ರಾಜ್ಯ ಘೋಷಕರ ವರದಿ
ಸತ್ಯಾನೇಷ್ವಕರು ಅವಿಧಿ ಸಾಕ್ಷಿಗೆ ಪ್ರತಿಕ್ರಿಯಿಸುತ್ತಾರೆ
ಕುರಿ ಸದೃಶ್ಯರು ಒಳ್ಳೇ ಕುರುಬನ ಸರ್ವಕ್ಕೆ ಕಿವಿಗೊಡುತ್ತವೆಂದು ಬೈಬಲ್ ನಮಗೆ ತಿಳಿಸುತ್ತದೆ. (ಯೋಹಾನ 10:27) ಅನೇಕ ದೇಶಗಳಲ್ಲಿ ಹೀಗೆ ಆಗಿರುತ್ತದೆ, ಬ್ರಿಟನಿನಲ್ಲಿ ಸಹಾ.
▫ದೃಷ್ಟಾಂತಕ್ಕಾಗಿ, 1988ರಲ್ಲಿ, ಕ್ರಿಸ್ತ್ಮಸ್ಗೆ ಸ್ವಲ್ಪ ಮುಂಚಿತವಾಗಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಪಾಮೆಲ, ತಾನು ಕೆಲಸ ಮಾಡುತ್ತಿದ್ದ ಆಫೀಸಿನ ಫೋನನ್ನು ಉತ್ತರಿಸುತ್ತಾ, ಇಂಗ್ಲೆಂಡಿನ ಇನ್ನೊಂದು ಭಾಗದಲ್ಲಿದ್ದ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸೇಲ್ಸ್-ಮ್ಯಾನ್ನೊಂದಿಗೆ ಮಾತಾಡಿದಳು. ಆ ಪೋನ್ ಕರೇಯ ಕೊನೆಯಲ್ಲಿ ಆ ಮನುಷ್ಯನು ಕೇಳಿದ್ದು: “ಕ್ರಿಸ್ಮಸ್ಗೆ ತಯಾರಿಯೆಲ್ಲಾ ಆಯಿತೋ?” “ಇಲ್ಲ” ಎಂದಳು ಪಾಮೆಲ. “ಅದಕ್ಕೆ ತಡವಾಯಿತೆಂದು ನೀನೆಣಿಸುವುದಿಲ್ಲವೇ?” ಕೇಳಿದನವನು. “ನಾನು ಕ್ರಿಸ್ಮಸ್ ಆಚರಿಸುವುದಿಲ್ಲ” ಎಂದಳು ಪಾಮೆಲ. ಅದು ಸೋಜಿಗವೇ ಸರಿ, ಕಾರಣವೇನು ಎಂದಾತನು ಕೇಳಿದನು. ತಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳೆಂದೂ ಮತ್ತು ಯೇಸುವಿನ ಜನ್ಮದಿನವನ್ನು ಆಚರಿಸಲು ಬೈಬಲಿನಲ್ಲಿ ಯಾವ ಆಜ್ಞೆಯೂ ಇಲ್ಲ, ಅಲ್ಲದೆ ಯೇಸು ದಶಂಬರ 25ಕ್ಕೆ ಜನಿಸಲೂ ಇಲ್ಲವೆಂದು ಆಕೆ ಉತ್ತರಿಸಿದಳು. ಅಷ್ಟಲ್ಲದೆ, ಕ್ರಿಸ್ಮಸ್ ಮೂಲತಃ ಒಂದು ವಿಧರ್ಮಿ ಆಚರಣೆಯಾಗಿತ್ತು. ಅದೆಲ್ಲಾ ತುಂಬಾ ಆಸಕ್ತಕರವಾಗಿ ಕೇಳಿಸುತ್ತದೆ ಎಂದನು ಆ ಮನುಷ್ಯನು.
ಮೂರು ತಿಂಗಳ ಅನಂತರ ಪಾಮೆಲ ಪುನಃ ಫೋನ್ ಎತ್ತಿದಳು, ಕರೆದವನು ಹೇಳಿದ್ದು: “ಕ್ರಿಸ್ಮಸಿಗೆ ಮುಂಚೆ ನೀನು ನನ್ನೊಂದಿಗೆ ಮಾತಾಡಿದ್ದು ಮತ್ತು ನೀನು ಕ್ರಿಸ್ಮಸ್ ಆಚರಿಸುವುದಿಲ್ಲವೆಂದು ಹೇಳಿದ್ದು ನೆನಪಿದೆಯೇ? ಒಳ್ಳೇದು, ಸತ್ಯ ನನಗೆ ಸಿಕ್ಕಿದೆ!” ಅವನು ಹಿಂದೆ ಮಾತನಾಡಿದ್ದ ಅದೇ ಮನುಷ್ಯನಾಗಿದ್ದನು. ಕ್ರಿಸ್ಮಸ್ನ ಎರಡು ವಾರಗಳ ನಂತರ ಇಬ್ಬರು ಸಾಕ್ಷಿಗಳು ಅವನ ಮನೆಯನ್ನು ಸಂದರ್ಶಿಸಿದರಂತೆ. ಅವನು ಅವರನ್ನು ಒಳಗೆ ಕರೆದನು ಮತ್ತು ಒಂದು ಬೈಬಲಭ್ಯಾಸ ಆರಂಭವಾಯಿತು. ತನ್ನ ಅಧ್ಯಯನದಲ್ಲಿ ತೀವ್ರ ಪ್ರಗತಿಯನ್ನು ಮಾಡಿದ್ದೇನೆಂದು ಅವನು ಹೇಳಿದನು. ಅವನೊಂದಿಗೆ ವಾಸಿಸುತ್ತಿದ್ದ ಅವನ ಪ್ರೇಯಸಿಗೆ ಅವರ ಜೀವನ ಕ್ರಮ ಯೆಹೋವನಿಗೆ ಮೆಚ್ಚಿಗೆಯದ್ದಲ್ಲವೆಂದು ಅವನು ತಿಳಿಸಿದನು, ಹೀಗೆ ಅವರು ಪ್ರತ್ಯೇಕವಾಸ ಮಾಡತೊಡಗಿದರು ಮತ್ತು ಈಗ ಇಬ್ಬರೂ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುತ್ತಿದ್ದಾರೆ.
ವರ್ಷದ ಅಂತ್ಯದಲ್ಲಿ, ಅವರಿಬ್ಬರೂ ಸ್ನಾತರಲ್ಲದ ಪ್ರಚಾರಕರಾಗಿ ಸ್ವೀಕರಿಸಲ್ಪಟ್ಟರು. ಅನಂತರ ಅವರಿಬ್ಬರಿಗೂ ದೀಕ್ಷಾಸ್ನಾನವಾಯಿತು. ಟೆಲಿಫೋನ್ ಮೂಲಕ ಮಾಡಲ್ಪಟ್ಟ ಈ ಒಂದು ಚಿಕ್ಕ, ಅವಿಧಿ ಸಾಕ್ಷಿಯಿಂದಾಗಿ ಎಂಥ ಅತ್ಯುತ್ತಮ ಫಲಿತಾಂಶವು!
▫ಇಂಗ್ಲೆಂಡಿನಲ್ಲಿ ಅವಿಧಿಯಾದ ಸಾಕ್ಷಿಕೊಟ್ಟ ಇನ್ನೊಬ್ಬ ಸಹೋದರಿಯನ್ನೂ ಯೆಹೋವನು ಆಶೀರ್ವದಿಸಿದನು. ವಿಮೆ ಕಂಪೆನಿಯ ಒಬ್ಬನು ಆಕೆಯ ಮನೆಯನ್ನು ಸಂದರ್ಶಿಸಿದಾಗ ಆ ಸಹೋದರಿಯು, ಒಳ್ಳೇ ಆರೋಗ್ಯ, ಸಂತೋಷ ಮತ್ತು ನಿತ್ಯಜೀವದ ಖಾತರಿಯನ್ನು ಪಡೆಯಲು ಅವನು ಬಯಸುತ್ತಾನೋ ಎಂದು ಪ್ರಶ್ನಿಸಿದಳು. ಅವನು ಹೌದೆಂದನು ಮತ್ತು ಯಾವ ವಿಮಾ-ಪಾಲಿಸಿಯ ಕುರಿತು ಅವಳು ಮಾತಾಡುತ್ತಿದ್ದಾಳೆಂದು ಕೇಳಿದನು. ಭೂಮಿಯ ಮೇಲೆ ಪರದೈಸದಲ್ಲಿ ನಿತ್ಯಜೀವದ ಕುರಿತಾದ ದೇವರ ವಾಗ್ದಾನವನ್ನು ಬೈಬಲಿಂದ ತೋರಿಸಲಾಗಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಪ್ರತಿಯೊಂದನ್ನು ಅವನು ಪಡಕೊಂಡನು ಮತ್ತು ಒಂದೇ ಸಂಜೆಯೊಳಗೆ ಇಡೀ ಪುಸ್ತಕವನ್ನು ಓದಿ ಮುಗಿಸಿದನು. ಆ ಸಹೋದರಿಯನ್ನು ಅವನು ಪುನಃ ಸಂದರ್ಶಿಸಿದಾಗ, ಆ ಪುಸ್ತಕದ ಮಾಹಿತಿ ಆಶ್ಚರ್ಯಕರವೆಂದೂ, ಆದರೆ ಅದನ್ನು ನಂಬುವಷ್ಟು ನಂಬಿಕೆ ತನ್ನಲ್ಲಿಲ್ಲವೆಂದು ಒಪ್ಪಿಕೊಂಡನು. ಅವನಿಗೆ ಬೈಬಲ್ ಅಧ್ಯಯನ ಮತ್ತು ರಾಜ್ಯ ಸಭಾಗೃಹದ ಕೂಟಗಳಿಗೆ ಹಾಜರಾಗುವ ಅಗತ್ಯವಿದೆ ಎಂದು ಸಹೋದರಿ ವಿವರಿಸಿದಳು. ಒಂದು ಬೈಬಲಧ್ಯಯನ ಏರ್ಪಡಿಸಲ್ಪಟ್ಟಿತು ಮತ್ತು ಅವನು ಕೂಟಗಳಿಗೆ ಹಾಜರಾಗ ತೊಡಗಿದನು. ಅದೇ ವರ್ಷದ ಮಾಗಿಕಾಲದಲ್ಲಿ ಅವನು ಸ್ನಾನಪಡಕೊಂಡನು. ಒಂದೇ ವರ್ಷದ ನಂತರ, ಅವನಿಗೆ ಪ್ರಥಮವಾಗಿ ಸಾಕ್ಷಿನೀಡಿದ್ದ ಆ ಸಹೋದರಿಯ ಮಗಳನ್ನು ಅವನು ಮದುವೆಯಾದನು. “ಹೀಗೆ,” ಅವಳನ್ನುವುದು, “ಈ ಅವಿಧಿ ಸಾಕ್ಷಿಯ ಮೂಲಕ ನನಗೆ ಒಬ್ಬ ಸಹೋದರನೂ ಸಿಕ್ಕಿದ ಮತ್ತು ಅಳಿಯನೂ ದೊರೆತನು!”
ಅವಿಧಿಯಾದ ಸಾಕ್ಷಿಯ ಮೂಲಕ ಬೈಬಲ್ ಸತ್ಯವು ನೀಡಲ್ಪಡುವಾಗ ಸತ್ಯಾನೇಷ್ವಕರು ಪ್ರತಿಕ್ರಿಯೆ ತೋರಿಸುತ್ತಾರೆಂಬದು ಸತ್ಯಾಂಶ. ಯೇಸುವಂದಂತೆ, ಅವನ ಕುರಿಗಳು ಅವನ ಸರ್ವಕ್ಕೆ ಕಿವಿಗೊಡುತ್ತವೆ. (w91 11/1)