನ್ನು ಒಟ್ಟುಸೇರಿಸುತ್ತಾನೆ. ಕ್ಷೇತ್ರ ಸೇವೆಯಲ್ಲಿ ಪರಿಣಾಮಕಾರಿ ಶಿಕ್ಷಕರಾಗುವಂತೆ ತಮ್ಮ ಮಕ್ಕಳನ್ನು ತರಬೇತಿಗೊಳಿಸುವದರಲ್ಲಿ ಹೆತ್ತವರಿಬ್ಬರೂ ಬಹಳಷ್ಟು ಸಮಯವನ್ನು ವ್ಯಯಿಸುತ್ತಾರೆ. ಸೈಮೀಟು ಕೇಂದ್ರ ಮಾರುಕಟ್ಟೆಯ ಸ್ಥಳದಲ್ಲಿ ಸಾಹಿತ್ಯವನ್ನು ಹಂಚುವದರಲ್ಲಿ ಆನಂದಿಸುತ್ತಾನೆ
[ಪುಟ 25 ರಲ್ಲಿರುವ ಚಿತ್ರ]
ಉಪಯೋಗಕ್ಕಾಗಿ ಅನೇಕ ಸಭೆಗಳಿಗೆ ರಾಜ್ಯ ಸಭಾಗೃಹವಿಲ್ಲದಿರುವದು ಅವರ ಪ್ರಗತಿಯನ್ನೇನೂ ನಿಲ್ಲಿಸುವದಿಲ್ಲ. ಅನೇಕ ಸಂದರ್ಭಗಳಲ್ಲಿ, ಪ್ರಚಾರಕರ ಸಂಖ್ಯೆಯ ಇಮ್ಮಡಿಗಿಂತಲೂ ಹೆಚ್ಚು ಮಂದಿ ಕೂಟಗಳಿಗೆ ಹಾಜರಾಗುತ್ತಾರೆ