ಅವುಗಳ ಗೂಡುಗಳಿಗೆ ಹಾರಿ ಬರುತ್ತಿರುವ ಪಾರಿವಾಳಗಳಂತೆ
ಪಾರಿವಾಳಗಳು ಪ್ರಾಯಶಃ ಮನುಷ್ಯನಿಂದ ಪಳಗಿಸಲ್ಪಟ್ಟ ಪಕ್ಷಿಗಳಲ್ಲಿ ಮೊದಲನೆಯವುಗಳಾಗಿದ್ದಿರಬೇಕು. ಸಾವಿರಾರು ವರ್ಷಗಳ ಹಿಂದೆ ಐಗುಪ್ತ್ಯರು—ವರ್ಷವಿಡೀ ಆಹಾರ ಒದಗಣೆಯ ಮೇಲೆ ದೂರದೃಷ್ಟಿಯ ಯೋಜನೆಯುಳ್ಳವರಾಗಿ—ಅವರ ಮನೆಗಳ ಪಕ್ಕಗಳಲ್ಲಿ ಪಾರಿವಾಳಗಳ ಗೂಡುಗಳನ್ನು ಕಟ್ಟಿದ್ದರು. ಪಕ್ಷಿಗಳ ಮಾಂಸವು ಬಹಳ ಆಸ್ವಾದನೆಯದ್ದಾಗಿತ್ತು, ಮತ್ತು ಅವುಗಳ ಹಿಕ್ಕೆಯನ್ನು ಗೊಬ್ಬರವಾಗಿ ಬಳಸಲಾಗುತ್ತಿತ್ತು. ಮಧ್ಯಯುಗಗಳೊಳಗೆ, ಪಾರಿವಾಳದ ಗೂಡುಗಳು ಎಷ್ಟೊಂದು ಬಯಸತಕ್ಕ ಸೊತ್ತುಗಳಾಗಿದ್ದುವೆಂದರೆ, ಕೆಲವು ದೇಶಗಳಲ್ಲಿ ಕುಲೀನ ಪುರುಷರು ಯಾ ಧಾರ್ಮಿಕ ಅಂತಸ್ತಿನವರು ಮಾತ್ರ ಇವುಗಳನ್ನು ಇಟ್ಟುಕೊಳ್ಳುವಂತೆ ಅನುಮತಿಸಲಾಗುತ್ತಿತ್ತು.
ಹೆಚ್ಚಿನ ಊಟದ ಮೇಜುಗಳ ಮೇಲೆ ಮಾಂಸದ ಮೂಲವಾಗಿ ಪಾರಿವಾಳಗಳ ಸ್ಥಾನವನ್ನು ಕೋಳಿಗಳು ತಕ್ಕೊಂಡಿರುವದಾದರೂ, ಈಗಲೂ ಕೆಲವು ಪ್ರಾಚೀನ ಪಾರಿವಾಳದ ಗೂಡುಗಳನ್ನು ಸಂಧಿಸಸಾಧ್ಯವಿದೆ. ಇಲ್ಲಿ ನಿರೂಪಿಸಲ್ಪಟ್ಟ ಪಾರಿವಾಳದ ಗೂಡುಗಳನ್ನು ಈಜಿಪ್ಟಿನಲ್ಲಿ ಕಂಡುಕೊಳ್ಳಬಹುದು.
ಸಾಯಂಕಾಲ ಒಟ್ಟಾಗಿ ಹಿಂತೆರಳುವ ಇವುಗಳು, ಗೂಡುಗಳ ಮೇಲೆ ಪಕ್ಷಿಗಳ ಸಾಕ್ಷತ್ ಮೇಘವು ಕವಿಯುತ್ತದೆ. ಹೀಬ್ರು ಪ್ರವಾದಿಯಾದ ಯೆಶಾಯನು ಹೀಗೆ ಪ್ರಶ್ನಿಸಿದಾಗ, ಅದಕ್ಕೆ ಸೂಚಿಸುತ್ತಾನೆ: “ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತರ್ವೆಪಡುವ ಪಾರಿವಾಳಗಳಂತೆಯೂ ಹಾರಿ ಬರುತ್ತಿರುವ ಇವರು ಯಾರು?” ಇನ್ನೊಂದು ಭಾಷಾಂತರವು ಅದನ್ನು ಹೀಗೆ ಅನುವಾದಿಸುತ್ತದೆ: “ಮೇಘಗಳೋಪಾದಿ ತೇಲಿಬರುತ್ತಿರುವ, ಪಾರಿವಾಳಗಳಂತೆ ಅವುಗಳ ಗೂಡುಗಳಿಗೆ ಹಾರಿಬರುತ್ತಿರುವ ಇವರು ಯಾರು?”—ಯೆಶಾಯ 60:8, ದ ನ್ಯೂ ಇಂಗ್ಲಿಷ್ ಬೈಬಲ್.
ಯೆಹೋವನ ಸಂಸ್ಥಾಪನೆಗೆ ಹಿಂಡುಹಿಂಡಾಗಿ ಬರುತ್ತಿರುವ ನೂರಾರು ಸಾವಿರಾರು ದೇವಭೀರು ಜನರಲ್ಲಿ ಇಂದು ಉತ್ತರವು ಕಂಡುಕೊಳ್ಳಲ್ಪಡುತ್ತದೆ. ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳಲ್ಲಿ, ದೇವರಲ್ಲಿ ನಿರೀಕ್ಷೆಯನ್ನಿಡಲು ಅವರು ಕಲಿಯುತ್ತಾರೆ. (ಯೆಶಾಯ 60:9) ದೇವರ ಜನರಲ್ಲಿ, ಅವರು ಆತ್ಮಿಕ ಮೌಲ್ಯಗಳನ್ನು, ಸಜೀವ ನಂಬಿಕೆಯನ್ನು, ಮತ್ತು ಹಿತಕರವಾದ ಸಹವಾಸವನ್ನು ಕಂಡುಕೊಳ್ಳುತ್ತಾರೆ, ಅದು ಗೂಡುಗಳಲ್ಲಿ ಪಾರಿವಾಳಗಳು ಕಂಡುಕೊಳ್ಳುವಂಥ ರೀತಿಯಲ್ಲಿ ಶಾಂತಿ ಮತ್ತು ಭದ್ರತೆಯ ಒಂದು ಭಾವನೆಯನ್ನು ನೀಡುತ್ತದೆ. (w92 7/15)
[ಪುಟ 32 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.