ಮನುಷ್ಯನ ಪಾಪಪೂರ್ಣ ಸ್ಥಿತಿಯಿಂದ ಹೊರಬರುವ ದಾರಿ ಇದೆಯೇ?
ತನ್ನ ನಾಲ್ಕು ಹದಿವಯಸ್ಕ ಮಕ್ಕಳೊಂದಿಗೆ ಚೆಸಾಕೊ, ತನ್ನ ಮನೆಯಿಂದ 600 ಕಿಲೊಮೀಟರ್ ದೂರದ ಒಂದು ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದಳು. ಹಾಗೆ ಮಾಡುತ್ತಿದ್ದಾಗ, ಯಾವುದರ ಅರ್ಥವು ಅವಳಿಗೆ ತಿಳಿದಿರಲಿಲ್ಲವೋ ಆ ಒಂದು ಬೌದ್ಧ ಸೂತ್ರವನ್ನು ಆಕೆ ಪಠಿಸುತ್ತಿದ್ದಳು. ಎಲ್ಲಾ ಧರ್ಮಗಳ ತಿರುಳಿನಲ್ಲೇನಿದೆ ಎಂದು ಕಂಡುಹಿಡಿಯಲು ಹುಡುಕುವ ಒಂದು ಧಾರ್ಮಿಕ ಗುಂಪಿನ ಪದ್ಧತಿಗಳಲ್ಲಿ ಅದೊಂದಾಗಿತ್ತು.
“ಕಠಿಣ ನಿಯಮಬದ್ಧ ಪದ್ಧತಿಗಳನ್ನು ಮುಂದುವರಿಸಿದ್ದಾಗ್ಯೂ,” ಚಿಸಾಕೊ ನೆನಪಿಗೆ ತರುವುದು, “ನನಗೆ ನನ್ನ ವ್ಯಕ್ತಿತ್ವವನ್ನು ಬದಲಾಯಿಸಲಾಗಲಿಲ್ಲ. ನನ್ನ ಹೃದಯದಾಳದಲ್ಲಿ ನಾನು ಇತರರನ್ನು ಕ್ಷಮಿಸಲಾರದೆ ಇದ್ದೆನು ಮತ್ತು ಯಥಾರ್ಥ ಹೇತುವಿನಿಂದ ಪ್ರೀತಿ ತೋರಿಸಲಾರದಿದ್ದೆನು.”
ಎಲ್ಲಿ ಹೆಚ್ಚಿನ ಜನರಿಗೆ ಬೈಬಲ್ನಲ್ಲಿ ಕಲಿಸಲ್ಪಟ್ಟಿರುವ ಪಾಪದ ಕುರಿತು ಯಾವ ಕಲ್ಪನೆಯೂ ಇರುವುದಿಲ್ಲವೋ ಆ ಪೌರಸ್ತ್ಯ ದೇಶಗಳಲ್ಲೂ, ಅನೇಕರು ಚಿಸಾಕೊಳಂತೆ ತಮ್ಮ ಪಾಪಪೂರ್ಣ ಪ್ರವೃತ್ತಿಗಳ ಮೇಲೆ ಮನಸ್ಸಾಕ್ಷಿಯ ಅಳುಕುಗಳನ್ನು ಅನುಭವಿಸುತ್ತಾರೆ. (ರೋಮಾಪುರ 2:14, 15) ಒಂದು ಶೋಚನೀಯ ಪರಿಸ್ಥಿತಿಯಲ್ಲಿರುವ ಒಬ್ಬನಿಗೆ ದಯೆಯನ್ನು ತೋರಿಸದೆ ಇದದ್ದಕ್ಕಾಗಿ ವ್ಯಸನ ಪಡದವನು ಮತ್ತು ನುಡಿಯಬಾರದಾದ ಮಾತುಗಳನ್ನು ನುಡಿದದಕ್ಕಾಗಿ ಖಿನ್ನವಾದ ಮನದ ಕೊರೆತವನ್ನು ಅನುಭವಿಸದವನು ಯಾರಿದ್ದಾನೆ? (ಯಾಕೋಬ 4:17) ಮತ್ತು ಅಸೂಯೆ ಎಂಬ ಹೇಯವಾದ ಪೆಡಂಭೂತವು ಎಳೆಯರ ಮತ್ತು ವೃದ್ಧರೊಳಗೆ ಒಂದೇರೀತಿಯಾಗಿ ಅವಿತುಕೊಂಡಿರುವುದಿಲ್ಲವೇ?
ಜನರಲ್ಲಿ ಅಂಥ ಕಳವಳದ ಅನಿಸಿಕೆಗಳೇಕೆ? ಏಕೆಂದರೆ, ಜನರು ಮನಗಾಣಲಿ ಅಥವಾ ಮನಗಾಣದೆ ಇರಲಿ, ಅವರಲ್ಲಿ ತಪ್ಪಿನ, ಪಾಪದ ಅಂತರ್ಯದ ಭಾವನೆ ಇರುತ್ತದೆ. ಬೈಬಲ್ ಕಲಿಸುವ ಪಾಪದ ಕುರಿತು ಜನರು ತಿಳಿದಿರಲಿ, ತಿಳಿಯದಿರಲಿ, ಪಾಪಪೂರ್ಣ ಪ್ರವೃತ್ತಿಗಳಿಂದ ಎಲ್ಲರೂ ಪ್ರಭಾವಿತರಾಗಿದ್ದಾರೆಂಬದು ಮಾತ್ರ ನಿಶ್ಚಯ. ಈ ವಿಷಯದಲ್ಲಿ ಪರಿಣತನೊಬ್ಬನು ಒಮ್ಮೆ ತೀರ್ಮಾನಿಸಿದ್ದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.”—ರೋಮಾಪುರ 3:23.
ಪಾಪವನ್ನು ತೆಗೆದುಹಾಕಸಾಧ್ಯವೋ?
ಇಂದು ಅನೇಕ ಜನರು, ವಿಶೇಷವಾಗಿ ಕ್ರೈಸ್ತ ಪ್ರಪಂಚದಲ್ಲಿರುವವರು, ಪಾಪ ಮತ್ತು ದೋಷದ ಅನಿಸಿಕೆಗಳನ್ನು ತಮ್ಮ ಮನಸ್ಸಾಕ್ಷಿಗಳಿಂದ ಅಳಿಸಿಹಾಕಲು ಪ್ರಯತ್ನಿಸುವುದರಲ್ಲಿ ಮಗ್ನರಾಗಿದ್ದಾರೆ. “ ‘ಪಾಪ’ ಎಂಬ ಆ ಶಬ್ದವು ತಾನೇ . . . ಬಹುಮಟ್ಟಿಗೆ ಮಾಯವಾಗಿ ಹೋಗಿದೆ,” ಎಂದರು ಡಾ. ಕಾರ್ಲ್ ಮೆನಿಂಜರ್, ತನ್ನ ಪುಸ್ತಕವಾದ ವಾಟೆವರ್ ಬಿಕೇಮ್ ಆಫ್ ಸಿನ್? ನಲ್ಲಿ. ಆದರೂ, “ಪಾಪ” ಎಂಬ ಶಬ್ದವನ್ನು ವರ್ಜಿಸುವುದು, ವಯಸ್ಕ ಮನುಷ್ಯನು “ಮುದುಕ” ಎಂಬ ಶಬ್ದವನ್ನು ವರ್ಜಿಸ ಬಯಸುವುದರಿಂದ ಹೇಗೆ ಕೊಂಚವೂ ಸಹಾಯವಾಗದೋ ಹಾಗೆ ಇದೆ. ಪಾಪಪೂರ್ಣ ಪ್ರವೃತ್ತಿಗಳು ನಮ್ಮಲ್ಲಿವೆ ಮತ್ತು ಅಂಥ ದುರವಸ್ಥೆಯ ಸ್ಥಿತಿಯಿಂದ ಬಿಡಿಸಲ್ಪಡುವ ಅಗತ್ಯ ನಮಗಿದೆ ಎಂಬ ವಾಸ್ತವಾಂಶವನ್ನು ನಾವು ಎದುರಿಸಲೇ ಬೇಕು. ಆದರೆ ಯಾರಿಂದ?
ಪಾಪ ಮಾಡಲು ಬಯಸದಿದ್ದರೂ ಅದನ್ನು ಮಾಡುವ ತನ್ನ ಸ್ವಂತ ಪ್ರವೃತ್ತಿಯನ್ನು ಒಪ್ಪಿಕೊಂಡ ನಂತರ ಕ್ರೈಸ್ತ ಅಪೊಸ್ತಲ ಪೌಲನು ಆ ಪ್ರಶ್ನೆಯನ್ನು ಕೇಳಿದನು: “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” ಪೌಲನು ಅನಂತರ ಉತ್ತರ ಕೊಡುತ್ತಾ ಅಂದದ್ದು: “ಬಿಡಿಸುವವನು ಇದ್ದಾನೆಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ!” ಯಾಕೆ? ಯಾಕಂದರೆ ದೇವರು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕವಾಗಿ ಪಾಪ ಕ್ಷಮೆಗಾಗಿ ಏರ್ಪಾಡು ಮಾಡಿರುತ್ತಾನೆ.—ರೋಮಾಪುರ 7:14-25.
ಆದರೂ, ಲೋಕದ ಕ್ರೈಸ್ತ್ಯೇತರರಾದ 3,50,00,00,000 ಮಂದಿಯಲ್ಲಿ ಅನೇಕರಿಗೆ (ಕ್ರೈಸ್ತರೆನಿಸಿಕೊಳ್ಳುವವರ ಸಂಖ್ಯೆಗಿಂತ ಇಮ್ಮಡಿ), ಒಂದು ಪ್ರಾಯಶ್ಚಿತದ್ತ ಕುರಿತಾದ ವಿಚಾರವನ್ನು ಗ್ರಹಿಸಲು ಅತಿ ಕಷ್ಟಕರವಾಗಿ ಕಾಣುತ್ತದೆ. ಉದಾಹರಣೆಗೆ, ಜಪಾನಿನಲ್ಲಿ ವಾಸಿಸಿದ್ದು, ಕೆಲವು ಸಮಯದಿಂದ ಬೈಬಲನ್ನು ಅಭ್ಯಾಸಿಸಿದ ಒಬ್ಬ ಮುಸ್ಲಿಮನಿಗೆ, ಪ್ರಾಯಶ್ಚಿತದ್ತ ಬೋಧನೆಯು ಒಂದು ಅತ್ಯಂತ ದೊಡ್ಡ ಎಡವುಕಲ್ಲಾಗಿ ಪರಿಣಮಿಸಿತು. ಅನೇಕ ಪೌರಸ್ತ್ಯರಿಗೆ ಎಲ್ಲರಿಗೋಸ್ಕರ ಒಬ್ಬ ಮನುಷ್ಯನು ಸಾಯುವ ವಿಚಾರವು ಅಸಾಮಾನ್ಯವಾದ ಸಂಗತಿಯಾಗಿದೆ.
ಇದನ್ನು ಅರ್ಥೈಸಬಹುದು ಏಕೆಂದರೆ ಕ್ರೈಸ್ತ ಪ್ರಪಂಚದ ಕೆಲವರಿಗೆ ಸಹ ಈ ಮೂಲಭೂತ ಬೋಧನೆಯನ್ನು ಗ್ರಹಿಸಲು ಕಷ್ಟವಾಗಿಯದೆ. “ವಿಮೋಚನೆಯ ದೇವತಾಶಾಸ್ತ್ರವು,” ನ್ಯೂ ಕ್ಯಾಥ್ಲಿಕ್ ಎನ್ಸೈಕ್ಲೊಪೀಡಿಯ ಒಪ್ಪುತ್ತಾ ಅಂದದ್ದು, “ಕೆಲವು ಅಂಶಗಳಲ್ಲಿ ಕಾರ್ಯಸಿದ್ಧಿಯಲ್ಲ ಮತ್ತು ದೇವತಾಶಾಸ್ತ್ರದಲ್ಲಿ ತನ್ನನ್ನು ಒಂದು ಸಮಸ್ಯೆಯಾಗಿ ಒಡ್ಡುತ್ತಾ ಮುಂದರಿಯುತ್ತದೆ.”
ಈ ಬೋಧನೆಯ ಕುರಿತಾದ ಗಲಿಬಿಲಿಯ ವಿಸ್ತಾರ್ಯವು ಧಾರ್ಮಿಕ ಲೇಖಕನಾದ ಎನ್. ಎಚ್. ಬಾರ್ಬರ್ನ ಮಾತುಗಳಲ್ಲಿ ಚೆನ್ನಾಗಿ ಚಿತ್ರಿಸಲ್ಪಟ್ಟಿದೆ: “ಒಂದು ಮಗುವಿನ ತಪ್ಪಿಗಾಗಿ ಒಂದು ನೊಣವನ್ನು ಸೂಜಿಯಿಂದ ಚುಚ್ಚಿ ಅದಕ್ಕೆ ವೇದನೆ ಮತ್ತು ಮರಣವನ್ನು ತರುವ ವಿಷಯವನ್ನು ಒಬ್ಬ ಐಹಿಕ ಹೆತ್ತವರು ಹೇಗೆ ಒಂದು ನ್ಯಾಯವಾದ ತೀರ್ಮಾನ ಎಂದು ಭಾವಿಸುವುದಿಲ್ಲವೋ ಹಾಗೆಯೇ ಮಾನವನ ಪಾಪಗಳಿಗೆ ಶಿಕ್ಷೆಯಾಗಿ ಕ್ರಿಸ್ತನ ಮರಣವೂ ತೀರ್ಮಾನವಾಗಿರಲಿಲ್ಲ.” ಬಾರ್ಬರ್ನೊಂದಿಗೆ ಆಗ ಸದಸ್ಯರಾಗಿ ಸೇರಿದ್ದ ಚಾರ್ಲ್ಸ್ ಟಿ. ರಸ್ಸಲರು ಪ್ರಾಯಶ್ಚಿತ್ತ ಬೋಧನೆಯ ಪರವಾಗಿ ವಾದಿಸುವ ಜರೂರಿಯ ಅಗತ್ಯವನ್ನು ಕಂಡರು. ಅವರು ಅನಂತರ ಬಾರ್ಬರ್ನ ಸಹವಾಸ ತೊರೆದರು ಮತ್ತು 1879 ರಲ್ಲಿ ಒಂದು ಹೊಸ ಪತ್ರಿಕೆಯನ್ನು ಪ್ರಕಾಶಿಸಲು ಆರಂಭಿಸಿದರು, ಅದು ಅನಂತರ ನೀವೀಗ ಓದುತ್ತಿರುವ ಪತ್ರಿಕೆಯಾಗಿ ಪರಿಣಮಿಸಿತು. ದ ವಾಚ್ಟವರ್ ಅದರ ಪ್ರಾರಂಭದಿಂದಲೇ, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಪರವಾಗಿ ಹೋರಾಟಗಾರನಾಗಿ ಇದೆ.
ಆದರೆ “ಕ್ರೈಸ್ತ” ಹಿನ್ನೆಲೆಯಿಲ್ಲದವರಿಗೆ ಈ ಬೋಧನೆಯು ಎಂದಾದರೂ ಸ್ವೀಕರಣೀಯವಾಗಬಲ್ಲದೋ? ಇದನ್ನು ತಿಳಿಯಲು, ಎಲ್ಲರಿಗಾಗಿ ಒಬ್ಬ ಮನುಷ್ಯನು ಸಾಯುವ ಈ ಬೋಧನೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸೋಣ.