ಕುತೂಹಲಕಾರಿ ಸ್ತಂಭಗಳಿಗಿಂತ ಹೆಚ್ಚು
ಇಸ್ರಾಯೇಲ್ ಕರಾವಳಿಯ ಒಂದು ಪುರಾತನ ಬಂದರಾದ ಕೈಸರೇಯದ ಭೂಮಧ್ಯ ಸಮುದ್ರದಲ್ಲಿರುವ ಸ್ತಂಭಗಳಿಂದ ಸಂದರ್ಶಕರು ಕುತೂಹಲಗೊಂಡಿರುತ್ತಾರೆ. ಮಹಾ ಹೆರೋದನು ಈ ಬಂದರನ್ನು ಕಟ್ಟಿದ್ದನು ಮತ್ತು ಕೈಸರ ಆಗಸಸ್ಟ್ನ ಗೌರವಾರ್ಥವಾಗಿ ಪಟ್ಟಣಕ್ಕೆ ಆ ಹೆಸರನ್ನು ಕೊಟ್ಟಿದ್ದನು.
ಅಗೆತ ಶಾಸ್ತ್ರಜ್ಞರು ಪಟ್ಟಣದ ಹೆಚ್ಚನ್ನು, ವರ್ತುಲಾಕಾರದ ನಾಟಕಮಂದಿರವನ್ನೂ ಸಂಶೋಧಿಸಿದ್ದಾರೆ. ಮರಳಿನ ತೀರದಲ್ಲಿ ಬಂದರುಕಟ್ಟೆಯನ್ನು ಹೇಗೆ ಕಟ್ಟಿದರು ಎಂಬದಕ್ಕೆ ಒಳನೋಟವನ್ನು ಪಡೆಯಲು ನೀರಿನ ಕೆಳಗೂ ಅವರು ಇಳಿದಿದ್ದಾರೆ.
ಹಿಂದೆ ಸಮುದ್ರದೊಳಗೆ ಮುನ್ಚಾಚಿದ್ದ ಒಂದು ಅರಮನೆಯ ಭಗ್ನಾವಶೇಷದಲ್ಲಿ ಸ್ತಂಭಗಳ ಸಂಶೋಧನೆಯಾದದ್ದನ್ನು ದ ನ್ಯೂಯೋರ್ಕ್ ಟೈಮ್ಸ್ (ಜನವರಿ 8, 1991) ವರದಿ ಮಾಡಿತ್ತು. ಅವುಗಳ ಮೇಲೆ ಕೆತ್ತಿದ ಸ್ಮಾರಕ ಲೇಖನದಲ್ಲಿ ಹಿಂದೆ ಜ್ಞಾತರಲ್ಲದ ಕೆಲವು ರೋಮನ್ ಗವರ್ನರರ ಹೆಸರುಗಳನ್ನು ತಿಳಿಸುವುದರಲ್ಲಿ ಅವುಗಳ ವಿಶೇಷತೆಯಿದೆ. ಹಡಗುಗಳ ಪಾರುಪತ್ಯಗಾರ [“Curator”] ನನ್ನು ಸಹ ತಿಳಿಸಲಾಗಿದೆ, “ಬಂದರಿಗೆ ಸಂಬಂಧಪಟ್ಟಿರುವ ಎಂದೂ ಕಂಡುಬಂದ ಸ್ಮಾರಕ ಲೇಖನಗಳಲ್ಲಿ ಇದು ಮೊದಲನೆಯದ್ದು.”
ಅಪೊಸ್ತಲ ಪೌಲನು ಎರಡು ಮಿಶನೆರಿ ಸಂಚಾರಗಳ ಕೊನೆಯಲ್ಲಿ ಈ ಬಂದರಿನೊಳಗಿಂದ ಸಮುದ್ರಯಾನ ಮಾಡಿದ್ದನೆಂಬದು ಬೈಬಲ್ ವಿದ್ಯಾರ್ಥಿಗಳಿಗೆ ತಿಳಿದದೆ. ಅಲ್ಲಿ ಅವನು ಸುವಾರ್ತಿಕನಾದ ಫಿಲಿಪ್ಪನ ಮನೆಯಲ್ಲಿ ಇಳುಕೊಂಡನು, ಮತ್ತು ಅವನ ಅನುಭವಗಳು ಶಿಷ್ಯರನ್ನು ಬಹಳವಾಗಿ ಪ್ರೋತ್ಸಾಹಿಸಿದ್ದಿರಬೇಕು. (ಅಪೊಸ್ತಲರ ಕೃತ್ಯಗಳು 18:21, 22; 21:7, 8, 16) ಈ ಅನೇಕ ರೋಮಾಂಚಕರ ಅನುಭವಗಳನ್ನು ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ನಾವು ಓದ ಸಾಧ್ಯವಿದೆ.
ಹೀಗೆ ತೀರದಲ್ಲಿನ ಈ ಸ್ತಂಭಗಳು ಕೇವಲ ನಿಷ್ಪಯ್ರೋಜಕ ಚಾರಿತ್ರಿಕ ಅವಶೇಷಗಳಲ್ಲ. ಅವು ಕ್ರೈಸ್ತರಿಗೆ ಬಂದರುಗಳಲ್ಲಿ ಮತ್ತು ಹೊರಗೆ “ಭೂಮಿಯ ಕಟ್ಟಕಡೆಯಲ್ಲಿ” ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಕ್ರಿಯಾಶೀಲರಾಗಿದ್ದ ಅವರ ಆರಂಭದ ಸಹೋದರರನ್ನು ನೆನಪಿಗೆ ತರುತ್ತವೆ.—ಅಪೊಸ್ತಲರ ಕೃತ್ಯಗಳು 1:8.
[ಪುಟ 32 ರಲ್ಲಿರುವ ಚಿತ್ರ ಕೃಪೆ]
Garo Nalbandian