ಅವರು ತಮ್ಮಿಂದ ಸಾಧ್ಯವಾದದ್ದನ್ನು ಮಾಡುತ್ತಾರೆ
ಯೆಹೋವನು ಅವರಿಗೆ ಮಾಡಿರುವ ಎಲ್ಲಾ ಉಪಕಾರಗಳಿಗಾಗಿ ಆತನಿಗೆ ಹಿಂದೆ ಕೊಡಲು ಅಶಕ್ತರಾಗಿದ್ದರೂ, ಆತನ ಸಾಕ್ಷಿಗಳ ಜಗದ್ವ್ಯಾಪಕ ಸಾರುವ ಕಾರ್ಯದ ಬೆಂಬಲಕ್ಕಾಗಿ ಅನೇಕರು ತಮ್ಮಿಂದಾದದ್ದನ್ನು ಮಾಡುತ್ತಿದ್ದಾರೆ. (ಮತ್ತಾಯ 24:14; ಮಾರ್ಕ14:3-9ಕ್ಕೆ ಹೋಲಿಸಿ.) ಈ ವಿಷಯದಲ್ಲಿ ರಸಕರವಾದದ್ದು ಅಮೆರಿಕದ ಮಿನಸ್ಸೊಟದ ಒಂದು ಕುಟುಂಬದಿಂದ ಬಂದ ಈ ಪತ್ರವು:
“ಪ್ರಿಯ ಸಹೋದರರೆ,
“ನಾವು ಈ $........ ನ್ನು ಕಾಣಿಕೆಯಾಗಿ ಕಳುಹಿಸುತ್ತಿದ್ದೇವೆ. ಅದನ್ನು ಜಗದ್ವ್ಯಾಪಕ ಕಾರ್ಯದ ಆಯವ್ಯಯ ನಿರ್ವಹಣೆಗಾಗಿ ಅಥವಾ ರಾಜ್ಯ ಸಬಾಗೃಹ ಬಿಲ್ಡಿಂಗ್ ಫಂಡಿಗಾಗಿ ಅಥವಾ ಸಂಸ್ಥೆಗೆ ಬೇಕಾದ ಬೇರೆ ಯಾವುದೆ ಅವಶ್ಯಕತೆಗಾಗಿ ಉಪಯೋಗಿಸುವಂತೆ ನಾವು ವಿನಂತಿಸುತ್ತೇವೆ. . . .
ಈ ಹಣವು [ಯೆಹೋವನ] ಚಿತ್ತಕ್ಕೆ ಹೊಂದಿಕೆಯಲ್ಲಿ ಬಳಸಲ್ಪಡುವದೆಂಬ ಭರವಸೆ ನಮಗಿದೆ. ನಿಮ್ಮ ಸತ್ಕಾರ್ಯವನ್ನು ಮುಂದರಿಸುವಂತೆ ನಮ್ಮ ಪ್ರೋತ್ಸಾಹನೆ ನೀಡಲು ನಾವು ಈ ಸಂದರ್ಭವನ್ನು ತಕ್ಕೊಳ್ಳ ಬಯಸುತ್ತೇವೆ ಮತ್ತು ವಿಶೇಷವಾಗಿ [ವಾಚ್ ಟವರ್] ಸೊಸೈಟಿಯ ಜಗದ್ವ್ಯಾಪಕ ಕಾರ್ಯವಿಧಾನಗಳ ವೀಡಿಯೊಟೇಪಿಗಾಗಿ ನಿಮಗೆ ಉಪಕಾರ. ಈ ಟೇಪು ನಿಮ್ಮ ಕಾರ್ಯದ ಮಹತ್ತನ್ನು ನಾವು ಕಾಣುವಂತೆ ಮಾಡಿತು ಮತ್ತು ನಮ್ಮ ಸ್ವಯಂಪ್ರೇರಿತ ದಾನಗಳ ಅಗತ್ಯವನ್ನು ನಾವು ಗ್ರಹಿಸುವಂತೆ ಪ್ರಭಾವಿಸಿತು. ಹಿಂದೆ ಸಭೆ, ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ನಿಮಗೆ ಕಾಣಿಕೆಗಳನ್ನು ಕಳುಹಿಸುವುದನ್ನು ನೋಡಿಕೊಳ್ಳುವಂತೆ ನಾವು ಬಿಟ್ಟಿದೆವ್ದು, ಆದರೆ ಈಗ ನಾವು ನಮ್ಮ ಎಚ್ಚರಗೇಡಿತನದ ಬಗ್ಗೆ ಯೆಹೋವನ ತಾಳ್ಮೆಗಾಗಿ ಮತ್ತು ಇನ್ನಿತರ ರೀತಿಯ ಕಾಣಿಕೆಗಳನ್ನಲ್ಲದೆ, ಈ ಜೀವರಕ್ಷಣೆಯ ಕಾರ್ಯಕ್ಕೂ ಹಣಕಾಸು ಒದಗಿಸಲು ವೈಯಕ್ತಿಕವಾಗಿ ಸಹಾಯ ಮಾಡುವ ಅಗತ್ಯವನ್ನು ಪ್ರೀತಿಯಿಂದ ನಮಗೆ ತೋರಿಸಿಕೊಡುತ್ತಿರುವದಕ್ಕಾಗಿ ಉಪಕಾರ ಹೇಳುತ್ತೇವೆ. ನಾವು ಕುಟುಂಬವಾಗಿ ತಿಂಗಳಿಗೆ . . . ಕಡಿಮೆ ಪಕ್ಷ $........ ನೇರವಾಗಿ ನ್ಯೂ ಯೋರ್ಕ್ಗೆ ಕಳುಹಿಸುವಂತೆ ನಿರ್ಧರಿಸಿದ್ದೇವೆ.
“ನೀವು ನಮಗೆ ಕೊಡುತ್ತಿರುವ ಉತ್ತಮ ಸೇವೆಗಾಗಿ ಮತ್ತು ಯೆಹೋವನಿಗೆ ನೀವು ಪ್ರದರ್ಶಿಸಿರುವ ನಂಬಿಗಸ್ತಿಕೆಗಾಗಿ ನಿಮಗೆ ಪುನಃ ಉಪಕಾರ.”