ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 7/15 ಪು. 3-4
  • ನಮಗೆ ಆಲಿಸುವವರು ಯಾರಾದರೂ ಬೇಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮಗೆ ಆಲಿಸುವವರು ಯಾರಾದರೂ ಬೇಕು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • “ನಿಮ್ಮ ಬೇಡಿಕೆಯನ್ನು ದೇವರಿಗೆ ತಿಳಿಯಪಡಿಸಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
ಇನ್ನಷ್ಟು
ಕಾವಲಿನಬುರುಜು—1992
w92 7/15 ಪು. 3-4

ನಮಗೆ ಆಲಿಸುವವರು ಯಾರಾದರೂ ಬೇಕು

ಮಾನವರೋಪಾದಿ ನಾವು ಜೀವಿತದಲ್ಲಿ ಸಂತೋಷ ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳ ಪ್ರಯತ್ನಿಸುತ್ತೇವೆ. ಆದರೆ ವೈಯಕ್ತಿಕ ಸಮಸ್ಯೆಗಳು ಏಳುವಾಗ, ನಮ್ಮ ತೊಂದರೆಗಳ ಕುರಿತಾಗಿ ಹೇಳಲು ಯಾರಾದರೂ ನಮಗಿರುವುದು ಅದೆಷ್ಟು ಸಹಾಯಕರ ಮತ್ತು ಸಾಂತ್ವನಕರವಾಗಿರುತ್ತದೆ!

ಡಾ. ಜಾರ್ಜ್‌ ಎಸ್‌. ಸೀವ್ಟನ್‌ಸನ್‌ ಹೇಳುವುದು: “ವಿಷಯಗಳನ್ನು ಮಾತಾಡಿ ನೋಡುವುದು ನಿಮ್ಮ ಭಾರವನ್ನು ನಿವಾರಿಸಲು ಸಹಾಯವಾಗುತ್ತದೆ, ನಿಮ್ಮ ಚಿಂತೆಯನ್ನು ಸ್ಪಷ್ಟವಾಗಿದ ಬೆಳಕಿನಲ್ಲಿ ನೋಡಲು ನೆರವಾಗುತ್ತದೆ ಮತ್ತು ಅದರ ಕುರಿತು ಏನು ಮಾಡ ಸಾಧ್ಯವಿದೆಂದು ತಿಳಿಯಲು ನಿಮಗೆ ಸಹಾಯ ಸಿಗುತ್ತದೆ.” ಡಾ. ರೋಸ್‌ ಹಿಲ್‌ಫರ್ಡಿಂಗ್‌ ಅವಲೋಕಿಸಿದ್ದು: “ನಮ್ಮ ತೊಂದರೆಗಳನ್ನು ನಾವೆಲ್ಲರೂ ಪಾಲುಗಾರರಾಗಲೇ ಬೇಕು. ನಮ್ಮ ಚಿಂತೆಗಳನ್ನು ನಾವು ಹಂಚಿಕೊಳ್ಳಬೇಕು. ಲೋಕದಲ್ಲಿ ನಮ್ಮನ್ನು ಆಲೈಸಲು ಸಿದ್ಧ ಮನಸ್ಸುಳ್ಳವರು ಮತ್ತು ನಮ್ಮನ್ನು ತಿಳುಕೊಳ್ಳ ಶಕ್ತರಾದವರು ಯಾರಾದರೂ ಇದ್ದಾರೆ ಎಂಬ ಅನಿಸಿಕೆ ನಮಗಿರಬೇಕು.”

ನಿಶ್ಚಯವಾಗಿ ಈ ಅಗತ್ಯವನ್ನು ಯಾವ ಮಾನವನಾದರೂ ಪೂರ್ತಿಯಾಗಿ ತುಂಬಲಾರನು. ಸಮಯ ಮತ್ತು ಇತರ ಸಂಗತಿಗಳ ಸೀಮಿತದಿಂದಾಗಿ, ನಮ್ಮ ಮಾನವ ಅಂತರಂಗ ಮಿತ್ರರು ನಮಗೆ ಅತ್ಯಂತ ಅಗತ್ಯವಾಗಿ ಬೇಕಾದ ಸಮಯದಲ್ಲಿ ಸಿಕ್ಕದೆ ಹೋದಾರು ಅಥವಾ ನಮ್ಮ ಅತ್ಯಂತ ಆಪ್ತ ಮಿತ್ರರೊಂದಿಗೂ ಕೆಲವು ವಿಷಯಗಳನ್ನು ಚರ್ಚಿಸಲು ನಾವು ಹಿಂಜರಿಯಬಹುದು.

ಆದರೂ ನಿಜ ಕ್ರೈಸ್ತರು ಎಂದಾದರೂ ಪೂರ್ಣವಾಗಿ ಒಂದು ಆಲೈಸುವ ಕಿವಿ ಇಲ್ಲದವರಲ್ಲ ಯಾಕಂದರೆ ಪ್ರಾರ್ಥನೆಯ ಹಾದಿಯು ಅವರಿಗೆ ಯಾವಾಗಲೂ ದೊರೆಯುತ್ತದೆ. ಯಾರ ಹೆಸರು ಯೆಹೋವ ಎಂದಾಗಿದೆಯೋ ಆ ನಮ್ಮ ನಿರ್ಮಾಣಿಕನಾದ ದೇವರಿಗೆ ಪ್ರಾರ್ಥನೆ ಮಾಡಬೇಕೆಂದು ಬೈಬಲ್‌ ಪದೇ ಪದೇ ನಮ್ಮನ್ನು ಉತ್ತೇಜಿಸುತ್ತದೆ. ನಾವು ಮನಃಪೂರ್ವಕವಾಗಿ, ಯೇಸುವಿನ ಹೆಸರಿನಲ್ಲಿ ಮತ್ತು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಪ್ರಾರ್ಥನೆ ಮಾಡುವಂತೆ ಮಾರ್ಗದರ್ಶಿಸಲ್ಪಟ್ಟಿದ್ದೇವೆ. ವೈಯಕ್ತಿಕ ಮತ್ತು ಖಾಸಗಿ ವಿಷಯಗಳು ಸಹ ಪ್ರಾರ್ಥನೆಗೆ ಯೋಗ್ಯ ವಿಷಯಗಳಾಗಿರುತ್ತವೆ. “ಸರ್ವ ವಿಷಯದಲ್ಲಿ ದೇವರ ಮುಂದೆ . . . ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ,” ಎಂದು ಫಿಲಿಪ್ಪಿ 4:6 ರಲ್ಲಿ ನಮಗೆ ತಿಳಿಸಲ್ಪಟ್ಟಿದೆ. ಎಂಥ ವಿಶೇಷವಾದ ದಾನವು ಇದಾಗಿದೆ! ನಮ್ಮ ವಿಶ್ವದ ಸಾರ್ವಭೌಮ ಅರಸನು ತನ್ನ ದೀನ ಸೇವಕರ ಪ್ರಾರ್ಥನೆಯನ್ನು, ಅವರು ಆತನನ್ನು ಗೋಚರಿಸಲು ಅಪೇಕ್ಷಿಸುವಾಗಲ್ಲೆಲ್ಲಾ ಸ್ವಾಗತಿಸಲು ಮತ್ತು ಸ್ವೀಕರಿಸಲು ಯಾವಾಗಲೂ ತಯಾರಿರುವನು.—ಕೀರ್ತನೆ 83:18; ಮತ್ತಾಯ 6:9-15; ಯೋಹಾನ 14:13, 14; 1 ಯೋಹಾನ 5:14.

ಆದರೂ, ದೇವರು ನಿಜವಾಗಿ ಆಲಿಸುತ್ತಾನೋ? ಪ್ರಾರ್ಥನೆಯ ಪರಿಣಾಮಕಾರತೆಯು ಮಾನವನ ಸಾಮರ್ಥ್ಯದ ಮೇಲೆ ಸೀಮಿತವೋ ಎಂದು ಕೆಲವರು ಯೋಚಿಸಬಹುದು: ಒಬ್ಬನು ತನ್ನ ಆಲೋಚನೆಗಳನ್ನು ಏರ್ಪಡಿಸುವ ಮೂಲಕ ಮತ್ತು ಅವನ್ನು ಮಾತುಗಳಲ್ಲಿ ವ್ಯಕ್ತಪಡಿಸುವ ಮೂಲಕ ಪ್ರಾರ್ಥನೆ ಮಾಡುತ್ತಾನೆ. ತನ್ನ ಸಮಸ್ಯೆಯನ್ನು ಹೀಗೆ ವಿವರಿಸುವ ಮೂಲಕ ಒಂದು ತಕ್ಕದಾದ ಪರಿಹಾರವನ್ನು ಅವನು ಹುಡುಕುತ್ತಾನೆ ಮತ್ತು ಅದನ್ನು ಕಂಡುಕೊಳ್ಳಲು ನೆರವಾಗುವ ಪ್ರತಿಯೊಂದಕ್ಕೆ ಎಚ್ಚರವಾಗಿರುತ್ತಾನೆ. ಅವನ ಸಮಸ್ಯೆಯು ಪರಿಹಾರವಾದಾಗ ಅವನು ದೇವರಿಗೆ ಪ್ರಶಸ್ತಿಯನ್ನು ಸಲ್ಲಿಸಬಹುದು. ಆದರೆ ಕಾರ್ಯತಃ ಅಪೇಕ್ಷಿತ ಫಲಿತಾಂಶವನ್ನು ಉತ್ಪಾದಿಸಿರುವುದು ಅವನ ಸ್ವಂತ ಮನಸ್ಸು ಮತ್ತು ಪ್ರಯತ್ನಗಳೇ.

ಪ್ರಾರ್ಥನೆಯಲ್ಲಿ ನಿಜವಾಗಿ ಇರುವ ವಿಷಯವು ಅಷ್ಟೇ ಎಂದು ಇಂದು ಅನೇಕರು ಯೋಚಿಸುತ್ತಾರೆ. ನೀವೋ? ಪ್ರಾರ್ಥನೆಯ ಬಲವು ಹೀಗೆ ಸೀಮಿತವಾಗಿದೆಯೇ? ಒಬ್ಬನ ಪ್ರಾರ್ಥನೆಯೊಂದಿಗೆ ಹೊಂದಿಕೆಯಲ್ಲಿ ಅವನ ಮಾನಸಿಕ ಮತ್ತು ಶಾರೀರಿಕ ಪ್ರಯತ್ನಗಳು ಉತ್ತರಗಳನ್ನು ಪಡೆಯುವುದರಲ್ಲಿ ಒಂದು ಗಮನಾರ್ಹ ಪಾತ್ರವನ್ನು ವಹಿಸುತ್ತವೆ, ಗ್ರಾಹ್ಯ. ಆದರೂ ವಿಷಯದಲ್ಲಿ ದೇವರ ಸ್ವಂತ ಪಾತ್ರದ ಕುರಿತಾಗಿ ಏನು? ನೀವು ದೇವರಿಗೆ ಪ್ರಾರ್ಥಿಸುವಾಗ ಆತನು ಆಲೈಸುತ್ತಾನೋ? ಆತನು ನಿಮ್ಮ ಪ್ರಾರ್ಥನೆಗಳನ್ನು ಪ್ರಾಮುಖ್ಯವೆಂದೆಣಿಸಿ ಅದರಲ್ಲಿರುವ ವಿಷಯಕ್ಕೆ ಗಮನವನ್ನೂ ಪ್ರತಿಕ್ರಿಯೆಯನ್ನೂ ತೋರಿಸುತ್ತಾನೋ?

ಈ ಪ್ರಶ್ನೆಗಳಿಗೆ ಉತ್ತರಗಳು ಗಮನಾರ್ಹವಾಗಿವೆ. ದೇವರು ನಮ್ಮ ಪ್ರಾರ್ಥನೆಗಳಿಗೆ ತನ್ನ ಗಮನವನ್ನು ಕೊಡುವುದಿಲ್ಲವಾದರೆ, ಆ ಪ್ರಾರ್ಥನೆಗೆ ಭಾವನಾತ್ಮಕ ಬೆಲೆಯಲ್ಲದೆ ಬೇರೇನೂ ಇಲ್ಲ. ಇನ್ನೊಂದು ಕಡೆ, ನಮ್ಮ ಪ್ರತಿಯೊಂದು ಪ್ರಾರ್ಥನೆಯನ್ನು ದೇವರು ಸ್ವೀಕರಿಸಿ ಅದನ್ನು ಆಸಕ್ತಿಯಿಂದ ಆಲಿಸುತ್ತಾನಾದರೆ, ಅಂಥ ಒಂದು ಒದಗಿಸುವಿಕೆಗಾಗಿ ನಾವೆಷ್ಟು ಕೃತಜ್ಞರಾಗಿರಬೇಕು! ಅದು ನಮ್ಮನ್ನು ಪ್ರತಿದಿನ ಆ ಒದಗಿಸುವಿಕೆಯನ್ನು ಉಪಯೋಗಿಸುವಂತೆ ಪ್ರೇರೇಪಿಸಬೇಕು.

ಈ ವಿಷಯಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದರಿಂದ ನೀವು ಮುಂದೆ ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. (w92 4/15)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ