“ನಿನ್ನ ಯೌವನಕಾಲದ ಪತ್ನಿ”
“ವ್ಯಭಿಚಾರವು ಬಹುಮಟ್ಟಿಗೆ ಒಂದು ದಿನನಿತ್ಯದ ಘಟನೆಯಂತೆ ಕಾಣುತ್ತದೆ.” ಲಾಸ್ ಆ್ಯಂಜಲಿಸ್ ಟೈಮ್ಸ್ ಗೆ ಅನುಸಾರವಾಗಿ, ಅನೇಕ ಪರಿಣತರು ಹಾಗೆ ಹೇಳುತ್ತಾ. ಅಂಥ ಒಂದು ಹೇಳಿಕೆಯು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೋ? ಆದರೂ, ಗಂಡಂದಿರಲ್ಲಿ ಸುಮಾರು 50 ಪ್ರತಿಶತ ಮತ್ತು ಹೆಂಡತಿಯರಲ್ಲಿ 30 ಪ್ರತಿಶತದಿಂದ 40 ಪ್ರತಿಶತ ಅಪನಂಬಿಗಸ್ತರೆಂಬದಾಗಿ ಮನಶಾಸ್ತ್ರಜ್ಞ ಫ್ರ್ಯಾಂಕ್ ಪಿಟ್‌ಮ್ಯಾನ್ ಅಂದಾಜು ಮಾಡುತ್ತಾರೆ. ಅದು ಸತ್ಯವಾಗಿದೆಯಾದರೆ, ಎಲ್ಲಾ ವಿವಾಹಿತರಲ್ಲಿ ಬಹುಮಟ್ಟಿಗೆ ಅರ್ಧದಷ್ಟು ಜನರು ವ್ಯಭಿಚಾರ ಮಾಡುತ್ತಾರೆ!
ಅನೈತಿಕತೆಯು ಎಲ್ಲಾ ಯೋಗ್ಯ ಎಂದಿದರ ಅರ್ಥವೋ? ಅಲ್ಲವೇ ಅಲ್ಲ! ದಾಂಪತ್ಯ ದ್ರೋಹದ ಹರಡಿಕೆಯು ಅದನ್ನು ಯೋಗ್ಯವನ್ನಾಗಿ ಮಾಡುವುದಿಲ್ಲ—ಬೀದಿಯ ಪಾತಕದ ವೃದ್ಧಿಯು ಯಾರನ್ನಾದರೂ ದೋಚುವುದನ್ನು ಹೇಗೆ ಯೋಗ್ಯವನ್ನಾಗಿ ಮಾಡುವುದಿಲ್ಲವೋ ಹಾಗೆ. ಅನೈತಿಕತೆಯು ಬಾಧೆಕಾರಿ. ಉದಾಹರಣೆಗೆ, ಮಾನವ ಕುಲವು ಇಂದು ಸರ್ವವ್ಯಾಪಿಯಾದ ಅಪಾಯಕಾರಿ ಲೈಂಗಿಕ ರವಾನಿತ ರೋಗಗಳಿಂದ ಬಾಧಿತವಾಗಿದೆ, ಜನರು ನೈತಿಕ ಜೀವನವನ್ನು ನಡಿಸಿದಾದ್ದರೆ ಇವೆಲ್ಲವನ್ನು ಸುಲಭವಾಗಿ ನಿಯಂತ್ರಿಸ ಸಾಧ್ಯವಿತ್ತು. ಜನರು ತಮ್ಮ ಲೈಂಗಿಕ ಜೀವನಗಳಲ್ಲಿ ಅಷ್ಟು ಸಡಿಲವಾಗಿರದಿದ್ದಲ್ಲಿ, ಮಾರಕ ರೋಗವಾದ ಏಯ್ಡ್ಸ್‌ಗೆ ಸಿಕ್ಕಿರುವ ಕಾಲೂರೆಯು ಎಂದೂ ದೊರೆಯುತ್ತಿರಲಿಲ್ಲ.
ಅದಲ್ಲದೆ, ಅತ್ಯಂತ ಹೆಚ್ಚು ಸೂಕ್ಷ್ಮವಾದಿಗಳು ಮತ್ತು “ಜ್ಞಾನೋದಯ” ಪಡೆದವರು ಸಹ, ತಮ್ಮ ಜೊತೆಗಾರರು ಅಪನಂಬಿಗಸ್ತರಾದಾಗ ಅಪರಿಮಿತ ನೋವನ್ನು ಅನುಭವಿಸುತ್ತಾರೆ. ದಾಂಪತ್ಯ ದ್ರೋಹದ ಒಂದೇ ಒಂದು ಕ್ರಿಯೆಯು, ವಾಸಿಯಾಗಲು ಜೀವಮಾನದ ಅರ್ಧದಷ್ಟು ಸಮಯವನ್ನು ತಕ್ಕೊಳ್ಳುವ ಗಾಯಗಳನ್ನು ಉಂಟುಮಾಡಬಲ್ಲದು.
ಆದರೂ, ವಿವಾಹದ ಶಪಥಗಳನ್ನು ಗಂಭೀರವಾಗಿ ತಕ್ಕೊಳ್ಳದಿರುವುದು ದೇವರಿಗೆ ಘೋರ ಅಗೌರವವೆಂಬದು ಅತ್ಯಂತ ಮಹತ್ವದ ಸಂಗತಿಯು, ಯಾಕಂದರೆ ವಿವಾಹದ ಕರ್ತೃವು ಆತನಾಗಿದ್ದಾನೆ. ಬೈಬಲ್ ಹೇಳುವುದು: “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು.” ನಮಗೆ ಈ ಎಚ್ಚರಿಕೆಯೂ ಕೊಡಲ್ಪಟ್ಟಿದೆ: “ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.”—ಇಬ್ರಿಯ 13:4.
ಆದಕಾರಣ, ವಿವೇಕಿಗಳಾದ ಜನರು ಪ್ರೇರಿತ ಮಾತುಗಳನ್ನು ಪಾಲಿಸುತ್ತಾರೆ: “ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು.” (ಜ್ಞಾನೋಕ್ತಿ 5:18) ಅವರು ತಮ್ಮ ವಿವಾಹದ ಜೊತೆಗಳೊಂದಿಗೆ ಸಂತುಷ್ಟಿ ಮತ್ತು ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಹಾಗೆ ಮಾಡುವುದರಲ್ಲಿ ಅವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತಾರೆ, ಮತ್ತು ಅತಿ ಮಹತ್ವವಾಗಿ, ಮದುವೆಯ ಮಹಾ ಕರ್ತೃವಾದ ಯೆಹೋವ ದೇವರಿಗೆ ಗೌರವವನ್ನು ತರುತ್ತಾರೆ.