ಯೆಹೋವನಲ್ಲಿ ಪ್ರೀತಿಯು ಆರಾಧಕರನ್ನು ಹುರಿದುಂಬಿಸುತ್ತದೆ
“ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.”—1 ಯೋಹಾನ 5:3.
1, 2. ನಾವು ಯೆಹೋವನನ್ನು ಯಾವ ಹೇತುವಿನಿಂದ ಸೇವಿಸಬೇಕಾಗಿದೆ?
ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಯೆಹೋವನ ಸಾಕ್ಷಿಗಳ ಎಸೆಂಬ್ಲಿ ಹೋಲನ್ನು ಜಾಪಾನಿನಿಂದ ಬಂದ 80 ಯಾತ್ರಿಕರ ಒಂದು ಗುಂಪು ಸಂದರ್ಶಿಸುತ್ತಿತ್ತು. ಉಲ್ಲಾಸಕರ ಪರಿಸರಗಳು, ನೀಲ ಪುಕ್ಕಗಳುಳ್ಳ ಹಕ್ಕಿಗಳು, ಪಾರಿವಾಳಗಳು ಮತ್ತು ಹಮಿಂಗ್ ಪಕ್ಷಿಗಳಿಂದ ತುಂಬಿರುವ ಒಂದು ಹೂದೋಟವು ಸಹಾ, ತಮ್ಮ ಮಹಾ ನಿರ್ಮಾಣಿಕನಾದ ಯೆಹೋವ ದೇವರಿಗೆ ಇನ್ನಷ್ಟು ಸಮೀಪವಿದ್ದಾರೋ ಎಂಬ ಅನಿಸಿಕೆಯನ್ನು ಅವರಿಗೆ ಕೊಟ್ಟಿತು. ಆ ಗುಂಪಿನಲ್ಲಿ ಬಹುಮಟ್ಟಿಗೆ ಪ್ರತಿಯೊಬ್ಬನೂ ಪಯನೀಯರನಾಗಿ ಪೂರ್ಣ ಸಮಯದ ಸೇವೆ ಮಾಡುತ್ತಿದ್ದರೆಂದು ಪರ್ಯಟನ ಮಾರ್ಗದರ್ಶಿಗೆ ಬೇಗನೇ ತಿಳಿದುಬಂತು. ಹೀಗೆ ತದನಂತರ, ಆಗಿಂದಾಗ್ಯೆ ಕೇಳಲ್ಪಡುವ ಒಂದು ಪ್ರಶ್ನೆಯನ್ನು ಗುಂಪಿಗೆ ಹಾಕಲಾಯಿತು: “ಜಾಪಾನಿನಲ್ಲಿ ಅಷ್ಟು ಹೆಚ್ಚು ಪಯನೀಯರರು ಏಕಿದ್ದಾರೆ?” ಒಂದು ಕ್ಷಣ ಅಲ್ಲಿ ಮೌನವು ಆವರಿಸಿತು. ಅನಂತರ ಒಬ್ಬಾಕೆ ಯುವತಿ ತಾನಾಗಿಯೇ ಉತ್ತರಿಸಿದ್ದು: “ಯಾಕಂದರೆ ನಾವು ಯೆಹೋವನನ್ನು ಪ್ರೀತಿಸುವುದರಿಂದಲೇ.”
2 ಯೆಹೋವನಲ್ಲಿ ಪ್ರೀತಿ—ಆತನ ಸೇವೆಯಲ್ಲಿ ಉತ್ಸಾಹದಿಂದಿರುವಂತೆ ಇದು ನಮ್ಮನ್ನು ಎಷ್ಟು ಪ್ರೇರೇಪಿಸುತ್ತದೆ! ಪ್ರತಿಯೊಬ್ಬನಿಗೆ ಪಯನೀಯರಾಗುವ ಶಕ್ಯತೆ ಇರುವದಿಲ್ಲ, ನಿಜ. ನಿಶ್ಚಯವಾಗಿ, ನಾಲ್ವತ್ತು ಲಕ್ಷ ಪ್ರಚಾರಕರಲ್ಲಿ ಹೆಚ್ಚಿನವರು ಈ ಸುಯೋಗಕ್ಕಾಗಿ ಜಾಗಮಾಡಲು ಶಕ್ತರಾಗಿರುವುದಿಲ್ಲ. ಆದರೆ ಯಾರ ಪರಿಸ್ಥಿತಿಗಳು ಅನುಮತಿಸುತ್ತವೋ ಅಂಥ ಅನೇಕರು ಅದನ್ನು ಎಟಕಿಸಲು ಶಕ್ತರಾಗಿದ್ದಾರೆ. ಉಳಿದಿರುವ ನಾವು ಸಹಾ ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಸ್ವಲ್ಪ ಪಾಲನ್ನು ತಕ್ಕೊಳ್ಳುವ ಮೂಲಕ “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡ” ಬಲ್ಲೆವು. (ಕೀರ್ತನೆ 37:3, 4) ಮತ್ತು ಯೆಹೋವನ ಎಲ್ಲಾ ಸಮರ್ಪಿತ ಆರಾಧಕರು ಪಯನೀಯರ ಸೇವೆ ಮಾಡುವವರಿಗೆ ಪ್ರೀತಿಯ ಬೆಂಬಲವನ್ನು ಕೊಡುವ ಮೂಲಕ ಪಯನೀಯರಾತ್ಮವನ್ನು ಬೆಳೆಸ ಸಾಧ್ಯವಿದೆ.—ಮತ್ತಾಯ 24:14; 28:19.
3. ಹೆಚ್ಚಿನ ಕ್ರೈಸ್ತರೆನಿಸಿಕೊಳ್ಳುವವರ ಮತ್ತು ಯೆಹೋವನ ಸಾಕ್ಷಿಗಳ ನಡುವೆ ಯಾವ ಪ್ರತಿವ್ಯತ್ಯಾಸವನ್ನು ಗಮನಿಸ ಸಾಧ್ಯವಿದೆ?
3 ಧರ್ಮವು ತಮ್ಮ ಜೀವಿತಗಳ ಕೇವಲ ಒಂದು ಅನುಬಂಧ ಸೌಕರ್ಯವೆಂದು ಪರಿಗಣಿಸುವ ಕ್ರೈಸ್ತರೆನಿಸಿಕೊಳ್ಳುವ ಹೆಚ್ಚಿನವರಿಗೆ ಪ್ರತಿವ್ಯತ್ಯಾಸದಲ್ಲಿ, ಯೆಹೋವನ ಸಾಕ್ಷಿಗಳಾದರೋ ದೇವರ ಕಡೆಗೆ ನಿಕಟವಾದ ಪ್ರೀತಿಯನ್ನು ಪ್ರದರ್ಶಿಸುತ್ತಾರೆ, ಇದು “ದೇವರ ರಾಜ್ಯ ಮತ್ತು ಆತನ ನೀತಿಯನ್ನು” ಹುಡುಕುತ್ತಾ ಇರುವಂತೆ ಅವರನ್ನು ಪ್ರೇರೇಪಿಸುತ್ತದೆ. ಇದು ತ್ಯಾಗಕ್ಕಾಗಿ ಕೇಳಿಕೊಂಡಿದೆ, ಆದರೆ ಆ ತ್ಯಾಗವು ಅದೆಷ್ಟು ಅರ್ಹವಾಗಿದೆ! (ಮತ್ತಾಯ 6:33; 16:24) ಅದು ಪ್ರಥಮವಾಗಿ ಮೋಶೆಯಿಂದ ಮತ್ತು ಅನಂತರ ಯೇಸು ಕ್ರಿಸ್ತನಿಂದ ಪುರುಚ್ಚರಿಸಲ್ಪಟ್ಟ ಮೊದಲನೆ ದೊಡ್ಡ ಆಜೆಗ್ಞೆ ಹೊಂದಿಕೆಯಲ್ಲಿದೆ: “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು. ನಿನ್ನ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣ ಶಕಿಯ್ತಿಂದಲೂ ಪ್ರೀತಿಸಬೇಕು.”—ಮಾರ್ಕ 12:29, 30, NW; ಧರ್ಮೋಪದೇಶಕಾಂಡ 6:4, 5.
4, 5. ಯಾರನ್ನು ನಂಬಿಗಸ್ತರೆಂದು ಹೇಳ ಸಾಧ್ಯವಿದೆ ಮತ್ತು ನಂಬಿಗಸ್ತಿಕೆಯು ಹೇಗೆ ತೋರಿಸಲ್ಪಡಬಹುದು?
4 ವಾಚ್ ಟವರ್ ಸೊಸೈಟಿಯ 98 ವರ್ಷ-ವಯಸ್ಸಿನ ಪ್ರೆಸಿಡೆಂಟರೂ 70 ವರ್ಷಗಳಿಂದ ಪೂರ್ಣ ಸಮಯದ ಸೇವೆಯನ್ನು ಮಾಡುತ್ತಿರುವವರೂ ಆದ ಸಹೋದರ ಎಫ್. ಡಬ್ಲ್ಯೂ. ಫ್ರಾಂಝ್ರೊಂದಿಗೆ ಮಾತಾಡುತ್ತಾ ಮುಖ್ಯ ಕಾರ್ಯಾಲಯದ ಸಿಬ್ಬಂಧಿಗಳಲ್ಲಿ ಒಬ್ಬನು, “ಸಹೋದರ ಪ್ರಾಂಝ್, ನಂಬಿಗಸ್ತಿಕೆಯಲ್ಲಿ ನೀವೊಂದು ಅತ್ಯುತ್ತಮ ಮಾದರಿಯಾಗಿದ್ದೀರಿ,” ಎಂದನು. ಅದಕ್ಕೆ ಸಹೋದರ ಫ್ರಾಂಝ್ ಉತ್ತರಿಸಿದ್ದು: “ಹೌದು! ನಾವು ನಂಬಿಗಸ್ತರಾಗಿರಲೇ ಬೇಕು.” ವಿಷಯದ ಸಾರವೇ ಅದು. ರಾಜ್ಯ ಚಟುವಟಿಕೆಯ ಯಾವ ಮುಖದಲ್ಲೇ ನಾವು ಸೇವೆ ಮಾಡಲಿ, ನಾವು ನಂಬಿಗಸ್ತರಾಗಿರ ಸಾಧ್ಯವಿದೆ—1 ಕೊರಿಂಥ 4:2; ಗಲಾತ್ಯ 3:9.
5 ಹೌದು ಅನೇಕರು ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡ ಬಯಸುತ್ತಾರೆ, ಆದರೆ ಶಾಸ್ತ್ರೀಯ ಜವಾಬ್ದಾರಿಕೆಗಳು ಅಥವಾ ಆರೋಗ್ಯ ಸಮಸ್ಯೆಗಳು ಅವರನ್ನು ತುಸು ಸೀಮಿತಗೊಳಿಸಬಹುದು. ಆದರೂ, ಯಾರು ಪಯನೀಯರಾಗ ಶಕ್ತರಲ್ಲವೋ ಅವರು ನಂಬಿಗಸ್ತಿಕೆಯಲ್ಲಿ ಕಡಿಮೆಯವರು ಎಂದೆಣಿಸಬಾರದು. ಕೆಲವರು ಅತ್ಯಂತ ಕಷ್ಟದ ಪರಿಸ್ಥಿತಿಗಳ ಕೆಳಗೆ ನಿಷ್ಠೆಯಿಂದ ಉಳಿದಿದ್ದಾರೆ, ಅದೂ ಅನೇಕ ವರ್ಷಗಳಿಂದ ಅದನ್ನು ತಾಳಿಕೊಂಡು. ಹೌದು, ಅವರು ನಂಬಿಗಸ್ತರಾಗಿದ್ದಾರೆ! ಯೆಹೋವನೆಡೆಗೆ ಪ್ರೀತಿಯನ್ನು ತೋರಿಸಿದ್ದಾರೆ ಮತ್ತು ಆತನ ದೇವ ಪ್ರಭುತ್ವ ಏರ್ಪಾಡಿಗೆ ಹೃದಯಪೂರ್ವಕ ಬೆಂಬಲದಲ್ಲಿ ಶ್ರದ್ಧೆಯಿಂದ ಸೇವೆ ನಡಿಸಿದ್ದಾರೆ. ಅವರು ಪಯನೀಯರ ಸೇವೆಯಲ್ಲಿ ತೀವ್ರಾಸಕ್ತಿಯನ್ನು ತೋರಿಸಿದ್ದಾರೆ. ಪಯನೀಯರಾಗುವ ಸಂಭಾವ್ಯತೆಗಳಿರುವವರಿಗೆ, ಹೆಚ್ಚಾಗಿ ತಮ್ಮ ಸ್ವಂತ ಮಕ್ಕಳಿಗೆ, ಜೀವಿತದ ಬೇರೆಲ್ಲಾ ಕೆಲಸಗಳಿಗಿಂತ ಮಿಗಿಲಾದ ಪಯನೀಯರ ಸೇವೆಯ ಕಡೆಗೆ ಕಾರ್ಯನಡಿಸುವಂತೆ ಉತ್ತೇಜನವನ್ನು ಕೊಟ್ಟಿರುತ್ತಾರೆ.—ಧರ್ಮೋಪದೇಶಕಾಂಡ 30:19, 20 ಹೋಲಿಸಿ.
6, 7. 1 ಸಮುವೇಲ 30:16-25 ರಲ್ಲಿ ಕೊಡಲ್ಪಟ್ಟ ಪೂರ್ವನಿದರ್ಶನವು ಇಂದು ಹೇಗೆ ಅನ್ವಯಿಸುತ್ತದೆ?
6 ಇಂದು ಎಲ್ಲಾ ದೇವಜನರಲ್ಲಿರುವ ಪ್ರೀತಿಯುಳ್ಳ ಕ್ರಿಯಾಶೀಲ ಐಕ್ಯತೆಯನ್ನು 1 ಸಮುವೇಲ 30:16-25 ರ ದಾಖಲೆಯಿಂದ ದೃಷ್ಟಾಂತಿಸಬಹುದು. ಅಮಾಲೇಕ್ಯರ ವಿರುದ್ಧವಾದ ಹೋರಾಟದಲ್ಲಿ, “ದಾವೀದನು ಮರುದಿನ ಹೊತ್ತಾರೆಯಿಂದ ಸೂರ್ಯಾಸ್ತಮಾನದ ವರೆಗೂ ಸಂಹರಿಸುತ್ತಾ” ಬಹಳ ಕೊಳ್ಳೆಯನ್ನು ಒಯ್ದನು. ಪಾಳೆಯಕ್ಕೆ ಹಿಂದಿರುಗಿದಾಗ, ದಾವೀದನ ಸೈನಿಕರಲ್ಲಿ ಕೆಲವರು ಯುದ್ಧದುರಿಯಲ್ಲಿ ತಮ್ಮೊಂದಿಗೆ ಬಾರದವರಿಗೆ ಕೊಳ್ಳೆಯಲ್ಲಿ ಪಾಲುಸಿಗಬಾರದು ಎಂದರು. ಆದರೆ ದಾವೀದನು ಉತ್ತರಿಸಿದ್ದು: “ಈ ವಿಷಯದಲ್ಲಿ ನಿಮ್ಮ ಮಾತನ್ನು ಯಾರು ಕೇಳುವರು? ಯುದ್ಧಮಾಡುವವನಿಗೆ ಸಿಕ್ಕುವಷ್ಟು ಪಾಲು ಸಾಮಾನು ಕಾಯ್ದವನಿಗೂ ಸಿಕ್ಕಬೇಕು. ಉಭಯರಿಗೂ ಸಮಭಾಗವಾಗಬೇಕು ಎಂದು ಉತ್ತರಕೊಟ್ಟನು.”
7 ಅದೇ ತತ್ವವು ಇಂದೂ ಅನ್ವಯಿಸುತ್ತದೆ. ನಮ್ಮ ಆತ್ಮಿಕ ಯುದ್ಧದಲ್ಲಿ ಪಯನೀಯರರು ಮುಂಭಾಗದಲ್ಲಿ ಹಾಕಲ್ಪಟ್ಟಿದ್ದಾರೆ. ಆದರೆ ಸಭೆಯಲ್ಲಿ ಇರುವ ಬೇರೆಯವರೆಲ್ಲರೂ ಹೃದಯಪೂರ್ವಕವಾದ, ನಿಷ್ಠೆಯ ಬೆಂಬಲವನ್ನು ನೀಡುತ್ತಾರೆ. ಮತ್ತು 1991 ರಲ್ಲಿ ಅವರ ಒಟ್ಟುಗೂಡಿದ ಚಟುವಟಿಕೆಯ ಒಟ್ಟು ಫಲಿತಾಂಶವು ಸೇವಾ ವರ್ಷದ ವರದಿಯಲ್ಲಿ ತೋರಿಸಲ್ಪಟ್ಟಿದೆ.a
ಒಂದು ಎದ್ದುಕಾಣುವ ವರದಿ
8. (ಎ) ಜುಮ್ಲಾ ಪ್ರಚಾರಕರು ಮತ್ತು ಯೆಹೋವನ ಸೇವೆಯಲ್ಲಿ ಅವರು ಕಳೆದ ತಾಸುಗಳ ಸಂಬಂಧವಾದ ಜಗದ್ವ್ಯಾಪಕ ವರದಿಯು ಏನನ್ನು ತಿಳಿಯಪಡಿಸುತ್ತದೆ? (ಬಿ) ವರದಿಯಲ್ಲಿ ಹೊಸತಾಗಿ ತೋರಿಬರುವ ದೇಶಗಳಲ್ಲಿ ಯಾವ ಆಸಕ್ತಿಯ ವಿಷಯಗಳನ್ನು ನೀವು ಗಮನಿಸುತ್ತೀರಿ?
8 ಹೌದು, ಯೆಹೋವನ ಹುರುಪಿನ ಆರಾಧಕರೆಲ್ಲರ ಒಕ್ಕಟ್ಟಿನ ಪ್ರಯತ್ನಗಳು 1991 ರ ಜಗದ್ವ್ಯಾಪಕ ವಿಸ್ತಾರ್ಯದ ರೋಮಾಂಚಕರ ವರದಿಗೆ ನೆರವಾಗಿರುತ್ತದೆ. 42,78,820 ಪ್ರಚಾರಕರ ಒಂದು ಅತ್ಯುತ್ತಮ ಹೊಸ ಉಚ್ಛಾಂಕವು—6.5 ಪ್ರತಿಶತ ವೃದ್ಧಿಯು ದಾಖಲೆಯಾಗಿದೆ. ಇವರು 95,18,70,021 (ಸುಮಾರು 100 ಕೋಟಿಗಳಷ್ಟು) ತಾಸುಗಳನ್ನು ಸೇವೆಯಲ್ಲಿ ಹಾಕಿರುತ್ತಾರೆ. ಹಿಂದೆ ನಿರ್ಬಂಧಗಳಿದ್ದ ಆದರೆ ಈಗ ಜಗದ್ವ್ಯಾಪಕ ವರದಿಯಲ್ಲಿ ಹೊಸದಾಗಿ ತೋರಿಬರುವ ದೇಶಗಳಾದ—ಬಲ್ಗೇರಿಯ, ಕ್ಯಾಮರೂನ್, ಚೆಕಸ್ಲೊವೇಕಿಯ, ಇಥಿಯೋಪ್ಯ, ಮುಝಾಂಬಿಕ್, ನಿಕಾರಗ್ವ, ರವಾಂಡಾ ಮತ್ತು ರಶ್ಯಾಗಳ ನಮ್ಮ ಸಹೋದರರಿಂದ ಹಾಕಲ್ಪಟ್ಟಿರುವ ಅತ್ಯುತ್ತಮ ಪ್ರಯತ್ನಗಳನ್ನು ಗಮನಿಸಿರಿ.
9, 10. (ಎ) ಕಷ್ಟದ ಸಮಯದ ಪಂಥಾಹ್ವಾನಕ್ಕೆ ಪಯನೀಯರರು ಹೇಗೆ ಪ್ರತಿಕ್ರಿಯೆ ತೋರಿಸಿದ್ದಾರೆ? (ಬಿ) ಪಯನೀಯರ ಸೇವೆಗಿಳಿಯಲು ಯಾವ ಉತ್ತೇಜನವು ಒದಗಿಸಲ್ಪಟ್ಟಿದೆ?
9 ಇತ್ತೀಚಿನ ವರ್ಷಗಳಲ್ಲಿ ಪಯನೀಯರ ಹುರುಪು ಲೋಕದಲ್ಲಿಲ್ಲಾ ಹಬ್ಬಿರುತ್ತದೆ. ಇತ್ತೀಚೆಗೆ ಮಾತ್ರವೇ ಆರಾಧನಾ ಸ್ವಾತಂತ್ರ್ಯವು ನೀಡಲ್ಪಟ್ಟ ದೇಶಗಳಲ್ಲಿ ಸಹಾ ಪಯನೀಯರ ದರ್ಜೆಗಳು ಉಕ್ಕೇರುತ್ತಾ ಇವೆ. ಕಠಿಣವಾದ ಆರ್ಥಿಕ ಪರಿಸ್ಥಿತಿಗಳು ಈ ಧೀರ ಸಾಕ್ಷಿಗಳನ್ನು ತಮ್ಮಲ್ಲಿರುವ ಎಲ್ಲವನ್ನು ಯೆಹೋವನ ಆರಾಧನೆಗಾಗಿ ಮೀಸಲಾಗಿಡುವುದರಿಂದ ತಡೆಯಲಾರವು. (2 ಕೊರಿಂಥ 11:23, 27 ಹೋಲಿಸಿ.) ತಿಂಗಳಿಗೆ ಸರಾಸರಿ ಎಲ್ಲಾ ರಾಜ್ಯ ಪ್ರಚಾರಕರ 14 ಪ್ರತಿಶತ ಜನರು ಪಯನೀಯರ ಸೇವೆ ಮಾಡುತ್ತಿದ್ದಾರೆ. ಪಯನೀಯರರ ಅತ್ಯುನ್ನತ ಸಂಖ್ಯೆಯು 7,80,202—ಎಲ್ಲಾ ಪ್ರಚಾರಕರ 18 ಪ್ರತಿಶತ ಆಗಿರುವುದು ನಿಜವಾಗಿಯೂ ಅತ್ಯುತ್ತಮವು.
10 ಪಯನೀಯರರಿಂದ ಅನುಭವಿಸಲ್ಪಡುವ ಸಂತೋಷವನ್ನು ಅವಲೋಕಿಸುವಲ್ಲಿ, ಇತರರು ಕೂಡಾ ಆ ಸೇವೆಯನ್ನು ತಕ್ಕೊಳ್ಳುವಂತೆ ಉತ್ತೇಜನವನ್ನು ಹೊಂದಿದ್ದಾರೆ. ನೀವಿನ್ನೂ ಪಯನೀಯರರಾಗದೆ ಇದ್ದಲ್ಲಿ, ಯೆಹೋವನಿಗಾಗಿ ನಿಮ್ಮ ಪ್ರೀತಿಯು ನಿಮ್ಮನ್ನು, ಯೆಶಾಯ 6:8 ರಲ್ಲಿ ನಾವು ಓದುವಂತೆ, “ಇಗೋ, ಇಲ್ಲಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಲು ಹುರಿದುಂಬಿಸುತ್ತದೋ? ಅಥವಾ ನಿಮ್ಮ ಶ್ರದ್ಧೆಯುಳ್ಳ ಬೈಬಲ್ ಅಧ್ಯಯನದಿಂದಾಗಿ, ಪಯನೀಯರ ಸೇವೆಯನ್ನು ಪ್ರವೇಶಿಸುವ ಮುಂದಿನ ಹೆಜ್ಜೆಯನ್ನು ನೀವು ತಕ್ಕೊಳ್ಳಲೇ ಬೇಕಾದ ಆ ಉರಿಯುವ ಅಪೇಕ್ಷೆಯನ್ನು ನಿಮ್ಮ ಹೃದಯದಲ್ಲಿ ಹೊತ್ತಿಸಬಹುದೇ? ಸಂಕಷ್ಟದ ಸಮಯದಲ್ಲೂ, ಯೆಹೋವನ ವಾಕ್ಯವು ಯೆರೆಮೀಯನನ್ನು ಹುರಿದುಂಬಿಸಿತ್ತು, ಆದದರಿಂದ ಅವನು ತಡೆಯಲಾರದೆ ಇದ್ದನು.—ಯೆರೆಮೀಯ 20:9.
ಮಾನವ ಕುಲಕ್ಕೆ ಪ್ರೀತಿಯುಳ್ಳ ಸೇವೆ
11. ಮನೆ ಬೈಬಲಧ್ಯಯನವು ಹೇಗೆ ಸಮೃದ್ಧಿಯನ್ನು ಪಡೆಯಿತು?
11 ವಾರ್ಷಿಕ ವರದಿಯ ಒಂದು ಎದ್ದುಕಾಣುವ ವೈಶಿಷ್ಟ್ಯವು ಜಗದ್ವ್ಯಾಪಕವಾಗಿ ಪ್ರತಿತಿಂಗಳು ಕ್ರಮವಾಗಿ ನಡಿಸಲ್ಪಡುವ 39,47,241 ಉಚಿತ ಮನೆ ಬೈಬಲಭ್ಯಾಸಗಳ ಸಂಖ್ಯೆಯೇ. ಯೆಹೋವನ ಸಾಕ್ಷಿಗಳು ತಮ್ಮ ಮನೆ ಮನೆಯ ಸೇವೆಯಲ್ಲಿ ಕಂಡು ಹಿಡಿಯುವ ಆಸಕ್ತಿಯನ್ನು ಮುಂದುವರಿಸಲು ಮಾಡಲ್ಪಡುವ ಪ್ರೀತಿಯುಳ್ಳ ಏರ್ಪಾಡು ಇದಾಗಿದೆ. ಅಪೊಸ್ತಲ ಪೌಲನು ತೋರಿಸಿದಂಥ ಅದೇ ಶ್ರದ್ಧೆಯಿಂದ ಕೆಲಸಮಾಡುತ್ತಾ, ಎಲ್ಲಾ ಜನಾಂಗಗಳ ಮತ್ತು ಜಾತೀಯ ಹಿನ್ನೆಲೆಗಳ ಜನರೊಂದಿಗೆ ಬೈಬಲಭ್ಯಾಸ ನಡಿಸಲು ನಾವು ಸಂತೋಷ ಪಡುತ್ತೇವೆ. ‘ಯೆಹೂದ್ಯರಿಗೂ ಗ್ರೀಕರಿಗೂ ಆತನ ಪೂರ್ಣ ರೀತಿಯ ಸಾಕ್ಷಿ ನೀಡುವಿಕೆಯು’ ಸತ್ಯದ ಕುರಿತು ಅನೇಕ ತಾಸುಗಳ ಕಲಿಸುವಿಕೆಯನ್ನು ಅವಶ್ಯಪಡಿಸಿತ್ತೆಂಬದಕ್ಕೆ ಸಂಶಯವಿಲ್ಲ. (ಅಪೊಸ್ತಲರ ಕೃತ್ಯಗಳು 20:20, 21) ಅದೇ ರೀತಿ ಇಂದೂ ಇದೆ. ಯೆಹೋವನ ಸಾಕ್ಷಿಗಳು “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರುವಂತೆ” ಸಹಾಯವನ್ನು ನೀಡುತ್ತಿದ್ದಾರೆ.—1 ತಿಮೊಥಿ 2:4.
12-14. ಯಾವ ಸಂತೋಷಕರ ವರದಿಗಳು ಯೂರೋಪಿನಿಂದ ಕೇಳಿಬರುತ್ತಾ ಇವೆ?
12 ಪೂರ್ವ ಯೂರೋಪಿನಲ್ಲಿ ಬೈಬಲ್ ಅಭ್ಯಾಸ ಚಟುವಟಿಕೆಯ ವೃದ್ಧಿಯ ವರದಿಯು ಅದೆಷ್ಟು ರೋಮಾಂಚಕರ! ದಶಮಾನಗಳಿಂದ ಅಲ್ಲಿನ ನಮ್ಮ ಸಹೋದರರು ಚಿಕ್ಕ ಚಿಕ್ಕ ಗುಂಪುಗಳಾಗಿ, ಪ್ರಾಯಶಃ ಕೇವಲ ಒಂದು ಹರಕು-ಮುರುಕು, ಅಚ್ಚೊತ್ತಿ ನಕಲು ಮಾಡಿದ ಹಳೇ ವಾಚ್ಟವರ್ ಪ್ರತಿಯೊಂದನ್ನು ಇಡೀ ಗುಂಪಿಗಾಗಿ ಉಪಯೋಗಿಸುತ್ತಾ ಕೂಡಿ ಬರಬೇಕಾಗಿತ್ತು. ಆದರೆ ಈಗ ಬೈಬಲ್ ಮತ್ತು ಬೈಬಲ್ ಸಾಹಿತ್ಯದ ವಿಪುಲವಾದ ಸಂಗ್ರಹವು ಈ ದೇಶಗಳನ್ನು ತುಂಬುತ್ತಿದೆ. ಅದು ಒಬ್ಬನಿಗೆ ಸೊಲೊಮೋನನ ಪರಮಗೀತ 2:4 ರ ಕಿಂಗ್ ಜೇಮ್ಸ್ ತರ್ಜುಮೆಯ ಮರುಜ್ಞಾಪಕವನ್ನು ಕೊಡುತ್ತದೆ: “ಅವನು [ಕ್ರಿಸ್ತ ಯೇಸು] ನನ್ನನ್ನು [ಅಧ್ಯಾತ್ಮಿಕ] ಔತಣಶಾಲೆಗೆ ಬರಮಾಡಿದನು, ನನ್ನ ಮೇಲೆ ಅವನು ಎತ್ತಿದ ಧ್ವಜವು ಪ್ರೀತಿಯೇ.” ಪತ್ರಿಕೆಗಳ ವೈಯಕ್ತಿಕ ಪ್ರತಿಗಳು ಈಗ ಅವರಿಗಿರಲಾಗಿ, “ದೇವರ ವಾಕ್ಯವನ್ನು ಸರಿಯಾಗಿ ಉಪದೇಶಿಸಲು” ಅನೇಕರು ಸನ್ನದ್ಧರಾಗುತ್ತಾ ಇದ್ದಾರೆ.—2 ತಿಮೊಥಿ 2:15.
13 ರಶ್ಯಾದ ಸೈಂಟ್ ಪೀಟರ್ಸ್ಬರ್ಗ್ನಲ್ಲಿ 103 ಪ್ರಚಾರಕರ ಒಂದು ಸಭೆಯು ಇತ್ತಿಚೆಗೆ 300 ಕ್ಕಿಂತಲೂ ಹೆಚ್ಚು ಮನೆ ಬೈಬಲಭ್ಯಾಸಗಳನ್ನು ವರದಿ ಮಾಡಿತು. ಈ ಬೈಬಲಭ್ಯಾಸದ ಫಲಿತಾಂಶವಾಗಿ, ಕೇವಲ ಎಂಟು ತಿಂಗಳಲ್ಲಿ 53 ಹೊಸ ಸಾಕ್ಷಿಗಳು ದೀಕ್ಷಾಸ್ನಾನವನ್ನು ಪಡೆದರು. ಸಭೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಸತ್ಯದಲ್ಲಿ ಕೇವಲ ಎಂಟು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಸಮಯದಿಂದ ಇದ್ದವರಾಗಿದ್ದರು! ಮತ್ತು ಅವರಿಗೆ ಹಿರಿಯರು ಇಲ್ಲ—ಕೇವಲ ಒಬ್ಬನೇ ಶುಶ್ರೂಷೆ ಸೇವಕನು ಅವರ ಆತ್ಮಿಕ ಪ್ರಗತಿಯ ಪರಾಮರಿಕೆ ಮಾಡುತ್ತಾನೆ..
14 ಇಸ್ಟೋನಿಯದ ಒಬ್ಬಳು ಪ್ರಚಾರಕಳೊಂದಿಗೆ ಒಬ್ಬ ಬೈಬಲ್ ವಿದ್ಯಾರ್ಥಿನಿಯು ತಾನು ತನ್ನ ಮಿತ್ರರನ್ನು ಆಮಂತ್ರಿಸಬಹುದೋ ಎಂದು ಕೇಳಿದಳು. ಮರುವಾರದಲ್ಲಿ ಸಾಕ್ಷಿಯು ಮನೆಗೆ ಬಂದಾಗ, 50 ಕ್ಕಿಂತಲೂ ಹೆಚ್ಚು ಮಂದಿ ಅಲ್ಲಿ ಕೂಡಿಬಂದಿದ್ದನ್ನು ಕಂಡಳು! ಆ ಎಲ್ಲಾ ಆಸಕ್ತಿಗಳನ್ನು ನೋಡಿಕೊಳ್ಳಲು ಬೇಕಾದ ವಿಶೇಷ ಏರ್ಪಾಡುಗಳನ್ನು ಮಾಡಲಾಯಿತು, ನಿಶ್ಚಯ!
15. ಸ್ಮಾರಕ ಹಾಜರಿ ಮತ್ತು ದೀಕ್ಷಾಸ್ನಾನಗಳ ಕುರಿತು ಏನು ಹೇಳಬಹುದು?
15 ಅಧ್ಯಯನವನ್ನು ಮಾಡುತ್ತಿರುವ ಅನೇಕರಿಗೆ ಕ್ರಿಸ್ತನ ಮರಣದ ಸ್ಮಾರಕಕ್ಕೆ ಹಾಜರಾದ ಮೂಲಕ ಕ್ರೈಸ್ತ ಸಹವಾಸದ ಪ್ರಥಮವಾದ ಸವಿಯು ದೊರಕುತ್ತದೆ. ಈ ಸಂತೋಷದ ಸಮಾರಂಭಕ್ಕೆ ಜಗದ್ವ್ಯಾಪಕವಾಗಿ 66,207 ಸಭೆಗಳಲ್ಲಿ ಹಾಜರಿಯು ಪ್ರಥಮವಾಗಿ 1,00,00,000 ಬಿಂದುವನ್ನು ದಾಟಿ 1,06,50,158 ಸಂಖ್ಯೆಗೇರಿತ್ತು. ಲ್ಯಾಟಿನ್ ಅಮೆರಿಕನ್, ಆಫ್ರಿಕನ್ ಮತ್ತು ಪೂರ್ವ ಯೂರೋಪಿನ ಹಲವಾರು ದೇಶಗಳಲ್ಲಿ ಹಾಜರಿಗಳು ರಾಜ್ಯ ಪ್ರಚಾರಕರ ಸಂಖ್ಯೆಗಿಂತ ಮೂರು ಅಥವಾ ನಾಲ್ಕು ಪಾಲಷ್ಟು ಹೆಚ್ಚಾಗಿದ್ದವು. ನಾವೀಗ ಈ ವರ್ಷದ ಎಪ್ರಿಲ್ 17 ಕ್ಕೆ ನಡಿಯಲಿರುವ ಸ್ಮಾರಕಾಚರಣೆಗೆ ತಯಾರಿಯನ್ನು ಪ್ರಾರಂಭಿಸಬೇಕು. ಸ್ಮಾರಕವನ್ನು ಹಾಜರಾಗುವ ಹೊಸ ಬೈಬಲ್ ವಿದ್ಯಾರ್ಥಿಗಳ ದೊಡ್ಡ ಸಂಖ್ಯೆಯು ದೀಕ್ಷಾಸ್ನಾನದ ಕಡೆಗೆ ಪ್ರಗತಿಯನ್ನು ಮಾಡುತ್ತಾ ಮುಂದರಿಯುವರೆಂದು ನಿರೀಕ್ಷಿಸಲಾಗಿದೆ. ದೀಕ್ಷಾಸ್ನಾನದ ವಿಷಯದಲ್ಲಾದರೋ, 1991 ರಲ್ಲಿ, 3,00,000 ಕ್ಕಿಂತ ಹೆಚ್ಚು ಜನರು ನೀರಿನ ದೀಕ್ಷಾಸ್ನಾನದಿಂದ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸೂಚಿಸಿದ್ದನ್ನು ನಾವು ಪುನಃ ಕಂಡೆವು.
ದೈವಿಕ ಸ್ವಾತಂತ್ರ್ಯ ಪ್ರಿಯರು
16. “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಗಳಿಂದ ಯಾವ ರೋಮಾಂಚಕರ ವರದಿಗಳು ಬರುತ್ತಾ ಇವೆ?
16 1991 ರ ಸೇವಾ ವರ್ಷದ ಒಂದು ಗಮನಾರ್ಹ ವೈಶಿಷ್ಟ್ಯವು “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನ ಮಾಲೆಯಾಗಿತ್ತು; ಇದೀಗ ಉತ್ತರ ಗೋಲಾರ್ಧದಲ್ಲಿ ಮುಗಿಯು ಬಂದಿದ್ದು, ಈಗ ದಕ್ಷಿಣ ಗೋಲಾರ್ಧದಲ್ಲಿ 1992 ರೊಳಗೂ ಮುಂದುವರಿಯಲಿದೆ. ಎಲ್ಲಿ ನಮ್ಮ ಸಹೋದರರು ತಮ್ಮ ಹೊಸದಾಗಿ ಕಂಡುಕೊಂಡ ಸ್ವಾತಂತ್ರ್ಯಗಳನ್ನು ಯೆಹೋವನ ಸ್ತುತಿಗಾಗಿ ಉಪಯೋಗಿಸುವದರಲ್ಲಿ ಉಲ್ಲಾಸಿಸುತ್ತಾರೋ ಆ ಹಲವಾರು ಪೂರ್ವ ಯೂರೋಪಿಯನ್ ದೇಶಗಳಲ್ಲಿ ಸಮ್ಮೇಲನ ಕಾರ್ಯಕ್ರಮವು ಪೂರ್ಣವಾಗಿ ನೀಡಲ್ಪಟ್ಟದ್ದು ಇದು ಪ್ರಥಮಭಾರಿ. 54 ದೇಶಗಳಲ್ಲಿ ನಡೆದ ಮೊದಲ 705 ಅಧಿವೇಶನಗಳಲ್ಲಿ ಒಕ್ಟೋಬರ 1991 ರಲ್ಲಿ ವರದಿಯಾದ ಒಟ್ಟು ಹಾಜರಿಯು 47,74,937 ಆಗಿತ್ತು.
17, 18. (ಎ) ಯಾವ ಬಿಡುಗಡೆಗಳನ್ನು ಯೆಹೋವನ ಸಾಕ್ಷಿಗಳು ಆನಂದಿಸುತ್ತಾರೆ ಮತ್ತು ಮುನ್ನೋಡುತ್ತಾರೆ? (ಬಿ) ದೈವಿಕ ಸ್ವಾತಂತ್ರ್ಯವು ಲೌಕಿಕ ಸ್ವಾತಂತ್ರ್ಯಗಳಿಗಿಂತ ಹೇಗೆ ಬೇರೆಯಾಗಿದೆ?
17 ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು.” (ಯೋಹಾನ 8:32) ಇಂದು ಬೈಬಲ್ ಸತ್ಯತೆಗಳು ಲಕ್ಷಾಂತರ ಜನರನ್ನು ಕ್ರೈಸ್ತ ಪ್ರಪಂಚದ ಮತತತ್ವಗಳಿಂದ ಬಿಡುಗಡೆ ಮಾಡಿವೆ. ಯೆಹೋವನು ಒದಗಿಸಿರುವ ಯೇಸುವಿನ ವಿಮೋಚನಾ ಯಜ್ಞವು ಮಾನವ ಕುಲವನ್ನು, “ಭ್ರಷ್ಟತೆಯ ದಾಸ್ಯದಿಂದ ಬಿಡುಗಡೆ ಹೊಂದಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದಲು” ಶಕ್ತರಾಗಿ ಮಾಡುವುದೆಂದು ಲಕ್ಷಾಂತರ ಜನರು ಕಲಿತಿರುತ್ತಾರೆ. (ರೋಮಾಪುರ 8:19-22) ಯೆಹೋವನು ಪ್ರೀತಿಯಿಂದ ನಿರ್ಧರಿಸುವ ಯೋಗ್ಯ ಮೇರೆಗಳೊಳಗೆ ಒಂದು ಪರದೈಸ ಭೂಮಿಯಲ್ಲಿ ಸದಾ ಜೀವಿಸುವುದು ಅದೆಂಥಾ ಮಹಾ ಬಿಡುಗಡೆಯಾಗಿರುವುದು!—ಯೆಶಾಯ 25:6-8; ಅಪೊಸ್ತಲರ ಕೃತ್ಯಗಳು 17:24-26 ಹೋಲಿಸಿರಿ.
18 ಯೆಹೋವನ ಸಾಕ್ಷಿಗಳು ಈಗ ಆನಂದಿಸುವ ಮತ್ತು ದೇವರ ಹೊಸ ವ್ಯವಸ್ಥೆಯಲ್ಲಿ ಅಧಿಕ ವಿಪುಲವಾಗಿ ಆನಂದಿಸಲು ನಿರೀಕ್ಷಿಸುವ ಸ್ವಾತಂತ್ರ್ಯಗಳು ನಮ್ಮ ದೇವರಾದ ಯೆಹೋವನಿಂದ ಬಂದವುಗಳು. (2 ಕೊರಿಂಥ 3:17) ಅವು ಯಾವುದೇ ರಾಜಕೀಯ ಅಥವಾ ಕ್ರಾಂತಿಕಾರಿ ಚಟುವಟಿಕೆಯ ಮೇಲೆ ಆಧಾರಿತವಾಗಿಲ್ಲ. (ಯಾಕೋಬ 1:17) ಈ ವಿಷಯವಾದ ಯಾವುದೇ ತಪ್ಪು ತಿಳುವಳಿಕೆಯ ವಿರುದ್ಧವಾಗಿ ಕಾಯಲು, ಪೂರ್ವ ಯೂರೋಪಿನ ಹಲವು ದೇಶಗಳಲ್ಲಿ ಯೆಹೋವನ ಸಾಕ್ಷಿಗಳಿಂದ ಧರಿಸಲ್ಪಟ್ಟ 1991 ರ ಅಧಿವೇಶನ ಬ್ಯಾಜ್ಗಳಲ್ಲಿ ಕೇವಲ “ಸ್ವಾತಂತ್ರ್ಯ ಪ್ರಿಯರು” ಎಂಬದರ ಬದಲಾಗಿ “ದೈವಿಕ ಸ್ವಾತಂತ್ರ್ಯ ಪ್ರಿಯರು” ಎಂಬ ಮಾತುಗಳು ಬರೆಯಲ್ಪಟ್ಟವು.
ಯೆಹೋವನಲ್ಲಿ ಗಾಢ ಪ್ರೀತಿ
19. ಯೆಹೋವನೊಂದಿಗೆ ಪ್ರಾರ್ಥನಾಯುಕ್ತ ಆಪತ್ತೆಯು ನಮ್ಮನ್ನು ಹೇಗೆ ಬಲಗೊಳಿಸುತ್ತದೆ?
19 ಯೆಹೋವನಲ್ಲಿ ನಮಗಿರುವ ಪ್ರೀತಿ ಮತ್ತು ಆತನಲ್ಲಿ ನಮಗಿರುವ ಭರವಸವು ನಮ್ಮನ್ನು ಪ್ರಾರ್ಥನೆಯಲ್ಲಿ ಆತನಿಗೆ ಹತ್ತರವಾಗಿ ಉಳಿಯುವಂತೆ ಮಾಡುವದು. ಅನೇಕ ಕಷ್ಟಗಳನ್ನು ಮತ್ತು ಹಿಂಸೆಗಳನ್ನು ತಾಳಿಕೊಳ್ಳುವಂತೆ ನಮ್ಮ ಸಹೋದರರಿಗೆ ಸಹಾಯ ಮಾಡಿದ್ದು ಯೆಹೋವನೊಂದಿಗಿನ ಈ ಅತ್ಯಂತ ಆಪ್ತ ಸಂಬಂಧವೇ. (ಕೀರ್ತನೆ 25:14, 15) ಈ ತನ್ನ ಮಹತ್ತಾದ ಪರೀಕ್ಷೆಯ ಸಮಯದಲ್ಲಿ, ಪ್ರಾರ್ಥನೆಯ ಮೂಲಕ ಯೇಸು ತನ್ನ ತಂದೆಯೊಂದಿಗಿನ ಆಪ್ತ ಸಂಬಂಧವನ್ನು ಕಾಪಾಡಿಕೊಂಡನು. (ಲೂಕ 22:39-46) ಅಂಥ ಪ್ರಾರ್ಥನಾಯುಕ್ತ ಆಪ್ತ ಸಂಬಂಧವು ಸೆಫ್ತನನನ್ನು ಆತನ ಹುತಾತ್ಮತೆಯ ಯಾತನೆಯೊಳಗೆ ಬಲಪಡಿಸಿತ್ತು. ಕಲ್ಲೆಸೆಯಲ್ಪಟ್ಟು ಕೊಲ್ಲಲ್ಪಡಲಿದ್ದಾಗ ಆತನು ಆಕಾಶದ ಕಡೆಗೆ ದೃಷ್ಟಿಸಿ ಅಂದದ್ದು: “ಅಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು [ಯೇಸು] ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನೋಡುತ್ತೇನೆ.”—ಅಪೊಸ್ತಲರ ಕೃತ್ಯಗಳು 7:56.
20-22. ದೇವರು ಪ್ರಾರ್ಥನೆಗಳನ್ನು ಕೇಳುತ್ತಾನೆಂಬದನ್ನು ಒಂದು ಅನುಭವವು ಹೇಗೆ ದೃಷ್ಟಾಂತಿಸುತ್ತದೆ?
20 ಯೆಹೋವನ ಸೇವಕರು ಎಷ್ಟೊ ಬಾರಿ ಅನುಭವಿಸಿರುವ ಪ್ರಕಾರ, ಯೆಹೋವನು ತನ್ನ ಚಿತ್ತಕ್ಕೆ ಹೊಂದಿಕೆಯುಳ್ಳ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಕಾರ್ಯವು ನಿಷೇಧಿಸಲ್ಪಟ್ಟಿರುವ ಒಂದು ಆಫ್ರಿಕನ್ ದೇಶದಲ್ಲಿ, ಬಸ್ಸಿನ ಮೂಲಕ ಉತ್ತರ ದಿಕ್ಕಿಗೆ ಪಯಣ ಮಾಡುತ್ತಿದ್ದ ಒಬ್ಬ ವಿಶೇಷ ಪಯನೀಯರನಿಗೆ ರಾಜ್ಯ ಸಾಹಿತ್ಯ ಮತ್ತು ಪಾಕೀಟುಗಳ ಒಂದು ದೊಡ್ಡ ಗೋಣಿಯನ್ನು ಒಯ್ಯಲಿಕ್ಕಿತ್ತು. ಬಸ್ಸನ್ನು ತುಂಬಿಸುತ್ತಿದ್ದ ಪರಿಚಾರಕನು ಸಹೋದರನನ್ನು ಕೇಳಿದ್ದು: “ಆ ಗೋಣಿಯಲ್ಲಿ ಏನಿದೆ?” ತನ್ನ ಮನಸ್ಸಿಗೆ ಮೊದಲು ಏನು ಹೊಳೆಯಿತೋ ಅದನ್ನೇ ಸಹೋದರನು ನುಡಿದನು: “ಟಪ್ಪಾಲು.”
21 ದಾರಿಯಲ್ಲಿ ಬಸ್ಸು ವಾಡಿಕೆಯ ತಡೆಗಟ್ಟಲ್ಲಿ ನಿಲ್ಲದೆನೇ ಹಾದು ಹೋಯಿತು ಮತ್ತು ವಾಹನ ಪೊಲೀಸರು ಅದನ್ನು ಬೆನ್ನಟ್ಟಿ ನಿಲ್ಲಿಸಿದರು, ಕಳ್ಳಸಾಗಣೆಯ ಸಂಶಯದಿಂದ. ಪ್ರಯಾಣಿಕರೆಲ್ಲರನ್ನು ಬಸ್ಸಿನಿಂದ ಇಳಿಯಲು ಆಜ್ಞಾಪಿಸಿದರು, ಎಲ್ಲಾ ಸಾಮಾನುಗಳನ್ನು ತಲಾಷು ಮಾಡಲಾಗುವುದು ಎಂದರು. ಇದೊಂದು ವಿಷಮ ಸ್ಥಿತಿ! ಸಹೋದರನು ಗುಣುಗುಟ್ಟುತ್ತಿದ್ದ ಗುಂಪಿನಿಂದ ತುಸು ಆಚೆ ನಡೆದು, ಮೊಣಕಾಲಲ್ಲಿ ಕುಸಿದು, ಯೆಹೋವನಿಗೆ ಪ್ರಾರ್ಥಿಸಿದನು. ಗುಂಪಿನೆಡೆಗೆ ಮರಳಿದಾಗ, ಪ್ರತಿ ಪ್ರಯಾಣಿಕನ ಸಾಮಾನನ್ನು ತೆರೆದು ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತಿತ್ತು. ಸಹೋದರನ ಗೋಣಿಯನ್ನು ತೆರೆಯಲು ಸುರುಮಾಡಿದಾಗ, ಅವನು ಯೆಹೋವನ ಸಹಾಯಕ್ಕಾಗಿ ಮೌನವಾಗಿ ಬೇಡಿಕೊಂಡನು.
22 “ಯಾರ ಗೋಣಿ ಇದು, ಇದರಲೇನ್ಲಿದೆ?” ಒದರಿದನು ಪೊಲೀಸನು. ಸಹೋದರನು ಮಾತಾಡಲು ಬಾಯಿ ತೆರೆಯುವ ಮುಂಚೆ, ಬಸ್ ಪರಿಚಾರಕನು ಉತ್ತರಿಸುತ್ತಾ ಅಂದದ್ದು: “ಅದು ಟಪ್ಪಾಲು— ಒಂದು ಅಂಚೆ ಕಛೇರಿಯಿಂದ ಇನ್ನೊಂದು— ಅಂಚೆ ಕಛೇರಿಗೆ.” “ಸರಿ” ಎಂದನು ಆಫೀಸರನು. ಗೋಣಿಯನ್ನೆತ್ತಿ ಪರಿಚಾರಕನಿಗೆ ಕೊಟ್ಟನು. “ಪ್ರಯಾಣದಲ್ಲಿ ಅದು ಅತಿ ಸುರಕ್ಷಿತ ಸ್ಥಳದಲ್ಲಿರುವಂತೆ ನೋಡಿಕೋ,” ಎಂದಪ್ಪಣೆ ಕೊಟ್ಟನು. ಪ್ರಾರ್ಥನೆಯನ್ನು ಕೇಳುವಾತನಿಗೆ ಉಪಕಾರ ಹೇಳಲು ವಿಶೇಷ ಪಯನೀಯರನು ಪುನಃ ಮೊಣಕಾಲೂರಿದನು.—ಕೀರ್ತನೆ 65:2; ಜ್ಞಾನೋಕ್ತಿ 15:29.
23. ಯೆಹೋವನು ಏನನ್ನು ಪ್ರದರ್ಶಿಸಿರುತ್ತಾನೆ, ಆದರೂ ಕೆಲವು ಸಲ ಹಿಂಸೆಯು ಪೂರಾ ಅವಧಿಯನ್ನು ಮುಗಿಸುವಂತೆ ಆತನು ಬಿಡುವದೇಕೆ?
23 ಆದರೂ ಯೆಹೋವನ ಆರಾಧಕರು ಸಂಕಟ ಸಂಭವಿಸುವುದರಿಂದ ಪೂರ್ಣ ಮುಕ್ತರು ಎಂದಿದರ ಅರ್ಥವಲ್ಲ. ಕೆಲವು ಸಂದರ್ಭಗಳಲ್ಲಿ, ಬೈಬಲ್ ಕಾಲದಲ್ಲಿ ಮತ್ತು ಇಂದು ಎರಡರಲ್ಲೂ, ತನ್ನ ಜನರನ್ನು ಆತನು ರಕ್ಷಿಸ ಶಕ್ತನು ಎಂಬದನ್ನು ಯೆಹೋವನು ಪ್ರದರ್ಶಿಸಿದ್ದಾನೆ. ಆದರೆ ಸಮಗ್ರತೆಯ ಪ್ರಶ್ನೆಯನ್ನು ಬಗೆಹರಿಸುವದಕ್ಕೆ ಹೊಂದಿಕೆಯಲ್ಲಿ, ಕೆಲವು ಸಲ ಹಿಂಸೆಯು ತನ್ನ ಪೂರ್ಣ ಅವಧಿಯನ್ನು ಮುಗಿಸುವ ತನಕ ಆತನು ಬಿಡುತ್ತಾನೆಂದು ತೋರುತ್ತದೆ. (ಮತ್ತಾಯ 26:39 ಹೋಲಿಸಿ.) ಅದಲ್ಲದೆ, ಯೆಹೋವನು ತನ್ನ ಜನರನ್ನು ದುರಂತಗಳಿಂದ, ಒಳ ಹೋರಾಟಗಳಿಂದ ಅಥವಾ ಪಾತಕಗಳಿಂದ ಯಾಂತ್ರಿಕವಾಗಿ ರಕ್ಷಿಸುವುದಿಲ್ಲ, ಆದರೂ ಬೈಬಲಾಧಾರಿತ ವ್ಯಾವಹಾರ್ಯ ಜ್ಞಾನವು ಅಲ್ಲಿ ಬೆಲೆಯುಳ್ಳದ್ದಾಗಿರಬಲ್ಲದು. (ಜ್ಞಾನೋಕ್ತಿ 22:3; ಪ್ರಸಂಗಿ 9:11) ಒಂದು ಸಂಕಷ್ಟದ ಪರಿಸ್ಥಿತಿಯಿಂದ ನಾವು ಬಿಡಿಸಲ್ಪಡಲಿ, ಬಿಡಿಸಲ್ಪಡದೇ ಇರಲಿ, ಅಗತ್ಯಬಿದ್ದಲ್ಲಿ ಒಂದು ಪುನರುತ್ಥಾನದ ಮೂಲಕವಾದರೂ ನಮ್ಮ ನಂಬಿಗಸ್ತಿಕೆಗಾಗಿ ಪ್ರತಿಫಲ ದೊರೆಯದೆ ಇರಲಾರದು ಎಂಬ ಭರವಸವು ನಮಗಿರ ಸಾಧ್ಯವಿದೆ.—ಮತ್ತಾಯ 10:21, 22; 24:13.
24. ಯಾವ ಪ್ರೀತಿಯುಳ್ಳ ದಾನಗಳನ್ನು ದೇವರು ಒದಗಿಸಿದ್ದಾನೆ, ಮತ್ತು ನಾವು ಅವನ ಪ್ರೀತಿಗೆ ಹೇಗೆ ಪ್ರತಿಕ್ರಿಯೆ ತೋರಿಸಬಹುದು?
24 ಯೆಹೋವನ ಪ್ರೀತಿಯುಳ್ಳ ವರದಾನಗಳು ಎಷ್ಟು ಆಶ್ಚರ್ಯಕರವು! ಮಾನವ ಕುಲಕ್ಕಾಗಿ ಆತನು ದಾನವಾಗಿ ಕೊಟ್ಟಿರುವ ಈ ಭೂಮಿ ಮತ್ತು ಅದರಲ್ಲಿರುವದೆಲ್ಲವು ಆತನ ಪ್ರೀತಿಯ ಒಂದು ಮಹತ್ತಾದ ಅಭಿವ್ಯಂಜಕವಾಗಿದೆ. (ಕೀರ್ತನೆ 104:1, 13-16; 115:16) ಮತ್ತು ಮಾನವ ಕುಲವನ್ನು ಪಾಪ ಮತ್ತು ಮರಣದಿಂದ ವಿಮೋಚಿಸಲು, ತನ್ನ ಕುಮಾರನಾದ ಯೇಸು ಕ್ರಿಸ್ತನನ್ನು ಕೊಟ್ಟ ಆತನ ಕರುಣೆಯುಳ್ಳ ದಾನವು, ಕೊಡಲ್ಪಟ್ಟ ದಾನವೆಲ್ಲವುಗಳಲ್ಲಿ ಅತ್ಯಂತ ಪ್ರೀತಿಯುಕ್ತವು. “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿ ಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿದರ್ದಲಿಯ್ಲಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪ ನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದ್ದರಲ್ಲಿಯೇ ಪ್ರೀತಿಯ ನಿಜಗುಣವು ತೋರಿಬರುತ್ತದೆ.” (1 ಯೋಹಾನ 4:9, 10) ಆ ಪ್ರೀತಿಗೆ ಪ್ರತಿಕ್ರಿಯೆಯಲ್ಲಿ, “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಿನ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರದು” ಎಂಬ ನಿಶ್ಚಯತೆಯು ನಮಗಿರ ಸಾಧ್ಯವಿದೆ.—ರೋಮಾಪುರ 8:38, 39. (w92 1/1)
[ಅಧ್ಯಯನ ಪ್ರಶ್ನೆಗಳು]
a ಜನವರಿ 1, 1992 ರ ಇಂಗ್ಲಿಷ್ ವಾಚ್ಟವರ್ ಪುಟ 10-13 ರಲ್ಲಿ ಈ ವರದಿ ತೋರಿಸಲ್ಪಟ್ಟಿದೆ.
ಈ ಲೇಖನದ ಪುನರಾವಲೋಕನ
▫ ನಂಬಿಗಸ್ತರಾಗಿರುವುದೆಂಬದರ ಅರ್ಥವೇನು?
▫ ಯಾವ ಚಟುವಟಿಕಾ ಕ್ಷೇತ್ರಗಳಲ್ಲಿ ನಾವು ಯೆಹೋವನಿಗಾಗಿ ಪ್ರೀತಿಯನ್ನು ಪ್ರದರ್ಶಿಸಬಹುದು?
▫ ಸೇವಾ ವರದಿಯ ಯಾವ ವೈಶಿಷ್ಟ್ಯವು ನಿಮಗೆ ಅತ್ಯಂತ ಆಸಕ್ತಿಭರಿತವಾಗಿದೆ?
▫ ಯೆಹೋವನ ಪ್ರೀತಿಯುಳ್ಳ ವರದಾನಗಳಿಗಾಗಿ ನಾವು ಹೇಗೆ ಗಣ್ಯತೆ ತೋರಿಸಬಹುದು?
[ಪುಟ 11 ರಲ್ಲಿರುವ ಚೌಕ]
ಅಷ್ಟೊಂದು ಪಯನೀಯರರು ಏಕೆ?
ಜಾಪಾನ್ ದೇಶದವರು ಸುಮಾರು 2,600 ವರ್ಷಗಳ ತನಕ ತಮ್ಮ ಸಾಮ್ರಾಟರ ಗಾಢ ಆರಾಧಕರಾಗಿದ್ದರೆಂದು ವರದಿ. ಈ 20 ನೆಯ ಶತಮಾನ ಒಂದರಲ್ಲೇ ನಡೆದ ಯುದ್ಧಗಳಲ್ಲಿ, ಮೂವತ್ತು ಲಕ್ಷಕ್ಕಿಂತಲೂ ಹೆಚ್ಚು ಜಾಪಾನೀಯ ಯುದ್ಧ ಪುರುಷರು ತಮ್ಮ ಪ್ರಾಣಗಳನ್ನು ಬಲಿಯಾಗಿ ಕೊಟ್ಟರು, ತಮ್ಮ ಸಾಮ್ರಾಟ-ದೇವರಿಗಾಗಿ ಸಾಯುವುದಕ್ಕಿಂತ ಹೆಚ್ಚಿನ ಗೌರವವು ಇಲ್ಲವೆಂದು ಅವರು ನೆನಸಿದ್ದರು. ಆದರೆ ಬೌದ್ಧ-ಶಿಂಟೊ ಮಿಲಿಟರಿ ವಾದವು 2 ನೆಯ ಜಾಗತಿಕ ಯುದ್ಧದಲ್ಲಿ ಪರಾಭವಗೊಂಡಿತು ಮತ್ತು ಅನಂತರ ಸಾಮ್ರಾಟನು ತನ್ನ ದೇವತ್ವವನ್ನು ತ್ಯಜಿಸಿಬಿಟ್ಟನು. ಈ ಧಾರ್ಮಿಕ ಶೂನ್ಯತೆಯನ್ನು ಏನು ತುಂಬಿಸ ಸಾಧ್ಯವಿತ್ತು? ಸಂತೋಷಕರವಾಗಿಯೇ, ಯೆಹೋವನ ಸಾಕ್ಷಿಗಳ ಮಿಶನೆರಿಗಳಿಂದ ಹಾಗೂ ಅನಂತರ ದೇಶೀಯ ಸಾಕ್ಷಿಗಳಿಂದ ನಡಿಸಲ್ಪಟ್ಟ ಮನೆ ಬೈಬಲಭ್ಯಾಸಗಳು, ಸತ್ಯದೇವರಾದ ಯೆಹೋವನನ್ನು ಕಂಡುಕೊಳ್ಳಲು ಮತ್ತು ತಮ್ಮ ಜೀವಿತಗಳನ್ನು ಆತನಿಗೆ ಸಮರ್ಪಿಸಿಕೊಳ್ಳಲು ಅನೇಕರಿಗೆ ಸಹಾಯ ಮಾಡಿದವು. ಈ ಸಮರ್ಪಣೆಯು ಆ ಜಾಪಾನಿನ ಸಾಕ್ಷಿಗಳಿಗೆ ಅಧಿಕಾರ್ಥವುಳ್ಳದ್ದಾಗಿದೆ. ಪುರಾತನ ಕಾಲದಲ್ಲಿ ಚಕ್ರವರ್ತಿ-ದೇವರಿಗಾಗಿ ಅವರು ತಮ್ಮ ಪ್ರಾಣವನ್ನು ಬಲಿಯಾಗಿ ತೆರಲು ಸಿದ್ಧರಾಗಿದ್ದಾಗ, ಜೀವಸ್ವರೂಪ ದೇವರೂ ವಿಶ್ವದ ನಿರ್ಮಾಣಿಕನೂ ಆದ—ಸಾರ್ವಭೌಮ ಕರ್ತನಾದ ಯೆಹೋವನನ್ನು—ಅದೆಷ್ಟು ಹೆಚ್ಚಿನ ಹುರುಪಿನಿಂದ ಪಯನೀಯರರಾಗಿ ಆರಾಧಿಸುವುದರಲ್ಲಿ ಅವರೀಗ ತಮ್ಮ ಶಕ್ತಿಗಳನ್ನು ಮೀಸಲಾಗಿಡಬೇಕು!
[ಪುಟ 12 ರಲ್ಲಿರುವ ಚಿತ್ರ]
ದೈವಿಕ ಸ್ವಾತಂತ್ರ್ಯ ಪ್ರಿಯರು—ಪ್ರಾಗ್ ಅಧಿವೇಶನದಲ್ಲಿ ಯೆಹೋವನ ಆರಾಧಕರು, ಆಗಸ್ಟ್ 9-11, 1991