ಎಳೆಬಲೆ ಮತ್ತು ಮೀನು ನಿಮಗೆ ಯಾವ ಅರ್ಥದಲ್ಲಿವೆ?
“ಪರಲೋಕ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ.”—ಮತ್ತಾಯ 13:11.
1, 2. ಯೇಸುವಿನ ಸಾಮ್ಯಗಳಲ್ಲಿ ನಾವು ಆಸಕ್ತರಿರಬಹುದು ಏಕೆ?
ಒಂದು ರಹಸ್ಯವನ್ನು ತಿಳಿಯಲು ಅಥವಾ ಒಂದು ಒಗಟನ್ನು ಬಿಡಿಸಲು ನೀವು ಆನಂದಿಸುತ್ತೀರೋ? ಹಾಗೆ ಮಾಡುವುದು ದೇವರ ಉದ್ದೇಶದಲ್ಲಿ ನಿಮ್ಮ ಭಾಗವನ್ನು ಅಧಿಕ ಸ್ಪಷ್ಟವಾಗಿ ಕಾಣುವಂತೆ ಸಹಾಯ ಮಾಡಿದಲ್ಲಿ ಆಗೇನು? ಸಂತೋಷಕರವಾಗಿ, ಅಂಥ ಒಂದು ಸೌಭಾಗ್ಯದ ಒಳನೋಟವನ್ನು ಯೇಸು ಕೊಟ್ಟ ಒಂದು ಸಾಮ್ಯದ ಮೂಲಕವಾಗಿ ನೀವು ಪಡೆಯಬಲ್ಲಿರಿ. ಅದನ್ನು ಕೇಳಿದ ಅನೇಕರನ್ನು ಅದು ತಬ್ಬಿಬ್ಬುಗೊಳಿಸಿತ್ತು ಮತ್ತು ಅಂದಿನಿಂದ ಇತರ ಅಸಂಖ್ಯಾತರನ್ನು ಅದು ಕಕ್ಕಾಬಿಕ್ಕಿಗೊಳಿಸಿದೆ, ಆದರೆ ನೀವದನ್ನು ತಿಳಿದುಕೊಳ್ಳಬಲ್ಲಿರಿ.
2 ತನ್ನ ಸಾಮ್ಯಗಳ ಉಪಯೋಗದ ಕುರಿತು ಮತ್ತಾಯ 13 ನೆಯ ಅಧ್ಯಾಯದಲ್ಲಿ ಯೇಸು ಏನು ಹೇಳಿದ್ದಾನೆಂಬದನ್ನು ಗಮನಿಸಿರಿ. ಅವನ ಶಿಷ್ಯರು ಕೇಳಿದ್ದು: “ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ಮಾತಾಡುತ್ತೀ?” (ಮತ್ತಾಯ 13:10) ಹೌದು, ಹೆಚ್ಚಿನ ಜನರಿಗೆ ಅರ್ಥವಾಗದ ಒಂದು ಸಂಗತಿಯನ್ನು ಸಾಮ್ಯರೂಪವಾಗಿ ಯೇಸು ಹೇಳಿದ್ದೇಕೆ? 11-13 ನೆಯ ವಚನಗಳಲ್ಲಿ ಆತನು ಉತ್ತರಿಸಿದ್ದು: “ಪರಲೋಕ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ. . . . ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತಾಡಲು ಕಾರಣವೇನಂದರೆ ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ, ಕಿವಿಯಿದ್ದರೂ ಕೇಳುವದಿಲ್ಲ ಮತ್ತು ತಿಳುಕೊಳ್ಳುವದಿಲ್ಲ.”
3. ಯೇಸುವಿನ ಸಾಮ್ಯಗಳನ್ನು ತಿಳುಕೊಳ್ಳುವುದು ನಮಗೆ ಹೇಗೆ ಪ್ರಯೋಜನಗಳನ್ನು ತರಬಲ್ಲದು?
3 ಅನಂತರ ಯೇಸು ಆತ್ಮಿಕವಾಗಿ ಕಿವುಡರೂ ಕುರುಡರೂ ಆಗಿದ್ದ ಒಂದು ಜನರನ್ನು ವರ್ಣಿಸಿದ್ದ ಯೆಶಾಯ 6:9, 10 ಕ್ಕೆ ಅನ್ವಯಿಸಿದನು. ನಾವಾದರೋ ಅವರಂತೆ ಇರುವ ಅಗತ್ಯವಿರುವುದಿಲ್ಲ. ಆತನ ಸಾಮ್ಯಗಳನ್ನು ತಿಳಿದುಕೊಂಡು ಅವಕ್ಕನುಸಾರವಾಗಿ ಕ್ರಿಯೆಗೈದರೆ, ನಾವು ಅತ್ಯಂತ ಸಂತೋಷದಿಂದಿರಬಲ್ಲೆವು—ಈಗಲೂ ಮತ್ತು ನಿರಂತರವಾದ ಭವಿಷ್ಯದಲ್ಲೂ. ಯೇಸು ನಮಗೆ ಈ ಬೆಚ್ಚಗೆನ ಆಶ್ವಾಸನೆಯನ್ನು ಕೊಡುತ್ತಾನೆ: “ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದುದರಿಂದ ನೀವು ಧನ್ಯರು.” (ಮತ್ತಾಯ 13:16) ಆ ಆಶ್ವಾಸನೆಯು ಯೇಸುವಿನ ಎಲ್ಲಾ ಸಾಮ್ಯಗಳನ್ನು ಆವರಿಸುತ್ತದೆ, ಆದರೆ ನಾವು ಮತ್ತಾಯ 13:47-50 ರಲ್ಲಿ ದಾಖಲೆಯಾದ ಎಳೆಬಲೆಯ ಒಂದು ಸಂಕ್ಷಿಪ್ತ ಸಾಮ್ಯದ ಮೇಲೆ ಕೇಂದ್ರೀಕರಿಸೋಣ.
ಆಳವಾದ ಅರ್ಥವುಳ್ಳ ಒಂದು ಸಾಮ್ಯ
4. ಮತ್ತಾಯ 13:47-50 ರಲ್ಲಿ ದಾಖಲೆಯಾಗಿರುವ ಪ್ರಕಾರ, ಸಾಮ್ಯದ ಮೂಲಕ ಯೇಸು ಏನನ್ನು ತಿಳಿಯಪಡಿಸಿದನು?
4 “ಮತ್ತು ಪರಲೋಕ ರಾಜ್ಯವು ಒಂದು ಬಲೆಗೆ [ಎಳೆಬಲೆಗೆ, NW] ಹೋಲಿಕೆಯಾಗಿದೆ. ಅದನ್ನು ಸಮುದ್ರದಲ್ಲಿ ಹಾಕಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿದರು. ಅದು ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಯಲ್ಲಿ ತುಂಬಿಕೊಂಡು ಕೆಟ್ಟಮೀನುಗಳನ್ನು ಬಿಸಾಟುಬಿಟ್ಟರು. ಹಾಗೆಯೇ ಯುಗದ ಸಮಾಪ್ತಿಯಲ್ಲಿ [ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ, NW] ಆಗುವದು. ದೇವದೂತರು ಹೊರಟುಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆಮಾಡಿ ಅವರನ್ನು ಬೆಂಕೀಕೊಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವದು.”
5. ಎಳೆಬಲೆಯ ಸಾಮ್ಯದ ಅರ್ಥದ ಸಂಬಂಧದಲ್ಲಿ ಯಾವ ರೀತಿಯ ಪ್ರಶ್ನೆಗಳು ಏಳುತ್ತವೆ?
5 ಜನರು ಬಲೆಯೊಂದಿಗೆ ಮೀನು ಹಿಡಿಯುವುದನ್ನು ಕಡಿಮೆಪಕ್ಷ ಚಲನಚಿತ್ರ ಅಥವಾ ಟೆಲಿವಿಷನ್ನಲ್ಲಿ ಪ್ರಾಯಶಃ ನೀವು ನೋಡಿರಬಹುದಾದರ್ದಿಂದ, ಯೇಸುವಿನ ಸಾಮ್ಯವನ್ನು ತಿಳುಕೊಳ್ಳಲು ಕಷ್ಟವಾಗದು. ಆದರೆ ವಿವರಣೆಗಳು ಮತ್ತು ಅರ್ಥಗಳ ಕುರಿತೇನು? ಉದಾಹರಣೆಗೆ, ಈ ಸಾಮ್ಯವು “ಪರಲೋಕ ರಾಜ್ಯದ” ಕುರಿತಾಗಿದೆ ಎಂದು ಯೇಸು ಹೇಳಿದನು. ಆದರೂ, “ಎಲ್ಲಾ ರೀತಿಯ” ಜನರು, ಒಳ್ಳೆಯವರು ಮತ್ತು ಕೆಟ್ಟವರು ಯಾ ದುಷ್ಟರು ಆ ರಾಜ್ಯದಲ್ಲಿ ಇರುವರು ಎಂಬ ಅರ್ಥದಲ್ಲಿ ಯೇಸು ಅದನ್ನು ಹೇಳಲಿಲ್ಲ ನಿಶ್ಚಯ. ಅಲ್ಲದೆ, ಮೀನು ಹಿಡಿಯುವವರು ಯಾರು? ಈ ಮೀನು ಹಿಡಿಯುವಿಕೆ ಮತ್ತು ಬೇರ್ಪಡಿಸುವಿಕೆಯು ಯೇಸುವಿನ ದಿನದಲ್ಲಿ ಸಂಭವಿಸಿತೋ ಅಥವಾ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಈ ನಮ್ಮ ದಿನಗಳಿಗೆ ಅದು ಮೀಸಲಾಗಿರಬಹುದೇ? ಈ ಸಾಮ್ಯದಲ್ಲಿ ನೀವು ನಿಮ್ಮನ್ನು ನೋಡುತ್ತೀರೋ? ಗೋಳಾಡುವವರೂ ಕಟಕಟನೇ ಹಲ್ಲುಕಡಿಯುವರೂ ಆದ ಜನರೊಂದಿಗೆ ನೀವು ಕೊನೆಗೊಳ್ಳುವುದನ್ನು ಹೇಗೆ ತಪ್ಪಿಸಿಕೊಳ್ಳಬಲ್ಲಿರಿ?
6. (ಎ) ಎಳೆಬಲೆಯ ಸಾಮ್ಯವನ್ನು ತಿಳಿಯುವುದರಲ್ಲಿ ನಾವು ಅತ್ಯಾಸಕ್ತರಾಗಿರಬೇಕು ಏಕೆ? (ಬಿ) ಅದರ ತಿಳುವಳಿಕೆಗೆ ಕೀಲಿಕೈ ಯಾವುದು?
6 ಇಂಥ ಪ್ರಶ್ನೆಗಳು ಎಷ್ಟೆಂದರೂ ಈ ಸಾಮ್ಯವು ಅಷ್ಟೇನೂ ಸುಲಭವಲ್ಲವೆಂಬದನ್ನು ತೋರಿಸುತ್ತವೆ. ಆದರೂ ಇದನ್ನು ಮರೆಯದಿರ್ರಿ: “ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು.” ಅದರ ಅರ್ಥದ ವಿಷಯದಲ್ಲಿ ನಮ್ಮ ಕಿವಿಗಳು ಕಿವುಡಾಗಿರದಂತೆ ಮತ್ತು ಕಣ್ಣುಗಳು ಅವುಗಳ ಪ್ರಾಮುಖ್ಯತೆಗೆ ಕುರುಡಾಗಿರದಂತೆ ನಾವದರ ಅರ್ಥವನ್ನು ಪರಿಶೋಧಿಸಲು ಶಕ್ತರೋ ಎಂಬದನ್ನು ನೋಡೋಣ. ಕಾರ್ಯತಃ ಅದರ ಅರ್ಥವನ್ನು ಬಿಡಿಸಲು ನಮ್ಮಲ್ಲಿ ಈವಾಗಲೇ ಒಂದು ಪ್ರಧಾನ ಕೀಲಿಕೈ ಇದೆ. ಗಲಿಲಾಯದ ಬೆಸ್ತರು ಆ ಕಸುಬನ್ನು ಬಿಟ್ಟು “ಮನುಷ್ಯರನ್ನು ಹಿಡಿಯುವ ಬೆಸ್ತರ” ಕೆಲಸವನ್ನು ತಕ್ಕೊಳ್ಳುವಂತೆ ಯೇಸು ಆಮಂತ್ರಿಸಿದ್ದನ್ನು ಹಿಂದಿನ ಲೇಖನವು ನಮಗೆ ತಿಳಿಸಿದೆ. (ಮಾರ್ಕ 1:17) ಅವನು ಅವರಿಗೆ ಹೇಳಿದ್ದು: “ಇಂದಿನಿಂದ ನೀನು ಮನುಷ್ಯರನ್ನು [ಸಜೀವವಾಗಿ, NW] ಹಿಡಿಯುವವನಾಗಿರುವಿ.”—ಲೂಕ 5:10.
7. ಮೀನಿನ ಕುರಿತು ಮಾತಾಡಿದಾಗ ಯೇಸು ಏನನ್ನು ದೃಷ್ಟಾಂತವಾಗಿ ಹೇಳುತ್ತಿದ್ದನು?
7 ಇದಕ್ಕೆ ಹೊಂದಿಕೆಯಲ್ಲಿ, ಈ ಸಾಮ್ಯದಲ್ಲಿನ ಮೀನು ಮನುಷ್ಯರನ್ನು ಸೂಚಿಸುತ್ತದೆ. ಆದಕಾರಣ, 49 ನೆಯ ವಚನವು ನೀತಿವಂತರಿಂದ ದುಷ್ಟರನ್ನು ಪ್ರತ್ಯೇಕಿಸುವ ಕುರಿತು ಮಾತಾಡುವಾಗ, ಅದು ನೀತಿಯ ಅಥವಾ ಅನೀತಿಯ ಕಡಲಜೀವಿಗಳ ಕುರಿತಾಗಿ ಅಲ್ಲ, ನೀತಿವಂತ ಮತ್ತು ದುಷ್ಟ ಜನರ ಕುರಿತಾಗಿ ಸೂಚಿಸುತ್ತದೆ. ತದ್ರೀತಿಯಲ್ಲಿ, 50 ನೆಯ ವಚನವು ನಮ್ಮನ್ನು, ಸಮುದ್ರ ಜೀವಿಗಳು ಗೋಳಾಡುತ್ತವೆ ಅಥವಾ ಕಟಕಟನೆ ಹಲ್ಲುಕಡಿಯುತ್ತವೆ ಎಂಬದಾಗಿ ಯೋಚಿಸುವಂತೆ ಮಾಡಬಾರದು. ಇಲ್ಲ. ಈ ಸಾಮ್ಯವು ಮನುಷ್ಯರ ಒಟ್ಟುಗೂಡಿಸುವಿಕೆಯ ಕುರಿತಾಗಿದೆ ಮತ್ತು ಫಲಿತಾಂಶವು ತೋರಿಸುವ ಪ್ರಕಾರ ಯಾವುದು ಅತಿ ಗಂಭೀರವೋ, ಆ ಅನಂತರದ ಬೇರ್ಪಡಿಸುವಿಕೆಯ ಕುರಿತಾಗಿದೆ.
8. (ಎ) ಕೆಟ್ಟ ಮೀನುಗಳಿಗಾಗುವ ಫಲಿತಾಂಶದ ವಿಷಯದಲ್ಲಿ ನಾವೇನು ಕಲಿಯಬಲ್ಲೆವು? (ಬಿ) ಕೆಟ್ಟ ಮೀನುಗಳ ಕುರಿತು ಏನು ಹೇಳಲ್ಪಟ್ಟಿದೆಯೋ ಆ ನೋಟದಲ್ಲಿ, ರಾಜ್ಯದ ವಿಷಯದಲ್ಲಿ ನಾವು ಏನನ್ನು ತೀರ್ಮಾನಿಸಬಲ್ಲೆವು?
8 ಕೆಟ್ಟ ಮೀನುಗಳು ಅಂದರೆ ದುಷ್ಟರು ಬೆಂಕೀ ಕೊಂಡದಲ್ಲಿ ಹಾಕಲ್ಪಡುವುದೂ ಮತ್ತು ಅಲ್ಲಿ ಅವರಿಗೆ ಗೋಳಾಟವನ್ನೂ ಮತ್ತು ಕಟಕಟನೆ ಹಲ್ಲುಕಡಿಯೋಣವನ್ನೂ ಮಾಡಲಿರುವುದನ್ನೂ ಗಮನಿಸಿರಿ. ಬೇರೆ ಕಡೆಗಳಲ್ಲಿ ಯೇಸುವು ಅಂಥ ಗೋಳಾಟ ಮತ್ತು ಹಲ್ಲು ಕಡಿಯೋಣವನ್ನು, ರಾಜ್ಯಬಾಧ್ಯತೆಯಿಂದ ಹೊರಗೆ ಹಾಕಲ್ಪಟ್ಟವರಿಗೆ ಜೋಡಿಸಿದ್ದಾನೆ. (ಮತ್ತಾಯ 8:12; 13:41, 42) ಮತ್ತಾಯ 5:22 ಮತ್ತು 18:9ರಲ್ಲಿ, ಅವನು ನಿತ್ಯ ನಾಶನಕ್ಕೆ ಸೂಚಿಸುತ್ತಾ, “ಗೆಹೆನ್ನಾದ ಬೆಂಕಿ” ಯನ್ನು ಸಹ ತಿಳಿಸಿದ್ದಾನೆ. ಈ ಸಾಮ್ಯದ ಅರ್ಥವನ್ನು ತಿಳಿಯುವುದು ಮತ್ತು ಅದಕ್ಕನುಸಾರ ಕ್ರಿಯೆಗೈಯುವುದು ಅದೆಷ್ಟು ಮಹತ್ವದೆಂಬದನ್ನು ಇದು ತೋರಿಸುವುದಿಲ್ಲವೇ? ಆದುದರಿಂದ, “ಪರಲೋಕ ರಾಜ್ಯವು ಒಂದು ಬಲೆಗೆ [ಎಳೆಬಲೆ, NW] ಹೋಲಿಕೆಯಾಗಿದೆ” ಎಂದು ಯೇಸು ಹೇಳಿದಾಗ, ದೇವರ ರಾಜ್ಯದ ಸಂಬಂಧದಲ್ಲಿ, ಹಲವಾರು ತರದ ಮೀನುಗಳನ್ನು ಒಟ್ಟುಗೂಡಿಸಲಿಕ್ಕಾಗಿ ಬಲೆಹಾಕುವಂಥ ಒಂದು ವೈಶಿಷ್ಟ್ಯವಿದೆ ಎಂಬರ್ಥದಲ್ಲಿ ಹೇಳಿರಬೇಕು.
9. ಎಳೆಬಲೆಯ ಸಾಮ್ಯದಲ್ಲಿ ದೇವದೂತರು ಒಳಗೂಡಿರುವುದು ಹೇಗೆ?
9 ಬಲೆಯನ್ನು ಇಳಿಸಿದ ಮೇಲೆ ಮತ್ತು ಮೀನುಗಳನ್ನು ಒಟ್ಟು ಮಾಡಿದ ಮೇಲೆ, ಒಂದು ಪ್ರತ್ಯೇಕಿಸುವ ಕೆಲಸವು ಇರುವುದು. ಇದರಲ್ಲಿ ಯಾರು ಒಳಗೂಡಿದ್ದರೆಂದು ಯೇಸು ಹೇಳಿದನು? ಮತ್ತಾಯ 13:49, ಈ ಬೆಸ್ತರು-ಬೇರ್ಪಡಿಸುವವರನ್ನು ದೇವದೂತರಾಗಿ ಗುರುತಿಸುತ್ತದೆ. ಹೀಗೆ ಯೇಸುವು ಭೂಮಿಯಲ್ಲಿನ ಮನುಷ್ಯರಲ್ಲಿ—ಕೆಲವರನ್ನು ಪರಲೋಕ ರಾಜ್ಯಕ್ಕೆ ಒಳ್ಳೆಯವರು ಮತ್ತು ಯೋಗ್ಯರಾಗಿ ಮತ್ತು ಇತರರನ್ನು ಆ ಕರೆಗೆ ಅಯೋಗ್ಯರೆಂದು ರುಜುವಾದವರಾಗಿ—ಗುರುತಿಸಲು ಉಪಯೋಗಿಸುವ ಒಂದು ಉಪಕರಣದ ಮೇಲೆ ದೇವದೂತರ ಮೇಲ್ವಿಚಾರದ ಕುರಿತು ನಮಗೆ ಹೇಳುತ್ತಿದ್ದನು.
ಮೀನು ಹಿಡಿಯುವುದು—ಯಾವಾಗ?
10. ಮೀನು ಹಿಡಿಯುವಿಕೆಯು ಒಂದು ಗಮನಾರ್ಹ ಕಾಲಾವಧಿಯ ತನಕ ವಿಸ್ತರಿಸಲ್ಪಟ್ಟಿದೆ ಎಂದು ಯಾವ ವಿವೇಚನೆಯಿಂದ ನಾವು ನಿರ್ಧರಿಸಬಲ್ಲೆವು?
10 ಇದು ಯಾವಾಗ ಅನ್ವಯಿಸುತ್ತದೆಂಬದನ್ನು ಕಂಡುಕೊಳ್ಳಲು ಪೂರ್ವಾಪರ ಸಂದರ್ಭವು ನಮಗೆ ಸಹಾಯ ಮಾಡುತ್ತದೆ. ಇದಕ್ಕೆ ತುಸು ಮುಂಚೆ, ಒಳ್ಳೆಯ ಬೀಜಗಳನ್ನು ಬಿತ್ತುವ ಕುರಿತಾದ ಒಂದು ಸಾಮ್ಯವನ್ನು ಯೇಸು ಕೊಟ್ಟನು, ಆದರೆ ಈ ಲೋಕವನ್ನು ಚಿತ್ರಿಸಿದ ಆ ಹೊಲದಲ್ಲಿ, ಒಳ್ಳೆಯ ಬೀಜಗಳ ಸಂಗಡ ಹಣಜಿಗಳೂ ಬಿತ್ತಲ್ಪಟ್ಟವು. ಒಳ್ಳೇ ಬೀಜಗಳನ್ನು ಪ್ರತಿನಿಧಿಸಿದವರು “ಪರಲೋಕ ರಾಜ್ಯದವರು; ಹಣಜಿ ಅಂದರೆ ಸೈತಾನನವರು” ಎಂದು ಮತ್ತಾಯ 13:38 ರಲ್ಲಿ ಅವನು ವಿವರಿಸಿದನು. ಇವು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕೊಯ್ಲಿನ ತನಕ ಅನೇಕ ಶತಮಾನಗಳ ವರೆಗೆ ಜತೆಜತೆಯಾಗಿ ಬೆಳೆದವು. ಅನಂತರ ಹಣಜಿಗಳು ಪ್ರತ್ಯೇಕಿಸಲ್ಪಟ್ಟವು ಮತ್ತು ಆ ಮೇಲೆ ಸುಡಲ್ಪಟ್ಟವು. ಇದನ್ನು ಎಳೆಬಲೆಯ ಸಾಮ್ಯಕ್ಕೆ ಸಮದೂಗಿಸುವಾಗ, ಬಲೆಯೊಳಗೆ ಜೀವಿಗಳನ್ನು ಒಳಗೆಳೆಯುವ ಕೆಲಸವು ಒಂದು ದೀರ್ಘಕಾಲದ ತನಕ ವಿಸ್ತರಿಸಲಿತ್ತೆಂದು ನಾವು ಕಾಣುತ್ತೇವೆ.—ಮತ್ತಾಯ 13:36-43.
11. ಒಂದನೆಯ ಶತಮಾನದಲ್ಲಿ ಒಂದು ಅಂತರ್ರಾಷ್ಟ್ರೀಯ ಮೀನು ಹಿಡಿಯುವಿಕೆಯ ಕೆಲಸವು ಪ್ರಾರಂಭಿಸಿದ್ದು ಹೇಗೆ?
11 ಯೇಸುವಿನ ಸಾಮ್ಯಕ್ಕನುಸಾರ, ಮೀನುಗಳು ತಾರತಮ್ಯವಿಲ್ಲದೆ ಒಟ್ಟುಗೂಡಿಸಲ್ಪಡಲಿದ್ದವು ಅಂದರೆ ಎಳೆಬಲೆಯು ಒಳ್ಳೇ ಮೀನುಗಳನ್ನೂ ಕೆಟ್ಟ ಮೀನುಗಳನ್ನೂ ಒಳಸೇರಿಸಲಿಕ್ಕಿತ್ತು. ಅಪೊಸ್ತಲರು ಜೀವಂತರಾಗಿದ್ದಾಗ, ಮೀನು ಹಿಡಿಯುವಿಕೆಯನ್ನು ಮಾರ್ಗದರ್ಶಿಸಿದ ದೇವದೂತರು ಅಭಿಷಿಕ್ತ ಕ್ರೈಸ್ತರಾದ “ಮೀನು”ಗಳನ್ನು ಹಿಡಿಯಲು ದೇವರ ಕ್ರೈಸ್ತ ಸಂಸ್ಥೆಯನ್ನು ಉಪಯೋಗಿಸಿದರು. ಸಾ.ಶ. 33 ರ ಪಂಚಾಶತ್ತಮಕ್ಕೆ ಮುಂಚೆ ಯೇಸುವಿನ ಮನುಷ್ಯರನ್ನು ಹಿಡಿಯುವ ಬೆಸ್ತನ ಕೆಲಸದಲ್ಲಿ ಸುಮಾರು 120 ಶಿಷ್ಯರು ಹಿಡಿಯಲ್ಪಟ್ಟರು ಎಂದು ನೀವು ಹೇಳಬಹುದು. (ಅ.ಕೃತ್ಯಗಳು 1:15) ಆದರೆ ಒಮ್ಮೆ ಅಭಿಷಿಕ್ತ ಕ್ರೈಸ್ತರ ಸಭೆಯು ಸ್ಥಾಪನೆಯಾದಾಗ, ಎಳೆಬಲೆಯ ಉಪಕರಣದೊಂದಿಗೆ ಮೀನು ಹಿಡಿಯುವಿಕೆಯು ಆರಂಭಿಸಿತು, ಮತ್ತು ಸಾವಿರಾರು ಒಳ್ಳೇ ಮೀನುಗಳು ಹಿಡಿಯಲ್ಪಟ್ಟವು. ಸಾ.ಶ. 36 ರಿಂದ ಅನ್ಯರು ಕ್ರೈಸ್ತತ್ವದೊಳಗೆ ಎಳೆಯಲ್ಪಟ್ಟಾಗ ಮತ್ತು ಕ್ರಿಸ್ತನ ಅಭಿಷಿಕ್ತ ಸಭೆಯ ಸದಸ್ಯರಾದಾಗ, ಮೀನು ಹಿಡಿಯುವಿಕೆಯು ಅಂತರ್ರಾಷ್ಟ್ರೀಯ ನೀರಿನೊಳಗೆ ವಿಸ್ತಾರವಾಗಿ ಹರಡಿತು.—ಅ.ಕೃತ್ಯಗಳು 10:1, 2, 23-48.
12. ಅಪೊಸ್ತಲರ ಮರಣಾನಂತರ ಏನು ವಿಕಾಸಗೊಂಡಿತು?
12 ಅಪೊಸ್ತಲರ ಮರಣಾನಂತರದ ಶತಮಾನಗಳಲ್ಲಿ, ದೈವಿಕ ಸತ್ಯವನ್ನು ಕಾಣಲು ಮತ್ತು ಇರಿಸಿಕೊಳ್ಳಲು ಪ್ರಯಾಸಪಡುತ್ತಿದ್ದ ಕೆಲವು ನಂಬಿಗಸ್ತ ಕ್ರೈಸ್ತರು ಇನ್ನೂ ಇದ್ದರು. ಇವರಲ್ಲಿ ಕಡಿಮೆ ಪಕ್ಷ ಕೆಲವರಿಗೆ ದೇವರ ಅನುಗ್ರಹವಿತ್ತು, ಮತ್ತು ಆತನು ಅವರನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದನು. ಆದರೂ, ಅಪೊಸ್ತಲರ ಮರಣವು ಒಂದು ವಿಸ್ತಾರವಾದ ಮತಭ್ರಷ್ಟತೆಯು ವಿಕಸಿಸುವಂತೆ ಎಡೆಗೊಡುತ್ತಾ, ಒಂದು ಪ್ರತಿಬಂಧಕ ಪ್ರಭಾವವನ್ನು ತೆಗೆದು ಹಾಕಿತು. (2 ಥೆಸಲೊನೀಕ 2:7, 8) ದೇವರ ಸಭೆಯೆಂದು ಅಪಾತ್ರವಾಗಿ ಪ್ರತಿಪಾದಿಸಿದ ಒಂದು ಸಂಘಟನೆಯು ಬೆಳೆಯುತ್ತಾ ಬಂತು. ಯೇಸುವಿನೊಂದಿಗೆ ಆಳಲು ದೇವರಾತ್ಮದಿಂದ ಅಭಿಷಿಕ್ತವಾದ ಪವಿತ್ರ ಜನಾಂಗ ತಾನು ಎಂದು ಅದು ಸುಳ್ಳಾಗಿ ವಾದಿಸಿತು.
13. ಎಳೆಬಲೆಯ ಕಾರ್ಯಗತಿಯಲ್ಲಿ ಕ್ರೈಸ್ತ ಪ್ರಪಂಚಕ್ಕೆ ಒಂದು ಪಾತ್ರವಿತ್ತೆಂದು ಏಕೆ ಹೇಳಬಹುದು?
13 ಆ ಅಪನಂಬಿಗಸ್ತ ಕ್ರೈಸ್ತತ್ವದ ಪ್ರತಿಪಾದಕರಿಗೆ ಎಳೆಬಲೆಯ ಸಾಮ್ಯದಲ್ಲಿ ಏನಾದರೂ ಪಾಲಿತ್ತೆಂದು ನೀವು ನೆನಸುತ್ತೀರೋ? ಹೌದು, ಅವರಿಗೆ ಪಾಲಿತ್ತು ಎಂದು ಉತ್ತರಿಸಲು ಸಕಾರಣವದೆ. ಸಾಂಕೇತಿಕ ಎಳೆಬಲೆಯು ಕ್ರೈಸ್ತ ಪ್ರಪಂಚವನ್ನು ಕೂಡಿತ್ತು. ಕ್ಯಾತೊಲಿಕ್ ಚರ್ಚು ಶತಮಾನಗಳಿಂದ ಬೈಬಲನ್ನು ಸಾಮಾನ್ಯ ಜನರಿಂದ ಅಡಗಿಸಲು ಪ್ರಯತ್ನಿಸಿತ್ತೆಂಬದು ಸತ್ಯ. ಆದಾಗ್ಯೂ, ಕ್ರೈಸ್ತ ಪ್ರಪಂಚದ ಸದಸ್ಯರು ದೇವರ ವಾಕ್ಯದ ಭಾಷಾಂತರದಲ್ಲಿ, ನಕಲು ಮಾಡುವಿಕೆಯಲ್ಲಿ ಮತ್ತು ಹಂಚುವಿಕೆಯಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸಿದ್ದರು. ಚರ್ಚುಗಳು ಅನಂತರ, ದೂರ ದೂರ ದೇಶಗಳ ಭಾಷೆಗೆ ಬೈಬಲನ್ನು ಭಾಷಾಂತರಿಸಿದ ಬೈಬಲ್ ಸೊಸೈಟಿಗಳನ್ನು ರಚಿಸಿದವು ಮತ್ತು ಬೆಂಬಲಿಸಿದವು. ಅನ್ನ ಕ್ರೈಸ್ತರನ್ನು ಮಾಡಿದ ವೈದ್ಯಕೀಯ ಮಿಶನೆರಿಗಳನ್ನು ಮತ್ತು ಶಿಕ್ಷಕರನ್ನೂ ಸಹ ಅವರು ಕಳುಹಿಸಿಕೊಟ್ಟರು. ಇದು ದೇವರ ಪ್ರಸನ್ನತೆ ಇಲ್ಲದ ಕೆಟ್ಟ ಮೀನುಗಳನ್ನು ಬಹುಸಂಖ್ಯೆಯಲ್ಲಿ ಒಟ್ಟುಗೂಡಿಸಿತು. ಕೆಟ್ಟದಾಗಿದ್ದರೂ ಅದು, ಕಡಿಮೆಪಕ್ಷ ಲಕ್ಷಾಂತರ ಅಕ್ರೈಸ್ತ ಜನರನ್ನು ಬೈಬಲಿನ ಕಡೆಗೆ ಮತ್ತು ಒಂದು ಕ್ರೈಸ್ತ ಪದ್ಧತಿಗೆ ಹೊರಗೆಡಹಿತು.
14. ಒಳ್ಳೆಯ ಮೀನನ್ನು ಹಿಡಿಯುವುದರಲ್ಲಿ ಕ್ರೈಸ್ತ ಪ್ರಪಂಚದ ಚರ್ಚುಗಳಿಂದ ನಡಿಸಲ್ಪಟ್ಟ ಕೆಲವು ಕೆಲಸದಿಂದ ಹೇಗೆ ಸಹಾಯ ಸಿಕ್ಕಿತು?
14 ಈ ಎಲ್ಲಾ ಸಮಯದಲ್ಲಿ, ದೇವರ ವಾಕ್ಯಕ್ಕೆ ಅಂಟಿಕೊಂಡಿದ್ದ ಚದರಿಹೋಗಿದ್ದ ನಂಬಿಗಸ್ತ ಜನರು ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಪ್ರಯಾಸಪಟ್ಟು ದುಡಿದರು. ಯಾವುದೇ ಗೊತ್ತಾದ ಸಮಯದಲ್ಲಿ, ಭೂಮಿಯಲ್ಲಿ ದೇವರ ನಿಜ ಅಭಿಷಿಕ್ತ ಸಭೆಯಾಗಿ ಕಾರ್ಯನಡಿಸಲು ಅವರು ಸಂಘಟಿತರಾಗಿದ್ದರು. ಮತ್ತು ಯಾರಲ್ಲಿ ಹೆಚ್ಚಿನವರನ್ನು ಒಳ್ಳೆಯವುಗಳೆಂದು ನೋಡಿ ದೇವರು ತನ್ನ ಆತ್ಮದಿಂದ ಅಭಿಷೇಕ ಮಾಡುವನೋ ಅಂಥ ಅನೇಕ ಮೀನುಗಳನ್ನು ಅಥವಾ ಮನುಷ್ಯರನ್ನು ಹಿಡಿಯುವ ಕೆಲಸವನ್ನು, ಇವರೂ ಮಾಡುತ್ತಿದ್ದರು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಬಹುದು. (ರೋಮಾಪುರ 8:14-17) ಕ್ರೈಸ್ತತ್ವದ ಈ ಒಳ್ಳೆಯ ಪ್ರತಿಪಾದಕರು, ಅನ್ನ ಕ್ರೈಸ್ತರಾಗಿದ್ದ ಅನೇಕರಿಗೆ ಅಥವಾ ಕ್ರೈಸ್ತಪ್ರಪಂಚದ ಬೈಬಲ್ ಸೊಸೈಟಿಗಳಿಂದ ಅವರ ಭಾಷೆಗಳಿಗೆ ತರ್ಜುಮೆಯಾದ ಶಾಸ್ತ್ರವಚನಗಳಿಂದ ಸೀಮಿತ ಬೈಬಲ್ ಜ್ಞಾನವನ್ನು ಪಡೆದವರಿಗೆ, ಬೈಬಲ್ ಸತ್ಯವನ್ನು ಕೊಡಲು ಶಕ್ತರಾದರು. ಹೌದು, ಕ್ರೈಸ್ತ ಪ್ರಪಂಚದಿಂದ ಒಟ್ಟುಗೂಡಿಸಲ್ಪಟ್ಟ ಹೆಚ್ಚಿನವುಗಳು ದೇವರ ದೃಷ್ಟಿಯಲ್ಲಿ ಕೆಟ್ಟವುಗಳಾಗಿದ್ದರೂ, ಒಳ್ಳೇ ಮೀನಿನ ಒಟ್ಟುಗೂಡಿಸುವಿಕೆಯು ಮುಂದರಿಯುತ್ತಾ ಇತ್ತು.
15. ಸ್ಪಷ್ಟವಾಗಿಗಿ, ಸಾಮ್ಯದಲ್ಲಿನ ಎಳೆಬಲೆಯಿಂದ ಏನು ಪ್ರತಿನಿಧಿಸಲ್ಪಟ್ಟಿದೆ?
15 ಹೀಗೆ ಎಳೆಬಲೆಯು, ದೇವರ ಸಭೆಯೆಂದು ಹೇಳಿಕೊಳ್ಳುವ ಮತ್ತು ಮೀನುಗಳನ್ನು ಒಟ್ಟುಗೂಡಿಸುವ ಒಂದು ಐಹಿಕ ಉಪಕರಣವನ್ನು ಪ್ರತಿನಿಧಿಸುತ್ತದೆ. ಅದರಲ್ಲಿ ಕ್ರೈಸ್ತ ಪ್ರಪಂಚ ಮತ್ತು ನಿಜ ಅಭಿಷಿಕ್ತ ಕ್ರೈಸ್ತರ ಸಭೆ ಎರಡೂ ಸೇರಿರುತ್ತವೆ. ಎರಡನೆಯದು ಮಾತ್ರ ಮತ್ತಾಯ 13:49 ಕ್ಕೆ ಹೊಂದಿಕೆಯಲ್ಲಿ, ದೇವದೂತರ ಅದೃಶ್ಯ ಮಾರ್ಗದರ್ಶನೆಯ ಕೆಳಗೆ ಒಳ್ಳೆಯ ಮೀನುಗಳನ್ನು ಒಟ್ಟುಗೂಡಿಸುವುದನ್ನು ಮುಂದುವರಿಸಿದೆ.
ನಮ್ಮದು ವಿಶೇಷ ಸಮಯ
16, 17. ಯೇಸುವಿನ ಸಾಮ್ಯದ ಎಳೆಬಲೆಯ ಕಾರ್ಯಗತಿಯಲ್ಲಿ ನಾವು ಜೀವಿಸುತ್ತಿರುವ ಸಮಯವು ಏಕೆ ಅಷ್ಟು ಮಹತ್ವದ್ದು?
16 ನಾವೀಗ ಸಮಯದ ಘಟಕವನ್ನು ಪರಿಗಣಿಸೋಣ. ಶತಮಾನಗಳಿಂದ ಎಳೆಬಲೆಯೆಂಬ ಉಪಕರಣವು ಒಳ್ಳೆಯ ಮೀನುಗಳನ್ನು ಹಾಗೂ ಅನೇಕಾನೇಕ ಕೆಟ್ಟ ಮೀನುಗಳನ್ನು, ಅಥವಾ ದುಷ್ಟರನ್ನು ಒಟ್ಟುಗೂಡಿಸಿತ್ತು. ಆ ಮೇಲೆ ಒಂದು ನಿರ್ಣಾಯಕ ಪ್ರತ್ಯೇಕಿಸುವ ಕೆಲಸ ಮಾಡುವುದರಲ್ಲಿ ದೇವದೂತರು ಒಳಗೂಡುವ ಸಮಯವು ಬಂತು. ಅದು ಯಾವಾಗ? ಅದು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ” ಎಂದು 49 ನೆಯ ವಚನವು ಸ್ಪಷ್ಟವಾಗಿ ತಿಳಿಸುತ್ತದೆ. ಕುರಿ ಮತ್ತು ಆಡುಗಳ ಸಾಮ್ಯದಲ್ಲಿ ಯೇಸು ಏನು ಹೇಳಿದ್ದನೋ ಅದಕ್ಕೆ ಇದು ಸರಿದೂಗುತ್ತದೆ: “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರಿಂದ ಕೂಡಿ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು. ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆ ಬೇರೆ ಮಾಡುವ ಪ್ರಕಾರ ಆತನು ಅವರನ್ನು ಬೇರೆ ಬೇರೆ ಮಾಡುವನು.”—ಮತ್ತಾಯ 25:31, 32.
17 ಆದಕಾರಣ, ಮತ್ತಾಯ 13:47-50 ಕ್ಕೆ ಹೊಂದಿಕೆಯಲ್ಲಿ, ದೇವದೂತರ ಮಾರ್ಗದರ್ಶನೆಯ ಕೆಳಗೆ ಒಂದು ನಿರ್ಣಾಯಕ ಪ್ರತ್ಯೇಕಿಸುವ ಕೆಲಸವು, “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಯು ಆರಂಭಿಸಿದ 1914 ರಿಂದ ಮುಂದೆ ಸಾಗುತ್ತಲಿದೆ. ಇದು ವಿಶಿಷ್ಟವಾಗಿ 1919 ರ ಅನಂತರ, ಅಭಿಷಿಕ್ತ ಉಳಿಕೆಯವರು ತಾತ್ಕಾಲಿಕ ಆತ್ಮಿಕ ಬಂದಿವಾಸ ಅಥವಾ ಸೆರೆವಾಸದಿಂದ ಮುಕ್ತಗೊಂಡು, ಮೀನು ಹಿಡಿಯುವ ಕೆಲಸವನ್ನು ಪೂರೈಸುವುದರಲ್ಲಿ ಒಂದು ಹೆಚ್ಚು ಪರಿಣಾಮಕಾರಿ ಉಪಕರಣವಾದಾಗ ದೃಶ್ಯಗೋಚರವಾಯಿತು.
18. ಒಳ್ಳೆಯ ಮೀನುಗಳನ್ನು ಪಾತ್ರೆಗಳಿಗೆ ತುಂಬಿಸಲಾದದ್ದು ಹೇಗೆ?
18 ಪ್ರತ್ಯೇಕಿಸಲ್ಪಟ್ಟ ಒಳ್ಳೆಯ ಮೀನುಗಳಿಗೆ ಏನು ಸಂಭವಿಸಲಿಕ್ಕಿತ್ತು? ಬೆಸ್ತರು-ಬೇರ್ಪಡಿಸುವವರಾದ ದಿವ್ಯದೂತರು “ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ [ಪಾತ್ರೆಗಳಲ್ಲಿ, NW] ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಟುಬಿಟ್ಟರು,” ಎಂದು 48 ನೆಯ ವಚನವು ಹೇಳುತ್ತದೆ. ಒಳ್ಳೆಯ ಮೀನುಗಳನ್ನು ತುಂಬಿಸಿದ ಪುಟ್ಟಿಗಳು [ಪಾತ್ರೆಗಳು] ಸುರಕ್ಷಿತವಾದ ಧಾರಕಗಳು ಆಗಿದ್ದವು. ಇದು ನಮ್ಮ ಸಮಯದಲ್ಲಿ ಸಂಭವಿಸಿದೆಯೇ? ನಿಶ್ಚಯವಾಗಿಯೂ. ಸಾಂಕೇತಿಕವಾದ ಒಳ್ಳೆಯ ಮೀನುಗಳು ಸಜೀವವಾಗಿ ಹಿಡಿಯಲ್ಪಟ್ಟಾಗ, ನಿಜ ಕ್ರೈಸ್ತರ ಸಭೆಯೊಳಗೆ ಅವು ಒಟ್ಟುಗೂಡಿಸಲ್ಪಟ್ಟಿವೆ. ಈ ಪುಟ್ಟಿಗಳಂಥ (ಪಾತ್ರೆಗಳಂಥ) ಸಭೆಗಳು ಅವರನ್ನು ಕಾಪಾಡಲು ಮತ್ತು ದೈವಿಕ ಸೇವೆಗಾಗಿ ಕಾದಿರಿಸಲು ಸಹಾಯ ಮಾಡಿವೆ ಎಂಬದನ್ನು ನೀವು ಒಪ್ಪುವುದಿಲ್ಲವೋ? ಆದರೂ, ಕೆಲವರು ಕೇಳಬಹುದು, ‘ಅದೆಲ್ಲಾ ಚೆನ್ನಾಗಿದೆ, ಆದರೆ ನನ್ನ ಪ್ರಚಲಿತ ಜೀವನಕ್ಕೆ ಮತ್ತು ಭವಿಷ್ಯತ್ತಿಗೆ ಅದು ಹೇಗೆ ಸಂಬಂಧಿಸಿದೆ?’
19, 20. (ಎ) ಈ ಸಾಮ್ಯದ ಅರ್ಥವನ್ನು ಇಂದು ತಿಳಿಯುವುದೇಕೆ ಅತ್ಯಾವಶ್ಯಕವು? (ಬಿ) 1919 ರಿಂದ ಯಾವ ಮಹತ್ವದ ಮೀನು ಹಿಡಿಯುವಿಕೆಯು ನಡಿಸಲ್ಪಟ್ಟಿರುತ್ತದೆ?
19 ಇಲ್ಲಿ ಚಿತ್ರಿಸಲ್ಪಟ್ಟ ಕಾರ್ಯವಿಧಾನವು, ಅಪೊಸ್ತಲರ ಕಾಲ ಮತ್ತು 1914 ರ ನಡುವಣ ಶತಮಾನಗಳ ಸಮಯಕ್ಕೆ ಸೀಮಿತವಾಗಿರಲಿಲ್ಲ, ಆ ಅವಧಿಯಲ್ಲಿ ಎಳೆಬಲೆ ಉಪಕರಣವು ಕ್ರೈಸ್ತತ್ವದ ಸುಳ್ಳು ಪ್ರತಿಪಾದಕರನ್ನು ಮತ್ತು ಸತ್ಯ ಪ್ರತಿಪಾದಕರನ್ನು ಇಬ್ಬರನ್ನೂ ಒಟ್ಟುಗೂಡಿಸಿತ್ತು. ಹೌದು, ಅದು ಕೆಟ್ಟ ಮೀನು ಮತ್ತು ಒಳ್ಳೆಯ ಮೀನು ಎರಡನ್ನೂ ಒಟ್ಟುಗೂಡಿಸುತ್ತಾ ಇತ್ತು. ಅದಲ್ಲದೆ, ದೇವದೂತರಿಂದ ನಡಿಸಲ್ಪಡುತ್ತಿದ್ದ ಪ್ರತ್ಯೇಕಿಸುವ ಕೆಲಸವು ಹಿಂದೆ 1919 ರ ಸಮಯಕ್ಕೆ ಅಂತ್ಯಗೊಳ್ಳಲಿಲ್ಲ. ನಿಶ್ಚಯವಾಗಿಯೂ ಇಲ್ಲ. ಕೆಲವು ವಿಷಯಗಳಲ್ಲಿ ಈ ಎಳೆಬಲೆಯ ಸಾಮ್ಯವು ಸೀದಾ ನಮ್ಮ ಪ್ರಚಲಿತ ಸಮಯದ ತನಕ ಅನ್ವಯಿಸುತ್ತದೆ. ನಾವು ಒಳಗೂಡಿರುತ್ತೇವೆ ಮತ್ತು ನಮ್ಮ ನಿಕಟವಾದ ಭವಿಷ್ಯತ್ತು ಸಹ ಒಳಗೂಡಿದೆ. ತಿಳುವಳಿಕೆಯೊಂದಿಗೆ “ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು” ಎಂಬ ಈ ಮಾತುಗಳು ನಮ್ಮನ್ನು ವರ್ಣಿಸುವಂತೆ ನಾವು ಬಯಸುವುದಾದರೆ, ಅದು ಹೇಗೆ ಮತ್ತು ಹಾಗೇಕೆ ಎಂದು ತಿಳುಕೊಳ್ಳುವುದು ನಮಗೆ ಅತ್ಯಾವಶ್ಯಕ.—ಮತ್ತಾಯ 13:16.
20 ದೇವದೂತರೊಂದಿಗೆ ಸಹಕರಣೆಯಲ್ಲಿ ಉಳಿಕೆಯವರು ಸಾರುವ ಕಾರ್ಯದಲ್ಲಿ 1919 ರ ನಂತರ ಮಗ್ನರಾದರು ಎಂದು ನೀವು ತಿಳಿದಿರಬಹುದು. ಅವರು ಸಾಂಕೇತಿಕ ಎಳೆಬಲೆಯನ್ನು ಉಪಯೋಗಿಸುವುದನ್ನು ಮುಂದರಿಸುತ್ತಾ, ಒಳ್ಳೆಯ ಮೀನುಗಳನ್ನು ಕೆಟ್ಟವುಗಳಿಂದ ಪ್ರತ್ಯೇಕಿಸಲಿಕ್ಕಾಗಿ ದಡಕ್ಕೆ ಎಳೆದು ಹಾಕಿದರು. ಆ ಕಾಲಾವಧಿಯ ಸಂಖ್ಯಾಸಂಗ್ರಹಣವು, ದೇವರಾತ್ಮದಿಂದ ಅಭಿಷೇಕಿಸಲಿಕ್ಕಾಗಿ ಒಳ್ಳೆಯ ಮೀನುಗಳನ್ನು ಹಿಡಿಯುವಿಕೆಯು 1,44,000 ಮಂದಿಯಲ್ಲಿ ಕೊನೆಯವರು ಸಾಂಕೇತಿಕ ಬಲೆಯಲ್ಲಿ ಒಟ್ಟುಗೂಡಿಸಲ್ಪಡುವ ತನಕ ಮುಂದುವರಿಯಿತೆಂದು ತೋರಿಸುತ್ತದೆ. (ಪ್ರಕಟನೆ 7:1-4) ಆದರೆ, 1930 ಗಳ ಮಧ್ಯದೊಳಗೆ, ಪವಿತ್ರಾತ್ಮದ ಅಭಿಷೇಕಕ್ಕಾಗಿ ಒಳ್ಳೆಯ ಮೀನುಗಳ ಒಟ್ಟುಗೂಡಿಸುವಿಕೆಯು ಮೂಲತಃ ಅಂತ್ಯಗೊಂಡಿತು. ಆಗ ಅಭಿಷಿಕ್ತ ಉಳಿಕೆಯವರ ಸಭೆಯು, ಬಲೆಯನ್ನು ಬಿಸಾಡಿಬಿಟ್ಟೋ ಎಂಬಂತೆ, ತಮ್ಮ ಸ್ವರ್ಗೀಯ ಬಹುಮಾನಕ್ಕಾಗಿ ಕಾಯುತ್ತಾ, ಕೆಲಸ ಮಾಡದೆ ಸುಮ್ಮನೆ ಕೂತಿರಬೇಕಿತ್ತೋ? ಇಲ್ಲವೇ ಇಲ್ಲ!
ಮೀನು ಹಿಡಿಯುವುದರಲ್ಲಿ ನಿಮ್ಮ ಒಳಗೂಡಿಕೆ
21. ನಮ್ಮ ಸಮಯದಲ್ಲಿ ಬೇರೆ ಯಾವ ಮೀನು ಹಿಡಿಯುವಿಕೆಯು ಸಂಭವಿಸಿರುತ್ತದೆ? (ಲೂಕ 23:43)
21 ಯೇಸುವಿನ ಎಳೆಬಲೆಯ ಕುರಿತಾದ ಸಾಮ್ಯವು ಪರಲೋಕ ರಾಜ್ಯದಲ್ಲಿ ಒಂದು ಸ್ಥಾನವನ್ನು ಬಹುಮಾನವಾಗಿ ಪಡೆಯುವ ಒಳ್ಳೇ ಮೀನುಗಳ ಮೇಲೆ ಕೇಂದ್ರೀಕರಿಸಿತ್ತು. ಆದರೂ, ಹಿಂದಿನ ಲೇಖನದಲ್ಲಿ ದೃಷ್ಟಾಂತಿಸಲ್ಪಟ್ಟ ಪ್ರಕಾರ, ಆ ಸಾಮ್ಯ ಮಾತ್ರವಲ್ಲದೆ, ಇನ್ನೊಂದು ಸಾಂಕೇತಿಕ ಮೀನು ಹಿಡಿಯುವಿಕೆಯು ಒಂದು ವಿಸ್ತಾರವಾದ ಪ್ರಮಾಣದಲ್ಲಿ ನಡೆಯುತ್ತಾ ಇದೆ. ಈ ಮೀನು ಹಿಡಿಯುವಿಕೆಯು ಯೇಸುವಿನ ಸಾಮ್ಯದಲ್ಲಿ ತಿಳಿಸಲಾದ ಒಳ್ಳೆಯ ಅಭಿಷಿಕ್ತ ಮೀನುಗಳಿಗಾಗಿ ಅಲ್ಲ, ಬದಲಾಗಿ ಸಜೀವವಾಗಿ ಹಿಡಿಯಲ್ಪಡುವ ಮತ್ತು ಪರದೈಸ ಭೂಮಿಯ ಮೇಲೆ ಜೀವದ ಆಶ್ಚರ್ಯಕರ ನಿರೀಕ್ಷೆಯು ನೀಡಲ್ಪಡುವ ಸಾಂಕೇತಿಕ ಮೀನುಗಳಿಗಾಗಿ ಇರುತ್ತದೆ.—ಪ್ರಕಟನೆ 7:9, 10; ಮತ್ತಾಯ 25:31-46 ಕ್ಕೆ ಹೋಲಿಸಿರಿ.
22. ಯಾವ ಸಂತೋಷದ ಫಲಿತಾಂಶವನ್ನು ನಾವು ಅನುಭವಿಸಬಲ್ಲೆವು, ಮತ್ತು ಪರ್ಯಾಯವಾಗಿ ಏನಿದೆ?
22 ನಿಮಗೆ ಆ ನಿರೀಕ್ಷೆಯು ಇದ್ದಲ್ಲಿ, ಈ ಜೀವರಕ್ಷಕ ಮೀನು ಹಿಡಿಯುವ ಕೆಲಸವನ್ನು ಯೆಹೋವನು ಈ ತನಕ ಮುಂದುವರಿಸಲು ಬಿಟ್ಟದ್ದಕ್ಕಾಗಿ ನೀವು ಉಲ್ಲಾಸಪಡ ಸಾಧ್ಯವಿದೆ. ಇದು ನಿಮಗೆ ಒಂದು ಆಶ್ಚರ್ಯಕರವಾದ ಪ್ರತೀಕ್ಷೆಯನ್ನು ಪಡೆಯಲು ಶಕ್ಯವನ್ನಾಗಿ ಮಾಡಿದೆ. ಪ್ರತೀಕ್ಷೆಯೋ? ಹೌದು, ಅದು ಬಳಸಲು ತಕ್ಕದಾದ್ದ ಶಬ್ದವು, ಯಾಕಂದರೆ ಫಲಿತಾಂಶವು, ಈ ಮುಂದುವರಿಯುತ್ತಿರುವ ಮೀನು ಹಿಡಿಯುವ ಕೆಲಸವನ್ನು ಮಾರ್ಗದರ್ಶಿಸುವಾತನಿಗೆ ನಮ್ಮ ಎಡೆಬಿಡದ ನಂಬಿಗಸ್ತಿಕೆಗೆ ಹೊಂದಿಕೆಯಲ್ಲಿರುವುದು. (ಚೆಫನ್ಯ 2:3) ಎಳೆಬಲೆಯಿಂದ ಎಳೆಯಲ್ಪಟ್ಟ ಮೀನುಗಳೆಲ್ಲವೂ ಒಂದು ಮೆಚ್ಚಿಕೆಯ ಫಲಿತಾಂಶವನ್ನು ಅನುಭವಿಸುವುದಿಲ್ಲ ಎಂಬದನ್ನು ಸಾಮ್ಯದಿಂದ ನೆನಪಿಸಿಕೊಳ್ಳಿರಿ. ಕೆಟ್ಟವುಗಳು ಅಥವಾ ದುಷ್ಟರು ನೀತಿವಂತರೊಳಗಿಂದ ಪ್ರತ್ಯೇಕಿಸಲ್ಪಡುವರೆಂದು ಯೇಸು ಹೇಳಿದ್ದಾನೆ. ಯಾವ ಫಲಿತಾಂಶಕ್ಕೆ? ಮತ್ತಾಯ 13:50 ರಲ್ಲಿ ಯೇಸು ಆ ಕೆಟ್ಟ ಮೀನುಗಳಿಗೆ ಅಥವಾ ದುಷ್ಟರಿಗೆ ಸಿಗುವ ಗಂಭೀರ ಪರಿಣಾಮವನ್ನು ವರ್ಣಿಸಿದ್ದಾನೆ. ಅವುಗಳು ಬೆಂಕೀಕೊಂಡದೊಳಗೆ ಎಸೆಯಲ್ಪಡುವುವು, ಅಂದರೆ ನಿತ್ಯನಾಶನಕ್ಕೆ ಹೋಗುವುವು.—ಪ್ರಕಟನೆ 21:8.
23. ಇಂದು ಮೀನು ಹಿಡಿಯುವ ಕೆಲಸವನ್ನು ಅಷ್ಟು ಮಹತ್ವದ್ದಾಗಿ ಮಾಡುವುದು ಯಾವುದು?
23 ಒಳ್ಳೆಯ ಅಭಿಷಿಕ್ತ ಮೀನುಗಳಿಗೆ, ಹಾಗೂ ಭೂಮಿಯ ಮೇಲೆ ಸದಾ ಜೀವಿಸಬಹುದಾದ ಸಾಂಕೇತಿಕ ಮೀನುಗಳಿಗೆ, ಒಂದು ಮಹಿಮಾಯುಕ್ತ ಭವಿಷ್ಯವು ಇದೆ. ಹಾಗಾದರೆ, ಸಕಾರಣದಿಂದಲೇ, ಪ್ರಸ್ತುತ ಒಂದು ಸಾಫಲ್ಯಯುಕ್ತ ಮೀನು ಹಿಡಿಯುವಿಕೆಯು ಭೂಸುತ್ತಲೂ ನಡಿಸಲ್ಪಡುವಂತೆ ದೇವದೂತರು ನೋಡಿಕೊಂಡಿರುತ್ತಾರೆ. ಮತ್ತು ಎಷ್ಟು ಹೆಚ್ಚು ಪ್ರಮಾಣದಲ್ಲಿ ಮೀನುಗಳು ಸಿಗುತ್ತಿವೆ! ಒಂದು ದೃಷ್ಟಿಕೋನದಲ್ಲಿ ಇದು, ಯೇಸುವಿನ ಮಾರ್ಗದರ್ಶನೆಯ ಮೇರೆಗೆ ತಮ್ಮ ಬಲೆಗಳನ್ನು ಇಳಿಸಿದಾಗ ಅಪೊಸ್ತಲರಿಗೆ ಆಶ್ಚರ್ಯಕರವಾಗಿ ದೊರೆತ ಅಕ್ಷರಾರ್ಥಕ ಮೀನುಗಳಂತೆಯೇ ಇದೆ ಎಂದು ಹೇಳುವುದು ಸರಿಯಾಗಿರುವುದು.
24. ಆತ್ಮಿಕ ಮೀನು ಹಿಡಿಯುವ ಸಂಬಂಧದಲ್ಲಿ ನಾವೇನನ್ನು ಮಾಡಬಯಸಬೇಕು?
24 ಆತ್ಮಿಕ ಮೀನು ಹಿಡಿಯುವ ಈ ಜೀವರಕ್ಷಕ ಕಾರ್ಯದಲ್ಲಿ ನಿಮ್ಮಿಂದ ಶಕ್ಯವಾದಷ್ಟು ಕ್ರಿಯಾಶೀಲ ಪಾಲನ್ನು ನೀವು ತಕ್ಕೊಳ್ಳುತ್ತಿದ್ದೀರೋ? ಈ ಸಮಯದ ತನಕ ಅದರಲ್ಲಿ ನಮ್ಮ ವೈಯಕ್ತಿಕ ಪಾಲು ಎಷ್ಟೇ ವಿಸ್ತಾರ್ಯವಾಗಿರಲಿ, ಈಗ ಮುಂದರಿಯುತ್ತಿರುವ ಮಹಾ ಮೀನು ಹಿಡಿಯುವಿಕೆಯಲ್ಲಿ ಮತ್ತು ಜೀವರಕ್ಷಕ ಕಾರ್ಯದಲ್ಲಿ ಭೂವ್ಯಾಪಕವಾಗಿ ಏನು ಪೂರೈಸಲ್ಪಡುತ್ತಿದೆ ಎಂಬದನ್ನು ನಾವು ಪ್ರತಿಯೊಬ್ಬರು ಪ್ರಯೋಜನಕರವಾಗಿ ವೀಕ್ಷಿಸ ಸಾಧ್ಯವಿದೆ. ಹಾಗೆ ಮಾಡುವುದು ನಮ್ಮನ್ನು ಮುಂದಿರುವ ದಿನಗಳಲ್ಲಿ ಮೀನುಗಳಿಗಾಗಿ ನಮ್ಮ ಬಲೆಗಳನ್ನು ಹಾಕುವುದರಲ್ಲಿ ಇನ್ನಷ್ಟು ಹೆಚ್ಚು ಹುರುಪಿನಿಂದಿರುವಂತೆ ಪ್ರೇರಿಸಬೇಕು!—ಮತ್ತಾಯ 13:23 ನ್ನು ಹೋಲಿಸಿರಿ; 1 ಥೆಸಲೊನೀಕ 4:1.
ಈ ವಿಷಯಗಳು ನಿಮಗೆ ನೆನಪಿವೆಯೇ?
▫ ಎಳೆಬಲೆಯ ಯೇಸುವಿನ ಸಾಮ್ಯದಲ್ಲಿ ಎರಡು ರೀತಿಯ ಮೀನುಗಳಿಂದ ಏನು ಪ್ರತಿನಿಧಿಸಲ್ಪಟ್ಟಿದೆ?
▫ ಎಳೆಬಲೆಯ ಕಾರ್ಯಗತಿಯಲ್ಲಿ ಕ್ರೈಸ್ತ ಪ್ರಪಂಚದ ಚರ್ಚುಗಳು ಯಾವ ಅರ್ಥದಲ್ಲಿ ಒಳಗೂಡಿರುತ್ತವೆ?
▫ ನಮ್ಮ ಕಾಲದಲ್ಲಿ ನಡಿಯುತ್ತಿರುವ ಮೀನು ಹಿಡಿಯುವಿಕೆಯು ಏಕೆ ಅಷ್ಟು ಸಂದುಕಟ್ಟಿನದ್ದಾಗಿದೆ?
▫ ಎಳೆಬಲೆಯ ಸಾಮ್ಯವು ನಮ್ಮಲ್ಲಿ ಪ್ರತಿಯೊಬ್ಬನನ್ನು ಯಾವ ರೀತಿಯ ಆತ್ಮಪರೀಕ್ಷೆಯನ್ನು ಮಾಡುವಂತೆ ನಡಿಸಬೇಕು?
[ಪುಟ 18 ರಲ್ಲಿರುವ ಚಿತ್ರ]
ಮೀನು ಹಿಡಿಯುವ ಕೆಲಸವು ಗಲಿಲಾಯ ಸಮುದ್ರದಲ್ಲಿ ಶತಮಾನಗಳಿಂದ ನಡಿಸಲ್ಪಟ್ಟಿರುತ್ತದೆ
[ಕೃಪೆ]
Pictorial Archive (Near Eastern History) Est.