ಕೇಪ್ ವರ್ಡ್ನಲ್ಲಿ “ಜೀವಜಲವು” ಹೊರಹೊಮ್ಮುತ್ತದೆ
“ಕೇಪ್ ವರ್ಡ್ನಲ್ಲಿ 1958 ನೆಯ ವರ್ಷದಿಂದ ಯೆಹೋವನ ಸಾಕ್ಷಿಗಳ ಆರಾಧನೆಯ ಅಸ್ತಿತ್ವ ಮತ್ತು ಆಚರಣೆಯು ಒಂದು ಗಮನಾರ್ಹ ಸಂಗತಿಯಾಗಿದೆ” ಎಂದು ಕೇಪ್ ವರ್ಡ್ನ ರಿಪಬ್ಲಿಕನ್ನ ನ್ಯಾಯ ಮಂತ್ರಿ ವಿವರಿಸಿದರು. ಅವರ ಕಚೇರಿಗೆ ಕರೇಕಳುಹಿಸಲ್ಪಟ್ಟ ಇಬ್ಬರು ಸಾಕ್ಷಿಗಳೊಂದಿಗೆ ಅವರು ಮಾತಾಡುತ್ತಿದ್ದರು. “ಯೆಹೋವನ ಸಾಕ್ಷಿಗಳನ್ನು ಕಾನೂನುಬದ್ಧವಾಗಿ ಅಂಗೀಕರಿಸಿ ಕೊಳ್ಳಲು ಇಷ್ಟು ದೀರ್ಘ ಸಮಯವನ್ನು ತಕ್ಕೊಂಡಿದ್ದಕ್ಕಾಗಿ ನಾವು ವಿಷಾದಪಡುತ್ತೇವೆ,” ಎಂದು ಅವರು ಕೂಡಿಸಿದರು.
ನವಂಬರ 30, 1990 ರಲ್ಲಿ ಜರುಗಿದ ಆ ಕೂಟವು, ಕೇಪ್ ವರ್ಡ್ನಲ್ಲಿರುವ ಯೆಹೋವನ ಸಾಕ್ಷಿಗಳಿಂದ ಬಹುಕಾಲದ ವರೆಗೂ ನೆನಪಿಸಲ್ಪಡುವದು. ಆ ದೇಶದಲ್ಲಿ ಒಂದು ಕಾನೂನುಬದ್ಧವಾದ ಧಾರ್ಮಿಕ ಸಂಘಟನೆಯೋಪಾದಿ ಅವರ ಅಧಿಕೃತ ಮನ್ನಣೆಯ ಸಂಕೇತವು ಅದಾಗಿತ್ತು. ಆದಾಗ್ಯೂ, ಹಾಜರಿದ್ದ ಎರಡು ಸಾಕ್ಷಿಗಳಿಗೆ ಅದು ಒಂದು ವೈಯಕ್ತಿಕ ವಿಷಯದಂತೆ ಕೇಳಿಸಿತು, ಯಾಕಂದರೆ 1958 ರಲ್ಲಿ ಅವರಲ್ಲಿ ಒಬ್ಬನು—ಲೂಇಸ್ ಅಂದ್ರಾದೆ—ವಾಚ್ ಟವರ್ ಸಂಸ್ಥೆಯಿಂದ ಪ್ರಕಾಶಿತವಾದ ಕೆಲವು ಬೈಬಲ್ ಸಾಹಿತ್ಯಗಳನ್ನು ಪಡೆದನು. ಪ್ರಕಾಶನಗಳನ್ನು ಮೊದಲನೆಯ ಪುಟದಿಂದ ಕೊನೆಯ ಪುಟದ ತನಕ ಓದಿದ ನಂತರ, ತಾನು ಸತ್ಯವನ್ನು ಕಂಡುಕೊಂಡಿದ್ದೇನೆ ಎಂದು ಅವನಿಗೆ ತಿಳಿದುಬಂತು. ಉತ್ಸುಕತೆಯಿಂದ, ತಾನು ಏನನ್ನು ಕಲಿತಿದ್ದನೋ ಅದನ್ನು, ಅವನು ತನ್ನ ದೀರ್ಘಕಾಲದ ಗೆಳೆಯನಾಗಿದ್ದ ಫ್ರಾನ್ಸಿಸ್ಕೊ ಟಾವಾರಿಸ್ನೊಂದಿಗೆ ಹಂಚಿಕೊಂಡನು. ಮುಂದಿನ ಕೆಲವು ವರ್ಷಗಳಲ್ಲಿ, ಅವರಿಬ್ಬರೂ ಚಂದಾ ಮೂಲಕ ಪಡೆಯುವಂಥ ವಾಚ್ಟವರ್ ಮತ್ತು ಎವೇಕ್! ಪತ್ರಿಕೆಗಳನ್ನು ಓದುವದರಿಂದ ಸತ್ಯದ ಜಲವನ್ನು ತಕ್ಕೊಳ್ಳುವದನ್ನು ಮುಂದರಿಸಿದರು. ಹತ್ತು ವರ್ಷಗಳ ನಂತರ, 1968 ರಲ್ಲಿ ಕೇಪ್ ವರ್ಡೆಗೆ ಸಂಚಾರ ಮೇಲ್ವಿಚಾರಕನೊಬ್ಬನ ಮೊದಲ ಭೇಟಿಯಲ್ಲಿ ಅವರು ದೀಕ್ಷಾಸ್ನಾನ ಪಡೆದುಕೊಂಡರು.
ಸಹೋದರರಾದ ಅಂದ್ರಾದೆ ಮತ್ತು ಟಾವಾರಿಸ್ರು ಈ ಆಮಂತ್ರಣವನ್ನು ಧ್ವನಿಸುವುದರಲ್ಲಿ ಒಂದು ಪಾಲನ್ನು ತಕ್ಕೊಳ್ಳುವ ಅವರ ಜವಾಬ್ದಾರಿಯನ್ನು ಗುರುತಿಸಿದರು.“ಬಾ. . . . ಜೀವ ಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) ಚದರಿಸಲ್ಪಟ್ಟ ಮತ್ತು ಕಷ್ಟಕರವಾದ ಅವರ ಕ್ಷೇತ್ರದ ಪಂಥಾಹ್ವಾನವನ್ನು ಸ್ವೀಕರಿಸಲು ಅವರು ಸಿದ್ಧರಾಗಿದ್ದರು. ಕೇಪ್ ವರ್ಡ್ನ ಹತ್ತು ಮುಖ್ಯ ದ್ವೀಪಗಳೊಂದಿಗೆ ಸೆನಗಾಲ್ನ ಡಾಕಾರಿನ ಪಶ್ಚಿಮಕ್ಕೆ 560 ಕಿಲೊಮೀಟರುಗಳಷ್ಟು ದೂರದಲ್ಲಿ, ಅಟ್ಲಾಂಟಿಕ್ ಸಾಗರದಲ್ಲಿರುವ ಕೆಲವು ಸಣ್ಣ ದ್ವೀಪಗಳನ್ನು ಕೂಡಿ ಇರುತ್ತದೆ. “ಗ್ರೀನ್ ಕೇಪ್” ಎಂಬ ಅರ್ಥವಿರುವ ಕೇಪ್ ವರ್ಡ್ ಎಂಬುದನ್ನು ಮೂಲದಲ್ಲಿ ಆಫ್ರಿಕನ್ ಕರಾವಳಿಯಲ್ಲಿನ ದ್ವೀಪಕಲ್ಪಕ್ಕೆ ಅನ್ವಯಿಸಲಾಗಿತ್ತು. ಹಾಗಿದ್ದರೂ, ಈ ದ್ವೀಪಗಳು ಖಂಡಿತವಾಗಿಯೂ ಹಸಿರಾಗಿ ಇಲ್ಲ, ಯಾಕಂದರೆ ಮಳೆಯು ಬಹಳ ಕೊಂಚವಾಗಿರುತ್ತದೆ ಮತ್ತು 3,50,000 ನಿವಾಸಿಗಳು ಒಣಗಿರುವ ನೆಲದಿಂದ ತಮ್ಮ ಜೀವಿತವನ್ನು ನಡಿಸತಕ್ಕದ್ದು.
ಕಳೆದ 30 ವರ್ಷಗಳಲ್ಲಿ ಮಿಶನೆರಿಗಳು ಮತ್ತು ವಿಶೇಷ ಪಯನೀಯರರು ಪೂರ್ಣ ಸಮಯದ ಸೇವಕರಾಗಿ ಈ ದ್ವೀಪಗಳಲ್ಲಿರುವವರಿಗೆ ಜೀವಜಲವನ್ನು ತರುವುದರಲ್ಲಿ ತುಂಬಾ ಕೆಲಸ ಮಾಡಿರುತ್ತಾರೆ. ಇಂಥ ಶ್ರಮೆಯ ಪರಿಣಾಮವೇನಾಗಿತ್ತು? ಇತ್ತೀಚೆಗೆ, ಪೋರ್ಚುಗಲ್ನಿಂದ ಬಂದ ಒಬ್ಬ ಸಂಚಾರಕ ಮೇಲ್ವಿಚಾರಕನು ಕೇಪ್ ವರ್ಡ್ನಲ್ಲಿರುವ ಸಭೆಗಳಿಗೆ ಭೇಟಿಯನ್ನಿತ್ತನು. ಅವನೇನನ್ನು ಕಂಡುಹಿಡಿದನೆಂಬುದಾಗಿ ನಮಗೆ ಹೇಳಲಿ.
ಸಾವೊ ವಿಸೆಂಟಿ “ಶುದ್ಧ ಭಾಷೆ” ಯನ್ನು ಕೇಳುತ್ತದೆ
ಕೇಪ್ ವರ್ಡ್ನಲ್ಲಿ ನಮ್ಮ ಮೊದಲ ನಿಲುಗಡೆಯು ಸಾವೊ ವಿಸೆಂಟಿ ದ್ವೀಪದಲ್ಲಿ ಪೊರ್ಟೊ ಗ್ರಾಂಡ್ ಎಂಬ ಪಟ್ಟಣವಾಗಿತ್ತು. ವಿಮಾನ ನಿಲ್ದಾಣದಿಂದ ಪಟ್ಟಣಕ್ಕೆ ಹೋಗುತ್ತಿರುವಾಗ ಗಾಳಿಯಿಂದ ಹರಡಿಸಲ್ಪಟ್ಟ ಮರಳಿನಿಂದ ಆವರಿಸಲ್ಪಟ್ಟ ಬಂಡೆಯ ಪಕ್ಕಗಳನ್ನು ನೋಡಿದೆವು. ಉತ್ತರ ಆಫ್ರಿಕದ ಬಂಜರುಗೊಳಿಸುವಿಕೆಯು ಈಗಾಗಲೇ ಕೇಪ್ ವರ್ಡನ್ನು ತಲಪಿರುತ್ತದೆ! ದಶಂಬರದಿಂದ ಫೆಬ್ರವರಿಯ ವರೆಗೆ, ಹರ್ಮಟಾನ್—ಸಹಾರಾದಿಂದ ಬರುವ ಬಿಸಿ, ಒಣ ಗಾಳಿಯು—ಸಮುದ್ರದಾಚೆ ಬೀಸುತ್ತದೆ ಮತ್ತು ದ್ವೀಪಗಳನ್ನು ಮರಳು ಮತ್ತು ಕಸದ ಹಾಳೆಗಳಿಂದ ಹಾಸುತ್ತದೆ. ಕೆಲವೊಮ್ಮೆ ಕಸದ ಮೋಡಗಳು ಎಷ್ಟು ದಟ್ಟವಾಗಿರುತ್ತವೆಂದರೆ ವಿಮಾನಗಳು ಹಾರಾಡಲಾರವು. ಹರ್ಮಟಾನ್ ಆಗಮಿಸುವಾಗ ಉಳಿದಿರುವ ಸ್ವಲ್ಪ ತರಕಾರಿಯೂ ಒಣಗಿಹೋಗುತ್ತದೆ.
ಹೀಗಾದರೂ, ಆತ್ಮಿಕವಾಗಿ ಮಾತಾಡುವುದಾದರೆ, ನೀರಿನ ಉಗಮಗಳು ಸಿದ್ಧವಾಗಿಯೇ ಲಭ್ಯವಾಗಿವೆ. ಪೊರ್ಟೊ ಗ್ರಾಂಡ್ನಲ್ಲಿ ಯೆಹೋವನ ಸಾಕ್ಷಿಗಳು ಎರಡು ಸಭೆಗಳನ್ನು ಸ್ಥಾಪಿಸಿದ್ದಾರೆ, ಮತ್ತು ಸಾವೊ ವಿಸೆಂಟಿನ ದ್ವೀಪದ 47,000 ನಿವಾಸಿಗಳಿಗೆ ಸತ್ಯದ ಜೀವ-ನೀಡುವ ಜಲಗಳನ್ನು ತಕ್ಕೊಂಡು ಹೋಗುವುದರಲ್ಲಿ 167 ರಾಜ್ಯ ಪ್ರಚಾರಕರು ಕಾರ್ಯಮಗ್ನರಾಗಿದ್ದಾರೆ. ವಾರಾಂತ್ಯಗಳಲ್ಲಿ, ಸುಮಾರು 400 ಜನರು ರಾಜ್ಯ ಸಭಾಗೃಹಗಳ ಬೈಬಲ್-ಆಧರಿತ ಕೂಟಗಳಿಗೆ ಬರುತ್ತಾರೆ.
ಒಂದು ಪೂರ್ಣ ವಾರ ನಡೆಯುವ ಭೇಟಿಗಳ ಸಮಯದಲ್ಲಿ, ಆ ಪಟ್ಟಣದ ಅತೀ ಉತ್ತಮವಾದ ನಾಟಕಮಂದಿರದಲ್ಲಿ ಜರುಗಲಿದ್ದ “ಶುದ್ಧ ಭಾಷೆ” ಜಿಲ್ಲಾ ಅಧಿವೇಶನಕ್ಕಾಗಿ ಕೊನೆಯ ತಯಾರಿಸುವಿಕೆಗಳು ಮಾಡಲ್ಪಡುತ್ತಿದ್ದವು. (ಚೆಫೆನ್ಯ 3:9) ಸ್ಥಳೀಯ ಜನರೊಂದಿಗೆ, ಸಾಂಟೊ ಆಂಟಾವೊ ಮತ್ತು ಸಾವೊ ನಿಕೊಲೌ ದ್ವೀಪಗಳಿಂದ ಪ್ರತಿನಿಧಿಗಳು, ಹಾಜರಿಯನ್ನು 756 ರ ಉಚ್ಛಾಂಕಕ್ಕೆ ತಂದರು. ಇಪ್ಪತ್ತು ನಾಲ್ಕು ಜನರು ದೀಕ್ಷಾಸ್ನಾನ ಪಡೆದರು. ಕಾರ್ಯಕ್ರಮದಲ್ಲಿ ಸಾಕ್ಷಿಗಳಿಂದ ಪ್ರಸ್ತುತ ಪಡಿಸಲಾದ ಒಂದು ಬೈಬಲ್ ನಾಟಕವು ಒಳಗೂಡಿತ್ತು. ಒಂದು ಚಲನಚಿತ್ರದ ಉತ್ಪಾದನೆಯ ಪೂರ್ವಾಭಿನಯ ನಿರ್ದೇಶಕನು ನಾಟಕಕ್ಕೆ ಹಾಜರಿದ್ದನು ಮತ್ತು ಅವನ ಅವಲೋಕನೆ ಹೀಗಿತ್ತು: “ನಾವು ಒಂದು ವರ್ಷದ ತನಕ ತರಬೇತಿಗೊಳಿಸಿದ ನಂತರವೂ ನಮಗೆ ಅನೇಕ ಸಮಸ್ಯೆಗಳಿದ್ದವು. ನಿಮ್ಮ ನಾಟಕದಲ್ಲಿ ಭಾಗವಹಿಸಿದವರು ಕೇವಲ ಎರಡು ತಿಂಗಳುಗಳ ತರಬೇತಿಯಿಂದ ಹೆಚ್ಚು ಉತ್ತಮವಾಗಿ ಮಾಡಿದ್ದಾರೆ.” ಅಧಿವೇಶನದ ಯಶ್ವಸೀ ಸಮಾಪ್ತಿಯೊಂದಿಗೆ, ಸಾವೊ ಟಿಯಾಗೋ ದ್ವೀಪದಲ್ಲಿರುವ, ಕೇಪ್ ವರ್ಡ್ ರಿಪಬ್ಲಿಕ್ನ ರಾಜಧಾನಿಯಾದ ಪ್ರೆಯಾ ನಗರಕ್ಕೆ ಮುಂದರಿಯಲು ನಮಗೆ ಸಮಯ ಬಂತು.
ಶುದ್ಧೀಕರಿಸಲ್ಪಟ್ಟ ಜನರು
ಇತ್ತೀಚೆಗಿನ ವರ್ಷಗಳಲ್ಲಿ ಇತರ ದ್ವೀಪಗಳ ನಿವಾಸಿಗಳು ಉದ್ಯೋಗದ ಅನ್ವೇಷಣೆಗಾಗಿ ರಾಜಧಾನಿಯಲ್ಲಿ ಗುಂಪುಗೂಡುತ್ತಾರೆ. ಪರಿಣಾಮವಾಗಿ ಸಾವಿರಾರು ಒಡ್ಡೊಡ್ಡಾದ ಜೋಪಡಿಗಳು ನಗರದ ಹೊರವಲಯದಲ್ಲಿ ಕಟ್ಟಲ್ಪಟ್ಟಿವೆ, ಇದು ಮಿತವಾದ ನೀರಿನ ಸರಬರಾಜು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಪೂರೈಕೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿರುತ್ತದೆ. ಅವರ ಆದಾಯವನ್ನು ಹೆಚ್ಚಿಸಲು, ಹಲವಾರು ಕುಟುಂಬಗಳು ಆಡುಗಳನ್ನು, ಹಂದಿಗಳನ್ನು ಮತ್ತು ಕೋಳಿಗಳನ್ನು ಸಾಕುತ್ತಾರೆ. ಇವುಗಳು ಬೀದಿಗಳಲ್ಲಿ ಸ್ವತಂತ್ರವಾಗಿ ತಿರುಗಾಡುವುದನ್ನು ಕಾಣುವುದು ಸಾಮಾನ್ಯವಾಗಿದೆ. ಇದು ರೋಗಗಳ ಹರಡಿಸುವಿಕೆಗೆ ಕೂಡಿಸಿದೆ.
ಇಂಥ ಕಷ್ಟಕರ ಪರಿಸ್ಥಿತಿಗಳ ನಡುವೆಯೂ, ಇಂದು ಪ್ರೆಯಾದಲ್ಲಿ ಎರಡು ಅಭಿವೃದ್ಧಿ ಹೊಂದುತ್ತಿರುವ ಸಭೆಗಳಿವೆ. ಅಲ್ಲಿ ಒಟ್ಟಿಗೆ ಸುಮಾರು 130 ರಾಜ್ಯ ಪ್ರಚಾರಕರಿದ್ದಾರೆ. ಈ ಸಂತೋಷಿತ ಸಾಕ್ಷಿಗಳು ಬೈಬಲಿನಿಂದ ಏನನ್ನು ಕಲಿತಿದ್ದಾರೋ ಅದನ್ನು ಅನ್ವಯಿಸುವ ಮೂಲಕ ಖಂಡಿತವಾಗಿಯೂ ‘ಸ್ವತಃ ಪ್ರಯೋಜನ ಪಟ್ಟಿದ್ದಾರೆ.’ ಒಂದು ಶುದ್ಧ ಮತ್ತು ಪವಿತ್ರ ಜನರಾಗಿರಲು ಪ್ರಯತ್ನಿಸುತ್ತಾ, ನಮ್ಮ ಸಹೋದರರು ಮತ್ತು ಅವರ ಮಕ್ಕಳು ಒಳ್ಳೆಯ ಆರೋಗ್ಯವನ್ನು, ಆತ್ಮಿಕವಾಗಿಯೂ ಶಾರೀರಿಕವಾಗಿಯೂ ಆನಂದಿಸುತ್ತಾರೆ. ಅವರ ಜೀವಿತವು ಕಷ್ಟಕರವಾಗಿದ್ದರೂ, ಅವರು ಆತ್ಮಿಕವಾಗಿ ಶ್ರೀಮಂತರಾಗಿದ್ದಾರೆ.—ಯೆಶಾಯ 48:17; 1 ಪೇತ್ರ 1:15, 16.
ನಾವು ಆಗಮಿಸುತ್ತಿದ್ದಂತೆ, ಸಹೋದರರು ತಮ್ಮ ಜಿಲ್ಲಾ ಅಧಿವೇಶನಕ್ಕಾಗಿ ತಯಾರಿಸುವುದರಲ್ಲಿ ಕಾರ್ಯಮಗ್ನರಾಗಿದ್ದರು. ಸಾವೊ ಟಿಯಾಗೊದಲ್ಲೆಲ್ಲಾ ಮತ್ತು ಸಾಲ್ ಹಾಗೂ ಫೊಗೊದಲ್ಲಿ ಇರುವ ಸಾಕ್ಷಿಗಳು ಮತ್ತು ಆಸಕ್ತ ಜನರು ಅಧಿವೇಶನಕ್ಕೆ ಬಂದರು ಮತ್ತು ಯೆಹೋವನು 472 ರ ಉಚ್ಛಾಂಕದೊಂದಿಗಿನ ಹಾಜರಿಯೊಂದಿಗೆ ಅವರನ್ನು ಆಶೀರ್ವದಿಸಿದನು. ಹೊಳೆಯುವ ಮುಖಗಳೊಂದಿಗೆ ಹಲವಾರು ಎಳೆಯವರನ್ನು ಕೂಡಿಸಿ, ಎಲ್ಲರೂ ಎಷ್ಟು ಸಂತೋಷಭರಿತರಾಗಿದ್ದರು! ಗಮನಕೊಟ್ಟು ಕೇಳುತ್ತಿದ್ದ ಆ ಸಮೂಹದ ಮಧ್ಯದಲ್ಲಿ ನಾವು ಕುಳಿತಾಗ, ನಾವು “ಅಲ್ಪಕಾರ್ಯಗಳ ದಿನವನ್ನು” ಕಡೆಗೆಣಿಸಬಾರದೆಂದು ವ್ಯಕ್ತವಾಗುತ್ತಿತ್ತು. (ಜೆಕರ್ಯ 4:10) ಕೇವಲ 30 ವರ್ಷಗಳ ಹಿಂದೆ ಸತ್ಯವನ್ನು ಕಲಿತ ಎರಡು ವ್ಯಕ್ತಿಗಳಿಂದ ಇದೆಲ್ಲವೂ ಬೆಳೆದಿತ್ತು!
ಆ ದ್ವೀಪವನ್ನು ಬಿಡುವ ಮುಂಚೆ, ನಗರದ ಹೊರಗಿರುವ ವಿಲಾ ಆಸ್ಸೊಮಾಡಾ ಮತ್ತು ಟಾರಾಫಾಲ್ ಎಂಬ ಎರಡು ಚಿಕ್ಕ ಗುಂಪುಗಳಿಗೆ ಭೇಟಿಕೊಡಲು ಹೋದೆವು. ದ್ವೀಪವು ಗುಡ್ಡೆಪ್ರದೇಶವಾಗಿದ್ದು, ಬಂಜರು ಹಾಗೂ ಒಣಗಿದ್ದಾಗಿತ್ತು. ಆದರೆ ಅಲ್ಲಲ್ಲಿ ನಾವು ಹುಲುಸಾದ ಸಸ್ಯಗಳನ್ನು ಮತ್ತು ಮರಗಳ ಹಸಿರನ್ನು ನೋಡಿದೆವು—ತೆಂಗಿನಕಾಯಿ, ಬಾಳೆಹಣ್ಣು, ಪಪ್ಪಾಯ, ಮಾವಿನ ಹಣ್ಣು ಮತ್ತು ಇಂಥ ಮರಗಳ ಎಕ್ರೆಗಟ್ಟಲೆ ಜಾಗಗಳಾಗಿದ್ದವು. ಒಂದು ದಿನ ಮರುಭೂಮಿಯು ಅರಳುವದು ಎಂಬ ಯೆಶಾಯನ ಪ್ರವಾದನೆಯನ್ನು ಇದು ನೆನಪಿಗೆ ತಂದಿತು. (ಯೆಶಾಯ 35:1) ಮರಳುಮಧ್ಯದ ತಂಪು ಜಾಗದಂತೆ, ಇಂದು ಸಹ ಸಾಕ್ಷಿಗಳ ಚಿಕ್ಕ ಗುಂಪುಗಳು, ಆತ್ಮಿಕವಾಗಿ ಒಣಗಿರುವ ಒಂದು ದೇಶದಲ್ಲಿ ಜೀವಿಸುತ್ತಿರುವ ಸಾವಿರಾರು ಮಂದಿಗೆ ಆತ್ಮಿಕ ಆಹಾರ ಮತ್ತು ಪಾನೀಯವನ್ನು ಧಾರಾಳವಾಗಿ ನೀಡುತ್ತಿದ್ದಾರೆ.
ಫೊಗೊ ದ್ವೀಪದಲ್ಲಿ ಬೆಂಕಿಯಂಥ ಹುರುಪು
“ಬೆಂಕಿ” ಎಂಬರ್ಥವಿರುವ ಫೊಗೊ ಮುಂದಿನ ದ್ವೀಪವಾಗಿತ್ತು. ಅದರ ಜ್ವಾಲಾಮುಖಿ ಮೂಲವು ಅದರ ಹೆಸರನ್ನು ವರ್ಣಿಸುತ್ತದೆ. ಕಾನೊ ಶಿಖರವು ಇನ್ನೂ ಒಂದು ಕ್ರಿಯಾಶೀಲ ಜ್ವಾಲಾಮುಖಿಯಾಗಿದೆ. ಅದು ಸಮುದ್ರದಿಂದ ಬಹುಮಟ್ಟಿಗೆ ಒಂದು ಪರಿಪೂರ್ಣ ಶಂಖುವಿನಂತೆ 2,800 ಮೀಟರು ಎತ್ತರಕ್ಕೆ ಏರಿದೆ. ದ್ವೀಪದಲ್ಲಿ ಈಗಷ್ಟೇ ಸಾಕಷ್ಟು ಮಳೆ ಸುರಿದದೆ. ಹಲವಾರು ವರ್ಷಗಳಲ್ಲಿ ಇಷ್ಟು ತೀವ್ರ ಮಳೆ ಮೊದಲ ಬಾರಿಯಾಗಿರುತ್ತದೆ. ಜನರೊಳಗೆ ಗೆಲುವಿನ ವಾತಾವರಣವಿತ್ತು ಮತ್ತು ಕೇಪ್ ವರ್ಡ್ನ ಆಹಾರವಾಗಿರುವ ಅವರೆ ಕಾಯಿ ಮತ್ತು ಮಾನಿಯೊಕ್ ಬೇಳೆಯೊಂದಿಗೆ ಅವರು ಅಸಾಮಾನ್ಯ ರೀತಿಯಲ್ಲಿ ಕಾರ್ಯಮಗ್ನರಾಗಿದ್ದರು.
ಆದಾಗ್ಯೂ, ಈ ಗಣ್ಯತೆಯುಳ್ಳ ಜನರು ಬೈಬಲಿನಿಂದ ಸತ್ಯದ ಜಲವನ್ನು ಸ್ವಲ್ಪ ನಿಂತು ತಕ್ಕೊಳ್ಳದಷ್ಟು ಕಾರ್ಯಮಗ್ನರಾಗಿರಲಿಲ್ಲ. ಕಾರುಗಳು ಕೊಂಚವೇ ಇದ್ದು, ದುರಸ್ತಿ ಕೆಟ್ಟದ್ದಾಗಿದ್ದುದರಿಂದ, ಅವರನ್ನು ಭೇಟಿಯಾಗುವುದು ಒಂದು ಪ್ರಯಾಸದ ಕೆಲಸವಾಗಿದ್ದರೂ, ನಾವು ಮೂರು ವಿಭಿನ್ನ ಗುಂಪುಗಳನ್ನು ಸಂದರ್ಶಿಸಶಕ್ತರಾದೆವು. ಆ ದ್ವೀಪದಲ್ಲಿ ಕೇವಲ 42 ರಾಜ್ಯ ಪ್ರಚಾರಕರು ಇದ್ದುದರಿಂದ ಕೂಟಗಳಿಗೆ ಒಟ್ಟಿಗೆ 162 ಮಂದಿ ಹಾಜರಾದಾಗ ನಾವು ಅತ್ಯಾನಂದ ಪಟ್ಟೆವು. ಇದು ಫೊಗೊ ದ್ವೀಪದ 32,000 ಸಾವಿರ ನಿವಾಸಿಗಳಿಗೆ ಸತ್ಯ ಮತ್ತು ಜೀವಿತದ ಸಾಂಕೇತಿಕ ಜಲವನ್ನು ತರುವುದರಲ್ಲಿ ಪ್ರತಿ ತಿಂಗಳು ಸರಾಸರಿಯಾಗಿ 15 ತಾಸುಗಳನ್ನು ಹಾಕುತ್ತಿದ್ದ ಈ ಚಿಕ್ಕ ಗುಂಪಿನ ಸಹೋದರ ಸಹೋದರಿಯರ ಹುರುಪಿನ ಒಂದು ಪ್ರತಿಬಿಂಬವಾಗಿರುತ್ತದೆ.
ಕ್ಯಾಥಲಿಕ್ ದೇಶವೊಂದರಲ್ಲಿ ಫಲ
ಸಾಂಟೊ ಆಂಟಾವೊ ಮತ್ತು ಸಾವೊ ನಿಕೊಲೌ ದ್ವೀಪಗಳಲ್ಲಿರುವ ನಮ್ಮ ಸಹೋದರರನ್ನು ನಾವು ಇನ್ನೂ ಭೇಟಿಯಾಗಬೇಕಿತ್ತು. ಈ ಹೆಸರುಗಳು ಸೂಚಿಸುವಂತೆ, ರೋಮನ್ ಕ್ಯಾಥಲಿಕ್ ಚರ್ಚು ಈ ದ್ವೀಪಗಳ ಮೇಲೆ ಹಲವಾರು ಶತಮಾನಗಳಿಂದ ತನ್ನ ಪ್ರಭಾವವನ್ನು ಪ್ರಯೋಗಿಸಿದೆ. ಕ್ಯಾಥಲಿಸಿಸಂ ಕೇಪ್ ವರ್ಡ್ನ ಮುಖ್ಯ ಧರ್ಮವಾಗಿ ಉಳಿದರೂ, ಹಲವಾರು ಯಥಾರ್ಥವಂತ ಜನರು ಸತ್ಯದ ಚೇತೋಹಾರಿ ಜಲಕ್ಕಾಗಿ ಬೈಬಲಿನೆಡೆಗೆ ತಿರುಗುತ್ತಿದ್ದಾರೆ.
ಸಾಂಟೊ ಆಂಟಾವೊವಿನ ವಿರುದ್ಧ ಮೂಲೆಗಳಲ್ಲಿರುವ ಎರಡು ಚಿಕ್ಕ ಸಭೆಗಳ 49 ರಾಜ್ಯ ಪ್ರಚಾರಕರು, ಅದರ 44,000 ನಿವಾಸಿಗಳ ಆತ್ಮಿಕ ಅಗತ್ಯತೆಗಳನ್ನು ಮುಟ್ಟಲು ಕಷ್ಟದಿಂದ ಕಾರ್ಯ ನಿರ್ವಹಿಸುತ್ತಾರೆ. ಪೊರ್ಟೊ ನೊವೊ ಸಭೆಯಲ್ಲಿ ಬಹಿರಂಗ ಬೈಬಲ್-ಭಾಷಣಕ್ಕೆ 512 ವ್ಯಕ್ತಿಗಳು ಕೂಡಿಬಂದಾಗ, ಆಲಿನ್ಲ 32 ರಾಜ್ಯ ಪ್ರಚಾರಕರಿಗೆ ಸ್ಪಷ್ಟವಾಗಿಯಿತೇನಂದರೆ ಸಾಂಟೊ ಆಂಟಾವೊದಲ್ಲಿ ಸತ್ಯದ ಜಲಕ್ಕಾಗಿ ಬಾಯಾರಿರುವ ಕುರಿಗಳಂಥ ಹಲವಾರು ಜನರಿದ್ದಾರೆ.
ಸಾವೊ ನಿಕೊಲೌ ದ್ವೀಪದಲ್ಲಿ ಈ ಕೆಲಸವು ಕೆಲವು ವರ್ಷಗಳ ಹಿಂದೆ ಪೋರ್ಚುಗಲಿನ ಒಬ್ಬ ಪಯನೀಯರ್ ಸಹೋದರಿಯು ಈ ದ್ವೀಪದಲ್ಲಿರುವ ಒಂದು ಕುಟುಂಬದೊಂದಿಗೆ ಪತ್ರವ್ಯವಹಾರದ ಮೂಲಕ ಒಂದು ಬೈಬಲ್ ಅಭ್ಯಾಸವನ್ನು ನಡೆಸಿದಾಗಿನಿಂದ ಆರಂಭವಾಯಿತು. ಅನಂತರ, 1978 ರಲ್ಲಿ ಪೋರ್ಚುಗಲಿನಲ್ಲಿದ್ದ ಇನ್ನೊಬ್ಬ ಪಯನೀಯರನು ಆತನ ನಾಡಾಗಿದ್ದ ಸಾವೊ ನಿಕೊಲೌಗೆ ಹಿಂತಿರುಗಿ, ಅದರ 15,000 ನಿವಾಸಿಗಳಿಗೆ ಬೈಬಲ್ ಸತ್ಯವನ್ನು ಹಂಚಲು ನಿರ್ಣಯಿಸಿದನು. ಆ ದ್ವೀಪದಲ್ಲಿ ಅವನು ಪ್ರಥಮ ಬೈಬಲ್ ಕೂಟವನ್ನು ನಡಿಸಿದಾಗ, ಒಬ್ಬ ವ್ಯಕ್ತಿಯ ಹಾಜರಿ ಇತ್ತು—ಅದು ಅವನು ತಾನೇ! ಆದರೆ ಆ ಕೂಟದಲ್ಲಿ ಅವನು ಮಾಡಿದ ತೀವ್ರಾಸಕ್ತಿಯ ಪ್ರಾರ್ಥನೆಗಳಿಗೆ ಯೆಹೋವ ದೇವರು ಉತ್ತರವನ್ನಿತ್ತನು. ನಮ್ಮ ಸಂದರ್ಶನದ ಸಮಯದಲ್ಲಿ ಆ ಮೂರೂ ಸಭೆಗಳ 48 ಪ್ರಚಾರಕರು ಕೂಟಗಳಿಗೆ ಬಂದಂತಹ 335 ಜನರನ್ನು ನೋಡುವುದರಲ್ಲಿ ಪುಳಕಿತಗೊಂಡರು.
ಆ ದ್ವೀಪದಲ್ಲಿನ ಮೊದಲ ಸರ್ಕೀಟ್ ಸಮ್ಮೇಳನವು ನಮ್ಮ ಭೇಟಿಯ ಸಮಯದಲ್ಲಿ ಜರುಗಿತು ಮತ್ತು ಸ್ಥಳೀಯ ನಾಟಕಮಂದಿರವನ್ನು ನಮಗೆ ಯಾವ ಬಾಡಿಗೆಯಿಲ್ಲದೆ ಲಭ್ಯಮಾಡಲಾಯಿತು. ನಗರದ ಅಧಿಕಾರಿಗಳು ಧ್ವನಿವರ್ಧಕ ಉಪಕರಣಗಳನ್ನು ಮತ್ತು ಉಚಿತ ವಾಹನ ಸೌಕರ್ಯಗಳನ್ನು ಒದಗಿಸಿದರು. ಆತಿಥೇಯ ಸಭೆಯ 19 ಪ್ರಚಾರಕರು 100 ಪ್ರತಿನಿಧಿಗಳ ವಸತಿ ವ್ಯವಸ್ಥೆಯನ್ನು ನೋಡಿಕೊಂಡರು ಮತ್ತು ಹಾಜರಿಯಲ್ಲಿದ್ದ 208 ಜನರಿಗೆ ಊಟವನ್ನು ತಯಾರಿಸಿದರು. ದಿನನಿತ್ಯವೂ ನಮ್ಮ ಸಹೋದರರು ಎದುರಿಸುತ್ತಿರುವ ಹಲವಾರು ಕಷ್ಟಗಳ ನಡುವೆಯೂ ಅವರು ಸೊಸೈಟಿಯ ರಾಜ್ಯ ಸಭಾಗೃಹದ ಫಂಡಿಗಾಗಿ ಕಾಣಿಕೆಯನ್ನು ಕೊಟ್ಟರು.
ಯೆಹೋವನು ಸಾಕ್ಷಿಗಳ ಒಳ್ಳೆಯ ನಡತೆಯು ಇಲ್ಲಿ ಪ್ರಸಿದ್ಧವಾಗಿದೆ ಮತ್ತು ಕೆಲಸಗಾರರ ಅಗತ್ಯವಿರುವಾಗ ಹಲವಾರು ಉದ್ಯೋಗಪತಿಗಳು ಅವರಿಗಾಗಿಯೇ ಹುಡುಕುತ್ತಾರೆ. ಉದಾಹರಣೆಗೆ, ದ್ವೀಪದಲ್ಲಿರುವ ಏಕೈಕ ಅನಿಲ ಸೇಷ್ಟನಿನ ಮಾಲಕನು ಒಬ್ಬ ಸಾಕ್ಷಿಗೆ ಅವನಿಗೋಸ್ಕರ ಕೆಲಸ ಮಾಡಲು ಕೇಳಿಕೊಂಡನು, ಯಾಕಂದರೆ ಅವನಿಗೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಅಗತ್ಯತೆಯಿತ್ತು. ಸಹೋದರನಿಗೆ ಆಗಲೇ ಒಂದು ಉದ್ಯೋಗವಿತ್ತು. ಆದರೆ ಇನ್ನೊಬ್ಬರನ್ನು ಹುಡುಕಲು ಪ್ರಯತ್ನಿಸುವನೆಂದು ಹೇಳಿದನು: “ಅವನು ಒಬ್ಬ ಸ್ನಾನಿತ ಸಾಕ್ಷಿಯಾಗಿದ್ದರೆ ಮಾತ್ರ”! ಎಂದು ಮಾಲಕನು ಒತ್ತಿ ಹೇಳಿದನು. ಎರಡು ತಿಂಗಳುಗಳ ನಂತರ ಅವನು ನಮ್ಮ ಸಹೋದರನಿಗೆ ಹೀಗೆ ಹೇಳಿದನು: “ಯೆಹೋವನ ಸಾಕ್ಷಿಗಳು ಹಣದೊಂದಿಗೆ ಮಾತ್ರ ವ್ಯವಹರಿಸಬೇಕಾದ ಜನರಾಗಿರುತ್ತಾರೆ!”
ಕೊನೆಯ ನಿಲುಗಡೆ—ಸಾಲ್ ದ್ವೀಪ
ಈ ಸಂಚಾರದಲ್ಲಿ ನಮ್ಮ ಕೊನೆಯ ನಿಲುಗಡೆಯು ಸಾಲ್ ದ್ವೀಪವಾಗಿತ್ತು. ಅದರ ಹೆಸರಿನ ಅರ್ಥ “ಉಪ್ಪು” ಮತ್ತು ಅದು ಈ ದ್ವೀಪದಲ್ಲಿನ ಮುಖ್ಯ ಕಸುಬನ್ನು ಸುಲಭವಾಗಿ ತೋರಿಸುತ್ತದೆ. 6,500 ನಿವಾಸಿಗಳಿಗೆ ರಾಜ್ಯದ ಸಂದೇಶವನ್ನು ತರಲು ಕಷ್ಟದಿಂದ ಕೆಲಸಮಾಡುವ 22 ಪ್ರಚಾರಕರು ಇಲ್ಲಿನ ಚಿಕ್ಕ ಸಭೆಯಲ್ಲಿ ಸೇರಿರುತ್ತಾರೆ. ಈ ದ್ವೀಪದಲ್ಲಿರುವವರೊಂದಿಗೆ ಸುವಾರ್ತೆಯನ್ನು ಹಂಚುವುದು ಒಂದು ಸುಖಾನುಭವವಾಗಿತ್ತು, ಏಕೆಂದರೆ ಬಹುಮಟ್ಟಿಗೆ ಪ್ರತಿಯೊಂದು ಮನೆಯೊಳಗೆ ಆಮಂತ್ರಿಸಲಾಯಿತು ಮತ್ತು ಮನೆಯವರ ಹಲವಾರು ಸದಸ್ಯರೊಂದಿಗೆ ಮಾತಾಡಶಕ್ತರಾದೆವು.
ಸಾಲ್ ದ್ವೀಪಕ್ಕೆ ನಮ್ಮ ಸಂದರ್ಶನವು ನಮ್ಮ ಪ್ರವಾಸವನ್ನು ಪೂರ್ಣಗೊಳಿಸಿತು. ಕೇಪ್ ವರ್ಡ್ನಲ್ಲಿರುವ ಯೆಹೋವನ ನಂಬಿಗಸ್ತ ಸೇವಕರೊಂದಿಗೆ ಕೆಲಸ ಮಾಡುವುದು ಎಂಥ ಒಂದು ಆಶೀರ್ವಾದವಾಗಿತ್ತು! ಈಗ ಆ ದ್ವೀಪಗಳಲ್ಲಿ 531 ರಾಜ್ಯ ಪ್ರಚಾರಕರು ಇದ್ದಾರೆ ಮತ್ತು 1991 ರ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾದ 2,567 ವ್ಯಕ್ತಿಗಳು ಆತ್ಮಿಕ ಒದಗಿಸುವಿಕೆಗಳನ್ನು ಸ್ವೀಕರಿಸುತ್ತಾ ಮುಂದುವರಿದರೆ, ಆ ಸಂಖ್ಯೆಯು ಖಂಡಿತವಾಗಿ ಬೆಳೆಯುವುದು. ಇಲ್ಲಿನ ಹೆಚ್ಚಿನ ಯೆಹೋವನ ಸಾಕ್ಷಿಗಳಿಗೆ ಆರ್ಥಿಕವಾಗಿ ಕೊಂಚವೇ ಇದ್ದರೂ, ಅವರು ಆತ್ಮಿಕವಾಗಿ ಧನವಂತರೂ, ಉತ್ತಮವಾಗಿ ಉಣಿಸಲ್ಪಟ್ಟವರೂ ಆಗಿರುತ್ತಾರೆ. ಮತ್ತು ಯೆಹೋವನ ಮಹಿಮೆ ಮತ್ತು ಸ್ತುತಿಗಾಗಿ ಈ ದ್ವೀಪಗಳಿಂದ ವಿಫುಲವಾಗಿ ಜೀವದ ಜಲವು ಹೊರಹೊಮ್ಮುವಂತೆ ಯೆಹೋವನು ಸಾಧ್ಯಮಾಡುವುದಕ್ಕಾಗಿ ಅವರು ಎಷ್ಟೊಂದು ಆಭಾರಿಗಳಾಗಿದ್ದಾರೆ! (w92 3/15)
[ಪುಟ 24ರಲ್ಲಿರುವಚಿತ್ರ]
(For fully formatted text, see publication.)
ಕೇಪ್ ವರ್ಡ್
ಸಾಂಟಾ ಆಂಟಾವೊ
ಸಾವೊ ವಿಸೆಂಟಿ
ಸಾವೊ ನಿಕೊಲೌ
ಸಾಂಟಾ ಲುಝಿಯಾ
ಸಾಲ್
ಬೊಅ ವಿಸ್ಟಾ
ಮಾಇಯೊ
ಸಾವೊ ಟಿಯಾಗೊ
ಫೊಗೊ
ಬ್ರಾವಾ
ಪ್ರೆಯಾ
ಆಟ್ಲಾಂಟಿಕ್ ಸಾಗರ