ಮೃತ-ಸಮುದ್ರ ಸುರುಳಿಗಳಲ್ಲಿಕೊನೆಯದರ ಬಿಡುಗಡೆ
ಕಳೆದ ಸಪ್ಟಂಬರದಲ್ಲಿ, ದಶಮಾನಗಳಿಂದ ಬಾಳಿದ್ದ ಒಂದು ಪಾಂಡಿತ್ಯಪೂರ್ಣ ಕೊರಡು-ಬೆಣೆ ಕಟ್ಟಕಡೆಗೆ ಒಡೆಯಿತು. ಮೃತ ಸಮುದ್ರ ಸುರುಳಿಗಳ ವಿದ್ಯಾರ್ಥಿಗಳ ನಡುವಣ ಒಂದು ಕಟು ವಾಗ್ವಾದವು ಮುಗಿದಂತೆ ತೋರಿಬಂತು, ಆದರೂ ಒಂದು ವಾಗ್ವಾದವು ಪ್ರಾರಂಭವಾಗಿದ್ದಿರಬಹುದು.
ಮೃತ-ಸಮುದ್ರ ಸುರುಳಿಗಳು 1947 ರಲ್ಲಿ ಮತ್ತು ಅದನ್ನು ಹಿಂಬಾಲಿಸಿದ ವರ್ಷಗಳಲ್ಲಿ ಮೃತ ಸಮುದ್ರದ ಸಮೀಪದ ಗವಿಗಳಲ್ಲಿ ಕಂಡು ಹಿಡಿಯಲ್ಪಟ್ಟವು. ಹಿಬ್ರೂ ಶಾಸ್ತ್ರಗ್ರಂಥದ ವಚನಗಳ ಆವಶ್ಯಕ ನಿಷ್ಕ್ರಷತ್ಟೆಯನ್ನು ತೋರಿಸುವುದರಲ್ಲಿ ಮತ್ತು ಯೇಸು ಭೂಮಿಯಲ್ಲಿದ್ದಾಗ ಪಲೆಸ್ತೀನದ ಧಾರ್ಮಿಕ ಪರಿಸ್ಥಿತಿಗಳ ಮೇಲೆ ಬೆಳಕನ್ನು ಬೀರುವುದರಲ್ಲಿ ಅವು ಅತ್ಯಂತ ಮೌಲ್ಯವುಳ್ಳವುಗಳಾಗಿದ್ದವು. (ಯೆಶಾಯ 40:8) ಕೆಲವು ಹಸ್ತಪ್ರತಿಗಳು ನ್ಯಾಯಸಮ್ಮತ ಶೀಘ್ರತೆಯಿಂದ ಪ್ರಕಾಶಿಸಲ್ಪಟ್ಟರೂ, 1991 ರಲ್ಲಿ ಸುಮಾರು 400 ರಷ್ಟು ಹಸ್ತಪ್ರತಿಗಳು ಇನ್ನೂ ಪ್ರಕಾಶಿತವಾಗಿಲ್ಲ ಮತ್ತು ಹೆಚ್ಚಿನ ಪಂಡಿತರಿಗೆ ದೊರೆತಿರುವುದಿಲ್ಲ. ಪ್ರೊಫೆಸರ್ ಬೆನ್ ಝೂಯನ್ ವಕೋಲರ್ಡ್ರಂಥ ಅನೇಕ ಪಂಡಿತರು, “ಪ್ರಚಲಿತ ಪ್ರಕಾಶನದ ಗತಿಯನ್ನು ಗಮನಿಸುವಲ್ಲಿ, ಮೃತ-ಸಮುದ್ರ ಶಾಸ್ತ್ರವಚನಗಳ ಸಂಪೂರ್ಣ ಕೃತಿಗಳು ಲೋಕಕ್ಕೆ ದೊರೆಯುವಂತಾಗುವಾಗ ನಾವೆಲ್ಲರೂ ಮೃತರಾಗಿ ಹೋಗಿರುವೆವು ಎಂಬ ಮನವರಿಕೆಯಿಂದ ಆಶಾಭಂಗದ” ಭಾವವನ್ನು ತಾಳಿರುವರು.
ಆದರೆ ಅ ಪರಿಸ್ಥಿತಿಯು ಕಳೆದ ಸಪ್ಟಂಬರದಲ್ಲಿ ಬದಲಾಯಿತು. ಮೊದಲು, ಪ್ರೊಫೆಸರ್ ವಕೋಲರ್ಡ್ ಮತ್ತು ಅವರ ಒಬ್ಬ ಸಹವಾಸಿ ಮಾರ್ಟಿನ್ ಆಬೆಗ್, ಜೋಕೆಯಿಂದ ಕಾಪಿಟ್ಟ ಆ ಶಾಸ್ತ್ರವಚನಗಳ ನಕಲುಪ್ರತಿ ಮಾಡಲು ತಾವು ಒಂದು ಕಂಪ್ಯೂಟರನ್ನು ಉಪಾಯ ಕೌಶಲ್ಯದಿಂದ ಉಪಯೋಗಿಸಿದ್ದೇವೆ ಎಂದು ಪ್ರಕಟಿಸಿದರು. ಅನಂತರ, ಕ್ಯಾಲಿಫೋರ್ನಿಯದ ಸಾನ್ ಮರೀನೊದಲ್ಲಿ ಹಟ್ಟಿಂಗ್ಟನ್ ಲೈಬ್ರೆರಿಯು, ಮೂಲ ಹಸ್ತಪ್ರತಿಗಳ ಚಿತ್ರಗಳು ತಮ್ಮಲ್ಲಿವೆಯೆಂದು ಪ್ರಕಟಿಸಿದರು ಮತ್ತು ಪ್ರಖ್ಯಾತ ಪಂಡಿತರಿಗೆ ಅವನ್ನು ನಿರ್ಬಂಧರಹಿತವಾಗಿ ದೊರಕಿಸಿ ಕೊಡುವೆವು ಎಂದು ಹೇಳಿದರು. ಪ್ರತ್ಯಕ್ಷವಾಗಿ, ಅವನ್ನು ಸುರಕ್ಷಿತ ಸ್ಥಿತಿಯಲ್ಲಿಡುವಂತೆ ಸುರುಳಿಗಳ ಹಲವಾರು ಛಾಯಾಚಿತ್ರ ಪ್ರತಿಗಳನ್ನು ಮಾಡಲಾಗಿದೆ. ಛಾಯಾಚಿತ್ರಗಳ ಜೊತೆಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಕಾದಿರಿಸಲಾಗಿದೆ, ಕಟ್ಟಕಡೆಗೆ ಅದರ ಒಂದು ಜೊತೆಯು ಹಂಟಿಂಗ್ಟನ್ ಲೈಬ್ರೆರಿಯಲ್ಲಿ ಬಂದಿಳಿಯಿತು.
ಒಬ್ಬ ಪಂಡಿತನು ಈ ಘಟನಾವಳಿಯ ಪರಿವರ್ತನೆಯನ್ನು ‘ಬರ್ಲಿನ್ ಗೋಡೆಯ ಉರುಳಿಸುವಿಕೆಯ ಪಾಂಡಿತ್ಯಪೂರ್ಣ ಸಮ ಸಂಯೋಗಿ’ ಎಂದು ಕರೆದನು. ಅಧಿಕೃತ ಸಂಪಾದಕರು ಕಂಪ್ಯೂಟರ್ ಮಾಡಿದ ನಕಲು ಪ್ರತಿಯ ಪ್ರಕಾಶನವನ್ನು ಮತ್ತು ಛಾಯಾಚಿತ್ರಗಳ ಹೊರಡಿಸುವಿಕೆಯನ್ನು ಎರಡನ್ನೂ ‘ಕಳ್ಳತನ’ ಎಂದು ಕರೆದರು. ಇಲ್ಲಿ ನೈತಿಕ ನಿಯಮಗಳು ಮತ್ತು ನ್ಯಾಯಪರತೆಯ ಕುರಿತ ವಾಗ್ವಾದಗಳು ವರ್ಷಗಳ ತನಕ ನಡೆಯುವದು ಸಂಭವನೀಯ. ಈ ಮಧ್ಯೆ, ಪಂಡಿತರಾದರೋ ಮೃತ-ಸಮುದ್ರ ಸುರುಳಿಗಳ ಸಂಪೂರ್ಣ ಸಮೂಹವನ್ನು ಸಂಪರ್ಕಿಸಲು ಶಕ್ತರಾಗುವರು.
[ಪುಟ 32 ರಲ್ಲಿರುವ ಚಿತ್ರ]
ಹಬಕ್ಕೂಕನ ಪುಸ್ತಕದ ಮೇಲಣ ಒಂದು ವ್ಯಾಖ್ಯಾನದ ನಕಲು, ಮೃತ-ಸಮುದ್ರ ಸುರುಳಿಗಳಲ್ಲೊಂದು